Homeಕರ್ನಾಟಕ‘ನೋಯ್ಡಾ ಟ್ವಿನ್ ಟವರ್ ಶೈಲಿಯಲ್ಲಿ ಕೆಡವುತ್ತೇವೆ’: ಬೆಂಗಳೂರು ಕಟ್ಟಡಗಳ ಬಗ್ಗೆ ಸಚಿವ ಆರ್‌‌. ಅಶೋಕ್‌

‘ನೋಯ್ಡಾ ಟ್ವಿನ್ ಟವರ್ ಶೈಲಿಯಲ್ಲಿ ಕೆಡವುತ್ತೇವೆ’: ಬೆಂಗಳೂರು ಕಟ್ಟಡಗಳ ಬಗ್ಗೆ ಸಚಿವ ಆರ್‌‌. ಅಶೋಕ್‌

- Advertisement -
- Advertisement -

ಅಕ್ರಮ ಕಟ್ಟಡಗಳ ತೆರವು ಕುರಿತು ನಡೆಯುತ್ತಿರುವ ಕೋಲಾಹಲದ ನಡುವೆ, ರಾಜ್ಯ ಕಂದಾಯ ಸಚಿವ ಆರ್. ಅಶೋಕ್,“ಬೆಂಗಳೂರು ತೀವ್ರ ಜಲಾವೃತಕ್ಕೆ ಒಳಗಾಗುವುದರಿಂದ ಮುಂದಿನ ಮಳೆಗಾಲದ ವೇಳೆಗೆ ನೋಯ್ಡಾ ಅವಳಿ ಗೋಪುರದ ಶೈಲಿಯಲ್ಲಿ ಬಾಕಿ ಉಳಿದಿರುವ ಎಲ್ಲಾ ಕಟ್ಟಡಗಳನ್ನು ಕೆಡವಲಾಗುವುದು” ಎಂದು ಮಂಗಳವಾರ ಹೇಳಿದ್ದಾರೆ.

ಕಳೆದ ತಿಂಗಳು ದೇಶದ ಗಮನ ಸೆಳೆದಿದ್ದ ನೋಯ್ಡಾ ಸೂಪರ್‌ಟೆಕ್ ಅವಳಿ ಗೋಪುರಗಳ ನೆಲಸಮವನ್ನು ಉಲ್ಲೇಖಿಸಿದ ಅಶೋಕ್‌,“ಮುಂದಿನ ಮಳೆಗಾಲದ ವೇಳೆಗೆ ನಾವು ಬಾಕಿ ಉಳಿದಿರುವ ಎಲ್ಲಾ ನೆಲಸಮವನ್ನು ತೆರವುಗೊಳಿಸಬೇಕು. ನೋಯ್ಡಾದಂತೆ ಎಲ್ಲಾ ಅಪಾರ್ಟ್‌ಮೆಂಟ್‌ಗಳನ್ನು ಕೆಡವಲಾಗುವುದು” ಎಂದು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಅಧಿಕಾರಿಗಳು-ಬಿಲ್ಡರ್‌ಗಳ ವಿರುದ್ಧ ಕ್ರಮ ಮತ್ತು ಪ್ರವಾಹದಂತಹ ಪರಿಸ್ಥಿತಿಯ ಕುರಿತು ಈಗಾಗಲೇ ವಿಧಾನಸಭೆಯಲ್ಲಿ ಚರ್ಚೆ ನಡೆದಿದೆ ಎಂದು ಅವರು ಹೇಳಿದ್ದಾಗಿ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಇದನ್ನೂ ಓದಿ: ಬೆಂಗಳೂರು ಮಳೆ: ವಿದ್ಯುತ್‌ ಸ್ಪರ್ಶದಿಂದ ಯುವತಿ ಸಾವು; ಕಾಂಗ್ರೆಸ್ ಕಾರಣ ಎಂದ ಬೊಮ್ಮಯಿ

