ನಿನಗೆ ಬ್ಲಡ್ ಕ್ಯಾನ್ಸರ್ ಇರಬೇಕು ಕಣೋ : ಯಾಹೂ

ಸದ್ಯದ ಕರ್ನಾಟಕದ ರಾಜಕಾರಣ, ಅಯ್ಯೋಪಾಪ ಎಂಬ ಕನಿಕರದ ಉದ್ಘಾರಕ್ಕೆ ತುತ್ತಾಗಿದೆ. ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂತವನ ದುಗುಡದ ಮುಖ ನೋಡಿದರೆ ಯಾರಿಗೆ ಬೇಕು ಆ ಮುಳ್ಳಿನ ಕುರ್ಚಿ ಎನ್ನುವಂತಾಗಿದೆ. ಈ ನಡುವೆ ಬಿ.ಜೆ.ಪಿ ಜನರಾಡುವ ಮಾತುಕತೆ ನೋಡಿದರೆ, ಒಂದು ಸಮೂಹವೇ ಮತೀಯ ಮನೋಕ್ಲೇಶಕ್ಕೆ ತುತ್ತಾಗಿರುವಂತಿದೆ. ಅದರಲ್ಲಿ ಅ.ಕು.ಹೆಗಡೆ ಎಂಬುವನ ತಲೆ ಸಂಪೂರ್ಣ ಹದಗೆಟ್ಟಿರುವುದರಿಂದ, ಆತನನ್ನೇ ಮಾತನಾಡಿಸಿದರೆ ಹೇಗೆ ಎಂದು ಫೋನ್ ಮಾಡಲಾಗಿ ರಿಂಗಾಯ್ತು.

ನಮಸ್ತೇ ಸದಾವತ್ಸಲೇ ಮಾತೃ ಭೂಮಿ…. “ಹಲೊ ಯಾರ್ರಿ..”
“ನಾನು ಕಣೊ ಆಂಕೋಲಾದಿಂದ ಹೊಸಮನೆ ಹೆಗಡೆ ಮಾತನಾಡ್ತಾಯಿರೋದು.”
“ಏನೇಳಿ ಹೆಗಡೆಯವರೆ.”
“ನಾನು ನಿಮ್ಮ ತಂದೆ ಕ್ಲಾಸುಮೇಟು ಕಣೋ.”
“ಹೌದಾ.”
“ಆತ ತುಂಬ ಸಂಭಾವಿತ, ನಿಮ್ಮ ತಾಯಿನೂ ಬಹಳ ಒಳ್ಳೆಯವಳು.”
“ಹೌದು, ಅಂತ ಗೌರವಾನ್ವಿತರ ಮಗ ನಾನು.”
“ಆದರೇನು ನಮ್ಮ ಮರಿಯಾದಿನೆ ಕಳದಲ್ಲೋ.”
“ನಾನೇನು ಮಾಡಿದ್ದಿನಿ.”
“ನಾನೇನು ಮಾಡಿದ್ದಿನಿ ಅಂತ ಕೇಳಿದ್ರೆ ಏನ್ಹೇಳದು. ನಿನ್ನ ಅಪರಾಧಗಳೇ ನಿನಗೆ ಗೊತ್ತಿಲ್ಲವಲ್ಲೋ?.”
“ಅಪರಾಧ ಮಾಡಿದ್ರೆ ತಾನೆ.”
“ಲೋಕಸಭೇಲಿ ನಿಂತುಕೊಂಡು ಸುಳ್ಳು ಹೇಳತಿ ಕ್ಷಮೆ ಯಾಚಿಸ್ತಿ, ನಿನ್ನ ಆರಿಸಿದವರ ಮಾನ ಕಳಿತಿಯಲ್ಲೊ.”
“ನೋಡಿ ಹೆಗಡೆಯವರೆ, ನಾನು ಸತ್ಯನೆ ಹೇಳದು. ಅದ್ಕೆ ಎಲ್ಲರಿಗೂ ಉರಿಹತ್ತಿಗಳದು.”
“ಅಲ್ಲೊ ಗಾಂಧಿ ಉಪವಾಸಕ್ಕೆದರಿ ಬ್ರಿಟಿಷರು ಓಡಲಿಲ್ಲ. ಅದನ್ನ ಓದಿದ್ರೆ ರಕ್ತ ಹೆಪ್ಪುಗಟ್ಟುತ್ತೆ ಅಂತಿಯಲ್ಲೋ.”
“ಹೌದು ಹಾಗಂದೆ.”
“ಹಾಗಿದ್ರೆ ನಿನಗೆ ಬ್ಲಡ್‍ಕ್ಯಾನ್ಸರ್ ಇರಬಹುದು ಕಣೋ. ಅಲ್ಲೇ ಅಂಕೋಲಾದಲ್ಲಿ ಒಬ್ಬ ಮಹಿಳಾ ಡಾಕ್ಟರಿದಾರೆ. ಅಲ್ಲಿಗೋಗಿ ಚೆಕಪ್ ಮಾಡಿಸಿಕೊ. ಅಂದ್ರೆ ಸುಮ್ಮನೆ ಅವುರತ್ರ ಒಂದು ಗಂಟೆ ಮಾತನಾಡು. ಬ್ಲಡ್ ಸರಿಹೋಗಬಹುದು.”
