Homeದಲಿತ್ ಫೈಲ್ಸ್ಮಾತು ಮರೆತ ಭಾರತ; ಇದು ದಲಿತ ಭಾರತದ ಕಥನ

ಮಾತು ಮರೆತ ಭಾರತ; ಇದು ದಲಿತ ಭಾರತದ ಕಥನ

- Advertisement -
- Advertisement -

ಮಾತು ಮರೆಯುವುದರಲ್ಲಿ ಎರಡು ವಿಧ. ಒಂದು, ಕೊಟ್ಟ ಮಾತು ಮರೆಯುವುದು. ಇನ್ನೊಂದು ಮಾತಾಡಲೇಬೇಕಾದಾಗ ಮಾತಾಡದೇ ಇರುವುದು. ಎರಡು ಸನ್ನಿವೇಶದಲ್ಲಿಯೂ ಸಹ ಮಾತುಗಳನ್ನು ಮರೆಯಲಾಗುತ್ತದೆ. ಮರೆಯುವುದು ಸಹಜವಲ್ಲವೆ? ಹೌದು ಸಹಜ. ಒಮ್ಮೆಯಾದರೆ ಸಹಜ. ಮತ್ತೊಮ್ಮೆಯಾದರೂ ಸಹಜವೆನ್ನೋಣ. ಆದರೆ ಶತಮಾನಗಳ ಕಾಲದ ಮರೆವಿಗೆ ಏನೆನ್ನೋಣ? ಜಾಣ ಮರೆವು ಎಂದುಬಿಡಬಹುದು. ಆದರೆ ಭಾರತದಲ್ಲಿ ಜಾಣ ಮರೆವನ್ನೂ ಮೀರಿಸಿದ ಕ್ರೂರ ಮರೆವಿದೆ. ಈ ಕ್ರೂರ ಮರೆವಿಗೆ ಕಾರಣ ಒಂದು ಭಾರತವಿಲ್ಲದ್ದಾಗಿದೆ. ಇಲ್ಲಿ ನೂರಾರು ಭಾರತಗಳಿವೆ. ಅನ್ಯ ದೇಶಗಳಿಗೆ ಹೋಲಿಸಿಕೊಂಡಾಗ ಇಲ್ಲಿ ಹಲವು ಜಾತಿಗಳಿಂದ ಒಡೆದುಹೋಗಿರುವ ಹಲವು ಭಾರತಗಳಿವೆ. 1950ರಲ್ಲಿ ಸಂವಿಧಾನ ಈ ಭಾರತವನ್ನು ಒಂದು ಮಾಡುವ ಪ್ರಯತ್ನಕ್ಕೆ ಮುಂದಾಯಿತಾದರೂ ಆಳುವ ವರ್ಗ ಇಂದಿಗೂ ಅದು ಸಫಲವಾಗದಂತೆ ನೋಡಿಕೊಂಡು ಮತ್ತಷ್ಟು ಛಿದ್ರಗೊಂಡು ಮತ್ತಷ್ಟು ಭಾರತಗಳಾಗುವಂತೆ ಮಾಡಿದೆ.

ಇಂತಹ ಭಾರತದ ಪ್ರಾಚೀನ ಕಾಲದಲ್ಲಿ ಅಸ್ಪೃಶ್ಯ ಭಾರತವೂ ಇತ್ತು. ಆಧುನಿಕ ಭಾರತದಲ್ಲಿ ಪರಿಶಿಷ್ಟ ಜಾತಿಗಳಾಗಿ ಗುರುತಿಸಿಕೊಂಡು ಇಂದು ದಲಿತ ಭಾರತವಾಗಿದೆ. ಆದರೆ ಅಸ್ಪೃಶ್ಯ ಭಾರತ ಅವರ ಪಾಲಿಗೆ ಇಂದಿಗೂ ಜೀವಂತವಿದೆ. ಸಂವಿಧಾನ ಸಭೆಯಲ್ಲಿ ಅಸ್ಪೃಶ್ಯತೆಯನ್ನು ನಿಷೇಧಿಸಿ, ಇನ್ನು ಮುಂದೆ ಮನುಷ್ಯರಾದ ಅಸ್ಪೃಶ್ಯರನ್ನು ದೆವ್ವಗಳಂತೆ ಕಾಡುವುದಿಲ್ಲವೆಂದು ಮಾತು ಕೊಟ್ಟ ದಲಿತೇತರರು ತಾವು ಕೊಟ್ಟ ಮಾತನ್ನು ಉಳಿಸಿಕೊಂಡರೆ? ’ಹಿಂದೂ ನಾವೆಲ್ಲ ಒಂದು’ ಎಂದ ಸ್ವಯಂ ಸೇವಕರು ದಲಿತರನ್ನು ಸಮಾನವಾಗಿ ಕಂಡರೆ? ವಸುದೈವ ಕುಟುಂಬಕಂ ಎಂದ ಸಾಧು ಸಂತರು ದಲಿತರೊಂದಿಗೆ ಕಳ್ಳುಬಳ್ಳಿ ಸಂಬಂಧ ಬೆಳೆಸಿದರೆ? ದ್ವೈತ, ಅದ್ವೈತ್ಯ, ವಿಶಿಷ್ಟಾದ್ವೈತಗಳು ದಲಿತರಿಗೆ ದೇಗುಲ ಪ್ರವೇಶ ನೀಡಿದವೇ? ಆಧ್ಯಾತ್ಮದ ಭಾಗವಾಗಿಸಿಕೊಂಡವೆ? ಆಮ್ ಆದ್ಮಿ ಕೆ ಸಾಥ್ ಅಂದವರು ದಲಿತ ಕೇರಿಗಳನ್ನು ಮುಟ್ಟಿದರೆ? ’ಸಬ್ಕಾ ಸಾಥ್ ಸಬ್ಕಾ ವಿಕಾಸ್’ ಎಂದವರು ದಲಿತರ ವಿಕಾಸಕ್ಕೆ ಕೈ ಹಾಕಿದರೇ? ಹೀಗೆ ಸಾಲುಸಾಲು ಪ್ರಶ್ನೆಗಳಿಗೆ ಉತ್ತರ ಇಲ್ಲವೆಂದೇ ತೋರುತ್ತಿದೆ.

’ರೀ ಈಗ ಮೊದಲಿನಂತಿಲ್ಲ. ಎಲ್ಲಾ ಬದಲಾಗುತ್ತಿದೆ’ ಎಂದವರ ಮುಂದೆ ಲೆಕ್ಕವಿಲ್ಲದಷ್ಟು ದಲಿತರ ಹೆಣಗಳ ಪಟ್ಟಿ ಇಟ್ಟಾಗ ಮಾತನ್ನೇ ಮರೆತುಬಿಡುತ್ತಾರೆ. ೨೦೨೦ರಲ್ಲಿ ದಲಿತರ ಮೇಲೆ 58,563 ದೌರ್ಜನ್ಯಗಳನ್ನು ಎಸಗಲಾಗಿದೆ. ಸ್ವತಂತ್ರ ಭಾರತ ಲೆಕ್ಕವಿಲ್ಲದಷ್ಟು ದಲಿತರ ಹತ್ಯಾಕಾಂಡಗಳಿಗೆ ನ್ಯಾಯವೇ ಸಿಗದೆ ನರಳುತ್ತಿವೆ. ಪ್ರತಿ ದಿನದ ಪತ್ರಿಕೆಗಳ ಮೂಲೆಗಳಲ್ಲಿ ದಲಿತರ ಮೇಲಿನ ದೌರ್ಜನ್ಯಗಳು ವರದಿಯಾಗುತ್ತವೆ. ಇದರಲ್ಲಿ ಕೊಲೆ ಅತ್ಯಾಚಾರಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಆದರೂ ದಲಿತೇತರರ ಉತ್ತರ ಸಿದ್ಧವಾಗಿರುತ್ತದೆ. ’ಈಗ ಮೊದಲಿನಂತಲ್ಲ ಬಿಡ್ರಿ’.

ವಾಚ್ ಕಟ್ಟಿದ್ದಕ್ಕೆ, ಮೀಸೆ ಬಿಟ್ಟದ್ದಕ್ಕೆ, ಕುದುರೆ ಹತ್ತಿದ್ದಕ್ಕೆ, ಅಂಬೇಡ್ಕರ್ ರಿಂಗ್‌ಟೋನ್ ಇಟ್ಟುಕೊಂಡಿದ್ದಕ್ಕೆ ದಲಿತರನ್ನ ಕೊಲೆ ಮಾಡಿಬಿಡುವಷ್ಟು ಕ್ರೂರಿಗಳು ಇಂದಿಗೂ ಈ ನೆಲದಲ್ಲಿರುವಾಗ ಭಾರತ ಸ್ವಾತಂತ್ರ್ಯಗೊಂಡಿದೆ ಎಂದು ಹೇಗೆ ಹೇಳುವುದು? ಆಗಿರುವ ಗಾಯಕ್ಕೆ ಮುಲಾಮು ಹಚ್ಚಬೇಕಾದ ಸಮಾಜ ಪದೇಪದೇ ಅದೇ ಗಾಯದ ಮೇಲೆ ಬರೆ ಹಾಕುತ್ತಾ ’ನೋಡು ಈಗ ಹಳೆಯ ಗಾಯ ಕಾಣುತ್ತಿಲ್ಲ’ ಎಂದರೆ ದಲಿತರು ನಂಬಿ ಕೂರಬೇಕೆ? ಕಾಲ ಬದಲಾಗಿದೆ ಹಾಗೂ ಸಮಾಜ ಬದಲಾಗಿದೆ ಎಂದು ಬೊಗಳೆ ಬಿಡುವ ಜಾತಿವಾದಿಗಳಿಗೆ ತಾವು ಮರೆತ ಮಾತುಗಳನ್ನು ನೆನಪಿಸಬೇಕಿದೆ. ಅಷ್ಟೇ ಅಲ್ಲ. ಭಾರತದ ಇತಿಹಾಸದಲ್ಲಿ ದಲಿತರ ಮೇಲೆ ಮೇಲ್ಜಾತಿಗಳು ನಡೆಸಿರುವ ದೌರ್ಜನ್ಯವನ್ನು ನೆನಪಿಸಬೇಕಿದೆ. ಇದರ ಜೊತೆಗೆ ದಲಿತರಲ್ಲಿಯೇ ತಮ್ಮ ಸಹಬಾಂಧವರ ಕೊಲೆಗಳನ್ನು ಮರೆತು ಮೈಮರೆತಿರುವವರಿಗೂ ದಲಿತ ಭಾರತದ ಮೇಲೆ ದಲಿತೇತರ ಭಾರತ ನಡೆಸಿರುವ ಭಯೋತ್ಪಾದನೆಯನ್ನು ನೆನಪಿಸಬೇಕಿದೆ. ಜಾತಿಯೆಂಬ ದೇಶದ್ರೋಹದ ವಿವಿಧ ಮುಖಗಳನ್ನು ಹಾಗೂ ಅದರ ಕ್ರೂರ ಮುಖವನ್ನು ತೋರಿಸಬೇಕಿದೆ.

ಬಹುದೊಡ್ಡ ವಿಸ್ಮೃತಿಯನ್ನು ಭಾರತಕ್ಕೆ ಪರಿಚಯಿಸಿ ಅಲ್ಲೆಲ್ಲ ತುಟಕ್ ಪಿಟಕ್ ಎನ್ನದೆ ಬಾಯಿ-ಮನಸ್ಸುಗಳಿಗೆ ಬೀಗ ಜಡಿದುಕೊಂಡು ಕುಳಿತಿದ್ದ, ಈಗಲೂ ಸುದೀರ್ಘ ಜೀವಂತ ಶವಗಳಾಗಿಯೇ ಉಳಿದಿರುವ ಮೂಳೆ ಮಾಂಸದ ತಡಿಕೆಗಳ ಮುಂದೆ ದಲಿತರ ಸುಟ್ಟ ಬೂದಿ, ಹೆಪ್ಪುಗಟ್ಟಿದ ನೆತ್ತರನ್ನು ತೋರಿಸಬೇಕಿದೆ.

ಅದಕ್ಕಾಗಿಯೇ ಈ ಅಂಕಣ. ಮಾತು ಮರೆತ ಭಾರತ. ಮಹಾಮರೆವಿನಲ್ಲಿ ಮುಳುಗಿ ತೇಲುತ್ತಿರುವ ದಲಿತರಿಗೂ ಹಾಗೂ ದಲಿತೇತರರಿಬ್ಬರಿಗೂ ಸಮರ್ಪಣೆ.

ಸಾಕ್ಯ ಸಮಗಾರ


ಇದನ್ನೂ ಓದಿ: ಹುಸಿ ಕಾಳಜಿಯ, ಪಕ್ಷಪಾತ ಧೋರಣೆಯ, ದ್ವೇಷದ ಅಜೆಂಡಾವುಳ್ಳ ’ದ ಕಾಶ್ಮೀರ್ ಫೈಲ್ಸ್’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...