Homeಕರ್ನಾಟಕಚಂದ್ರಯಾನ-2: ತಪ್ಪನ್ನು ತಿದ್ದಿಕೊಳ್ಳದೇ ಅಹಂಕಾರ ಮೆರೆದ ವಿಜಯವಾಣಿ: ಸಾಮಾಜಿಕ ಜಾಲತಾಣದಲ್ಲಿ ಖಂಡನೆ

ಚಂದ್ರಯಾನ-2: ತಪ್ಪನ್ನು ತಿದ್ದಿಕೊಳ್ಳದೇ ಅಹಂಕಾರ ಮೆರೆದ ವಿಜಯವಾಣಿ: ಸಾಮಾಜಿಕ ಜಾಲತಾಣದಲ್ಲಿ ಖಂಡನೆ

"ಡಿಯರ್ ಮೀಡಿಯಾ, ನಿಮ್ಮ ನಿನ್ನೆಯ ತಪ್ಪಿಗಾದರೂ ಕ್ಷಮೆ ಇದೆ; ಈವತ್ತಿನ ಅಹಂಕಾರ ಪ್ರದರ್ಶನಕ್ಕೆ ಖಂಡಿತಾ ಕ್ಷಮೆ ಇಲ್ಲ."

- Advertisement -
- Advertisement -

ಚಂದ್ರಯಾನ-2 ಅನ್ನು ಉಡಾವಣೆಗೂ ಮುನ್ನವೇ ನಭಕ್ಕೆ ನೆಗೆದ ಬಾಹುಬಲಿ ಎಂದು ಮುದ್ರಿಸಿ ಪ್ರಮಾದ ಎಸಗಿದ್ದ ವಿಜಯವಾಣಿ ಪತ್ರಿಕೆ ಕ್ಷಮೆ ಕೇಳುವ ನೆಪದಲ್ಲಿ ಮತ್ತೆ ಅಹಂಕಾರ ಮೆರೆದಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಖಂಡನೆಯಾಗಿದೆ.

ತಾಂತ್ರಿಕ ಸಮಸ್ಯೆಗಳ ಕಾರಣಗಳಿಂದಾಗಿ ಚಂದ್ರಯಾನವನ್ನು ಇಸ್ರೋ ಮುಂದೂಡಿತ್ತು. ಆದರೆ ಮುಂಚೆಯೇ ಚಂದ್ರಯಾಣ ಉಡಾವಣೆಯಾಯಿತು, ರಾಷ್ಟ್ರಪತಿ ಶುಭಹಾರೈಸಿದರು ಎಂದು ಪತ್ರಿಕೆ ಧಾವಂತದಲ್ಲಿ ಮುದ್ರಿಸಿತ್ತು. ಆ ಕುರಿತು ಇಂದು ನೋವಾಗಿದೆ ಎಂದು 17 ಸಾಲುಗಳುಳ್ಳ ಸುದ್ದಿ ಪ್ರಕಟಿಸಿರುವ ವಿಜಯವಾಣಿ ಪತ್ರಿಕೆ ಅಲ್ಲಿಯೂ ನೇರವಾಗಿ ತಪ್ಪಾಗಿದೆ ಎಂದು ಹೇಳುವ ಬದಲು ಸುತ್ತಿ ಬಳಸಿ ಕೊನೆಯಲ್ಲಿ ಓದುಗರಿಗಾದ ಅನಾನುಕೂಲಕ್ಕೆ ವಿಷಾದಿಸುತ್ತೇವೆ ಎಂದು ಸಂಪಾದಕನ ಹೆಸರಿನಲ್ಲಿ ಪ್ರಕಟಿಸುವ ಮೂಲಕ ಅಹಂಕಾರ ಮೆರೆದಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎರಡು ಸಾಲಿನಲ್ಲಿ ಹೇಳಬಹುದಾದನ್ನು ಅಷ್ಟು ಸಾಲುಗಳಲ್ಲಿ ಹೇಳಿದ ಉದ್ದೇಶವೇ ಮತ್ತೆ ಕನ್ ಫ್ಯೂಸ್ ಮಾಡುವುದು, ಆ ಮೂಲಕ ತಮ್ಮದೇನೂ ತಪ್ಪಿಲ್ಲ ಎಂಬ ಪರೋಕ್ಷ ವಾದ. ವಿಷಾದ ವಿನಯದ ಕುರುಹೂ ಇಲ್ಲ ಎಂದು ಶ್ರೀನಿವಾಸ ಕಾರ್ಕಳರವರು ಫೇಸ್ ಬುಕ್ ನಲ್ಲಿ ಬರೆದಿದ್ದಾರೆ. ಇವರ ಕುಲಗೆಟ್ಟು ಹೋದ ಈ ಧಂದೆ(ಉದ್ಯಮ)ಯನ್ನು ಆಗಾಗ ‘ಜಾರತನ’ ಎಂದು ನಾನು ಬರೀತಿದ್ದಾಗ ಸ್ವಲ್ಪ ಅಳುಕು ಉಂಟಾಗುತ್ತಿತ್ತು. ಈಗ ಯಾವ ಅಳುಕಿಲ್ಲದೇ ಹೇಳ್ತೇನೆ ಎಂದು ಅಬು ಅಸ್ಮರವರು ಪ್ರತಿಕ್ರಿಯಿಸಿದ್ದಾರೆ.

