Homeಮುಖಪುಟಶೃಂಗಾರ-ಅಶ್ಲೀಲತೆ; ನಿರ್ಧರಿಸುವವರು ಯಾರು? ಒಟಿಟಿ/ಆನ್‌ಲೈನ್ ವೇದಿಕೆಗಳಲ್ಲಿ ಕಾಮಪ್ರಚೋದಕ ದೃಶ್ಯಗಳು ಹೆಚ್ಚಳವಾಗಿವೆಯೇ?

ಶೃಂಗಾರ-ಅಶ್ಲೀಲತೆ; ನಿರ್ಧರಿಸುವವರು ಯಾರು? ಒಟಿಟಿ/ಆನ್‌ಲೈನ್ ವೇದಿಕೆಗಳಲ್ಲಿ ಕಾಮಪ್ರಚೋದಕ ದೃಶ್ಯಗಳು ಹೆಚ್ಚಳವಾಗಿವೆಯೇ?

- Advertisement -
- Advertisement -

ಅಶ್ಲೀಲ ಚಿತ್ರಗಳನ್ನು ತಯಾರಿಸಿ, ಅವುಗಳನ್ನು ಪ್ರಸಾರ ಮಾಡಿದ ಆರೋಪದಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ, ಉದ್ಯಮಿ ರಾಜ್ ಕುಂದ್ರಾ ಬಂಧನವಾದ ಬಳಿಕ ದೇಶದಲ್ಲಿ ಹೆಚ್ಚಾದ ಚರ್ಚೆಯ ವಿಷಯ ಯಾವುದು ಶೃಂಗಾರ, ಯಾವುದು ಅಶ್ಲೀಲ ಎಂಬುದು. ನನ್ನ ಪತಿ ತಯಾರಿಸಿ ಪ್ರಸಾರ ಮಾಡಿರುವುದು ಶೃಂಗಾರದ ವಿಷಯಗಳನ್ನು ಅಶ್ಲೀಲ ಚಿತ್ರಗಳನ್ನಲ್ಲ ಎಂದು ಶಿಲ್ಪಾ ಶೆಟ್ಟಿ ಹೇಳಿದ್ದರು.

ಇನ್ನು ರಾಜ್ ಕುಂದ್ರಾ ಅವರಿಗೆ ಸಂಬಂಧಿಸಿದ ಆಪ್‌ಗಳಲ್ಲಿ ಇದ್ದ ವಿಡಿಯೋಗಳಲ್ಲಿ ನಟಿಸಿದ್ದ ನಟಿ ಗೆಹನಾ ವಶಿಷ್ಠ್ ಕೂಡ, ’ರಾಜ್ ಕುಂದ್ರಾರಿಗೆ ಸಂಬಂಧಿಸಿದ ಆಪ್ ಹಾಟ್‌ಶಾಟ್ಸ್‌ನಲ್ಲಿನ ವಿಷಯಗಳು ಶೃಂಗಾರಕ್ಕೆ ಸಂಬಂಧಿಸಿದ್ದವು. ಅವು ಅಶ್ಲೀಲ ಚಿತ್ರಗಳಲ್ಲ’ ಎಂದು ಹಲವು ಬಾರಿ ವಾದಿಸಿದ್ದಾರೆ. ಇನ್ನು ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದ ನಟಿ, ಸಾಮಾಜಿಕ ಜಾಲತಾಣದಲ್ಲಿ ಬೆತ್ತಲೆಯಾಗಿ ಲೈವ್ ಬಂದು ’ಈಗ ನಾನು ಅಶ್ಲೀಲವಾಗಿ ಕಾಣಿಸುತ್ತಿದ್ದೇನಾ’ ಎಂದು ಪ್ರಶ್ನಿಸಿದ್ದರು.

