Homeಮುಖಪುಟವರ್ಲಿ ಹಿಟ್ ಅಂಡ್ ರನ್ ಪ್ರಕರಣ: ಪ್ರಮುಖ ಆರೋಪಿ ಮಿಹಿರ್‌ನನ್ನು ಬಂಧಿಸಿದ ಮುಂಬೈ ಪೊಲೀಸರು

ವರ್ಲಿ ಹಿಟ್ ಅಂಡ್ ರನ್ ಪ್ರಕರಣ: ಪ್ರಮುಖ ಆರೋಪಿ ಮಿಹಿರ್‌ನನ್ನು ಬಂಧಿಸಿದ ಮುಂಬೈ ಪೊಲೀಸರು

- Advertisement -
- Advertisement -

ಜುಲೈ 7 ರಂದು ನಗರದ ವರ್ಲಿ ಪ್ರದೇಶದಲ್ಲಿ ಸಂಭವಿಸಿದ ಹಿಟ್ ಅಂಡ್ ರನ್ ಅಪಘಾತದ ಪ್ರಮುಖ ಆರೋಪಿ ಮಿಹಿರ್ ಶಾನನ್ನು ಮುಂಬೈ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಆಡಳಿತಾರೂಢ ಶಿವಸೇನೆ ನಾಯಕ ರಾಜೇಶ್ ಶಾ ಅವರ ಪುತ್ರ 24 ವರ್ಷದ ಮಿಹಿರ್ ಅಪಘಾತದ ದಿನದಿಂದ ತಲೆಮರೆಸಿಕೊಂಡಿದ್ದ. ಆತನ ಬಂಧನಕ್ಕೆ ಮುಂಬೈ ಪೊಲೀಸರು 11 ತಂಡಗಳನ್ನು ರಚಿಸಿದ್ದರು ಮತ್ತು ಮಿಹಿರ್‌ನನ್ನು ಬಂಧಿಸಲು ಕ್ರೈಂ ಬ್ರಾಂಚ್‌ ಎಲ್ಲೆಡೆ ಹುಡುಕಾಟ ನಡೆಸಿತ್ತು. ಆತನ ವಿರುದ್ಧ ಲುಕ್ ಔಟ್ ನೋಟಿಸ್ (ಎಲ್‌ಒಸಿ) ಸಹ ಹೊರಡಿಸಲಾಗಿತ್ತು.

ಹಿಟ್ ಅಂಡ್ ರನ್ ಅಪಘಾತ ಸಂಭವಿಸಿದಾಗ ಮಿಹಿರ್ ಮದ್ಯಪಾನ ಮಾಡಿದ್ದು, ವಾಹನವನ್ನು ಆತನೇ ಚಲಾಯಿಸುತ್ತಿದ್ದ ಎಂದು ಹೇಳಲಾಗುತ್ತದೆ. ದ್ವಿಚಕ್ರ ವಾಹನದಲ್ಲಿದ್ದ ಹಿಂಬದಿ ಸವಾರೆ 45 ವರ್ಷದ ಕಾವೇರಿ ನಖ್ವಾ ಸಾವನ್ನಪ್ಪಿದ್ದು, ಅವರ ಪತಿ ಪ್ರದೀಪ್ ನಖ್ವಾ ಗಾಯಗೊಂಡಿದ್ದಾರೆ.

ಭಾನುವಾರ ಮುಂಜಾನೆ ಆರೋಪಿಗಳು ಚಲಾಯಿಸುತ್ತಿದ್ದ ಬಿಎಂಡಬ್ಲ್ಯು ಕಾರು ದಂಪತಿಯ ಬೈಕ್‌ಗೆ ಡಿಕ್ಕಿ ಹೊಡೆದಿದೆ. ದಂಪತಿ ಭಾನುವಾರ ಬೆಳಗ್ಗೆ ಕ್ರಾಫರ್ಡ್ ಮಾರುಕಟ್ಟೆಯಿಂದ ಮೀನು ಖರೀದಿಸಿ ಹಿಂದಿರುಗುತ್ತಿದ್ದಾಗ ಮುಂಜಾನೆ 5:30 ರ ಸುಮಾರಿಗೆ ವೇಗವಾಗಿ ಬಂದ ಕಾರು ಅವರ ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದಿದೆ.

ಐಷಾರಾಮಿ ಕಾರು ಮಹಿಳೆಯನ್ನು 1.5 ಕಿಲೋಮೀಟರ್ ಎಳೆದೊಯ್ದಿದ್ದು, ಆಕೆಯ ಪತಿ ವಾಹನದಿಂದ ಜಿಗಿದಿದ್ದಾರೆ. ಅಕ್ಕಪಕ್ಕದಲ್ಲಿದ್ದವರು ಅವರನ್ನು ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಮಹಿಳೆ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.

