Homeರಾಜಕೀಯಕರಾವಳಿ ಪೊಲಿಟಿಕ್ಸ್: ಬಿಜೆಪಿಯಲ್ಲಿ ಬಂಟರ ದರ್ಬಾರ್, ಬಿಲ್ಲವರು ಬರ್ಬಾದ್!!

ಕರಾವಳಿ ಪೊಲಿಟಿಕ್ಸ್: ಬಿಜೆಪಿಯಲ್ಲಿ ಬಂಟರ ದರ್ಬಾರ್, ಬಿಲ್ಲವರು ಬರ್ಬಾದ್!!

- Advertisement -
- Advertisement -
ನಹುಷ |
ಅವಿಭಜಿತ ದಕ್ಷಿಣ ಕನ್ನಡದ ಬಿಜೆಪಿ ಬಲಾಢ್ಯ ಬಂಟರ ಮತ್ತು  ಬೂಟಾಟಿಕೆಯ  ಬ್ರಾಹ್ಮಣರ ಪ್ರೈವೇಟ್  ಲಿಮಿಟೆಡ್ ಎಂಬುದನ್ನು  ಮುಗಿದ ಅಸೆಂಬ್ಲಿ ಚುನಾವಣೆ  ನಿಸ್ಸಂಶಯವಾಗಿ  ಸಾಬೀತುಮಾಡಿದೆ!  ಬಹುಸಂಖ್ಯಾತ ಬಿಲ್ಲವರು  ಮತ್ತು ಮೊಗವೀರ, ಕೊಟ್ಟಾರಿ,  ಕುಲಾಲ, ದೇವಾಡಿಗ,  ಕೋಟೆ ಕ್ಷತ್ರಿಯ, ಗಾಣಿಗ,  ಗಟ್ಟಿ,  ನಲಿಕೆ,  ಮರಾಠಿ….. ಮುಂತಾದ ಸಣ್ಣ-ಪುಟ್ಟ ಜಾತಿಯ  ಮುಗ್ಧ ಶೂದ್ರರನ್ನು ಹಿಂದೂತ್ವದ ರಕ್ತಪಿಪಾಸು ಘನಘೋರ ಯುದ್ಧಕ್ಕೆ ಕಾಲಾಳುಗಳಂತೆ ಬಳಸಿ ಬಲಿಹಾಕುವ ಸಂಘ ಪರಿವಾರದ ಹಿಂದೂತ್ವದ  ಸೂತ್ರಧಾರರು ಅಧಿಕಾರ,  ಸುಖ, ಸೌಭಾಗ್ಯಗಳನ್ನು  ಜನಿವಾರಿಗಳಿಗೆ, ಪಾಳೆಗಾರಿ ಬಂಟರ ತುಂಟರಿಗಷ್ಟೇ  ಸೀಮಿತ ಮಾಡಿಕೊಂಡಿದ್ದಾರೆ.
ಕರಾವಳಿಯಲ್ಲಿ ಸರಿಸುಮಾರು ಶೇ.24ರಷ್ಟು ಮುಸ್ಲಿಮರಿದ್ದಾರೆ. ಅವರಷ್ಟೇ ಬಿಲ್ಲವರಿದ್ದಾರೆ. ಈ  ಬಿಲ್ಲವರ ಜತೆ ಇತರ  ಹಿಂದುಳಿದ  ಜನಾಂಗದ ಸಣ್ಣಸಣ್ಣ ಜಾತಿಗಳನ್ನು  ಸೇರಿಸಿದರೆ ಶೇಕಡಾ ಹತ್ತರಷ್ಟಿರುವ  ಬಂಟರು  ಮತ್ತು ಅದಕ್ಕಿಂತ ಕಡಿಮೆ ಇರುವ  ಬ್ರಾಹ್ಮಣರು ಯಾವ ಲೆಕ್ಕಕ್ಕೂ  ಇಲ್ಲ. ಆದರೆ ತೋಳ್ಬಲದ  ಬಂಟರು ಮತ್ತು ತಾಂತ್ರಿಕ ವಿಪ್ರರು ಹಿಂದುಳಿದ  ವರ್ಗದವರನ್ನ  “ಮಂಗ”  ಮಾಡಿ ಬಿಜೆಪಿಯಲ್ಲಿ ಬೆಣ್ಣೆಯನ್ನು ತಿನ್ನುತ್ತಿದ್ದಾರೆ.  ಕರಾವಳಿಗೆ ಹಿಂದೂತ್ವದ ಅಮಲೇರಿರುವುದು ಕರಾರುವಾಕ್ಕಾಗಿ  ಗ್ರಹಿಸಿದ್ದ ಸಂಸದ  ನಳಿನ್ ಕುಮಾರ್ ಕುಟೀಲು  ಎಂಬ  ಬೆಂಕಿ ನವಾಬ  ಮತ್ತು  ವಿಶ್ವ ಬಂಟರ   ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಲಾಡಿ ಸೇರಿಕೊಂಡು  ಸ್ವ-ಜಾತಿಯ ಹೆಚ್ಚು ಕ್ಯಾಂಡಿಡೇಟ್‍ಗಳನ್ನು ಬಿಜೆಪಿಯಿಂದ  ಅಖಾಡಕ್ಕೆ  ಇಳಿಸುವಂತೆ  ಷಡ್ಯಂತ್ರ ಹೆಣೆದಿದ್ದರು.  ಒಂದು  ಹಂತದಲ್ಲಿ ನಳಿನ್, “ಗುರು” ಕಲ್ಲಡ್ಕ ಭಟ್ಟರಿಗೇ ರೋಪು ಹಾಕಿ  ಜಾತಿಬಂಧುಗಳಿಗೆ ಟಿಕೆಟ್ ಕೊಡಿಸಲು ಹಾರಾಡಿದ್ದರು.  ಬೆಚ್ಚಿಬಿದ್ದ ಕಲ್ಲಡ್ಕ ಕಟೀಲ್‍ಗೆ ಶರಣಾಗಿ ಹೋಗಿದ್ದರು.
ಕಲ್ಲಡ್ಕ ಭಟ್

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ  12  ಸಾಮಾನ್ಯ ಕ್ಷೇತ್ರಗಳ ಪೈಕಿ ಆರರಲ್ಲಿ ಬಂಟರ ಬಹಾದ್ದೂರರಿಗೆ ಟಿಕೆಟ್ ಕೊಡಿಸಲು  ನಳಿನ್-ಮಾಲಾಡಿ ರೈ  ಯಶಸ್ವಿಯಾದರು. ಬೈಂದೂರಲ್ಲಿ  ಸುಕುಮಾರ  ಶಟ್ಟಿ,  ಕುಂದಾಪುರದಲ್ಲಿ ಹಾಲಾಡಿ  ಶ್ರೀನಿವಾಸ್  ಶೆಟ್ಟಿ,  ಸುರತ್ಕಲ್‍ನಲ್ಲಿ ಡಾ|| ಭರತ್  ಶೆಟ್ಟಿ, ಉಳ್ಳಾಲದಲ್ಲಿ  ಸಂತೋಷ  ಶೆಟ್ಟಿ,   ಬಂಟ್ವಾಳದಲ್ಲಿ ರಾಜೇಶ್ ನಾಯ್ಕ್, ಬೆಳ್ತಂಗಡಿಯಲ್ಲಿ ಹರೀಶ್ ಪೂಂಜಾ ಎಂಬ  ಲಾಟ್‍ಪೂಟ್  ಬಂಟರಿಗೆ  ಬಿಜೆಪಿ ಹೈಕಮಾಂಡ್ ಕಲ್ಲಡ್ಕ ಭಟ್ಟರಿಗೆ ಟಿಕೆಟ್ ಕೊಡಬೇಕಾಗಿ ಬಂತು! 23  ಹಿಂದೂಗಳನ್ನು  ಸಾಬರು ಕಾಂಗ್ರೆಸ್‍ನ  ಸಿದ್ದು  ಸರಕಾರದ  ಸಹಕಾರದಲ್ಲಿ ಕೊಂದು ಹಾಕಿದರೆಂಬ ನಳಿನ್, ಅನಂತ್‍ಕುಮಾರ್ ಹೆಗಡೆ, ಶೋಭಾ, ಕಲ್ಲಡ್ಕ ಮತ್ತವರ ಬಾಸ್‍ಗಳಾದ ಆದಿತ್ಯನಾಥ,  ಅಮಿತ್ ಶಾಗಳ  ಬೊಬ್ಬೆಗೆ ಕರಾವಳಿಯ  ಬಿಲ್ಲವ  ಮತ್ತಿತರ ಹಿಂದುಳಿದ ವರ್ಗದ ಜನರು ಬ್ರೈನ್‍ವಾಶ್ ಆಗಿದ್ದು ಆರರಲ್ಲಿ ಐದು ಬಂಟರು  ಸಾರಾಸಗಟಾಗಿ  ಶಾಸಕರಾಗಲು  ನೆರವಾಯ್ತು.  ಇದನ್ನು ಮೊದಲೇ ಅಂದಾಜಿಸಿದ್ದ  ನಳಿನ್ ಮತ್ತು ಮಾಲಾಡಿಗುತ್ತು ರೈ,  ಈಗ  ಕರಾವಳಿ ಬಿಜೆಪಿಯಲ್ಲಿ ಬಂಟರ ಸಾಮ್ರಾಜ್ಯ  ಸ್ಥಾಪಿಸಿ ಅಟ್ಟಹಾಸಗೈಯ್ಯುತ್ತಿದ್ದಾರೆ.

ಟಿಕೆಟ್  ಹಂಚಿಕೆಯಾದಾಗ  ಬಿಜೆಪಿಯ ಬಿಲ್ಲವ  ಮುಂದಾಳುಗಳು  ಬೇಸರ ಮಾಡಿಕೊಂಡಿದ್ದರು.  ಇದು ಬಿಜೆಪಿಗೆ ಉಲ್ಟಾ  ಹೊಡೆದು ಕಾಂಗ್ರೆಸ್‍ಗೆ  ಅನುಕೂಲ  ಮಾಡಿಕೊಡುತ್ತದೆಂದು  ರಾಜಕೀಯ  ಪಂಡಿತರು ತರ್ಕ  ಮಾಡಿದ್ದರು.  ದುರಂತವೆಂದರೆ  ಜನವಾರಿಗಳ  ಮತ್ತು  ಬಂಟರ  ನಳಿನ್‍ನ  ಹಿಂದೂತ್ವದ  ಹೋರಾಟದಲ್ಲಿ ಹೆಚ್ಚು  ಹಾನಿಗೊಳಗಾಗಿದ್ದಲ್ಲದೇ  ಜೀವಬಲಿ ಕೊಡಬೇಕಾಗಿ ಬಂದಿದ್ದ  ಬಿಲ್ಲವರಿಗೆ ತಮಗಾದ ಅನ್ಯಾಯ, ಮೋಸ, ವಂಚನೆ ಅರ್ಥವೇ ಆಗಲಿಲ್ಲ. ಹೆಚ್ಚಿನ ಬಿಲ್ಲವರು ಸಂಘ  ಸರದಾರರ  ಹುಸಿ  ಹಿಂದೂತ್ವದ ಮಾತುಗಾರಿಕೆಗೆ ಮರುಳಾಗಿ ಪರಂಪರಾಗತ ಬಂಟರ ಭೂಪರಿಗೆ ಕಣ್ಮುಚ್ಚಿ ಓಟು ಒತ್ತಿದ್ದಾರೆ.  ಕಾರ್ಕಳದಲ್ಲಿ  ಗೆದ್ದ  ಬಾಬಾಬುಡನ್‍ಗಿರಿ-ದತ್ತಪೀಠ  ಭಾನ್ಗಡಿಯ ಬೈಪ್ರಾಡಕ್ಟು ಸುನೀಲ್ ಕುಮಾರ್ ಎಂಬ ಅರೆಬಿಲ್ಲವ-ಅರೆಬ್ರಾಹ್ಮಣ ಒಬ್ಬನೇ ಬಿಜಿಪಿಯ ಘೋಷಿತ  ಬಿಲ್ಲವ ಶಾಸಕ ಇಡೀ ಅವಿಭಜಿತ ದಕ್ಷಿಣ ಕನ್ನಡಕ್ಕೆ!! ಬಿಜಿಪಿ ಟಿಕೇಟ್ ದಯಪಾಲಿಸಿದ್ದ ಏಕೈಕ ಬಿಲ್ಲವ ಸುನೀಲ್‍ಕುಮಾರ.
ಪುತ್ತೂರಿನಲ್ಲಿ  ಬಿಜಿಪಿ ಅಭ್ಯರ್ಥಿಯಾಗಿದ್ದ  ಸಂಜೀವ್ ಮಡಂದೂರ್ ಎಂಬಾತ ಕೇಂದ್ರದ  ನಾಮಕಾವಸ್ಥೆ ಮಂತ್ರಿ ಸದಾನಂದಗೌಡರ ಹತ್ತಿರತ್ತಿರದ ಸಂಬಂಧಿ ಬಂಟ-ಗೌಡ ಕೋಟಾದ ಕ್ಯಾಂಡಿಡೇಟ್. ಹೀಗಾಗಿ ಬರೋಬ್ಬರಿ ಏಳು ಮಂದಿಗೆ ಬಂಟರ  ಲಾಬಿಯಿಂದಾಗಿ ಟಿಕೆಟ್ ಸಿಕ್ಕಿತ್ತು. ಮಡಂದೂರುಗೆ ಸದಾನಂದಗೌಡರಿಗಿಂತ ಸಂಸದ ನಳೀನ್ ಎಂದರೆ ಹೆಚ್ಚು ನಿಷ್ಠೆ. ಬಂಟ-ಗೌಡ ಕೋಟಾದಲ್ಲಿ ಕಮಲ ಹಿಡಿದುಕೊಂಡು ಅಖಾಡಕ್ಕೆ ಇಳಿದವರಲ್ಲಿ ಉಳ್ಳಾಲದ ಸಂತೋಷ ಶೆಟ್ಟಿ ಒಬ್ಬನ ಬಿಟ್ಟರೆ ಉಳಿದವರೆಲ್ಲರೂ   ಕೇಸರಿ ಶಾಸಕರಾಗಿದ್ದಾರೆ. ಬಂಟರ ಕ್ಯಾಂಡಿಡೇಟುಗಳನ್ನು ಗೆಲ್ಲಿಸಿಕೊಳ್ಳಲು ಸಂಸದ ನಳಿನ್  ಮತ್ತು ವಿಶ್ವ ಬಂಟರ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ  ವiಲಾಡಿ ತುಂಬ  ವ್ಯವಸ್ಥಿತ-ರಹಸ್ಯ ಕಾರ್ಯಾಚರಣೆಗೆ  ಇಳಿದಿದ್ದರು. ಹಿಂದುಳಿದ ವರ್ಗದ ಬಿಲ್ಲವರು  ಮತ್ತು ಇತರೆ ಅಮಾಯಕ ಜಾತಿ ಜನಗಳಿಗೆ  ಟೋಪಿ ಏರಿಸಿ ಸ್ವಜಾತಿ ಹುರಿಯಾಳುಗಳ  ಎಂಎಲ್‍ಎ ಮಾಡಿಕೊಳ್ಳಲು ಬಂಟರಿಗೆ ಜಾತಿ ದುರಭಿಮಾನದ ಬೂಸ್ಟ್ ಕುಡಿಸಿ ಪ್ರಚೋದಿಸಿದರು.
ಬಿಜಿಪಿ ಟಿಕೆಟ್ ಘೋಷಣೆ ಮಾಡುತ್ತಿದ್ದಂತೆಯೇ ಬಂಟರ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ  ಒಂದು ವಾಟ್ಸಪ್ ಪ್ರಕಟಣೆ ರವಾನಿಸಿದ್ದರು. ಸ್ವಜಾತಿ ಬಂಟರ   ವಲಯದಲ್ಲಿ ಹರಿದಾಡಿದ ಆ ಸಂದೇಶ “ಬಂಟತ್ವ” ಕೆರಳಿಸುವ ಒಕ್ಕಣೆಯಿಂದ ಕೂಡಿದೆ. ತಾನು ಮತ್ತು ಸಂಸದ ನಳಿನ್ ಸರದಾರ ಸೇರಿಕೊಂಡು ಬರೋಬ್ಬರಿ ಆರು ಬಂಟರು ಬಿಜೆಪಿ  ಟಿಕೆಟ್ ಪಡೆಯುವಂತೆ ಮಾಡಿದ್ದೇವೆ. ಈಗ ಇವರೆಲ್ಲರನ್ನ ಗೆಲ್ಲಿಸಿಕೊಳ್ಳುವ ಸವಾಲು  ಬಂಟರ ಮೇಲಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳು ಬಂಟರ ಮತ್ತು ಬ್ರಾಹ್ಮಣರ ನಾಡಾಗಿದ್ದು ಅದನ್ನ ಉಳಿಸಿಕೊಳ್ಳಲು ಆರೂ ಬಂಟರ ಆಯ್ಕೆಗೆ ಬಂಟರು  ಭಿನ್ನಾಭಿಪ್ರಾಯ ಮರೆತು ಬಿಜೆಪಿಗೆ ಮತ ಹಾಕುವ ಮತ್ತು ಹಾಕಿಸುವ ಕೆಲಸ  ಮಾಡಬೇಕಾಗಿದೆ. ಈ ತಂತ್ರಗಾರಿಕೆ ಹಿಂದುಳಿದ ವರ್ಗದವರಿಗೆ ತಿಳಿಯದಂತೆ ಗೌಪ್ಯವಾಗಿ ಕಾರ್ಯಾಚರಣೆ ಮಾಡಬೇಕೆಂದು ಮಲಾಡಿಗುತ್ತಾ ರೈ ಸಂದೇಶ ಕಳಿಸಿದ್ದರು.
ಬಿಜೆಪಿಯ ಆರೂ ಬಂಟ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಸ್ವಜಾತಿ ಬಾಂಧವರಿಗೆ  ಬಂಟರ ಸಂಘದ ಅಧ್ಯಕ್ಷ  ಮಲಾಡಿಗುತ್ತಾ ರೈ  ಪ್ರಚೋದಿಸಿರುವುದರ ಹಿಂದಿನ    ಮರ್ಮ ಕತೂಹಲಕಾರಿಯಾಗಿದೆ. ಸದರಿ ಆರು ಬಂಟರು ಗೆದ್ದರಷ್ಟೇ ಮುಂಬರುವ ಲೋಕಸಭಾ ಎಲೆಕ್ಷನ್‍ನಲ್ಲಿ ಉಡುಪಿ-ಚಿಕ್ಕಮಗಳೂರು ಮತ್ತು ಮಂಗಳೂರು ಪಾರ್ಲಿಮೆಂಟ್ ಕ್ಷೇತ್ರದಲ್ಲಿ  ಬಂಟರ ಜಯಪ್ರಕಾಶ್ ಹೆಗಡೆ ಹಾಗೂ ನಳಿನ್ ಕುಮಾರ್ ಕಟೀಲ್‍ಗೆ ಟಿಕೆಟ್ ಸುಲಭವಾಗಿ ದಕ್ಕುತ್ತದೆ ಎಂಬುದು ಮಲಾಡಿಗುತ್ತ ರೈ ಲೆಕ್ಕಾಚಾರ. ಆಗ ಮಾತ್ರ  ಬಂಟರ ಹಿತಾಸಕ್ತಿಯ ರಕ್ಷಣೆ ಸಾಧ್ಯವೆಂಬ ಭಾವನೆ ಬಂಟರಲ್ಲಿ ಬಿತ್ತಲು ರೈ ಮಸಲತ್ತು ಮಾಡಿದ್ದಾನೆ. ಇದರ ಹಿಂದೆ ನಳಿನ್‍ನ ಕುಟಿಲತೆ ಅಡಗಿದೆ ಎಂಬುದು ಕಟ್ಟರ್ ಚೆಡ್ಡಿಗಳೇ ಈಗ ಪಿಸುಗುಡುತ್ತಿದ್ದಾರೆ. ನಳಿನ್‍ನ ಕಂಡರೆ  ಮೂಗುಮುರಿಯುವ ಕಲ್ಲಡ್ಕ ಕಮಾಂಡ್ ಕೂಡ ಈಗ ಬಂಟರ ಅಧ್ಯಕ್ಷನ “ವಾಟ್ಸ್‍ಆಪ್ ಆಂದೋಲನ”ದ ರೂವಾರಿ ನಳಿನ್  ಎಂದೇ ಕಂಡವರ ಮುಂದೆ ಬಡಬಡಿಸುತ್ತಿದೆ.
ಸೊರಕೆ

