Homeಮುಖಪುಟಚಮೇಲಿ ದೇವಿ ಜೈನ್ ಪ್ರಶಸ್ತಿ: ಪತ್ರಕರ್ತೆ ಅರ್ಫಾ ಖಾನೂಮ್ ಶೆರ್ವಾನಿ, ರೋಹಿಣಿ ಮೋಹನ್ ಮುಡಿಗೆ

ಚಮೇಲಿ ದೇವಿ ಜೈನ್ ಪ್ರಶಸ್ತಿ: ಪತ್ರಕರ್ತೆ ಅರ್ಫಾ ಖಾನೂಮ್ ಶೆರ್ವಾನಿ, ರೋಹಿಣಿ ಮೋಹನ್ ಮುಡಿಗೆ

ಅರ್ಫಾ ಖಾನೂಮ್ ಶೆರ್ವಾನಿ ಹಲವು ಬಾರಿ ಟ್ವಿಟರ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಸಾವು ಮತ್ತು ಅತ್ಯಾಚಾರದ ಬೆದರಿಕೆಗಳಿಗೆ ಒಳಗಾಗಿದ್ದಾರೆ

- Advertisement -
- Advertisement -

ದಿ ವೈರ್‌ನ ಹಿರಿಯ ಸಂಪಾದಕಿ ಅರ್ಫಾ ಖಾನೂಮ್ ಶೆರ್ವಾನಿ ಮತ್ತು ಹವ್ಯಾಸಿ ಪತ್ರಕರ್ತೆ ರೋಹಿಣಿ ಮೋಹನ್ ಅವರು ಜಂಟಿಯಾಗಿ ಅತ್ಯುತ್ತಮ ಮಹಿಳಾ ಪತ್ರಕರ್ತೆಯರಾಗಿ 2019 ರ ಚಮೇಲಿ ದೇವಿ ಜೈನ್ ಪ್ರಶಸ್ತಿಯನ್ನು ಪಡೆದಿದ್ದಾರೆ.

1982 ರಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ತಮ್ಮ ಕೆಲಸದ ಮೂಲಕ ಬದಲಾವಣೆ ಉಂಟುಮಾಡಿದ ಮಹಿಳಾ ಪತ್ರಕರ್ತೆಯರಿಗೆ ಚಮೇಲಿ ದೇವಿ ಜೈನ್ ಪ್ರಶಸ್ತಿ ನೀಡಲಾಗುತ್ತದೆ. ಪ್ರಶಸ್ತಿ ಪುರಸ್ಕೃತರು ಇಂಗ್ಲಿಷ್, ಹಿಂದಿ ಮತ್ತು ಸ್ಥಳೀಯ ಭಾಷಾ ಮಾಧ್ಯಮಗಳ ಪ್ರತಿನಿಧಿಗಳಾಗಿದ್ದಾರೆ.

ಇದನ್ನೂ ಓದಿ: 4 ಸಾಮಾಜಿಕ ಕಾರ್ಯಕರ್ತರಿಗೆ ’ಆಲ್ಟರ್ನೇಟಿವ್‌ ನೋಬೆಲ್-2020′ ಘೋಷಣೆ

ಇಲ್ಲಿಯವರೆಗೆ ಪ್ರಶಸ್ತಿ ಪಡೆದ 54 ಜನರಲ್ಲಿ ನೀರ್ಜಾ ಚೌಧರಿ, ತವ್ಲೀನ್ ಸಿಂಗ್, ಪ್ರಿಯಾಂಕಾ ದುಬೆ, ಬರ್ಖಾ ದತ್, ಸುಪ್ರಿಯಾ ಶರ್ಮಾ ಮತ್ತು ದಿ ವೈರ್‌ನ ಸಂಪಾದಕರಾದ ಪಮೇಲಾ ಫಿಲಿಪೋಸ್ ಸೇರಿದ್ದಾರೆ.

