Homeಮುಖಪುಟಗೆಲುವು ಸಂಭ್ರಮಿಸಲು ಹಿಂದಿ ಮಾತ್ರವಲ್ಲ ವೈವಿದ್ಯಮಯ ಭಾಷೆಗಳು ಬೇಕು!

ಗೆಲುವು ಸಂಭ್ರಮಿಸಲು ಹಿಂದಿ ಮಾತ್ರವಲ್ಲ ವೈವಿದ್ಯಮಯ ಭಾಷೆಗಳು ಬೇಕು!

ಪ್ರಧಾನಿ ಮೋದಿ ಹಲವು ಬಾರಿ ತಮ್ಮ ವೇಷಭೂಷಣಗಳಿಂದ ಸುದ್ದಿಯಲ್ಲಿರುತ್ತಾರೆ. ಆದರೆ ಈ ಬಾರಿ ತಮ್ಮ ಭಾಷಾ ವೈವಿದ್ಯತೆಯಿಂದ ಸುದ್ದಿಯಲ್ಲಿದ್ದಾರೆ.

- Advertisement -
- Advertisement -

ಬಿಹಾರ ವಿಧಾನಸಭಾ ಚುನಾವಣೆಯ ಗೆಲುವು ಜೊತೆಗೆ ಕರ್ನಾಟಕ, ಮಧ್ಯಪ್ರದೇಶ, ತೆಲಂಗಾಣ, ಗುಜರಾತ್ ಉಪ ಚುನಾವಣೆಗಳಲ್ಲಿ ಗೆಲುವು ಕಂಡಿರುವ ಬಿಜೆಪಿಯಲ್ಲಿ ಸಂಭ್ರಮ ಮನೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ತಮ್ಮ ಟ್ವಿಟರ್‌ ಖಾತೆಯಲ್ಲಿ ಎಲ್ಲಾ ರಾಜ್ಯಗಳಿಗೂ ಪ್ರತ್ಯೇಕವಾಗಿ, ಆಯಾ ರಾಜ್ಯಗಳ ಭಾಷೆಯಲ್ಲಿ ಧನ್ಯವಾದ ಸಲ್ಲಿಸಿದ್ದಾರೆ.

ಭಾರತವನ್ನು ವಿಶ್ವದಲ್ಲಿ ಹೆಚ್ಚಾಗಿ ಗುರುತಿಸುವುದು ಪ್ರಜಾಪ್ರಭಯತ್ವ ಮತ್ತು ವೈವಿದ್ಯತೆಯಿಂದಾಗಿ. ಇಲ್ಲಿನ ಪ್ರತಿ ರಾಜ್ಯಗಳಲ್ಲೂ ವೈವಿದ್ಯಮಯ ಭಾಷೆಗಳಿವೆ. ರಾಜ್ಯ ಭಾಷೆ ಒಂದಾದರೇ, ಅದರೋಳಗೆ ಬದುಕುವ ಜನರಲ್ಲಿ ಮತ್ತಷ್ಟು ಭಾಷೆಗಳ ಸೊಗಡು ಅಡಗಿದೆ. ಪ್ರಧಾನಿಯವರು ಇಂದು ತಮ್ಮ ಅಭ್ಯರ್ಥಿಗಳ ಗೆಲುವನ್ನು ಸಂಭ್ರಮಿಸಲು ಬಳಸಿರುವುದು ಕೂಡ ಆ ವೈವಿದ್ಯತೆಯೇ ಆಗಿದೆ.

ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎಗೆ ಬಹುಮತ ದೊರಕಿಸಿಕೊಟ್ಟದ್ದಕ್ಕಾಗಿ ಅಲ್ಲಿನ ಮತದಾರರಿಗೆ, ಎನ್‌ಡಿಎಯ ಎಲ್ಲ ಕಾರ್ಯಕರ್ತರಿಗೆ, ಬಿಹಾರದ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಧನ್ಯವಾದ ಹೇಳಿದ್ದಾರೆ.

’ಬಿಹಾರವು ಪ್ರಜಾಪ್ರಭುತ್ವದ ಮೊದಲ ಪಾಠವನ್ನು ಜಗತ್ತಿಗೆ ಕಲಿಸಿದೆ. ಪ್ರಜಾಪ್ರಭುತ್ವ ಹೇಗೆ ಬಲಗೊಳ್ಳುತ್ತದೆ ಎಂಬುದನ್ನು ಇಂದು ಬಿಹಾರ ಮತ್ತೆ ಜಗತ್ತಿಗೆ ತಿಳಿಸಿದೆ. ದಾಖಲೆಯ ಸಂಖ್ಯೆಯಲ್ಲಿ ಬಡವರು, ವಂಚಿತರು ಮತ್ತು ಮಹಿಳೆಯರು ಸಹ ಮತ ಚಲಾಯಿಸಿದ್ದಾರೆ ಮತ್ತು ಇಂದು ಅಭಿವೃದ್ಧಿಗೆ ತಮ್ಮ ಮತ ನೀಡಿದ್ದಾರೆ” ಎಂದು ಹಿಂದಿ ಭಾಷೆಯಲ್ಲಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಬಿಹಾರ ಚುನಾವಣೆ: ಸಾಮಾಜಿಕ ಜಾಲತಾಣಗಳಲ್ಲಿ’ಎಣಿಕೆ ನಿಲ್ಲಿಸಿ’ ಟ್ರೋಲ್!

ಕರ್ನಾಟಕದ ಶಿರಾ ಮತ್ತು ರಾಜರಾಜೇಶ್ವರಿನಗರ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಬಿಜೆಪಿಯನ್ನು ಪ್ರಶಂಸಿಸುತ್ತಾ, ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರದ ಮೇಲೆ ನಂಬಿಕೆಯನನ್ನು ಜನ ಹೊಂದಿರುವುದನ್ನು ಈ ಗೆಲುವು ಮತ್ತೆ ದೃಢಿಕರಿಸಿದೆ ಎಂದಿದ್ದಾರೆ.

ಜೊತೆಗೆ ಕಾರ್ಯಕರ್ತರ ಶ್ರಮ ಮತ್ತು ಜನರ ಬೆಂಬಲಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.

ತೆಲಂಗಾಣದ ದುಬ್ಬಾಕ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಎಂ.ರಘುನಂದನ್ ರಾವ್ ಪ್ರಬಲ ಪೈಪೊಟಿಯ ನಡುವೆ ನಿನ್ನೆ ಜಯ ಸಾಧಿಸಿದ್ದಾರೆ. ಬಿಜೆಪಿ ಗೆಲುವನ್ನು ಸಂಭ್ರಮಿಸಿರುವ ಪ್ರಧಾನಿ ಮೋದಿ ತೆಲುಗಿನಲ್ಲಿಯೇ ತೆಲಂಗಾಣದ ಜನತೆಗೆ ಧನ್ಯವಾದ ಹೇಳಿದ್ದಾರೆ. ಬಿಜೆಪಿ ಪ್ರಣಾಳಿಕೆಯನ್ನು ಒಪ್ಪಿಕೊಂಡಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.

ಗುಜರಾತ್ ಉಪ ಚುನಾವಣೆಯಲ್ಲಿ 8 ಕ್ಷೇತ್ರಗಳಲ್ಲೂ ಬಿಜೆಪಿ ಭರ್ಜರಿ ಜಯ ಗಳಿಸಿದೆ. ಗೆಲುವಿನ ಕುರಿತು ಮೋದಿ ’ಗುಜರಾತ್ ಮತ್ತು ಬಿಜೆಪಿ ನಡುವಿನ ಬಾಂಧವ್ಯ ಬೇರ್ಪಡಿಸಲಾಗದು!” ಎಂದು ಗುಜರಾತಿ ಭಾಷೆಯಲ್ಲಿ ಟ್ವಿಟ್ ಮಾಡಿದ್ದಾರೆ.

