Homeಮುಖಪುಟಉತ್ತರಾಖಂಡ್: ‘ಸಾಮಾಜಿಕ ಸಾಮರಸ್ಯ’ ಸಾರಿದರೆ ಏಕರೂಪ ನಾಗರಿಕ ಸಂಹಿತೆಗೆ ಒಪ್ಪಿಗೆ- ಕಾಂಗ್ರೆಸ್ ನಾಯಕ

ಉತ್ತರಾಖಂಡ್: ‘ಸಾಮಾಜಿಕ ಸಾಮರಸ್ಯ’ ಸಾರಿದರೆ ಏಕರೂಪ ನಾಗರಿಕ ಸಂಹಿತೆಗೆ ಒಪ್ಪಿಗೆ- ಕಾಂಗ್ರೆಸ್ ನಾಯಕ

- Advertisement -
- Advertisement -

ಉತ್ತರಾಖಂಡ್‌ ಸರ್ಕಾರವು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೊಳಿಸಲು ಕಸರತ್ತು ನಡೆಸುತ್ತಿರುವ ಬೆನ್ನಲ್ಲೇ ಕಾಂಗ್ರೆಸ್‌ ಪಕ್ಷವು ಸಂಹಿತೆಯನ್ನು ಒಪ್ಪುವ ಸೂಚನೆಗಳನ್ನು ಪರೋಕ್ಷವಾಗಿ ನೀಡಿದೆ.

ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕಾಂಗ್ರೆಸ್ ಶಿಸ್ತು ಸಮಿತಿಯ ಅಧ್ಯಕ್ಷ ನವಪ್ರಭಾತ್ ಅವರು ಮೇ 25ರಂದು ಪ್ರತಿಕ್ರಿಯಿಸಿ, “ಸಾಮಾಜಿಕ ಸಾಮರಸ್ಯ ಸಾರಿದರೆ ಏಕರೂಪ ನಾಗರಿಕ ಸಂಹಿತೆಯನ್ನು ಕಾಂಗ್ರೆಸ್‌ ಪಕ್ಷವು ಸ್ವಾಗತಿಸುತ್ತದೆ” ಎಂದಿದ್ದಾರೆ.

“ಉತ್ತರಾಖಂಡ್‌ ಸರ್ಕಾರವು ಏಕರೂಪ ನಾಗರಿಕ ಸಂಹಿತೆಯನ್ನು ರಾಜ್ಯದಲ್ಲಿ ಜಾರಿಗೆ ತರುವುದಕ್ಕಾಗಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ರಂಜನಾ ದೇಸಾಯಿ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿರುವುದು ಗಮನಾರ್ಹವಾಗಿದೆ. ಇದು ಜೂನ್ 30ರೊಳಗೆ ರಾಜ್ಯ ಸರ್ಕಾರಕ್ಕೆ ತನ್ನ ವರದಿಯನ್ನು ಸಲ್ಲಿಸಲಿದೆ” ಎಂದು ನವಪ್ರಭಾತ್ ಹೇಳಿದ್ದಾರೆ.

“ಸಾಮಾಜಿಕ ಸಾಮರಸ್ಯವನ್ನು ಉತ್ತೇಜಿಸಲು ಮತ್ತು ಜನರಲ್ಲಿ ಉದ್ಭವಿಸಿರುವ ಅಪನಂಬಿಕೆಯನ್ನು ಕಡಿಮೆ ಮಾಡಲು ಏಕರೂಪ ನಾಗರಿಕ ಸಂಹಿತೆಯನ್ನು ಕಾಂಗ್ರೆಸ್ ಸ್ವಾಗತಿಸುತ್ತದೆ” ಎಂದು ಅವರು ತಿಳಿಸಿದ್ದಾರೆ.

ನವಪ್ರಭಾತ್ ಅವರು ಇತಿಹಾಸದ ಕೆಲವು ಉದಾಹರಣೆಗಳನ್ನು ಹಂಚಿಕೊಂಡಿದ್ದು, “ಪೋರ್ಚುಗೀಸರು ಗೋವಾ, ದಮನ್ ಮತ್ತು ದಿಯುಗಳಲ್ಲಿ ವಸಾಹತುಗಳನ್ನು 1869ರಲ್ಲಿ ಸ್ಥಾಪಿಸಿದಾಗ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ಪ್ರಯತ್ನಿಸಿದ್ದರು” ಎಂದಿದ್ದಾರೆ. “ಗೋವಾ ರಾಜ್ಯವು ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಮಾತನಾಡಿದೆ, ಆದರೆ ಅದು ವಿಭಿನ್ನ ಧರ್ಮಗಳು, ಆಚರಣೆಗಳು ಮತ್ತು ನಂಬಿಕೆಗಳನ್ನು ಒಳಗೊಂಡಿದೆ.”

