HomeUncategorizedಮುತ್ತಯ್ಯ ಮುರುಳೀಧರನ್ ಪಾತ್ರದಲ್ಲಿ ವಿಜಯ್ ಸೇತುಪತಿ: '800' ಚಿತ್ರ ಬಾಯ್ಕಾಟ್ ಎಂದ ತಮಿಳಿಗರು!

ಮುತ್ತಯ್ಯ ಮುರುಳೀಧರನ್ ಪಾತ್ರದಲ್ಲಿ ವಿಜಯ್ ಸೇತುಪತಿ: ‘800’ ಚಿತ್ರ ಬಾಯ್ಕಾಟ್ ಎಂದ ತಮಿಳಿಗರು!

ಮುತ್ತಯ್ಯ ಮುರುಳೀದರನ್ ಒಬ್ಬ ಕ್ರೀಡಾಪಟು. ಆತ ರಾಜಕಾರಣಿಯಲ್ಲ. ಅವರ ಯಾವುದೋ ಹೇಳಿಕೆಯನ್ನೇ ಕಾರಣ ಮಾಡಿಕೊಂಡು ಈ ಚಿತ್ರವನ್ನು ಮತ್ತು ಇಲ್ಲಿ ನಟಿಸುತ್ತಿರುವವರನ್ನು ಟೀಕಿಸುವುದು ಸರಿಯಲ್ಲ ಎಂದು ಟ್ವೀಟ್ ಮಾಡಿದ್ದಾರೆ.

- Advertisement -
- Advertisement -

ಖ್ಯಾತ ಕ್ರಿಕೆಟ್ ಬೌಲರ್ ಶ್ರೀಲಂಕಾದ ಮುತ್ತಯ್ಯ ಮುರುಳೀಧರನ್ ಅವರ ಜೀವನಚರಿತ್ರೆ ಆಧಾರಿತ ಚಲನಚಿತ್ರ “800” ನಿರ್ಮಾಣವಾಗುತ್ತಿದ್ದು, ತಮಿಳಿನ ಪ್ರತಿಭಾವಂತ ನಟ ವಿಜಯ್ ಸೇತುಪತಿ ಮುತ್ತಯ್ಯ ಮುರುಳೀಧರನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದು ವಿಜಯ್ ಸೇತುಪತಿ ಮತ್ತು ಮುತ್ತಯ್ಯ ಮುರುಳೀಧರನ್ ಅಭಿಮಾನಿಗಳ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಆದರೆ ಇದರ ನಡುವೆಯೇ ಕೆಲವರು ಇದನ್ನು ವಿರೋಧಿಸಿ, ವಿಜಯ್ ಸೇತುಪತಿ ಈ ಸಿನಿಮಾವನ್ನು ಒಪ್ಪಿಕೊಂಡಿರುವುದಕ್ಕೆ, ಅವರನ್ನು ಮತ್ತು ಈ ಸಿನಿಮಾವನ್ನು ಬಹಿಷ್ಕರಿಸಬೇಕು ಎಂಬ ಅಭಿಯಾನವನ್ನು ಕೈಗೊಂಡಿದ್ದಾರೆ.

ನಿನ್ನೆ 800 ಚಿತ್ರದ ಫಸ್ಟ್‌ಲುಕ್ ಬಿಡುಗಡೆಯಾಗಿದ್ದು, ಇದಕ್ಕೆ ಸಾಕಷ್ಟು ಮೆಚ್ಚುಗೆಯೂ ವ್ಯಕ್ತವಾಗುತ್ತಿದೆ. ಇದನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

ಇದನ್ನೂ ಓದಿ: ಇದ್ದಕ್ಕಿದ್ದಂತೆ ಸಾಧ್ಯವಿಲ್ಲ: ’ಬಾಯ್ಕಾಟ್ ಚೀನಾ’ ಅಭಿಯಾನಕ್ಕೆ ಕ್ರೀಡಾ ಕ್ಷೇತ್ರದ ವಿರೋಧವೇಕೆ?

ಇದಕ್ಕೆ ಸಂಬಂಧಿಸಿದಂತೆ ಟ್ವಿಟ್ಟರ್‌ನಲ್ಲಿ #ShameOnVijaySethupathi ಟ್ರೆಂಡಿಂಗ್ ಆಗುತ್ತಿದ್ದು, ಇದಕ್ಕೆ ತದ್ವಿರುದ್ಧವಾಗಿ ಹಲವಾರು ಜನರು #WeSupportVijaySethupathi ಎಂದು ನಟನ ಪರವಾಗಿ ದನಿಯೆತ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಇದರ ಕುರಿತು ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ.

“ಬ್ರಿಟಿಷರ ವಿರುದ್ಧ ತೀವ್ರ ಹೋರಾಟ ಮಾಡಿದ ಗಾಂಧಿಯವರ ಚಿತ್ರವನ್ನು ಹಾಲಿವುಡ್‌ನಲ್ಲಿ ನಿರ್ಮಿಸಲಾಗಿದೆ. ಅದಕ್ಕಿಲ್ಲದ ವಿರೋಧ ಈ ಚಿತ್ರಕ್ಕೆ ಯಾಕೆ ಎಂದು ಕೆಲವರು ಪ್ರಶ್ನಿಸಿದ್ದಾರೆ. ಶ್ರೀಲಂಕಾದ ರಾವಣನ ಪಾತ್ರವನ್ನು ಭಾರತದಲ್ಲಿ ಅನೇಕರು ಅಭಿನಯಿಸಿದ್ದಾರೆ. ಅಂದ ಮಾತ್ರಕ್ಕೆ ಅವರ ಚಿತ್ರವನ್ನು ಅಥವಾ ನಟನನ್ನು ಬಹಿಷ್ಕರಿಸಲು ಸಾಧ್ಯವೇ? ವಿಜಯ್ ಸೇತುಪತಿ ಒಬ್ಬ ನಟ ಅಷ್ಟೆ. ಆತನಿಗೆ ಎಲ್ಲಾ ಪಾತ್ರಗಳನ್ನೂ ಅಭಿನಯಿಸಲು ಸ್ವಾತಂತ್ರವಿದೆ. ಅದು ಕೇವಲ ಪಾತ್ರವಷ್ಟೆ” ಎಂದು ಇನ್ನೂ ಕೆಲವರು ವಿಜಯ್ ಸೇತುಪತಿ ಪರವಾಗಿ ಮಾತನಾಡಿದ್ದಾರೆ.

ಮುತ್ತಯ್ಯ ಮುರುಳೀಧರನ್ ಒಬ್ಬ ಕ್ರೀಡಾಪಟು. ಆತ ರಾಜಕಾರಣಿಯಲ್ಲ. ಅವರ ಯಾವುದೋ ಹೇಳಿಕೆಯನ್ನೇ ಕಾರಣ ಮಾಡಿಕೊಂಡು ಈ ಚಿತ್ರವನ್ನು ಮತ್ತು ಇಲ್ಲಿ ನಟಿಸುತ್ತಿರುವವರನ್ನು ಟೀಕಿಸುವುದು ಸರಿಯಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಅದಾಗ್ಯೂ, ಈ ಚಿತ್ರಕ್ಕೆ ವಿರೋಧ ವ್ಯಕ್ತವಾಗುತ್ತಿರುವುದೇಕೆ? ವಿಜಯ್ ಸೇತುಪತಿ ಮತ್ತು ಸಿನಿಮಾವನ್ನು ಬಹಿಷ್ಕರಿಸುವಂತೆ ಕರೆ ನೀಡುತ್ತಿರುವುದೇಕೆ? ಇದರ ಹಿಂದಿನ ರಾಜಕೀಯ ಏನಿರಬಹುದು?

