Homeಮುಖಪುಟಕಾಂಗ್ರೆಸ್-ಬಿಜೆಪಿ ಟಿಕೆಟ್ ಸಿಗದೇ ಜೆಡಿಎಸ್ ಸೇರಿದವರ ಭವಿಷ್ಯವೇನಾಯಿತು?

ಕಾಂಗ್ರೆಸ್-ಬಿಜೆಪಿ ಟಿಕೆಟ್ ಸಿಗದೇ ಜೆಡಿಎಸ್ ಸೇರಿದವರ ಭವಿಷ್ಯವೇನಾಯಿತು?

- Advertisement -
- Advertisement -

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ನ 27 ಜನ ಟಿಕೆಟ್ ವಂಚಿತರು ಜೆಡಿಎಸ್ ಪಕ್ಷ ಸೇರಿ ಸ್ಪರ್ಧಿಸಿದ್ದರು. ಅವರ ಭವಿಷ್ಯವೇನಾಯಿತು? ಅವರು ಗೆಲುವು ಸಾಧಿಸಿದರೆ ಎಂಬುದರ ವಿವರ ಇಲ್ಲಿದೆ.

ಬಿಜೆಪಿ ಟಿಕೆಟ್ ಸಿಗದ ಕಾರಣಕ್ಕೆ ಜೆಡಿಎಸ್ ಸೇರಿದವರು

  1. ಶಿವಮೊಗ್ಗ: ಬಿಜೆಪಿ ಪಕ್ಷದಿಂದ ವಿಧಾನ ಪರಿಷತ್ ಸದಸ್ಯರಾಗಿದ್ದ ಆಯನೂರು ಮಂಜುನಾಥ್‌ರವರು ಶಿವಮೊಗ್ಗದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಬಿಜೆಪಿ ಟಿಕೆಟ್ ಸಿಗದಿದ್ದರಿಂದ ಅವರು ಜೆಡಿಎಸ್ ಸೇರಿ ಟಿಕೆಟ್ ಪಡೆದಿದ್ದರು. ಆದರೆ ಅವರು ಸೋಲು ಕಂಡಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪ ಗೆಲುವು ಸಾಧಿಸಿದ್ದಾರೆ.
  2. ಮೂಡಿಗೆರೆ: ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರ ಮೂಡಿಗೆರೆಯಲ್ಲಿ ಹಾಲಿ ಬಿಜೆಪಿ ಶಾಸಕರಾಗಿದ್ದ ಎಂ.ಪಿ ಕುಮಾರಸ್ವಾಮಿಯವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿತು. ಅವರು ಜೆಡಿಎಸ್ ಸೇರಿ ಅಭ್ಯರ್ಥಿಯಾದರು. ಆದರೆ ಅವರು ಸೋಲು ಕಂಡರು. ಕಾಂಗ್ರೆಸ್ ಅಭ್ಯರ್ಥಿ ನಯನ ಮೋಟಮ್ಮ ಜಯ ಕಂಡರು.

3. ಜೇವರ್ಗಿ: ಮಾಜಿ ಶಾಸಸ ದೊಡಪ್ಪಗೌಡ ಶಿವಲಿಂಗಪ್ಪನವರಿಗೆ ಬಿಜೆಪಿ ಟಿಕೆಟ್ ಸಿಗದುದ್ದರಿಂದ ಅವರು ಜೆಡಿಎಸ್ ಸೇರಿದರು. ಆದರೆ ಅವರು ಕಾಂಗ್ರೆಸ್‌ನ ಅಜಯ್ ಸಿಂಗ್ ವಿರುದ್ಧ ಸೋಲು ಕಂಡರು.

4. ಕೊಪ್ಪಳ: ಚಂದ್ರ ಶೇಖರ್‌ರವರು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಟಿಕೆಟ್ ಸಿಗದುದ್ದರಿಂದ ಅವರು ಜೆಡಿಎಸ್‌ಗೆ ಬಂದು ಟಿಕೆಟ್ ಗಿಟ್ಟಿಸಿದರು. ಆದರೆ ಕಾಂಗ್ರೆಸ್‌ನ ರಾಘವೇಂದ್ರ ಹಿಟ್ನಾಳ್ ಎದುರು ಸೋಲು ಅನುಭವಿಸಿದರು.

5. ಅರಸೀಕರೆ: ಎನ್ ಆರ್ ಸಂತೋಷ್ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಟಿಕೆಟ್ ಸಿಗದುದ್ದರಿಂದ ಅವರು ಜೆಡಿಎಸ್‌ಗೆ ಬಂದು ಟಿಕೆಟ್ ಗಿಟ್ಟಿಸಿದರು. ಆದರೆ ಕಾಂಗ್ರೆಸ್‌ನ ಶಿವಲಿಂಗೇಗೌಡರ ಎದುರು ಸೋಲು ಕಂಡರು.