ಇದನ್ನೂ ಓದಿ: ಬಿಹಾರ: ಈ ಗೆಲುವು ಮೋದಿಯವರದ್ದು; ನಿತೀಶ್‌ಗೆ ಒಳ ಏಟು ನೀಡಿದ ಚಿರಾಗ್ ಪಾಸ್ವಾನ್?

8 ಉಪಚುನಾವಣೆಗಳಲ್ಲಿ ಗೆಲುವು ನೀಡಿದ ರಾಜ್ಯದ ಜನರ ವಾತ್ಸಲ್ಯ ಮತ್ತೊಮ್ಮೆ ಕಂಡು ಬಂದಿದೆ. ಗುಜರಾತ್ ಜನರ ಬೆಂಬಲಕ್ಕೆ ನಾನು ಅಭಾರಿ ಎಂದಿದ್ದಾರೆ.

ಮಣಿಪುರ ಮತ್ತು ಮಧ್ಯಪ್ರದೇಶದ ಜನರಿಗೆ ಮತ್ತು ಬಿಜೆಪಿ ಕಾರ್ಯಕರ್ತರಿಗೆ ಮೋದಿ ಧನ್ಯವಾದ ಸಲ್ಲಿಸಿದ್ದಾರೆ. ಪ್ರಧಾನ ಮಂತ್ರಿ ಪ್ರತಿ ಬಾರಿ ವಿದೇಶ, ರಾಜ್ಯ ಪ್ರವಾಸಕ್ಕೆ, ತಮ್ಮ ಕಾರ್ಯಗಳಿಗೆ ಹೊರ ರಾಜ್ಯಗಳಿಗೆ ಭೇಟಿ ಕೊಟ್ಟಾಗ ತಮ್ಮ ವೇಷಭೂಷಣಗಳಿಂದ ಹೆಚ್ಚು ಸುದ್ದಿಯಲ್ಲಿರುತ್ತಾರೆ.

ಈ ಬಾರಿ ಕೂಡ ತಮ್ಮ ಭಾಷ ವೈವಿದ್ಯತೆಯಿಂದ ಸುದ್ದಿಯಾಗಿದ್ದಾರೆ. ಜನರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿಯವರ ಟ್ವೀಟ್‌ಗಳನ್ನು ಮೆಚ್ಚಿದ್ದಾರೆ. ಹಿಂದೆ ಹೇರಿಕೆ ಬಗ್ಗೆ ಹೆಚ್ಚು ಚರ್ಚೆಗಳು ನಡೆದ ಸಂದರ್ಭಕ್ಕೆ ಈ ಟ್ವೀಟ್‌ಗಳನ್ನು ಹೋಲಿಸಬಹುದಾಗಿದೆ.

ಬಿಜೆಪಿ ಗೆಲುವಿನ ಬಗ್ಗೆ ಆಯಾ ರಾಜ್ಯಗಳ ಜನರಿಗೆ ಆಯಾ ಭಾಷೆಗಳಲ್ಲಿ ಧನ್ಯವಾದ ಸಲ್ಲಿಸುವ ಪ್ರಧಾನಿಯವರು, ತಮ್ಮ ಟ್ವೀಟ್‌ಗಳಲ್ಲಿ ಎಲ್ಲಾ ಭಾಷೆಗಳನ್ನು ಬಳಸುವಂತೆಯೇ, ಜನರಿಗೂ ಭಾಷಾ ಹೇರಿಕೆ ವಿರುದ್ಧ ಪ್ರತಿಭಟಿಸಲು ಕರೆ ನೀಡಲಿ ಎಂಬುದು ಹೋರಾಟಗಾರರ ಅಭಿಪ್ರಾಯವಾಗಿದೆ.

ಇದನ್ನೂ ಓದಿ: ಬಿಜೆಪಿ ನಾಯಕರ ದ್ವಿನೀತಿ: ಬಂಧನದಲ್ಲಿರುವ ಕೇರಳ ಮೂಲದ ಪತ್ರಕರ್ತನ ಪತ್ನಿ ಆಕ್ರೋಶ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read