“ನಾವು ಗಂಟೆಗೆ 30 ರಿಂದ 35 ಕಿಲೋಮೀಟರ್ ವೇಗದಲ್ಲಿ ಸವಾರಿ ಮಾಡುತ್ತಿದ್ದಾಗ ವೇಗವಾಗಿ ಬಂದ ಕಾರು ನಮಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಪರಿಣಾಮದಿಂದಾಗಿ ನಾವು ಕಾರಿನ ಬಾನೆಟ್ ಮೇಲೆ ಬಿದ್ದೆವು” ಎಂದು ಗಾಯಗೊಂಡ ಪ್ರದೀಪ್ ನಖ್ವಾ ನೆನಪಿಸಿಕೊಂಡರು.

“ಚಾಲಕ ಬ್ರೇಕ್ ಒತ್ತಿದ ಕಾರಣ ನಾನು ಕೆಳಗೆ ಬೀಳಲು ಕಾರಣವಾಯಿತು. ಆದರೆ, ನನ್ನ ಹೆಂಡತಿ ಮುಂಭಾಗದ ಚಕ್ರದ ಅಡಿಯಲ್ಲಿ ಸಿಕ್ಕಿಬಿದ್ದಳು” ಎಂದು ಅವರು ವಿವರಿಸಿದರು.

ನಾನು ಬಾನೆಟ್ ಬಡಿದು ಕಾರನ್ನು ನಿಲ್ಲಿಸಲು ಪ್ರಯತ್ನಿಸಿದೆ. ಆದರೆ, ಚಾಲಕ ನಿಲ್ಲಿಸದೆ ನನ್ನ ಹೆಂಡತಿಯನ್ನು ಸಮುದ್ರ ಕೊಂಡಿಯ (ವರ್ಲಿ-ಅಂತ್ಯ) ಕಡೆಗೆ ಎಳೆದೊಯ್ದರು ಎಂದು ಪ್ರದೀಪ್ ಹೇಳಿದರು.

ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಾವೇರಿ ನಖ್ವಾ ಅವರನ್ನು ಕಾರಿನಿಂದ 1.5 ಕಿಲೋಮೀಟರ್ ಎಳೆದಾಡುತ್ತಿರುವುದು ಕಂಡುಬಂದಿದೆ. ಮಿಹಿರ್ ಷಾ ಮತ್ತು ಸಹ-ಆರೋಪಿ ರಾಜಋಷಿ ಬಿಡಾವತ್ ಮಹಿಳೆಯನ್ನು ಬಾನೆಟ್‌ನಿಂದ ಎಳೆದು, ರಸ್ತೆಯ ಮೇಲೆ ಇರಿಸಿ ನಂತರ ಐಷಾರಾಮಿ ವಾಹನವನ್ನು ಹಿಮ್ಮುಖಗೊಳಿಸುವಾಗ ಆಕೆಯ ಮೇಲೆ ಕಾರು ಹರಿಸಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಇದನ್ನೂ ಓದಿ; ವರ್ಲಿ ಹಿಟ್ ಆಂಡ್ ರನ್ ಪ್ರಕರಣ: 72 ಗಂಟೆ ಕಳೆದರೂ ಪತ್ತೆಯಾಗದ ಪ್ರಮುಖ ಆರೋಪಿ ಮಿಹಿರ್ ಶಾ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನೀಟ್-ಯುಜಿ ಪರಿಷ್ಕೃತ ಫಲಿತಾಂಶ ಇನ್ನೂ ಬಿಡುಗಡೆಯಾಗಿಲ್ಲ, ಹಳೆಯ ಲಿಂಕ್ ಅನ್ನು ಹಂಚಿಕೊಳ್ಳಲಾಗುತ್ತಿದೆ: ಕೇಂದ್ರ

0
ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ)ಯು ಇಂದು ಪರಿಷ್ಕೃತ ನೀಟ್ ಯುಜಿ 2024 ಫಲಿತಾಂಶಗಳನ್ನು ಬಿಡುಗಡೆ ಮಾಡಿದೆ ಎಂಬ ಊಹಾಪೋಹದ ನಂತರ, ಆರಂಭದಲ್ಲಿ ನೀಡಲಾದ ಪರಿಹಾರದ ಅಂಕಗಳನ್ನು ಹಿಂತೆಗೆದುಕೊಳ್ಳುವ ಸುಪ್ರೀಂ ಕೋರ್ಟ್ ತೀರ್ಪಿನ ನಂತರ,...