Homeಮುಖಪುಟಸಿಕಂದರಾಬಾದ್‌: ಇ-ಬೈಕ್ ಶೋ ರೂಂ ಸ್ಫೋಟ: ಮಹಿಳೆ ಸೇರಿದಂತೆ ಎಂಟು ಮಂದಿ ಸಾವು

ಸಿಕಂದರಾಬಾದ್‌: ಇ-ಬೈಕ್ ಶೋ ರೂಂ ಸ್ಫೋಟ: ಮಹಿಳೆ ಸೇರಿದಂತೆ ಎಂಟು ಮಂದಿ ಸಾವು

- Advertisement -
- Advertisement -

ತೆಲಂಗಾಣದ ಸಿಕಂದರಾಬಾದ್‌ನ ರೂಬಿ ಪ್ರೈಡ್ ಐಷಾರಾಮಿ ಹೋಟೆಲ್‌ನ ಕಟ್ಟಡದ ನೆಲ ಮಹಡಿಯಲ್ಲಿರುವ ಇ-ಬೈಕ್ ಶೋರೂಮ್‌ನಲ್ಲಿ ಸೋಮವಾರ ರಾತ್ರಿ ಸಂಭವಿಸಿದ ಸ್ಫೋಟದಿಂದಾಗಿ ಉಂಟಾದ ಬೆಂಕಿ ಅವಘಡದಲ್ಲಿ ಮಹಿಳೆ ಸೇರಿದಂತೆ ಎಂಟು ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.

ಅಪಘಾತದ ವೇಳೆ ಹೋಟೆಲ್‌ನಲ್ಲಿ 25 ಮಂದಿ ಇದ್ದರು ಎನ್ನಲಾಗಿದ್ದು, ಮೃತಪಟ್ಟವರಲ್ಲಿ ಹೆಚ್ಚಿನವರು ಉಸಿರುಕಟ್ಟಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕೃತ ಮೂಲಗಳನ್ನು ಉಲ್ಲೇಖಿಸಿ TNIE ವರದಿ ಮಾಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ರೂಬಿ ಮೋಟಾರ್ಸ್ ಶೋರೂಂನಲ್ಲಿ ಇರಿಸಲಾಗಿದ್ದ ಇ-ಬೈಕ್ ಅಥವಾ ಜನರೇಟರ್ ಸ್ಫೋಟಗೊಂಡು ಬೆಂಕಿ ಕಾಣಿಸಿಕೊಂಡಿದೆ ಎಂದು ಶಂಕಿಸಲಾಗಿದೆ ಎಂದು ಹೈದರಾಬಾದ್ ಪೊಲೀಸ್ ಕಮಿಷನರ್ ಸಿವಿ ಆನಂದ್ ಹೇಳಿದ್ದಾರೆ. ಬೆಂಕಿಯ ಜ್ವಾಲೆಯು ಮೆಟ್ಟಿಲನ್ನು ಮೀರಿ ಹರಿಡಿದ್ದರಿಂದ ಕಟ್ಟಡದ ನೆಲಮಾಳಿಗೆ, ನೆಲ ಮಹಡಿ, ಮೊದಲ ಮತ್ತು ಎರಡನೇ ಮಹಡಿಗಳನ್ನು ಆವರಿಸಿದೆ. ಬೆಂಕಿಗಿಂತ ಅಫಘಾತದಲ್ಲಿ ಉಂಟಾದ ಹೊಗೆಯಿಂದಾಗಿಯೆ ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ:  ಭಾರತ್ ಜೋಡೋ ಯಾತ್ರೆ: ಆರೆಸ್ಸೆಸ್‌‌ ಚಡ್ಡಿಗೆ ಬೆಂಕಿ ಹಚ್ಚಿದ ಕಾಂಗ್ರೆಸ್; ಬಿಜೆಪಿ ಟೀಕೆ

ಶೋರೂಮ್‌ನಿಂದ ಭುಗಿಲೆದ್ದ ಬೆಂಕಿ ಮತ್ತು ಹೊಗೆಯಿಂದಾಗಿ ಶೋರೂಮ್‌ನ ಮೇಲೆ ಇದ್ದ ಹೋಟೆಲ್ ರೂಬಿ ಪ್ರೈಡ್ ಅನ್ನು ಆವರಿಸಿ ಅಲ್ಲಿರುವ ಜನರು ಮೃತಪಟ್ಟಿದ್ದಾರೆ. ಅಗ್ನಿಶಾಮಕ ದಳದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ಕೆಲವು ಗಂಟೆಗಳ ನಂತರ ದಟ್ಟವಾದ ಹೊಗೆ ಹೊರಹೊಮ್ಮುತ್ತಲೇ ಇತ್ತು ಎಂದು ವರದಿ ಉಲ್ಲೇಖಿಸಿದೆ. ಸ್ಥಳೀಯರು ಕೂಡ ಜೀವ ರಕ್ಷಣೆಗೆ ಸಹಕರಿಸಿದ್ದಾರೆ ಎಂದು ಅದು ಹೇಳಿದೆ.

“ಹೋಟೆಲ್‌ನ ಎಲ್ಲಾ ನಾಲ್ಕು ಮಹಡಿಗಳಲ್ಲಿ 23 ಕೊಠಡಿಗಳಿವೆ ಎಂದು ತೋರುತ್ತಿದೆ. ಹೊಗೆ ಕೆಳಗಿನಿಂದ ಮೇಲಿನ ಮಹಡಿಯವರೆಗೆ ಮೆಟ್ಟಿಲುಗಳ ಮೂಲಕ ಹಾದುಹೋಯಿತು ಮತ್ತು ಎಲ್ಲಾ ಮಹಡಿಗಳನ್ನು ಸಂಪೂರ್ಣವಾಗಿ ಆವರಿಸಿದೆ. ಮೊದಲ ಮತ್ತು ಎರಡನೇ ಮಹಡಿಯಲ್ಲಿ ಮಲಗಿದ್ದ ಕೆಲವರು ದಟ್ಟ ಹೊಗೆಯ ಕಾರಣಕ್ಕೆ ಕಾರಿಡಾರ್‌ಗೆ ಬಂದು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ” ಎಂದು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಹೈದರಾಬಾದ್ ಪೊಲೀಸ್ ಕಮಿಷನರ್ ಸಿವಿ ಆನಂದ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಬೆಂಕಿಗೆ ಶಾರ್ಟ್ ಸರ್ಕ್ಯೂಟ್ ಕಾರಣವೋ ಅಥವಾ ನೆಲಮಾಳಿಗೆಯ ಬ್ಯಾಟರಿಗಳ ಚಾರ್ಜ್‌‌ನಿಂದಾಗಿ ಆಗಿದೆಯೊ ಅಥವಾ ಮೊದಲ ಮಹಡಿಯಲ್ಲಿ ಇರುವ ಸ್ಕೂಟರ್ ಶೋರೂಂನಲ್ಲಿ ಬೆಂಕಿ ಕಾಣಿಸಿಕೊಂಡಿದೆಯೆ ಎಂದು ಅಗ್ನಿಶಾಮಕ ಇಲಾಖೆಯ ತನಿಖೆಯ ನಂತರ ತಿಳಿಯುತ್ತದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಶಾಸಕ ಜಿಗ್ನೇಶ್‌‌ ಮೇವಾನಿ ಮೇಲೆ ಗುಜರಾತ್‌ ಮಾಜಿ ಗೃಹ ಸಚಿವರ ಗೂಂಡಾಗಳಿಂದ ಹಲ್ಲೆ

“ಸಾಮಾನ್ಯವಾಗಿ ಪಾರ್ಕಿಂಗ್‌ಗೆ ಬಳಸಬೇಕಾದ ನೆಲಮಾಳಿಗೆಯನ್ನು ನಿಸ್ಸಂಶಯವಾಗಿ ಅವರು ಬೇರೆ ಯಾವುದಕ್ಕೊ ಬಳಸುತ್ತಿದ್ದರು. ಅದನ್ನು ವಿಚಾರಣೆ ನಡೆಸುತ್ತೇವೆ” ಎಂದು ಅಧಿಕಾರಿ ಹೇಳಿದ್ದಾರೆ.

ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಕಟ್ಟಡದಲ್ಲಿ ಸಿಲುಕಿದ್ದ ಏಳು ಜನರನ್ನು ರಕ್ಷಿಸಿದ್ದಾರೆ. “ರಾತ್ರಿ 9.20 ಕ್ಕೆ ಬೆಂಕಿ ಕಾಣಿಸಿಕೊಂಡಿದೆ. ಎರಡು ಅಗ್ನಿಶಾಮಕ ಟೆಂಡರ್‌ಗಳನ್ನು ಇಲ್ಲಿ ಬಳಸಲಾಗಿದೆ. ಕಟ್ಟಡದಲ್ಲಿ ಫೈರ್ ಸ್ಪ್ರಿಂಕ್ಲರ್‌ಗಳಿವೆ ಆದರೆ ಆ ಸಮಯದಲ್ಲಿ ಅವು ಕಾರ್ಯನಿರ್ವಹಿಸಲಿಲ್ಲ. ಗಾಯಾಳುಗಳನ್ನು ಗಾಂಧಿ ಆಸ್ಪತ್ರೆ ಮತ್ತು ಯಶೋದಾ ಆಸ್ಪತ್ರೆಗೆ ರವಾನಿಸಲಾಗಿದೆ” ಎಂದು ಅಗ್ನಿಶಾಮಕ ಇಲಾಖೆ ಡಿಜಿ ಸಂಜಯ್ ಜೈನ್ ಹೇಳಿದ್ದಾರೆ.

ಹೋಟೆಲ್ 23 ಕೊಠಡಿಗಳನ್ನು ಹೊಂದಿದ್ದು, ಬೆಂಕಿ ಕಾಣಿಸಿಕೊಂಡಾಗ ಸರಿಸುಮಾರು 50% ಕೊಠಡಿಗಳಲ್ಲಿ ಜನರಿದ್ದರು ಎಂದು TNIE ವರದಿ ಹೇಳಿದೆ. ಸಚಿವ ಹಾಗೂ ಸನತ್‌ನಗರ ಶಾಸಕ ತಲಸಾನಿ ಶ್ರೀನಿವಾಸ್ ಯಾದವ್‌ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದ್ದಾರೆ.

ಇದನ್ನೂ ಓದಿ: ಏಷ್ಯಾಕಪ್‌: ಶ್ರೀಲಂಕಾ ಭಾವುಟ ಹಿಡಿದು ಸಂಭ್ರಮಿಸಿದ ಗೌತಮ್‌ ಗಂಭೀರ್‌

ನೆಲ ಮಹಡಿ ಸೇರಿದಂತೆ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ತುರ್ತು ನಿರ್ಗಮನದ ಮಾರ್ಗವಿಲ್ಲದ ಕಾರಣ ಏಳು ಮಂದಿ ವಿವಿಧ ಮಹಡಿಗಳಿಂದ ಜಿಗಿದಿದ್ದಾರೆ. ಕೆಲವರು ಪೈಪ್‌ಲೈನ್‌ ಮೂಲಕ ಕೆಳಗೆ ಇಳಿಯಲು ಯತ್ನಿಸಿದ್ದಾರೆ. ಅಗ್ನಿಶಾಮಕ ದಳ ಹೈಡ್ರಾಲಿಕ್ ಎಲಿವೇಟರ್ ಬಳಸಿ ನಾಲ್ವರನ್ನು ರಕ್ಷಿಸಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...