Homeಅಂಕಣಗಳುಅಮ್ಮನ ದಿನದಂದು ಅಮ್ಮಿ

ಅಮ್ಮನ ದಿನದಂದು ಅಮ್ಮಿ

- Advertisement -
- Advertisement -

2017ರವರೆಗೂ ಪ್ರತಿ ವರ್ಷ ಮಾರ್ಚ್ 08 ಅಥವಾ ಅದರ ಸುತ್ತಾಮುತ್ತಾ ಪಿ.ಲಂಕೇಶ್‌ರ ಜನ್ಮದಿನದ ನೆನಪಿನಲ್ಲಿ ಅರ್ಥಪೂರ್ಣ ಕಾರ್ಯಕ್ರಮ ನಡೆಯುತ್ತಿತ್ತು. ನಾಡಿನ ಹಿರಿಯ ಚಿಂತಕರು, ಹೋರಾಟಗಾರರು ಮತ್ತು ಸಾಹಿತಿ ಕಲಾವಿದರನ್ನು ಕರೆಸಿ ಇಡೀ ದಿನ ಸಮಾಜದ ಆಗುಹೋಗುಗಳ ಬಗ್ಗೆ ಚರ್ಚೆ, ಪುಸ್ತಕ ಬಿಡುಗಡೆ, ಸಿನಿಮಾ ವೀಕ್ಷಣೆ ರೀತಿಯ ಹತ್ತು ಹಲವು ಕಾರ್ಯಕ್ರಮಗಳು ನಡೆಸಿಕೊಂಡು ಬಂದಿದ್ದವು. ಗೌರಿ ಲಂಕೇಶ್ ಇದರ ಜವಾಬ್ದಾರಿ ವಹಿಸಿಕೊಳ್ಳುತ್ತಿದ್ದರು.

ಆದರೆ 2017ರಲ್ಲಿ ಮತಾಂಧ ಶಕ್ತಿಗಳ ಗುಂಡಿಗೆ ಎದೆಯೊಡ್ಡಿ ಗೌರಿ ಅಮ್ಮ ಹುತಾತ್ಮರಾದ ನಂತರ, ಲಂಕೇಶ್ ನೆನಪು ಕಾರ್ಯಕ್ರಮ ನಿಂತುಹೋಯಿತು. ಆದರೆ ಅಪ್ಪನ ಹಾದಿಯಲ್ಲಿಯೇ ನಡೆದ, ಆಕ್ಟಿವಿಸ್ಟ್ ಜರ್ನಲಿಸ್ಟ್ ಆಗಿ ಅಪ್ಪನನ್ನುಮೀರಿಸಿದ ನಮ್ಮ ಗೌರಿ ಅಮ್ಮನನ್ನು ನೆನೆಯುವ ಜವಾಬ್ದಾರಿ ನಮ್ಮ ಮೇಲಿತ್ತು. ಹಾಗಾಗಿ ಅಮ್ಮನ ಜನ್ಮದಿನವಾದ ಜನವರಿ 29ನ್ನು ಕಳೆದ ವರ್ಷದಿಂದ ಗೌರಿದಿನವನ್ನಾಗಿ ಆಚರಿಸಲು ನಿರ್ಧರಿಸಲಾಗಿದೆ. ಈ ಬಾರಿ ಜನವರಿ 29ರಂದು ಅಮ್ಮನ ದಿನದಂದು ಅಮ್ಮಿ ಎಂಬ ಭಾವಪೂರ್ಣ ಸಿನಿಮಾ ನೋಡಿದ್ದಲ್ಲದೇ, ಅಮ್ಮಿಯನ್ನೇ ಇದಕ್ಕೆ ಕರೆಸಲಾಗಿತ್ತು.