ಇದನ್ನೂ ಓದಿ:“ದಿ ಕಪಿಲ್‌ ಶರ್ಮಾ ಶೋ” ಬಾಯ್ಕಾಟ್: ಸಿಡಿದೆದ್ದ ಅರ್ನಾಬ್ ಅಭಿಮಾನಿಗಳು?

ಮುತ್ತಯ್ಯ ಮುರುಳೀಧರನ್ ಮೂಲತಃ ತಮಿಳು ಮಾತನಾಡುವ ಶ್ರೀಲಂಕಾದವರಾಗಿದ್ದು, ಕ್ರಿಕೆಟ್‌ನಲ್ಲಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಆಫ್ ಸ್ಪಿನ್ ಬೌಲಿಂಗ್‌ ಮಾಡುವುದರಲ್ಲಿ ಯಶಸ್ವಿ ಆಟಗಾರರಾಗಿದ್ದಾರೆ. 1996ರಲ್ಲಿ ಶ್ರೀಲಂಕಾ ವಿಶ್ವಕಪ್ ಗೆದ್ದಾಗ ಆ ತಂಡದಲ್ಲಿದ್ದರು. ಟೆಸ್ಟ್‌ ಪಂದ್ಯದಲ್ಲಿ ಅತ್ಯಂತ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಮುತ್ತುಯ್ಯ 2ನೇ ಸ್ಥಾನದಲ್ಲಿದ್ದಾರೆ. 2010ರಲ್ಲಿ ನಡೆದ ಐಪಿಎಲ್ 3ನೇ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಪರವಾಗಿ ಆಡಿದ್ದರು. ಆಗ ಚೆನ್ನೈ ಐಪಿಎಲ್‌ ಚಾಂಪಿಯನ್‌ಶಿಪ್ ಪಡೆದುಕೊಂಡಿತ್ತು. ಇಷ್ಟೇ ಅಲ್ಲದೇ ಕ್ರಿಕೆಟ್ ಇತಿಹಾಸದ ದಂತಕಥೆ ಎಂದೇ ಪ್ರಸಿದ್ಧವಾಗಿದ್ದಾರೆ.

ಇಷ್ಟೆಲ್ಲಾ ಕಾರಣಗಳಿದ್ದಾಗ್ಯೂ ತಮಿಳರು ಮುತ್ತಯ್ಯನನ್ನು ವಿರೋಧಿಸುತ್ತಿರುವುದೇಕೆ? ಮುತ್ತಯ್ಯ ಸ್ವತಃ ಶ್ರೀಲಂಕದವರಾಗಿರುವುದರಿಂದ, ತಮಿಳುನಾಡು ಮತ್ತು ಶ್ರೀಲಂಕಾ ನಡುವೆ ಹಲವು ರಾಜಕೀಯ ಬಿಕ್ಕಟ್ಟುಗಳಿರುವುದರಿಂದ ತಮಿಳರು ಈ ಚಿತ್ರವನ್ನು ಬಹಿಷ್ಕರಿಸುತ್ತಿರಬಹುದೇ?

ಇದನ್ನೂ ಓದಿ: ಸೌಹಾರ್ದತೆ ಸಾರುವ ’ಏಕತ್ವಂ’ ಜಾಹೀರಾತು ನಿಲ್ಲಿಸಿದ ತನಿಷ್ಕ್ ಆಭರಣ ಕಂಪನಿ: ಅಂತದ್ದೇನಿದೆ ಅದರಲ್ಲಿ?

