Homeಎಕಾನಮಿಎಲೆಕ್ಟೋರಲ್ ಬಾಂಡ್ ಭ್ರಷ್ಟಾಚಾರವನ್ನು ಕಾನೂನುಬದ್ಧಗೊಳಿಸಿತೇ ಕೇಂದ್ರ ಸರ್ಕಾರ!?

ಎಲೆಕ್ಟೋರಲ್ ಬಾಂಡ್ ಭ್ರಷ್ಟಾಚಾರವನ್ನು ಕಾನೂನುಬದ್ಧಗೊಳಿಸಿತೇ ಕೇಂದ್ರ ಸರ್ಕಾರ!?

- Advertisement -
- Advertisement -

ಭ್ರಷ್ಟಾಚಾರಭರಿತ ಎಲೆಕ್ಟೋರಲ್ ಬಾಂಡ್ ಎಂಬ ಕಾನೂನುಬಾಹಿರ ಬಾಂಡನ್ನು ಮೋದಿ ಸರ್ಕಾರ ಬಿಡುಗಡೆ ಮಾಡಿದೆ. ರಿಸರ್ವ್ ಬ್ಯಾಂಕ್ ಮತ್ತು ಚುನಾವಣಾ ಆಯೋಗಗಳು ಈ ಕಣ್‍ಕಟ್ಟಿನ ರಾಜಕೀಯ ನಿಧಿ ಹಂಚಿಕೆಯ ಬಗೆಗೆ ವ್ಯಾಪಕ ಚರ್ಚೆ ಮಾಡಬೇಕಾಗಿದೆ. ಕೇಂದ್ರ ಸರ್ಕಾರ ಈ ಕರಾಳಕೃತ್ಯದ ವಿವರಗಳು ಹೊರಬರದಂತೆ ತಡೆಗೋಡೆ ನಿರ್ಮಿಸಿದೆ.
2017ರಲ್ಲಿ ಚುನಾವಣೆಗೆ ನಿಧಿಯನ್ನು ನೀಡುವ ಬಾಂಡ್‍ಗಳ ಬಿಡುಗಡೆಗೆ ಮೊದಲು, ಹಣಕಾಸು ಸಚಿವಾಲಯ ರಿಸರ್ವ್ ಬ್ಯಾಂಕ್‍ನ ಸಲಹೆ ಕೋರಿತ್ತು. ಈ ಬಾಂಡ್‍ಗಳ ಪ್ರಸ್ತಾವನೆಗೆ ರಿಸರ್ವ್ ಬ್ಯಾಂಕ್ ಗಂಭೀರ ವಿರೋಧ ವ್ಯಕ್ತಪಡಿಸಿತ್ತು. ಈ ಚುನಾವಣೆ ಬಾಂಡ್‍ಗಳನ್ನು ಸರ್ಕಾರ ಬಿಡುಗಡೆ ಮಾಡುವುದಾದರೆ ಹಣಕಾಸು ದುವ್ರ್ಯವಹಾರಕ್ಕೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಮತ್ತು ಬಾಂಡುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಿಡುಗಡೆ ಮಾಡಿದರೆ ಭಾರತೀಯ ಬ್ಯಾಂಕುಗಳ ಬಗೆಗೆ ನಂಬಿಕೆ ಕಳೆದುಹೋಗುತ್ತದೆ ಎಂದು ರಿಸರ್ವ್ ಬ್ಯಾಂಕ್ ಎಚ್ಚರಿಕೆ ನೀಡಿತ್ತು.

