Homeಮುಖಪುಟಪಕ್ಕದ ಮನೆಯವರ ಕಿರುಕುಳಕ್ಕೆ 12ನೇ ಮಹಡಿಯಿಂದ ಜಿಗಿದು ತಾಯಿ-ಮಗು ಸಾವು

ಪಕ್ಕದ ಮನೆಯವರ ಕಿರುಕುಳಕ್ಕೆ 12ನೇ ಮಹಡಿಯಿಂದ ಜಿಗಿದು ತಾಯಿ-ಮಗು ಸಾವು

- Advertisement -
- Advertisement -

ಪಕ್ಕದ ಮನೆಯವರ ಕಿರುಕುಳಕ್ಕೆ ಮುಂಬೈನ ಮಹಿಳೆಯೊಬ್ಬರು ತನ್ನ 7 ವರ್ಷದ ಮಗನೊಂದಿಗೆ 12 ನೇ ಮಹಡಿಯ ಅಪಾರ್ಟ್ಮೆಂಟ್‌ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ.

44 ವರ್ಷದ ರೇಷ್ಮಾ ತ್ರೆಂಚಿಲ್ ತನ್ನ ಮಗ ಜೋರಾಗಿ ಅಳುತ್ತಾನೆ ಎಂಬ ಬಗ್ಗೆ ನೆರೆಹೊರೆಯವರು ಪದೇ ಪದೇ ದೂರುಗಳನ್ನು ನೀಡಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಡೆತ್ ನೋಟ್ ಬರೆದಿಟ್ಟು, ಮಗನೊಂದಿಗೆ ಸಾವಿಗೆ ಶರಣಾಗಿದ್ದಾರೆ.

ಪ್ರಕರಣ ದಾಖಲಾಗಿದ್ದು, ನೆರೆಹೊರೆಯವರಲ್ಲಿ ಅಯೂಬ್ ಖಾನ್ (67), ಅವರ 60 ವರ್ಷದ ಪತ್ನಿ ಮತ್ತು ಅವರ ಮಗ ಶಾದಾಬ್ ಇದಾರೆ. ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ 33 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಉತ್ತರ ಪ್ರದೇಶ: ಬಾಲಕಿಗೆ ಕಿರುಕುಳ ನೀಡಿ ಮಹಡಿ ಮೇಲಿನಿಂದ ತಳ್ಳಿದ ಕಿಡಿಗೇಡಿಗಳು

ಮೃತ ರೇಷ್ಮಾ ತ್ರೆಂಚಿಲ್ ಇತ್ತೀಚೆಗೆ ಕೊರೊನಾ ಸೋಂಕಿನಿಂದ ತನ್ನ ಗಂಡನನ್ನು ಕಳೆದುಕೊಂಡಿದ್ದರು. ತನ್ನ ಏಳು ವರ್ಷದ ಮಗನೊಂದಿಗೆ ಚಂಡಿವಾಲಿಯ ಅಪಾರ್ಟ್ಮೆಂಟ್ ಕಟ್ಟಡದಲ್ಲಿ ವಾಸಿಸುತ್ತಿದ್ದರು. ಏಪ್ರಿಲ್‌ನಲ್ಲಿ ಈ ಪ್ಲ್ಯಾಟ್‌ಗೆ ಬಂದಿದ್ದ ಇವರೊಂದಿಗೆ ಮಗನ ಅಳುವಿನ ಕಾರಣ ಹೇಳಿ ನೆರೆಹೊರೆಯವರು ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.

ಮೃತರ ಪತಿ ಶರತ್ ಮುಲುಕುಟ್ಲಾ ಕೊರೊನಾಗೆ ಮೇ 23 ರಂದು ನಿಧನರಾಗಿದ್ದರು. ಅಂದಿನಿಂದ ಅವರು ಖಿನ್ನತೆಗೆ ಒಳಗಾಗಿದ್ದರು. ಶರತ್ ಮುಲುಕುಟ್ಲಾ ಅವರು ಕೃಷಿ ಸರಕುಗಳನ್ನು ಆನ್‌ಲೈನ್ ವ್ಯಾಪಾರ ಮಾಡುವ ಪ್ಲಾಟ್‌ಫಾರಂನ ಮುಖ್ಯ ವ್ಯವಹಾರ ಅಧಿಕಾರಿಯಾಗಿದ್ದರು ಎಂದು ವರದಿಗಳು ತಿಳಿಸಿವೆ.

ಜೀವ ಅಮೂಲ್ಯವಾಗಿದೆ. ಮಾನಸಿಕ ಒತ್ತಡಗಳಿದ್ದರೆ ಇಲ್ಲಿ ಸಂಪರ್ಕಿಸಿ:

ಬೆಂಗಳೂರು ಸಹಾಯವಾಣಿ – 080-25497777, ಬೆಳಿಗ್ಗೆ 10 ರಿಂದ ಸಂಜೆ 8 ರವರೆಗೆ

ಕರ್ನಾಟಕ ಆರೋಗ್ಯ ಸಹಾಯವಾಣಿ: 104


ಇದನ್ನೂ ಓದಿ: ಅತಿ ಶ್ರೀಮಂತರ ಮೇಲೆ ತೆರಿಗೆ ವಿಧಿಸಿ, ಬಡಜನರಿಗೆ ಪರಿಹಾರ ಒದಗಿಸಿ: ರಾಜ್ಯಾದ್ಯಂತ ಜನಾಗ್ರಹ ಪ್ರತಿಭಟನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೋಕಸಭೆ ಚುನಾವಣೆ: ಎಕ್ಸಿಟ್ ಪೋಲ್ ಪ್ರಸಾರ ಮಾಡದಂತೆ ನಿಷೇಧ ವಿಧಿಸಿದ ಚುನಾವಣಾ ಆಯೋಗ

0
ಲೋಕಸಭೆ ಚುನಾವಣೆ ಮತ್ತು ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಗಳ ಹಿನ್ನೆಲೆ ಏಪ್ರಿಲ್ 19ರಂದು ಬೆಳಿಗ್ಗೆ 7ರಿಂದ ಜೂನ್ 1ರ ಸಂಜೆ 6.30ರವರೆಗೆ ಸಮೀಕ್ಷೆಗಳನ್ನು ನಡೆಸುವುದು ಮತ್ತು ಎಕ್ಸಿಟ್ ಪೋಲ್ ಫಲಿತಾಂಶಗಳನ್ನು ಪ್ರಕಟಿಸುವುದನ್ನು ನಿಷೇಧಿಸಿ...