Homeಕರ್ನಾಟಕಬಾಗಲಕೋಟೆ ಜಿಲ್ಲೆಯಲ್ಲಿ ಇಬ್ಬರು ಮಂತ್ರಿಗಳನ್ನು ಸೋಲಿಸಿದ ಪ್ರಬುದ್ಧ ಮತದಾರರು

ಬಾಗಲಕೋಟೆ ಜಿಲ್ಲೆಯಲ್ಲಿ ಇಬ್ಬರು ಮಂತ್ರಿಗಳನ್ನು ಸೋಲಿಸಿದ ಪ್ರಬುದ್ಧ ಮತದಾರರು

- Advertisement -
- Advertisement -

ಬಾಗಲಕೋಟೆ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ಘೋಷಣೆಯಾಗಿದ್ದು, ಅಭ್ಯರ್ಥಿಗಳ ಫಲಿತಾಂಶದ ಪೂರ್ಣ ವಿವರಗಳು ಈ ಕೆಳಗಿನಂತಿವೆ.

ಬಾಗಲಕೋಟೆ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ಎಚ್‌ವೈ ಮೇಟಿ- ಗೆಲುವು

ಬಿಜೆಪಿ- ವೀರಣ್ಣ ಚರಂತಿಮಠ- ಸೋಲು

ಜೆಡಿಎಸ್- ಡಾ. ದೇವರಾಜ್ ಪಾಟೀಲ್- ಸೋಲು

ಪಕ್ಷೇತರ- ಮಲ್ಲಿಕಾರ್ಜುನ್ ಚರಂತಿಮಠ- ಸೋಲು

ಹಿನ್ನೆಲೆ:- 2008ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ವೀರಣ್ಣ ಚರಂತಿಮಠ 46,452 ಮತ ಪಡೆಯುವ ಮೂಲಕ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎಚ್‌ ವೈ ಮೇಟಿ ಅವರನ್ನು 9,246 ಮತಗಳ ಅಂತರದಲ್ಲಿ ಸೋಲಿಸಿ ಶಾಸಕರಾಗಿದ್ದರು. ಎಚ್‌ ವೈ ಮೇಟಿ 37,206 ಮತ ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟರು. ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಪಿ ಎಚ್‌ ಪೂಜಾರ 17,389 ಮತ ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು.

2013ರ ಚುನಾವಣೆಯಲ್ಲಿ ಸುದೀರ್ಘ ವರ್ಷಗಳ ನಂತರ ಎಚ್‌ ವೈ ಮೇಟಿ ಮೂಲಕ ಕಾಂಗ್ರೆಸ್‌ ಈ ಕ್ಷೇತ್ರವನ್ನು ಮರಳಿ ಪಡೆಯಿತು. ಎಚ್‌ ವೈ ಮೇಟಿ 68,216 ಮತ ಪಡೆದು ಗೆಲುವಿನ ನಗೆ ಬೀರಿದರೆ, ಬಿಜೆಪಿಯ ಚರಂತಿಮಠ ತೀವ್ರ ಪೈಪೋಟಿ ನೀಡಿ, 2,900 ಮತಗಳ ಅಂತರದಿಂದ ಸೋಲು ಕಂಡರು. ಎಚ್‌ ವೈ ಮೇಟಿ ಅವರು ಸಿದ್ದರಾಮಯ್ಯ ಸರ್ಕಾರದಲ್ಲಿ ಅಬಕಾರಿ ಸಚಿವರಾಗಿದ್ದರು.

2018ರ ಕಳೆದ ಚುನಾವಣೆಯಲ್ಲಿ ಬಿಜೆಪಿ ಮತ್ತೆ ವೀರಣ್ಣ ಚರಂತಿಮಠ ಮೂಲಕ ಬಾಗಲಕೋಟೆ ಕ್ಷೇತ್ರವನ್ನು ಮರಳಿ ಪಡೆಯಿತು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎಚ್‌ ವೈ ಮೇಟಿ 69,719 ಮತ ಪಡೆದರೆ, ಚರಂತಿಮಠ 85,653 ಮತ ಪಡೆದು ಗೆಲುವಿನ ನಗೆ ಬೀರಿದರು.

*****

ಹುನಗುಂದ

ಕಾಂಗ್ರೆಸ್ – ವಿಜಯಾನಂದ್ ಕಾಶಪ್ಪನವರ- ಗೆಲುವು

ಬಿಜೆಪಿ – ದೊಡ್ಡನಗೌಡ ಜಿ ಪಾಟೀಲ್- ಸೋಲು

ಕೆಆರ್‌ಪಿಪಿ- ನವಲಿಹಿರೇಮಠ- ಸೋಲು

ಹಿನ್ನೆಲೆ:- 2008ರಲ್ಲಿ ಬಿಜೆಪಿ ಎರಡನೇ ಅವಧಿಗೆ ಇಲ್ಲಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗುತ್ತದೆ. ದೊಡ್ಡನಗೌಡ ಪಾಟೀಲ 53,644 ಮತ ಪಡೆದು ಗೆಲುವಿನ ನಗೆ ಬೀರುತ್ತಾರೆ. ಕಾಂಗ್ರೆಸ್ಸಿನಿಂದ ವಿಜಯಾನಂದ ಕಾಶಪ್ಪನವರ 48,575 ಮತ ಪಡೆಯುವ ಮೂಲಕ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟರು.

2013ರ ಚುನಾವಣೆಯಲ್ಲಿ ವಿಜಯಾನಂದ ಕಾಶಪ್ಪನವರ 72,720 ಮತ ಪಡೆಯುವ ಮೂಲಕ ಭರ್ಜರಿ ಜಯ ಸಾಧಿಸುವುದರೊಂದಿಗೆ ಕಾಂಗ್ರೆಸಿನ ಹಿಡಿತಕ್ಕೆ ಕ್ಷೇತ್ರ ಮರಳುತ್ತದೆ. ಬಿಜೆಪಿ ಅಭ್ಯರ್ಥಿ ದೊಡ್ಡನಗೌಡ ಪಾಟೀಲ ವಿರುದ್ಧ 15,797 ಮತಗಳ ಅಂತರದಿಂದ ಕಾಶಪ್ಪನವರ ಗೆಲುವು ಕಂಡರು.

2018ರ ಚುನಾವಣೆಯಲ್ಲಿ ಬಿಜೆಪಿಯ ದೊಡ್ಡನಗೌಡ ಪಾಟೀಲ ಅವರು 65,012 ಮತ ಪಡೆದು ಗೆಲುವು ಕಂಡರು. ಇತ್ತ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ವಿಜಯಾನಂದ ಕಾಶಪ್ಪನವರ 59,785 ಮತ ಪಡೆದು, 5227 ಮತಗಳ ಅಂತರಲ್ಲಿ ಸೋಲು ಕಾಣುತ್ತಾರೆ. ಪಕ್ಷೇತರವಾಗಿ ಸ್ಪರ್ಧಿಸಿದ್ದ ಎಸ್‌ ಆರ್‌ ನವಲಿ ಹಿರೇಮಠ ಅವರು ಕಾಂಗ್ರೆಸ್‌ ಮತ್ತು ಬಿಜೆಪಿ ಪೈಪೋಟಿ ನಡುವೆಯೂ 25,850 ಮತಗಳನ್ನು ಪಡೆದು ಗಮನ ಸೆಳೆಯುತ್ತಾರೆ.

