Homeಅಂಕಣಗಳುಯಡೂರಪ್ಪ ಯಯಾತಿ ಓತ್ತಾಯಿದ್ದನಂತೆ!- ಕಟ್ಟೆಪುರಾಣ

ಯಡೂರಪ್ಪ ಯಯಾತಿ ಓತ್ತಾಯಿದ್ದನಂತೆ!- ಕಟ್ಟೆಪುರಾಣ

- Advertisement -
- Advertisement -

ಉಗ್ರಿ ಚಾಡಿ ಹೇಳುವ ದನಿಯಲ್ಲಿ

‘ನೋಡೆ ಜುಮ್ಮಿ, ಈ ಬಿಜೆಪಿ ಸರಕಾರದೋರು ಕೊರೋನಾ ತಡಿಯಕ್ಕೆ ಅಂತ ಇರೊ ಅವುಸ್ದಿ, ಮಾತ್ರೆ, ಸ್ಯಾನಿಟೈಸರು, ಕಿಟ್ಟು, ಬೆಡ್ಡು ಇದನ್ಯಲ್ಲ ತಗಳವಾಗ ಒಂದುಕ್ಯರಡು ಅಂತ ದುಡ್ಡು ಕೊಟ್ಟು ಕೋಟ್ಯಾಂತರ್ರುಪಾಯಿ ಹ್ವಡದವುರಂತೆ’ ಎಂದ.

‘ಅಯ್ಯೋ ಇನ್ಯಂಥ ಗತಿಗ್ಯಟ್ಟ ಮುಂಡೆ ಮಕ್ಕಳಿವುರೂ, ಇದರಲ್ಲು ದುಡ್ಡು ವಡದರೇ’ ಎಂದಳು.

‘ಇದರಲ್ಲೆ ಕಣೆ ಹ್ವಡಿಯದು. ಯಾಕಂದ್ರೆ ಜನ ನಂಬದಿಲ್ಲ ಅಂತ ಅವುರಿಗೂ ಗೊತ್ತು.’

‘ಮನಸ್ಯಂಗೆ ಬತ್ಲ ಅವುರಿಗೆ ಹ್ಯಣ ತಿನ್ನೊ ನನ್ನ ಮಕ್ಕಳಿವುರು.’

‘ಆ ಟೈಮಲ್ಲಿ ಮನಸು ಕ್ಯಲಸ ಮಾಡದಿಲ್ಲ ಕಣಕ್ಕ. ಜನಗಳೂ ಇಗಿರೊ ಕಷ್ಟದಲ್ಲಿ ಅದ್ನ್ಯಲ್ಲ ನೋಡದಿಲ್ಲ. ಕೇಳದಿಲ್ಲ ಅಂತ ಅವುರಿಗೂ ಗೊತ್ತು’ ಎಂದ ವಾಟಿಸ್ಸೆ.

‘ಅಂಗರಿವುರು ಜನಗಳ ಉಳಸದಿಲ್ಲ ಬುಡು.’

‘ಜನಗಳ ಉಳಸರಾಗಿದ್ರೆ ಇಂತ ತೀರಮಾನ ತಗತಿದ್ರೇನಕ್ಕ.’

‘ಯಾವ ತೀರಮಾನ.’

‘ಕೆಲವು ಜಿಲ್ಲೆಯ ಮಧ್ಯಾಹ್ನದ ಮ್ಯಾಲೆ ಲಾಕ್‍ಡವುನ್ ಮಾಡ್ತಾ ಅವುರೆ. ಅಲ್ಲ ಕಣಕ್ಕ ವತ್ತರಿಂದ ಜನ ನಾಯಿ ತಿರಿಗಿದಂಗೆ ತಿರಗಿ ಮೂರುಗಂಟಿಗೆ ಮನಿಗೆ ಸೇರಿಕತ್ತರೆ. ಅಮ್ಯಾಲೆ ಲಾಕ್‍ಡವುನ್ ಆದ್ರೆಷ್ಟು ಬುಟ್ಟರೆಸ್ಟೂ ಇಂತದೂ ತಿಳಿಯದಿಲವಲ್ಲ ಏನೇಳನ.’

‘ಎಡೂರಪ್ಪನಿಗಾಗ್ಲೆ ವಯಿಸಾಯ್ತು ಕಣೊ, ಇಂತ ಸೂಕುಸ್ಮೆ ಹ್ವಳಿಯದಿಲ್ಲ ಅವುನಿಗೆ.’

‘ನಿಜಕಣೊ ಉಗ್ರಿ, ಅದ್ಕೆ ನೊಡು ಯಯಾತಿ ಓತ್ತಾಕುಂತವುನೆ.’