“ನೀವು ಹಿರಿಯರು ಅಂತ ಗೌರವ ಕೊಡ್ತಿನಿ ಅಂಗೆಲ್ಲ ಮಾತನಾಡಬೇಡಿ ತಿಳಿತಾ.”
“ನನ್ನ ಸ್ನೇಹಿತನ ಮಗ ಕಣೋ ನೀನು. ಅದ್ಕೆ ಹೇಳ್ತಿನಿ. ಗಾಂಧಿ ಬಗ್ಗೆ ನಿನಗೇನೊ ಗೊತ್ತು. ಭಾರತ ಜಗತ್ತಿಗೆ ಕೊಟ್ಟ ಕೊಡುಗೆನೆ ಗಾಂಧಿ. ಹಿಂದೂ ಧರ್ಮದ ಶ್ರೇಷ್ಠ ಕೊಡುಗೆನೇ ಗಾಂಧಿ ಕಣೊ. ನಿಮ್ಮ ಕೊಡುಗೆ ಯಾವುದೊ?”
“ಮೋದಿ ಸಾವರ್ಕರ್‍ಗಿಂತ್ಲೂ ಬೇಕಾ?”
“ಒಬ್ಬ ಐದು ದಿನದಲ್ಲಿ ಮೂರು ಸಾವಿರ ಜನ ಕೊಲ್ಲಿಸಿದ. ಇನ್ನೊಬ್ಬ ಮೂರು ಬಾರಿ ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದು ಬಿಡುಗಡೆಯಾಗಿ, ಹಿಂದೂ ಮುಸ್ಲಿಂ ಜಗಳ ಮಾಡಸಕ್ಕೆ ಸಾಯೋವರಿಗೂ ಶ್ರಮಪಟ್ಟ ಅಲ್ವೇನೊ?”
“ನೋಡಿ ತಿಳಕಂಡು ಮಾತಾಡಿ.”
“ನೀನು ಗಾಂಧಿ ಓದಿಕಂಡು ಮಾತಾಡು.”
“ಗಾಂಧಿ ಬೇಕಾಗಿಲ್ಲ ನನಿಗೆ.”
“ಬ್ರಾಹ್ಮಣ ಕುಲಕ್ಕೆ ಅವಮಾನ ನೀನು. ಬ್ರಾಹ್ಮಣ ಮಾತನಾಡ್ತ ಇದ್ರೆ ಕೇಳಬೇಕು ಅನ್ಸುತ್ತೆ. ಆತನ ಭಾಷೆ ಅಪ್ಯಾಯಮಾನವಾಗಿರುತ್ತೆ. ಅವನ ಮಾತಲ್ಲಿ ಹಿಂಸೆ ಇರಲ್ಲ. ಕಟಕಿ ಇರಲ್ಲ. ಪ್ರಚೋದನೆ ಇರಲ್ಲ. ಅವಮಾನ ಇರಲ್ಲ. ನಿನ್ನ ಮಾತಲ್ಲಿ ಇವೆಲ್ಲಾ ಇವೆ.”
“ಅದೇ ನನ್ನ ವ್ಯಕ್ತಿತ್ವ.”
“ಆ ನಿನ್ನ ವ್ಯಕ್ತಿತ್ವನ ನೀನು ಟೀಕೆ ಮಾಡೊ ಜಾತ್ಯತೀತರು ಶೋಧನೆ ಮಾಡ್ತಯಿದಾರೆ.”
“ಆ ನನ್ನ ಮಕ್ಕಳಿಗೆ ಬುದ್ಧಿ ಕಲುಸ್ತಿನಿ.”
“ನೀನು ಆ ನನ ಮಕ್ಕಳು ಅನ್ನಬಾರದಿತ್ತು.”
“ನಾನೂ ಹರಾಜಾಕ್ತಿನಿ.”
“ನಿನ್ನಿಂದಾಗಿ ನಮ್ಮ ಜಿಲ್ಲೆಗೆ ಕೆಟ್ಟ ಹೆಸರು ಬಂತಲ್ಲೋ. ನಮ್ಮ ಜಿಲ್ಲೇಲಿ ಎಂತೆಂತಹ ಮೇಧಾವಿಗಳಿದ್ರು. ಕರ್ನಾಟಕ ಕಂಡ ಶ್ರೇಷ್ಠ ಆಡಳಿತಗಾರ ರಾಮಕೃಷ್ಣ ಹೆಗಡೆ, ತಾಯಿ ಹೃದಯದ ಮಾರ್ಗರೆಟ್ ಆಳ್ವ, ಇನ್ನ ಸಾಹಿತ್ಯ ಲೋಕಕ್ಕೆ ಬಂದ್ರೆ, ಶಾಂತಿನಾಥ ದೇಸಾಯಿ, ಯಶವಂತ ಚಿತ್ತಾಲ, ಗಂಗಾಧರ ಚಿತ್ತಾಲ, ದಿನಕರ ದೇಸಾಯಿ, ಗೌರೀಶ್ ಕಾಯ್ಕಿಣಿ, ಜಯಂತಿ, ಅನುಪಮ ಇಂತಹ ಜನಗಳ ನಾಡಲ್ಲಿ ನೀನೆಲ್ಲಿ ಉದ್ಭವಿಸಿದೆಯೋ ಮುಂಡೆದೆ.”