ಇಂಥ ಕಲಗಚ್ಚು ಪತ್ರಿಕೆಯಲ್ಲಿ ಪ್ರಾಮಾಣಿಕ ಕ್ಷಮಾಪಣೆ ಬಯಸುವುದು ಚಂದ್ರನಲ್ಲಿ ಜೀವಿಗಳಿವೆ ಎಂದು ಹೇಳಿದಷ್ಟೇ ಅಭಾಸ ಎಂದು ಗೋವಿಂದರಾಜ ಬೈಚಗುಪ್ಪೆಯವರು ವ್ಯಂಗ್ಯವಾಡಿದ್ದಾರೆ.

“ಡಿಯರ್ ಮೀಡಿಯಾ, ನಿಮ್ಮ ನಿನ್ನೆಯ ತಪ್ಪಿಗಾದರೂ ಕ್ಷಮೆ ಇದೆ; ಈವತ್ತಿನ ಅಹಂಕಾರ ಪ್ರದರ್ಶನಕ್ಕೆ ಖಂಡಿತಾ ಕ್ಷಮೆ ಇಲ್ಲ. ನಾವು ನಮ್ಮ ಕೆಲಸ ಶಿಸ್ತಿನಿಂದ ಮಾಡಿದ್ದೇವೆ. ಇಸ್ರೋದವರು ತಪ್ಪು ಮಾಡಿದರೆ ನಾವು ಹೊಣೆ ಅಲ್ಲ ಎಂಬ ಧ್ವನಿಯ ನಿಮ್ಮ ಈವತ್ತಿನ ಪ್ರಕಟಣೆ ನಿಮ್ಮ ಬಗ್ಗೆ, ನಿಮ್ಮ ಪತ್ರಿಕೋದ್ಯಮದ ಬಗ್ಗೆ ಹಾಗೂ ಕನ್ನಡ ಪತ್ರಿಕೋದ್ಯಮ ಸಾಗುತ್ತಿರುವ ಹಾದಿಯ ಬಗ್ಗೆ ತುಂಬಾ ಸೂಚನೆಗಳನ್ನು ನೀಡುತ್ತಿದೆ. ಸುದ್ದಿಮನೆಯಲ್ಲಿ ತಪ್ಪುಗಳು ಸ್ವಾಭಾವಿಕ. ಸ್ವಲ್ಪ ಎಚ್ಚರ ಮತ್ತು ನಾವು ಮಾಡುತ್ತಿರುವುದು ಏನೆಂಬ ಕಲ್ಪನೆ ಇದ್ದಿದ್ದರೆ, ಕ್ಷಮೆಯಲ್ಲಿ ವಿನಯ ತಾನಾಗಿ ವ್ಯಕ್ತಗೊಳ್ಳುತ್ತದೆ. ಕಲಿತದ್ದು ಜಾಸ್ತಿ ಆದಾಗ ಹೀಗೇ..” ಎಂದು ರಾಜರಾಮ ತಲ್ಲೂರ್ ರವರು ಬರೆದಿದ್ದಾರೆ.

ಶ್ರೀಹರಿಕೋಟಾದಲ್ಲಿ ತಾಂತ್ರಿಕ ಕಾರಣಗಳಿಂದ ಉಡಾವಣೆಗೆ 56 ನಿಮಿಷ ಮುಂಚಿತವಾಗಿ ರದ್ದು ಮಾಡಲ್ಪಟ್ಟ ಚಂದ್ರಯಾನ -2 ಕೊನೆಗೆ ಯಶಸ್ವಿಯಾಗಿ ಬೆಂಗಳೂರಿನ ಚಾಮರಾಜಪೇಟೆಯ ವಿಜಯವಾಣಿ ಕಚೇರಿ ಒಳಗಿಂದ ಹಾರಿಸಲ್ಪಟ್ಟಿರುವುದು ತಿಳಿದು ಬಂದಿದೆ….. ಈ ಸುಸಂದರ್ಭದಲ್ಲಿ ಮಾನ್ಯ ವಿಜಯ ಸಂಕೇಶ್ವರ ಅವರು ಉಪಸ್ಥಿತರಿದ್ದು ಈ ಯಶಸ್ವಿ ಚಂದ್ರಯಾನ್ -2 ಉಡಾವಣೆಯನ್ನು ನೆರವೇರಿಸಿಕೊಟ್ಟರು ಎಂದು ಬಲ್ಲ ಮೂಲಗಳು ತಿಳಿಸಿವೆ…. ಎಂದು ಪತ್ರಕರ್ತರಾದ ಹರ್ಷಕುಮಾರ್ ಕುಗ್ವೆಯವರು ವ್ಯಂಗ್ಯವಾಡಿದ್ದಾರೆ.