‘ಯಯ್ಯಾತಿ ಅಂದ್ರೇನ್ಲ.’

‘ಅದು ಪುಸ್ತಗ ಕಣಕ್ಕ ಮುದುಕರ್ಯಲ್ಲ ಓದೊ ಪುಸ್ತಕ.’

‘ಅದ್ಯಂತೆದ್ಲ ಮುದುಕುರೋದೊ ಪುಸಗ.’

‘ಅದರ ಕತೆ ಗೊತ್ತೇನಕ್ಕ.’

‘ನನಿಗೇನು ಗೊತ್ತು ಹೇಳ್ಳ.’

‘ಯಯಾತಿ ಒಬ್ಬ ರಾಜ ಕಣಕ್ಕ. ರಾಜ ಅಂದ ಮ್ಯಾಲೆ ಹೆಂಗಸರ ಚಟ ಇದ್ದೇ ಇರತದೆ. ಅಂಗೆ ಇವುನು ರುಶಿಮುನಿ ಮಗಳ ಹಿಡಕಳಕ್ಕೋದ ಅವುಳೋಗಿ ಅವುರಪ್ಪನಿಗೇಳಿದ್ಲು.’

‘ರಾಜನಿಗೆ ಹೆಡತಿ ಇರಲಿಲ್ವೆ?’

‘ಇರತರೆ ಕಣಕ್ಕ. ಅವುರ್ಯಲ್ಲ ನ್ಯಪಕಿರತರೆ ಇವುರು ಮಾತ್ರ ಚನ್ನಾಗಿರೊರನ್ಯಲ್ಲ ಹಿಡಕಳಕ್ಕೋಯ್ತರೆ, ಅಂಗೆ ಯಯಾತಿನೂ ಹೋಗಿ ಬ್ರಾಂಬ್ರುಡುಗಿ ಕೆಣಕಿದ. ಸಾಮಾನ್ಯವಾಗಿ ಬ್ರಾಂಬ್ರುಡುಗಿರಿಗೆ ಸೆಕ್ಸ್ ಕಡಮೆ. ಅದ್ಕೆ ಹೋಗಿ ಅವುರಪ್ಪನಿಗೇಳಿದ್ಲು.’

‘ಸರಿಯಾಗೆ ಮ್ಯಾಡವುಳೆ ಬುಡು.’

‘ಅವುರಪ್ಪ ಮಹಾಕೋಪಿಸ್ಟ. ಅವುನೋಗಿ ಯಯಾತಿ ಬೈದು ನಿನ್ನ ಪ್ರಾಯದಿಂದ್ಲೆ ಹಿಂಗೆ ಮಾಡಿದ್ದಿ ಅದ್ಕೆ ನೀನು ಮುದುಕಾಗೋಗತ್ತಗೆ ಅಂತ ಶಾಪ ಕೊಟ್ಟ. ಆ ಕೂಡ್ಳೆ ಯಯಾತಿ ನಮ್ಮ ಸೀರ ಮಾವನಂಗಾದ.’

‘ಅಯ್ಯೋ ಪಾಪ ಅಂತ ಸಾಪನೇನ್ಲ ಕೊಡದು.’

‘ಅದವುನಿಗೂ ಗೊತ್ತಾಯ್ತು ಕಣಕ್ಕ. ಅದ್ಕೆ ಯಯಾತಿಗೆ ನಿನ್ನ ಮುಪ್ಪ ಯಾರಿಗಾರ ಕೊಟ್ರೆ ಅವುರ ಹರೇಯ ನಿನಿಗೆ ಬತ್ತದೆ ಹೋಗು ಅಂದ. ಸರಿ ಯಯಾತಿ ಬಂದು ಯಾರಾರ ನನ್ನ ಮುಪ್ಪ ತಗಳಿ ಅರ್ದ ರಾಜ್ಯ ಕೊಡ್ತಿನಿ ಅಂದ ಯಾರೂ ಬರಲಿಲ್ಲ.’

‘ಅದ್ಯಂಗೆ ಬಂದರ್ಲ ಮುಪ್ಪು ಯಾರಿಗೆ ಬೇಕೇಳು.’