ರಾಜ್ ಕುಂದ್ರಾ ಅವರ ವಕೀಲರು ಹಾಗೂ ಪ್ರಕರಣದಲ್ಲಿ ಭಾಗಿಯಾಗಿರುವ ಸಹವರ್ತಿಗಳು ಇದುವರೆಗೆ ಹೇಳುತ್ತಾ ಬಂದಿರುವುದೇನೆಂದರೆ ಕುಂದ್ರಾ ಕಂಪೆನಿಗಳು, ಸಹವರ್ತಿಗಳು ಹಾಗೂ ಅವರ ಮೊಬೈಲ್ ಅಪ್ಲಿಕೇಶನ್ ಹಾಟ್‌ಶಾಟ್ಸ್‌ನಲ್ಲಿ ಅಶ್ಲೀಲತೆಯ ಕಂಟೆಂಟ್ ಉತ್ಪಾದನೆಯಲ್ಲಿ ಭಾಗಿಯಾಗಿಲ್ಲ. ಬದಲಿಗೆ ಕಾಮಪ್ರಚೋದಕ, ಶೃಂಗಾರ ಚಿತ್ರಗಳ ನಿರ್ಮಾಣ ಮಾಡಿರುವುದಾಗಿ ಅವರು ಸಮರ್ಥಿಸಿಕೊಂಡಿದ್ದಾರೆ.

ಆದರೆ, ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿನ ವೆಬ್ ಸಿರೀಸ್, ಹಲವು ಆನ್‌ಲೈನ್ ಅಪ್ಲಿಕೇಶನ್‌ಗಳಲ್ಲಿ ಬಿಡುಗಡೆಯಾಗುವ ಚಿತ್ರಗಳು, ವೆಬ್ ಸರಣಿಗಳ ಬಗ್ಗೆ ಯಾರು ಚಕಾರವೆತ್ತುತ್ತಿಲ್ಲ. ಲೈಂಗಿಕ ವಿಚಾರಗಳೇ ತುಂಬಿತುಳುಕುವ ಹಲವು ಆಪ್‌ಗಳು ಭಾರತದಲ್ಲಿವೆ. ಇವುಗಳಲ್ಲಿ ಇರುವ ವಿಷಯ ಅಶ್ಲೀಲವೇ-ಶೃಂಗಾರವೇ ಎಂಬುದನ್ನು ನಿರ್ಧರಿಸುವವರು ಯಾರು? ಇವು ಕಾಮಪ್ರಚೋದಕದ ದೃಶ್ಯಗಳು, ಅಶ್ಲೀಲತೆಯಲ್ಲ ಎಂದು ಈ ಪ್ಲಾಟ್ಫಾರ್ಮ್‌ಗಳು ಸಮರ್ಥಿಸಿಕೊಳ್ಳುತ್ತವೆ.

ALTbalaji ಎನ್ನುವ ಪ್ಲಾಟ್ಫಾರ್ಮ್ ಒಂದರಲ್ಲಿ ಪ್ರಸಾರವಾದ ’ಗಂಧೀ ಬಾತ್’ ಇಂತಹದ್ದೆ ಕಂಟೆಂಟ್ ಹೊತ್ತ ವೆಬ್ ಸಿರೀಸ್. ಇದು ಎಷ್ಟು ಜನಪ್ರಿಯವಾಯಿತೆಂದರೆ ಇದೇ ಹೆಸರಲ್ಲಿ 5 ಸಿರೀಸ್‌ಗಳು ಬಂದವು. ಬೈ ಸೆಕ್ಷುಯಲ್
ಕಥಾಹಂದರ ಹೊಂದಿದ್ದ ಈ ವೆಬ್ ಸಿರೀಸ್‌ನಲ್ಲಿ ನಟಿಸಿದ ಬಳಿಕ ತಮ್ಮ ಅಭಿಮಾನಿಗಳ ಸಂಖ್ಯೆಯು ಹೆಚ್ಚಾಯಿತು ಎಂದು ನಟಿ ಅನ್ವಿಶಿ ಜೈನ್ ಹೇಳಿಕೊಂಡಿದ್ದಾರೆ.

