Homeಮುಖಪುಟಶೇ.80 ರಷ್ಟು ಮಹಿಳೆಯರು ಕಿರುಕುಳ ಎದುರಿಸುತ್ತಿದ್ದಾರೆ; ಹಿಂಸಾಚಾರವು ಅವರ ಪ್ರಗತಿಗೆ ಅಡ್ಡಿಯಾಗಿದೆ: ರಾಹುಲ್ ಗಾಂಧಿ

ಶೇ.80 ರಷ್ಟು ಮಹಿಳೆಯರು ಕಿರುಕುಳ ಎದುರಿಸುತ್ತಿದ್ದಾರೆ; ಹಿಂಸಾಚಾರವು ಅವರ ಪ್ರಗತಿಗೆ ಅಡ್ಡಿಯಾಗಿದೆ: ರಾಹುಲ್ ಗಾಂಧಿ

- Advertisement -
- Advertisement -

ದೇಶದ ಅತಿದೊಡ್ಡ ಆಸ್ತಿಯಾಗಿರುವ ಮಹಿಳೆಯರು ಪ್ರಗತಿ ಸಾಧಿಸುವುದನ್ನು ತಡೆಯಲು ಸಮಾಜದಲ್ಲಿ ಹಿಂಸಾಚಾರವನ್ನು ಬಳಸಲಾಗುತ್ತಿದೆ. ಶೇಕಡಾ 80 ರಷ್ಟು ಜನರು ಕಿರುಕುಳ ಎದುರಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ ನಾಯಕ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಮಹಿಳೆಯರು ಯಾರಿಗಾಗೋ ಅಲ್ಲ, ತಮಗಾಗಿ ತಾವು ನಿಲ್ಲಬೇಕು; ತಮ್ಮ ಮೇಲೆ ನಂಬಿಕೆ ಇಡಬೇಕು ಎಂದು ಶನಿವಾರ ಪುಣೆಯಲ್ಲಿ ನಡೆದ ತಮ್ಮ ಪಕ್ಷದ ಯುವ ಸಂಪರ್ಕ ಕಾರ್ಯಕ್ರಮ ‘ಛಾತ್ರೋನ್ ಕಿ ಗೂಂಜ್’ ನಲ್ಲಿ ಹೇಳಿದರು.

ರಾಹುಲ್ ಗಾಂಧಿಯವರೊಂದಿಗೆ ಸಂವಾದ ನಡೆಸಿದ ವಿದ್ಯಾರ್ಥಿಗಳು, ಲೈಂಗಿಕ ಕಿರುಕುಳ, ವೈಯಕ್ತಿಕ ಸುರಕ್ಷತೆಯ ಕಾಳಜಿ, ಸುರಕ್ಷಿತ ಸಾರ್ವಜನಿಕ ಸಾರಿಗೆಯ ಕೊರತೆ ಮತ್ತು ಆರ್ಥಿಕ ಸಂಕಷ್ಟಗಳು ಮಹಿಳೆಯರ ಶಿಕ್ಷಣ ಮತ್ತು ಆರ್ಥಿಕ ಸ್ವಾತಂತ್ರ್ಯದ ಮೇಲಿನ ಪ್ರವೇಶವನ್ನು ಹೇಗೆ ಬಾಧಿಸುತ್ತಿವೆ ಎಂಬುದನ್ನು ವಿವರಿಸಿದರು.

“ಮಹಿಳೆಯರ ಮೇಲಿನ ಮೂರು ರೀತಿಯ ಹಿಂಸಾಚಾರಗಳನ್ನು – ಶಾರೀರಿಕ ಹಿಂಸೆ, ಅವಕಾಶಗಳನ್ನು ನಿರಾಕರಿಸುವ ಮೂಲಕ ಹಿಂಸೆ, ಮತ್ತು ಆರ್ಥಿಕ ಹಿಂಸೆ” ಅನುಭವಿಸುತ್ತಿದ್ದಾರೆ ಎಂದು ರಾಹುಲ್ ಪಟ್ಟಿ ಮಾಡಿದರು.

ಪ್ರತಿ ವರ್ಷ ಸುಮಾರು 4.5 ಲಕ್ಷ ಹೆಣ್ಣು ಭ್ರೂಣ ಹತ್ಯೆಗಳು ನಡೆಯುತ್ತಿವೆ, ಶೇಕಡಾ 80 ರಷ್ಟು ಮಹಿಳೆಯರು ಕಿರುಕುಳ ಎದುರಿಸುತ್ತಿದ್ದಾರೆ, ಶೇಕಡಾ 29 ರಷ್ಟು ಜನರು ಶಾರೀರಿಕ ಹಿಂಸೆಯನ್ನು ಅನುಭವಿಸುತ್ತಿದ್ದಾರೆ. ಶೇಕಡಾ 6 ರಷ್ಟು ಜನರು ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ. ಸಾಮಾಜಿಕ ಕಳಂಕದ ಭಯದಿಂದಾಗಿ ಶೇಕಡಾ 99 ರಷ್ಟು ಲೈಂಗಿಕ ಹಿಂಸಾಚಾರದ ಘಟನೆಗಳು ವರದಿಯಾಗುತ್ತಿಲ್ಲ ಎಂದು ಅವರು ಪ್ರತಿಪಾದಿಸಿದರು.

ಸುರಕ್ಷತೆಯ ಹೆಸರಿನಲ್ಲಿ ಸುಮಾರು ಶೇಕಡಾ 50 ರಷ್ಟು ಮಹಿಳೆಯರಿಗೆ ಶಿಕ್ಷಣ ಅಥವಾ ಉದ್ಯೋಗದ ಅವಕಾಶಗಳನ್ನು ನಿರಾಕರಿಸಲಾಗುತ್ತಿದೆ. ಸುರಕ್ಷಿತ ಪ್ರಯಾಣದ ಹೆಸರಿನಲ್ಲಿ ಮಹಿಳೆಯರು ಪ್ರತಿ ವರ್ಷ ಹೆಚ್ಚುವರಿಯಾಗಿ 17,500 ರೂಪಾಯಿಗಳನ್ನು ವೆಚ್ಚ ಮಾಡಬೇಕಾಗಿದೆ ಎಂದು ಗಾಂಧಿ ಹೇಳಿದರು.

ಮಹಿಳೆಯರು ಹಲವು ರೀತಿಯಲ್ಲಿ ನಿರ್ಬಂಧಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದ ಅವರು, ಶೇಕಡಾ 60 ರಷ್ಟು ಮಹಿಳೆಯರು ತಮ್ಮ ಮನೆಗಳಿಂದ ಹೊರಗೆ ಒಬ್ಬರೇ ಹೋಗಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.

“ಹುಡುಗನೊಬ್ಬ ಯಾವಾಗ ಬೇಕಾದರೂ ಹೊರಗೆ ಹೋಗಬಹುದು, ತಡವಾಗಿ ಬರಬಹುದು, ಆದರೆ ಹೆಣ್ಣುಮಕ್ಕಳಾದ ನೀವು ರಾತ್ರಿ 8 ಗಂಟೆಯೊಳಗೆ ಹಿಂತಿರುಗಬೇಕು. ಹುಡುಗರು ಯಾವುದೇ ಪರೀಕ್ಷೆಗಳನ್ನು ಎಷ್ಟು ಬಾರಿಯಾದರೂ ಬರೆಯಬಹುದು, ಆದರೆ ಹೆಣ್ಣುಮಕ್ಕಳಿಗೆ ಒಂದೇ ಒಂದು ಪ್ರಯತ್ನ ಸಿಗುತ್ತದೆ. ಇದು ಅವರ ಮದುವೆಯ ಸಮಯ, ಪರೀಕ್ಷೆಗೆ ಹೋಗುವ ಅಗತ್ಯವಿಲ್ಲ ಎಂದು ಅವರಿಗೆ ಹೇಳಲಾಗುತ್ತದೆ” ಎಂದು ಅವರು ಹೇಳಿದರು.

ಶೇಕಡಾ 45 ರಷ್ಟು ಮಹಿಳೆಯರು ಮದುವೆ ಅಥವಾ ಕೌಟುಂಬಿಕ ಜವಾಬ್ದಾರಿಗಳಿಂದಾಗಿ ಶಿಕ್ಷಣ ಅಥವಾ ಕೆಲಸವನ್ನು ತೊರೆಯಬೇಕಾಗಿದೆ. ಆದರೆ ಕೇವಲ ಶೇಕಡಾ 8 ರಷ್ಟು ಮಹಿಳೆಯರು ಮಾತ್ರ ಭೂಮಿಯ ಒಡೆತನವನ್ನು ಹೊಂದಿದ್ದಾರೆ ಎಂದು ಅವರು ತಿಳಿಸಿದರು.

ಶನಿವಾರ ಪುಣೆಯಲ್ಲಿ ನಡೆದ ತಮ್ಮ ಪಕ್ಷದ ಯುವ ಸಂಪರ್ಕ ಕಾರ್ಯಕ್ರಮ 'ಛಾತ್ರೋನ್ ಕಿ ಗೂಂಜ್' ನನಲ್ಲಿ ಭಾಗವಹಿಸಿದ್ದ ಯುವಜನರು

ಕುಟುಂಬಗಳಲ್ಲಿನ ಅಸಮಾನತೆ ಕುರಿತು ಮಾತನಾಡಿದ ರಾಹುಲ್ ಗಾಂಧಿ, 15 ರಿಂದ 29 ವರ್ಷ ವಯಸ್ಸಿನ ಮಹಿಳೆಯರು ಮನೆಯಲ್ಲಿ 5.5 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಆದರೆ ಅದೇ ಮನೆಯಲ್ಲಿ ಹುಡುಗರು ಕೇವಲ 30 ನಿಮಿಷ ಕೆಲಸ ಮಾಡುತ್ತಾರೆ ಎಂದರು.

ಶೇಕಡಾ 84 ರಷ್ಟು ಮಹಿಳೆಯರಿಗೆ ಉದ್ಯೋಗ ಕೈಗೊಳ್ಳಲು ತಮ್ಮ ಕುಟುಂಬದ ಅನುಮತಿ ಅಗತ್ಯವಿದೆ. ಮಹಿಳೆಯರು ಪುರುಷರಿಗಿಂತ ಶೇಕಡಾ 25 ರಷ್ಟು ಕಡಿಮೆ ಗಳಿಸುತ್ತಾರೆ. ಅವರಿಗೆ ಸುಲಭವಾಗಿ ಬಡ್ತಿ ಸಿಗುವುದಿಲ್ಲ ಎಂದು ಸೇರಿಸಿದರು.

ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಸಯಿಯ ಅರ್ಥಶಾಸ್ತ್ರ ವಿದ್ಯಾರ್ಥಿನಿ ಸುಚಿತ್ರಾ ಪಾಗಿ ಮಾತನಾಡಿ, ತಮ್ಮ 13ನೇ ವಯಸ್ಸಿನಲ್ಲಿ ಶಾಲೆಯಿಂದ ಮನೆಗೆ ನಡೆದುಕೊಂಡು ಹೋಗುವಾಗ ಮತ್ತು ನಂತರ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವಾಗ ತಾವು ಎದುರಿಸಿದ ಕಿರುಕುಳದ ಘಟನೆಗಳನ್ನು ನೆನಪಿಸಿಕೊಂಡರು.

ಈ ಅನುಭವಗಳು ತಮ್ಮಲ್ಲಿ ಪುರುಷರ ಬಗ್ಗೆ ಭಯವನ್ನು ಹುಟ್ಟುಹಾಕಿದವು ಎಂದು ಅವರು ಹೇಳಿದರು. ಆದರೆ, ಎಲ್ಲಾ ಪುರುಷರೂ ಒಂದೇ ರೀತಿ ಇರುವುದಿಲ್ಲ. ಮಹಿಳೆಗೆ ಕಿರುಕುಳ ನೀಡಲಾಗುತ್ತಿರುವುದನ್ನು ಕಂಡಾಗ ಜನರು ಮಧ್ಯಪ್ರವೇಶಿಸಬೇಕು ಎಂದು ಮನವಿ ಮಾಡಿದರು.

ಮೌನ ಪ್ರೇಕ್ಷಕರಾಗಿ ಉಳಿಯುವ ಬದಲು ಸಂತ್ರಸ್ತರಿಗೆ ಬೆಂಬಲ ನೀಡುವಂತೆ ಪಾಗಿ ಮಹಿಳೆಯರು ಮತ್ತು ಪುರುಷರಲ್ಲಿ ಮನವಿ ಮಾಡಿದರು.

ಪುಣೆಯಲ್ಲಿ ಮನೋವಿಜ್ಞಾನ ವ್ಯಾಸಂಗ ಮಾಡುತ್ತಿರುವ ಮೈತ್ರಿ ಎಂಬ ಮತ್ತೋರ್ವ ವಿದ್ಯಾರ್ಥಿನಿ ಮಾತನಾಡಿ, ಸುರಕ್ಷತೆಯ ಕಾಳಜಿಯು ವಿಶೇಷವಾಗಿ ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳಿಗೆ ಶಿಕ್ಷಣಕ್ಕೆ ಅಡ್ಡಿಯಾಗಬಹುದು ಎಂದು ಹೇಳಿದರು.

ಗ್ರಾಮೀಣ ಪ್ರದೇಶದ ಪೋಷಕರು ಸುರಕ್ಷತೆಯ ಕಾಳಜಿಯಿಂದಾಗಿ ತಮ್ಮ ಹೆಣ್ಣುಮಕ್ಕಳನ್ನು ಉನ್ನತ ಶಿಕ್ಷಣಕ್ಕಾಗಿ ಹೊರಗೆ ಕಳುಹಿಸಲು ಹೆಚ್ಚಾಗಿ ಹಿಂಜರಿಯುತ್ತಾರೆ. ಬದಲಿಗೆ ತಮ್ಮ ಗಂಡುಮಕ್ಕಳಿಗೆ ಶಿಕ್ಷಣ ನೀಡಲು ಆದ್ಯತೆ ನೀಡುತ್ತಾರೆ ಎಂದು ಅವರು ಹೇಳಿದರು.

ಮಗ ತಮ್ಮನ್ನು ಆರ್ಥಿಕವಾಗಿ ಬೆಂಬಲಿಸುತ್ತಾನೆ. ಆದರೆ ಮಗಳು ಮದುವೆಯಾಗಿ ಕುಟುಂಬವನ್ನು ತೊರೆಯುತ್ತಾಳೆ ಎಂದು ಭಾವಿಸುವ ಸಾಮಾಜಿಕ ರೂಢಿಗಳಿಗೆ ಮೈತ್ರಿ ಈ ಮನಸ್ಥಿತಿಯನ್ನು ಭಾಗಶಃ ಕಾರಣವೆಂದು ಹೇಳಿದರು.

ಸೈಬರ್ ಮತ್ತು ಡಿಜಿಟಲ್ ಸೈನ್ಸ್‌ನ ದ್ವಿತೀಯ ವರ್ಷದ ಬಿಎಸ್ಸಿ ವಿದ್ಯಾರ್ಥಿನಿ ಪ್ರಜ್ಞಾ ಗಾವಂಡೆ ಮಾತನಾಡಿ, ಸೈಬರ್ ಭದ್ರತೆಯಂತಹ ವಿಶೇಷ ಕೋರ್ಸ್‌ಗಳನ್ನು ವ್ಯಾಸಂಗ ಮಾಡಲು ಇರುವ ಆರ್ಥಿಕ ತಡೆಗಳ ಕುರಿತು ಬೆಳಕು ಚೆಲ್ಲಿದರು. “ಪ್ರಸಿದ್ಧ ಕಾಲೇಜುಗಳು ಇಂತಹ ಕೋರ್ಸ್‌ಗಳಿಗೆ ಸುಮಾರು 3 ಲಕ್ಷ ರೂಪಾಯಿ ಶುಲ್ಕ ವಿಧಿಸುತ್ತವೆ, ಇದನ್ನು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳು ಭರಿಸುವುದು ಕಷ್ಟ” ಎಂದು ಅವರು ಉಲ್ಲೇಖಿಸಿದರು.

ಖಾಸಗಿಯಾಗಿ ಅರೆಕಾಲಿಕ ಕೆಲಸವನ್ನೂ ಮಾಡುವ ಗಾವಂಡೆ, “ಸರ್ಕಾರಿ ಕಾಲೇಜುಗಳಲ್ಲಿ ಸೈಬರ್ ಭದ್ರತಾ ಕೋರ್ಸ್‌ಗಳ ಲಭ್ಯತೆಯನ್ನು ಹೆಚ್ಚಿಸಬೇಕು, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಬೇಕು” ಎಂದು ಕೋರಿದರು.

ಮಹಿಳೆಯರ ಅಶ್ಲೀಲ ಚಿತ್ರಗಳನ್ನು ರಚಿಸಲು ಮತ್ತು ಅವರಿಂದ ಹಣ ಸುಲಿಗೆ ಮಾಡಲು ಕೃತಕ ಬುದ್ಧಿಮತ್ತೆಯ (ಎಐ) ಹೆಚ್ಚುತ್ತಿರುವ ದುರುಪಯೋಗದ ಬಗ್ಗೆಯೂ ಅವರು ಮಾತನಾಡಿದರು, ಬಲವಾದ ಸೈಬರ್ ಭದ್ರತಾ ಜಾಗೃತಿ ಮತ್ತು ಕೌಶಲ್ಯಗಳ ಅಗತ್ಯವನ್ನು ಒತ್ತು ನೀಡಿದರು.

ಸಾರ್ವಜನಿಕ ಸಾರಿಗೆಯಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆಯೂ ವಿದ್ಯಾರ್ಥಿಗಳು ಕಳವಳ ವ್ಯಕ್ತಪಡಿಸಿದರು. ಜನದಟ್ಟಣೆಯ ಬಸ್‌ಗಳಲ್ಲಿ ಕಿರುಕುಳ ಅಥವಾ ಅನುಚಿತ ಸ್ಪರ್ಶದ ಭಯವಿರುತ್ತದೆ. ಖಾಲಿ ಬಸ್‌ಗಳಲ್ಲಿ ಪುರುಷರೊಂದಿಗೆ ಒಬ್ಬರೇ ಇರಬೇಕಾದ ಭಯವಿರುತ್ತದೆ ಎಂದು ಅವರು ಹೇಳಿದರು.

ಮಹಿಳೆಯರಿಗೆ ಸಮಾನ ಅವಕಾಶಗಳು ಸಿಗಬೇಕಾದರೆ ಸುರಕ್ಷಿತ ಸಂಚಾರ, ಕೈಗೆಟುಕುವ ಶಿಕ್ಷಣ ಮತ್ತು ಕಿರುಕುಳದಿಂದ ಮುಕ್ತಿ ನೀಡುವುದು ಅತ್ಯಗತ್ಯ ಎಂದು ಅವರು ಅಭಿಪ್ರಾಯಪಟ್ಟರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸರ್ಕಾರಿ ಶಾಲೆಗೆ ಅತಿಕ್ರಮಣ ಮತ್ತು ಶಿಕ್ಷಕರಿಗೆ ಬೆದರಿಕೆ ಆರೋಪ: ಲಾತೂರ್‌ನಲ್ಲಿ ಸಿಜೆಪಿ ನಾಯಕ ಅಭಿಜೀತ್ ದೀಪ್ಕೆ ವಿರುದ್ಧ ಎಫ್‌ಐಆರ್ ದಾಖಲು

ಅನುಮತಿಯಿಲ್ಲದೆ ಸರ್ಕಾರಿ ಶಾಲೆಯ ತರಗತಿ ಕೊಠಡಿಗೆ ಪ್ರವೇಶಿಸಿ, ಶೈಕ್ಷಣಿಕ ಕಾರ್ಯಗಳಿಗೆ ಅಡ್ಡಿಪಡಿಸಿದ ಹಾಗೂ ಕರ್ತವ್ಯದಲ್ಲಿದ್ದ ಶಿಕ್ಷಕರಿಗೆ ಬೆದರಿಕೆಯೊಡ್ಡಿದ ಆರೋಪದ ಮೇಲೆ ಜಿರಳೆ ಜನತಾ ಪಕ್ಷದ (ಸಿಜೆಪಿ) ಸಂಚಾಲಕ ಅಭಿಜೀತ್ ದೀಪ್ಕೆ ಮತ್ತು ಅವರ...

ಸರ್ಕಾರಿ ಶಾಲೆಗೆ ಅತಿಕ್ರಮಣ ಮತ್ತು ಶಿಕ್ಷಕರಿಗೆ ಬೆದರಿಕೆ ಆರೋಪ: ಲಾತೂರ್‌ನಲ್ಲಿ ಸಿಜೆಪಿ ನಾಯಕ ಅಭಿಜೀತ್ ದೀಪ್ಕೆ ವಿರುದ್ಧ ಎಫ್‌ಐಆರ್ ದಾಖಲು

ಅನುಮತಿಯಿಲ್ಲದೆ ಸರ್ಕಾರಿ ಶಾಲೆಯ ತರಗತಿ ಕೊಠಡಿಗೆ ಪ್ರವೇಶಿಸಿ, ಶೈಕ್ಷಣಿಕ ಕಾರ್ಯಗಳಿಗೆ ಅಡ್ಡಿಪಡಿಸಿದ ಹಾಗೂ ಕರ್ತವ್ಯದಲ್ಲಿದ್ದ ಶಿಕ್ಷಕರಿಗೆ ಬೆದರಿಕೆಯೊಡ್ಡಿದ ಆರೋಪದ ಮೇಲೆ ಜಿರಳೆ ಜನತಾ ಪಕ್ಷದ (ಸಿಜೆಪಿ) ಸಂಚಾಲಕ ಅಭಿಜೀತ್ ದೀಪ್ಕೆ ಮತ್ತು ಅವರ...

‘ಅಕ್ರಮ ವಲಸಿಗರ ಪರಿಶೀಲನೆ’ ನೆಪದಲ್ಲಿ ಬಂಗಾಳಿ ವಲಸೆ ಕಾರ್ಮಿಕರ ಮೇಲೆ ಬೆಂಗಳೂರು ಪೊಲೀಸರಿಂದ ದೌರ್ಜನ್ಯ: ಜಂಟಿ ಸತ್ಯಶೋಧನಾ ವರದಿ

ಬೆಂಗಳೂರು ನಗರದಲ್ಲಿ ನಡೆದ "ಅಕ್ರಮ ವಲಸಿಗರ ಪರಿಶೀಲನೆ" ಕಾರ್ಯಾಚರಣೆಯ ಹೆಸರಿನಲ್ಲಿ ಬಂಗಾಳಿ ಮಾತನಾಡುವ ವಲಸೆ ಕಾರ್ಮಿಕರನ್ನು ಭಾಷೆ ಮತ್ತು ವರ್ಗದ ಆಧಾರದ ಮೇಲೆ ಪ್ರೊಫೈಲಿಂಗ್ ಮಾಡಿ, ಅವರ ಮೇಲೆ ಅನಿಯಂತ್ರಿತ ಬಂಧನ, ಹಲ್ಲೆ...

ಮನೆ ವಿಳಾಸ ಬಹಿರಂಗ : ಹಿಂದುತ್ವ ಪೋರ್ಟಲ್‌ಗಳು, ಅಭಿಜಿತ್ ಅಯ್ಯರ್-ಮಿತ್ರ ವಿರುದ್ಧ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಸಿಜೆಪಿಯ ಸೌರವ್ ದಾಸ್

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ವಕ್ತಾರ ಸೌರವ್ ದಾಸ್ ಅವರು ಹಿಂದುತ್ವ ಡಿಜಿಟಲ್ ಮಾಧ್ಯಮ ಪೋರ್ಟಲ್‌ಗಳು, ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳು ಮತ್ತು ಬಲಪಂಥೀಯ ರಾಜಕೀಯ ವಿಶ್ಲೇಷಕ ಅಭಿಜಿತ್ ಅಯ್ಯರ್-ಮಿತ್ರ ಅವರ ವಿರುದ್ಧ ದೆಹಲಿ...

ದಾಖಲೆಗಳಿದ್ದರೂ ಬಂಗಾಳಿ ಮಾತನಾಡುವ ಕಾರಣಕ್ಕೆ ಮಹಿಳೆಯನ್ನು ಬಾಂಗ್ಲಾದೇಶಕ್ಕೆ ಕಳುಹಿಸಿದ ಅಧಿಕಾರಿಗಳು?

ನವಿ ಮುಂಬೈನ 40 ವರ್ಷದ ಬಂಗಾಳಿ ಮಾತನಾಡುವ ಮಹಿಳೆಯೊಬ್ಬರನ್ನು ಅಕ್ರಮ ಬಾಂಗ್ಲಾದೇಶಿ ವಲಸಿಗರು ಎಂಬ ಶಂಕೆಯ ಮೇಲೆ ಬಂಧಿಸಿ, ಆಕೆ ಭಾರತದಲ್ಲೇ ಜನಿಸಿ ವಾಸಿಸುತ್ತಿದ್ದ ದಾಖಲೆಗಳನ್ನು ಕುಟುಂಬದವರು ಒದಗಿಸಿದರೂ, ಗಡಿಯಾಚೆಗೆ ಕಳುಹಿಸಲಾಗಿದೆ ಎಂದು...

ಬಾರ್ ಕೌನ್ಸಿಲ್ ಅಧ್ಯಕ್ಷರ ವಿರುದ್ಧ ₹150 ಕೋಟಿ ಅಕ್ರಮ ಆರೋಪ: ತಕ್ಷಣವೇ ರಾಜೀನಾಮೆ ನೀಡಲು ಒತ್ತಾಯ

ಭಾರತೀಯ ಬಾರ್ ಕೌನ್ಸಿಲ್ (BCI) ಉಪಾಧ್ಯಕ್ಷ ಮತ್ತು ಹಿರಿಯ ವಕೀಲ ವೈ.ಆರ್. ಸದಾಶಿವ ರೆಡ್ಡಿ ಅವರು ಬಿಸಿಐ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಅವರ ರಾಜೀನಾಮೆಗೆ ಆಗ್ರಹಿಸಿ ಪತ್ರ ಬರೆದಿದ್ದಾರೆ. ತಮ್ಮ ಪತ್ರದಲ್ಲಿ...

ಶಿಕ್ಷಕರ ನೇಮಕಾತಿಯಲ್ಲಿ ಉರ್ದು ಮಾಧ್ಯಮಕ್ಕೆ ಅನ್ಯಾಯ : ಹೈಕೋರ್ಟ್‌ಗೆ ಅರ್ಜಿ

ಕರ್ನಾಟಕ ಸರ್ಕಾರದ 15 ಸಾವಿರ ಶಿಕ್ಷಕರ ನೇಮಕಾತಿ ಅಧಿಸೂಚನೆಯಲ್ಲಿ ಉರ್ದು ಮಾಧ್ಯಮ ಹಾಗೂ ಇತರ ಭಾಷಾ ಅಲ್ಪಸಂಖ್ಯಾತ ಶಿಕ್ಷಕರ ಹುದ್ದೆಗಳನ್ನು ಕೈಬಿಡಲಾಗಿದೆ ಎಂದು ಆರೋಪಿಸಿ ಹೈಕೋರ್ಟ್‌ನ ಧಾರವಾಡ ಪೀಠದ ಮುಂದೆ ಅರ್ಜಿ ಸಲ್ಲಿಕೆಯಾಗಿದೆ. ಉರ್ದು...

ಚುನಾವಣಾ ಆಯೋಗಕ್ಕೆ ನಕಲಿ ಆಕ್ಷೇಪಣೆ ಪತ್ರ ಸಲ್ಲಿಕೆ; ಉತ್ತರಾಖಂಡ್ ಹಾಲಿ ಕಾಂಗ್ರೆಸ್ ಶಾಸಕರ ಹೆಸರು ಡಿಲೀಟ್

ಮತದಾರರ ಪಟ್ಟಿಯಿಂದ ಹೆಸರನ್ನು ತೆಗೆದುಹಾಕಲು ಕೋರಿ ಸಲ್ಲಿಸಲಾದ ಆಕ್ಷೇಪಣೆಯನ್ನು (ಅರ್ಜಿ) ನಾನು ಸಲ್ಲಿಸಿಲ್ಲ ಎಂದು ವ್ಯಕ್ತಿಯೊಬ್ಬರು ನಿರಾಕರಿಸಿದ ನಂತರ, ಉತ್ತರಾಖಂಡ್ ಕಾಂಗ್ರೆಸ್ ಶಾಸಕ ಫುರ್ಕಾನ್ ಅಹಮದ್ ಅವರು ಮತದಾರರ ಪಟ್ಟಿಯ ವಿಶೇಷ ತೀವ್ರ...

RTI ಕಾರ್ಯಕರ್ತ ವಿನಾಯಕ ಬಾಳಿಗಾ ಹತ್ಯೆ ಪ್ರಕರಣ: ₹24 ಲಕ್ಷ ದೇವಸ್ಥಾನದ ಕಾಣಿಕೆ ಹಣ ಮನೆಗೆ ಕೊಂಡೊಯ್ದಿದ್ದ ನರೇಶ್ ಶೆಣೈ

RTI ಕಾರ್ಯಕರ್ತ ವಿನಾಯಕ ಬಾಳಿಗಾ ಅವರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಚಲನ ಮೂಡಿಸುವಂತಹ ಮಹತ್ವದ ದಾಖಲೆಯೊಂದು ಬಹಿರಂಗವಾಗಿದೆ. ಬಾಳಿಗಾ ಹತ್ಯೆ ನಡೆಯುವುದಕ್ಕೂ ಕೆಲವೇ ದಿನಗಳ ಮುನ್ನ, ಪ್ರಕರಣದ ಪ್ರಮುಖ ಆರೋಪಿ ನರೇಶ್...

ಸಿಜೆಪಿ ಪ್ರತಿಭಟನೆ: ಪೊಲೀಸ್ ದೌರ್ಜನ್ಯಗಳ ಆರೋಪದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಸುಪ್ರೀಂ ಆದೇಶ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ದೆಹಲಿ ಪೊಲೀಸರು ನಡೆಸಿದ ಅತಿಯಾದ ಬಲಪ್ರಯೋಗ, ಹಿಂಸಾಚಾರ ಮತ್ತು ಇತರ ಗಂಭೀರ ದುರ್ನಡತೆಯ ಆರೋಪಗಳ ತನಿಖೆಗೆ ಉನ್ನತ...