*******

ಬಾದಾಮಿ

ಕಾಂಗ್ರೆಸ್- ಭೀಮಸೇನ್ ಚಿಮ್ಮನಕಟ್ಟಿ- ಗೆಲುವು

ಬಿಜೆಪಿ- ಶಾಂತಗೌಡ ಪಾಟೀಲ್- ಸೋಲು

ಜೆಡಿಎಸ್- ಹನಮಂತ ಮಾವಿನಮರದ- ಸೋಲು

ಹಿನ್ನೆಲೆ:- 2004ರಲ್ಲಿ ಬಾದಾಮಿ ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಮಲ ಅರಳಿತು. ಎಂ.ಕೆ ಪಟ್ಟಣಶೆಟ್ಟಿ ಅವರು ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರು. ಬಳಿಕ 2008ರಲ್ಲೂ ಪಟ್ಟಣಶೆಟ್ಟಿ ಗೆಲುವು ಕಾಣುತ್ತಾರೆ. 2013ರಲ್ಲಿ ಬಿ.ಬಿ ಚಿಮ್ಮನಕಟ್ಟಿ ಗೆಲುವು ಸಾಧಿಸಿದರು. 2018ರಲ್ಲಿ ರಾಜ್ಯದ ಚಿತ್ತ ಬಾದಾಮಿಯತ್ತ ನೆಟ್ಟಿತ್ತು. ಏಕೆಂದರೆ ಕಾಂಗ್ರೆಸ್‌ನಿಂದ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧೆ ಮಾಡಿದ್ದರು. ಅವರ ವಿರುದ್ಧ ಪ್ರಬಲ ಅಭ್ಯರ್ಥಿಯಾಗಿದ್ದ ಬಿ ಶ್ರೀರಾಮುಲು ಸ್ಪರ್ಧಿಸಿದ್ದರು. ಅಂತಿಮವಾಗಿ ಕಾಂಗ್ರೆಸ್ ಪಕ್ಷ ಜಯ ಗಳಿಸಿತು.

******

ಬೀಳಗಿ

ಕಾಂಗ್ರೆಸ್- ಜೆಟಿ ಪಾಟೀಲ್- ಗೆಲುವು

ಬಿಜೆಪಿ- ಮುರಗೇಶ್ ನಿರಾಣಿ- ಸೋಲು

ಜೆಡಿಎಸ್-  ರುಕ್ಮುದ್ದೀನ್‌ ಸೌದಗಲ್‌- ಸೋಲು

2004ರ ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿದ ಮುರಗೇಶ ನಿರಾಣಿ, ಕಾಂಗ್ರೆಸ್ ಹುರಿಯಾಳು ಜೆಟಿ ಪಾಟೀಲ್ ಅವರ ಹ್ಯಾಟ್ರಿಕ್ ಗೆಲುವಿಗೆ ಬ್ರೇಕ್ ಹಾಕಿದರು. ಮೊದಲ ಬಾರಿಗೆ ಬಿಜೆಪಿ ಬಾವುಟ ಹಾರಿಸಿದ ನಿರಾಣಿ, ಜೆಟಿ ಪಾಟೀಲ್ ವಿರುದ್ಧ 17,325 ಮತಗಳ ಅಂತರಿಂದ ಗೆಲುವು ಕಂಡರು.

2008ರ ಚುನಾವಣೆಯಲ್ಲಿ ಮತ್ತೆ ಮುರುಗೇಶ ನಿರಾಣಿ ಬಿಜೆಪಿ ಪಕ್ಷದಿಂದ ಗೆಲುವು ಕಂಡರು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯಥಿಯಾಗಿದ್ದ ಅಜಯ್‌ ಕುಮಾರ್‌ ಸರನಾಯಕ ಅವರು ಪ್ರಬಲ ಪೈಪೋಟಿ ನೀಡಿ ಕೇವಲ 3,124 ಮತಗಳ ಅಂತರದಿಂದ ನಿರಾಣಿ ವಿರುದ್ಧ ಸೋಲುಣಬೇಕಾಯಿತು. ಗೆದ್ದ ನಿರಾಣಿ ಮಂತ್ರಿಯಾದರು. 2013ರ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಮತ್ತೆ ಜೆ.ಟಿ ಪಾಟೀಲ ಅವರನ್ನು ಕಣಕ್ಕಿಳಿಸಿದರು. ಈ ವೇಳೆ ನಿರಾಣಿಯ ಹ್ಯಾಟ್ರಿಕ್‌ ಗೆಲುವಿಗೆ ಜೆ.ಟಿ ಪಾಟೀಲ ಬ್ರೇಕ್ ಹಾಕಿದರು. ನಿರಾಣಿ ವಿರುದ್ಧ 11,238 ಮತಗಳ ಅಂತರದಿಂದ ಗೆದ್ದ ಜೆಟಿ ಪಾಟೀಲ್ ಅವರು ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು.