‘ಅಂಗೆ ಆಯ್ತು ಕಣಕ್ಕ. ಕಡಿಗೆ ಅಪ್ಪನ ಗೋಳಾಟ ನೋಡಕ್ಕಾಗದೆ ಮಗನೆ ಬಂದು ಈಸ್ಕಂಡ. ಅಪ್ಪ ಹರೇವುದೋನಾದ. ಮಗ ಮುದುಕಾದ ಅದ ನೊಡಿ ಸ್ವಸೆ ನ್ಯಾಣಾಯ್ಕಂಡು ಸತ್ತೋದ್ಲು. ಅದು ಗೊತ್ತಿಲ್ಲದೆ ಯಯಾತಿ ಹೆಡತಿ ಹಿಡಕಳಕ್ಕೊದ. ಅವುಳು ನಿನ್ನ ಪ್ರಾಯ ನನ್ನ ಮಗಂದು ಮುಟ್ಟುಬ್ಯಾಡ ಅಂದ್ಲು. ಯಾಯತಿ ಅಳತ ತಿರಗ ಮಗನಿಗೆ ಪ್ರಾಯಕೊಟ್ಟು ಮುದುಕಾದ.’

‘ಚನಾಗ್ಯದೆ ಕಂಡ್ಳ ಕತೆ. ಇದ್ಯಾಕ್ಕೋತ್ತ ಅವುನೆ ಎಡೂರಪ್ಪಾ.’

‘ಯಾಕೆ ಅಂದ್ರೆ ಆಗ್ಲೆ ಯಪ್ಪಂತೆಟ್ಟು ವರ್ಸಾಯ್ತ ಅದೆ. ಶೋಬಕ್ಕನೂ ದೂರಾಗ್ಯವುಳೆ. ಪ್ರಾಯ ಹೋಯ್ತಾ ಅದೆ. ಹೈಕಮಾಂಡು ಎಡೂರಪ್ಪನೆ ಇಳಿಲಿ ಅಂತ ಕಿರುಕುಳ ಕೊಡ್ತಾ ಅವುರೆ. ಕೊರೋನಾ ಸಮಸ್ಯೆ ಹಠಗಾಯಿಸಿಗಂಡದೆ. ಜ್ವತೆಲಿರೊ ಮಂತ್ರಿಗಳು ಕೊರೋನಾದಲ್ಲೂ ಕಾಸು ತಿಂತಾ ಅವುರೆ. ಅಂತೂ ಸೂಕುಸ್ಮುವಾಗಿ ನೋಡಿದ್ರೆ ಯಯಾತಿ ಗೋಳಾಟ ಹೆಡೂರಪ್ಪನಿಗೂ ಹಠಗಾಯಿಸಿಗಂಡದೆ. ಮುಪ್ಪು ಅನಿವಾರ್ಯ ಅಧಿಕಾರದಿಂದ ಇಳಿಯೋದು ಅನಿವಾರ್ಯ, ವಿಜಯೇಂದ್ರನ್ನ ಮುಂದೆ ತರೋದು ಅನಿವಾರ್ಯ, ಇಂತ ಅನಿವಾರ್ಯಗಳೆ ಎಡೂರಪ್ಪನ್ನ ಬಗ್ಗಸಬಹುದು ಕಣಕ್ಕ.’

‘ಅದೇನಾರ ಆಗ್ಲಿ ಬಡುವುರು ತಿನ್ನ ಅಕ್ಕಿನೆ ಕಡಮೆ ಮಾಡ್ಯವುನಂತೆ ಇವುನಿಗೆ ವಳ್ಳೆದಾದತೆ?’

‘!?


ಇದನ್ನು ಓದಿ: ಡಿ.ಕೆ.ಶಿ ಬಿಜೆಪಿಗಳ ಹೆದರಸ್ತನೆ ಬುಡೊ. ನೋ ಡವುಟು – ಚಂದ್ರೇಗೌಡರ ಕಟ್ಟೆಪುರಾಣ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿಯ ಲೆಫ್ಟಿನೆಂಟ್ ಗವರ್ನರ್ ತಮ್ಮನ್ನೇ ನ್ಯಾಯಾಲಯ ಎಂದು ಭಾವಿಸಿರುವಂತಿದೆ: ಸುಪ್ರೀಂ ಕೋರ್ಟ್ ಕಿಡಿ

0
ಸುಪ್ರೀಂ ಕೋರ್ಟ್‌ ಆದೇಶ ಉಲ್ಲಂಘಿಸಿ ಉತ್ತರ ಅರಾವಳಿ ಚಿರತೆ ವನ್ಯಜೀವಿ ಕಾರಿಡಾರ್‌ ಆಗಿರುವ ದೆಹಲಿ ರಿಜ್‌ ಅರಣ್ಯ ಪ್ರದೇಶದಲ್ಲಿ ಸುಮಾರು 1,100 ಮರಗಳನ್ನು ಕಡಿಯಲು ನಿರ್ದೇಶನ ನೀಡುವಾಗ ದೆಹಲಿ ಅಭಿವೃದ್ಧಿ ಪ್ರಾಧಿಕಾರದ (ಡಿಡಿಎ)...