Homeಅಂಕಣಗಳುಗಡಿ ವಿವಾದ, ನೆಹರು ವಿರೋಧ ಮತ್ತು ಲೋಹಿಯಾ

ಗಡಿ ವಿವಾದ, ನೆಹರು ವಿರೋಧ ಮತ್ತು ಲೋಹಿಯಾ

- Advertisement -
- Advertisement -

ಜಾತಿ ವ್ಯವಸ್ಥೆಯ ವಿರುದ್ಧ ಮತ್ತು ಹಿಂದುಳಿದ ಜಾತಿ ಜನಾಂಗಗಳ ಬೆಳವಣಿಗೆಯ ಬಗೆಗೆ ಭಾರತದ ರಾಜಕೀಯದಲ್ಲಿ ಹೋರಾಡಿದ ಪ್ರಮುಖರಲ್ಲಿ ಲೋಹಿಯಾ ಸಹ ಒಬ್ಬರು. ಜಾತಿ ಪದ್ಧತಿಯ ವಿವಿಧ ಆಯಾಮಗಳನ್ನೂ, ಅದು ಸೃಷ್ಟಿಸಿದ ವಿವಿಧ ಅಸಮಾನತೆ, ವಿಕಾರತೆ, ವಿಕೃತಗಳನ್ನೂ ಲೋಹಿಯಾರವರ ಬರವಣಿಗೆಯಲ್ಲಿ ಕಾಣಬಹುದು. ಲೋಹಿಯಾ ಸ್ವಲ್ಪ ಜನಜಂಗುಳಿ ಪ್ರಚೋದಕ () ಭಾಷೆಯನ್ನು ಉಪಯೋಗಿಸುತ್ತಾರೆ. ಅದನ್ನು ನಗಣ್ಯವಾಗಿ ಪರಿಗಣಿಸಿ, ಮುಖ್ಯ ಸತ್ವವನ್ನು ಮಾತ್ರ ನಾವು ಪರಿಗಣಿಸಬೇಕು. ಜಾತಿ ಪದ್ಧತಿಯ ನಾಶಕ್ಕಾಗಿ ಲೋಹಿಯಾ ಸಹಭೋಜನ, ಅಂತರ್ಜಾತಿಯ ವಿವಾಹ, ಸರಕಾರಿ ನೇಮಕಾತಿಗಳಿಗೆ ಅಂತರ್ಜಾತಿ ವಿವಾಹ ಕಾನೂನುಗಳ ರಚನೆ, ಜಾತಿಸೂಚಕ ಅಡ್ಡ ಹೆಸರುಗಳ ರದ್ದತಿ, ಹಿಂದುಳಿದ ಜಾತಿಗಳಿಗೆ ಆದ್ಯತಾ ಅವಕಾಶ, ಭೂಮಿಯ ವಿತರಣೆ, ಮಹಿಳಾ ಸಮಸ್ಯೆಗಳ ಪರಿಹಾರ,. ಜಾತಿ ಆಚರಣೆಯ ವಿರುದ್ಧ ಧಾರ್ಮಿಕ ರಂಗದ ಹೋರಾಟ ಮುಂತಾದವುಗಳನ್ನು ಪ್ರತಿಪಾದಿಸುತ್ತಾರೆ. ಎಲ್ಲವೂ ಸರಿಯಾದುದೇ.
ಆದರೆ ಜಾತಿ ಹೋರಾಟಗಳ ಐತಿಹಾಸಿಕ ಸತ್ವ ಏನೆಂದು ತಿಳಿಯುವುದರಲ್ಲಿ ಲೋಹಿಯಾ ವಿಫಲಗೊಂಡಂತೆ ಕಾಣುತ್ತದೆ. ಐತಿಹಾಸಿಕವಾಗಿ ಹಿಂದುಳಿದ ಜಾತಿಗಳ ಹೋರಾಟಗಳು ಬಂಡವಾಳಶಾಹಿ ವ್ಯವಸ್ಥೆಯಲ್ಲಿಯೇ ನಡೆಯುವ ತಮ್ಮ ಬಂಡವಾಳಶಾಹಿಪೂರ್ವ ಸ್ಥಿತಿಗತಿಗಳನ್ನು ಕೊನೆಗಾಣಿಸಿ ಪ್ರಜಾಸತ್ತಾತ್ಮಕ ಜೀವನಕ್ಕೆ ಅರಳುವ, ಬಂಡವಾಳಶಾಹಿ ವ್ಯವಸ್ಥೆಯಲ್ಲಿಯೇ ತಮ್ಮ ಹಿಂದುಳಿದಿರುವಿಕೆಯನ್ನು ಕೊನೆಗಾಣಿಸಿ ಮುಂದೆ ಬರುವ ಪ್ರಜಾಸತ್ತಾತ್ಮಕ ಹೋರಾಟಗಳೆಂದು ಅರ್ಥೈಸಿಕೊಳ್ಳದೆ, ಈ ಜಾತಿ ಹೋರಾಟಗಳೇ ಸಮಾಜವಾದಿ ಹೋರಾಟಗಳೆಂದು ತಿಳಿಯುತ್ತಾರೆ. ಆದ್ದರಿಂದ ತಮ್ಮ ಕಾಲ್ಪನಿಕ ಸಮಾಜವಾದಿ ಆದರ್ಶಗಳಿಗೆ ಹೊಂದಿಕೆಯಾಗಲಾರದ ಪ್ರವೃತ್ತಿಗಳು ಅವರನ್ನು ದಂಗುಬಡಿಸುತ್ತವೆ, ಹಾಗೂ ಈ ಪ್ರವೃತ್ತಿಗಳನ್ನು ವಿಷಕಾರಿ ಎಂದೂ, ತಿಳಿವಳಿಕೆಗೆ ಮೀರಿದ್ದೆಂದೂ ಹೇಳುತ್ತಾರೆ. ಈ ಜಾತಿ ಹೋರಾಟಗಳೇ ಸಮಾಜವಾದಿ ಶಕ್ತಿ ಎಂದು ತಿಳಿದ ಲೋಹಿಯಾ ತಮ್ಮ ಕಾರ್ಯಕ್ರಮವೆಲ್ಲಾ ಸೋಲು ಅನುಭವಿಸುವುದನ್ನು ಕಾಣುತ್ತಾರೆ. ಜಾತಿ ಹೋರಾಟಗಳನ್ನು ಐತಿಹಾಸಿಕ ದೃಷ್ಟಿಯಿಂದ ಅರ್ಥಮಾಡಿಕೊಳ್ಳದ ಲೋಹಿಯಾ ಜಾತಿ ಕನ್ನಡಕದಲ್ಲಿಯೇ ಎಲ್ಲಾ ವಾಸ್ತವತೆಯನ್ನು ನೋಡಲು, ವಿವರಿಸಲು, ಅರ್ಥೈಸಲು ಪ್ರಯತ್ನಿಸುತ್ತಾರೆ. ಈ ದೃಷ್ಟಿಯೇ ಅಪರಿಮಿತವಾದ ಅನ್ವರ್ಥಗಳಿಗೂ, ಅಸಭ್ಯ ವಿಚಾರಗಳಿಗೂ ದಾರಿಯಾಗಿದೆ.
1954 ರಿಂದ 1962 ಹಾಗೂ ನಂತರದಲ್ಲೂ ಭಾರತ-ಚೈನಾ ಗಡಿವಿವಾದವು ಬಹಳ ಚರ್ಚೆಗೊಳಗಾದ ವಿಷಯ. ಆದರೆ ಚರ್ಚೆ ಆದದ್ದು ಸಂಪೂರ್ಣ ಅಜ್ಞಾನದಲ್ಲಿ. ಅಜ್ಞಾನ ಮತ್ತು ಭಾವುಕತೆ ಸೇರಿದಲ್ಲಿ ವೈಚಾರಿಕತೆ ಇಲ್ಲದ ಅರಾಜಕತೆ ಹುಟ್ಟುವುದು ಸಹಜ. ಗಡಿ ಸಮಸ್ಯೆ ಏನು ಎನ್ನುವುದರ ಬಗೆಗಾಗಲಿ, ಗಡಿ ಹಾಗೂ ಗಡಿಸಮಸ್ಯೆಯ ವಿಕಾಸದ ಇತಿಹಾಸದ ಬಗೆಗಾಗಲಿ ನೆಹರೂ ಬಿಟ್ಟರೆ ಬೇರಾವ ರಾಜಕಾರಣಿಗಳಿಗೂ ತಿಳಿದಿರಲಿಲ್ಲ. ಕಾಂಗ್ರೆಸ್ ವಿರೋಧದಲ್ಲಿ ವಿರೋಧ ಪಕ್ಷದ ರಾಜಕಾರಣಿಗಳು ಕೆಟ್ಟ ಹುಂಬರ ರೀತಿಯಲ್ಲಿ ವರ್ತಿಸಿದರು. ಲೋಹಿಯಾ ಇವರಿಂತ ಭಿನ್ನರಾಗಿರಲಿಲ್ಲ.
ಲೋಹಿಯಾ ಬರೆದರು: `ಟಿಬೆಟ್‍ನಲ್ಲಿರುವ ಮನ್ಸಾರ್ ಗ್ರಾಮದ ನನ್ನ ಶೋಧನೆ. ಪಾರ್ಲಿಮೆಂಟಿನಲ್ಲಿ ದಾಖಲೆಗಳ ಬಗೆಗೆ ಅನೇಕ ಅತ್ಯಂತ ಹುಂಬತನದ ಸಮರ್ಥನೆಗೆ ಕಾರಣವಾಯಿತು.’ `ಭಾರತ ಸರಕಾರ ಮೊದಲು ಮನ್ಸಾರ್ ಗ್ರಾಮದ ಮೇಲಿನ ಸಾರ್ವಭೌಮತ್ವವನ್ನು ಬಿಟ್ಟುಬಿಟ್ಟಿತು.’ ಗ್ರಾಮದ ಹೆಸರು ಮನ್ಸಾರ್ ಅಲ್ಲ ಮಿನ್ಸಾರ್. ಲೋಹಿಯಾ ಮಿನ್ಸಾರ್ ಗ್ರಾಮದ ಶೋಧಕರಲ್ಲ. ಭಾರತ ಸರಕಾರ ಮೊದಲು ಮನ್ಸಾರ್ ಗ್ರಾಮದ ಮೇಲಿನ ಸಾರ್ವಭೌಮತ್ವವನ್ನು ಬಿಟ್ಟುಬಿಟ್ಟಿತು ಎನ್ನುವುದೂ ಸಹ ಪಕ್ಕಾ ಸುಳ್ಳು. ಇದು ಬರೀ ಬೊಗಳೆ. ಲೋಹಿಯಾರವರಿಗಿಂತ ಮೊದಲೇ ನೆಹರೂರವರಿಗೆ ಮಿನ್ಸಾರ್ ಗ್ರಾಮದ ಬಗ್ಗೆ ಹೆಚ್ಚು ತಿಳಿದಿತ್ತು. ಬಹಳ ಹಿಂದೆ ಅದು ಟಿಬೆಟಿನಲ್ಲಿರುವ ಪರಾವೃತ (ಇಟಿಛಿಟಚಿve) ಪ್ರದೇಶ. ನೆಹರೂ ತಮ್ಮ ಅಧಿಕಾರಿಗಳೊಂದಿಗೆ ಚರ್ಚೆಸಿ ಚೀನಾದೊಂದಿಗಿನ ಮಾತುಕತೆಯಲ್ಲಿ ಮಿನ್ಸಾರ್‍ನ್ನು ಕೇಳಬೇಕು ಎಂದು ನಿರ್ದೇಶನ ನೀಡಿದ್ದರು. ಮಾತುಕತೆ ಫಲಪ್ರದವಾಗುವುದಾಗಿ ಕಂಡರೆ ನಾವು ನಮ್ಮ ಕೇಳಿಕೆಯನ್ನು ಬಿಡಬಹುದು, ಏಕೆಂದರೆ ಆಧುನಿಕ ಕಾಲದಲ್ಲಿ ಯಾವ ದೇಶವೂ ತನ್ನ ಭೂಭಾಗದೊಳಗೆ ಇನ್ನೊಂದು ದೇಶದ ಪರಾವೃತ ಪ್ರದೇಶಕ್ಕೆ ಅವಕಾಶ ಕೊಡುವುದಿಲ್ಲ. ನೆಹರೂ ಮಿನ್ಸಾರ್‍ನ್ನು ಕೇಳಿದ್ದಾರೆ. ಭಾರತ ಚೀನಾ ಅಧಿಕಾರಿಗಳ ಮಾತುಕತೆಯಲ್ಲಿ ಅನೇಕ ರುಜುವಾತುಗಳ ದಾಖಲೆಗಳನ್ನು ಸಲ್ಲಿಸಿದ್ದಾರೆ. ಆ ವರದಿಯನ್ನು ಪ್ರಕಟಿಸಿ ಸಂಸದರಿಗೆ ಸಿಗುವ ಹಾಗೆ ಮಾಡಿದ್ದಾರೆ. ನೆಹರೂ ಸರಕಾರದ ಹತ್ತಿರ ದಾಖಲೆಗಳಿವೆ, ಲೋಹಿಯಾ ಹತ್ತಿರ ಏನೂ ದಾಖಲೆಗಳಿಲ್ಲ. ನೆಹರೂ ಮೇಲೆ ಏನಾದರೂ ಒಂದಷ್ಟು ಸುಳ್ಳು ಆರೋಪಗಳನ್ನು ಹೊರಿಸಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು ಲೋಹಿಯಾರವರ ಪ್ರಯತ್ನ.
`ಮುಖ್ಯ ಅಂಶ ದಾಖಲೆಗಳ ಬಗೆಗಲ್ಲ. ಮೆಕ್‍ಮಹೋನ್ ರೇಖೆಯ 60-70 ಮೈಲು ಉತ್ತರಕ್ಕಿರುವ ಮನ್ಸಾರ್ ಗ್ರಾಮ ಏಕೆ ಭಾರತಕ್ಕೆ ಸೇರಿದ್ದೆಂದು’. ಇಲ್ಲಿ ಲೋಹಿಯಾರವರ ಮೂರ್ಖ ತಿಳಿವಳಿಕೆ ಬಹಳ ಸ್ಪಷ್ಟವಾಗಿದೆ. ಮೆಕ್‍ಮಹೋನ್ ರೇಖೆ ಎನ್ನುವುದು ಭೂತಾನ ದೇಶದ ಪೂರ್ವಗಡಿಯಿಂದ ಪ್ರಾರಂಭವಾಗಿ ಪೂರ್ವದ ಕಡೆ ಹೋಗುವಂತಹದು. ನೇಫಾ (ಈಗಿನ ಅರುಣಾಚಲ ಪ್ರದೇಶ)ದ ಉತ್ತರದ ಗಡಿರೇಖೆಗೆ ಸಂಬಂಧಪಟ್ಟಿದ್ದು. ಮಿನ್ಸಾರ್ ಉತ್ತರ ಪ್ರದೇಶದ (ಈಗಿನ ಉತ್ತರಾಖಂಡ ರಾಜ್ಯದ) ಗರ್ಹವಾಲ್ ಮತ್ತು ಕುಮಾವೂನ್ ಗಡಿಗೆ ಉತ್ತರದಲ್ಲಿ ಇರುವ ಗ್ರಾಮ. ಈ ಗಡಿ ರೇಖೆಗೂ, ಮೆಕ್‍ಮಹೋನ್ ರೇಖೆಗೂ ಏನೂ ಸಂಬಂಧವಿಲ್ಲ. ಮೆಕ್‍ಮಹೋನ್ ರೇಖೆಯ ಪಶ್ಚಿಮ ತುದಿಯಿಂದ ಸುಮಾರು ಸಾವಿರ ಮೈಲುಗಳ ದೂರ. ಮಧ್ಯದಲ್ಲಿ ಭೂತಾನ, ಸಿಕ್ಕಿಂ, ನೇಪಾಳದ ಗಡಿಗಳೆಲ್ಲ ಬರುತ್ತವೆ. ಇಂತಹ ಅಜ್ಞಾನ ಅಥವಾ ಮೂರ್ಖ ತಿಳಿವಳಿಕೆಯಿಂದ ಎಂಥ ಜ್ಞಾನವನ್ನು ಬೇರೆಯವರಿಗೆ ನೀಡಬಹುದು ಲೋಹಿಯಾ?
`ಮನ್ಸಾರ್ ಗ್ರಾಮದ ಬಗೆಗೆ ನನ್ನ ನಿಲುವಿಗೆ ಭಾರತ ಸರಕಾರದ ಒಪ್ಪಿಗೆಯು, ಚೈನಾ ಭಾರತದ ಒಂದು ಲಕ್ಷ ಚದುರ ಮೈಲಿ ಪ್ರದೇಶವನ್ನು ದುರಾಕ್ರಮಣ ಮಾಡಿದೆ ಎಂದು ಸ್ಪಷ್ಟಪಡಿಸುತ್ತದೆ. ಮೂರು ಅಥವಾ ನಾಲ್ಕು ವರ್ಷಗಳ ಹಿಂದೆ ಲಡಾಖ್‍ನಲ್ಲಿ 15 ಸಾವಿರ ಚದುರ ಮೈಲಿ, 11 ವರ್ಷಗಳ ಹಿಂದೆ ಕೈಲಾಸ ಮಾನಸ ಸರೋವರ ಪ್ರದೇಶದಲ್ಲಿ 80 ಸಾವಿರ ಚದುರಮೈಲಿಗೂ ಮಿಕ್ಕಿ. ಕೈಲಾಸ ಮಾನಸ ಸರೋವರ ಪ್ರದೇಶ ಒಮ್ಮೆ ಭಾರತಕ್ಕೆ ಸೇರಿದ್ದು, ಭಾರತೀಯ ಆಳ್ವಿಕೆದಾರ ಒಬ್ಬ ಟಿಬೆಟ್ಟಿನ ಸನ್ಯಾಸಿಗೆ ದಾನಮಾಡಿದ್ದರು ಹಾಗೂ ದಾನ ಖಂಡಿತಾ ವರ್ಗಾಯಿಸುವಂತದ್ದಲ್ಲ ಅಥವಾ ಚೈನಾಕ್ಕೆ ಸಂಬಂಧಿಸಿದಂತೆ ವರ್ಗಾಯಿಸುವಂತಾದ್ದಲ್ಲ’. ಎಂಬುದು ಲೋಹಿಯಾರ ವಾದ. ಇದು ಲೋಹಿಯಾರವರ ಇನ್ನೊಂದು ಕಳಪೆ ತಿಳಿವಳಿಕೆಯ ವಿಚಾರ. ಮಿನ್ಸಾರ್ ಬರೇ ಒಂದು ಗ್ರಾಮ. ಅದರ ವಿಸ್ತೀರ್ಣ ಕೆಲವು ಚದುರ ಮೈಲಿಗಳು. ಲೋಹಿಯಾ ತಿಸೆ(ಕೈಲಾಸ) ಪರ್ವತ, ಮಾನಸ ಸರೋವರದ ಪ್ರದೇಶಗಳನ್ನೆಲ್ಲಾ ಸೇರಿಸಿ 11 ವರ್ಷಗಳ ಹಿಂದೆ ಭಾರತದ 80 ಲಕ್ಷ ಚದುರ ಮೈಲಿ ಪ್ರದೇಶವನ್ನು ಚೈನಾ ಆಕ್ರಮಿಸಿಕೊಂಡಿದೆ ಎಂಬ ಆಧಾರರಹಿತ ಊಹೆ ಮಾಡುತ್ತಾರೆ. ಯಾವ ಭಾರತದ ರಾಜ, ಯಾವ ಟಿಬೆಟಿಯನ್ ಸನ್ಯಾಸಿಗೆ ದಾನ ಮಾಡಿದ? ಎಂಬ ಕುರಿತು ದಾಖಲೆಗಳೇ ಇಲ್ಲದೆ ಲೋಹಿಯಾ ತಮ್ಮ ವಿಚಾರಗಳನ್ನು ಮಂಡಿಸುತ್ತಾರೆ.
ಲೋಹಿಯಾ ಮಿಥ್ಯಾಶಾಸ್ತ್ರದ ಆಧಾರದ ಮೇಲೂ ತಮ್ಮ ಕೇಳಿಕೆಯನ್ನು ಸಮರ್ಥಿಸುತ್ತಾರೆ `ಯಾವ ಜನರೂ ತಮ್ಮ ಮುಖ್ಯ ದೇವರಾದ ಶಂಕರ, ಪಾರ್ವತಿಯರನ್ನು ವಿದೇಶದ ಭೂಭಾಗದಲ್ಲಿ ಇರಿಸಲು ಸಾಧ್ಯವಿಲ್ಲ.’ `ಯಾವ ಜನರೂ ಸಹ ತಮ್ಮ ಕೈಲಾಸವಾಸಿಯಾಗಿರುವ ಪ್ರಾಥಮಿಕ ದೇವರಾದ ಶಿವಪಾರ್ವತಿಯರನ್ನು ವಿದೇಶಿ ಭೂಮಿಯಲ್ಲಿ ಅವರ ಬಗ್ಗೆ ಕಥೆ ಕಟ್ಟಲು ಸಾಧ್ಯವಿಲ್ಲ.’ ತಿಸೆ ಪರ್ವತ ಅಥವಾ ಕೈಲಾಸ ಪರ್ವತದಲ್ಲಿ ಯಾವ ಕಾಲದಲ್ಲೂ ಶಂಕರ ಅಥವಾ ಶಿವಪಾರ್ವತಿಯವರ ದೇವಸ್ಥಾನವಾಗಲಿ, ಮೂರ್ತಿಗಳಾಗಲಿ ಇರಲಿಲ್ಲ. ಅಲ್ಲಿ ನಿಜವಾಗಿ ಇದ್ದದ್ದು ಟಿಬೆಟಿಯನ್ ದೇವತೆಗಳು. ಶಿವ, ಶಂಕರ, ಪಾರ್ವತಿ ಕೈಲಾಸದಲ್ಲಿದ್ದರೆಂದು ಹೇಳಿದ್ದು ಹಿಂದೂ ಪುರಾಣಗಳಲ್ಲಿ () ಮಾತ್ರ. ಪುರಾಣಗಳು ಮತ್ತು ದಂತಕಥೆಗಳು ಗಡಿಸಮಸ್ಯೆಗಳಿಗೆ ಸಾಕ್ಷಿಗಳಾಗಲು ಸಾಧ್ಯವಿಲ್ಲ. ಇತಿಹಾಸದ ದಾಖಲೆಗಳು ಮಾತ್ರ ರುಜುವಾತುಗಳಾಗುತ್ತವೆ. ಮಿನ್ಸಾರ ಗ್ರಾಮದ ವಿಚಾರದಲ್ಲಿ ಲೋಹಿಯಾ ಇತಿಹಾಸದ ಇರ್ರೆಡೆಂಟಿಸ್ಟ್ (). ಶಿವ ಪಾರ್ವತಿಯರ ಮೊರೆಯಿಡುವುದರ ಮೂಲಕ ಲೋಹಿಯಾ ಪುರಾಣಶಾಸ್ತ್ರದ ಇರ್ರೆಡೆಂಟಿಸ್ಟ್ (Iಆಗುತ್ತಾರೆ. ಅತ್ಯಂತ ಕೆಟ್ಟ ಹಿಂದೂ ಪುನರುತ್ಥಾನವಾದಿಗಳಾದ ರಾಮರಾಜ್ಯ ಪರಿಷತ್ತು, ಹಿಂದೂ ಮಹಾಸಭಾ, ಜನಸಂಘ ಪಕ್ಷಗಳೂ ಹೇಳದಿದ್ದನ್ನು ಕೇಳದಿದ್ದನ್ನು ಲೋಹಿಯಾ ಹೇಳುವುದು ಕೇಳುವುದು ಅತ್ಯಂತ ಖೇದಕರ ವಿಷಯ.
ನೇಫಾ (ಓಇಈಂ): ಇದಕ್ಕೆ ಲೋಹಿಯಾ ಊರ್ವಶಿಯಂ ಎಂದು ಹೆಸರಿಟ್ಟುಕೊಳ್ಳುತ್ತಾರೆ. `ಊರ್ವಶಿಯಂ ಆದಿವಾಸಿಗಳು-ಮಿಸ್ಮೀಸ್, ದಫ್ಲಾಸ್, ಅಹೋಂಮ್ಸ್-.’ ಅಹೋಮ್ಸ್ ನೇಫಾದ ಆದಿವಾಸಿಗಳಲ್ಲ. 13ನೇ ಶತಮಾನದಿಂದ 19ನೇ ಶತಮಾನದ ಆದಿಭಾಗದವರೆಗೂ ಅಸ್ಸಾಂನ್ನು ಆಳಿದ ರಾಜಮನೆತನದ ಕುಲದವರು. ಲೋಹಿಯಾ ಅವರನ್ನು ಆದಿವಾಸಿಗಳೆಂದು ತಪ್ಪಾಗಿ ಭಾವಿಸುತ್ತಾರೆ. ಅಲ್ಲಿನ ಸಾಮಾಜಿಕ ಮತ್ತು ರಾಜಕೀಯ ಸನ್ನಿವೇಶಗಳ ಕುರಿತು ಯಾವ ಅಂದಾಜೂ ಇಲ್ಲದೆ ಲೋಹಿಯಾ ಕೇವಲ ಊಹೆಗಳನ್ನೇ ಸತ್ಯಗಳೆಂದು ಭಾವಿಸಿ ತಮ್ಮ ವಾದ ಮಂಡಿಸುತ್ತಾರೆ. `ಊರ್ವಶಿಯಂನ ಅತಿಸುಂದರ ಸ್ಥಳ ನಿರ್ವಿವಾದವಾಗಿ ಲಾಂಗ್ಜು ಕಣಿವೆ ಹಾಗೂ ಮಾಚುಕ ಮತ್ತು ಟ್ಯೂಟಿಂಗ್ ಕಣಿವೆಗಳು, ನಾನು ತಪ್ಪು ತಿಳಿದಿರದಿದ್ದಲ್ಲಿ ಎಲ್ಲವೂ ದಿಬಾಂಗ್‍ಕಣಿವೆಯ ಮುಂದುವರಿಕೆ.’ ಎನ್ನುತ್ತಾರೆ ಲೋಹಿಯಾ. ಯಾವುದನ್ನು ಲೋಹಿಯಾ ಲಾಂಗ್ಜುವನ್ನು ಸುಂದರ ಕಣಿವೆ ಎನ್ನುತ್ತಾರೋ ಅದು ಕಣಿವೆಯ ಹೆಸರಲ್ಲ, ಅದು ಒಂದು ಉಪಗ್ರಾಮ . ಅದು ದಿಬಾಂಗ್ ಕಣಿವೆಗೆ ಸಂಬಂಧವಿಲ್ಲ, ಸಾರಿ  ಅಥವಾ ಸುಭಾನ್‍ಸಿರಿ ಕಣಿವೆಯಲ್ಲಿ ಇರುವುದು. ಮೇಚುಕ ಟ್ಯ್ಯೂಟಿಂಗ್‍ಗಳೂ ಕಣಿವೆಯ ಹೆಸರಲ್ಲ, ಅವು ಗ್ರಾಮಗಳು. ಅವು ದಿಬಾಂಗ್ ಕಣಿವೆಯಲ್ಲಿಲ್ಲ, ಬದಲು ದಿಹಾಂಗ್ ಕಣಿವೆಯಲ್ಲಿವೆ. ಪ್ರಧಾನಮಂತ್ರಿ ಸಂಸತ್ತಿನಲ್ಲಿ ತಿಳಿಸಿದಂತೆ ಲಾಂಗ್ಜು ಎರಡು ಅಥವಾ ಮೂರು ಚದುರ ಮೈಲಿಯ ನಿರ್ವಸಿತ ಪ್ರದೇಶವೆಂದು ಹೇಳಿದರು ಎಂದು ಸುಳ್ಳು ಸೃಷ್ಟಿಸಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಒಟ್ಟನಲ್ಲಿ ಆ ನೆಹರೂಗೆ ಒಂದಷ್ಟು ಬೈಯಬೇಕು, ದೂಷಣೆ, ಆರೋಪಗಳನ್ನು ಮಾಡಬೇಕು. ಅದಕ್ಕೆ ಏನಾದರೊಂದಿಷ್ಟು ಸುಳ್ಳುಗಳನ್ನು ಕಲ್ಪಿಸಿಕೊಂಡು ದೂರುವುದು. ನೆಹರೂ ಎಂದೂ ಲಾಂಗ್ಜು ನಿರ್ವಸಿತ ಪ್ರದೇಶ ಅಂತ ಹೇಳಿಲ್ಲ, ವಾಸಿತ ಪ್ರದೇಶ ಅಂತಾನೇ ಪದೇ ಪದೇ ಭಾಷಣದಲ್ಲಿ ಹೇಳಿದ್ದಾರೆ.
(ಮುಂದುವರಿಯುವುದು)

 

ಯಡೂರು ಮಹಾಬಲ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದಲಿತರು, ಅಲ್ಪಸಂಖ್ಯಾತರ ಮೇಲಿನ ಹಿಂಸಾಚಾರದ ಕುರಿತು ವಿಶ್ವಸಂಸ್ಥೆಯ ಕಠಿಣ ಪ್ರಶ್ನೆ: ಸಂಶೋಧನಾತ್ಮಕ ವರದಿಗಳನ್ನು ಆಧರಿಸಿ ಭಾರತಕ್ಕೆ CERD ಚಾಟಿ

ನವದೆಹಲಿ: ಭಾರತದಲ್ಲಿ ದಲಿತರು, ಆದಿವಾಸಿಗಳು, ಮುಸ್ಲಿಮರು ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯಗಳು ಎದುರಿಸುತ್ತಿರುವ ತಾರತಮ್ಯ, ಹಿಂಸೆ ಮತ್ತು ಹಕ್ಕುಗಳ ಉಲ್ಲಂಘನೆ ಕುರಿತು ವಿಶ್ವಸಂಸ್ಥೆಯ ಜನಾಂಗೀಯ ತಾರತಮ್ಯ ನಿರ್ಮೂಲನೆ ಕುರಿತ ಸಮಿತಿ (CERD) ತೀವ್ರ...

ಪಶ್ಚಿಮ ಬಂಗಾಳ| ಕಳೆದ ಒಂದು ತಿಂಗಳಲ್ಲಿ ಕ್ರಿಶ್ಚಿಯನ್ನರ ಮೇಲೆ ಸತತ ದಾಳಿ

ಪಶ್ಚಿಮ ಬಂಗಾಳದ ಚರ್ಚ್ ಒಂದರ ಆವರಣದಲ್ಲಿರುವ ಸ್ಮಶಾನದಲ್ಲಿ ಮೃತರೊಬ್ಬರಿಗೆ ಕೊನೆಯ ವಿದಾಯ ಕೋರುತ್ತಿದ್ದ ಕ್ರಿಶ್ಚಿಯನ್ ಕುಟುಂಬದ ಮೇಲೆ ಹಿಂದುತ್ವ ಗುಂಪೊಂದು ದಾಳಿ ನಡೆಸಿದೆ ಎಂದು ಆರೋಪಿಸಲಾಗಿದೆ. ಈ ಘಟನೆಯು ಆಗಸ್ಟ್ 14 ರಂದು ಪೂರ್ಬ...

‘ನಮ್ಮ ರಕ್ತದಿಂದ ಅವರು ಬಾಯಾರಿಕೆಯನ್ನು ತಣಿಸಿಕೊಳ್ಳುತ್ತಾರೆಯೇ?’: ಕೇರಳ ವಿವಿಯಲ್ಲಿ ಜಾತಿ ತಾರತಮ್ಯದ ವಿರುದ್ಧ ದಲಿತ ಸಂಶೋಧನಾ ವಿದ್ಯಾರ್ಥಿನಿ ಅನಿರ್ದಿಷ್ಟಾವಧಿ ಉಪವಾಸ

ತಿರುವನಂತಪುರಂ: ಜಾತಿ ಮತ್ತು ಲಿಂಗ ಆಧಾರಿತ ತಾರತಮ್ಯ, ಕಿರುಕುಳ ಹಾಗೂ ಶೈಕ್ಷಣಿಕ ಅವಕಾಶಗಳ ನಿರಾಕರಣೆಯ ಆರೋಪಗಳನ್ನು ಮುಂದಿಟ್ಟುಕೊಂಡು ಕೇರಳದ ತುಂಚತ್ ಎಳುಥಾಚನ್ ಮಲಯಾಳಂ ವಿಶ್ವವಿದ್ಯಾಲಯದ ದಲಿತ ಪಿಎಚ್‌ಡಿ ಸಂಶೋಧನಾ ವಿದ್ಯಾರ್ಥಿನಿ ಅನಘಾ ಶಾಸಿ...

ಸ್ವತಂತ್ರ ಭಾರದ್ವಾಜ್ ಬಂಧನದ ಬೆನ್ನಲ್ಲೇ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿನಿ ಮನೆ ಮೇಲೆ ಕಲ್ಲು ತೂರಾಟ, ಪೊಲೀಸರ ರಕ್ಷಣೆಗೆ ಮನವಿ

ನವದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಸಿಜೆಪಿ ಪ್ರತಿಭಟನೆಯ ವೇಳೆ ಸಂಜಯ್ ಆಝಾದ್ ಎಂಬುವವರ ಮೇಲೆ ಸ್ವಯಂಘೋಷಿತ ಗೋರಕ್ಷಕ ಸ್ವತಂತ್ರ ಭಾರದ್ವಾಜ್ ಭೀಕರವಾಗಿ ಹಲ್ಲೆ ನಡೆಸಿದ್ದನು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆತನನ್ನು ಬಂಧಿಸಿದ...

ಜನ್ ಧನ್ ಯೋಜನೆಯಡಿ ತೆರೆಯಲಾದ ಪ್ರತಿ ನಾಲ್ಕನೇ ಬ್ಯಾಂಕ್‌ ಖಾತೆ ನಿಷ್ಕ್ರಿಯ: ಆರ್‌ಟಿಐ ಮಾಹಿತಿ

ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯಡಿ ಲಭ್ಯವಾಗಿರುವ ಉತ್ತರದ ಪ್ರಕಾರ, ಪ್ರಧಾನಮಂತ್ರಿ ಜನ್ ಧನ್ ಯೋಜನೆಯಡಿ ತೆರೆಯಲಾದ ಪ್ರತಿ ನಾಲ್ಕನೇ ಖಾತೆಯು ನಿಷ್ಕ್ರಿಯಗೊಂಡಿದೆ. ಸುಮಾರು 5.72 ಕೋಟಿ ಖಾತೆಗಳಲ್ಲಿ ಶೂನ್ಯ ಬ್ಯಾಲೆನ್ಸ್ ಇದೆ. ಆಗಸ್ಟ್ 12,...

ಬಡ ಪೌರ ಕಾರ್ಮಿಕರ ಮೇಲೆ ದರ್ಪ ಮೆರೆದ ಸಚಿವ ಕೃಷ್ಣ ಬೈರೇಗೌಡ : ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ

ಸೇವೆಯನ್ನು ಖಾಯಂಗೊಳಿಸುವಂತೆ ಮನವಿ ಮಾಡಿದ ಬಡ ಪೌರ ಕಾರ್ಮಿಕರೊಂದಿಗೆ ಗ್ರೇಟರ್ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ದರ್ಪ ಮೆರೆದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಶನಿವಾರ (ಸೆ.6) ಬೆಂಗಳೂರಿನ...

ಗ್ರಾಮೀಣ ಭಾಗದ ಶಾಲಾ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ 7.5% ಮೀಸಲಾತಿ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸಿಗೆ ಬಲ ತುಂಬುವ ನಿಟ್ಟಿನಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇಕಡಾ 7.5 ರಷ್ಟು ಮೀಸಲಾತಿ ಕಲ್ಪಿಸುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ಪಶ್ಚಿಮ ಬಂಗಾಳದ ಪ್ರವಾಸೋದ್ಯಮ ಜಾಹೀರಾತಿನಲ್ಲಿ ಐಫೆಲ್ ಟವರ್, ಈಜಿಪ್ಟ್ ಪಿರಮಿಡ್: ಆದರೆ ಬಂಗಾಳವೇ ನಾಪತ್ತೆ!

ಪಶ್ಚಿಮ ಬಂಗಾಳವನ್ನು ಜಾಗತಿಕ ಪ್ರವಾಸೋದ್ಯಮ ಭೂಪಟದಲ್ಲಿ ಮುನ್ನೆಲೆಗೆ ತರುವ ಉದ್ದೇಶದಿಂದ ಬಿಡುಗಡೆ ಮಾಡಲಾದ ರಾಜ್ಯದ ಹೊಸ ಪ್ರವಾಸೋದ್ಯಮ ಜಾಹೀರಾತು ಈಗ ತೀವ್ರ ಟೀಕೆ ಹಾಗೂ ಅಪಹಾಸ್ಯಕ್ಕೆ ಈಡಾಗಿದೆ. ಈ ಜಾಹೀರಾತನ್ನು ಒಮ್ಮೆ ಗಮನಿಸಿದರೆ...

ಅಮೆರಿಕದಲ್ಲಿ ಮೋಹನ್‌ ಭಾಗವತ್ ಸೌಹಾರ್ದತೆ ಮಾತು; ಮಹಾರಾಷ್ಟ್ರದ ಗಾರ್ಬಾ-ದಾಂಡಿಯಾ ಕಾರ್ಯಕ್ರಮಗಳಲ್ಲಿ ಮುಸ್ಲಿಮರಿಗೆ ನಿಷೇಧ ಹೇರಿದ ವಿಎಚ್‌ಪಿ

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ನ್ಯೂಯಾರ್ಕ್‌ನಲ್ಲಿ ಮಾಡಿದ ಭಾಷಣದಲ್ಲಿ ಧಾರ್ಮಿಕ ಸೌಹಾರ್ದತೆ, ಪರಸ್ಪರ ಗೌರವ ಮತ್ತು ಪ್ರತಿಯೊಂದು ಸಮುದಾಯದ ಗುರುತಿನ ರಕ್ಷಣೆ ಕುರಿತು ಮಾತನಾಡಿದ ಕೆಲವೇ ದಿನಗಳ...

ಸೈಬರ್ ವಂಚನೆಗೊಳಗಾದ ಸಂತ್ರಸ್ತರಿಗೆ ನೆರವು: ಕರ್ನಾಟಕದಲ್ಲಿ ಶೀಘ್ರವೇ ‘ಇ-ಶೂನ್ಯ ಎಫ್‌ಐಆರ್’ ಜಾರಿ

ಸೈಬರ್ ವಂಚನೆಗೊಳಗಾದ ಸಂತ್ರಸ್ತರು ಇನ್ನು ಮುಂದೆ ದೂರು ದಾಖಲಿಸಲು ಪೊಲೀಸ್ ಠಾಣೆಗಳಿಗೆ ಅಲೆಯಬೇಕಿಲ್ಲ. ಸೈಬರ್ ಅಪರಾಧ ಪ್ರಕರಣಗಳ ಎಫ್‌ಐಆರ್ ದಾಖಲಾತಿಯನ್ನು ಚುರುಕುಗೊಳಿಸುವ ಹಾಗೂ ಜನಸ್ನೇಹಿಯಾಗಿಸುವ ಉದ್ದೇಶದಿಂದ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ...