Homeಮುಖಪುಟಯುಪಿ ವಿಧಾನಸಭಾ ಚುನಾವಣೆ-2022: ‘ಪೂರ್ವಾಂಚಲ’ ಕಡೆಗೆ ಗಮನ ಹರಿಸಿದ BJP!

ಯುಪಿ ವಿಧಾನಸಭಾ ಚುನಾವಣೆ-2022: ‘ಪೂರ್ವಾಂಚಲ’ ಕಡೆಗೆ ಗಮನ ಹರಿಸಿದ BJP!

- Advertisement -
- Advertisement -

ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಗೆ ಅಲ್ಲಿನ ಆಡಳಿತ ಪಕ್ಷ ಸಜ್ಜಾಗತೊಡಗಿದೆ. ರಾಜ್ಯದಲ್ಲಿ ಮತ್ತೇ ಅಧಿಕಾರ ಹಿಡಿಯಲು ಬಿಜೆಪಿ ಹರಸಹಾಸ ಪಡುತ್ತಿದ್ದು, ಈ ಹಿನ್ನಲೆಯಲ್ಲಿ ಪೂರ್ವಾಂಚಲ ಪ್ರದೇಶವನ್ನು ಪಕ್ಷವು ಗುರಿಯಾಗಿಸಿದೆ. ಹೀಗಾಗಿಯೆ ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಉದ್ಘಾಟಿಸಿದ ಒಂಬತ್ತು ವೈದ್ಯಕೀಯ ಕಾಲೇಜುಗಳಲ್ಲಿ ಐದು ಪೂರ್ವಾಂಚಲ ಪ್ರದೇಶದಲ್ಲಿದೆ ಎಂಬುವುದು ವಿಶೇಷವಾಗಿದೆ.

ಪ್ರಮುಖ ಕಲ್ಯಾಣ ಯೋಜನೆಗಳನ್ನು ಉದ್ಘಾಟಿಸಲು ಪೂರ್ವಾಂಚಲ ಪ್ರದೇಶದಲ್ಲಿರುವ ಸಿದ್ಧಾರ್ಥನಗರ ಮತ್ತು ವಾರಣಾಸಿಯನ್ನು ಆಯ್ಕೆ ಮಾಡಿದ್ದಾರೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಆದಿತ್ಯನಾಥ್ ಈ ಪ್ರದೇಶದ ಜನರಿಗೆ ಸೂಕ್ಷ್ಮ ರಾಜಕೀಯ ಸಂದೇಶವನ್ನು ನೀಡಿದ್ದಾರೆ ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ.

ಇದನ್ನೂ ಓದಿ: ಮಧ್ಯಪ್ರದೇಶ: ಮಾರ್ಚ್‌ನಿಂದ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದು ಬರೋಬ್ಬರಿ 27 ಶಾಸಕರು!

“ಲಕ್ನೋಗೆ ಹೋಗುವ ಹೆದ್ದಾರಿಯು ಪೂರ್ವಾಂಚಲ ಮೂಲಕ ಹಾದು ಹೋಗುತ್ತದೆ” ಎಂಬುದು ಉತ್ತರ ಪ್ರದೇಶದ ಜನಪ್ರಿಯ ರಾಜಕೀಯ ಮಾತಾಗಿದೆ. ಜೊತೆಗೆ ಪೂರ್ವ ಯುಪಿಯಲ್ಲಿ ಮೋದಿ ಮತ್ತು ಆದಿತ್ಯನಾಥ್‌ ಅವರ ಕ್ಷೇತ್ರಗಳು ಕೂಡಾ ಇರುವುದರಿಂದ ಬಿಜೆಪಿಗೆ ಇದು ಪ್ರತಿಷ್ಠೆಯ ಪ್ರಶ್ನೆ ಕೂಡಾ ಆಗಿದೆ.

ಪೂರ್ವಾಂಚಲ ಪ್ರದೇಶದ 28 ಜಿಲ್ಲೆಗಳಲ್ಲಿ 164 ವಿಧಾನಸಭಾ ಕ್ಷೇತ್ರಗಳು ಹರಡಿಕೊಂಡಿವೆ. ಇದು ಉತ್ತರಪ್ರದೇಶದ 403 ವಿಧಾಸಭಾ ಸದಸ್ಯರ ಪೈಕಿ ಸುಮಾರು 33% ದಷ್ಟು ಸ್ಥಾನಗಳನ್ನು ನೀಡುತ್ತದೆ.

2017 ರ ಚುನಾವಣೆಯಲ್ಲಿ, ಬಿಜೆಪಿಯು ಇಲ್ಲಿನ 164 ಸ್ಥಾನಗಳಲ್ಲಿ 115 ಸ್ಥಾನಗಳನ್ನು ಗಳಿಸುವ ಮೂಲಕ ಭರ್ಜರಿ ಗೆಲುವು ಸಾಧಿಸಿದರೆ, ಸಮಾಜವಾದಿ ಪಕ್ಷವು 17, ಬಿಎಸ್ಪಿ 14, ಕಾಂಗ್ರೆಸ್ 2 ಮತ್ತು ಇತರರು 16 ಸ್ಥಾನಗಳನ್ನು ಪಡೆದಿದ್ದರು. ಇದರ ನಂತರ 2019 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕೂಡಾ ಪೂರ್ವಾಂಚಲದಿಂದ ಬಿಜೆಪಿ ಗರಿಷ್ಠ ಸ್ಥಾನಗಳನ್ನು ಗೆದ್ದುಕೊಂಡಿತ್ತು.

