Homeಮುಖಪುಟವಾಟ್ಸ್‌ಅಪ್‌ ವಂಚನೆ: ಯಾಮಾರಿದರೆ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್‌ ಗೋತಾ ಹೊಡೆಯಬಹುದು, ಎಚ್ಚರ!

ವಾಟ್ಸ್‌ಅಪ್‌ ವಂಚನೆ: ಯಾಮಾರಿದರೆ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್‌ ಗೋತಾ ಹೊಡೆಯಬಹುದು, ಎಚ್ಚರ!

- Advertisement -
- Advertisement -

ಸಾಮಾಜಿಕ ಮಾಧ್ಯಮಗಳನ್ನು ಬಳಸಿ ವಂಚನೆ ಮಾಡುವವರ ಸಂಖ್ಯೆಗೇನೂ ಕಡಿಮೆಯಿಲ್ಲ. ಈ ವಂಚನೆಯ ಜಾಲಗಳು ಕಾಲಕಾಲಕ್ಕೆ ಹೊಸ ಹೊಸ ರೂಪದಲ್ಲಿ ಬರುತ್ತವೆ. ಈಗ ಯೂಟ್ಯೂಬ್‌ ವಿಡಿಯೊ ಲೈಕ್ ಮಾಡಿದರೆ ಹಣ ನೀಡುತ್ತೇವೆ ಎಂಬ ಆಮಿಷದೊಂದಿಗೆ ವಂಚನೆಯ ಜಾಲ ಹಬ್ಬುತ್ತಿದೆ.

ಲೇಆಫ್‌ನಿಂದಲೋ ಅಥವಾ ಉದ್ಯೋಗವಕಾಶಗಳಿಲ್ಲದೆಯೋ ತೊಂದರೆ ಸಿಲುಕಿರುವವರು ಈ ವಂಚನೆಗೆ ಬಲಿಯಾಗುತ್ತಿದ್ದಾರೆ. ಯೂಟ್ಯೂಬ್‌ನಲ್ಲಿ ವಿಡಿಯೊವನ್ನು ಲೈಕ್ ಮಾಡಿದರೆ, ತಲಾ ಒಂದು ಲೈಕ್‌ಗೆ 50 ರೂಪಾಯಿ ನೀಡುತ್ತೇವೆ ಎಂಬ ಆಮಿಷದೊಂದಿಗೆ ಸ್ಕ್ಯಾಮರ್‌ಗಳು (ವಂಚಕರು) ನಿಮ್ಮನ್ನು ಸಂಪರ್ಕಿಸುತ್ತಾರೆ, ಈ ಕುರಿತು ಎಚ್ಚರ ವಹಿಸಬೇಕಿದೆ. ಇಲ್ಲವಾದರೆ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್‌ ಗೋತಾ ಹೊಡೆಯುವ ಸಾಧ್ಯತೆ ಹೆಚ್ಚಿದೆ. ಈ ಕುರಿತು ‘ದಿ ಎಕನಾಮಿಕ್ ಟೈಮ್ಸ್‌’ ವರದಿ ಮಾಡಿದೆ.

ದಿನಕ್ಕೆ ರೂ. 5000ವರೆಗೆ ನೀವು ಗಳಿಸಬಹುದು ಎಂಬ ಆಮಿಷದೊಂದಿಗೆ ವಾಟ್ಸ್‌ಅಪ್‌, ಲಿಂಕ್ಡ್‌ಇನ್‌ ಮತ್ತು ಫೇಸ್‌ಬುಕ್‌ನಂತಹ ಸಾಮಾಜಿಕ ಮಾಧ್ಯಮಗಳ ಮೂಲಕ ವಂಚಕರು ನಿಮ್ಮನ್ನು ಸಂಪರ್ಕಿಸುತ್ತಾರೆ.

ಪಾವತಿಯನ್ನು ಮುಂದುವರಿಸಲು, ಅವರು ಆಗಾಗ್ಗೆ ವೈಯಕ್ತಿಕ ಮಾಹಿತಿಯನ್ನು ನೀಡುವಂತೆ ಕೋರುತ್ತಾರೆ. ಸಾಂದರ್ಭಿಕವಾಗಿ ನಿಮ್ಮೊಂದಿಗೆ ವ್ಯವಹರಿಸುತ್ತಾ ಅಸ್ತಿತ್ವದಲ್ಲಿಲ್ಲದ ಉದ್ಯೋಗಕ್ಕೆ ಪ್ರವೇಶ ಪಡೆಯುವಂತೆ ಅವರು ನಿಮ್ಮನ್ನು ಕಾಡಲಾರಂಭಿಸುತ್ತಾರೆ.

ಈ ವಂಚಕರು ಹೇಗೆ ಕಾರ್ಯನಿರ್ವಹಿಸುತ್ತಾರೆ?

ಕೆಲವೇ ಕೆಲವರಿಗೆ ಉದ್ಯೋಗವಕಾಶಗಳಿವೆ ಎಂಬ ಮಾಹಿತಿಯೊಂದಿಗೆ ವಂಚಕರು ನಿಮಗೆ ಸಂದೇಶ ಕಳುಹಿಸುವ ಮೂಲಕ ಸಂಪರ್ಕ ಸಾಧಿಸುತ್ತಾರೆ. ನಿಮ್ಮ ಉದ್ಯೋಗವನ್ನು ಕಾಯ್ದಿರಿಸಲು ನೀವು ಪ್ರತಿಕ್ರಿಯಿಸಬೇಕಾಗುತ್ತದೆ.

ಬಲಿಪಶುವಾಗಲಿರುವ ವ್ಯಕ್ತಿ, “ಏನು ಕೆಲಸ?” ಎಂದು ಕೇಳಿದಾಗ, “ನೀವು ಇಲ್ಲಿ ಮಾಡಬೇಕಾಗಿರುವ ಕೆಲಸವಿಷ್ಟೇ. ಯೂಟ್ಯೂಬ್‌ನಲ್ಲಿ ವೀಡಿಯೊಗಳನ್ನು ಲೈಕ್ ಮಾಡಬೇಕು. ನೀವು ಲೈಕ್ ಮಾಡಿದ ಪ್ರತಿ ವಿಡಿಯೊಗೆ ರೂ. ಐವತ್ತು ರೂಪಾಯಿ ಪಾವತಿಸುತ್ತೇವೆ” ಎಂದು ವಂಚಕರು ತಿಳಿಸುತ್ತಾರೆ.

ಈ ಮಾದರಿಯಲ್ಲಿ ನಿಮಗೆ ಸಂದೇಶ ಬರುತ್ತವೆ

ನಕಲಿ ಖಾತೆಗಳ ಮೂಲಕ ಬೋಟ್ ಫಾರ್ಮ್‌ಗಳನ್ನು ಬಳಸಿಕೊಂಡು ನಕಲಿ ಯೂಟ್ಯೂಬ್‌ ಲೈಕ್‌ಗಳನ್ನು ಸೃಷ್ಟಿಸುವುದು ಈ ವಂಚಕರ ವ್ಯವಹಾರ ಮಾದರಿಯಾಗಿದೆ. ಆದರೆ, ಈ ಮಾಹಿತಿಯ ಕೊರತೆಯಿಂದ ಜನರು ತೊಂದರೆಗೆ ಸಿಲುಕಿಕೊಳ್ಳುತ್ತಾರೆ.

ಜಾಗತಿಕ ಸಾಮಾಜಿಕ ಮಾಧ್ಯಮ ಅಥವಾ ಇಂಟರ್ನೆಟ್ ಕಂಪನಿಯಲ್ಲಿ ನಮ್ಮ ಕೆಲಸ ನಡೆಯುತ್ತಿದೆ ಎಂದು ನಿಮ್ಮನ್ನು ನಂಬಿಸಲು ಈ ವಂಚಕರು ಪ್ರಯತ್ನಿಸುತ್ತಾರೆ.

ಹೀಗೆ ನಿಮ್ಮನ್ನು ಸಂಪರ್ಕಿಸಿದವರು 150 ರೂಪಾಯಿಯಂತಹ ಸಣ್ಣ ಮೊತ್ತವನ್ನು ಮೊದಲು ನಿಮಗೆ ನೀಡುತ್ತಾರೆ. “ಮೂರು ಕಾರ್ಯಗಳನ್ನು ಪೂರ್ಣಗೊಳಿಸುವುದಕ್ಕಾಗಿ” ಈ ಹಣವನ್ನು ನಿಮಗೆ ಪಾವತಿಸಿರುತ್ತಾರೆ. ಅವರು ನಿಮಗೆ ಮೂರು ಯೂಟ್ಯೂಬ್‌ ವೀಡಿಯೊಗಳ ಲಿಂಕ್‌ಗಳನ್ನು ಕಳುಹಿಸುತ್ತಾರೆ, ಅವುಗಳನ್ನು ಲೈಕ್‌ ಮಾಡುವಂತೆ ಕೇಳುತ್ತಾರೆ. ನಂತರ ನೀವು ಲೈಕ್‌ ಮಾಡಿರುವ ಸಾಕ್ಷಿಗಾಗಿ ಸ್ಕ್ರೀನ್‌ಶಾಟ್ ಕಳುಹಿಸುವಂತೆ ತಿಳಿಸುತ್ತಾರೆ.

ಈ ಸ್ಕ್ಯಾಮ್‌ ನಂತರದಲ್ಲಿ ಎರಡನೇ ಹಂತಕ್ಕೆ ಹೋಗುತ್ತದೆ. ಇಲ್ಲಿಂದ ನೀವು ತೊಂದರೆ ಸಿಲುಕಿಕೊಳ್ಳಲು ಆರಂಭಿಸುತ್ತೀರಿ. “ನಿಮಗೆ ಹಣ ವರ್ಗಾವಣೆ ಮಾಡಲು ತೊಂದರೆಯಾಗುತ್ತಿದೆ” ಎಂಬ ಉತ್ತರವನ್ನು ಅವರು ನೀಡುತ್ತಾರೆ. ನಿಮಗೆ ಹಣ ವರ್ಗಾಯಿಸಲು ಸುಲಭವಾಗುವಂತೆ ಅಪ್ಲಿಕೇಷನ್‌ ಒಂದನ್ನು ಡೌನ್‌ಲೋಡ್ ಮಾಡಿಕೊಳ್ಳಲು ನಿಮ್ಮಲ್ಲಿ ತಿಳಿಸುತ್ತಾರೆ.

ಇದನ್ನೂ ಓದಿರಿ: ‘ವಾಟ್ಸ್‌ಅಪ್‌‌ ಕಮ್ಯುನಿಟಿ’: ಈ ಹೊಸ ಫೀಚರ್‌‌ ಬಳಸುವುದು ಹೇಗೆ? ಏನಿದರ ವಿಶೇಷ?

ಈ ಅಪ್ಲಿಕೇಷನ್‌ ಇದೆಯಲ್ಲ- ಅದರ ಮೂಲಕ ನಿಮ್ಮ ಮೊಬೈಲ್‌ ಅಥವಾ ಇನ್ನ್ಯಾವುದೇ ಡಿವೈಸ್‌ ಒಳಗೆ ಈ ವಂಚಕರು ಸುಲಭವಾಗಿ ಪ್ರವೇಶಿಸುತ್ತಾರೆ. ಇದು ಒಂದು ರೀತಿಯಲ್ಲಿ ಮಾಲ್‌ವೇರ್‌ ಸಾಫ್ಟ್‌ವೇರ್‌ ಆಗಿದೆ. ನಿಮಗೆ ಹಣವನ್ನು ಪಾವತಿಸುವ ಕನ್ಫರ್ಮೇಷನ್‌ಗಾಗಿ ಒಂದು ರೂಪಾಯಿ ಕಳಿಹಿಸಲು ಸೂಚಿಸುತ್ತಾರೆ. ಈ ಹಣ ಪಡೆಯುವುದು ಪರಿಶೀಲನೆಗಾಗಿಯಷ್ಟೇ ಎಂದು ನಂಬಿಸುತ್ತಾರೆ. ನೀವಿಷ್ಟು ಮಾಡಿದರೆ ಸಾಕು, ನಿಮ್ಮ ಒಟಿಪಿಗಳಿಗೆ, ಇಮೇಲ್‌ಗೆ, ಬ್ಯಾಂಕ್‌ ಖಾತೆ ಮತ್ತು ಕ್ರೆಡಿಟ್ ಕಾರ್ಡ್‌ಗೆ ಸಂಪೂರ್ಣವಾಗಿ ಪ್ರವೇಶವನ್ನು ಅವರು ಪಡೆಯುತ್ತಾರೆ. ನಿಮ್ಮ ಖಾತೆಯಲ್ಲಿರುವ ಹಣವೆಲ್ಲ ಖೋತಾ ಹೊಡೆಯುತ್ತದೆ.

ಉದ್ಯೋಗಕ್ಕಾಗಿ ಹುಡುಕಾಡುತ್ತಾ ಕಷ್ಟದಲ್ಲಿರುವ ಜನರನ್ನು ವಂಚಿಸಲು ಈ ವಂಚಕರು ಸಕ್ರಿಯವಾಗಿದ್ದಾರೆ.

ವಂಚಕರು ನಿಮ್ಮನ್ನು ಹೇಗೆ ಸಂಪರ್ಕಿಸುತ್ತಾರೆ?

ನಿಮಗೆ ಉದ್ಯೋಗವಕಾಶವಿದೆ ಎಂಬ ಸಂದೇಶದೊಂದಿಗೆ ವಾಟ್ಸ್‌ಅಪ್‌, ಫೇಸ್‌ಬುಕ್‌, ಲಿಂಕ್ಡ್‌ಇನ್‌ನಂತಹ ಪ್ಲಾಟ್‌ಫಾರ್ಮ್‌ಗಳ ಮೂಲಕ ವಂಚಕರು ನಿಮ್ಮನ್ನು ಸಂಪರ್ಕಿಸುತ್ತಾರೆ.

ವಂಚಕರ ತಂತ್ರವೇನು?

ಯೂಟ್ಯೂಬ್‌ ವಿಡಿಯೊಗಳನ್ನು ಲೈಕ್ ಮಾಡಿದರೆ ಒಂದು ಲೈಕ್‌ಗೆ ತಲಾ 50 ರೂಪಾಯಿ ನೀಡುತ್ತೇವೆ ಎಂಬ ಕೀಳುಮಟ್ಟದ ಟಾಸ್ಕ್‌‌ ನೀಡುವ ಮೂಲಕ ನಿಮ್ಮನ್ನು ಆಕರ್ಷಿಸುತ್ತಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಬಡವರೂ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ, ಮುಸ್ಲಿಮರ ಬಗ್ಗೆ ಮಾತ್ರ ಏಕೆ ಮಾತನಾಡುತ್ತಾರೆ..’; ಪ್ರಧಾನಿ ಮೋದಿ...

0
'ದೇಶದ ಬಡವರು ಅವರ ಆರ್ಥಿಕ ಪರಿಸ್ಥಿತಿಯಿಂದಾಗಿ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ, ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ ಮುಸ್ಲಿಮರ ಬಗ್ಗೆ ಮಾತನಾಡುತ್ತಿದ್ದಾರೆ' ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ ಟೀಕಿಸಿದ್ದಾರೆ. 'ಪ್ರತಿಪಕ್ಷಗಳ ಇಂಡಿಯಾ...