ಟ್ವಿಟ್ಟರ್‌ನಲ್ಲಿ ಮುತ್ತಯ್ಯ ಅವರು ಮಾತನಾಡಿರುವ ಹಳೆಯ ವೀಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದ್ದು, ಅದರಲ್ಲಿ 2009ರ ಶ್ರೀಲಂಕಾದ ಯುದ್ಧ ಮುಗಿದ ದಿನವನ್ನು ತನ್ನ ಜೀವನದಲ್ಲಿ ಪ್ರಮುಖವಾದ ದಿನ ಎಂದು ಹೇಳಿಕೊಂಡಿದ್ದಾರೆ. ಮತ್ತೊಂದು ವೀಡಿಯೋದಲ್ಲಿ, “ಮೊದಲು ನಾನು ಶ್ರೀಲಂಕಾದ ಪ್ರಜೆ, ನಂತರ ತಮಿಳಿನವನು” ಎಂದು ಹೇಳಿದ್ದಾರೆ. ಜೊತೆಗೆ ಮತ್ತೊಂದು ಸಂದರ್ಶನದಲ್ಲಿ ಗೊಟಬಯ ರಾಜಪಕ್ಷೆ ಅವರ ಪರವಾಗಿ ಮುತ್ತಯ್ಯ ಮಾತನಾಡಿದ್ದು, ತಮ್ಮ ರಾಜಕೀಯ ಲಾಭಕ್ಕಾಗಿ ಶ್ರೀಲಂಕಾದಲ್ಲಿ ತಮಿಳರ ಮೇಲೆ ನಡೆದಿದ್ದ ಹತ್ಯಾಕಾಂಡವನ್ನು ಸಮರ್ಥಿಸಿಕೊಳ್ಳುವಂತೆ ಮಾತನಾಡಿದ್ದಾರೆ ಎಂದು ಹಲವರು ಆರೋಪಿಸಿದ್ದಾರೆ.

ಇದನ್ನೂ ಓದಿ: ಐಡಿಸಿ ಸರ್ವೇ: ಭಾರತಕ್ಕೆ ರಫ್ತಾದ 3.25 ಕೋಟಿ ಸ್ಮಾರ್ಟ್‌ಫೋನ್‌ಗಳಲ್ಲಿ 76% ಚೀನಾದವು!

ಈ ಹಿಂದೆ ಸಲ್ಮಾನ್ ಖಾನ್ ನಟಿಸಿದ್ದ ಭಜರಂಗಿ ಭಾಯ್‌ಜಾನ್ ಚಿತ್ರದಲ್ಲಿ ಮುಸ್ಲಿಂ ಒಬ್ಬ ಆಂಜನೇಯನ ಭಕ್ತನ ಪಾತ್ರ ಮಾಡಿದ್ದಕ್ಕೆ ಆ ಚಿತ್ರವನ್ನು ಬಹಿಷ್ಕರಿಸಬೇಕು ಎಂಬ ಕೂಗೆದ್ದಿತ್ತು. ವಿಶೇಷವೆಂದರೆ ಈ ರೀತಿ ವಿವಾದ ಸೃಷ್ಟಿಸುವುದರಿಂದ ಆ ಸಿನಿಮಾಗಳು ಮತ್ತಷ್ಟು ಚೆನ್ನಾಗಿಯೇ ಪ್ರದರ್ಶನಗೊಳ್ಳುತ್ತವೆ.


ಇದನ್ನೂ ಓದಿ: ಮತ್ತೊಂದು ಧೋಕ್‍ಲಾಂ ಆಗಲಿದೆಯೇ ಲಡಾಖ್‍ನ ಗಾಲ್ವನ್ ಕಣಿವೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಹುಲ್ ಗಾಂಧಿಯನ್ನು ರಾಯ್ ಬರೇಲಿ ಜನರಿಗೆ ಕೊಡುತ್ತಿದ್ದೇನೆ; ಅವನು ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ: ಸೋನಿಯಾ ಗಾಂಧಿ

0
'ನನ್ನ ಮಗನನ್ನು ರಾಯ್ ಬರೇಲಿಯ ಜನರಿಗೆ ನೀಡುತ್ತಿದ್ದೇನೆ; ರಾಹುಲ್ ಗಾಂಧಿ ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ' ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಶುಕ್ರವಾರ ಹೇಳಿದ್ದಾರೆ. 20 ವರ್ಷಗಳ ಕಾಲ ಸಂಸದರಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ...