Homeಮುಖಪುಟ#भाजपा_के_आतंकवादी | ‘ಬಿಜೆಪಿ ಭಯೋತ್ಪಾದಕರು’ - ಟ್ವಿಟರ್‌‌‌ ಟ್ರೆಂಡ್

#भाजपा_के_आतंकवादी | ‘ಬಿಜೆಪಿ ಭಯೋತ್ಪಾದಕರು’ – ಟ್ವಿಟರ್‌‌‌ ಟ್ರೆಂಡ್

- Advertisement -
- Advertisement -

ಉತ್ತರ ಪ್ರದೇಶದ ಲಖಿಂಪುರ್‌‌‌‌‌‌‌‌ ಖೇರಿಯಲ್ಲಿ ರೈತರ ಹತ್ಯೆಗೆ ಸಂಬಂಧಿಸಿದಂತೆ ಇಂದು ಎರಡು ವಿಡಿಯೊ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೊ ವೈರಲ್ ಆಗುತ್ತಿದ್ದಂತೆ ಬಿಜೆಪಿ ವಿರುದ್ದ ಆಕ್ರೊಶ ಹೆಚ್ಚಿದ್ದು, ಟ್ವಿಟರ್‌ನಲ್ಲಿ ‘ಬಿಜೆಪಿ ಭಯೋತ್ಪಾದಕರು’(#भाजपा_के_आतंकवादी) ಹ್ಯಾಶ್‌‌‌ ಟ್ಯಾಗ್‌ ಟ್ರೆಂಡ್ ಆಗಿದೆ.

ಒಕ್ಕೂಟ ಸರ್ಕಾರದ ಸಚಿವನ ಮಗ ರೈತರ ಮೇಲೆ ಕಾರು ಹರಿಸಿ ನಾಲ್ವರನ್ನು ಹತ್ಯೆ ಮಾಡಿದ್ದಾನೆ ಎಂದು ಎಫ್‌ಐಆರ್‌ ದಾಖಲಾಗಿದೆ. ಈ ಘಟನೆ ಬಗ್ಗೆ ಕಳೆದ ಎರಡು ದಿನಗಳಿಂದ ದೇಶಾದ್ಯಂತ ಆಕ್ರೋಶ ಭುಗಿಲೆದ್ದಿತ್ತು. ಆದರೆ ಬಿಜೆಪಿ ಬೆಂಬಲಿಗರು ಘಟನೆ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಪಕ್ಷವನ್ನು ಸಮರ್ಥನೆ ಮಾಡುತ್ತಲೆ ಇದ್ದರು. ಆದರೆ ಇದೀಗ ಘಟನೆಯ ಎರಡು ವಿಡಿಯೋ ವೈರಲ್ ಆಗಿದೆ.

ಇದನ್ನೂ ಓದಿ: ಯುಪಿ ರೈತರ ಕೊಲೆ ಖಂಡಿಸಿ ದೇಶಾದ್ಯಂತ ಭುಗಿಲೆದ್ದ ಪ್ರತಿಭಟನೆಗಳು: ಚಿತ್ರಗಳಲ್ಲಿ ನೋಡಿ

ಒಂದು ವಿಡಿಯೋದಲ್ಲಿ, ಘೋಷಣೆ ಕೂಗುತ್ತಾ ಹೊರಟಿದ್ದ ರೈತರ ಗುಂಪಿನ ಮೇಲೆ ಹಿಂದಿನಿಂದ ಎಸ್‌ಯುವಿಯೊಂದು ಹರಿಸಲಾಗಿದೆ. ಇದರಿಂದಾಗಿ  ರೈತರು ಚಲ್ಲಾಪಿಲ್ಲಿಯಾಗಿದ್ದು, ಕೆಲ ರೈತರ ಮೇಲೆ ನೇರವಾಗಿ ಕಾರು ಹರಿದಿದೆ. ಮತ್ತೊಂದು ವಿಡಿಯೊದಲ್ಲಿ ಜೀಪ್‌ನಿಂದ ಇಳಿದು ವ್ಯಕ್ತಿಯೊಬ್ಬ ಪರಾರಿಯಾಗುತ್ತಿರುವ ವಿಡಿಯೊವಾಗಿದೆ. ಈ ವಿಡಿಯೊದಲ್ಲಿ ಜೀಪ್‌ ಪಕ್ಕದಲ್ಲೇ ವ್ಯಕ್ತಿಯೊಬ್ಬರು ನರಳಾಡುತ್ತಿರುವುದು ಕೂಡಾ ಕಾಣುತ್ತದೆ.

ಈ ವಿಡಿಯೋಗಳು ಹೊರಬರುತ್ತಿದ್ದಂತೆ ಸಮಾಜಿಕ ಜಾಲತಾಣದಲ್ಲಿ ಬಿಜೆಪಿ ವಿರುದ್ದ ಆಕ್ರೋಶ ವ್ಯಕ್ತವಾಗಿದೆ. ಟ್ವಿಟರ್‌ನಲ್ಲಿ ಬಿಜೆಪಿ ಭಯೋತ್ಪಾದಕರು ಎಂಬ ಹ್ಯಾಶ್ ಟ್ಯಾಗ್ ಟ್ರೆಂಡ್ ಆಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕನ್ಹಯ್ಯ ಕುಮಾರ್‌ ಅವರು, “ಲಖಿಂಪುರದಲ್ಲಿ ಸಚಿವರ ಕಾರು ರೈತರನ್ನು ನಜ್ಜುಗುಜ್ಜಾಗಿಸಿದೆ. ಆದರೆ ಸರ್ಕಾರ ಮಾತ್ರ ಲಕ್ನೋದಲ್ಲಿ ಸಂಭ್ರಮಿಸುತ್ತಿದೆ. ಕೊಲೆಗಾರರು ಮುಕ್ತವಾಗಿ ತಿರುಗಾಡುತ್ತಿದ್ದಾರೆ ಮತ್ತು ವಿರೋಧ ಪಕ್ಷದ ನಾಯಕರನ್ನು ಬಂಧಿಸಲಾಗುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಇತ್ತ ಹತ್ಯೆಗೀಡಾದ ರೈತರಿಗಾಗಿ ಶೋಕಿಸುತ್ತಿರುವ ದೇಶ : ಅತ್ತ ಯುಪಿಯ ಕಾರ್ಯಕ್ರಮಗಳಲ್ಲಿ ಪ್ರಧಾನಿ ಭಾಗಿ

ಅವರ ಟ್ವೀಟ್‌ಗೆ ಘಟನೆಯ ಬಗ್ಗೆಗಿನ ದೀರ್ಘ ವಿಡಿಯೊವನ್ನು ಟ್ಯಾಗ್ ಮಾಡಿರುವ ಸೌರಭ್ ರಾಜ್ ಎಂಬುವವರು, “ಬಿಜೆಪಿ ಭಯೋತ್ಪಾದಕರು ಎಲ್ಲಾ ಮೂರು ಕಾರುಗಳನ್ನು ರೈತರ ಮೇಲೆ ಚಲಾಯಿಸಿದ ವೀಡಿಯೊದ ದೀರ್ಘ ಆವೃತ್ತಿ ಇಲ್ಲಿದೆ” ಎಂದು ಎಂದು ಹೇಳಿದ್ದಾರೆ.

ಜಾಜ್ಜ್‌ ಅವರು, “ಭಾರತದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರದಿಂದ ಕೊಲೆಗೆ ಯತ್ನಿಸಲಾಗಿದೆ. ಇದುವರೆಗೂ ಯಾವುದೇ ನ್ಯಾಯ ದೊರೆತಿಲ್ಲ. 6 ರೈತರನ್ನು ಕೊಂದು ಕೂಡಾ ಕ್ರಿಮಿನಲ್‌ ಮಾತ್ರ ಮುಕ್ತವಾಗಿ ತಿರುಗಾಡುತ್ತಿದ್ದಾನೆ” ಎಂದು ಬರೆದಿದ್ದಾರೆ.

ಕುಲ್ವಿಂದರ್‌ ಅವರು, “ಸಮುದಾಯದ ಸಮಸ್ಯೆಗಳನ್ನು ಪರಿಹರಿಸಲು ಈ ಮಂತ್ರಿಗಳನ್ನು ನೇಮಿಸಲಾಗಿದೆ. ಆದರೆ ಅಜಯ್ ಮಿಶ್ರಾ ಮತ್ತು ಅವರ ಮಗನಂತಹ ರೀತಿಯ ಮಂತ್ರೆಗಳು ನಮ್ಮ ದೇಶವನ್ನು ಹಾಳು ಮಾಡುತ್ತಿದ್ದಾರೆ.” ಎಂದು ಬರೆದಿದ್ದಾರೆ.

 

ಶೆರ್ನಿ ಅವರು, “ಹಾಡಹಗಲೇ ಅಮಾಯಕರ ಕೊಲೆ ಪ್ರಕರಣಗಳು ಹೆಚ್ಚಾಗುತ್ತಿದೆ, ಯಾಕೆ?” ಎಂದು ಪ್ರಶ್ನಿಸಿದ್ದಾರೆ.

 

 

 

 

 

ಇದನ್ನೂ ಓದಿ: ರೈತರ ಮೇಲೆ ಕಾರು ಹರಿಸುತ್ತಿರುವ ಎರಡು ವಿಡಿಯೋ ವೈರಲ್: ಜಾಲತಾಣಗಳಲ್ಲಿ ಭುಗಿಲೆದ್ದ ಆಕ್ರೋಶ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್‌ಗೆ ಯಾರೂ ದೇಶ ಪ್ರೇಮದ ಪಾಠ ಹೇಳಿ ಕೊಡುವ ಅಗತ್ಯವಿಲ್ಲ: ಸಚಿವ ಪರಮೇಶ್ವರ್

0
ರಾಜ್ಯಸಭೆ ಚುನಾವಣೆಯ ಗೆಲುವಿನ ಸಂಭ್ರಮಾಚರಣೆ ವೇಳೆ ನಾಸಿರ್ ಹುಸೇನ್ ಬೆಂಬಲಿಗರು 'ಪಾಕಿಸ್ತಾನ್ ಝಿಂದಾಬಾದ್' ಘೋಷಣೆ ಕೂಗಿದ್ದಾರೆ ಎಂಬ ಆರೋಪದ ಕುರಿತು ಗೃಹ ಸಚಿವ ಡಾ.ಜಿ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿಗೆ ತಿರುಗೇಟು ಕೊಟ್ಟಿದ್ದಾರೆ. ಇಂದು...