Homeಮುಖಪುಟಶಿವಮೊಗ್ಗದ ಸೋಷಲಿಸ್ಟ್ ಶಿವಣ್ಣ ನಿಧನ

ಶಿವಮೊಗ್ಗದ ಸೋಷಲಿಸ್ಟ್ ಶಿವಣ್ಣ ನಿಧನ

- Advertisement -
- Advertisement -

| ಬಿ.ಚಂದ್ರೇಗೌಡ |

ಶಿವಮೊಗ್ಗದ ಸೋಷಲಿಸ್ಟ್ ಶಿವಣ್ಣ ನಿಧನರಾಗಿದ್ದಾರೆ. ಶಿವಮೊಗ್ಗದಲ್ಲಿ ಜೆಡಿಎಸ್‍ಗೆ ನೆಲೆ ಇಲ್ಲದಿದ್ದರೂ ದೇವೇಗೌಡರು ಆರೇಳು ವರ್ಷ ಅವರನ್ನು ಜೆಡಿಎಸ್ ಅಧ್ಯಕ್ಷರನ್ನಾಗಿ ನೇಮಿಸಿದ್ದಲ್ಲದೆ, ಶ್ರೀಕಾಂತರನ್ನು ಇಲ್ಲಿಗೆ ತಂದು ಜೆಡಿಎಸ್ ನಾಯಕರಾಗುವಂತೆ ಮಾಡಿದ್ದರು. ಶ್ರೀಕಾಂತ್ ದಳದ ಪಾರ್ಟಿ ಕಟ್ಟುವುದರ ಜೊತೆಗೆ ಶಿವಣ್ಣನವರ ಆರೋಗ್ಯದ ಜವಾಬ್ದಾರಿಯನ್ನು ಹೊತ್ತಿದ್ದರು.

ಶಿವಣ್ಣನವರು ಸಮಾಜವಾದಿಗಳು ಉತ್ತುಂಗದಲ್ಲಿದ್ದ ಕಾಲದವರು. ಪಟೇಲರಾದಿಯಾಗಿ ಅಂದಿನ ಘಟಾನುಘಟಿಗಳು ಚರ್ಚಿಸುತ್ತಿದ್ದ ಕಾಲದಲ್ಲಿ ಅವರ ಮಾತುಗಳಿಗೆ ಸಾಕ್ಷಿಯಾಗಿದ್ದವರು. ಆದ್ದರಿಂದ ಅವರನ್ನು ಭೇಟಿಯಾದರೆ ಸಾಕು ಲೋಹಿಯಾ, ಕಿಷನ್ ಪಟ್ನಾಯಕ್, ಪಟೇಲರು ಮತ್ತು ಅಂದಿನ ಕರ್ನಾಟಕದ ಸೋಷಿಲಿಸ್ಟರ ಚರಿತ್ರೆಯೇ ತೆರೆದುಕೊಳ್ಳುತ್ತಿತ್ತು. ಅಲ್ಲದೆ ಲೋಹಿಯಾ ಗೆದ್ದು ಪಾರ್ಲಿಮೆಂಟಿಗೆ ಹೋದಾಗ ಬಂದ ಪತ್ರಿಕಾ ವರದಿಗಳು, ಸಂಪಾದಕೀಯಗಳು, ಅವರ ಬಾಯಲ್ಲೇ ಇದ್ದವು. ಖಾದ್ರಿ ಶಾಮಣ್ಣನ ಸಂಪಾದಕೀಯವಂತೂ ಬಾಯಿಪಾಠವಾಗಿದ್ದವು. ಇದು ರಾಜಕಾರಣದ ಮಾತಾಯಿತು. ಇನ್ನ ಆಧ್ಯಾತ್ಮದ ವಿಷಯಕ್ಕೆ ಬಂದರೆ ಅಕ್ಕನ ವಚನಗಳು ಸಂದರ್ಭೋಚಕವಾಗಿ ಅವರ ಬಾಯಿಂದ ಬರುತ್ತಿದ್ದವು. ಅಲ್ಲದೆ ಬಸವಣ್ಣ, ಅಲ್ಲಮರ ವಚನಗಳೂ ಬರುತ್ತಿದ್ದವು. ಕೇವಲ ಒಂದು ಸಿಕ್ಸ್‍ಟಿಗೆ ಸಮಾಜವಾದದ ಚರ್ಚೆ ಹೊರಬಂದರೆ, ಎರಡು ಸಿಕ್ಸ್‍ಟಿಗೆ ಹನ್ನೆರಡನೇ ಶತಮಾನಕ್ಕೆ ಹೊರಳುತ್ತಿದ್ದರು. ಜಾತ್ಯಾತೀತ ಜನತಾದಳವೆಂಬ ಪಾರ್ಟಿಗೆ ನಿಷ್ಟರಾಗಿದ್ದ ಶಿವಣ್ಣ, ಅದರ ಜೋತಿಷ್ಯ ಯಜ್ಞ ಹೋಮ ಹವನದ ವಿರೋಧಿಯಾಗಿದ್ದರು. ಅದನ್ನೆಲ್ಲಾ ಅವರವರ ವೈಯಕ್ತಿಕ ವಿಷಯಕ್ಕೆ ಬಿಟ್ಟಿದ್ದರು.

