Homeಕರೋನಾ ತಲ್ಲಣದೆಹಲಿಯಲ್ಲಿ ವಾರಾಂತ್ಯ ಕರ್ಫ್ಯೂ ಹೇರಿಕೆ: ಶವಸಂಸ್ಕಾರವೂ ಸಾಧ್ಯವಾಗದ ಒತ್ತಡ

ದೆಹಲಿಯಲ್ಲಿ ವಾರಾಂತ್ಯ ಕರ್ಫ್ಯೂ ಹೇರಿಕೆ: ಶವಸಂಸ್ಕಾರವೂ ಸಾಧ್ಯವಾಗದ ಒತ್ತಡ

"ಇನ್ನೂ 90 ಮೃತದೇಹಗಳ ಅಂತ್ಯಸಂಸ್ಕಾರಕ್ಕೆ ಇಲ್ಲಿ ಸ್ಥಳಾವಕಾಶವಿದೆ. ಪರಿಸ್ಥಿತಿ ಮುಂದುವರಿದರೆ ಮುಂದಿನ 10 ದಿನಗಳಲ್ಲಿ ಇಲ್ಲಿ ಯಾವುದೇ ಅಂತ್ಯಸಂಸ್ಕಾರಕ್ಕೆ ಸ್ಥಳಾವಕಾಶವಿಲ್ಲ"

- Advertisement -
- Advertisement -

ದೆಹಲಿಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಕೊರೊನಾ ಸಂಬಂಧಿತ ಸಾವುಗಳು ಹೆಚ್ಚುತ್ತಲೇ ಇದೆ. ಈ ಹಿನ್ನೆಲೆ ದೆಹಲಿಯ ಅತಿದೊಡ್ಡ ಶವಾಗಾರವಾದ ನಿಗಂಬೋಧ್ ಘಾಟ್‌ನಲ್ಲಿ ಪ್ರತಿದಿನ ಶವಸಂಸ್ಕಾರಗಳ ಸಂಖ್ಯೆ 15 ರಿಂದ 30 ಕ್ಕೆ ಏರಿಕೆಯಾಗುತ್ತಿದೆ. ಜೊತೆಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಅಗತ್ಯ ವಸ್ತುಗಳಿಗೆ ಮಾತ್ರ ಅವಕಾಶ ನೀಡಿ, ವಾರಾಂತ್ಯ ಕರ್ಫ್ಯೂ ಘೋಷಿಸಿ ಆದೇಶಿಸಿದ್ದಾರೆ.

ಕೊರೊನಾ ಸಾಂಕ್ರಾಮಿಕದಿಂದ ದೆಹಲಿಯಲ್ಲಿ ಬುಧವಾರ 104 ಸಾವುಗಳು ದಾಖಲಾಗಿವೆ. ನವೆಂಬರ್ 20 ರಿಂದ ಇತ್ತಿಚೆಗೆ ದಾಖಲಾದ ಅತಿ ಹೆಚ್ಚಿನ ಕೊರೊನಾ ಸಾವುಗಳ ಸಂಖ್ಯೆಯಾಗಿದೆ.

ಮಂಗಳವಾರ ರಾತ್ರಿ ಕೊರೊನಾ ಸೋಂಕಿಗೆ ಬಲಿಯಾಗಿದ್ದ ತನ್ನ ಅಜ್ಜನ ಮೃತದೇಹವನ್ನು ಅಂತ್ಯಸಂಸ್ಕಾರಕ್ಕೆ ತಂದಿದ್ದ ಗೌತಮ್ (27) ಬುಧವಾರ ಬೆಳಿಗ್ಗೆ 8:30 ಕ್ಕೆ ನಿಗಂಬೋಧ್ ಘಾಟ್‌ಗೆ ತಲುಪಿದ್ದರು. ಶವಸಂಸ್ಕಾರ ಕೇಂದ್ರದಲ್ಲಿ ಸ್ಥಳಾವಕಾಶವಿಲ್ಲದ ಕಾರಣ ಅಂತ್ಯಕ್ರಿಯೆ ನಡೆಸಲು ಸುಮಾರು ಐದು ಗಂಟೆಗಳಿಗಿಂತಲು ಹೆಚ್ಚು ಕಾಲ ಕಾಯಬೇಕಾಗಿತ್ತು.

ಇದನ್ನೂ ಓದಿ: ಪೂಜಾ ಸ್ಥಳಗಳ ಕಾಯ್ದೆ ರದ್ದು ಮಾಡುವ ಹುನ್ನಾರ; ಸೆಕ್ಯುಲರಿಸಂನ ಶವಸಂಸ್ಕಾರ

“ನಾವು ಬೆಳಿಗ್ಗೆ 8: 30 ಕ್ಕೆ ನಿಗಂಬೋಧ್ ಘಾಟ್‌ಗೆ ಬಂದಿದ್ದೇವೆ. ಐದು ಗಂಟೆಗಳು ಕಳೆದರು ನಮ್ಮ ಸರದಿ ಇನ್ನೂ ಬಂದಿರಲಿಲ್ಲ. ಇಲ್ಲಿನ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ಪ್ರತಿ ಆಂಬ್ಯುಲೆನ್ಸ್‌ನಲ್ಲಿ ಎರಡು ಮೂರು ಮೃತ ದೇಹಗಳನ್ನು ತರಲಾಗುತ್ತಿದೆ” ಎಂದು ಗೌತಮ್ ಹೇಳಿದ್ದಾರೆ.

ಸ್ಮಶಾನದ ಉಸ್ತುವಾರಿಯಾಗಿರುವ ಮೊಹಮ್ಮದ್ ಶಮೀಮ್, “ಅಂತ್ಯಸಂಸ್ಕಾರಕ್ಕೆ ದಿನಕ್ಕೆ ಒಂದು ಅಥವಾ ಎರಡು ಮೃತ ದೇಹಗಳು ಬರುತ್ತಿದ್ದವು. ಕಳೆದ ಐದು ದಿನಗಳಲ್ಲಿ ಸ್ಥಿತಿ ಹದಗೆಟ್ಟಿದ್ದು, ಪ್ರತಿದಿನ 17 ಮೃತದೇಹಗಳು ಬರುತ್ತಿದೆ. ನಮಗೆ ಇನ್ನೂ 90 ಮೃತದೇಹಗಳ ಅಂತ್ಯಸಂಸ್ಕಾರಕ್ಕೆ ಸ್ಥಳಾವಕಾಶವಿದೆ. ಪರಿಸ್ಥಿತಿ ಮುಂದುವರಿದರೆ ಇದು ಮುಂದಿನ 10 ದಿನಗಳಲ್ಲಿ ಇಲ್ಲಿ ಯಾವುದೇ ಸ್ಥಳಾವಕಾಶವಿಲ್ಲ” ಎಂದಿದ್ದಾರೆ.

ಇತ್ತ ದೆಹಲಿಯಲ್ಲಿ ವಾರಾಂತ್ಯ ಕರ್ಫ್ಯೂಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ. ಈಗಾಗಲೇ ತಯಾರಿ ಮಾಡಿಕೊಂಡಿರುವ ವಿವಾಹಗಳಂತಹ ಅಗತ್ಯ ಚಟುವಟಿಕೆಗಳನ್ನು ಕರ್ಫ್ಯೂ ಪಾಸ್ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಸಭಾಂಗಣಗಳು, ಮಾಲ್‌ಗಳು, ಜಿಮ್‌ಗಳು ಮತ್ತು ಸ್ಪಾಗಳನ್ನು ಮುಚ್ಚಲಾಗುತ್ತದೆ. ವಾರದ ದಿನಗಳಲ್ಲಿ ಮೂರನೇ ಒಂದು ಭಾಗದಷ್ಟು ಸಾಮರ್ಥ್ಯದೊಂದಿಗೆ ಚಿತ್ರಮಂದಿರಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಹೊರಗಡೆ ಊಟ ಮಾಡುವುದನ್ನು ನಿಷೇಧಿಸಿ, ಪಾರ್ಸಲ್ ವ್ಯವಸ್ಥೆಗೆ ಮಾತ್ರ ಒಪ್ಪಿಗೆ ನೀಡಲಾಗಿದೆ.

“ಈ ನಿರ್ಬಂಧಗಳು ನಿಮ್ಮ ಸಲುವಾಗಿ, ನಿಮಗಾಗಿ ಮತ್ತು ನಿಮ್ಮ ಕುಟುಂಬಗಳಿಗೆ. ಇದು ಅನಾನುಕೂಲವಾಗುತ್ತದೆ ನಿಜ ಆದರೆ, ಕೊರೊನಾ ಹರಡುವುದನ್ನು ತಡೆಯಲು ಇದು ಅವಶ್ಯಕ” ಎಂದು ಅರವಿಂದ್ ಕೇಜ್ರಿವಾಲ್ ವಿಡಿಯೋ ಭಾಷಣದಲ್ಲಿ ತಿಳಿಸಿದ್ದಾರೆ. ಜೊತೆಗೆ ಎಲ್ಲಾ ಅಗತ್ಯ ಸೇವೆಗಳು ವಾರಾಂತ್ಯದಲ್ಲಿ ಲಭ್ಯವಿರುತ್ತವೆ” ಎಂದು ಹೇಳಿದ್ದಾರೆ.


ಇದನ್ನೂ ಓದಿ: ಕೊರೊನಾ: ಮೃತದೇಹವನ್ನು ಕಸದ ವಾಹನದಲ್ಲಿ ಸಾಗಾಟ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...