Homeಮುಖಪುಟಮತ ಹಾಕದಿದ್ದರೆ ಒಬ್ಬರು ಶಾಪ ಕೊಡುತ್ತಾರೆ, ಇನ್ನೊಬ್ಬರು ‘ನೋಡಿಕೊಳ್ಳುತ್ತಾರೆ’. ಅಕಟಕಟಾ ಉತ್ತರ ಪ್ರದೇಶವೇ...

ಮತ ಹಾಕದಿದ್ದರೆ ಒಬ್ಬರು ಶಾಪ ಕೊಡುತ್ತಾರೆ, ಇನ್ನೊಬ್ಬರು ‘ನೋಡಿಕೊಳ್ಳುತ್ತಾರೆ’. ಅಕಟಕಟಾ ಉತ್ತರ ಪ್ರದೇಶವೇ…

- Advertisement -
- Advertisement -

ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಈ ಅಪಾಯಕಾರಿ ಬೆಳವಣಿಗೆಗಳ ಮೇಲೆ ಚುನಾವಣಾ ಆಯೋಗ ಯಾವುದೇ ಕ್ರಮ ಕೈಗೊಂಡ ಸುದ್ದಿ ಇದುವರೆಗೂ ಬಂದಿಲ್ಲ. ಆದರೆ, ಈ ರೀತಿ ನಡೆದದ್ದು ನಿಜ ಎಂಬುದನ್ನು ಮಾಧ್ಯಮ ಸಂಸ್ಥೆಗಳು ವಿಡಿಯೋ ಪರಿಶೀಲಿಸಿ, ಸ್ಥಳೀಯ ವರದಿಗಾರರಿಂದಲೂ ಪರಿಶೀಲಿಸಿ ದೃಢಪಡಿಸಿವೆ. ಆ ಘಟನೆಗಳು ಏನು?

ಒಂದು,
ಭಾಜಪದ ಹಾಲಿ ಸಂಸತ್ಸದಸ್ಯ ಸಾಕ್ಷಿ ಮಹಾರಾಜ್ ತನ್ನ ಕ್ಷೇತ್ರದಲ್ಲಿ ಮತದಾರರಿಗೆ ಈ ರೀತಿ ಹೇಳುತ್ತಾರೆ. ‘ನಾನು ಸನ್ಯಾಸಿ. ನಾನು ನಿಮ್ಮ ಮನೆ ಬಾಗಿಲಿಗೆ ಭಿಕ್ಷೆ ಬೇಡಲು ಬಂದಿದ್ದೇನೆ. ಒಂದು ವೇಳೆ ನೀವು ಸನ್ಯಾಸಿಗೆ (ಭಿಕ್ಷೆ ನೀಡಲು) ನಿರಾಕರಿಸಿದರೆ, ನಿಮ್ಮ ಮನೆಯ ಎಲ್ಲಾ ಸಂತೋಷವನ್ನೂ ನಾನು ಕಸಿದುಕೊಂಡು ಬಿಡುತ್ತೇನೆ ಮತ್ತು ನಿಮಗೆ ಶಾಪ ಕೊಡುತ್ತೇನೆ’.
https://www.abplive.in/videos/im-a-sanyasi-will-curse-if-you-dont-vote-for-me-warns-bjp-mp-sakshi-maharaj-963543?fbclid=IwAR3m-tZPfMnrh_6rqP20P_f26181g9iijGAOxdcFcYVRB2IZIFeT4orSDt0

ಮನೆ ಬಾಗಿಲಿಗೆ ಬಂದ ಸನ್ಯಾಸಿಗಳಿಗೆ ಒಂದಲ್ಲಾ ಒಂದು ಕಾರಣಕ್ಕೆ ಭಿಕ್ಷೆ ನೀಡುವುದು ತಡವಾದರೆ ಅಥವಾ ನೀಡದಿದ್ದರೆ ಶಾಪ ಕೊಡುವ ಕಥೆಗಳು ಪುರಾಣಗಳಲ್ಲಿದ್ದು, ಅವು ಜನರ ಧಾರ್ಮಿಕ ನಂಬಿಕೆಗಳ ಭಾಗವಾಗಿವೆ. ಆ ಕಥೆಗಳಲ್ಲೂ ಸಹಾ ಮನೆಯೊಳಗಿನ ತನ್ನ ಕರ್ತವ್ಯವನ್ನು ಮಾಡುವುದರಲ್ಲಿ ನಿರತವಾಗಿರುವ ಮಹಿಳೆಯು ಇಂತಹ ಶಾಪದ ಬೆದರಿಕೆಗೆ ಹೆದರುವುದಿಲ್ಲ. ‘ನೀವು ದುರುಗುಟ್ಟಿ ನೋಡಿದರೆ ಸುಟ್ಟು ಹೋಗಲು ನಾನೇನು ಬಲಾಕ ಪಕ್ಷಿಯಲ್ಲ’ ಎಂದು ಹೇಳಿ ಸನ್ಯಾಸಿಯ ಅಹಂಅನ್ನು ಇಳಿಸುವ ಕಥೆಯೂ ಪುರಾಣಲ್ಲಿದೆ.
ಆದರೂ, ಸನ್ಯಾಸಿಗಳ ಶಕ್ತಿಯ ಮೇಲೆ ಇರುವ ಭಯ ಮತ್ತು ನಂಬಿಕೆಗಳನ್ನು ಬಳಸಿಕೊಂಡು ಸಾಕ್ಷಿ ಮಹಾರಾಜ್ ಹೇಳಿರುವ ಮಾತು ವ್ಯಾಪಕ ಖಂಡನೆಗೆ ಗುರಿಯಾಗಿದೆ.
ಎರಡು,
ಫಿಲಿಬಿಟ್‍ನ ಸಂಸದೆ ಮನೇಕಾ ಗಾಂಧಿ ಈ ಸಾರಿ ಸುಲ್ತಾನ್‍ಪುರದಿಂದ ಸ್ಪರ್ಧಿಸುತ್ತಿದ್ದು, ತನ್ನ ಬಹಿರಂಗ ಸಭೆಯಲ್ಲಿ ಮುಸ್ಲಿಮರಿಗೆ ಈ ರೀತಿ ಹೇಳುತ್ತಾರೆ. ಅವರು ಈ ಮಾತನ್ನು ಹೇಳುವಾಗ ವೇದಿಕೆಯ ಮೇಲೂ ಮುಸ್ಲಿಂ ವ್ಯಕ್ತಿಗಳು ಇರುತ್ತಾರೆ ‘ನಾನು ಗೆಲ್ಲುತ್ತೇನೆ. ಆದರೆ, ಮುಸ್ಲಿಮರ ಬೆಂಬಲವಿಲ್ಲದೇ ಗೆದ್ದರೆ ನನಗೆ ಅಷ್ಟು ಸರಿ ಬರುವುದಿಲ್ಲ. ಆಗ ಒಂದು ವೇಳೆ ಮುಸ್ಲಿಮರು ಬಂದು ನನಗೆ ಏನಾದರೂ ಕೆಲಸ ಮಾಡಿಕೊಡಿ ಎಂದು ಕೇಳಿದರೆ, ನಾನು ಅದನ್ನು ಮಾಡಿಕೊಡುವುದಿಲ್ಲ. ಏಕೆಂದರೆ, ಇದು ಕೊಟ್ಟು ತೆಗೆದುಕೊಳ್ಳುವ ವ್ಯವಹಾರ. ನಾವೇನು ಮಹಾತ್ಮಾಗಾಂಧಿ ಮಕ್ಕಳಲ್ಲ. ನನಗೆ ನಿಮ್ಮ ಅಗತ್ಯವಿಲ್ಲ. ನಿಮಗೆ ನನ್ನ ಅಗತ್ಯವಿದೆ. ಫಲಿತಾಂಶ ಹೊರಬಂದ ಮೇಲೆ ಯಾವುದಾದರೂ ಬೂತ್‍ಗಳಲ್ಲಿ (ನನ್ನ ಪರವಾಗಿ) 50-100 ಮತಗಳಷ್ಟೇ ಬಂದಿದ್ದರೆ, ನನಗೆ ನೋವಾಗುತ್ತದೆ. ಇನ್ನು ನಿಮ್ಮಿಷ್ಟ’
https://www.thequint.com/news/politics/maneka-gandhi-mcc-threatens-muslims-to-vote-for-her?fbclid=IwAR2CH3FN61esmdrkjX0XrmIEt5_6rBNABtxSU9v5V6fik2gkW0jFgpfie8U

ತೆಲುಗು ಸಿನೆಮಾಗಳಲ್ಲಿನ ‘ಸೈಲೆಂಟ್ ವಿಲನ್’ ರೀತಿಯಲ್ಲಿ ನೀಡಿರುವ ಈ ಬೆದರಿಕೆಯನ್ನು ಮಿರರ್‍ನೌ ಪತ್ರಕರ್ತೆ ಫಾಯೇ ಡಿಸೌಜಾ, ನಟಿ ಸ್ವರಾ ಭಾಸ್ಕರ್ ಸೇರಿದಂತೆ ಹಲವರು ಟೀಕಿಸಿದ್ದಾರೆ. ಚುನಾವಣಾ ಆಯೋಗವು ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

 

ಆದರೆ, ಇಂತಹ ಸಾವಿರಾರು ಪ್ರಕರಣಗಳು ನಡೆಯುತ್ತಿದ್ದು, ಅವುಗಳಲ್ಲಿ ಶೇ.90ರಷ್ಟು ಪ್ರಕರಣಗಳು ಬಿಜೆಪಿ ನಾಯಕರಿಂದ ಆಗುತ್ತಿರುವುದು ವರದಿಯಾಗಿದೆ. ಅವುಗಳ ಮೇಲೆ ಗಂಭೀರ ಕ್ರಮವನ್ನು ಚುನಾವಣಾ ಆಯೋಗವು ತೆಗೆದುಕೊಳ್ಳುವ ಸಾಧ್ಯತೆ ಇದ್ದಂತಿಲ್ಲ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...