ಗೌರಿ ಅಮ್ಮ ನಮ್ಮನ್ನೆಲ್ಲಾ ಮಕ್ಕಳೆಂದು ಭಾವಿಸಿ ಪೋಷಿಸಿದವರು. ಮರಿ ಎಂದು ಕರೆದು ಪ್ರೀತಿ ಕೊಟ್ಟವರು. ಹೋರಾಟಗಾರ ಮಕ್ಕಳಿಗಾಗಿ ಹಂಬಲಿಸುತ್ತಿದ್ದ, ಈ ಮಕ್ಕಳು ದೊಡ್ಡ ನಾಯಕರಾಗಿ ದೇಶ ಕಟ್ಟಬೇಕೆಂದು ಪರಿತಪಿಸುತ್ತಿದ್ದ ತಾಯಿಹೃದಯ ಗೌರಿ ಅಮ್ಮ. ದೇಶ ಕಟ್ಟುವ ಮತ್ತು ದೇಶ ಬದಲಿಸುವ ನಾಯಕರು ಹಾಗೂ ವಿದ್ವಾಂಸರನ್ನು ರೂಪಿಸುವ ಜೆಎನ್‌ಯು ವಿಶ್ವವಿದ್ಯಾಲಯಕ್ಕೆ ಓದಲು ಕಳಿಸಿದ ಮಗ ನಜೀಬ್‌ನನ್ನು ಕಳೆದುಕೊಂಡ ಅಮ್ಮಿ ನಫೀಸ್‌ರವರು ಅಂದು ನಮ್ಮ ಕಾರ್ಯಕ್ರಮದಲ್ಲಿದ್ದರು.

ಈ ಮತಾಂಧರು ಮಾನವೀಯತೆ ಇಲ್ಲದವರು ಎಂಬುದಕ್ಕೆ ಉದಾಹರಣೆಯಾಗಿ ನಜೀಬ್ ಪ್ರಕರಣವಿದೆ. ಗೌರಿ ಅಮ್ಮನನ್ನು ಕಳೆದು ಮಕ್ಕಳು ನಾವು ಅಲ್ಲಿ ಕುದಿಯುತ್ತಿದ್ದರೆ, ತನ್ನ ಮಗ ನಜೀಬ್‌ನನ್ನು ಕಳೆದುಕೊಂಡ ಕಿಚ್ಚು ನಫೀಸಾ ಅಮ್ಮಿಯಲ್ಲಿತ್ತು. ಇದರ ಕುರಿತಾಗಿಯೇ ಪೆಡೆಸ್ಟ್ರಿಯನ್ ಪಿಕ್ಚರ್ಸ್ ನಿರ್ಮಿಸಿರುವ ಅಮ್ಮಿ ಸಾಕ್ಷ್ಯಚಿತ್ರ ಮೊದಲು ಪ್ರದರ್ಶನಗೊಂಡಿತು. ನಜೀಬ್ ಎಂಬ ಅತ್ಯಂತ ಒಳ್ಳೆಯ ಹುಡುಗನ ವ್ಯಕ್ತಿತ್ವ, ಬಿಜೆಪಿ ಸಂಘಪರಿವಾರದ ಎಬಿವಿಪಿಯ ಹೊಲಸು ರಾಜಕೀಯವನ್ನು ಚಿತ್ರ ಬಿಚ್ಚಿಟ್ಟಿತು. ಜಡಗೊಂಡಿರುವ ವ್ಯವಸ್ಥೆಯನ್ನು ಬಡಿದೆಚ್ಚರಿಸಿ ನಜೀಬ್‌ನನ್ನು ವಾಪಸ್ ತರುವ ಸಂಕಲ್ಪದೊಂದಿಗೆ ಚಿತ್ರ ಮುಕ್ತಾಯವಾಗಿತ್ತು. ಅಮ್ಮನ ದಿನಕ್ಕೆ ಅಮ್ಮಿ ನಮ್ಮೆಲ್ಲರ ಹೋರಾಟದ ಕಿಚ್ಚನ್ನು ಎಚ್ಚರಿಸಿದರು. ಈಗ ಅವರು ತಾಯಿಯ ಮಮತೆ, ಮಗನನ್ನು ಹುಡುಕುತ್ತಿರುವ ದುಃಖತಪ್ತೆಯಾಗಿ ಮಾತ್ರವಲ್ಲದೇ, ಅದರ ಕಾರಣವನ್ನು ದೇಶದ ಪ್ರಸಕ್ತ ರಾಜಕೀಯ ಪರಿಸ್ಥಿತಿಯಲ್ಲಿ ಕಂಡುಕೊಂಡಿರುವ ಒಬ್ಬ ಚಿಂತಕಿಯಾಗಿ ರೂಪುಗೊಂಡಿದ್ದಾರೆ. ಅಷ್ಟು ಖಚಿತವಾಗಿ ಅವರು ಇಡೀ ದೇಶದ ಪರಿಸ್ಥಿತಿಯನ್ನು ವಿಶ್ಲೇಷಣಾತ್ಮಕವಾಗಿ ಮುಂದಿಟ್ಟರು.

ಅಮ್ಮಿ ನಫೀಸಾರವರ ಮಾತುಗಳು ನಮ್ಮೆದೆಯೊಕ್ಕ ಗುಂಡುಗಳಂತಾಗಿದ್ದವು. ಅಷ್ಟು ಸ್ಪಷ್ಟ ಮತ್ತು ಆವೇಗದಲ್ಲಿ ಮಾತಾಡಿದರು. ಅವರ ಧೈರ್ಯಕ್ಕೆ ಗೌರಿ ಸ್ಮಾರಕ ಟ್ರಸ್ಟ್ ವತಿಯಿಂದ ಪ್ರೊ. ಬಾಬು ಮ್ಯಾಥ್ಯೂ ಅಭಿನಂದನಾ ಮಾತುಗಳನ್ನಾಡಿದರು.
ಕನ್ನಡ ದಿನಪತ್ರಿಕೆ ವಾರ್ತಾಭಾರತಿಯ ಸಂಪಾದಕರಾದ ಅಬ್ದುಲ್ ಸಲಾಂ ಪುತ್ತಿಗೆಯವರು ಗೌರಿ ನೆನಪಿನ ಉಪನ್ಯಾಸ ನೀಡಿದರು. ಜಾತೀಯತೆ, ಬಂಡವಾಳಶಾಹಿ ಶೋಷಣೆ ಮತ್ತು ಮತಾಂಧತೆಯೇ ಭಾರತದ ಪ್ರಮುಖ ಶತ್ರುಗಳಾಗಿದ್ದು ಇಂದಿನ ಪ್ರಧಾನ ಶತ್ರುಗಳಾಗಿದ್ದು ಇವುಗಳನ್ನು ನಿರ್ಮೂಲನೆ ಮಾಡುವ ಶಪಥ ಮಾಡಬೇಕಾಗಿದೆ ಎಂದರು.

ಅಮ್ಮನ ದಿನದಂದು ಅವರ ಕನಸಿನ ನೂತನ www.naanugauri.com ವೆಬ್‌ಪೋರ್ಟಲ್‌ಅನ್ನು ಅವರ ತಂಗಿ ಕವಿತಾ ಲಂಕೇಶ್ ಲೋಕಾರ್ಪಣೆ ಮಾಡಿದರು. ಈ ಮೂಲಕ ಗೌರಿ ಸ್ಮಾರಕ ಟ್ರಸ್ಟ್ ಮುಖಾಂತರ ನಾವೆಲ್ಲರೂ ಒಂದು ಸಣ್ಣ ಗಿಫ್ಟ್ಅನ್ನು ಅಮ್ಮನಿಗೆ ನೀಡುತ್ತಿದ್ದೇವೆ. ನ್ಯಾಯಪಥ ಮುದ್ರಿತ ವಾರಪತ್ರಿಕೆ ಯಥಾಪ್ರಕಾರ ಮುಂದುವರೆಯುತ್ತದೆ. ಜೊತೆಗೆ ಈ ವೆಬ್ ಪೋರ್ಟಲ್ ಪ್ರತಿದಿನವೂ ಸತ್ಯಸುದ್ದಿಗಳನ್ನು ನಿಮ್ಮಲ್ಲಿಗೆ ತಲುಪಿಸುವ ಕೆಲಸ ಮಾಡಲಿದೆ. ಇದಕ್ಕಾಗಿ ನೂರು ಜನ

ನಜೀಬ್

ಬರಹಗಾರರು ನಮ್ಮೊಡನಿದ್ದಾರೆ.

ನಂತರ ಮದ್ಯ ನಿಷೇಧಕ್ಕೆ ಒತ್ತಾಯಿಸಿ ಪಾದಯಾತ್ರೆ ಬರುತ್ತಿದ್ದ ಮಹಿಳೆಯರ ಹೋರಾಟಕ್ಕೆ ಬೆಂಬಲ ಸೂಚಿಸಿ ಅಲ್ಲೆ ಒಂದಷ್ಟು ಹಣ ಸಂಗ್ರಹ ಮಾಡಿ ತಲುಪಿಸಲಾಯಿತು. ಈ ರೀತಿಯಾಗಿ ಅಮ್ಮನ ಹೋರಾಟದ ಸ್ಫೂರ್ತಿಯನ್ನು ಮತ್ತಷ್ಟು ಗಟ್ಟಿಗೊಳಿಸಲು ಅಮ್ಮನ ದಿನ ಅರ್ಥಪೂರ್ಣವಾಗಿ ಆಚರಿಸಲಾಯಿತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...