ಕಳೆದ ಬಾರಿಯ 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಮುರುಗೇಶ ನಿರಾಣಿ 85,135 ಮತ ಪಡೆಯುವ ಮೂಲಕ ಗೆಲುವಿನ ನಗೆ ಬೀರಿದರು. ಕಾಂಗ್ರೆಸ್‌ ಅಭ್ಯರ್ಥಿ ಜೆ.ಟಿ ಪಾಟೀಲ್ ತೀವ್ರ ಪೈಪೋಟಿ ನೀಡಿ ಕೇವಲ 4,811 ಮತಗಳ ಅಂತರದಿಂದ ಸೋಲುಂಡರು. ಬಿಜೆಪಿ ಸರ್ಕಾರದಲ್ಲಿ ನಿರಾಣಿ ಎರಡನೇ ಬಾರಿ ಮಂತ್ರಿಯಾದರು.

******

ಮುಧೋಳ

ಕಾಂಗ್ರೆಸ್- ಆರ್‌ಬಿ ತಿಮ್ಮಾಪೂರ- ಗೆಲುವು

ಬಿಜೆಪಿ- ಗೋವಿಂದ್ ಕಾರಜೋಳ- ಸೋಲು

ಪಕ್ಷೇತರ- ಸತೀಶ್ ಬಂಡಿವಡ್ಡರ್- ಹಿನ್ನಡೆ

2004ರ ಚುನಾವಣೆಯಲ್ಲಿ 71,814 ಮತ ಪಡೆಯುವ ಮೂಲಕ ಗೋವಿಂದ ಕಾರಜೋಳ ಅವರು ಕಾಂಗ್ರೆಸ್‌ನ ಆರ್.ಬಿ ತಿಮ್ಮಾಪೂರ ವಿರುದ್ಧ 32,942 ಮತಗಳ ಅಂತರದಿಂದ ದೊಡ್ಡ ಗೆಲುವು ಸಾಧಿಸಿದರು. 2008ರಲ್ಲೂ ಕಾಂಗ್ರೆಸ್‌ನ ತಿಮ್ಮಾಪೂರ ಹಾಗೂ ಬಿಜೆಪಿಯ ಕಾರಜೋಳ ನಡುವೆಯೇ ಫೈಟ್ ಮುಂದುವರೆಯಿತು. ಕಾರಜೋಳ ಗೆಲುವಿನ ಓಟವನ್ನು ಮುಂದುವರೆಸಿದರು.ತಿಮ್ಮಾಪೂರ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟರು. ಈ ಚುನಾವಣೆಯಲ್ಲಿ ಇಬ್ಬರ ನಡುವಿನ ಮತಗಳಿಕೆಯ ಅಂತರ ಕೇವಲ 7,378 ಆಗಿತ್ತು.

2013ರ ಚುನಾವಣೆಯಲ್ಲೂ ಕೈ-ಕಮಲದಿಂದ ಸಾಂಪ್ರದಾಯಿಕ ಎದುರಾಳಿಗಳಾದ ಕಾರಜೋಳ ಹಾಗೂ ತಿಮ್ಮಾಪೂರ ಸ್ಪರ್ಧೆಗಿಳಿದರು. ಈ ಬಾರಿಯ ಮತಗಳಿಕೆಯ ಅಂತರ ಕಡಿಮೆಯಾಯಿತೇ ವಿನಃ ಗೆಲುವು-ಸೋಲಿನಲ್ಲಿ ವ್ಯತ್ಯಾಸವಾಗಲಿಲ್ಲ. ಕಾರಜೋಳ ಅವರು ಕೇವಲ 5,178 ಮತಗಳಿಂದ ಗೆಲುವು ಸಾಧಿಸಿದರು.

ಸತತ ಸೋಲಿನಿಂದ ಕಂಗೆಟ್ಟಿದ್ದ ಕಾಂಗ್ರೆಸ್, 2018ರ ಚುನಾವಣೆಯಲ್ಲಿ ಕಾರಜೋಳ ವಿರುದ್ಧ ತನ್ನ ಅಭ್ಯರ್ಥಿಯನ್ನೇ ಬದಲಾಯಿಸಿತು. ಕಾಂಗ್ರೆಸ್‌ನಿಂದ ಸತೀಶ್ ಬಂಡಿವಡ್ಡರಗೆ ಟಿಕೆಟ್ ನೀಡಲಾಯಿತಾದರೂ ಪ್ರಬಲ ನಾಯಕನಾಗಿ ಬೆಳೆದುನಿಂತಿದ್ದ ಬಿಜೆಪಿಯ ಕಾರಜೋಳ ವಿರುದ್ಧ ಆಟ ನಡೆಯಲಿಲ್ಲ. ಮತ್ತೆ ಕಾರಜೋಳ ವಿಜಯಪತಾಕೆ ಹಾರಿಸಿದರು. ಆ ಮೂಲಕ ಸತತ ನಾಲ್ಕನೇ ಅವಧಿಗೆ ಕಾರಜೋಳ ಶಾಸಕರಾಗಿ ಆಯ್ಕೆಯಾದರು. ಹಾಲಿ ನೀರಾವರಿ ಸಚಿವರಾಗಿರುವ ಗೋವಿಂದ ಕಾರಜೋಳ ರಾಜ್ಯದ ಉಪಮುಖ್ಯಮಂತ್ರಿ ಸ್ಥಾನವನ್ನೂ ಅಲಂಕರಿಸಿದ್ದರು. ಬಿಜೆಪಿಯಲ್ಲಿ ಪ್ರಬಲ ದಲಿತ ಸಮುದಾಯದ ಮುಖಂಡರಾಗಿರುವ ಅವರು 6 ಬಾರಿ ಸ್ಪರ್ಧಿಸಿ 5 ಬಾರಿ ಗೆಲುವು ಸಾಧಿಸಿದ್ದು, ಒಂದು ಬಾರಿ ಸೋಲು ಕಂಡಿದ್ದಾರೆ.

*******

ಜಮಖಂಡಿ

ಕಾಂಗ್ರೆಸ್- ಆನಂದ್ ನ್ಯಾಮಗೌಡ- ಸೋಲು

ಬಿಜೆಪಿ- ಜಗದೀಶ ಗುಡಗುಂಟಿ- ಗೆಲುವು

2018ರಲ್ಲಿ ನಡೆದ ಚುನಾವಣೆಯಲ್ಲಿ 49,245 ಮತ ಪಡೆಯುವ ಮೂಲಕ ಕಾಂಗ್ರೆಸ್‌ ಅಭ್ಯರ್ಥಿ ಸಿದ್ದು ನ್ಯಾಮಗೌಡ ಅವರು ಗೆಲುವು ಕಂಡರು. ಬಿಜೆಪಿಯಿಂದ ಸ್ಪರ್ಧಿಸಿದ್ದ ಶ್ರೀಕಾಂತ್‌ ಕುಲಕರ್ಣಿ ತೀವ್ರ ಪೈಪೋಟಿ ನೀಡಿ 2,795 ಮತಗಳ ಅಂತರದಲ್ಲಿ ಸೋಲುತ್ತಾರೆ. ಪಕ್ಷೇತರರಾಗಿ ಸ್ಪರ್ಧಿಸಿದ್ದ ಮುರುಗೇಶ್‌ ನಿರಾಣಿ ಸಹೋದರ ಸಂಗಮೇಶ್‌ ನಿರಾಣಿ 24,461 ಮತ ಪಡೆದು ಮೂರನೇ ಸ್ಥಾನಕ್ಕೆ ಕುಸಿಯುತ್ತಾರೆ.

ಶಾಸಕ ಸಿದ್ದು ನ್ಯಾಮಗೌಡರ ಅಕಾಲಿಕ ಮರಣದಿಂದಾಗಿ ಜಮಖಂಡಿಯಲ್ಲಿ 47 ವರ್ಷಗಳ ನಂತರ 2018ರಲ್ಲಿ ಉಪ ಚುನಾವಣೆ ನಡೆಯಿತು. ಸಿದ್ದು ನ್ಯಾಮಗೌಡರ ಮಗ ಆನಂದ್ ನ್ಯಾಮಗೌಡ ಕಾಂಗ್ರೆಸ್‌ನಿಂದ ಸ್ಪರ್ಧಿಸಿ, ಅನುಕಂಪದ ಅಲೆ ಮೇಲೆ 97,017 ಮತಗಳನ್ನು ಪಡೆಯುವ ಮೂಲಕ 39 ಸಾವಿರ ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದರು. ಸಂಘಟನೆಯ ಬಲ ನೆಚ್ಚಿಕೊಂಡಿದ್ದ ಬಿಜೆಪಿಯ ಶ್ರೀಕಾಂತ ಕುಲಕರ್ಣಿ 57,537 ಮತ ಪಡೆದು ಸೋಲು ಅನುಭವಿಸಿದರು.

*******

ತೇರದಾಳ

ಕಾಂಗ್ರೆಸ್- ಸಿದ್ದು ಕೊಣ್ಣೂರ- ಸೋಲು

ಬಿಜೆಪಿ- ಸಿದ್ದು ಸವದಿ- ಗೆಲುವು

ಪಕ್ಷೇತರ- ಡಾ. ಪದ್ಮಜೀತ್ ನಾಡಗೌಡ- ಹಿನ್ನಡೆ

2008ರಲ್ಲಿ ಮೊದಲ ವಿಧಾನಸಭಾ ಚುನಾವಣೆ ಎದುರಿಸಿದ ತೇರದಾಳದಲ್ಲಿ ಬಿಜೆಪಿ ಬಾವುಟ ಹಾರಿತ್ತು. ಬಿಜೆಪಿಯಿಂದ ಸ್ಪರ್ಧಿಸಿದ್ದ ಸಿದ್ದು ಸವದಿ 62,595 ಮತಗಳನ್ನು ಪಡೆದು ಕ್ಷೇತ್ರದ ಮೊದಲ ಶಾಸಕರಾಗಿ ಆಯ್ಕೆಯಾದರು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಉಮಾಶ್ರೀ 50351 ಮತ ಪಡೆದು, 12,244 ಮತಗಳ ಅಂತರದಲ್ಲಿ ಸೋಲು ಅನುಭವಿಸಿದರು.

2013ರ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಉಮಾಶ್ರೀ ಅವರು ಸಿದ್ದು ಸವದಿಗೆ ಸೋಲಿನ ರುಚಿ ತೋರಿಸಿದರು. ಉಮಾಶ್ರೀ ಅವರು 70,189 ಮತ ಪಡೆಯುವ ಮೂಲಕ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಆ ಮೂಲಕ ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವೆ ಕೂಡ ಆದರು. ಬಿಜೆಪಿಯಿಂದ ಸ್ಪರ್ಧಿಸಿದ್ದ ಸಿದ್ದು ಸವದಿ 67,590 ಪಡೆದು, 2,599 ಮತಗಳ ಅಂತರದಲ್ಲಿ ಸೋಲು ಕಂಡರು.

2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಸಿದ್ದು ಸವದಿ ಮತ್ತೆ ಗೆಲುವು ಸಾಧಿಸುವ ಮೂಲಕ ಉಮಾಶ್ರೀ ಅವರನ್ನು ಸೋಲಿಸಿದರು. ಆ ವೇಳೆ ಸಿದ್ದು ಸವದಿ 87,583 ಮತ ಪಡೆದು ಗೆಲುವಿನ ನಗೆ ಬಿರಿದರು. ಉಮಾಶ್ರೀ 66,470 ಮತ ಪಡೆದು 21,113 ಮತಗಳ ಅಂತರದಲ್ಲಿ ಸೋಲು ಅನುಭವಿಸಿದರು.

*****

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೇಥಿ ಕಾಂಗ್ರೆಸ್ ಕಚೇರಿ ಮೇಲೆ ದಾಳಿ, ಕಾರ್ಯಕರ್ತನಿಗೆ ಹಲ್ಲೆ: ಬಿಜೆಪಿ ಮುಖಂಡರು ಸೇರಿ 10...

0
ಉತ್ತರ ಪ್ರದೇಶದ ಅಮೇಥಿಯಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿ ಮೇಲೆ ಭಾನುವಾರ (ಮೇ 5) ಮಧ್ಯರಾತ್ರಿ ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ದಾಳಿ ಮಾಡಿದೆ. ಪಕ್ಷದ ಕಚೇರಿಯ ಹೊರಗೆ ನಿಲ್ಲಿಸಿದ್ದ ಹಲವು ವಾಹನಗಳನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳು,...