Homeರಾಷ್ಟ್ರೀಯಮಹಿಳೆಗೆ ಡಿಕ್ಕಿ ಹೊಡೆದ ವಂದೇ ಭಾರತ್ ಎಕ್ಸ್‌‌ಪ್ರೆಸ್‌‌‌: ಸಾವು

ಮಹಿಳೆಗೆ ಡಿಕ್ಕಿ ಹೊಡೆದ ವಂದೇ ಭಾರತ್ ಎಕ್ಸ್‌‌ಪ್ರೆಸ್‌‌‌: ಸಾವು

- Advertisement -
- Advertisement -

ಮಂಗಳವಾರ ಮಧ್ಯಾಹ್ನ ರೈಲ್ವೆ ಟ್ರ್ಯಾಕ್ ದಾಟುವಾಗ 54 ವರ್ಷದ ಮಹಿಳೆಯೊಬ್ಬರು ಆನಂದ್ ರೈಲ್ವೆ ನಿಲ್ದಾಣದ ಬಳಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ ಎಂದು ರೈಲ್ವೆ ಪೊಲೀಸರು ದೃಢಪಡಿಸಿದ್ದಾರೆ.

ಮೃತ ಮಹಿಳೆಯನ್ನು ಅಹಮದಾಬಾದ್‌ನ ನಿವಾಸಿ ಬೀಟ್ರಿಸ್ ಪೀಟರ್ ಎಂದು ಗುರುತಿಸಲಾಗಿದೆ. ಮಹಿಳೆಯು ರೈಲ್ವೆ ಹಳಿಗಳನ್ನು ದಾಟಲು ಪ್ರತ್ನಿಸುತ್ತಿರುವಾಗ ಘಟನೆ ಸಂಭವಿಸಿದ್ದು, ಅವರು ಸಂಬಂಧಿಕರನ್ನು ಭೇಟಿ ಮಾಡಲು ಆನಂದ್‌‌‌ಗೆ ಬಂದಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಸಂಜೆ 4.30 ರ ಸುಮಾರಿಗೆ, ವಂದೇ ಭಾರತ್ ಎಕ್ಸ್‌ಪ್ರೆಸ್ ಆನಂದ್ ರೈಲ್ವೆ ನಿಲ್ದಾಣದಿಂದ ದಾಟುತ್ತಿತ್ತು. ವಂದೇ ಭಾರತ್ ರೈಲಿಗೆ ಆನಂದ್ ನಿಲ್ದಾಣದಲ್ಲಿ ನಿಲುಗಡೆ ಇರಲಿಲ್ಲ. ರೈಲ್ವೆ ಪೊಲೀಸರು ಆಕಸ್ಮಿಕ ಸಾವಿನ ಪ್ರಕರಣವನ್ನು ದಾಖಲಿಸಿದ್ದು, ತನಿಖೆಯನ್ನು ಪ್ರಾರಂಭಿಸಿದ್ದಾರೆ.

ಇದನ್ನೂ ಓದಿ: ಒಂದೇ ತಿಂಗಳಲ್ಲಿ 3ನೇ ಘಟನೆ: ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಗೂಳಿ ಡಿಕ್ಕಿ

ಘಟನೆ ನಡೆದರೂ ರೈಲು ಯಾವುದೇ ವಿಳಂಬವಿಲ್ಲದೆ ತನ್ನ ನಿಗದಿತ ಸಮಯದಲ್ಲೆ ಓಡಿದೆ ಎಂದು ರೈಲ್ವೆಯ ವಡೋದರಾ ವಿಭಾಗದ ಅಧಿಕಾರಿಗಳು ಹೇಳಿದ್ದಾರೆ.

ವಂದೇ ಭಾರತ್ ಸರಣಿಯ ಮೂರನೇ ಸೇವೆಯಾದ ಸ್ವದೇಶಿ ವಿನ್ಯಾಸ ಮತ್ತು ನಿರ್ಮಿಸಿದ ಸೆಮಿ-ಹೈಸ್ಪೀಡ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 30 ರಂದು ಗಾಂಧಿನಗರದಿಂದ ಚಾಲನೆ ನೀಡಿದ್ದರು ಮತ್ತು ಮರುದಿನದಿಂದ ರೈಲು ತನ್ನ ವಾಣಿಜ್ಯ ಸಂಚಾರವನ್ನು ಪ್ರಾರಂಭಿಸಿತ್ತು.

ಉದ್ಘಾಟನೆ ಮಾಡಿದ ಒಂದು ತಿಂಗಳ ಒಳಗೆ ಒಟ್ಟು ಮೂರು ಭಾರಿ ಜಾನುವಾರಿಗೆ ಡಿಕ್ಕಿ ಹೊಡೆದಿದ್ದು, ಇದಿರಿಂದಾಗಿ ರೈಲಿನ ಮುಂಬಾಗಕ್ಕೆ ಹಾನಿಯಾಗಿತ್ತು. ಜಾನುವಾರಿಗೆ ಡಿಕ್ಕಿ ಆದ ನಂತರ ರೈಲ್ವೆ ಅಧಿಕಾರಿಗಳು ತಮ್ಮ ಜಾನುವಾರುಗಳನ್ನು ಟ್ರ್ಯಾಕ್ ಬಳಿ ಬಿಡದಂತೆ ಹತ್ತಿರದ ಗ್ರಾಮಸ್ಥರಿಗೆ ಸಲಹೆ ನೀಡಲು ಪ್ರಯತ್ನಿಸುತ್ತಿದ್ದಾರೆ.

ಇದನ್ನೂ ಓದಿ: ಚೀನಾ ಲಿಂಕ್: 44 ಅರೆಹೈಸ್ಪೀಡ್ ವಂದೇ ಭಾರತ್‌ ರೈಲು ಟೆಂಡರ್‌‌ ರದ್ದು

ಅಕ್ಟೋಬರ್ 6 ರಂದು ಗುಜರಾತ್‌ನ ವತ್ವಾ ಮತ್ತು ಮಣಿನಗರ ರೈಲು ನಿಲ್ದಾಣಗಳ ನಡುವೆ ಮುಂಬೈನಿಂದ ಗಾಂಧಿನಗರಕ್ಕೆ ತೆರಳುತ್ತಿದ್ದ ರೈಲಿಗೆ ಡಿಕ್ಕಿ ಹೊಡೆದು ನಾಲ್ಕು ಎಮ್ಮೆಗಳು ಸಾವನ್ನಪ್ಪಿದ್ದವು. ಈ ವೇಳೆ ರೈಲಿಗೆ ಹಾನಿಯಾದ ಕಾರಣ ಅದರ ಮುಂಬಾಗದ ಕವರ್‌‌ ಅನ್ನು ರಾತ್ರೋರಾತ್ರಿ ಬದಲಾಯಿಸಬೇಕಾಯಿತು. ಮರುದಿನ (ಅಕ್ಟೋಬರ್ 7) ಸಂಭವಿಸಿದ ಎರಡನೇ ಘಟನೆಯಲ್ಲಿ, ಮುಂಬೈಗೆ ತೆರಳುತ್ತಿದ್ದಾಗ ಗುಜರಾತ್‌ನ ಆನಂದ್ ಬಳಿ ರೈಲು ಹಸುವಿಗೆ ಡಿಕ್ಕಿ ಹೊಡೆದಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...