ಶ್ರೇಷ್ಠತೆ, ವಿಶ್ಲೇಷಣಾತ್ಮಕ ಕೌಶಲ್ಯ, ಸಾಮಾಜಿಕ ಕಾಳಜಿ, ಒಳನೋಟಗಳು, ಶೈಲಿ, ಪ್ರಾವೀಣ್ಯತೆ, ಧೈರ್ಯ ಮತ್ತು ಸಹಾನುಭೂತಿ ಆಯ್ಕೆಯ ಮಾನದಂಡಗಳಾಗಿವೆ.

ಅರ್ಫಾ ಖಾನೂಮ್ ಶೆರ್ವಾನಿ ದಿ ವೈರ್‌ನಲ್ಲಿ ‘ಅರ್ಫಾ ಕಾ ಇಂಡಿಯಾ’ ಮತ್ತು ‘ಹಮ್ ಭೀ ಭಾರತ್’ ಎಂಬ ಎರಡು ವಿಡಿಯೋ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಇವರು ಟ್ವಿಟರ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಸಾವು ಮತ್ತು ಅತ್ಯಾಚಾರ ಬೆದರಿಕೆಗಳಿಗೆ ಹಲವು ಬಾರಿ ಒಳಗಾಗಿದ್ದಾರೆ. ಟಿವಿ ಪತ್ರಿಕೋದ್ಯಮಕ್ಕಾಗಿ ರೆಡ್‌ಇಂಕ್ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಇನ್ನೊಬ್ಬ ಪ್ರಶಸ್ತಿ ವಿಜೇತೆ ರೋಹಿಣಿ ಮೋಹನ್ ಕೂಡ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಶ್ರೀಲಂಕಾದ ಅಂತರ್ಯುದ್ಧದ ಕುರಿತಾದ ಪತ್ರಿಕೋದ್ಯಮ ಕೆಲಸದ ಆಧಾರದ ಮೇಲೆ ಎರಡು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಅವರು ಶಕ್ತಿ ಭಟ್ ಮೊದಲ ಪುಸ್ತಕ ಪ್ರಶಸ್ತಿ ಮತ್ತು ಟಾಟಾ ಲಿಟರೇಚರ್ ಲೈವ್ ಪ್ರಶಸ್ತಿ ಪಡೆದಿದ್ದಾರೆ.


ಇದನ್ನೂ ಓದಿ: ನೊಬೆಲ್‌ 2020: ಕಪ್ಪು ಕುಳಿ ಬಗೆಗಿನ ಸಂಶೋಧನೆಗೆ ಭೌತಶಾಸ್ತ್ರದ ನೊಬೆಲ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಿಂಸೆಯೊಳಗಣ ಕಾರುಣ್ಯ: ಪ.ರಂಜಿತ್‌ ನಿರ್ದೇಶನದ ‘ಧಮ್ಮಮ್‌’ ತೆರೆದಿಟ್ಟ ತಾತ್ವಿಕತೆ

ಸೋನಿ ಲೈವ್‌ ಒಟಿಟಿಯಲ್ಲಿ ಬಿಡುಗಡೆಯಾಗಿರುವ ‘ವಿಕ್ಟಿಮ್’ ಎಂಬ ಆಂಥಾಲಜಿಯ ಮೊದಲ ಚಾಪ್ಟರ್‌ ‘ಧಮ್ಮಮ್‌’- ವಿಮರ್ಶಕರ ಮನಗೆದ್ದಿದೆ. ದಲಿತ ಪ್ರತಿರೋಧದ ಕಥನಗಳನ್ನು ತಮಿಳು ನೆಲದಲ್ಲಿ ಕಟ್ಟಿಕೊಡುತ್ತಿರುವ ಪ.ರಂಜಿತ್‌, ‘ಧಮ್ಮಮ್‌’ ನಿರ್ದೇಶಕರೆಂಬುದು ಮತ್ತೊಂದು ಗಮನಾರ್ಹ ಸಂಗತಿ. ಅರ್ಧ...