Homeಕರ್ನಾಟಕಪ್ರಶ್ನೆಪತ್ರಿಕೆ ಸೋರಿಕೆ: ಬೆಂಗಳೂರು ವಿವಿಯ 40,000 ವಿದ್ಯಾರ್ಥಿಗಳು ಪರೀಕ್ಷೆ ಬರೆಯದೇ ವಾಪಸ್!

ಪ್ರಶ್ನೆಪತ್ರಿಕೆ ಸೋರಿಕೆ: ಬೆಂಗಳೂರು ವಿವಿಯ 40,000 ವಿದ್ಯಾರ್ಥಿಗಳು ಪರೀಕ್ಷೆ ಬರೆಯದೇ ವಾಪಸ್!

ಪ್ರಶ್ನೆಪತ್ರಿಕೆ ಸೋರಿಕೆಯಾದ ವಿಷಯ ಖಚಿತಪಡುತ್ತಿದ್ದಂತೆ ಬೆಂಗಳೂರು ವಿವಿ ಆಡಳಿತ ಮಂಡಳಿ ಪರೀಕ್ಷೆಯನ್ನು ಮುಂದೂಡಿದ್ದು, ಪರೀಕ್ಷಾ ಕೊಠಡಿಗೆ ಆಗಮಿಸಿದ ವಿದ್ಯಾರ್ಥಿಗಳು ಹಿಂತಿರುಗಬೇಕಾಯಿತು.

- Advertisement -
- Advertisement -

ಬೆಂಗಳೂರು ವಿಶ್ವವಿದ್ಯಾನಿಲಯದ ಬಿ.ಕಾಂ 6 ನೇ ಸೆಮಿಸ್ಟರ್ ಪ್ರಶ್ನೆಪತ್ರಿಕೆ ಸೋರಿಕೆಯಾದ ಕಾರಣ ಸೋಮವಾರ ನಡೆಯಬೇಕಿದ್ದ ಪರೀಕ್ಷೆಯನ್ನು ಮುಂದೂಡಲಾಗಿದ್ದು, ಸುಮಾರು 40,000 ವಿದ್ಯಾರ್ಥಿಗಳು ಈ ಬರೆಯಬೇಕಿತ್ತು ಎಂದು ಆಡಳಿತ ಮಂಡಳಿ ಹೇಳಿದೆ.

ಪ್ರಶ್ನೆ ಪತ್ರಿಕೆ ಸೋರಿಕೆಯಾದ ವಿಷಯ ಖಚಿತಪಡುತ್ತಿದ್ದಂತೆ ಬೆಂಗಳೂರು ವಿವಿ ಆಡಳಿತ ಮಂಡಳಿ ಪರೀಕ್ಷೆಯನ್ನು ಮುಂದೂಡಿದ್ದು, ಪರೀಕ್ಷಾ ಕೊಠಡಿಗೆ ಆಗಮಿಸಿದ ವಿದ್ಯಾರ್ಥಿಗಳು ಹಿಂತಿರುಗಬೇಕಾಯಿತು.

ಇದನ್ನೂ ಓದಿ: ಪೊಲೀಸ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ: ಅಸ್ಸಾಂ ಬಿಜೆಪಿ ಸದಸ್ಯ, ಮಾಜಿ ಡಿಐಜಿಗೆ ಲುಕ್‌ ಔಟ್ ನೋಟೀಸ್

ಈ ಕುರಿತು ದಿ ಹಿಂದು ಪತ್ರಕರ್ತರಾದ ತನು ಟ್ವೀಟ್ ಮಾಡಿದ್ದು, “ಪ್ರಶ್ನೆಪತ್ರಿಕೆ ಸೋರಿಕೆಯಾದ ಕಾರಣ ವಿವಿಯು ಪರೀಕ್ಷೆಯನ್ನು ಮುಂದೂಡಿದೆ. ಸುಮಾರು 40,000 ಅಂತಿಮ ವರ್ಷದ ವಿದ್ಯಾರ್ಥಿಗಳು ಇಂದು (ಸೋಮವಾರ) ಪರೀಕ್ಷೆ ಬರೆಯಬೇಕಿತ್ತು. ಮುಂದಿನ ಪರೀಕ್ಷಾ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಮಂಡಳಿ ಹೇಳಿದೆ” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಬಿಜೆಪಿ ಪಕ್ಷದ ಚುನಾವಣಾ ಚಿಹ್ನೆಯನ್ನು ಬರೆಯಿರಿ. ಮಣಿಪುರ ಪ್ರಶ್ನೆಪತ್ರಿಕೆಗೆ ವ್ಯಾಪಕ ವಿರೋಧ


ಇದನ್ನೂ ಓದಿ: CBSC ಪರೀಕ್ಷೆಯಲ್ಲಿ ಬಿಜೆಪಿ ಲಕ್ಷಣಗಳನ್ನು ಬರೆಯುವಂತೆ ಪ್ರಶ್ನೆ: ಡಿವೈಎಫ್ಐ ಖಂಡನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಪಿಡಿಪಿ-ಬಿಜೆಪಿ ಮೈತ್ರಿಯು ಅಖಂಡವಾಗಿ ಉಳಿದಿದೆಯೇ..?’; ಮುಫ್ತಿ ವಿರುದ್ಧ ಒಮರ್ ಅಬ್ದುಲ್ಲಾ ಕಿಡಿ

0
ಅನಂತನಾಗ್ ರಜೌರಿ ಸಂಸದೀಯ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರಿಗೆ ಮತ ನೀಡುವಂತೆ, ಬಿಜೆಪಿ ಪ್ರಮುಖ ನಾಯಕರೊಬ್ಬರು ತಮ್ಮ ಪಹಾರಿ ಸಮುದಾಯದ ಸದಸ್ಯರನ್ನು ಕೇಳಿದ್ದು, ಮಾಜಿ ಮುಖ್ಯಮಂತ್ರಿ...