ಶಿವಣ್ಣ ಅಜಾತಶತ್ರು, ಎಲ್ಲಾ ಪಾರ್ಟಿಯಲ್ಲೂ ಅವರ ಗೆಳೆಯರಿದ್ದರು. ಅವರಿಗೆ ತುಂಬ ಒಲವಿದ್ದುದು ರೈತ ಸಂಘದ ಕಡೆಗೆ, ಆದ್ದರಿಂದ ಮಣ್ಣಿನ ಮಗ ದೇವೇಗೌಡರ ಪಾರ್ಟಿ ಅಧ್ಯಕ್ಷರಾಗಿದ್ದರು. ಜೆಡಿಎಸ್ ಬಿಜೆಪಿ ಜತೆಗೂಡಿ ಸರಕಾರ ಮಾಡಿದಾಗ ಶಿವಣ್ಣನಿಗೆ ಅದೊಂದು ಅನೈತಿಕ ಸಂಬಂಧದಂತೆ ಕಂಡಿತ್ತು. ಹಾಗಾಗಿ ಎಡೂರಪ್ಪನವರು ಉಪಮುಖ್ಯಮಂತ್ರಿಯಾಗಿ ಶಿವಮೊಗ್ಗಕ್ಕೆ ಬಂದಾಗ, ಅವರು ಜೆಡಿಎಸ್ ಪಾರ್ಟಿ ಆಫೀಸಿಗೆ ಬಂದಾರೆಂದು ಪಾರ್ಟಿ ಆಫೀಸಿನ ಬಾಗಿಲಿಗೆ ಬೀಗ ಜಡಿದು ಪರಾರಿಯಾಗಿದ್ದರು. ಶಿವಣ್ಣ ಮೂಲತಃ ಶಿವಮೊಗ್ಗದವರಲ್ಲ. ಹಾಸನ ಕಡೆಯವರು. ಅಲ್ಲಿಂದ ಬಂದ ವ್ಯಕ್ತಿ ಶಿವಮೊಗ್ಗದಲ್ಲಿ ಬೇರೂರಿದ ಪರಿ ಅಚ್ಚರಿ ಹುಟ್ಟಿಸುವಂತದ್ದು. ಯಾಕೆಂದರೆ ಅವರ ಜಾತಿ ಯಾವುದೆಂಬುದೇ ಹಲವರಿಗೆ ಗೊತ್ತಿಲ್ಲ. ಹೀಗೆ ಜಾತಿ, ವರ್ಗಗಳ ಚೌಕಟ್ಟಿಗೆ ನಿಲುಕದೆ ಎಲ್ಲಾ ಜನರ ವಿಶ್ವಾಸ ಗಳಿಸಿಕೊಂಡಿದ್ದರು. ಬಹಳ ದಿನಗಳಿಂದ ಡಯಾಲಿಸಿಸ್‍ಗೆ ತುತ್ತಾಗಿದ್ದ ಶಿವಣ್ಣನವರನ್ನು ಚೆನ್ನಾಗಿ ನೋಡಿಕೊಂಡವರು ಶ್ರೀಕಾಂತ್ ಎಂದೇ ಹೇಳಬೇಕು. ಯಾಕೊ ದೇವೇಗೌಡರ ಪಾರ್ಟಿ ಅಧ್ಯಕ್ಷರಾದವರಿಗೆ ಆಯಸ್ಸಿಲ್ಲ ಅಂತ ಕಾಣಿಸುತ್ತೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸತೀಶ್‌ ಜಾರಕಿಹೊಳಿ ಮೇಲಿನ ಇಡಿ ದಾಳಿಯನ್ನು ‘ಚಾರಿತ್ರ್ಯ ಹರಣ’ ಎಂದ ವಿಜಯ್ ಮಲ್ಯ

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಮನೆ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯವು (ಇಡಿ) ನಡೆಸಿದ ದಾಳಿಯನ್ನು ಮಾಜಿ ಸಂಸದ ಮತ್ತು ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ, "ಸಾರ್ವಜನಿಕವಾಗಿ ಚಾರಿತ್ರ್ಯ...

ಒಗ್ಗಟ್ಟಿನ ಮಾತುಗಳಷ್ಟೇ ಸಾಲದು, ಕೃತಿಯಲ್ಲಿರಲಿ ದಿಟ್ಟತನ : ಬ್ರಿಕ್ಸ್ ವಿಚಾರದಲ್ಲಿ ಕೇಂದ್ರಕ್ಕೆ ಕಾಂಗ್ರೆಸ್ ಚಾಟಿ

ಜಾಗತಿಕ ಮಟ್ಟದಲ್ಲಿ ಬ್ರಿಕ್ಸ್ (BRICS) ಒಕ್ಕೂಟದ ಪ್ರಭಾವ ಹೆಚ್ಚುತ್ತಿರುವುದನ್ನು ಸ್ವಾಗತಿಸಿರುವ ಕಾಂಗ್ರೆಸ್, ಈ ಒಕ್ಕೂಟದ ಅಧ್ಯಕ್ಷತೆಯನ್ನು ವಹಿಸಿರುವ ಭಾರತವು ‘ಗ್ಲೋಬಲ್ ಸೌತ್’ (Global South) ರಾಷ್ಟ್ರಗಳ ನಡುವೆ ತನ್ನ ರಾಜತಾಂತ್ರಿಕ ಸ್ಥಾನಮಾನವನ್ನು ಮರುಸ್ಥಾಪಿಸಲು...

9/11 ರ ಹಿಂದಿನ ದಾಳಿಯನ್ನು ಇರಾನ್ ಜೊತೆಗಿನ ಇಂದಿನ ಯುದ್ಧಕ್ಕೆ ಜೋಡಿಸಿದ ಡೊನಾಲ್ಡ್‌ ಟ್ರಂಪ್

"ಸೆಪ್ಟೆಂಬರ್ 11, 2001 ರ ದಾಳಿಯನ್ನು ಯುನೈಟೆಡ್ ಸ್ಟೇಟ್ಸ್ ಎಂದಿಗೂ ಮರೆಯುವುದಿಲ್ಲ. 25 ವರ್ಷಗಳ ನಂತರವೂ ಇರಾನ್ ಮೇಲೆ ದಾಳಿ ಮಾಡುವ ಮೂಲಕ ದೇಶವು ಭಯೋತ್ಪಾದನೆ ವಿರುದ್ಧದ ಯುದ್ಧವನ್ನು ಮುಂದುವರೆಸಿದೆ" ಎಂದು ಅಧ್ಯಕ್ಷ...

SIR ನೋಟಿಸ್ ಮತ್ತು ವಿಚಾರಣೆಯಲ್ಲಿ ಅಕ್ರಮ : ಚು. ಆಯೋಗದ ವಿರುದ್ಧ ನಾಗರಿಕ ಸಂಘಟನೆಗಳಿಂದ 2ನೇ ಎಫ್‌ಐಆರ್

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಭಾಗವಾಗಿ, ಆಗಸ್ಟ್ 24ರಂದು ರಾಜ್ಯ ಚುನಾವಣಾ ಆಯೋಗ ಬಿಡುಗಡೆ ಮಾಡಿದ್ದ ಕರಡು ಮತದಾರರ ಪಟ್ಟಿಯನ್ನು ತಿರಸ್ಕರಿಸಿ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಎಫ್‌ಐಆರ್ ಬಿಡುಗಡೆ...

‘ಕೊಂಕಣಿ – ಮಾಲ್ವಣಿ ಸಮುದಾಯಗಳು ಹಿಂದುತ್ವದ ಬೆಂಬಲಿಗರು..’; ಮಹಾರಾಷ್ಟ್ರ ಬಿಜೆಪಿ ನಾಯಕ ಅಮೀತ್ ಸತಮ್

ಮುಂಬೈನಲ್ಲಿ ವಾಸಿಸುತ್ತಿರುವ ಕೊಂಕಣಿ ಮತ್ತು ಮಾಲ್ವಣಿ ಸಮುದಾಯಗಳು ಸೇರಿದಂತೆ ಕೊಂಕಣ ಪ್ರದೇಶದ ಜನರು ಹಿಂದುತ್ವವನ್ನು ಬೆಂಬಲಿಸುತ್ತಾರೆ ಎಂದು ಬಿಜೆಪಿ ನಾಯಕ ಅಮೀತ್ ಸತಮ್ ಹೇಳಿದ್ದಾರೆ. ಮಹಾರಾಷ್ಟ್ರದ ಕೊಂಕಣ ಪ್ರದೇಶದ ಸಾವಂತವಾಡಿಗೆ ಗಣಪತಿ ಭಕ್ತರಿಗಾಗಿ ಛತ್ರಪತಿ...