ಇದನ್ನೂ ಓದಿ: ಯುಪಿಯಲ್ಲಿ ಪಕ್ಷ ಅಧಿಕಾರಕ್ಕೇರಿದರೆ 10 ಲಕ್ಷ ರೂ. ವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ: ಪ್ರಿಯಾಂಕಾ

“ಲಖಿಂಪುರ ಖೇರಿ ಹಿಂಸಾಚಾರ ಮತ್ತು ಪಶ್ಚಿಮ ಯುಪಿಯಲ್ಲಿ ರೈತರ ಅಶಾಂತಿಯ ಹಿನ್ನೆಲೆಯಲ್ಲಿ, ಬಿಜೆಪಿಯು ಈಗ ಪೂರ್ವಾಂಚಲ್ ಮೇಲೆ ತನ್ನ ದೃಷ್ಟಿಯನ್ನು ಕೇಂದ್ರೀಕರಿಸಿದೆ. ಅಲ್ಲಿ ಗೆಲ್ಲುವ ಮೂಲಕ ಪಶ್ಚಿಮ ಯುಪಿಯ ಸಂಭವನೀಯ ನಷ್ಟವನ್ನು ತುಂಬಲು ಪ್ರಯತ್ನಿಸುತ್ತಿದೆ” ಎಂದು ರಾಜಕೀಯ ವಿಮರ್ಶಕ ಜೆಪಿ ಶುಕ್ಲಾ ಹೇಳಿದ್ದಾರೆ ಎಂದು TNIE ತನ್ನ ವರದಿಯಲ್ಲಿ ಹೇಳಿದೆ.

ಅನುಪ್ರಿಯಾ ಪಟೇಲ್ ಅವರ ಅಪ್ನಾ ದಳ ಮತ್ತು ಸಂಜಯ್ ನಿಶಾದ್ ಅವರ ನಿಶಾದ್ ಪಾರ್ಟಿಯಂತಹ ಸಣ್ಣ ಜಾತಿ ಆಧಾರಿತ ಗುಂಪುಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ಪೂರ್ವ ಯುಪಿಯಲ್ಲಿ ಬಿಜೆಪಿಯು ಜಾತಿ ಸಮೀಕರಣಗಳನ್ನು ಸಮತೋಲನಗೊಳಿಸಲು ಈಗಾಗಲೇ ಪ್ರಯತ್ನಿಸುತ್ತಿದೆ.

ಪ್ರಧಾನಿ ಮೋದಿ ಕೂಡಾ ಐದು ದಿನಗಳ ಅವಧಿಯಲ್ಲಿ ಎರೆಡೆರೆಡು ಬಾರಿ ಪೂರ್ವಾಂಚಲ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ಇದರಿಂದಲೇ ಉತ್ತರಪ್ರದೇಶದ ಚುನಾವಣೆಯಲ್ಲಿ ಪೂರ್ವಾಂಚಲದ ಪ್ರಾಮುಖ್ಯತೆಯನ್ನು ಅಳೆಯಬಹುದು. ಪ್ರಧಾನಿ ಅಕ್ಟೋಬರ್ 20 ರಂದು, ಯುಪಿಯ ಮೂರನೇ ಮತ್ತು ದೇಶದ 87 ನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಉದ್ಘಾಟಿಸಲು ಕುಶಿನಗರಕ್ಕೆ ತೆರಳಿದ್ದರು.

ಇದನ್ನೂ ಓದಿ: ಯೋಗೇಂದ್ರ ಯಾದವ್ ಅಮಾನತು: ಚಾರಿತ್ರಿಕ ರೈತ ಹೋರಾಟದ ವಿಶಿಷ್ಟ ಪ್ರಜಾತಂತ್ರ

ಇಷ್ಟೇ ಅಲ್ಲದೆ, ಅವರು ವಾರಣಾಸಿಯ ಜನರಿಗೆ 5,229 ಕೋಟಿ ರೂಪಾಯಿಗಳ ಕಲ್ಯಾಣ ಯೋಜನೆಗಳನ್ನು ಘೋಷಿಸಿದ್ದರು. ಈ ಎಲ್ಲಾ ಪ್ರವಾಸಗಳು ಪೂರ್ವ ಯುಪಿಯನ್ನು ಕೇಂದ್ರೀಕರಿಸಿದ್ದು, ಇದು ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡೇ ಮಾಡಲಾಗುತ್ತಿದೆ.

ಮುಂಬರುವ ವೈದ್ಯಕೀಯ ಮೂಲಸೌಕರ್ಯವು ಆರೋಗ್ಯಕರ ಭಾರತದ ಕನಸುಗಳನ್ನು ನನಸಾಗಿಸುತ್ತದೆ ಎಂದು ಪ್ರಧಾನಿ ಸಿದ್ಧಾರ್ಥನಗರದಲ್ಲಿ ಹೇಳಿಕೊಂಡಿದ್ದರು. “ವೈದ್ಯಕೀಯ ಕಾಲೇಜುಗಳು ರಾಜ್ಯದ ಜನರಿಗೆ ಉಡುಗೊರೆಯಾಗಿವೆ” ಎಂದು ಹೇಳಿದ್ದ ಅವರು, ಒಂಬತ್ತು ಕಾಲೇಜುಗಳು 5,000 ಉದ್ಯೋಗಾವಕಾಶಗಳನ್ನು ಮತ್ತು ಸುಮಾರು 2,500 ಆಸ್ಪತ್ರೆ ಹಾಸಿಗೆಗಳನ್ನು ಸೃಷ್ಟಿಸುತ್ತವೆ ಎಂದು ಅವರು ತಿಳಿಸಿದ್ದರು.

ವಾರಣಾಸಿಯಲ್ಲಿ ಮಾತನಾಡಿದ್ದ ಪ್ರಧಾನಿ, ದೇಶದಲ್ಲಿ ಸಮರ್ಪಕ ಮತ್ತು ಗುಣಮಟ್ಟದ ವೈದ್ಯಕೀಯ ಮೂಲಸೌಕರ್ಯಗಳು ಇಲ್ಲದೆ ಇರಲು ಪ್ರಮುಖ ಕಾರಣ ಹಿಂದಿನ ಸರ್ಕಾರಗಳು ಎಂದು ಆರೋಪಿಸಿದ್ದರು.

ಒಟ್ಟಿನಲ್ಲಿ, ಬಿಜೆಪಿ ಉತ್ತರ ಪ್ರದೇಶದಲ್ಲಿ ಅಧಿಕಾರವನ್ನು ಉಳಿಸಕೊಳ್ಳಲು ಹರಸಾಹಸ ಪಡುತ್ತಿದೆ. ಕೊರೊನಾ ನಿರ್ವಣೆಯಲ್ಲಿ ವಿಫಲತೆ ಮತ್ತು ವೈದ್ಯಕೀಯ ಸೌಲಭ್ಯ ಕೊರತೆಯ ಆರೋಪವನ್ನು ಈ ಹಿಂದಿನ ಸರ್ಕಾರದ ಮೇಲೆ ಹಾಕುತ್ತಲೆ ಇವೆ. ಇದರ ಜೊತೆಗೆ ರೈತ ಹೋರಾಟದಿಂದ ತನಗೆ ಯಾವುದೆ ನಷ್ಟವಿಲ್ಲ ಎಂದು ಬಿಜೆಪಿ ಬಿಂಬಿಸುತ್ತಿದ್ದರೂ ಅದರ ಬಗ್ಗೆ ಕೂಡಾ ತೀವ್ರವಾಗಿ ಯೋಚಿಸುತ್ತಿದೆ. ಈ ಹಿನ್ನಲೆಯಲ್ಲೇ ಪಶ್ಚಿಮ ಯುಪಿಯನ್ನು ಬಿಟ್ಟು ತನ್ನ ಹೆಚ್ಚಿನ ಗಮನವನ್ನು ಪೂರ್ವ ಯುಪಿಯ ಕಡೆಗೆ ಹೊರಳಿಸಿದೆ.

ಮೂಲ: TNIE

ಇದನ್ನೂ ಓದಿ: ಆಶ್ರಮ್‌-3 ಚಿತ್ರೀಕರಣದ ವೇಳೆ ಬಜರಂಗದಳ ದಾಳಿ: ಮಧ್ಯಪ್ರದೇಶ ಗೃಹಸಚಿವ ಸಮರ್ಥನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷ ಬಿತ್ತುವ, ವಿಭಜನೀಯ ಶಕ್ತಿಗಳನ್ನು ಸೋಲಿಸಲು ಒಗ್ಗಟ್ಟಾಗಬೇಕು: ಅಡ್ಮಿರಲ್ ರಾಮದಾಸ್ ಅವರ ಕೊನೆಯ ಸಂದೇಶ...

0
ಲೋಕಸಭೆ ಚುನಾವಣೆ ಹೊಸ್ತಿಲ್ಲಲ್ಲಿ ನೌಕಾಪಡೆಯ ಮಾಜಿ ಮುಖ್ಯಸ್ಥ ಅಡ್ಮಿರಲ್ ರಾಮ್‌ದಾಸ್ ಅವರ ಕೊನೆಯ ಕಾಲದ ಸಂದೇಶವನ್ನು ಅವರ ಪತ್ನಿ ಲಲಿತಾ ರಾಮದಾಸ್‌ ಸಾರ್ವಜನಿಕರ ಮುಂದಿಟ್ಟಿದ್ದು, ದ್ವೇಷಿಸುವ, ವಿಭಜನೀಯ, ಸರ್ವಾಧಿಕಾರಿಗಳನ್ನು ಸೋಲಿಸಲು ಒಗ್ಗಟ್ಟಾಗಬೇಕು ಎಂದು...