Homeರಾಷ್ಟ್ರೀಯಒಂದೇ ತಿಂಗಳಲ್ಲಿ 3ನೇ ಘಟನೆ: ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಗೂಳಿ ಡಿಕ್ಕಿ

ಒಂದೇ ತಿಂಗಳಲ್ಲಿ 3ನೇ ಘಟನೆ: ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಗೂಳಿ ಡಿಕ್ಕಿ

ಸೆಪ್ಟೆಂಬರ್ 30 ರಂದು ಪ್ರಧಾನಿ ನರೇಂದ್ರ ಮೋದಿ ಅವರು ರೈಲಿಗೆ ಚಾಲನೆ ನೀಡಿದ್ದರು

- Advertisement -
- Advertisement -

ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಉದ್ಘಾಟಿಸಿದ ಮುಂಬೈ-ಗಾಂಧಿನಗರ ವಂದೇ ಭಾರತ್‌‌‌ ಎಕ್ಸ್‌ಪ್ರೆಸ್‌ ರೈಲು ಮಗದೊಮ್ಮೆ ಜಾನುವಾರಿಗೆ ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ. ಶನಿವಾರ ಬೆಳಿಗ್ಗೆ ಘಟನೆ ನಡೆದಿದ್ದು, ಗುಜರಾತ್‌ನ ಅತುಲ್ ನಿಲ್ದಾಣದ ಬಳಿ ಗೂಳಿಗೆ ಡಿಕ್ಕಿ ಹೊಡೆದಿದೆ ಎಂದು ವರದಿ ಹೇಳಿದೆ.

ಈ ತಿಂಗಳಲ್ಲಿ ಇದೇ ರೀತಿಯ ಘಟನೆ ನಡೆಯುತ್ತಿರುವುದು ಇದು ಮೂರನೇ ಭಾರಿಯಾಗಿದೆ. ರೈಲು ಮುಂಬೈ ಸೆಂಟ್ರಲ್‌ನಿಂದ ಗಾಂಧಿನಗರಕ್ಕೆ ಪ್ರಯಾಣಿಸುತ್ತಿತ್ತು. ಬೆಳಗ್ಗೆ 8.17ಕ್ಕೆ ಮುಂಬೈ ಸೆಂಟ್ರಲ್ ವಿಭಾಗದ ಅತುಲ್ ಬಳಿ ಹಳಿ ಮೇಲೆ ದನಕರುಗಳು ಓಡಾಡಿದ್ದು, ಈ ವೇಳೆ ಗೂಳಿಗೆ ಡಿಕ್ಕಿ ಹೊಡೆದಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ರೈಲನ್ನು ಸುಮಾರು 15 ನಿಮಿಷಗಳ ಕಾಲ ತಡೆಹಿಡಿಯಲಾಗಿದ್ದು, ರೈಲು ಕಾರ್ಯಾಚರಣೆಗೆ ಯಾವುದೇ ತೊಂದರೆಯಾಗಿಲ್ಲ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನೆಯಿಂದಾಗಿ ರೈಲಿನ ಮುಂಬಾಗದ ಒಂದು ಭಾಗಕ್ಕೆ ಹಾನಿಯಾಗಿದೆ.

ಇದನ್ನೂ ಓದಿ: ಚೀನಾ ಲಿಂಕ್: 44 ಅರೆಹೈಸ್ಪೀಡ್ ವಂದೇ ಭಾರತ್‌ ರೈಲು ಟೆಂಡರ್‌‌ ರದ್ದು

“ಮುಂಭಾಗದ ಕೋಚ್ ಅಂದರೆ ಡ್ರೈವರ್ ಕೋಚ್‌ನ ಒಂದು ಭಾಗದ ಕವರ್‌ಗೆ ಹಾನಿಯಾಗಿರುವುದನ್ನು ಹೊರತುಪಡಿಸಿ ರೈಲಿಗೆ ಯಾವುದೇ ಹಾನಿಯಾಗಿಲ್ಲ. ರೈಲು ಸರಾಗವಾಗಿ ಚಲಿಸುತ್ತಿದೆ. ಅದನ್ನು ಆದಷ್ಟು ಬೇಗ ಸರಿಪಡಿಸಲಾಗುವುದು. ದನಕರುಗಳು ಓಡಾಡುತ್ತಿರುವಾಗ, ಒಂದು ಗೂಳಿ ಡಿಕ್ಕಿ ಹೊಡೆದಿದೆ” ಎಂದು ಭಾರತೀಯ ರೈಲ್ವೇಯ ಹೇಳಿಕೆ ತಿಳಿಸಿದೆ.

ಇದನ್ನೂ ಓದಿ: 2019ರಲ್ಲಿ ಉದ್ಘಾಟಿಸಿದ್ದ ‘ಅಹಮದಾಬಾದ್ ಮೆಟ್ರೋ ರೈಲು ಮೊದಲ ಹಂತ’ವನ್ನೇ ಮತ್ತೆ ಉದ್ಘಾಟಿಸಿದ ಮೋದಿ! ವಾಸ್ತವವೇನು?

ಘಟನೆಯ ನಂತರ ರೈಲ್ವೆ ಅಧಿಕಾರಿಗಳು ತಮ್ಮ ಜಾನುವಾರುಗಳನ್ನು ಟ್ರ್ಯಾಕ್ ಬಳಿ ಬಿಡದಂತೆ ಹತ್ತಿರದ ಗ್ರಾಮಸ್ಥರಿಗೆ ಸಲಹೆ ನೀಡಲು ಪ್ರಯತ್ನಿಸುತ್ತಿದ್ದಾರೆ.

ರೈಲಿನ ವೇಗವನ್ನು ಗಂಟೆಗೆ 160 ಕಿಲೋಮೀಟರ್‌ಗೆ ಹೆಚ್ಚಿಸಲು ಮತ್ತು ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಪ್ಪಿಸಲು ಪಶ್ಚಿಮ ರೈಲ್ವೇ ಗಾಂಧಿನಗರ-ಅಹಮದಾಬಾದ್ ವಿಭಾಗದಲ್ಲಿ ಫೆನ್ಸಿಂಗ್ ಕೆಲಸವನ್ನು ಕೈಗೊಳ್ಳಲಿದೆ ಎಂದು ಸಿಪಿಆರ್‌ಒ ಹೇಳಿದ್ದಾರೆ. ಫೆನ್ಸಿಂಗ್ ಕೆಲಸ ಮಾರ್ಚ್ 2024 ರೊಳಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದ್ದಾರೆ.

ವಂದೇ ಭಾರತ್ ಸರಣಿಯ ಮೂರನೇ ಸೇವೆಯಾದ ಸ್ವದೇಶಿ ವಿನ್ಯಾಸ ಮತ್ತು ನಿರ್ಮಿಸಿದ ಸೆಮಿ-ಹೈಸ್ಪೀಡ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 30 ರಂದು ಗಾಂಧಿನಗರದಿಂದ ಚಾಲನೆ ನೀಡಿದ್ದರು ಮತ್ತು ಮರುದಿನದಿಂದ ರೈಲು ತನ್ನ ವಾಣಿಜ್ಯ ಸಂಚಾರವನ್ನು ಪ್ರಾರಂಭಿಸಿತ್ತು.

ಇದನ್ನೂ ಓದಿ: ಚಕ್ರವರ್ತಿ ಸೂಲಿಬೆಲೆಯಿಂದ ಆಯುಧ ತರಬೇತಿ ಆರೋಪ: ಟ್ವಿಟರ್‌ನಲ್ಲಿ ಕನ್ನಡಿಗರ ಆಕ್ಷೇಪ

ಅಕ್ಟೋಬರ್ 6 ರಂದು ಗುಜರಾತ್‌ನ ವತ್ವಾ ಮತ್ತು ಮಣಿನಗರ ರೈಲು ನಿಲ್ದಾಣಗಳ ನಡುವೆ ಮುಂಬೈನಿಂದ ಗಾಂಧಿನಗರಕ್ಕೆ ತೆರಳುತ್ತಿದ್ದ ರೈಲಿಗೆ ಡಿಕ್ಕಿ ಹೊಡೆದು ನಾಲ್ಕು ಎಮ್ಮೆಗಳು ಸಾವನ್ನಪ್ಪಿದ್ದವು. ಈ ವೇಳೆ ರೈಲಿಗೆ ಹಾನಿಯಾದ ಕಾರಣ ಅದರ ಮುಂಬಾಗದ ಕವರ್‌‌ ಅನ್ನು ರಾತ್ರೋರಾತ್ರಿ ಬದಲಾಯಿಸಬೇಕಾಯಿತು. ಮರುದಿನ (ಅಕ್ಟೋಬರ್ 7) ಸಂಭವಿಸಿದ ಎರಡನೇ ಘಟನೆಯಲ್ಲಿ, ಮುಂಬೈಗೆ ತೆರಳುತ್ತಿದ್ದಾಗ ಗುಜರಾತ್‌ನ ಆನಂದ್ ಬಳಿ ರೈಲು ಹಸುವಿಗೆ ಡಿಕ್ಕಿ ಹೊಡೆದಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಂದ್ರ ಸಚಿವ ಅಮಿತ್‌ ಶಾ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲು

0
ಚುನಾವಣೆ ಪ್ರಚಾರದಲ್ಲಿ ಮಕ್ಕಳನ್ನು ಬಳಸಿಕೊಂಡ ಹಿನ್ನೆಲೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ತೆಲಂಗಾಣದ ಹೈದರಾಬಾದ್‌ನಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗಿದೆ. ಚುನಾವಣಾ...