“ಗೋವಾ ಯುಸಿಸಿ ಸಾಮಾಜಿಕ ಸಾಮರಸ್ಯವನ್ನು ಉತ್ತೇಜಿಸುವ ಬಗ್ಗೆ ಮಾತನಾಡುತ್ತದೆ. ಸಾಮಾಜಿಕ ಸಾಮರಸ್ಯವನ್ನು ಉತ್ತೇಜಿಸಲು, ಜನರಲ್ಲಿ ಉದ್ಭವಿಸಿರುವ ಅಪನಂಬಿಕೆಯನ್ನು ತೊಡೆದುಹಾಕಲು ಯಾವುದೇ ಪ್ರಯತ್ನ ಮಾಡಿದರೆ, ಕಾಂಗ್ರೆಸ್ ಅದನ್ನು ಸ್ವಾಗತಿಸುತ್ತದೆ” ಎಂದು ನವಪ್ರಭಾತ್ ಮೇ 25 ರಂದು ಡೆಹ್ರಾಡೂನ್‌ನಲ್ಲಿ ಎಎನ್‌ಐ ಜೊತೆ ಮಾತನಾಡುತ್ತಾ ಹೇಳಿದ್ದಾರೆ.

ಇದನ್ನೂ ಓದಿರಿ: ತೆಲಂಗಾಣ: ‘ಜೈ ಶ್ರೀರಾಮ್’ ಕೂಗುವಂತೆ ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ, ಘಟನೆಯಲ್ಲಿ ಸಿಲುಕಿದ ಮಹಿಳೆಗೆ ಗರ್ಭಪಾತ

“ನಮ್ಮ ನಂಬಿಕೆಗಳು ಸಾಂವಿಧಾನಿಕ ನಂಬಿಕೆಗಳನ್ನು ಹೋಲುತ್ತವೆ. ಆದರೆ ನಾವು ಯಾವಾಗ ಸರ್ಕಾರದ ಜ್ಞಾಪಕ ಪತ್ರಗಳನ್ನು ಪಡೆಯುತ್ತೇವೆಯೋ, ಆ ಸಮಯದಲ್ಲಿ ನಮಗೆ ಯಾವುದು ಸ್ವೀಕಾರಾರ್ಹ ಮತ್ತು ಯಾವುದು ಅಲ್ಲ ಎಂಬುದನ್ನು ನಿರ್ಧರಿಸುತ್ತೇವೆ” ಎಂದು ಸ್ಪಷ್ಟಪಡಿಸಿದ್ದಾರೆ.

ಉತ್ತರಾಖಂಡ ಸರ್ಕಾರವು ಏಕರೂಪ ನಾಗರಿಕ ಸಂಹಿತೆಯನ್ನು ರಾಜ್ಯದಲ್ಲಿ ಜಾರಿಗೆ ತರಲು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ರಂಜನಾ ದೇಸಾಯಿ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿದ್ದು, ಜೂನ್ 30ರೊಳಗೆ ರಾಜ್ಯ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲಿದೆ.

ಉತ್ತರಾಖಂಡ್‌ ರಾಜ್ಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ನೀಡಿದ ಪ್ರಮುಖ ಭರವಸೆಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯೂ ಒಂದಾಗಿದೆ. ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಸಿಎಂ ಪುಷ್ಕರ್ ಸಿಂಗ್ ಧಾಮಿ ಏಕರೂಪ ನಾಗರಿಕ ಸಂಹಿತೆಗಾಗಿ ಐದು ಸದಸ್ಯರ ಸಮಿತಿಯನ್ನು ರಚಿಸಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಬಾಂಬ್ ಸ್ಫೋಟ: ಬಾಲಕ ಮೃತ್ಯು, ಇಬ್ಬರಿಗೆ ಗಂಭೀರ ಗಾಯ

0
ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಕಚ್ಚಾ ಬಾಂಬ್ ಸ್ಫೋಟ ಸಂಭವಿಸಿ ಏಳು ವರ್ಷದ ಬಾಲಕ ಸಾವನ್ನಪ್ಪಿದ್ದು, ಇತರ ಇಬ್ಬರು ಅಪ್ರಾಪ್ತ ಬಾಲಕರಿಗೂ ತೀವ್ರ ಗಾಯಗಳಾಗಿದೆ. ಮೃತ ಬಾಲಕನನ್ನು ರಾಜ್ ಬಿಸ್ವಾಸ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ...