ವಲಸಿಗರ ಬಗ್ಗೆ ನಾವು ಯಾಕೆ ತೀರ್ಮಾನಿಸಬೇಕು, ರಾಜ್ಯಗಳು ತೀರ್ಮಾನಿಸಲಿ: ಸುಪ್ರೀಂ ಕೋರ್ಟ್

ವಕೀಲ ಅಲಖ್ ಅಲೋಕ್ ಶ್ರೀವಾಸ್ತವ ಅವರು ಸಲ್ಲಿಸಿದ್ದ ಅರ್ಜಿಯಲ್ಲಿ, ರಸ್ತೆಗಳಲ್ಲಿ ನಡೆಯುತ್ತಿರುವ ವಲಸಿಗರನ್ನು ಗುರುತಿಸಿ ಅವರಿಗೆ ಆಹಾರ ಮತ್ತು ಆಶ್ರಯ ನೀಡುವಂತೆ ನ್ಯಾಯಾಲಯವು ಕೇಂದ್ರವನ್ನು ಕೇಳಬೇಕೆಂದು ಒತ್ತಾಯಿಸಿದ್ದರು.

ವಲಸಿಗರ ಬಗ್ಗೆ ನಾವು ಯಾಕೆ ತೀರ್ಮಾನಿಸಬೇಕು, ರಾಜ್ಯಗಳು ತೀರ್ಮಾನಿಸಲಿ, ಸುಪ್ರೀಂ ಕೋರ್ಟ್

ವಲಸಿಗರ ಆಹಾರ ಮತ್ತು ನೀರನ್ನು ಒದಗಿಸುವಂತೆ ಕೇಂದ್ರಕ್ಕೆ ಆದೇಶಿಸಬೇಕು ಎಂದು ಕೇಳಿದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಸುಪ್ರೀಂ ಕೋರ್ಟ್ “ಈ ನ್ಯಾಯಾಲಯವು ಯಾರು ನಡೆಯುತ್ತಿದ್ದಾರೆ ಯಾರು ನಡೆಯುತ್ತಿಲ್ಲ ಎಂದು ಮೇಲ್ವಿಚಾರಣೆ ಮಾಡುವುದು ಅಸಾಧ್ಯ” ಎಂದು ಹೇಳಿದೆ.

“ಇದನ್ನು ರಾಜ್ಯ ಸರ್ಕಾರ ತೀರ್ಮಾನಿಸಲಿ. ನ್ಯಾಯಾಲಯ ಏಕೆ ಕೇಳಬೇಕು ಅಥವಾ ತೀರ್ಮಾನಿಸಬೇಕು?” ಎಂದು ಸುಪ್ರೀಂ ಕೋರ್ಟ್ ಕಟ್ಟುನಿಟ್ಟಾಗಿ ಹೇಳಿದೆ.

ವಕೀಲ ಅಲಖ್ ಅಲೋಕ್ ಶ್ರೀವಾಸ್ತವ ಅವರು ಸಲ್ಲಿಸಿದ್ದ ಅರ್ಜಿಯಲ್ಲಿ, ರಸ್ತೆಗಳಲ್ಲಿ ನಡೆಯುತ್ತಿರುವ ವಲಸಿಗರನ್ನು ಗುರುತಿಸಿ ಅವರಿಗೆ ಆಹಾರ ಮತ್ತು ಆಶ್ರಯ ನೀಡುವಂತೆ ನ್ಯಾಯಾಲಯವು ಕೇಂದ್ರವನ್ನು ಕೇಳಬೇಕೆಂದು ಒತ್ತಾಯಿಸಿದ್ದರು.

ರೈಲ್ವೆ ಹಳಿಗಳಲ್ಲಿ ಮಲಗಿದ್ದ 16 ವಲಸಿಗರ ಮೇಲೆ ಸರಕು ರೈಲು ಓಡಿದ ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ನಡೆದ ಘಟನೆಯನ್ನೂ ವಕೀಲರು ಉಲ್ಲೇಖಿಸಿದ್ದರು.

ಇದನ್ನು ರಾಜ್ಯಗಳು ತೀರ್ಮಾನಿಸುವುದು ಎಂದ ಸುಪ್ರೀಂ ಕೋರ್ಟ್, “ಜನರು ನಡೆಯುತ್ತಿದ್ದಾರೆ ಅದನ್ನು ನಿಲ್ಲಿಸುವುದಿಲ್ಲ. ನಾವು ಅದನ್ನು ಹೇಗೆ ತಡೆಯಬಹುದು” ಎಂದು ನ್ಯಾಯಾಧೀಶರು ಹೇಳಿದ್ದಾರೆ.

ರೈಲು ಅಪಘಾತದ ಬಗ್ಗೆ ಪ್ರತಿಕ್ರಿಯಿಸಿದ ನ್ಯಾಯಾಲಯವು “ಅವರು ರೈಲ್ವೆ ಹಳಿಗಳಲ್ಲಿ ಮಲಗಿದ್ದರೆ, ಅದನ್ನು ತಡೆಯಲು ಹೇಗೆ ಸಾಧ್ಯ?” ಎಂದು ಹೇಳಿದೆ.

ಅರ್ಜಿ ಸಲ್ಲಿಸಿದ ವಕೀಲರನ್ನು ಆಕ್ಷೇಪಿಸಿದ ನ್ಯಾಯಾಲಯವು, ಅರ್ಜಿಯು ವೃತ್ತಪತ್ರಿಕೆ ತುಣುಕುಗಳ ಮೇಲೆ ಸಂಪೂರ್ಣವಾಗಿ ಆಧಾರಿತವಾಗಿದೆ ಎಂದು ಹೇಳಿದೆ.

“ಪ್ರತಿಯೊಬ್ಬ ವಕೀಲರು ಪತ್ರಿಕೆಯಲ್ಲಿನ ಘಟನೆಗಳನ್ನು ಓದಿ, ಪ್ರತಿಯೊಂದು ವಿಷಯದ ಬಗ್ಗೆಯೂ ಜ್ಞಾನ ಹೊಂದುತ್ತಾರೆ. ನಿಮ್ಮ ಜ್ಞಾನವು ಸಂಪೂರ್ಣವಾಗಿ ವೃತ್ತಪತ್ರಿಕೆಯ ತುಣುಕುಗಳನ್ನು ಆಧರಿಸಿದೆ. ನಂತರ ಈ ನ್ಯಾಯಾಲಯವು ತೀರ್ಮಾನಿಸಬೇಕೆಂದು ನೀವು ಬಯಸುತ್ತೀರಿ. ಅದನ್ನು ರಾಜ್ಯವು ತೀರ್ಮಾನಿಸಲಿ. ಈ ನ್ಯಾಯಾಲಯ ಏಕೆ ತೀರ್ಮಾನಿಸಬೇಕು ಅಥವಾ ಕೇಳಬೇಕು? ನಾವು ನಿಮಗೆ ವಿಶೇಷ ಪಾಸ್ ನೀಡುತ್ತೇವೆ. ನೀವು ಹೋಗಿ ಸರ್ಕಾರದ ಆದೇಶಗಳನ್ನು ಜಾರಿಗೊಳಿಸಬಹುದೇ?” ಎಂದು ನ್ಯಾಯಾಲಯವೂ ಅರ್ಜಿಯನ್ನು ವಜಾಗೊಳಿಸಿ ಹೇಳಿದೆ.

ವಲಸಿಗರನ್ನು ಮನೆಗೆ ಕರೆದೊಯ್ಯಲು ಸರ್ಕಾರ ಈಗಾಗಲೇ ಸಾರಿಗೆ ವ್ಯವಸ್ಥೆ ಆರಂಭಿಸಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಕೇಂದ್ರ ಸರ್ಕಾರದ ಪರವಾಗಿ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.

ಇನ್ನೂ ಹೆದ್ದಾರಿಯಲ್ಲಿ ನಡೆಯುತ್ತಿರುವವರನ್ನು ಉಲ್ಲೇಖಿಸಿ “ರಾಜ್ಯಗಳ ನಡುವಿನ ಒಪ್ಪಂದಕ್ಕೆ ಒಳಪಟ್ಟು, ಪ್ರತಿಯೊಬ್ಬರಿಗೂ ಪ್ರಯಾಣಿಸಲು ಅವಕಾಶ ಸಿಗುತ್ತದೆ. ಅವರ ಮೇಲೆ ಬಲ ಪ್ರಯೋಗ ಮಾಡುವುದರಿಂದ ಪ್ರತಿಕೋಲ ಪರಿಣಾಮ ಉಂಟಾಗಬಹುದು” ಎಂದು ಕೇಂದ್ರ ಸರ್ಕಾರದ ಪರವಾಗಿ ವಕೀಲರು ಹೇಳಿದರು.

ರಾಷ್ಟ್ರವ್ಯಾಪಿ ಲಾಕ್ ಡೌನ್ ಆಗಿರುವುದರಿಂದ ಉದ್ಯೋಗ ಮತ್ತು ಆಶ್ರಯವಿಲ್ಲದೆ ಲಕ್ಷಾಂತರ ವಲಸಿಗರು ಸಾವಿರಾರು ಕಿ.ಮೀ ದೂರದಲ್ಲಿರುವ ತಮ್ಮ ಗ್ರಾಮಗಳಿಗೆ ಮಹಾವಲಸೆ ಹೊರಟಿದ್ದರು. ಈ ಸಮಯದಲ್ಲಿ ಹಲವಾರು ಜನರು ಅಫಘಾತ ಹಾಗೂ ಬಳಲಿಕೆಯಿಂದ ಸಾವಿಗೀಡಾಗಿದ್ದಾರೆ.

ಪ್ರತಿ ರಾಜ್ಯವು ವಲಸಿಗರು ರಸ್ತೆಗಳಲ್ಲಿ ಅಥವಾ ರೈಲು ಹಳಿಗಳಲ್ಲಿ ನಡೆಯದಂತೆ ನೋಡಿಕೊಳ್ಳಬೇಕು ಎಂದು ಗೃಹ ಸಚಿವಾಲಯ ಇತ್ತೀಚೆಗೆ ಮಾರ್ಗಸೂಚಿಗಳನ್ನು ಹೊರಡಿಸಿದೆ.


ಓದಿ: ಹೋಗುವುದಾದರೆ ಎಲ್ಲಿಗೆ? ಇರುವುದಾದರೆ ಹೇಗೆ? ; ತುಮಕೂರಿನಲ್ಲಿ ಸಿಕ್ಕಿಕೊಂಡ ವಲಸೆ ಕಾರ್ಮಿಕರ ಗೋಳು


ನಮ್ಮ ಯೂಟ್ಯೂಬ್ ಚಾನೆಲ್ ಗೆ ಭೇಡಿ ನೀಡಲು ಇಲ್ಲಿ ಕ್ಲಿಕ್ ಮಾಡಿ


 

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here