ಈ ನಡುವೆ ಬೆಂಗಳೂರಿನ ಮುನೇನಕೊಳಲು ಪ್ರದೇಶದಲ್ಲಿ ಬಿಬಿಎಂಪಿ ಕಟ್ಟಡಗಳನ್ನು ಕೆಡವುತ್ತಿದೆ. ಆದರೆ ಈ ವರೆಗೂ ಯಾವುದೆ ದೊಡ್ಡ ಕಟ್ಟಡಗಳು ಮತ್ತು ಐಟಿ ಪಾರ್ಕ್‌ಗಳಿಗೆ ಯಾವುದೆ ಹಾನಿ ಮಾಡಲಾಗಿಲ್ಲ ಎಂದು ವರದಿಯಾಗಿದೆ.

ರಾಜಾ ಕಾಲುವೆಯಲ್ಲಿ ಮುಕ್ತವಾಗಿ ನೀರು ಹರಿದು ಹೋಗಲು ಸಮಸ್ಯೆ ಉಂಟು ಮಾಡಿ ಮನೆ ಕಟ್ಟಿಕೊಂಡಿರುವವರಿಗೆ ಒತ್ತುವರಿ ತೆರವು ನೋಟಿಸ್‌ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ತಿಳಿಸಿದ್ದರು.

ಕಳೆದ ಕೆಲವು ವಾರಗಳಿಂದ ನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಬೆಂಗಳೂರು ತೀವ್ರ ಜಲಾವೃತದಿಂದ ತತ್ತರಿಸಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದು, ಪ್ರಯಾಣಿಕರು ಹಲವಾರು ಗಂಟೆಗಳ ಕಾಲ ಟ್ರಾಫಿಕ್‌ನಲ್ಲಿ ಸಿಲುಕಿಕೊಳ್ಳುವಂತೆ ಆಗಿತ್ತು. ರಸ್ತೆಯಲ್ಲಿ ನೀರು ನಿಂತ ವೇಳೆ ವಿದ್ಯುತ್ ಸ್ಪರ್ಶದಿಂದಾಗಿ ಯುವತಿಯೊಬ್ಬರು ಮೃತಪಟ್ಟಿದ್ದರು.

ಇದನ್ನೂ ಓದಿ: ಬೆಂಗಳೂರು ಮುಳುಗುತ್ತಿರುವಾಗ ‘ಬೆಣ್ಣೆ ದೋಸೆ ಮಾರಿದ’ ಬಿಜೆಪಿ ಸಂಸದ ತೇಜಸ್ವಿ ಸೂರ್ಯ!

ಹಿಂದಿನ ಸರ್ಕಾರ ತನ್ನ ಅಧಿಕಾರಾವಧಿಯಲ್ಲಿ ಅಕ್ರಮ ನಿರ್ಮಾಣಗಳಿಗೆ ಅವಕಾಶ ಮಾಡಿಕೊಟ್ಟಿದೆ ಎಂದು ಬಿಜೆಪಿ ಸರ್ಕಾರ ಪರಿಸ್ಥಿತಿಗೆ ಕಾಂಗ್ರೆಸ್‌ ಪಕ್ಷವನ್ನು ದೂರಿಕೊಂಡಿತ್ತು. ಆದರೆ ವಿರೋಧ ಪಕ್ಷದ ನಾಯಕರು ಮೂಲಸೌಕರ್ಯಗಳ ನಿರ್ಲಕ್ಷ್ಯಕ್ಕಾಗಿ ಆಡಳಿತಾರೂಢ ಬಿಜೆಪಿಯ ಮೇಲೆ ಹರಿಹಾಯ್ದಿದ್ದಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ನಮ್ಮದೇ ಆದ ಯಾವುದೇ ಶೈಲಿ ಇಲ್ಲವೇ ಎಲ್ಲಾ UP ಮಾಡೆಲ್ ಹೇಳುತ್ತ ಇರುತ್ತೀರಿ ನಾವು ಕರ್ನಾಟಕದವರು ಕಾನೂನು ಕ್ರಮ ಕೈಗೊಲ್ಲಲು UP ಯಿಂದ ಕಲಿಯ ಬೇಕೆ 🙏

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...