“ಈ ಬಾಂಡುಗಳ bearer bond ಜಗಳು. ಅವುಗಳನ್ನು ಬೇರೆಯವರಿಗೆ ವರ್ಗಾವಣೆ ಮಾಡಲೂ ಅವಕಾಶ ಕಲ್ಪಿಸಿರುವುದರಿಂದ ಯಾರು ಹಣವನ್ನು ನೀಡಿದ್ದಾರೆ ಎಂಬುದು ಪತ್ತೆಯಾಗುವುದೇ ಇಲ್ಲ” ಎಂದು ರಿಸರ್ವ್ ಬ್ಯಾಂಕ್ ತಿಳಿಸಿತು. ಆದರೆ ಸರ್ಕಾರ ಆರ್‍ಬಿಐನ ಎಚ್ಚರಿಕೆಯ ಮಾತುಗಳನ್ನು ಗಮನಕ್ಕೆ ತೆಗೆದುಕೊಳ್ಳಲೇ ಇಲ್ಲ. ಆಗಿನ ಕಂದಾಯ ವಿಭಾಗದ ಕಾರ್ಯದರ್ಶಿಯಾಗಿದ್ದ ಹಸಮುಖ್ ಅಧಿಯ “ರಿಸರ್ವ ಬ್ಯಾಂಕ್ ಸರ್ಕಾರದ ಕಾರ್ಯತಂತ್ರವನ್ನು ಅರ್ಥಮಾಡಿಕೊಂಡಿಲ್ಲ. ಅಲ್ಲದೆ ಫೈನಾನ್ಸ್ ಬಿಲ್ ಅಚ್ಚಾದ ಮೇಲೆ ಈ ಸಲಹೆ ನೀಡಿದೆ. ಈ ವಿಳಂಬ ಸಲಹೆಯನ್ನು ಪರಿಗಣಿಸಲು ಸಾಧ್ಯವಿಲ್ಲ” ಎಂದು ಹೇಳಿ ಆರ್.ಬಿ.ಐ ಸಲಹೆಯನ್ನು ತಳ್ಳಿಹಾಕಿದ್ದರು. 2017 ಫೆಬ್ರವರಿ ಮೊದಲ ತಾರೀಖು ಆಗಿನ ಅರ್ಥಸಚಿವರಾದ ಜೈಟ್ಲಿಯವರು ತಮ್ಮ ಬಜೆಟ್ ಭಾಷಣದಲ್ಲಿ ಚುನಾವಣೆ ಬಾಂಡ್‍ಗಳನ್ನು ಸೃಷ್ಟಿಮಾಡುವ ಪ್ರಸ್ತಾಪ ಮಾಡಿದರು ಹಾಗೂ ರಾಜಕೀಯ ಪಕ್ಷಗಳಿಗೆ ಹಣ ಒದಗಿಸುವ ಪದ್ಧತಿಯಲ್ಲಿ ನುಸುಳಿರುವ ಲೋಪದೋಷಗಳನ್ನು ಅಳಿಸಿಹಾಕುವ ಕಾರಣಕ್ಕಾಗಿ ಈ ಆರ್.ಬಿ.ಐ ತಿದ್ದುಪಡಿ ಬಿಲ್ ಮಾಡಿರುವುದಾಗಿ ಹೇಳಿದರು.
ಅದಾದನಂತರ ಚುನಾವಣೆ ಆಯೋಗವು ಕೂಡಾ ಮೇ 2017ರಲ್ಲಿ ಕಾನೂನು ಇಲಾಖೆ ಮಂತ್ರಾಲಯಕ್ಕೆ ಚುನಾವಣೆ ಬಾಂಡ್ ಬಿಡುಗಡೆ ಮಾಡುವ ಬಗೆಗೆ ಎಚ್ಚರಿಕೆ ನೀಡಿತ್ತು. 2017 ಮೇ 26ರ ಕಾಗದದಲ್ಲಿ “Representation of People Actನ 29 ಸಿ ವಿಧಿಗೆ ಸರ್ಕಾರ ಮಾಡಿರುವ ತಿದ್ದುಪಡಿ ಸರಿಯಲ್ಲ, ಇದು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವವರ ಹೆಸರುಗಳನ್ನು ಮುಚ್ಚಿಡುವ ಹುನ್ನಾರ” ಎಂದು ಪತ್ರ ಬರೆಯಿತು. ಈ ತಿದ್ದುಪಡಿಯನ್ನು ವಾಪಾಸ್ ಪಡೆಯಿರಿ ಎಂಬ ಸಲಹೆಯನ್ನೂ ನೀಡಿತ್ತು.

ಚುನಾವಣೆ ಆಯೋಗದ ಸೂಚನೆಯನ್ನು ಧಿಕ್ಕರಿಸಿದ ಹಣಕಾಸು ಇಲಾಖೆಯ ರಾಜ್ಯ ಖಾತೆ ಸಚಿವ ಪೊನ್ ರಾಧಾಕೃಷ್ಣನ್ 2018ರ ಚಳಿಗಾಲದ ಪಾರ್ಲಿಮೆಂಟ್ ಅಧಿವೇಶನದಲ್ಲಿ ‘ಈ ವಿಚಾರದಲ್ಲಿ ಚುನಾವಣಾ ಆಯೋಗ ಯಾವುದೇ ಸೂಚನೆ ನೀಡಿಲ್ಲ’ ಎಂದು ತಿಳಿಸಿದರು. Breach of privilege notice ನೀಡಿದಾಗ ಸಚಿವರು ಪಾರ್ಲಿಮೆಂಟಿನ ದಾರಿತಪ್ಪಿಸಲು ಯತ್ನಿಸುತ್ತಿದ್ದಾರೆ ಎಂಬುದು ಬಯಲಿಗೆ ಬಂದಿತ್ತು.

ಮಾರ್ಚ್ 2018ರವರೆಗೆ 6128 ಕೋಟಿ ರೂ. ಮೌಲ್ಯದ ಚುನಾವಣೆ ಬಾಂಡ್‍ಗಳು ಮಾರಾಟವಾಗಿವೆ. ಇದರಲ್ಲಿ ಶೇ.95ರಷ್ಟು ಹಣ ಬಿಜೆಪಿಗೇ ಪಾವತಿಯಾಗಿದೆ. ಚುನಾವಣೆ ಬಾಂಡ್‍ಗಳು ಒಂದು ಸಾವಿರ, 10 ಸಾವಿರ, ಒಂದು ಲಕ್ಷ, 10 ಲಕ್ಷ, ಒಂದು ಕೋಟಿ ಮೌಲ್ಯಗಳ ಮುಖಬೆಲೆಯಲ್ಲಿ ಬಿಡುಗಡೆ ಆಗಿವೆ. ಭಾರತೀಯ ಸ್ಟೇಟ್ ಬ್ಯಾಂಕ್ ಮಾತ್ರ ಈ ಬಾಂಡ್‍ಗಳನ್ನು ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ಈ ಬಾಂಡುಗಳನ್ನು ವರ್ಷದಲ್ಲಿ 4 ಸಾರಿ ಮಾತ್ರ ತಲಾ 8-10 ದಿನಗಳ ಅಲ್ಪಾವಧಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಆದರೆ ದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುವ ವರ್ಷದಲ್ಲಿ ಮಾತ್ರ ಈ ನಾಲ್ಕು ಅವಧಿಯಲ್ಲದೆ 30 ದಿನಗಳ ಒಂದು ದೀರ್ಘಾವಧಿಯ ವಿಶೇಷ ಮಾರಾಟದ ಅವಕಾಶ ಕಲ್ಪಿಸಲಾಗುವುದು. ಬಾಂಡ್ ಕೊಂಡವರು ಅದನ್ನು ತಮಗೆ ಇಷ್ಟಬಂದ ರಾಜಕೀಯ ಪಕ್ಷಕ್ಕೆ ನೀಡಬಹುದು. ಹಿಂದಿನ ಚುನಾವಣೆಯಲ್ಲಿ ಚಲಾವಣೆಯಾದ ಒಟ್ಟು ಮತಗಳಲ್ಲಿ ಕನಿಷ್ಠ ಶೇ.1ಕ್ಕಿಂತ ಹೆಚ್ಚು ಮತಗಳಿಸಿದ ಪಕ್ಷಗಳಿಗೆ ಮಾತ್ರ ಈ ಬಾಂಡ್‍ಗಳನ್ನು ನೀಡಬಹುದಾಗಿದೆ. ಬ್ಯಾಂಕ್‍ನಿಂದ ಬಾಂಡ್ ಕೊಂಡುಕೊಂಡ ಹದಿನೈದು ದಿನಗಳ ಒಳಗಾಗಿ ಅದನ್ನು ನಗದು ಮಾಡಿಕೊಳ್ಳಬೇಕು. ಅಂದರೆ ಅಷ್ಟರೊಳಗೆ ಕೊಂಡವರು, ಅದನ್ನು ತಮಗಿಷ್ಟ ಬಂದ ಪಕ್ಷಕ್ಕೆ ಕೊಟ್ಟು, ಆ ಪಕ್ಷ ಅದನ್ನು ಕ್ಯಾಶ್ ಮಾಡಿಕೊಳ್ಳಬೇಕು.
ಈ ಬಾಂಡ್‍ಗಳಲ್ಲಿ ಕ್ರಮಾಂಕ ಸೂಚಿಸಬಾರದೆಂದು ಬಿಜೆಪಿ ಪಕ್ಷ ಸರ್ಕಾರಕ್ಕೆ ಸೂಚಿಸಿತ್ತು. ಬಾಂಡ್‍ಗಳಿಗೆ ಕ್ರಮಸಂಖ್ಯೆ ಹಾಕದಿದ್ದರೆ ಯಾವ ಮೊತ್ತದ ಬಾಂಡ್ ಯಾರ ಕೈಸೇರಿತು ಎಂಬುದು ಗೊತ್ತಾಗುವುದಿಲ್ಲ. ಗೊತ್ತಾಗಬಾರದು ಎಂಬುದೇ ಉದ್ದೇಶ. ಈ ಮೊದಲು ಬೇರೆ ದೇಶದವರು ದೇಣಿಗೆ ಕೊಡಲು ನಿಷೇಧವಿತ್ತು. ಈಗ ಬೇರೆ ದೇಶದವರು ದೇಣಿಗೆ ಕೊಟ್ಟರೂ ಅದರಿಂದ ನಮ್ಮ ಪಕ್ಷಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಬಿಜೆಪಿ ಸರ್ಕಾರ ಸೂಚಿಸಿತ್ತು.

ರಾಜಕೀಯ ಪಕ್ಷಗಳಿಗೆ ತಾವಾಗಿಯೇ ಯಾರೂ ಚುನಾವಣೆಗೆ ಹಣ ನೀಡುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಕಾರ್ಪೊರೇಟ್ ಸಂಸ್ಥೆಗಳಂತೂ ತಮಗೆ ಲಾಭ ಮಾಡಿಕೊಡುವವರಿಗೆ ದೇಣಿಗೆ ಕೂಡುವರೆಂಬುದೂ ಗುಟ್ಟಿನ ವಿಚಾರವೇನಲ್ಲ. ತನಿಖಾ ಇಲಾಖೆ ಹಾಗೂ Regulatory bodyಜಥಿಗಳು ಸರ್ಕಾರವನ್ನು ಬಳಸಿಕೊಂಡು ಕಾರ್ಪೊರೇಟ್ ಕಂಪೆನಿಗಳನ್ನು ಹಣ್ಣು ಮಾಡುವ ವ್ಯವಸ್ಥೆ ಇದ್ದೇಇದೆ. ಆ ಮೂಲಕ ಚುನಾವಣೆಗೆ ಹಣ ತಾನಾಗಿಯೇ ಬಂದುಬೀಳುತ್ತದೆ. ಈ ಸೌಲಭ್ಯ ದೊರೆಯುವುದು ಆಡಳಿತ ಪಕ್ಷಕ್ಕೆ ಮಾತ್ರ.
`ಕಾಮನ್ ಕಾಸ್’ ಸಂಸ್ಥೆ ಸರ್ವೋಚ್ಚ ನ್ಯಾಯಾಲಯದಲ್ಲಿ ಚುನಾವಣೆ ಬಾಂಡ್ ವಿಚಾರವಾಗಿ ಖಟ್ಲೆ ಹೂಡಿದೆ. ರಾಜಕೀಯ ಪಕ್ಷಗಳು ತಮಗೆ ಸಂದಾಯವಾಗಿರುವ ಎಲೆಕ್ಟೋರಲ್ ಬಾಂಡುಗಳ ವಿವರಗಳನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿ ಎಂದು ನಿರ್ದೇಶನ ನೀಡಿತ್ತು. ಈ ನಡುವೆ ಚುನಾವಣೆ ಆಯೋಗ ಕೂಡ ನ್ಯಾಯಾಲಯಕ್ಕೆ ಚುನಾವಣಾ ಬಾಂಡ್ ಬಿಡುಗಡೆಯನ್ನು ಪ್ರಶ್ನಿಸಿ ಒಂದು ಅಫಿಡವಿಟ್ ಸಲ್ಲಿಸಿದೆ.

ಸರ್ಕಾರ ಭ್ರಷ್ಟಾಚಾರವನ್ನು ಈ ಕಾನೂನುಬದ್ಧವಾಗಿ ಜಾರಿಗೆ ತಂದಿರುವ ಈ ಚುನಾವಣೆ ಬಾಂಡನ್ನು ಹಿಂತೆಗೆಯಬೇಕೆಂದು ಒತ್ತಾಯ ತರಬೇಕಿದೆ. ರಾಜಕೀಯ ಪಕ್ಷಗಳಿಗೆ ದೇಣಿಗೆ ಕೊಡುವ ಕ್ರಮವನ್ನು ಪರಿಶುದ್ಧಗೊಳಿಸುತ್ತೇನೆ ಎಂದೇಳಿದ್ದ ಮೋದಿ ಸರ್ಕಾರ, ಚುನಾವಣಾ ಬಾಂಡ್ ವಿತರಣೆ ಮಾಡುವ ಮೂಲಕ ಕಾರ್ಪೊರೇಟ್ ಕಂಪನಿಗಳ ಕಪ್ಪುಹಣ ಆಡಳಿತ ನಡೆಸುವವರ ಕೈಸೇರುವಂತೆ ವ್ಯವಸ್ಥೆ ಮಾಡಿಕೊಂಡಿದೆ. ತಮ್ಮ ಬಳಿ ಇರುವ ಬ್ಲ್ಯಾಕ್‍ಮನಿಯನ್ನು ಸರ್ಕಾರದ ಚುಕ್ಕಾಣಿ ಹಿಡಿದವರಿಗೆ ಒಪ್ಪಿಸುವ ಕಾರ್ಪೊರೇಟ್ ಕಂಪನಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಅನುಕೂಲವಾಗುತ್ತದೆ. ದೇಣಿಗೆ ಪಡೆದ ಋಣಕ್ಕೆ ಪ್ರತಿಯಾಗಿ ಸರ್ಕಾರದ ಗದ್ದುಗೆ ಏರುವ ರಾಜಕೀಯ ಪಕ್ಷವೂ ಅಂತಹ ಕಂಪನಿಗಳ ಲಾಭಕೋರತನಕ್ಕೆ ಬೆಂಬಲ ನೀಡಬೇಕಾಗುತ್ತದೆ. ಕೊನೆಗೆ ಕತ್ತರಿ ಬೀಳುವುದು ಶ್ರೀಸಾಮಾನ್ಯನ ಜೇಬಿಗೆ!

ಭ್ರಷ್ಟಾಚಾರವನ್ನು ಮಾನ್ಯಮಾಡುವ ಈ ಅನೀತಿಯನ್ನು ಮನಗಂಡು ಸರ್ಕಾರ ಈ ಕೂಡಲೇ ಚುನಾವಣಾ ಬಾಂಡ್ ಸ್ಕೀಮನ್ನು ರದ್ದುಗೊಳಿಸುವಂತೆ ಒತ್ತಾಯಿಸುವುದು ಇಂದಿನ ತುರ್ತಾಗಿದೆ. ಇಲ್ಲವಾದಲ್ಲಿ ಚುನಾವಣೆಗಳಲ್ಲಿ ಸಿದ್ಧಾಂತ, ಜನಪರ ಚಿಂತನೆಗಳು ಶಾಶ್ವತವಾಗಿ ಮೂಲೆಗುಂಪಾಗಿ ಹಣವೇ ಫಲಿತಾಂಶವನ್ನು ಖಾಯಮ್ಮಾಗಿ ನಿರ್ಧರಿಸಲಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಾಗಲಕೋಟೆಯ ವಿವಿಧ ಪ್ರದೇಶಗಳಲ್ಲಿ ಎಸ್‌ಐಆರ್‌ ವಿರುದ್ಧ ಜನಜಾಗೃತಿ ಜಾಥಾ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರುದ್ಧ ಬಾಗಲಕೋಟೆ ನಗರದ ವಿವಿಧ ಭಾಗಗಳಲ್ಲಿ ಭಾನುವಾರ (ಜೂ.14) ಜಾಗೃತಿ ಜಾಥಾ ನಡೆಯಿತು. ನವನಗರದ ವಿದ್ಯಾಗಿರಿ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜು ಸರ್ಕಲ್‌ನಿಂದ ಪ್ರಾರಂಭವಾದ ಜಾಥಾ...

SIR ವಿರೋಧಿ ಜನಜಾಗೃತಿ ಜಾಥಾ: ಕಾಫಿ ನಾಡು ಚಿಕ್ಕಮಗಳೂರಲ್ಲಿ ಅದ್ದೂರಿ ಸ್ವಾಗತ

ಚಿಕ್ಕಮಗಳೂರು: ರಾಜ್ಯಾದ್ಯಂತ ಐದು ವಿಭಾಗಗಳಲ್ಲಿ ಸಂಚರಿಸುತ್ತಿರುವ 'SIR ವಿರೋಧಿ ಜನಜಾಗೃತಿ ಜಾಥಾ'ದ 3ನೇ ಮಾರ್ಗದ ತಂಡಕ್ಕೆ ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಅದ್ದೂರಿ ಸ್ವಾಗತ ದೊರೆಯಿತು. ಭಾನುವಾರ ಬೆಳಗ್ಗೆ ಜಿಲ್ಲೆಯ ಕೊಪ್ಪ ತಾಲ್ಲೂಕಿಗೆ ಆಗಮಿಸಿದ ಜಾಥಾ...

ಚಿಕ್ಕಮಗಳೂರಿನಲ್ಲಿ ಎಸ್‌ಐಆರ್ (SIR) ವಿರೋಧಿ ಜಾಥಾ: ಮತದಾರರ ಹಕ್ಕು ಕಸಿಯುವ ಹುನ್ನಾರದ ವಿರುದ್ಧ ಆಕ್ರೋಶ

ಭಾರತ ಚುನಾವಣಾ ಆಯೋಗವು ಜಾರಿಗೆ ತಂದಿರುವ ವಿಶೇಷ ತೀವ್ರ ಪರಿಷ್ಕರಣೆ (SIR - Special Intensive Revision) ಪ್ರಕ್ರಿಯೆಯಲ್ಲಿ ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಜಾಗ್ರತೆ ವಹಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ....

ಮಂಗಳೂರು: ಚುನಾವಣಾ ಆಯೋಗ ಕೇಂದ್ರ ಸರ್ಕಾರದ ಮುಖವಾಣಿಯಾಗಿ ಕಾರ್ಯನಿರ್ವಹಿಸುತ್ತಿದೆ: ವಿ.ಎಸ್. ಶ್ರೀಧರ್ 

ರಾಜ್ಯದ ಆರು ಜಿಲ್ಲೆಗಳಲ್ಲಿ ಪ್ರಗತಿಪರ ಸಂಘಟನೆಗಳು, ಎದ್ದೇಳು ಕರ್ನಾಟಕ ಹಾಗೂ ಜಾತ್ಯತೀತ ಪಕ್ಷಗಳ ಒಕ್ಕೂಟವಾದ ‘ಎಸ್‌ಐಆರ್ ವಿರೋಧಿ ಕರ್ನಾಟಕ’ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿರುವ ಎಸ್‌ಐಆರ್ ಜನಜಾಗೃತಿ ಜಾಥಾದ ಭಾಗವಾಗಿ ಇಂದು (ಜೂನ್-14) ಮಂಗಳೂರಿನಲ್ಲಿ ಸಭೆ...

ಬಿಸಿಲ ನಾಡು ಕಲಬುರಗಿಯಲ್ಲಿ ಮೊಳಗಿದ SIR ವಿರೋಧಿ ಘೋಷಣೆ.

ಕೇಂದ್ರ ಚುನಾವಣಾ ಆಯೋಗ ಜಾರಿಗೆ ತಂದಿರುವ ವಿಶೇಷ ತೀವ್ರ ಮತ ಪರಿಷ್ಕರಣೆ SIR ಅನ್ನು ಕರ್ನಾಟಕದಲ್ಲಿ ಜಾರಿ ಮಾಡಬಾರದು ಎಂದು ಆಗ್ರಹಿಸಿ ಕರ್ನಾಟಕದಾದ್ಯಂತ ಎದ್ದೇಳು ಕರ್ನಾಟಕ ಹಾಗಾ SIR ವಿರೋಧಿ ಕರ್ನಾಟಕ ವೇದಿಕೆಯು...

ವಿಜಯಪುರ : ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾಗೆ ಚಾಲನೆ

ರಾಜ್ಯದ ಆರು ಜಿಲ್ಲೆಗಳಲ್ಲಿ ನಡೆಯಲಿರುವ ಎಸ್‌ಐಆರ್‌ ವಿರೋಧಿ ಜನಜಾಗೃತಿ ಜಾಥಾಗೆ ವಿಜಯಪುರದ ಅಂಬೇಡ್ಕರ್ ವೃತ್ತದಲ್ಲಿ ಶನಿವಾರ (ಜೂ.13) ಸಂಜೆ ಚಾಲನೆ ದೊರೆಯಿತು. ಜಾಥಾವನ್ನು ಉದ್ಘಾಟಿಸಿ ಮಾತನಾಡಿದ ಅಹಿಂದ ಮುಖಂಡ ಎಸ್ ಎಂ ಪಾಟೀಲ...

ಬಸವಣ್ಣನ ಕಲ್ಯಾಣದಲ್ಲಿ SIR ವಿರೋಧಿ ಜಾಥಾ.

ಬಸವಕಲ್ಯಾಣSIR ವಿರೋಧಿಸಿ ಕರ್ನಾಟಕದಾದ್ಯಂತ ನಡೆಯುತ್ತಿರುವ ಜಾಗೃತಿ ಜಾತಾವು ಬಸವಕಲ್ಯಾಣಕ್ಕೆ ತಲುಪಿತು. ಬಸವಕಲ್ಯಾಣದ ಅಂಬೇಡ್ಕರ್ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಜನರು ಜನವಿರೋಧಿ SIR ನ್ನೂ ವಿರೋಧಿಸಿ ನಿರ್ಣಯ ಕೈಗೊಂಡರು. ಸಭೆಯಲ್ಲಿ ಮಾತನಾಡಿದ ಜಾಥಾದ ಮುಖ್ಯಸ್ಥ...

ಸಂಸದ ಬಿ.ವೈ ರಾಘವೇಂದ್ರ ನಡೆಸುತ್ತಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ SIR ವಿರೋಧಿ ಜನಜಾಗೃತಿ ಜಾಥಾ ಕರಪತ್ರ ಹಂಚಿದ ಕಾರ್ಯಕರ್ತರು

ಶಿವಮೊಗ್ಗ : ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಅವರು ಜಿಲ್ಲೆಯ ಸಾಗರ ತಾಲ್ಲೂಕಿನ ರೈಲು ನಿಲ್ದಾಣದಲ್ಲಿ ಕುಂದುಕೊರತೆಗಳ ಸಭೆ ನಡೆಸುತ್ತಿದ್ದ ವೇಳೆ ಎಸ್‌ಐಆರ್ ವಿರುದ್ಧ ’ಎದ್ದೇಳು ಕರ್ನಾಟಕ’ ಮತ್ತು ’ಎಸ್‌ಐಆರ್ ವಿರೋಧಿ ಒಕ್ಕೂಟ’ದ ಮುಖಂಡರು...

ಬೀದರ್‌ ನಿಂದ ಶುರವಾದ SIR ವಿರೋಧಿ ಜನಜಾಗೃತಿ ಜಾಥಾ

SIR ವಿರೋಧಿ ಕರ್ನಾಟಕ ಹಾಗೂ ಎದ್ದೇಳು ಕರ್ನಾಟಕವು ಕರ್ನಾಟಕದಲ್ಲಿ SIR ಜಾರಿಯನ್ನು ವಿರೋಧಿಸಿ ರಾಜ್ಯದ 5 ಸ್ಥಳಗಳಿಂದ ಜನಜಾಗೃತಿ ಜಾಥಾ ಆಯೋಜಿಸಿದೆ. ಇಂದು ಬೀದರ್‌ ನ ಅಂಬೇಡ್ಕರ್‌ ಸರ್ಕಲ್‌ ನಿಂದ ಆರಂಭವಾದ ಜಾಥಾವು...

ಒಬ್ಬರೇ ಒಬ್ಬ ಅರ್ಹ ಮತದಾರರ ಹೊರಗಿಡುವುದನ್ನು ಒಪ್ಪುವುದಿಲ್ಲ : ಯೂಸುಫ್ ಕನ್ನಿ

ಮತದಾರರ ಪಟ್ಟಿಯ ಪರಿಷ್ಕರಣೆ ಮಾಡಲಿ, ಆದರೆ, ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬೇಡವೇ ಬೇಡ. ಎಸ್‌ಐಆರ್‌ ಮೂಲಕ ಒಬ್ಬರೇ ಒಬ್ಬರು ಅರ್ಹ ಮತದಾರರನ್ನೂ ಪಟ್ಟಿಯಿಂದ ಹೊರಗಿಡುವುದನ್ನು ನಾವು ಒಪ್ಪುವುದಿಲ್ಲ ಎಂದು ಜಮಾಅತೆ ಇಸ್ಲಾಮಿ...