Homeಅಂತರಾಷ್ಟ್ರೀಯಕೊರೊನಾ ನಿರ್ವಹಣೆಯಲ್ಲಿ ವಿಫಲ: ಕಣ್ಣೀರು ಹಾಕಿ ಕ್ಷಮೆ ಕೇಳಿದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್!

ಕೊರೊನಾ ನಿರ್ವಹಣೆಯಲ್ಲಿ ವಿಫಲ: ಕಣ್ಣೀರು ಹಾಕಿ ಕ್ಷಮೆ ಕೇಳಿದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್!

ನಮ್ಮ ಜನರ ಕಷ್ಟಗಳನ್ನು ನಿವಾರಿಸಲು ನನ್ನ ಪ್ರಯತ್ನಗಳು ಮತ್ತು ಪ್ರಾಮಾಣಿಕತೆ ಸಾಕಾಗಲಿಲ್ಲ. ಆದರೂ ನನ್ನ ಜನರು ಯಾವಾಗಲೂ ನನ್ನ ಕೈಬಿಟ್ಟಿಲ್ಲ.

- Advertisement -
- Advertisement -

ಉತ್ತರ ಕೊರಿಯಾದ ನಾಗರೀಕರ ಜೀವನವನ್ನು ಸುಧಾರಿಸುವಲ್ಲಿ ಮತ್ತು ಕೊರೊನಾ ನಿರ್ವಹಣೆಯಲ್ಲಿ ವಿಫಲರಾದ ಕಾರಣ ಅಲ್ಲಿನ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಕ್ಷಮೆಯಾಚಿಸಿದ್ದಾರೆ.

ವಾರಾಂತ್ಯದಲ್ಲಿ ನಡೆದ ಮಿಲಿಟರಿ ಪೆರೇಡ್‌ನಲ್ಲಿ ಭಾಷಣ ಮಾಡಿದ ಅವರು ಸೈನಿಕರ ತ್ಯಾಗಕ್ಕೆ ಧನ್ಯವಾದಗಳನ್ನು ಹೇಳಿ, ಕಣ್ಣೀರಿಡುತ್ತಾ ನಾಗರೀಕರಲ್ಲಿ ಕ್ಷಮೆಯಾಚಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಇದನ್ನೂ ಓದಿ: ಕೆಟ್ಟ-ಒಳ್ಳೆ ಸರ್ವಾಧಿಕಾರ ಅನ್ನೋದು ಇಲ್ಲ. ಅಮಾಸಿ ಅಮಾಸಿನ, ಹುಣಿಮೆ ಹುಣಿಮಿನ

ಶನಿವಾರ, ಆಡಳಿತಾರೂಢ ಕಾರ್ಮಿಕರ ಪಕ್ಷ ಸ್ಥಾಪನೆಯ 75 ನೇ ವಾರ್ಷಿಕೋತ್ಸವವನ್ನು ಆಚರಿಸುವ ಸಂದರ್ಭದಲ್ಲಿ, ಇತ್ತೀಚೆಗೆ ಎದುರಾಗಿದ್ದ ವಿಕೋಪಕ್ಕೆ ಸ್ಪಂದಿಸಿದ್ದಕ್ಕಾಗಿ ಮತ್ತು ದೇಶದಲ್ಲಿ ಕೊರೊನಾ ವೈರಸ್ ಅನ್ನು ತಡೆಗಟ್ಟಲು ಸಹಾಯ ಮಾಡಿದ್ದಕ್ಕಾಗಿ ಸಾವಿರಾರು ಸೈನಿಕರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಅಲ್ಲಿನ ದೂರದರ್ಶನ ಕೇಂದ್ರವು ಬಿಡುಗಡೆ ಮಾಡಿದ ವೀಡಿಯೊ ತುಣುಕಿನಲ್ಲಿ, ಕಿಮ್ ಕಣ್ಣೀರು ಹಾಕುತ್ತಿದ್ದರು.

ಕಿಮ್ ಜಾಂಗ್ ಉನ್ ಕಣ್ಣೀರು ಹಾಕಿದ ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.

ಕೊರೊನಾ ವೈರಸ್ ವಿರೋಧಿ ಕ್ರಮಗಳು, ಅಂತರರಾಷ್ಟ್ರೀಯ ನಿರ್ಬಂಧಗಳು ಮತ್ತು ಹಲವು ಚಂಡಮಾರುತಗಳ ಪರಿಣಾಮವು ನಾಗರಿಕರ ಜೀವನವನ್ನು ಸುಧಾರಿಸುವ ಭರವಸೆಗಳನ್ನು ಈಡೇರಿಸದಂತೆ ಸರ್ಕಾರವನ್ನು ತಡೆಯುತ್ತಿದೆ ಎಂದು ಕಿಮ್ ಹೇಳಿದರು.

ಇದನ್ನೂ ಓದಿ: “ಎಷ್ಟು ಸಾಧ್ಯವೋ ಅಷ್ಟು ಕೇಸ್ ಜಡಿದುಬಿಡಿ!” : ಪತ್ರಕರ್ತರ ಮೇಲಿನ ಪ್ರಭುತ್ವದ ದಮನಕ್ಕೆ ಪರಿಹಾರವೇನು?

“ನಮ್ಮ ಜನರ ಕಷ್ಟಗಳನ್ನು ನಿವಾರಿಸಲು ನನ್ನ ಪ್ರಯತ್ನಗಳು ಮತ್ತು ಪ್ರಾಮಾಣಿಕತೆ ಸಾಕಾಗಲಿಲ್ಲ. ಆದರೂ ನನ್ನ ಜನರು ಯಾವಾಗಲೂ ನನ್ನ ಕೈಬಿಟ್ಟಿಲ್ಲ. ನನ್ನನ್ನು ಸಂಪೂರ್ಣವಾಗಿ ನಂಬಿದ್ದಾರೆ. ನನ್ನ ಅಯ್ಕೆ ಮತ್ತು ದೃಢನಿರ್ಧಾರವನ್ನು ಬೆಂಬಲಿಸಿದ್ದಾರೆ” ಎಂದು ಹೇಳಿದರು.

ಈಗಾಗಲೇ ತನ್ನ ಪರಮಾಣು ಶಸ್ತ್ರಾಸ್ತ್ರಗಳು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿ ಕಾರ್ಯಕ್ರಮಗಳ ಮೇಲೆ ವಿಧಿಸಿರುವ ಅಂತರರಾಷ್ಟ್ರೀಯ ನಿರ್ಬಂಧಗಳಿಂದ ಉತ್ತರ ಕೊರಿಯಾದ ಆರ್ಥಿಕತೆಯು ತೀವ್ರವಾಗಿ ಸ್ಥಗಿತಗೊಂಡಿದೆ. ಕೊರೊನಾ ವೈರಸ್ ಅನ್ನು ತಡೆಗಟ್ಟುವ ಪ್ರಯತ್ನದಲ್ಲಿ ದೇಶವು ಎಲ್ಲಾ ಗಡಿ ಸಂಚಾರವನ್ನು ಸ್ಥಗಿತಗೊಳಿಸಿದ್ದರಿಂದ ಇದಕ್ಕೆ ಮತ್ತಷ್ಟು ಹೊಡೆತ ಬಿದ್ದಿದೆ.


ಇದನ್ನೂ ಓದಿ: ಪ್ರಜಾಪ್ರಭುತ್ವವನ್ನು ಕಾಡುತ್ತಿರುವ ತ್ರಿಬ್ಬಂದಿತನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷರಾಗಿ ಕಪಿಲ್ ಸಿಬಲ್ ಆಯ್ಕೆ

0
ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ (ಎಸ್‌ಸಿಬಿಎ) ​​ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹಿರಿಯ ವಕೀಲ ಕಪಿಲ್ ಸಿಬಲ್ ಗೆಲುವು ಸಾಧಿಸಿದ್ದಾರೆ. ಸಿಬಲ್ 1,066 ಮತಗಳನ್ನು ಪಡೆದರೆ, ಅವರ ಪ್ರತಿಸ್ಪರ್ಧಿ ಹಿರಿಯ ವಕೀಲ ಪ್ರದೀಪ್ ರೈ...