6. ವರುಣ: ಭಾರತೀ ಶಂಕರ್ – ಸಿದ್ದರಾಮಯ್ಯನವರ ಎದುರು ಸೋಲು ಕಂಡರು

7. ಅರಕಲಗೂಡು: ಎ.ಮಂಜುರವರು ಬಿಜೆಪಿ ತೊರೆದು ಬಂದು ಕಾಂಗ್ರೆಸ್‌ನ ಶ್ರೀಧರ್‌ ಗೌಡರ ಎದುರು ಜಯ ಸಾಧಿಸಿ ಶಾಸಕರಾಗಿದ್ದಾರೆ.

8. ಕೂಡ್ಲಿಗಿ: ಕೋಡಿಹಳ್ಳಿ ಭೀಮಪ್ಪಯವರು ಕಾಂಗ್ರೆಸ್‌ನ ಶ್ರೀನಿವಾಸ್‌ರವರ ಎದುರು ಹೀನಾಯ ಸೋಲು ಕಂಡರು.

9. ಹಗರಿಬೊಮ್ಮನಹಳ್ಳಿ: ನೇಮಿರಾಜ್ ನಾಯಕ್ ರವರು ಹಗರಿಬೊಮ್ಮನಹಳ್ಳಿಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ.

10. ಬೀದರ್: ಸೂರ್ಯಕಾಂತ್ ನಾಗಮಾರಪಲ್ಲಿ ಕಾಂಗ್ರೆಸ್‌ನ ರಹೀಂ ಖಾನ್ ಎದುರು ಸೋಲು ಕಂಡರು.

11. ಯಾದಗಿರಿ: ಎ.ಬಿ ಮಲಕರೆಡ್ಡಿಯವರು ಕಾಂಗ್ರೆಸ್‌ನ ಚನ್ನರೆಡ್ಡಿ ಪಾಟೀಲ್ ಎದುರು ಸೋಲು ಕಂಡರು.

12. ಶಹಾಪುರ: ಗುರು ಪಾಟೀಲ್ ಸಿರವಾರ್‌ರವರು ಕಾಂಗ್ರೆಸ್‌ನ ಶರಣ ಬಸಪ್ಪ ಎದುರು ಸೋಲು ಕಂಡರು.

13. ಬಸವನ ಬಾಗೇವಾಡಿ: ಸೋಮನಗೌಡ ಪಾಟೀಲ್ ರವರು ಕಾಂಗ್ರೆಸ್‌ನ ಶಿವಾನಂದ ಪಾಟೀಲ್ ಎದುರು ಸೋಲು ಕಂಡರು.

14. ಕಾರವಾರ: ಚೈತ್ರ ಕೋಟೇಕಾರ್ ಕಾಂಗ್ರೆಸ್‌ನ ಸತೀಶ್ ಸೈಲ್ ಎದುರು ಸೋಲು ಕಂಡರು.

ಕಾಂಗ್ರೆಸ್ ಟಿಕೆಟ್ ಸಿಗದ ಕಾರಣಕ್ಕೆ ಪಕ್ಷ ಬಿಟ್ಟು ಜೆಡಿಎಸ್ ಸೇರಿ ಟಿಕೆಟ್ ಪಡೆದವರು

ಮಂಗಳೂರು ಉತ್ತರ: ಕಾಂಗ್ರೆಸ್ ಪಕ್ಷದ ಮಾಜಿ ಶಾಸಕರಾಗಿದ್ದ ಮೊಹಿದ್ದೀನ್ ಭಾವರವರ ಬದಲು ಇನಾಯತ್ ಅಲಿ ರವರಿಗೆ ಕಾಂಗ್ರೆಸ್ ಟಿಕೆಟ್ ನೀಡಿತು. ಇದರಿಂದ ಕುಪಿತಗೊಂಡ ಅವರು ಜೆಡಿಎಸ್ ಸೇರಿ ಅಭ್ಯರ್ಥಿಯಾಗಿದ್ದಾರೆ. ಆದರೆ ಅಲ್ಲಿ ಬಿಜೆಪಿಯ ಭರತ್ ಶೆಟ್ಟಿಯವರ ಎದರು ಸೋಲು ಕಂಡರು.

2. ಚಿತ್ರದುರ್ಗ: ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ರಘು ಆಚಾರ್ ಟಿಕೆಟ್ ಸಿಗದುದ್ದರಿಂದ ಜೆಡಿಎಸ್ ಸೇರಿ ಅಭ್ಯರ್ಥಿಯಾದರು. ಆದರೆ ಕಾಂಗ್ರೆಸ್ ಅಭ್ಯರ್ಥಿ ವಿರೇಂದ್ರ ಪಪ್ಪಿಯವರ ಎದುರು ಸೋಲು ಕಂಡರು.

3. ಕಡೂರು: ಮಾಜಿ ಶಾಸಕರಾದ ವೈಎಸ್‌ವಿ ದತ್ತಾರವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದರು. ಆದರೆ ಕಾಂಗ್ರೆಸ್‌ನಲ್ಲಿಯೂ ಟಿಕೆಟ್ ಸಿಗದಿದ್ದರಿಂದ ಅವರು ಮರಳಿ ಜೆಡಿಎಸ್‌ಗೆ ಬಂದು ಅಭ್ಯರ್ಥಿಯಾದರು. ಆದರೆ ಕಾಂಗ್ರೆಸ್‌ ಕೆ.ಎಸ್ ಆನಂದ್ ಎದುರು ಸೋಲು ಕಂಡರು.

4. ಬಳ್ಳಾರಿ ನಗರ: ಅನಿಲ್ ಲಾಡ್ ಜೆಡಿಎಸ್ ಅಭ್ಯರ್ಥಿಯಾದರು. ಆದರೆ ನಾರಾ ಭರತ್ ರೆಡ್ಡಿ ಎದುರು ಹೀನಾಯ ಸೋಲು ಕಂಡರು.

5. ಬಾಗಲಕೋಟೆ: ಡಾ. ದೇವರಾಜ್ ಪಾಟೀಲ್ ಜೆಡಿಎಸ್ ಸೇರಿದರು. ಆದರೆ ಕಾಂಗ್ರೆಸ್‌ನ ವೈ.ಎಚ್ ಮೇಟಿ ಎದುರು ಸೋಲು ಕಂಡರು.

6. ಬೆಂಗಳೂರು ದಕ್ಷಿಣ: ರಾಜಗೋಪಾಲ ರೆಡ್ಡಿ ಜೆಡಿಎಸ್ ಸೇರಿದರು. ಆದರೆ ಬಿಜೆಪಿ ಅಭ್ಯರ್ಥಿ ಎದುರು ಹೀನಾಯ ಸೋಲು ಕಂಡರು.

7. ಹಾನಗಲ್: ಮನೋಹರ್ ತಹಸೀಲ್ದಾರ್ ಜೆಡಿಎಸ್ ಸೇರಿದರೂ ಸಹ ಕಾಂಗ್ರೆಸ್‌ನ ಶ್ರೀನಿವಾಸ ಮಾನೆ ಎದುರು ಹೀನಾಯ ಸೋಲು ಕಂಡರು.

8. ಹಳಿಯಾಳ: ಎಸ್.ಎಲ್. ಘೋಟ್ನೇಕರ್ ಜೆಡಿಎಸ್ ಸೇರಿದರು. ಆದರೆ ಗುರು ದೇಶಪಾಂಡೆ ವಿರುದ್ಧ ಸೋಲು ಕಂಡರು.

9. ನವಲಗುಂದ: ಕಲ್ಲಪ್ಪ ನಾಗಪ್ಪ ಗಡ್ಡಿರೆಡ್ಡಿಯವರು ಕಾಂಗ್ರೆಸ್‌ನ ಕೋನರೆಡ್ಡಿಯವರ ಎದುರು ಸೋತರು.

10. ಸವದತ್ತಿ ಯಲ್ಲಮ್ಮ: ಸೌರವ್ ಆನಂದ್ ಚೋಪ್ರಾ ಜೆಡಿಎಸ್ ಸೇರಿ ಕಾಂಗ್ರೆಸ್‌ನ ವಿಶ್ವಾಸ್ ವಸಂತ್ ವೈದ್ಯರ ಎದುರು ಸೋತರು.

11. ರಾಯಬಾಗ: ಪ್ರದೀಪ್ ಮಾಳಗಿ ಜೆಡಿಎಸ್ ಸೇರಿ ಬಿಜೆಪಿಯ ಐಹೋಳೆ ಮಹಾಲಿಂಗಪ್ಪನವರ ಎದುರು ಸೋಲು ಕಂಡರು.

12. ಕುಡಚಿ: ಆನಂದ್ ಮಾಳಗಿ ಕಾಂಗ್ರೆಸ್‌ನ ಮಹೇಂದ್ರ ಕಲ್ಲಪ್ಪ ತಮ್ಮಣ್ಣನವರ್ ಎದುರು ಸೋತರು.

13. ಹೊಸದುರ್ಗ: ಎಂ.ತಿಪ್ಪೇಸ್ವಾಮಿ ಜೆಡಿಎಸ್ ಸೇರಿದರು. ಆದರೆ ಕಾಂಗ್ರೆಸ್‌ನ ಬಿ.ಜಿ ಗೋವಿಂದಪ್ಪನವರ ಎದುರು ಸೋತರು.

ಒಟ್ಟಾರೆಯಾಗಿ 27 ಜನ ಕಡೆಯ ಕ್ಷಣದಲ್ಲಿ ಜೆಡಿಎಸ್ ಪಕ್ಷಕ್ಕೆ ಧುಮುಕಿ ಟಿಕೆಟ್ ಗಿಟ್ಟಿಸಿಕೊಂಡರು. ಆದರೆ ಕೇವಲ ಇಬ್ಬರು ಮಾತ್ರ ಗೆಲುವು ಸಾಧಿಸಿದರು. ಉಳಿದ 25 ಮಂದಿ ಹೀನಾಯ ಸೋಲು ಕಂಡಿದ್ದಾರೆ.

ಇದನ್ನೂ ಓದಿ: ಭರ್ಜರಿ ಬಹುಮತ: ಕಾಂಗ್ರೆಸ್ ಗೆಲುವಿಗೆ ಕಾರಣವಾದ 5 ಅಂಶಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...