SIR! ಸಾಮಾನ್ಯರಿಗೆ ಸಂಕಷ್ಟ; ಗಣ್ಯರಿಗೆ ಮನೆ ಬಾಗಿಲಲ್ಲೇ ಸೇವೆ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕರ್ನಾಟಕದಲ್ಲಿ ಮುಂದುವರೆದಿರುವ ನಡುವೆಯೇ, ಅದರ ಜಾರಿಯಲ್ಲಿ ಸಾಮಾನ್ಯ ಮತದಾರರು ಮತ್ತು ಪ್ರಭಾವಿ ವ್ಯಕ್ತಿಗಳ ಅನುಭವದ ನಡುವಿನ ವ್ಯತ್ಯಾಸದ ಕುರಿತು ಪ್ರಶ್ನೆಗಳು ಎದ್ದಿವೆ. ಮತದಾರರ ಪಟ್ಟಿಯಲ್ಲಿನ...

ದಲಿತ ಬಾಲಕಿ ನಿಶು ಆಜಾದ್ ಕುಟುಂಬಕ್ಕೆ ನಿಲ್ಲದ ಕಿರುಕುಳ; ಅಸಭ್ಯ ಭಾಷೆ – ಬೆದರಿಕೆ ಸಂದೇಶ ರವಾನೆ

ಸಿಜೆಪಿ ಪ್ರತಿಭಟನೆಯಲ್ಲಿ ಗಮನ ಸೆಳೆದಿದ್ದ ಹದಿನಾಲ್ಕು ವರ್ಷ ವಯಸ್ಸಿನ ದಲಿತ ಸಮುದಾಯದ ಕಂಟೆಂಟ್ ಕ್ರಿಯೇಟರ್ ನಿಶು ಆಜಾದ್ ಮತ್ತು ಅವರ ಕುಟುಂಬಕ್ಕೆ ಮೊಬೈಲ್‌ ಫೋನ್‌ ಮೂಲಕ ನಿರಂತರ ಕಿರುಕುಳ ಸಂದೇಶ ಬರುತ್ತಿವೆ ಎಂದು...

ಉತ್ತರ ಪ್ರದೇಶ| 8ನೇ ತರಗತಿಯ ದಲಿತ ವಿದ್ಯಾರ್ಥಿಗೆ ಶಿಕ್ಷಕಿಯಿಂದ ಜಾತಿ ತಾರತಮ್ಯ

ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಸರ್ಕಾರಿ ಉನ್ನತ ಪ್ರಾಥಮಿಕ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಯೊಬ್ಬರು ಶಿಕ್ಷಕಿಯಿಂದ ಜಾತಿ ಆಧಾರಿತ ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸಿದ್ದಾನೆ. ಕೃಷ್ಣ ಎಂದು ಗುರುತಿಸಲ್ಪಟ್ಟ ಈ ವಿದ್ಯಾರ್ಥಿ ಪರಿಶಿಷ್ಟ...

ಯೆಮನ್ | ಸಂಪೂರ್ಣ ರೆಡ್ ಸೀ ಕರಾವಳಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಹೌತಿ ಪಡೆ : ಮಂದೇಬ್ ಜಲಸಂಧಿ ಮೇಲೆಯೂ ಹಿಡಿತ ಸಾಧಿಸಿರುವುದಾಗಿ ವರದಿ

ಮಹತ್ವದ ಬೆಳವಣಿಗೆಯಲ್ಲಿ, ಹೌತಿ ಬಂಡುಕೋರರು ಯೆಮನ್‌ನ ಇಡೀ ಕೆಂಪು ಸಮುದ್ರದ (ರೆಡ್ ಸೀ) ಕರಾವಳಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಇರಾನ್ ಬೆಂಬಲಿತ ಹೌತಿ ಸಶಸ್ತ್ರ ಪಡೆಗಳು ಯೆಮನ್ ಸರ್ಕಾರದ ನಿಯಂತ್ರಣದಲ್ಲಿದ್ದ...

ಭಾರತದ ಚುನಾವಣಾ ಪ್ರಕ್ರಿಯೆಯು ಅತ್ಯಂತ ಪಾರದರ್ಶಕವಾಗಿದೆ: ಸಿಇಸಿ ಜ್ಞಾನೇಶ್ ಕುಮಾರ್

ಭಾರತದ ಚುನಾವಣಾ ಪ್ರಕ್ರಿಯೆಯು ವಿಶ್ವದಲ್ಲೇ ಅತ್ಯಂತ ಪಾರದರ್ಶಕವಾದದ್ದು ಎಂದು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ (ಸೆ.11) ಹೇಳಿದ್ದಾರೆ. ಗುಜರಾತ್ ವಿಶ್ವವಿದ್ಯಾಲಯದ ಅಟಲ್ ಕಲಾಂ ಸಭಾಂಗಣದಲ್ಲಿ ನಡೆದ 'ಮತಗಟ್ಟೆ ಮಟ್ಟದ ಅಧಿಕಾರಿಗಳೊಂದಿಗೆ...