ಬಿಜೆಪಿ ಬಿಡಾರದಲ್ಲಿ ಹರಿದಾಡುತ್ತಿರುವ ಮತ್ತೊಂದು ಚರ್ಚೆಯ ಪ್ರಕಾರ ಇದು  ನಳಿನನ್ನು ಹಣಿಯಲು ಬ್ರಾಹ್ಮಣೋತ್ತಮರ್ಯಾರೋ ಮಾಡಿದ ಕಿತಾಪತಿ. ಬಿಲ್ಲವರು ತಿರುಗಿಬಿದ್ದು ಬಂಟ ಕ್ಯಾಂಡಿಡೇಟ್‍ಗಳನ್ನೆಲ್ಲಾ ಸೋಲಿಸಿದರೆ ನಳಿನ್ ಬಿಜೆಪಿಯಲ್ಲಿ ಕಿಮ್ಮತ್ತು ಕಳೆದುಕೊಳ್ಳುತ್ತಾರೆ. ಆಗ ಮತ್ತೆ ಕಲ್ಲಡ್ಕ ಭಟ್ಟರದೇ ಏಕಮೇವಾದ್ವಿತೀಯ ದರ್ಬಾರು  ಸ್ಥಾಪಿತವಾಗುತ್ತದೆಂದು ಬಂಟರ ಸಂಘದ ಅಧ್ಯಕ್ಷನ ಹೆಸರಿನಲ್ಲಿ ಇಂಥದೊಂದು  ಸಂದೇಶ ರವಾನಿಸಲಾಗಿದೆಯಂತೆ. “ದಕ್ಷಿಣ ಕನ್ನಡ  ಮತ್ತು ಉಡುಪಿಯು  ಬಂಟರ-ಬ್ರಾಹ್ಮಣರ ನಾಡು” ಎಂಬ ವಾಕ್ಯ ಮಲಾಡಿಗುತ್ತು ರೈನ ಸಂದೇಶದಲ್ಲಿರುವುದು ಬ್ರಾಹ್ಮಣರ ಭೂಪನ ಕುಚೋದ್ಯದ ಅನುಮಾನ ಹುಟ್ಟುಹಾಕಿದೆ.