ಗಂಧೀ ಬಾತ್‌ನ ಯಶಸ್ಸು ಇಂತಹ ಪ್ಲಾಟ್ಫಾರ್ಮ್‌ಗಳಲ್ಲಿ ಒಂದು ಹೊಸ ಪ್ರಕಾರವನ್ನೇ ಹುಟ್ಟುಹಾಕಿತು. ಇದರ ಪರಿಣಾಮವಾಗಿ ಜನಪ್ರಿಯ Zee5 Mnn ಕೂಡ ’ವರ್ಜಿನ್ ಭಾಸ್ಕರ್’ ಎಂಬ ವೆಬ್ ಸಿರೀಸ್ ಆರಂಭಿಸಿತ್ತು. Voot ಒಟಿಟಿಯಲ್ಲಿ ’ಫೂ ಸೆ ಫ್ಯಾಂಟಸಿ’ ಎಂಬ ಸಿರೀಸ್ ಪ್ರಾರಂಭವಾಯಿತು. ಇವೆಲ್ಲವೂ ಒಳಗೊಂಡಿದ್ದು ಕಾಮಪ್ರಚೋದಕತೆಯನ್ನೇ. ಅಂದರೆ, ಇದು ಅಶ್ಲೀಲವಲ್ಲ ಎಂಬುದು ಈ ಪ್ಲಾಟ್ಫಾರ್ಮ್‌ಗಳ ವಾದವೂ ಕೂಡ.

ULLU ಪ್ಲಾಟ್ಫಾರ್ಮ್ ಕೂಡ ಇಂತಹದ್ದೆ ಕಂಟೆಂಟ್‌ಅನ್ನು ಹೆಚ್ಚು ಪ್ರಸಾರ ಮಾಡುತ್ತದೆ. ಭೋಜಪುರಿ, ಮರಾಠಿ ಮತ್ತು ಇತರ ಸ್ಥಳೀಯ ಭಾರತೀಯ ಭಾಷೆಗಳಲ್ಲಿ ಹಲವು ವೆಬ್ ಸಿರೀಸ್‌ಗಳನ್ನು ಬಿಡುಗಡೆ ಮಾಡಿದೆ. ’ಪಾಂಚಾಲಿ’, ’ಕಸಕ್’, ’ವುಲ್ಫ್ ಆಫ್ ಬಾಲಿವುಡ್’ ಕಾಮಪ್ರಚೋದಕತೆ ಕಥಾಹಂದರವನ್ನು ಹೊಂದಿರುವ ಧಾರಾವಾಹಿಗಳಾಗಿವೆ.

ಇವುಗಳ ಜನಪ್ರಿಯತೆ ಎಷ್ಟರಮಟ್ಟಿಗೆ ಬೆಳೆಯಿತೆಂದರೆ, ಹಲವಾರು ಮುಖ್ಯವಾಹಿನಿಯ ನಟರು ಕೂಡ ಈ ಬಗೆಯ ಕಾಮಪ್ರಚೋದಕ ಚಿತ್ರಗಳಲ್ಲಿ ನಟಿಸಲು ಆರಂಭಿಸಿದ್ದರು. ಉದಾಹರಣೆಗೆ, ಅಮೆಜಾನ್ ಪ್ರೈಮ್ ವಿಡಿಯೊದ ವೆಬ್ ಸಿರೀಸ್ ’ರಸ್ಬರಿ’ಯಲ್ಲಿ ನಟಿ ಸ್ವರಾ ಭಾಸ್ಕರ್ ನಟಿಸಿದ್ದಾರೆ, ಅಂಶುಮಾನ್ ಝಾ ’ಮಾಸ್ತರಂ’ನಲ್ಲಿ ನಟಿಸಿದ್ದಾರೆ, ನಟಿ ಅನುಪ್ರಿಯಾ ಗೋಯೆಂಕಾ ULLUವಿನಲ್ಲಿ ಬರುವ ’ಪಾಂಚಾಲಿ’ಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಮಿನಿಸ್ಸಾ ಲಂಬಾ ’ಕಸಕ್’ನ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಶೃಂಗಾರದ ವಿಷಯವನ್ನೇ ಪ್ರಸಾರ ಮಾಡುವ ಈ ಆಪ್‌ಗಳ ಹೊರತಾಗಿಯೂ ಅಮೆಜಾನ್, ನೆಟ್‌ಫ್ಲಿಕ್ಸ್, ಹಾಟ್‌ಸ್ಟಾರ್, Zee5ನಂತಹ ಒಟಿಟಿಗಳಲ್ಲಿ ಪ್ರಸಾರವಾಗುವ ವೆಬ್ ಸಿರೀಸ್‌ಗಳಲ್ಲಿಯೂ ಇಂತಹ ವಿಷಯಗಳ ಕಂಟೆಂಟ್ ಹೇರಳವಾಗಿದೆ. ಸೆನ್ಸಾರ್ ಇಲ್ಲದ ದೃಶ್ಯಗಳಿಗೆ ಯಾವುದೇ ಬರವಿಲ್ಲ. ಕಲಾವಿದರು ಕೂಡ ಮೈಚಳಿ ಬಿಟ್ಟು ನಟಿಸುವುದನ್ನು ಈ ವೆಬ್ ಸಿರೀಸ್‌ಗಳಲ್ಲಿ ಕಾಣಬಹುದು. ಅದೆಲ್ಲವೂ ಕಾಮಪ್ರಚೋದಕ ಅಥವಾ ಶೃಂಗಾರದ ಕೆಟಗರಿಗೆ ಬಂದು ನಿಲ್ಲತ್ತವೆ. ಇದನ್ನೆಲ್ಲಾ ವ್ಯಾಖ್ಯಾನಿಸುವ ಒಂದು ಸೂಸ್ತವಾದ ಕಾನೂನು ಇಲ್ಲಿಲ್ಲ.

ಇಂತಹದ್ದೇ ಪ್ರಕರಣದಲ್ಲಿಯೇ ಒಂದು ಬಾರಿ ಜೈಲು ಸೇರಿ ಈಗ ರಾಜ್ ಕುಂದ್ರಾ ಪ್ರಕರಣದಲ್ಲಿ ಮತ್ತೆ ಕೇಸ್ ದಾಖಲಿಸಿಕೊಂಡಿರುವ ಗೆಹನಾ ವಶಿಷ್ಠ್ ನಮ್ಮ ದೇಶದಲ್ಲಿ ಯಾವುದು ಅಶ್ಲೀಲ, ಯಾವುದು ಪೋರ್ನ್, ಯಾವುದು ಕಾಮಪ್ರಚೋದಕ, ಯಾವುದು ಶೃಂಗಾರ ಎಂಬುವುದಕ್ಕೆ ಸರಿಯಾದ ವ್ಯಾಖ್ಯಾನವಿಲ್ಲ. ಇದರ ಬಗ್ಗೆ ಸರಿಯಾಗಿ ನಿಯಮಗಳನ್ನು ಮಾಡದೇ ನಮ್ಮ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದು ವಾದಿಸಿದ್ದಾರೆ.

ಒಟಿಟಿ ಪ್ಲಾಟ್ಫಾರ್ಮ್‌ಗಳು ಭಾರತದಲ್ಲಿ ಕಠಿಣ ಸೆನ್ಸಾರ್ಶಿಪ್ ನಿಯಮಗಳಿಂದ ಸ್ವಾತಂತ್ರ್ಯವನ್ನು ಆನಂದಿಸುತ್ತಿರುವಾಗ, ಈ ವರ್ಷ ಫೆಬ್ರವರಿಯಲ್ಲಿ ಸರ್ಕಾರವು ಡಿಜಿಟಲ್ ಕಂಟೆಂಟ್ ಕಂಪ್ಲೇಂಟ್ ಕೌನ್ಸಿಲ್‌ಅನ್ನು (DCCC) ಸ್ಥಾಪಿಸಿದೆ. ಮಾರ್ಚ್‌ನಲ್ಲಿ, ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಈ ಉದ್ಯಮಕ್ಕೆ ಸ್ವಯಂ ಆಡಳಿತದ ಕೋಡ್-ಆಫ್-ಕಂಟೆಂಟ್‌ಅನ್ನು ಸ್ಥಾಪಿಸಲು ಒಂದು ಅಂತಿಮ ಸೂಚನೆಯನ್ನು ನೀಡಿತು. ಆದರೆ, ಹಲವಾರು ವೇದಿಕೆಗಳು ಇದನ್ನು ಪರಿಗಣಿಸಲು ಸಮಯವನ್ನು ಕೋರಿವೆ.

ಸುಪ್ರೀಂಕೋರ್ಟ್ ವಕೀಲರಾದ ಖುಶ್ಬೂ ಜೈನ್ ಹೇಳುವಂತೆ ಕೇಬಲ್ ಟೆಲಿವಿಷನ್ ಕಾಯ್ದೆ 1995ರ ಪ್ರಕಾರ ಟಿವಿಯಲ್ಲಿ ಅಶ್ಲೀಲ ದೃಶ್ಯಗಳ ಪ್ರಸಾರಕ್ಕೆ ನಿರ್ಬಂಧನೆ ಇದೆ. ಇಂತಹ ಚಿತ್ರಗಳನ್ನು ಇಲ್ಲವೇ ಸಂಬಂಧಿತ ವಿಷಯವನ್ನು ಪ್ರಸಾರ ಮಾಡಿದಲ್ಲಿ ಶಿಕ್ಷೆ ಹಾಗೂ ದಂಡಕ್ಕೆ ಒಳಗಾಗಬೇಕಾಗುತ್ತದೆ ಎಂದು ಜೈನ್ ವಿವರಿಸಿದ್ದಾರೆ.

ಆದರೆ ಆನ್‌ಲೈನ್ ಪೋರ್ಟಲ್‌ಗಳು ಎಗ್ಗಿಲ್ಲದೆ ಇಂತಹ ಚಿತ್ರಗಳನ್ನು ಪ್ರಸಾರ ಮಾಡುತ್ತಿದ್ದು, ಇವುಗಳನ್ನು ನಿಯಂತ್ರಿಸಲು ಅಥವಾ ನಿರ್ಬಂಧಿಸಲು ಯಾವುದೇ ಸೆನ್ಸಾರ್ ಬೋರ್ಡ್‌ಗಳಿಲ್ಲ ಎಂಬುದನ್ನು ತಿಳಿದುಕೊಂಡಿರುವುದರಿಂದಲೇ. ಹಾಗಾಗಿ ಅವುಗಳು ಏನನ್ನು ಬೇಕಾದರೂ ಪ್ರಸಾರ ಮಾಡಬಹುದು ಎಂಬ ಸ್ವಾತಂತ್ರ್ಯ ಹೊಂದಿವೆ ಎಂದು ಜೈನ್ ಅವರನ್ನು ಉಲ್ಲೇಖಿಸಿ ಇಂಡಿಯನ್ ಟೈಮ್ಸ್ ವರದಿ ಮಾಡಿತ್ತು.

ಸದ್ಯ ಕೇಂದ್ರ ಸರ್ಕಾರ ಜೂನ್ 17ರಂದು ಕೇಬಲ್ ಟೆಲಿವಿಷನ್ ಕಾಯ್ದೆ 1995ಕ್ಕೆ ತಿದ್ದುಪಡಿ ತಂದಿದೆ. ಕೇಬಲ್ ಟೆಲಿವಿಷನ್ ನೆಟ್‌ವರ್ಕ್ ನಿಯಮಗಳನ್ನು ಈ ಶಾಸನಾತ್ಮಕ ವ್ಯವಸ್ಥೆ ಒದಗಿಸಲು ತಿದ್ದುಪಡಿ ಮಾಡಲಾಗಿದೆ. ಇದು ಪಾರದರ್ಶಕವಾಗಿದ್ದು, ನಾಗರಿಕರಿಗೆ ಉಪಯುಕ್ತವಾಗಿದೆ. ಅದೇವೇಳೆ, ಪ್ರಸಾರಕರ ಸ್ವಯಂ ನಿಯಂತ್ರಣ ಕಾಯಿದೆಗಳನ್ನು ಕೇಂದ್ರ ಸರ್ಕಾರದಲ್ಲಿ ನೊಂದಾಯಿಸಲಾಗುವುದು ಎಂದು ವಾರ್ತಾ ಮತ್ತು ಪ್ರಸಾರ ಸಚಿವಾಲಯ ಹೇಳಿದೆ.

ದೇಶದಲ್ಲಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುವುದು ಅಪರಾಧವಾಗಿಲ್ಲ. ಆದರೆ, ಅಶ್ಲೀಲ ಚಿತ್ರಗಳ ನಿರ್ಮಾಣ, ಪ್ರಸಾರ ಮಾಡುವುದು ಮತ್ತು ಇತರರೊಂದಿಗೆ ಹಂಚಿಕೊಳ್ಳುವುದು ತಪ್ಪು. ಆಗ ಮಾತ್ರ ವ್ಯಕ್ತಿಯನ್ನು ಬಂಧಿಸಲು ಸಾಧ್ಯವಿದೆ.

ಮಾಹಿತಿ ತಂತ್ರಜ್ಞಾನ ಕಾಯ್ದೆ 2000ದ ಸೆಕ್ಷನ್ 67ಎ ಹೇಳುವಂತೆ ಲೈಂಗಿಕ ಅಭಿವ್ಯಕ್ತಿ ಅಥವಾ
ನಡವಳಿಕೆಯನ್ನು ಹೊಂದಿರುವ ಯಾವುದೇ ವಿಷಯ-ವಸ್ತುವನ್ನು ಪ್ರಕಟಿಸುವುದು, ಪ್ರಸಾರ ಮಾಡುವುದು (ಯಾವುದೇ ಎಲೆಕ್ಟ್ರಾನಿಕ್ ರೂಪದಲ್ಲಿ ಪ್ರಸಾರ ಮಾಡಿದಾಗಿಯೂ) ಐದು ವರ್ಷಗಳ ಜೈಲು ಶಿಕ್ಷೆ ಹಾಗೂ 10 ಲಕ್ಷ ದಂಡವನ್ನು ವಿಧಿಸಲು ಸಾಧ್ಯವಿದೆ. ಹಾಗಾಗಿ ಅಶ್ಲೀಲ ಕಂಟೆಂಟ್ ಮಾರಾಟ ಮಾಡುವಾಗ ಅಥವಾ ವ್ಯಾಪಾರೀಕರಣದಲ್ಲಿ ಸಿಕ್ಕಿಬಿದ್ದರೆ ಜೈಲು ಹಾಗೂ ದಂಡ ಶಿಕ್ಷೆಯ ಸಾಧ್ಯತೆಯಿದೆ. ಆದರೆ, ಯಾವುದು ಅಶ್ಲೀಲ, ಯಾವುದು ಶೃಂಗಾರ ಎಂಬುದನ್ನು ವಿವರಿಸಲು ದೇಶದಲ್ಲಿ ಸರಿಯಾದ ಕಾನೂನುಗಳಿಲ್ಲದಿರುವುದು ಸಮಸ್ಯೆಯನ್ನು ಉಲ್ಬಣಗೊಳಿಸಿದೆ.

2018ರಲ್ಲಿ ಜನಪ್ರಿಯ ವಯಸ್ಕರ ತಾಣವಾದ ಪೋರ್ನ್‌ಹಬ್ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ವಿಶ್ವದಲ್ಲಿ ಅಶ್ಲೀಲ ವಿಷಯಗಳ ಬಳಕೆಯಲ್ಲಿ ಭಾರತ ಮೂರನೇ ಸ್ಥಾನದಲ್ಲಿತ್ತು. ಆದರೆ, 2019ರಲ್ಲಿ ಅಶ್ಲೀಲ ವೆಬ್‌ಸೈಟ್‌ಗಳ ನಿಷೇಧ ಕಾರಣದಿಂದ ಮೂರನೇ ಸ್ಥಾನದಲ್ಲಿದ್ದ ಭಾರತ 15ನೇ ಸ್ಥಾನಕ್ಕೆ ಇಳಿದಿದೆ ಎಂದು ಈ ಸಂಸ್ಥೆ ಹೇಳಿದೆ.

ಕನ್ನಡದಲ್ಲಿ ಇನ್ನು ಒಟಿಟಿ, ಮೊಬೈಲ್ ಆಪ್‌ನಂತಹ ಮಾಧ್ಯಮಗಳು ಎಕ್ಸ್‌ಕ್ಲೂಸಿವ್ ಆಗಿ ಬರದ ಕಾರಣ ಇಂತಹ ವಿಷಯಾಧಾರಿತ ಚಿತ್ರಗಳು ಕಡಿಮೆ ಇವೆ ಎನ್ನಬಹುದು. ಆದರೆ ಡಬಲ್ ಮೀನಿಂಗ್ ಡೈಲಾಗ್‌ಗಳಿರುವ ಸಣ್ಣ ಸಣ್ಣ ಕಿರು ಚಿತ್ರಗಳು ಕನ್ನಡದಲ್ಲೂ ಪ್ರಸಾರವಾಗುತ್ತಿವೆ.

ಸೆಕ್ಸ್ ಕಂಟೆಂಟ್‌ಅನ್ನು ಟಿಆರ್‌ಪಿ, ಹಣ, ಅಭಿಮಾನಿಗಳು, ಆಫರ್‌ಗಳು, ಪ್ಲಾಟ್ಫಾರ್ಮ್‌ಗೆ ಟ್ರಾಫಿಕ್ ಹೆಚ್ಚು ಮಾಡುವ ಸಾಧನವಾಗಿ ಬಳಸಲಾಗುತ್ತಿದೆ. ವೆಬ್ ಸಿರೀಸ್‌ಗಳು, ಬಾಲಿವುಡ್‌ನ ಬಿ ಗ್ರೇಡ್ ಸಿನಿಮಾಗಳಲ್ಲಿ ಮಾತ್ರವಲ್ಲದೆ ಸುದ್ದಿ ವೆಬ್‌ಸೈಟ್‌ಗಳು ಕೂಡ ಇಂತಹ ಲೈಂಗಿಕಾಸಕ್ತಿಯ ವಿಷಯಗಳನ್ನು ನೀಡುತ್ತಿವೆ. ಕನ್ನಡದ ಸುದ್ದಿವಾಹಿನಿಗಳ ವೆಬ್ ಪೋರ್ಟಲ್‌ಗಳು, ಸುದ್ದಿ ಪತ್ರಿಕೆಗಳ ಪೋರ್ಟಲ್‌ಗಳು ಸೇರಿದಂತೆ ಇಂತಹ ವಿಷಯಗಳಿರುವ ಸುದ್ದಿ, ಚಿತ್ರಗಳು ಹೇರಳವಾಗಿ ಕಾಣಸಿಗುತ್ತವೆ. ಸುದ್ದಿ ಓದಲು ಬರುವ ನೋಟಿಫಿಕೇಷನ್‌ಗಿಂತ ರಾತ್ರಿಯ ಹೊತ್ತು ಇಂತಹ ವಿಷಯಗಳ ನೋಟಿಫಿಕೇಷನ್‌ಗಳು ಎಷ್ಟೋ ಮಂದಿಗೆ ಕಿರಿಕಿರಿ ಮಾಡಿದರೆ ಮತ್ತೆ ಕೆಲವರಲ್ಲಿ ಖುಷಿ ನೀಡುತ್ತದೆ.

ಪೂರ್ತಿ ನಗ್ನವಾಗಿ ಕಾಣಿಸಿಕೊಳ್ಳುವುದು ಅಶ್ಲೀಲವಾದರೇ, ದೇಹದ ಮೇಲೆ ತೆಳುವಾದ ಬಟ್ಟೆ ಹಾಕಿ ತೋರಿಸುವುದು ಶೃಂಗಾರ ಹೇಗಾಗುತ್ತದೆ? ಒಟ್ಟಾರೆ, ಯಾವುದು ಅಶ್ಲೀಲ, ಯಾವುದು ಶೃಂಗಾರ, ಯಾವುದು ಕಾಮಪ್ರಚೋದಕ ಎಂಬುದನ್ನು ನಿರ್ಧರಿಸುವವರು ಯಾರು ಎಂಬ ಪ್ರಶ್ನೆ ತಲೆದೋರುತ್ತದೆ. ಒಬ್ಬರ ದೃಷ್ಟಿಯಲ್ಲಿ ಶೃಂಗಾರ ಎನ್ನುವಂತಹದ್ದು ಮತ್ತೊಬ್ಬರ ದೃಷ್ಟಿಯಲ್ಲಿ ಅಶ್ಲೀಲ, ಕಾಮಪ್ರಚೋದಕವು ಆಗಿರಬಹುದು.


ಇದನ್ನೂ ಓದಿ: ಅಶ್ಲೀಲ ಚಿತ್ರ ಪ್ರಕರಣ: ಉದ್ಯಮಿ ರಾಜ್ ಕುಂದ್ರಾಗೆ ಮಧ್ಯಂತರ ಜಾಮೀನು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...