ವಿಜಯವಾಣಿ ಪೇಪರ್ ಓದುವವರಿಗೆ, ಅದನ್ನು ಮನೆಗೆ ಹಾಕಿಸುವವರಿಗೆ – ನೆನ್ನೆ ಚಂದ್ರಯಾನ ನೌಕೆ ಯಶಸ್ವಿ ಉಡ್ಡಯನದ ಸುಳ್ಳು ಸುದ್ದಿ ಮುಖಪುಟದಲ್ಲಿ ಓದಿ ‘ಈ ಪೇಪರ್ ಹಾಕಿಸಿ ಬೆಂಬಲ ಕೊಡ್ತಾ ಇರೋದಕ್ಕೆ ನಮ್ ಮೆಟ್ ತಗಂಡು ನಾವೇ ಹೋಡ್ಕೊಬೇಕು’ ಅನ್ನಿಸಲಿಲ್ವಾ? ಎಂದು ಬರೆಯುವ ಮೂಲಕ ಗರುವೇ ಹೆಜ್ಜಾಜಿಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಇದು ಯಾವ ಪತ್ರಿಕೆ ? ಇವರಿಗಿಂತ ನಮ್ಮ ರಂಗಣ್ಣ ಸರೇ Better.. ನಿನ್ನೆ ನೇರವಾಗಿ ಚಂದ್ರನ ಮೇಲೆ ನಿಂತು ವರದಿ ಮಾಡಿದ್ರು..” ಎಂದು ರಾಘವೇಂದ್ರ ಗೋಪಾಡಿಯವರು ಕಿಚಾಯಿಸಿದ್ದಾರೆ.

“ಯಾವ ಮೀಡಿಯಾವು ಯಾವಾಗ ತಾನು ಪ್ರಕಟಿಸುವ ಸುದ್ದಿಯನ್ನು ಮಾರಿದ ಆದಾಯವನ್ನಷ್ಟೇ ನೆಚ್ಚಿ ಬದುಕುವುದು ಬಿಡುತ್ತಾ ಬಂದಿತೋ ಆಗಲೇ ಈ ಅಹಂಕಾರದ ನಶೆಯೂ ಏರುತ್ತಾ ಹೋಯಿತು.” ಎಂದು ಬರಹಗಾರ್ತಿ ಕಾದಂಬಿನಿ ರಾವಿಯವರು ಬರೆದಿದ್ದಾರೆ.

ಇನ್ನು ವಿಜಯವಾಣಿ ಪತ್ರಿಕೆಯ ಸಿಬ್ಬಿಂದಿಯೊಬ್ಬರು “ನಾವೇನು ಕಾಲದರ್ಶಕರಲ್ಲ, ಮುಂದಿನದನ್ನು ಮೊದಲೆ ತಿಳಿದು ಬರೆಯಲು, ತಾಂತ್ರಿಕ ದೋಷ ಇದೆ ಎಂದು, ನಿಗದಿತ ಸಮಯಕ್ಕೆ ಉಡಾವನೆ ಮಾಡಲು ಆಗುವುದಿಲ್ಲ ಎಂದು ಅಲ್ಲಿರುವವರಿಗೇನೇ ಗೊತ್ತಿಲ್ಲದಿರುವಾಗ ಇನ್ನು ನಮಗೇನು ಗೊತ್ತಾಗ್ವೇಕು. ಇಸ್ರೋ ಮೇಲಿನ ನಂಬಿಕೆ, ವಿಶ್ವಾಸದಿಂದ ನಿಗದಿತ ಸಮಯಕ್ಕೆ ಉಡಾವಣೆ ಆಗಲಿದೆ ಎಂದು ಬರೆದಿದ್ದೇವೆ” ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.

ಇದಕ್ಕೆ ತೀಷ್ಣವಾಗಿ ಪ್ರತಿಕ್ರಿಯಿಸಿರುವ ಹಿರಿಯ ಪತ್ರಕರ್ತರು ಮತ್ತು ಪ್ರಸಿದ್ದ ಕಾರ್ಟೂನಿಷ್ಟ್ ಆದ ಪಂಜು ಗಂಗೊಳ್ಳಿಯವರು “ಒಂದು ಘಟನೆ ನಡೆದ ನಂತರವಷ್ಟೇ ಅದು ಸುದ್ದಿ ಅಂತಾಗುತ್ತದೆ. ಒಂದು ವೇಳೆ ೨.೫೫ ಕ್ಕೆ ನಿಗದಿಯಾಗಿದ್ದ ಚಂದ್ರಯಾನ ಯಶಸ್ವಿಯಾಗಿ ಉಡಾವಣೆಯಾಗಿದ್ದರೂ ಬೆಳಗ್ಗಿನ ಎರಡು ಗಂಟೆಗಳೊಳಗೆ ಮುದ್ರಣಗೊಂಡು ಹೊರ ಬರುವ ಪತ್ರಿಕೆಯಲ್ಲಿ ಅದು ಸುದ್ದಿಯಾಗಿ ಬರುವುದೂ ಉಡಾಫೆಯಾಗುತ್ತದೆ” ಎಂದಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...