Homeಮುಖಪುಟಉತ್ತರ ಪ್ರದೇಶದ ಕಾರ್ಮಿಕರು ಆದಿತ್ಯನಾಥರ ವೈಯಕ್ತಿಕ ಆಸ್ತಿಯಲ್ಲ: ರಾಹುಲ್ ಗಾಂಧಿ ಕಿಡಿ

ಉತ್ತರ ಪ್ರದೇಶದ ಕಾರ್ಮಿಕರು ಆದಿತ್ಯನಾಥರ ವೈಯಕ್ತಿಕ ಆಸ್ತಿಯಲ್ಲ: ರಾಹುಲ್ ಗಾಂಧಿ ಕಿಡಿ

ಉತ್ತರಪ್ರದೇಶದಿಂದ ಕಾರ್ಮಿಕರನ್ನು ನೇಮಕ ಮಾಡುವ ಮೊದಲು ಇತರ ರಾಜ್ಯಗಳು ತಮ್ಮ ಸರ್ಕಾರದಿಂದ ಅನುಮತಿ ಪಡೆಯಬೇಕಾಗುತ್ತದೆ ಎಂದು ಆದಿತ್ಯನಾಥ್ ಹೇಳಿದ್ದರು.

- Advertisement -
- Advertisement -

ಉತ್ತರ ಪ್ರದೇಶದ ಕಾರ್ಮಿಕರು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರವರ ವೈಯಕ್ತಿಕ ಆಸ್ತಿಯಲ್ಲ ಎಂದು ರಾಹುಲ್‌ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಮುಖ್ಯಮಂತ್ರಿ ಆದಿತ್ಯನಾಥ್ ಅವರ ಮಾತು ಸಂಪೂರ್ಣವಾಗಿ ಅಸಂಬದ್ಧ, ದುರದೃಷ್ಟಕರ. ಜನರು ಮೊದಲು ಭಾರತೀಯರು ನಂತರ ಅವರು ತಮ್ಮ ರಾಜ್ಯಗಳಿಗೆ ಸೇರಿದವರು ಎಂದು ನಾನು ಭಾವಿಸುತ್ತೇನೆ. ಯಾರಾದರೂ ಉತ್ತರ ಪ್ರದೇಶದಿಂದ ದೇಶದ ಉಳಿದ ಭಾಗಗಳಿಗೆ ಕೆಲಸಕ್ಕೆ ಹೋಗುತ್ತಾರೆಯೇ ಎಂಬ ನಿರ್ಧಾರ ಮಾಡಬೇಕಿರುವುದು ಮುಖ್ಯಮಂತ್ರಿ ಅಲ್ಲ. ಕಾರ್ಮಿಕರು ಮುಖ್ಯಮಂತ್ರಿಯ ವೈಯಕ್ತಿಕ ಆಸ್ತಿ ಅಲ್ಲ” ಎಂದು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ನಿನ್ನೆ ಆರ್‌ಎಸ್‌ಎಸ್  ಆಯೋಜಿಸಿದ್ದ ವೆಬ್‌ನಾರ್‌ನಲ್ಲಿ ಮಾಧ್ಯಮಗಳೊಂದಿಗೆ ಸಂವಹನ ನಡೆಸಿದ ಆದಿತ್ಯನಾಥ್, ಉತ್ತರಪ್ರದೇಶದಿಂದ ಕಾರ್ಮಿಕರನ್ನು ನೇಮಕ ಮಾಡುವ ಮೊದಲು ಇತರ ರಾಜ್ಯಗಳು ತಮ್ಮ ಸರ್ಕಾರದಿಂದ ಅನುಮತಿ ಪಡೆಯಬೇಕಾಗುತ್ತದೆ ಎಂದು ಹೇಳಿದ್ದಾರೆ.

“ಯಾವುದೇ ರಾಜ್ಯವು ಮಾನವಶಕ್ತಿಯನ್ನು ಬಯಸಿದರೆ, ರಾಜ್ಯ ಸರ್ಕಾರವು ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ವಿಮೆಗೆ ಖಾತರಿ ನೀಡಬೇಕಾಗುತ್ತದೆ. ಅವರನ್ನು ಕೆಲವು ರಾಜ್ಯಗಳು ನಡೆಸಿಕೊಂಡ ರೀತಿಯಿಂದಾಗಿ ನಮ್ಮ ಅನುಮತಿಯಿಲ್ಲದೆ ಅವರು ನಮ್ಮ ಜನರನ್ನು ಕರೆದೊಯ್ಯುವ ಹಾಗಿಲ್ಲ” ಎಂದು ಅವರು ಹೇಳಿದ್ದರು.

ಆದರೆ ಆದಿತ್ಯನಾಥ್ ಅವರ ಹೇಳಿಕೆಯನ್ನು ರಾಹುಲ್ ಗಾಂಧಿ ತಳ್ಳಿಹಾಕಿದರು. “ಉತ್ತರ ಪ್ರದೇಶದ ನಾಗರಿಕನು ಮಹಾರಾಷ್ಟ್ರದಲ್ಲಿ, ದೆಹಲಿಯಲ್ಲಿ, ಕರ್ನಾಟಕದಲ್ಲಿ , ಬೇರೆಲ್ಲಿಯಾದರೂ ಹೋಗಿ ತನ್ನ ಕನಸುಗಳನ್ನು ಈಡೇರಿಸಲು ಬಯಸಿದರೆ, ಅವನು ಹಾಗೆ ಮಾಡುವ ಹಕ್ಕನ್ನು ಹೊಂದಿರಬೇಕು” ಎಂದು ಅವರು ಹೇಳಿದ್ದಾರೆ.

“ಉತ್ತರ ಪ್ರದೇಶದ ಮುಖ್ಯಮಂತ್ರಿ ಭಾರತವನ್ನು ಈ ರೀತಿ ನೋಡುತ್ತಿರುವುದು ಅತ್ಯಂತ ದುರದೃಷ್ಟಕರ. ಈ ಜನರು ಅವರ ವೈಯಕ್ತಿಕ ಆಸ್ತಿಯಲ್ಲ. ಅವರು ಉತ್ತರ ಪ್ರದೇಶದ ಆಸ್ತಿಯಲ್ಲ. ಈ ಜನರು ಭಾರತೀಯ ಪ್ರಜೆಗಳು ಮತ್ತು ಅವರು ಏನು ಮಾಡಬೇಕೆಂದು ನಿರ್ಧರಿಸುವ ಹಕ್ಕು ಅವರಿಗೆ ಇದೆ. ಅವರು ಬಯಸಿದಂತೆ ಬದುಕಲು ಜೀವನವನ್ನು ನಡೆಸುವ ಹಕ್ಕಿದೆ ” ಎಂದಿದ್ದಾರೆ.

“ಅವರ ಕನಸುಗಳನ್ನು ಈಡೇರಿಸಲು ಅವರನ್ನು ಬೆಂಬಲಿಸುವುದು ನಮ್ಮ ಕೆಲಸ. ನೀವು ನನಗೆ ಸೇರಿದವರು ಎಂದು ಹೇಳುವುದು ನಮ್ಮ ಕೆಲಸವಲ್ಲ. ಇದು ಸಂಪೂರ್ಣವಾಗಿ ಅಸಂಬದ್ಧ ಸ್ಥಾನವಾಗಿದೆ, ” ಎಂದು ಎಂದು ರಾಹುಲ್ ಗಾಂಧಿ ಹೇಳಿದರು.


ಓದಿ: ಅನುಮತಿಯಿಲ್ಲದೆ ರಾಜ್ಯಗಳು ಉತ್ತರ ಪ್ರದೇಶದ ಕಾರ್ಮಿಕರನ್ನು ನೇಮಿಸಿಕೊಳ್ಳುವಂತಿಲ್ಲ: ಯೋಗಿ ಆದಿತ್ಯನಾಥ್


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗೌಪ್ಯತೆಯ ಬದ್ಧತೆ ಮುರಿಯಲು ಒತ್ತಾಯಿಸಿದರೆ ಭಾರತ ತೊರೆಯುತ್ತೇವೆ: ನ್ಯಾಯಾಲಯಕ್ಕೆ ತಿಳಿಸಿದ ವಾಟ್ಸಾಪ್

0
ವಾಟ್ಸಾಪ್‌ನಲ್ಲಿ ಸಂದೇಶಗಳ ಖಾಸಗಿತನ/ಗೌಪ್ಯತೆ (ಎಂಡ್‌-ಟು-ಎಂಡ್ ಎನ್‌ಕ್ರಿಪ್ಶನ್‌) ಯಿಂದ ಸಂದೇಶ ಕಳಿಸಿದವರು, ಸ್ವೀಕರಿಸಿದವರಲ್ಲದೆ ಮೂರನೇ ವ್ಯಕ್ತಿ ಆ ಸಂದೇಶ ನೋಡಲಾಗದು. ಈ ನಿಯಮವನ್ನು ಉಲ್ಲಂಘಿಸಲು ಒತ್ತಾಯಿಸಿದರೆ ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ರದ್ದುಗೊಳಿಸುವುದಾಗಿ ಮೆಟಾ ಒಡೆತನದ...