Homeಮುಖಪುಟಎಚ್ಚರಿಕೆಯ ಪೋಸ್ಟರ್‌‌‌: ’ಬಿಜೆಪಿಗರೆ ಗ್ರಾಮಕ್ಕೆ ಪ್ರವೇಶಿಸಿದರೆ ನಿಮ್ಮ ಜೀವಕ್ಕೆ ನೀವೆ ಜವಾಬ್ದಾರಿ’

ಎಚ್ಚರಿಕೆಯ ಪೋಸ್ಟರ್‌‌‌: ’ಬಿಜೆಪಿಗರೆ ಗ್ರಾಮಕ್ಕೆ ಪ್ರವೇಶಿಸಿದರೆ ನಿಮ್ಮ ಜೀವಕ್ಕೆ ನೀವೆ ಜವಾಬ್ದಾರಿ’

- Advertisement -
- Advertisement -

ಹೊಸ ಕೃಷಿ ಕಾನೂನಿನ ವಿಷಯದಲ್ಲಿ ಕೇಂದ್ರ ಮತ್ತು ರೈತರ ನಡುವಿನ ಸಂಘರ್ಷ ಮುಂದುವರೆದಿದೆ. ಹರಿಯಾಣದಲ್ಲಿ ಆಡಳಿತಾರೂಢ ಬಿಜೆಪಿ-ಜೆಜೆಪಿ ಮೈತ್ರಿಕೂಟಗಳು ರಾಜ್ಯದಾದ್ಯಂತ ಭಾರಿ ಟೀಕೆ ಮತ್ತು ಅಸಮಾಧಾನವನ್ನು ಎದುರಿಸುತ್ತಿದೆ. ಅದರಲ್ಲೂ ವಿಶೇಷವಾಗಿ ಬಿಜೆಪಿ ಹಾಗೂ ಜೆಜೆಪಿ ಪಕ್ಷಗಳ ಕಾರ್ಯಕರ್ತರು, ನಾಯಕರು ಹಳ್ಳಿಗಳಿಗೆ ಪ್ರವೇಶಿಸುವುದನ್ನು ನಿಷೇಧಿಸಿ ಹೋರ್ಡಿಂಗ್‌ಗಳು ಮತ್ತು ಪೋಸ್ಟರ್‌ಗಳು ಕಾಣಿಸಿಕೊಳ್ಳಲಾರಂಭಿಸಿದೆ.

ರಾಜ್ಯದ ಹಲವಾರು ಜಿಲ್ಲೆಗಳ ಹಳ್ಳಿಗಳಿಗೆ ಬಿಜೆಪಿ-ಜೆಜೆಪಿ ಮುಖಂಡರನ್ನು ಸಾಮಾಜಿಕ ಕಾರ್ಯಕ್ರಮಗಳಿಗೆ ಆಹ್ವಾನಿಸುವುದನ್ನು ನಿಲ್ಲಿಸಿದ್ದಾರೆ. ಹಲವಾರು ಸ್ಥಳಗಳಲ್ಲಿ ಸಂಪೂರ್ಣ ಬಹಿಷ್ಕಾರವನ್ನು ಘೋಷಿಸಿದ್ದಾರೆ. ಅಂಬಾಲಾ, ಕುರುಕ್ಷೇತ್ರ, ಕರ್ನಾಲ್, ಸಿರ್ಸಾ, ಜಿಂದ್, ಫತೇಹಾಬಾದ್, ಪಾಣಿಪತ್, ಸೋನಿಪತ್, ಜಜ್ಜರ್ ಮತ್ತು ರೋಹ್ಟಕ್ ಸೇರಿದಂತೆ ಹಲವಾರು ಜಿಲ್ಲೆಗಳ ಹಳ್ಳಿಗಳು ಆಡಳಿತಾರೂಢ ಮೈತ್ರಿಕೂಟದ ನಾಯರಿಗೆ ಪ್ರವೇಶವಿಲ್ಲ ಎಂದು ಬ್ಯಾನರ್‌ಗಳನ್ನು ಹಾಕಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಚಾರ್ಖಿ ದಾದ್ರಿ ಜಿಲ್ಲೆಯ ಸಮಸ್ಪುರ್ ಗ್ರಾಮದ ಪ್ರವೇಶ ಕೇಂದ್ರದಲ್ಲಿ “ಸರ್ವಜಾತಿಯ ಫೋಗತ್ ಖಾಪ್ 19” ಹಾಕಿದ ಪೋಸ್ಟರ್ ಹೀಗಿದೆ: “ಆಡಳಿತಾರೂಢ ಬಿಜೆಪಿ ಮತ್ತು ಜೆಜೆಪಿಗೆ ಗ್ರಾಮಕ್ಕೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ”.

ಇದನ್ನೂ ಓದಿ:ರಿಹಾನ್ನಾ, ಗ್ರೇಟಾ ಯಾರೆಂದು ಗೊತ್ತಿಲ್ಲ, ಅವರು ಹೋರಾಟ ಬೆಂಬಲಿಸಿದರೆ ತಪ್ಪೇನಿದೆ-ಟಿಕಾಯತ್‌

ರೋಹ್ಟಕ್‌ನ ಭೆನಿ ಚಂದರ್ಪಾಲ್ ಗ್ರಾಮದ ಪೋಸ್ಟರ್‌ ಒಂದು ಬಿಜೆಪಿ-ಜೆಜೆಪಿ ನಾಯಕರನ್ನು ಬಹಿಷ್ಕರಿಸುವುದಾಗಿ ಘೋಷಿಸುತ್ತದಲ್ಲದೆ, ಎಚ್ಚರಿಕೆಯನ್ನೂ ನೀಡುತ್ತದೆ. ಅದರಲ್ಲಿ, “ಬಿಜೆಪಿ ಹಾಗೂ ಜೆಜೆಪಿಗರು ಗ್ರಾಮಕ್ಕೆ ಪ್ರವೇಶಿಸಿದರೆ ಅವರ ಜೀವ ಮತ್ತು ಆಸ್ತಿಪಾಸ್ತಿಗೆ ಅವದೇ ಜವಾಬ್ದಾರರಾಗಿರುತ್ತಾರೆ” ಎಂದು ಬರೆದಿದೆ.

ರಾಜ್ಯದ ಉಪಮುಖ್ಯಮಂತ್ರಿ ದುಶ್ಯಂತ್ ಚೌತಲಾ ಮತ್ತು ಅವರ ಮೊಮ್ಮಗ ರಂಜಿತ್ ಸಿಂಗ್ ಅವರ ತವರೂರಾದ  ನಾನಕ್ಪುರ ಮತ್ತು ಸಿರ್ಸಾದಲ್ಲಿನ ಹಲವಾರು ಹಳ್ಳಿಗಳಲ್ಲಿ ಇಬ್ಬರಿಗೂ ಪ್ರವೇಶವನ್ನು ನಿಷೇಧಿಸಿದ್ದಾರೆ. ಬಿಜೆಪಿ ಅಥವಾ ಜೆಜೆಪಿಯ ಯಾರಾದರು ನಾಯಕರು ಗ್ರಾಮಕ್ಕೆ ಪ್ರವೇಶಿಸಿದರೆ, ಸರ್ಕಾರ ರೈತರ ಮೇಲೆ ಲಾಠಿಚಾರ್ಜ್ ಮಾಡಿದಂತೆ ಗ್ರಾಮಸ್ಥರು ಲಾಠಿಚಾರ್ಜ್ ಮಾಡುತ್ತಾರೆ ಎಂದು ಎಚ್ಚರಿಸಿದ್ದಾರೆ.

ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರ ಕ್ಷೇತ್ರದ ಹಳ್ಳಿಗಳಾದ ಜೈಸಿಂಗ್‌ಪುರ, ಡೇರಾ ಗಾಮಾ, ಖಿಜ್ರಾಬಾದ್ ಮತ್ತು ಕರ್ನಾಲ್ ಸೇರಿದಂತೆ ಹಲವಾರು ಹಳ್ಳಿಗಳಲ್ಲಿ ಇದೇ ರೀತಿಯ ಪೋಸ್ಟರ್‌ಗಳು ಕಾಣಿಸಿಕೊಂಡಿವೆ.

ಇದನ್ನೂ ಓದಿ: ’ಮೋದಿ-ಶಾ ನೇರ ಮಾತುಕತೆಗೆ ಬರಲಿ’- ಜಿಂದ್ ಮಹಾಪಂಚಾಯತ್‌ನ ಮಹಾ ನಿರ್ಣಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...