Homeಅಂಕಣಗಳುಆಘಾತವಾಣಿ | `ಜೈಲೊಳಗೆ ಸ್ವೋಭುನಕ್ಕೆ ರೆಡಿ ಮಾಡಿ, ಆಮ್ಯಾಲೆ ನನ್ನ ಅರೆಸ್ಟ್ ಮಾಡ್ರುಲಾ’

ಆಘಾತವಾಣಿ | `ಜೈಲೊಳಗೆ ಸ್ವೋಭುನಕ್ಕೆ ರೆಡಿ ಮಾಡಿ, ಆಮ್ಯಾಲೆ ನನ್ನ ಅರೆಸ್ಟ್ ಮಾಡ್ರುಲಾ’

- Advertisement -
- Advertisement -
  • ಅಟ್ಯಾಕ್ ಹನ್ಮಂತ |

ನಮಸ್ಕಾರ ಆಘಾತವಾಣಿ ವಾರ್ತೆಗಳಿಗೆ ಸ್ವಾಗತ, ಓದುತ್ತಿರುವವರು ಅಟ್ಯಾಕ್ ಹನ್ಮಂತ.

ಕಣ್ಣಿಗೆ ಏನೇ ಕಂಡರೂ ಅದನ್ನು ಉದ್ಘಾಟನೆ ಮಾಡಿ ಪೋಟೋ ತಗೊಳ್ತೀನಿ ಅಂತ ಓಡೋಡಿ ಬರುವ ಮಾನ್ಯ ಪ್ರದ್ರಾನ ಮಂತ್ರಿ ‘ಪಕೋಡಪ್ಪ ಕುಂಡಾಲೇಂದ್ರ’ ಅವರು ಇತ್ತೀಚೆಗೆ ಒಂದು ವಿಶೇಷ ಉದ್ಘಾಟನೆಯಿಂದಾಗಿ ಮತ್ತೆ ಸುದ್ದಿಯಾಗಿದ್ದಾರೆ. ಉತ್ತರಪ್ರದೇಶದಲ್ಲಿ ಮಾಯಾವತಿ ಮತ್ತು ಅಖಿಲೇಶ್ ಯಾದವ್ ಇವರುಗಳು ಕಳೆದ ತಮ್ಮ ಅಧಿಕಾರಾವಧಿಯಲ್ಲಿ ದೆಹಲಿಗೆ ಹೊಂದಿಕೊಂಡಂತೆ ನೂರಾರು ಕಿಲೋಮೀಟರ್‍ಗಳ ಎಕ್ಸ್‍ಪ್ರೆಸ್ ಹೈವೇ ನಿರ್ಮಿಸಿದ್ದರು. ಅದನ್ನು ತಮ್ಮ ವೈಯಕ್ತಿಕ ಪ್ರಚಾರಕ್ಕೆ ಬಳಸಿಕೊಳ್ಳುವ ಪ್ರತಿಭೆಯ ಕೊರತೆಯಿಂದಾಗಿ ಹಾಲಿ ವಿಫಲ ರಾಜಕಾರಣಿಗಳಾಗಿದ್ದಾರೆ. ಆದರೆ ಪಕೋಡೇಂದ್ರನ ಬಹುಮುಖ ಪ್ರತಿಭೆಗೆ ಮತ್ತೊಂದು ತಾಜಾ ನಿದರ್ಶನ ಇದೀ ವರದಿಯಾಗಿದೆ.. ದೆಹಲಿಯಿಂದ ಮೀರತ್ ನಡುವೆ ಜುಜುಬಿ 9 ಕಿಲೋಮೀಟರ್ ಎಕ್ಸ್‍ಪ್ರೆಸ್ ಹೈವೇಯನ್ನು ನಿರ್ಮಿಸಿ ‘ನಾನೇ ಮಾಡಿದ್ದು, ನಾನೇ ನಾನೇ..’ ಎಂದು ಕೂಗಾಡಿ ಕಿರುಚಾಡಿ ಫೋಟೋ ತಗೆಸಿ ಪ್ರಚಾರ ಮಾಡಿ ಕೊಂಡಿದ್ದಾರೆ. ಇಂಥದೊಂದು ಚಿಲ್ಲರೆ ಸುದ್ದಿಗಾಗಿಯೇ ಕಾದು ಕುಳಿತಿದ್ದ ಮೀಡಿಯಾಗಳು ಮಂತ್ರಕ್ಕಿಂತ ಉಗುಳನ್ನೇ ಹೆಚ್ಚಾಗಿ ಖರ್ಚುಮಾಡಿ ತಮ್ಮ ಖಾಲಿತಲೆಯನ್ನು ಪ್ರದರ್ಶನಕ್ಕಿಟ್ಟಿರುವುದು ವರದಿಯಾಗಿದೆ. ಈ ಸುದ್ದಿಯಿಂದ ಉತ್ತೇಜಿತನಾದ ಜಡೇಮಾಯಸಂದ್ರದ ಹಾಸ್ಯನಟ ಗಜ್ಜೇಶ್ ಅವರು, ತಮ್ಮ ‘ಮನೆಯ ಶೌಚಾಲಯಕ್ಕೆ ಹಾಕಿಸಿರೋ ಹೊಸ ಟೈಲ್ಸ್‍ಗಳು ಮತ್ತು ತಮ್ಮೂರಿನಲ್ಲಿ ಹೊಸದಾಗಿ ಹಾಕಿರುವ ರಸ್ತೆಉಬ್ಬುಗಳನ್ನು ಉದ್ಘಾಟಿಸಲು ಕ್ಯಾಮೆರಾ ಸಮೇತ ತಾವು ಬರಲೇಬೇಕೆಂದು’ ಪ್ರದಾನಮಂತ್ರಿ ‘ಪಕೋಡೇಂದ್ರ’ ಅವರನ್ನು ಬೇಡಿಕೊಂಡಿದ್ದಾರೆಂದು ವರದಿಯಾಗಿದೆ.

* * * *

ದೇಶದ ಬ್ಯಾಂಕ್‍ಗಳಲ್ಲಿ ಬೇಕಾಬಿಟ್ಟಿ ಸಾಲ ಮಾಡಿ ದೇಶ ಬಿಟ್ಟು ಓಡಿಹೋಗಲು ಸನ್ಮಾನ್ಯ ‘ಕುಂಡಾಲೇಂದ್ರ’ ಅವರು ಶುರು ಮಾಡಿರುವ ‘ಕುಣ್ಕೊಂಡ್ ಬನ್ನಿ ದೋಚ್ಕೊಂಡ್ ಓಡಿ’ ಯೋಜನೆಯಡಿಯಲ್ಲಿ ಇಲ್ಲಿಯವರೆಗೆ 33 ಮಂದಿ ಕಾರ್ಪೊರೇಟ್ ಕಳ್ಳರು ತಾವು ಸಾಲ ಪಡೆದ ಬ್ಯಾಂಕುಗಳ ತಲೆಯನ್ನು ನುಣ್ಣಗೆ ಬೋಳಿಸಿ ದೇಶ ಬಿಟ್ಟು ಓಡಿ ಹೋಗಿರುವುದು ಹಳೆಯ ವಿಷಯ. ಈಗ ಈ ಯೋಜನೆಯಡಿಯಲ್ಲಿ ದೇಶಬಿಟ್ಟ ಮೊದಲಿಗರಾದ ಮಲ್ಯಪ್ಪನವರನ್ನು ಲಂಡನ್‍ನಿಂದ ವಾಪಸ್ಸು ಕಳಿಸಲು ಕುಂಡಾಲೇಂದ್ರ ಬ್ರಿಟನ್ ಸರ್ಕಾರವನ್ನು ಅಂಗಲಾಚಿ ಕೇಳಿಕೊಂಡಿದ್ದರು. ಇದಕ್ಕೆ ಮಲ್ಯಪ್ಪನವರು “ಇಂಡಿಯಾ ದೇಸುದ ಜೈಲ್‍ಗುಳಲ್ಲಿ ಸೊಳ್ಳೆಕಾಟ ಜ್ಯಾಸ್ತಿ, ನಿಂಬೆ ಶರ್ಬತ್ತಿನಷ್ಟು ಗಟ್ಟಿ ಸಾಂಬಾರ್ ಮಾಡ್ತಾರೆ, ಆಲೂಗಡ್ಡೆ ಪಲ್ಯುದ ಬದ್ಲು ಬೂಸ್ಟು ಹಿಡಿದ ಹಪ್ಪಳ ಕೊಡ್ತಾರೆ. ನಾನು ಇಂಥಾ ಇಂಡಿಯಾ ಜೈಲ್‍ಗುಳಿಗೆ ಹ್ವೋಗಲ್ಲ, ಮೊದ್ಲು ಆ ದೇಸುದ ಜೈಲುಗಳಲ್ಲಿ ಸಿಮ್ಮಿಂಗ್ ಫೂಲ್ ಕಟ್ಟುಸಿ, ತ್ರಿಬಲ್ ಬೆಡ್ರೂಂ ಜೈಲುಕ್ವಾಣೆಯೊಳಗೆ ನನ್ನ ಹೊಸ ಹೆಂಡ್ತಿ ಜ್ವತೆ ಶೋಭನ ಮಾಡ್ಕ್ಯನಕ್ಕೆ ಕುರ್ಲಾನ್ ಹಾಸಿಗೆ ವ್ಯವಸ್ಥೆ ಮಾಡಿ ಮುಗಿದ ಮ್ಯಾಲೆ ಬೇಕಾದ್ರೆ ನನ್ನುನ್ನ ಅರೆಸ್ಟು ಮಾಡಿ” ಎಂದು ಉತ್ತರಿಸಿದ್ದಾರಂತೆ. ಈ ಸಂಬಂಧ ಕುರ್ಲಾನ್ ಹಾಸಿಗೆಯ ಮೇಲೆ ಚೆಲ್ಲಲು ಮಲ್ಲಿಗೆಹೂವುಗಳ ಪೂರೈಕೆದಾರರರಿಗೆ ಕುಂಡಾಲೇಂದ್ರ ಟೆಂಡರ್ ಕರೆಯುತ್ತಾರಾ ಎಂದು ಜನರು ಕುಂಡೆ ಬಡಕೊಂಡು ನಗುತ್ತಿದ್ದಾರೆ ಎಂದು ವರದಿಯಾಗಿದೆ.

* * * *

ಇತ್ತೀಚೆಗೆ ವಿವಿಧ ರಾಜ್ಯಗಳಲ್ಲಿ ನಡೆದ ಉಪಚುನಾವಣೆಗಳಲ್ಲಿ ನೂರಾರು ಸಂಖ್ಯೆಯಲ್ಲಿ ಕೆಟ್ಟು ಕುಲಗೆಟ್ಟಿರುವ ಇವಿಎಂಗಳನ್ನು ಬಳಸಲಾಗಿದೆಯೆಂದು ಚುನಾವಣಾ ಅಭ್ಯರ್ಥಿಗಳು ಎಲೆಕ್ಷನ್ ಕಮಿಷನ್ನಿಗೆ ದೂರು ಕೊಟ್ಟಿದ್ದಾರೆ. ಈ ಸಂಬಂಧ ಉತ್ತರಿಸಿರುವ ಚುನಾವಣಾ ಆಯೋಗವು `ಆ ಸ್ಥಳಗಳಲ್ಲಿ ಟೆಂಪ್ರೇಚರ್ರು ಶ್ಯಾನೆ ಹೆಚ್ಚಾಗಿಹ್ವೋಗಿ ನಂ ಇವಿಎಂ ಮೆಷೀನುಗಳ ತಲೆಕೆಟ್ಟು, ಇದ್ದುಕ್ಕಿದ್ದಂತೆ ಹುಚ್ಚ್‍ನಾಯಿ ಕಚ್ಚುದಂಗೆ ಬಿಜೆಪಿಗೆ ವೋಟು ಹಾಕ್ತಾ ಕುಂತವೆ‘ ಎಂದೂ ವಿವರಣೆ ಕೊಟ್ಟಿದೆ. ವಾತಾವರಣದ ಉಷ್ಣಾಂಶ ಹೆಚ್ಚಾಗಿ ಮೊಬೈಲ್‍ಗಳು ಕೆಟ್ಟಿಲ್ಲ, ಕಂಪ್ಯೂಟರ್‍ಗಳು ಕೆಟ್ಟಿಲ್ಲ, ಟಿವಿ, ಮಿಕ್ಸಿ, ಟೇಪ್‍ರೆಕಾರ್ಡರಿನಂಥ ಎಲೆಕ್ಟ್ರಾನಿಕ್ ವಸ್ತುಗಳೂ ಕೆಟ್ಟ ಉದಾಹರಣೆಯಿಲ್ಲ. ಹೀಗಿರುವಾಗ ಇವಿಎಂಗಳು ಮಾತ್ರ ಉಷ್ಣಾಂಶಕ್ಕೆ ಹೆದರಿ ಯಾಕೆ ಉಚ್ಚೆ ಹುಯ್ದುಕೊಳ್ಳುತ್ತಿವೆ ಎಂಬ ಪ್ರಶ್ನೆ ಜನಸಾಮಾನ್ಯರನ್ನು ಕಾಡುತ್ತಿದೆ. ಇವನ್ನು ತಯಾರಿಸಿದ್ದು ಸರ್ಕಾರದ ಎಲೆಕ್ಟ್ರಾನಿಕ್ ಎಂಜಿನಿಯರ್‍ಗಳೋ ಅಥವ ಹಳೇಸೀಸ ಖಾಲಿ ಬಾಟ್ಲು ವ್ಯಾಪಾರಿಗಳೋ ಎಂದು ಜನರು ತಲೆ ಕೆರೆದುಕೊಳ್ಳುತ್ತಿದ್ದಾರೆ.

* * * *

ರೈತರ ಸಾಲ ಮನ್ನಾ ಮಾಡದಿದ್ರೆ ನಾವು ಕರ್ನಾಟಕ ಬಂದ್ ಮಾಡ್ತೀವಿ’ ಅಂತ ತಮ್ಮದೇ ತೊಡೆಯನ್ನು ತಟ್ಟಿಕೊಂಡು ಹೇಳಿದ ಧಡಿಯೂರಪ್ಪನವರು ನಂತರ ಕೈ ಪಕ್ಷವು ಕೋರ್ಟ್‍ಗೆ ಹೋಗಿ ಕೇಸಾಕ್ತೀವಿ ಎಂದು ಹೆದರಿಸಿದ ಮೇಲೆ.. ನಾನಂಗೆ ಹೇಳೇ ಇಲ್ಲ, ಮೋಸ್ಟ್ ಲಿ ನನ್ನ ಆತ್ಮ ದೇಹದಿಂದ ಪುಸುಕ್ ಅಂತ ಹೊರಬಂದು.. ಡೈಲಾಗ್ ಹೊಡೆದು ದಬುಕ್ ಅಂತ ಒಳಕ್ಕೆ ಹೋಗಿರಬೇಕು ಎಂದು ಪ್ಲೇಟ್ ಚೇಂಜ್ ಮಾಡಿಬಿಟ್ಟಿದ್ದರು. ಈ ಅವಾಂತರಗಳನ್ನು ಕಣ್ಣಾರೆ ಕಂಡ ಕರ್ನಾಟಕದ ಜನ ಬಂದನ್ನೇ ಬಂದ್ ಮಾಡಿ ಧಡಿಯೂರಪ್ಪನಿಗೆ ಮಣ್ಣುಮುಕ್ಕಿಸಿದ್ದಾರೆ. ಈ ಸಂದರ್ಭದಲ್ಲಿ ಮೈಸೂರಿನಲ್ಲಿ ವಿಶೇಷ ಚೇತನ ಮಾನಸಿಕ ಅಸ್ವಸ್ಥ ಪ್ರಪಾತ ಸಿಮ್ಮನನ್ನು ಅರೆಸ್ಟ್ ಮಾಡಿರುವ ಪೊಲೀಸರು.. ಸಿಮ್ಮನ ಎರಡೂ ಕಾಲುಗಳಿಗೆ ಹಗ್ಗ ಕಟ್ಟಿ, ಬಾಯಿಗೆ ಗೋಣಿಚೀಲ ತುರುಕಿ, ಎರಡೂ ಕಣ್ಣಿಗೆ ಪತಂಜಲಿ ಖಾರದಪುಡಿ ಎರಚಿ, ಫ್ಯಾನಿಗೆ ನೇತುಹಾಕಿ ನಾಯಿಗೆ ಹೊಡೆದಂತೆ ಇನ್ನೂ ಹೊಡೆದಿಲ್ಲವೆಂದು ವರದಿಯಾಗಿದೆ.

* * * *

ನಮ್ಮ ಪ್ರದ್ರಾನಮಂತ್ರಿ ಕುಂಡಾಲೇಂದ್ರ ವಿಶ್ವಬ್ಯಾಂಕಿನಿಂದ ನಯಾಪೈಸ ಸಾಲ ತೆಗೆದುಕೊಳ್ಳದೆ ಸರ್ಕಾರ ನಡೆಸುತ್ತಿದ್ದಾನೆಂದು ಮೋತಿಭಕ್ತರು ಊರಲ್ಲೆಲ್ಲ ಪುಂಗಿ ಊದುತ್ತಿರುವ ವರದಿಗಳು ವ್ಯಾಪಕವಾಗಿ ಕೇಳಿಬಂದಿವೆ. ಕೈಯಲ್ಲಿ ಪೊರಕೆ ಹಿಡಿದು, ಮುಖಕ್ಕೆ ಮೂರು ಇಂಚು ಮೇಕಪ್ಪು ರುಬ್ಬಿಕೊಂಡು ಟೊಯ್ಯಟೊಯ್ಯ ಎಂದು ಕಸಗುಡಿಸುವ ಡ್ರಾಮಾ ಮಾಡುತ್ತಿದ್ದ ಮೋತಿಜೀ, ಈ ಬಿಕನಾಸಿ ನಾಟಕವನ್ನು ಪತ್ರಿಕೆಗಳಲ್ಲಿ ಪ್ರಚಾರ ಮಾಡಲೂ ಸಹ ವಿಶ್ವಬ್ಯಾಂಕಿನಿಂದ ತಿರುಪೆ ಸಾಲ ತಂದಿದ್ದಾನೆಂದು ವಿಶ್ವಬ್ಯಾಂಕ್ ಮೂಲಗಳು ತಿಳಿಸಿವೆ. ಇಂಥಹ ಹಸಿಸುಳ್ಳುಗಳನ್ನೇ ಹೇಳುತ್ತ ತಿರುಗುತ್ತಿರುವ ಮೋತಿಜಿ ಮತ್ತು ಮೋತಿಭಕ್ತರನ್ನು ಜನರು ಅಟ್ಟಾಡಿಸಿಕೊಂಡು ಬಟ್ಟೆ ಹರಿದುಹೋಗುವಂತೆ ಬಡಿದು ನೆಲಕ್ಕೆ ಹಾಕಿ ತುಳಿಯಲು ಪ್ರಯತ್ನ ನಡೆಸಿರುವ ಘಟನೆ ಇನ್ನೂ ವರದಿಯಾಗಿಲ್ಲ.

* * * *

ಉತ್ತರಪ್ರದೇಶದ ಕಬ್ಬು ಬೆಳೆಯುವ ರೈತರಿಗೆ ಕೊಡಬೇಕಾದ 13 ಸಾವಿರ ಕೋಟಿ ಖರೀದಿ ಹಣವನ್ನು ಕೊಡದೆ ಮುಂಡಾ ಮೋಚಿರುವ ಜೋಗಿ ಪ್ಯಾದೇನಾತನ ಸರ್ಕಾರವು ಈ ಬಗ್ಗೆ ಪ್ರದ್ರಾನಮಂತ್ರಿಗೆ ಹಣಬಿಡುಗಡೆಗೆ ಕೇಳಿದಾಗ.. ಕುಂಡಾಲೇಂದ್ರನು..’ ಏನೂ ಹೆದರಬ್ಯಾಡ.. ಪಾಕಿಸ್ತಾನದಿಂದ ಸಕ್ಕರೆ ತರಿಸಿಕೊಂಡು ಉತ್ತರಪ್ರದೇಶದ ರೈತರ ಕಣ್ಣಿಗೆ ಮಣ್ಣುಸುಣ್ಣ ಎರಡನ್ನೂ ಮಿಕ್ಸ್ ಮಾಡಿ ಎರಚೋಣ’ಎಂದು ಭರವಸೆ ಕೊಟ್ಟಿದ್ದಾನೆ ಎಂದು ದೆಹಲಿಯಿಂದ ವರದಿ ಬಂದಿದೆ. ಅದರಂತೆ ಪಾಕಿಸ್ತಾನದಿಂದ 2 ಲಕ್ಷ ಟನ್ ಸಕ್ಕರೆ ಆಮದು ಮಾಡಿಕೊಂಡು ಉತ್ತರಪ್ರದೇಶದ ಕಬ್ಬುಬೆಳೆಗಾರರಿಗೆ ಈ ಅಲ್ಲಣ್ಣ-ಮಲ್ಲಣ್ಣ ಅಲಕ್ ಬುಲಕ್ ಜೋಡಿಯು ನಾಮ ಎಳೆದಿದೆ ಎಂದು ತಿಳಿದುಬಂದಿದೆ.
ಇಲ್ಲಿಗೆ ಆಘಾತವಾಣಿ ವಾರ್ತೆಗಳು ಮುಕ್ತಾಯವಾಯಿತು. ಮತ್ತೆ ಸಿಗೋಣ. ಬೈ ಟೇಕ್ ಕೇರ್..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...