“ನೋಡಿ ಮುಂಡೆದೆ ಅಂದ್ರೆ ನನ್ನ ರಕ್ತ ಹೆಪ್ಪುಗಟ್ಟುತ್ತೆ.”
“ನೋಡು ನಿನ್ನನ್ನ ಬೈಯ್ಯೋದಕ್ಕೆ ಬೈಗಳನೇ ಇಲ್ಲ. ಹೆತ್ತ ತಾಯಿಗೆ ಲಾಡಿ ಬಿಚ್ಚೊ ಮಾತಾಡಬೇಡ.”
“ಏನು ಹಾಗಂದೆ.್ರ”
“ಅದೊಂದು ಕೇಳಿಸಿಕೊಳ್ಳಕ್ಕೆ ಹಿಂಸೆಯಾಗೊ ಪದ. ನಮ್ಮ ಭಾರತದ ಸಂವಿಧಾನದಡಿಯಲ್ಲಿ ಚುನಾವಣೆ ನಡೆದು ಅದರಲ್ಲಿ ಗೆದ್ದು ಬಂದು ಅದನ್ನೆ ಬದಲಾಯಿಸ್ತಿನಿ ಅಂತಿಯಲ್ಲಾ, ಅದನ್ನ ಜಾತ್ಯತೀತರು ಹೆತ್ತ ತಾಯಿಗೇ ಲಾಡಿಬಿಚ್ಚೊ ಮಾತು ಅಂತಾರೆ. ಇಷ್ಟು ಕಠೋರ ಮಾತು ನಿನಗೆ ಬೇಕಾ.”
“ಅವರಿಗೆಲ್ಲಾ ನಾನು ಉತ್ತರ ಕೊಡ್ತಿನಿ. ನೀವು ತಲೆಕೆಡಿಸಿಕೋಬೇಡಿ.”
“ಹಾಗಂದ್ರೇಗೊ ಮುಂಡೆದೆ, ನೀನು ಬ್ರಾಹ್ಮಣ, ನಾನು ಬ್ರಾಹ್ಮಣ. ಆದ್ರಿಂದ ಅವರು ನಿನಿಗಂದ ಮಾತು ನನ್ನನ್ನು ನೋಯಿಸುತ್ತೆ.”
“ಅವರ ಮಾತ ಕೇಳಿಸಿಕೋಬೇಡಿ.”
“ಹಾಗಂದ್ರೇಗೊ, ಈ ಮುಪ್ಪಿನ ಕಾಲದಲ್ಲಿ ನಾನಿರೋದೆ ಜಾತ್ಯತೀತರ ನಡುವೆ.”
“ಅವರ ಜೊತೆ ಇರಬೇಡಿ, ನಮ್ಮ ಮನೆ ಹತ್ರ ಬಂದಿರಿ.”
“ನಿನ್ನ ಮನೆ ಹತ್ರ ಬರೀ ಹುಚ್ಚರ ಸಂತೆ ಕಣೋ. ಅಲ್ಲಿ ಸೇರೊವೆಲ್ಲಾ ಪಶ್ಚಿಮದ ದಾಳಿಗೆ ಹುಟ್ಟಿದಂಗೆ ಮಾತನಾಡ್ತವೆ. ಪಾಕಿಸ್ತಾನದ ಬಗ್ಗೆ ಮಾತನಾಡ್ತವೆ. ಶೂದ್ರರನ್ನು ಆಡಿಕೊಳ್ತವೆ. ದೇಶಕ್ಕೆ ಬೆಂಕಿ ಹಚ್ಚೊ ಮಾತುಬಿಟ್ರೆ, ಅಲ್ಲಿ ಇನ್ಯಾವ ಮನಶಾಂತಿನೂ ಸಿಗಲ್ಲ. ಅಲ್ಲಿಗೆ ಬರೋದಕ್ಕಿಂತ ಆತ್ಮಹತ್ಯೆ ಮಾಡಿಕಳದೇ ಒಳ್ಳೆದು.”
“ಅಷ್ಟು ಕೆಲಸ ಮಾಡಿ.”
“ಥೂ, ಗೋಡ್ಸೆ ಸಂತಾನವೆ.”

ಥೂತ್ತೇರಿ…

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here