ಇದೆಲ್ಲಾ ಬಿಜೆಪಿಯ ಒಳಸುಳಿ ರಾಜಕಾರಣ ಏನೇಇರಲಿ, ಸಂಘಪರಿವಾರದ  ಬ್ರಾಹ್ಮಣರ-ಬಲಾಢ್ಯ ಬಂಟರ ಷಡ್ಯಂತ್ರಕ್ಕೆ ಬಲಿಬೀಳುತ್ತಿರುವ ಬಿಲ್ಲವರಿಗೆ ಬುದ್ಧಿ ಬರುವುದು ಎಂದು? ಹುಸಿ ಹಿಂದೂತ್ವಕ್ಕೆ ಮರುಳಾಗಿ ಬಿಲ್ಲವರು ತಮ್ಮವರ ಆಹುತಿ ಕೊಡುತ್ತಾ  ಬಿಜೆಪಿಗೆ ಬೆಂಬಲಿಸುತ್ತಾ ಹೋದರೆ ಮೇಲುವರ್ಗದ ಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ನಡೆಯುತ್ತಲೇ ಇರುತ್ತದೆ. ಇದು ಬಿಲ್ಲವರ ಸ್ವಾಮಿಗೆ, ಜನಾರ್ದನ  ಪೂಜಾರಿ,  ವಿನಯ್ ಕುಮಾರ್ ಸೊರಕೆ,  ಶ್ರೀನಿವಾಸ್  ಪೂಜಾರಿ,  ರುಕ್ಮಯ್ಯ ಪೂಜಾರಿಯಂತ ಬಿಲ್ಲವರ   ಭೂಪರಿಗೆ, ಬಿಲ್ಲವರ ಸಂಘದ ಸರದಾರರಿಗೆಲ್ಲಾ ಅರ್ಥವಾಗೋದು ಯಾವಾಗ?
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳದ ಬಿಸಿಯೂಟ ಇಸ್ಕಾನ್‌ಗೆ ಹಸ್ತಾಂತರವಿಲ್ಲ: ಸರ್ಕಾರದ ಸ್ಪಷ್ಟನೆ, ಕಲ್ಕತ್ತಾ ಹೈಕೋರ್ಟ್‌ನಿಂದ ಅಫಿಡವಿಟ್‌ಗೆ ನಿರ್ದೇಶನ 

ಕೋಲ್ಕತ್ತಾ: ರಾಜ್ಯದ ಶಾಲೆಗಳಲ್ಲಿ ಜಾರಿಯಲ್ಲಿರುವ ಪಿಎಂ-ಪೋಷಣ್ (ಮಧ್ಯಾಹ್ನದ ಬಿಸಿಯೂಟ) ಯೋಜನೆಯ ನಿರ್ವಹಣೆಯನ್ನು ಇಸ್ಕಾನ್ ಸಂಸ್ಥೆಗೆ ಹಸ್ತಾಂತರಿಸುವ ಯಾವುದೇ ಅನುಮೋದಿತ ಪ್ರಸ್ತಾಪ ಸರ್ಕಾರಕ್ಕಿಲ್ಲ ಎಂದು ಪಶ್ಚಿಮ ಬಂಗಾಳ ಸರ್ಕಾರ ಸ್ಪಷ್ಟಪಡಿಸಿದೆ. ಈ ಕುರಿತು ಅಫಿಡವಿಟ್...

ಗಾಜಿಯಾಬಾದ್‌| ಗೋಮಾಂಸ ಸಾಗಾಣಿಕೆ ಆರೋಪ; ವ್ಯಕ್ತಿ ಮೇಲೆ ಗುಂಪಿನಿಂದ ಹಲ್ಲೆ

ಉತ್ತರ ಪ್ರದೇಶದ ಗಾಜಿಯಾಬಾದ್‌ ನಗರದ ಶಾಸ್ತ್ರಿ ನಗರದಲ್ಲಿ ಗೋಮಾಂಸ ಸಾಗಿಸುತ್ತಿದ್ದಾರೆ ಎಂಬ ಅನುಮಾನದ ಮೇಲೆ ಸಲೀಂ ಎಂದು ಗುರುತಿಸಲಾದ ವ್ಯಕ್ತಿಯ ಮೇಲೆ ನಕಲಿ ಗೋರಕ್ಷಕರ ಗುಂಪೊಂದು ಹಲ್ಲೆ ನಡೆಸಿದೆ. ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ...

ಬಾಂಗ್ಲಾ ಗಡಿಯಾಚೆಗೆ ತಳ್ಳಿದ್ದ ನಾಲ್ವರು ಭಾರತೀಯರನ್ನು ವಾಪಸ್ ಕರೆತಂದ ಕೇಂದ್ರ ಸರ್ಕಾರ

ವರ್ಷದ ಹಿಂದೆ, ಅಂದರೆ 2025ರ ಜೂನ್ ತಿಂಗಳಲ್ಲಿ ಬಾಂಗ್ಲಾದೇಶದ ಗಡಿಯಾಚೆಗೆ ತಳ್ಳಿದ್ದ ನಾಲ್ವರು ಭಾರತೀಯರು ಬುಧವಾರ (ಜು.8) ಪಶ್ಚಿಮ ಬಂಗಾಳದ ಬೀರ್‌ಭೂಮ್ ಜಿಲ್ಲೆಯ ತಮ್ಮ ಗ್ರಾಮಕ್ಕೆ ಹಿಂದಿರುಗಿದ್ದಾರೆ ಎಂದು ವರದಿಯಾಗಿದೆ. ಸುನಾಲಿ...

ಬೆಂಗಳೂರಿನ ಜ್ವಲಂತ ನಾಗರಿಕ ಸಮಸ್ಯೆಗಳ ವಿರುದ್ಧ ಜುಲೈ 12ಕ್ಕೆ ಬೃಹತ್ ‘ಜನಾಕ್ರೋಶ ಸಮಾವೇಶ

ಸಿಲಿಕಾನ್ ಸಿಟಿ ಬೆಂಗಳೂರಿನ ನಾಗರಿಕರು ಪ್ರತಿನಿತ್ಯ ಎದುರಿಸುತ್ತಿರುವ ನರಕಸದೃಶ ಸಮಸ್ಯೆಗಳ ವಿರುದ್ಧ ಮತ್ತು ಆಡಳಿತ ವ್ಯವಸ್ಥೆಯ ಭ್ರಷ್ಟಾಚಾರವನ್ನು ಖಂಡಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಬೃಹತ್ ‘ಜನಾಕ್ರೋಶ ಸಮಾವೇಶ’ವನ್ನು ಹಮ್ಮಿಕೊಂಡಿದೆ. ಈ ‘ಜನಾಕ್ರೋಶ...

ಭೀಕರ ಪ್ರವಾಹಕ್ಕೆ ಕೊಚ್ಚಿಹೋದ 3 ಸಾವಿರ LPG ಸಿಲಿಂಡರ್

ಮಹಾರಾಷ್ಟ್ರದಲ್ಲಿ ವಾರದಿಂದ ಸುರಿಯುತ್ತಿರುವ ಮಳೆ ಇಡೀ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದ್ದು, ಪ್ರಕೃತಿಯ ವಿಕೋಪದ ನಡುವೆ ರಾಯಗಢ ಜಿಲ್ಲೆಯಿಂದ ಅತ್ಯಂತ ಆಘಾತಕಾರಿ ವಿಡಿಯೋವೊಂದು ವೈರಲ್ ಆಗಿದೆ. ಇಲ್ಲಿನ ಎಚ್‌ಪಿಸಿಎಲ್ (HPCL) ಪಾತಾಳಗಂಗಾ ಎಲ್‌ಪಿಜಿ ಬಾಟ್ಲಿಂಗ್...

ಹೈದರಾಬಾದ್‌| ಪವನ್‌ ಕಲ್ಯಾಣ್‌ ಟೀಕಿಸಿದ ಯೂಟ್ಯೂಬರ್ ರಾವಣ್ ಮೇಲೆ ಯುಎಪಿಎ ಕೇಸ್; ನಿವಾಸದಲ್ಲಿ ಪೊಲೀಸರ ಶೋಧ

ತೆಲುಗು ಯೂಟ್ಯೂಬರ್, ಸಾಮಾಜಿಕ ಕಾರ್ಯಕರ್ತ ರಾವಣ್‌ (ಬಚಲಕೂರಿ ಜೋಸೆಫ್) ಅವರನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ಬಂಧಿಸಿದ್ದು, ಆಂಧ್ರಪ್ರದೇಶ ಪೊಲೀಸರು ಹೈದರಾಬಾದ್‌ನಲ್ಲಿರುವ ಯೂಟ್ಯೂಬರ್ ರಾವಣ್ ನಿವಾಸದಲ್ಲಿ...

ಬೀದಿಬದಿ ವ್ಯಾಪಾರಿಗಳ ಒಕ್ಕಲೆಬ್ಬಿಸುವಿಕೆ ಖಂಡಿಸಿ ಸರ್ಕಾರದ ವಿರುದ್ದ ಬೃಹತ್ ಪ್ರತಿಭಟನೆ

ಬೆಂಗಳೂರು ನಗರದಲ್ಲಿ ಫುಟ್‌ಪಾತ್ ಒತ್ತುವರಿ ತೆರವಿನ ಹೆಸರಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ನಡೆಸುತ್ತಿರುವ ಏಕಪಕ್ಷೀಯ ಕಾರ್ಯಾಚರಣೆ ಬಡ ಬೀದಿಬದಿ ವ್ಯಾಪಾರಿಗಳ ಬದುಕನ್ನು ಬೀದಿಗೆ ತಳ್ಳಿದೆ. ಪ್ರಾಧಿಕಾರದ ಈ ಜನವಿರೋಧಿ ‘ಆಪರೇಷನ್’ ಖಂಡಿಸಿ,...

ಬಿಹಾರ| ಹಿಜಾಬ್ ತೆಗೆದು ಹಣೆಗೆ ಸಿಂಧೂರ ಇಟ್ಟುಕೊಳ್ಳುವಂತೆ ಮುಸ್ಲಿಂ ಮಹಿಳೆಗೆ ಒತ್ತಾಯಿಸಿದ ಗುಂಪು

ಪುರುಷರ ಗುಂಪೊಂದು ದಾರಿಯಲ್ಲಿ ಹೋಗುತ್ತಿದ್ದ ಮುಸ್ಲಿಂ ಮಹಿಳೆಯನ್ನು ತಡೆದು ದೌರ್ಜನ್ಯ ಎಸಗಿದ್ದು, ಆಕೆ ಧರಿಸಿದ್ದ ಹಿಜಾಬ್ ತಗೆದು ಹಣೆಗೆ ಸಿಂಧೂರ ಇಟ್ಟುಕೊಳ್ಳುವಂತೆ ಹಿಂದುತ್ವ ಕಿಡಿಗೇಡಿಗಳು ಒತ್ತಾಯಿಸಿರುವ ವಿಡಿಯೊ ವೈರಲ್ ಆಗಿದೆ. ಜುಲೈ 8 ರ...

ಕೃಷಿ ಭೂಮಿ ಉಳಿಸಲು ರೈತ ಸಂಘಟನೆಗಳಿಂದ ಜುಲೈ 11ಕ್ಕೆ ‘ಬಿಡದಿ ಚಲೋ’

ಬಿಡದಿ ಉಪನಗರ (ಟೌನ್‌ಶಿಪ್) ಯೋಜನೆಗಾಗಿ ರೈತರ ಫಲವತ್ತಾದ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರದ ಜನವಿರೋಧಿ ಧೋರಣೆಯನ್ನು ಖಂಡಿಸಿ, ಜುಲೈ 11 ರಂದು ಬೃಹತ್ ‘ಬಿಡದಿ ಚಲೋ’ ಹಸಿರು ಹೆದ್ದಾರಿ ಪ್ರತಿಭಟನೆಯನ್ನು...

ಅಮೆರಿಕ-ಇರಾನ್ ನಡುವೆ ಮತ್ತೆ ಕಾಳಗ : ಕದನ ವಿರಾಮ ಮುಕ್ತಾಯಗೊಂಡಿದೆ ಎಂದ ಟ್ರಂಪ್

ಮಂಗಳವಾರ ರಾತ್ರಿಯಿಂದ (ಭಾರತೀಯ ಕಾಲಮಾನ) ಅಮೆರಿಕ-ಇರಾನ್ ನಡುವೆ ಮತ್ತೆ ಕಾಳಗ ಶುರುವಾಗಿದ್ದು, ಕದನ ವಿರಾಮ ಮುಕ್ತಾಯಗೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಟರ್ಕಿಯಲ್ಲಿ ನಡೆದ ನ್ಯಾಟೋ ಶೃಂಗಸಭೆಯಲ್ಲಿ ಮಾತನಾಡಿದ ಟ್ರಂಪ್...