Homeಕರ್ನಾಟಕಮಾಂಸ ತಿನ್ನದವರು ಟಿವಿಗಳಲ್ಲಿ ಯಕ್ಷಗಾನ ಮಾಡುತ್ತಿದ್ದಾರೆ: ದೇವನೂರ ಮಹಾದೇವ

ಮಾಂಸ ತಿನ್ನದವರು ಟಿವಿಗಳಲ್ಲಿ ಯಕ್ಷಗಾನ ಮಾಡುತ್ತಿದ್ದಾರೆ: ದೇವನೂರ ಮಹಾದೇವ

ಇಷ್ಟೆಲ್ಲಾ ನಡೆಯುತ್ತಿದೆಯಲ್ಲ, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಇದೆಯಾ? ಅದರ ಯಾವ ಲಕ್ಷಣವೂ ಕಾಣುತ್ತಿಲ್ಲ. ಸರ್ಕಾರ ಇಲ್ಲ ಅಥವಾ ಸರ್ಕಾರವೇ ಇದಕ್ಕೆಲ್ಲ ಕುಮ್ಮಕ್ಕು ನೀಡುತ್ತಿದೆ: ದೇಮ

- Advertisement -
- Advertisement -

“ಮಾಂಸ ತಿನ್ನದವರು ಟಿವಿಗಳಲ್ಲಿ ಯಕ್ಷಗಾನ ಮಾಡುತ್ತಿದ್ದಾರೆ. ಮುಸ್ಲಿಮರ ಬಳಿ ಮಾಂಸ ಖರೀದಿ ಮಾಡಬಾರದು ಎನ್ನಲು ಇವರ್‍ಯಾರು? ಇವರಿಗೆ ಅಪ್ಪಣೆ ಕೊಟ್ಟವರು ಯಾರು?” ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ಪ್ರಶ್ನಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ, ದಲಿತ ಸಂಘರ್ಷ ಸಮಿತಿ, ಸಕಲೆಂಟು ಜಾತಿ ಸಹಬಾಳ್ವೆ ಸಂಘ ಸಹಯೋಗದಲ್ಲಿ ಮೈಸೂರಿನ ಶಾಂತಿನಗರದಲ್ಲಿ ಮುಸ್ಲಿಂ ಮಟನ್ ಸ್ಟಾಲ್‌ಗಳಲ್ಲಿ ಹಲಾಲ್ ಕಟ್ ಮಾಂಸ ಖರೀದಿಸುವ ಮೂಲಕ ಶಾಂತಿ, ಸೌಹಾರ್ದತೆ, ಸಹಬಾಳ್ವೆಯ ಸಂದೇಶ ಸಾರುವ ಕಾರ್ಯಕ್ರಮದಲ್ಲಿ ಇಂದು ಭಾಗಿಯಾಗಿ ಅವರು ಮಾತನಾಡಿದರು.

ಧರ್ಮದ ಮುಖವಾಡದಲ್ಲಿ ಅಧರ್ಮ ಕುಣಿದು ಕುಪ್ಪಳಿಸುತ್ತಾ ಇದೆ. ಜನಸಮುದಾಯದ ವಿವೇಕವನ್ನು ಕಡಿಮೆ ಮಾಡುತ್ತಿದ್ದಾರೆ. ಅಧರ್ಮ ನಿರ್ಲಜ್ಜವಾಗಿ ಕುಪ್ಪಳಿಸುತ್ತಿದೆ. ಇಷ್ಟೆಲ್ಲಾ ನಡೆಯುತ್ತಿದೆಯಲ್ಲ, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಇದೆಯಾ? ಸುವ್ಯವಸ್ಥೆ ಇದ್ದಿದ್ದರೆ, ತಾನು ನಿರ್ವಹಿಸಬೇಕಿದ್ದ ಕೆಲಸವನ್ನು ನೀಯಾಕೆ ಕೈಗೆತ್ತಿಕೊಂಡೆ ಎಂದು ಕೇಳಬೇಕಾಗಿತ್ತು. ಅದರ ಯಾವ ಲಕ್ಷಣವೂ ಕಾಣುತ್ತಿಲ್ಲ. ಸರ್ಕಾರ ಇಲ್ಲ ಅಥವಾ ಸರ್ಕಾರವೇ ಇದಕ್ಕೆಲ್ಲ ಕುಮ್ಮಕ್ಕು ನೀಡುತ್ತಿದೆ ಎಂದು ತಿಳಿಸಿದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others

ಹೊಟ್ಟೆಗೆ ಹೊಡೆಯಬಾರದೆಂಬ ಮಾತು ಹಳ್ಳಿಗಾಡಿನಲ್ಲಿದೆ. ಮಾರಮ್ಮನ ಜಾತ್ರೆಯಲ್ಲಿ ಮುಸ್ಲಿಮರು ವ್ಯಾಪಾರ ಮಾಡಬಾರದೆಂದು ಇವರು ಹೇಳುತ್ತಾರೆ. ದೇವಸ್ಥಾನ ಕಟ್ಟಿಕೊಟ್ಟವರೇ ಮುಸ್ಲಿಮರು. ಅಂತಹ ದೇವಸ್ಥಾನದಲ್ಲಿ ವ್ಯಾಪಾರ ಮಾಡಬಾರದೆನ್ನುವುದು ಹೊಟ್ಟೆಗೆ ಹೊಡೆಯುವ ಕೆಲಸ. ನಮ್ಮ ಹಳ್ಳಿಗಾಡಿನ ಅನುಭವದ ಮಾತಿನ ಹಿನ್ನೆಲೆಯೇನು? ‘ಇದು ಧರ್ಮ ಅಲ್ಲ. ವ್ಯಾಪಾರ ಮಾಡ್ತಾ ಹೊಟ್ಟೆಯಾಪ್ತಿ ಮಾಡೋ ಜನರ ಹೊಟ್ಟೆಮೇಲೆ ಹೊಡೆಯುವುದೂ ಧರ್ಮವಲ್ಲ’ ಎಂದು ವಿವರಿಸಿದರು.

ಇದನ್ನೂ ಓದಿರಿ: ಮೈಸೂರು: ಬಿಜೆಪಿ ಬೆಂಬಲಿತ ಸಂಘಟನೆಗಳ ಕರೆ ಬಹಿಷ್ಕರಿಸಿ ಮುಸ್ಲಿಮರ ಅಂಗಡಿಯ ಹಲಾಲ್‌‌ ಮಾಂಸ ಖರೀದಿಸಿದ ಸಾಹಿತಿ ದೇವನೂರ ಮಹದೇವ

ಮುಸ್ಲಿಂ ಸಮುದಾಯ ಹಿಜಾಬ್‌ ತೀರ್ಪು ವಿರೋಧಿಸಿ ನಡೆಸಿದ ಸಾಂಕೇತಿಕ ಬಂದ್‌ನ ಕರಪತ್ರ ಓದಿ ಮಾತನಾಡಿದ ಅವರು,”ನಿಮಗೇನು ಕಣ್ಣುರಿ?” ಎಂದು ಪ್ರಶ್ನಿಸಿದರು.

“ಬಂದ್ ಸತ್ಯಾಗ್ರಹ: ಮುಸ್ಲಿಂ ಸಂಘಟನೆಗಳ ಒಕ್ಕೂಟ. ನಾಗರಿಕ ಬಂಧುಗಳೇ, ಇಂದು ನಡೆಯುತ್ತಿರುವ ಬಂದ್ ಯಾರ ವಿರುದ್ಧವೂ ಅಲ್ಲ, ಯಾರಿಗಾದರೂ ತೊಂದರೆ ಕೊಡುವಂತದ್ದೂ ಅಲ್ಲ. ನಾವು ಬಂದ್ ಸತ್ಯಾಗ್ರಹ ನಡೆಸುತ್ತಿದ್ದೇವೆ ಅಷ್ಟೇ. ನಮ್ಮ ಅಂಗಡಿ ಮುಂಗಟ್ಟುಗಳನ್ನು ತೆರೆಯದೆ ನಮಗಾಗಿರುವ ನೋವನ್ನು ಅಭಿವ್ಯಕ್ತಪಡಿಸುತ್ತಿದ್ದೇವೆ. ಯಾರಿಗೂ ಬಲವಂತ ಮಾಡುತ್ತಿಲ್ಲ. ಬೀದಿಗೆ ಇಳಿಯುತ್ತಿಲ್ಲ. ಘೋಷಣೆ ಹಾಕುತ್ತಿಲ್ಲ. ನಾವು ಬಹಳ ನೊಂದಿದ್ದೇವೆ ಎಂದಷ್ಟೇ, ಎಲ್ಲ ಬಂಧುಗಳಿಗೆ ನಮಸ್ಕಾರ. ಸಲಾಂ.- ಇದು ಬಂದ್. ನಾಡಿಗೆ ಮಾದರಿಯಾದ ಬಂದ್ ವ್ಯವಸ್ಥೆಯನ್ನು ಕೊಟ್ಟಿದ್ದಾರೆ. ನೀವು ಎಲ್ಲರೂ ಮಾಡಬೇಕಾದ ಕೆಲಸವಿದು. ಆದರೆ ನಿಮಗೇನು ಕಣ್ಣುರಿ?” ಎಂದು ಕೇಳಿದರು.

ಮಾಧ್ಯಮ ಪ್ರತಿನಿಧಿಯೊಬ್ಬರು, “ಪ್ರಶ್ನೆ ಅದಲ್ಲ, ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಹೋಗಲಾಗಿದೆ. ಆದರೂ ಬಂದ್ ಮಾಡಬಾರದಿತ್ತೆಂಬ ವಾದವಿದೆ” ಎಂದಾಗ, ದೇವನೂರರು, “ಒಲ್ಲದ ಗಂಡನಿಗೆ ಮೊಸರಲ್ಲೂ ಕಲ್ಲು. ಇದನ್ನೆಲ್ಲ ಯಾರ್‍ರೀ ಹೇಳುತ್ತಿದ್ದಾರೆ? ಮಾಂಸ ತಿನ್ನದೇ ಇರುವವರು ಹೇಳುತ್ತಿದ್ದಾರೆ” ಎಂದು ಕಟುವಾಗಿ ಪ್ರತಿಕ್ರಿಯೆ ನೀಡಿದರು.

ರಾಜಕೀಯ ಧ್ರುವೀಕರಣಕ್ಕೆ, ಸಮಾಜವನ್ನು ವಿಘಟನೆ ಮಾಡಲಾಗುತ್ತಿದೆ. ದ್ವೇಷ ಬೆಳೆಸಲಾಗುತ್ತಿದೆ. ಅಧಿಕಾರಕ್ಕೆ ಬರಬೇಕು ಅಂತ ಇಷ್ಟೊಂದು ಅಮಾನವೀಯವಾಗಿ ಒಂದು ಸರ್ಕಾರ ನಡೆದುಕೊಳ್ಳುವುದೇ? ಒಂದು ವಿನಂತಿ ಮಾಡುತ್ತೇನೆ. ಸಕಲೆಂಟು ಜಾತಿಗಳಲ್ಲೂ ಕೂಡ ವಿವೇಕ ವಿವೇಚನೆ ಇರುವವರು ಮಾತನಾಡಬೇಕು. ಇವರು ಸ್ವಲ್ಪ ಕ್ರಿಯಾಶೀಲರಾದರೆ ಸಮಸ್ಯೆ ಬಗೆಹರಿಯುತ್ತದೆ. ಸಾಂಕೇತಿಕವಾದ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಇದು ನಾಡಿನಾದ್ಯಂತ ಹಬ್ಬಬೇಕು ಎಂದರು.

ಇದನ್ನೂ ಓದಿರಿ: ಬಿಜೆಪಿ ಸರ್ಕಾರ ಪ್ರಾಯೋಜಿತ ದ್ವೇಷ ರಾಜಕಾರಣದ ಮಧ್ಯೆ ‘ಸೌಹಾರ್ದ ಯುಗಾದಿ’ ಆಚರಿಸಿದ ರಾಜ್ಯದ ಜನತೆ

ವಿರೋಧ ಪಕ್ಷಗಳು ಮಂಕಾಗಿ ಕೂತಿವೆ. ಮತ್ತೊಂದೆಡೆ ಒಂದು ಮಿಷನರಿ ಥರ ಕೆಲಸ ಆಗುತ್ತಿದೆ. ಹೀಗೆ ಒಡೆದರೆ ಹೀಗೆ ದಾಳ ಬೀಳುತ್ತದೆ ಎಂದು ನಿರಂತರವಾಗಿ ಒಡೆಯಲಾಗುತ್ತಿದೆ. ಆಯ್ಕೊಂಡು ತಿನ್ನೋ ಕೋಳಿಗೆ ಕಾಲು ಮುರಿಯಬಾರದು ಎಂಬ ಮತ್ತೊಂದು ಮಾತಿದೆ. ಇವತ್ತು ಹೆಚ್ಚುಕಮ್ಮಿ ಇದೇ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನಾನು ಸುಮಾರು ದಿನಗಳಿಂದ ಹಳೇ ಪೇಪರ್‌, ಖಾಲಿ ಬಾಟಲಿ ಕೊಳ್ಳುವವರಿಗಾಗಿ ಕಾಯುತ್ತಿದ್ದೇನೆ. ಯಾರೂ ಬರುತ್ತಿಲ್ಲ. ಈ ಕಲುಷಿತ ವಾತಾವರಣದಿಂದ ಅವರು ನಿಶಬ್ದರಾಗಿದ್ದಾರೆ. ಇಂದು ನಮ್ಮ ಸಮಾಜ ತಲೆತಗ್ಗಿಸಿಬಿಟ್ಟಿದೆ. ಅವರು ಹೊಟ್ಟೆಪಾಡು ಮಾಡುತ್ತಿದ್ದರೆಂದು ನಾವು ಅಂದುಕೊಂಡಿದ್ದೇವೆ. ಆದರೆ ಹಳೇಪೇಪರ್‌, ಖಾಲಿ ಬಾಟಲ್‌ಗಳು ಈ ಜನರಿಂದಾಗಿ ಪುನರ್‌ ಬಳಕೆಯಾಗುತ್ತಿದ್ದವು. ಅದರಿಂದ ಕಾಡು ಉಳಿಯುತ್ತಿತ್ತು. ಪರಿಸರದ ರಕ್ಷಣೆಯಾಗುತ್ತಿತ್ತು. ಇದು ನಿಜಕ್ಕೂ ದೇಶಸೇವೆ. ತಾವು ಮಾಡುತ್ತಿರುವುದು ದೇಶ ಸೇವೆ ಎಂದು ಈ ಹೊಟ್ಟೆಪಾಡಿನ ಜೀವಿಗಳಿಗೂ ಗೊತ್ತಿಲ್ಲ. ದುರಂತ ಎಂದರೆ ನಮ್ಮ ಸಮಾಜಕ್ಕೂ ಗೊತ್ತಿಲ್ಲ ಎಂದು ಹೇಳಿದರು.

ದ್ವೇಷ ಹುಟ್ಟಿಸಿ, ಜನಸಮುದಾಯವನ್ನು ಒಡೆದು ವೋಟ್ ಬ್ಯಾಂಕ್‌ ಮಾಡಿಕೊಳ್ಳುತ್ತಿದ್ದಾರೆ. ದ್ವೇಷವೇ ಇವರಿಗೆ ಎನರ್ಜಿ ಡ್ರಿಂಕ್‌‌. ಅದಕ್ಕಾಗಿ ಸುಳ್ಳನ್ನು ಹಬ್ಬಿಸುತ್ತಾರೆ. ಅವರ್‍ಯಾರು ಅಪ್ಪಣೆ ಕೊಡಿಸಲು? ಹಂಗೆ ಕಟ್‌ ಮಾಡಬೇಕು, ಹಿಂಗ್‌ ಕಟ್ ಮಾಡಬೇಕು ಅನ್ನೋದು ಮಾನವೀಯತೆಯಾ? ಪ್ರಾಣಿ ವಧೆ ಮಾಡಿ ಮಾಂಸ ತಿನ್ನುತ್ತಿದ್ದೇವೆ. ಇಲ್ಲಿ ಮಾನವೀಯತೆಯ ಪ್ರಶ್ನೆ ಎಲ್ಲಿ ಬರುತ್ತದೆ? ಎಂದು ಕೇಳಿದರು.

ಪ್ರೊ.ಸುಮಿತ್ರಾಬಾಯಿ, ಸಮಾಜವಾದಿ ಚಿಂತಕರಾದ ಪ.ಮಲ್ಲೇಶ್, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಅಧ್ಯಕ್ಷರಾದ ಬಡಗಲಪುರ ನಾಗೇಂದ್ರ, ದಸಂಸ ರಾಜ್ಯ ಸಂಚಾಲಕರಾದ ಗುರುಪ್ರಸಾದ್ ಕೆರಗೋಡು, ದಸಂಸ ಮೈಸೂರು ಜಿಲ್ಲಾ ಸಂಚಾಲಕರಾದ ಆಲಗೂಡು ಶಿವಕುಮಾರ್, ಶಂಭುಲಿಂಗ ಸ್ವಾಮಿ, ಮಲ್ಲಹಳ್ಳಿ ನಾರಾಯಣ್, ಚೋರನಹಳ್ಳಿ ಶಿವಣ್ಣ, ಕೆ.ವಿ.ದೇವೇಂದ್ರ, ಕಲ್ಲಹಳ್ಳಿ ಕುಮಾರ್, ರೈತ ಸಂಘದ ತಾಲೂಕು ಅಧ್ಯಕ್ಷರಾದ ಮರಂಕಯ್ಯ, ಹೆಜ್ಜಿಗೆ ಪ್ರಕಾಶ್, ಮಂಟಗಳ್ಳಿ ಮಹೇಶ್, ವಿಜಯೇಂದ್ರ, ನಾಗನಹಳ್ಳಿ ಮಂಜು, ಕೆ.ಆರ್.ಗೋಪಾಲ್, ಕರುಣಾಕರ್, ಗಂಜಾಂ ರವಿಚಂದ್ರ, ಮಹದೇವಸ್ವಾಮಿ, ಕುಮಾರ್ ಸ್ವಾಮಿ, ಶಿವಲಿಂಗಯ್ಯ, ಗುರುಸ್ವಾಮಿ, ಅಭಿರುಚಿ ಗಣೇಶ, ರಜನಿ, ಮಾವಿನಹಳ್ಳಿ ಕುಮಾರ್, ನಾಗರಾಜ್, ಲಿಂಗರಾಜು ಹಾಜರಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others


ಇದನ್ನೂ ಓದಿರಿ: ‘ಹಲಾಲ್‌ ವಿಚಾರದಲ್ಲಿ ನಾವು ಸಂಘಟನೆಗಳ ಪರವಾಗಿದ್ದೇವೆ’: ಕಿಡಿಗೇಡಿ ಕೃತ್ಯಗಳನ್ನು ಸಮರ್ಥಿಸಿಕೊಂಡ ಸಚಿವೆ ಜೊಲ್ಲೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಹಲಾಲ್ ಎಕಾನಮಿಯನ್ನು ಪ್ರೋತ್ಸಾಹಿಸಬೇಡಿ. ಅದರ ಹಣ ದೇಶ ವಿರೋಧಿ ಚಟುವಟಿಕೆಗಳಿಗೆ ಹೋಗುತ್ತಿದೆ.

  2. Halaal economy Andre yenri…. Ivattu Ambani, adani, nimma lala(baba) Ramdev, intaha anekaru halaal certificate padkonde business maadtirodu …. Modlu ivara bagge yechara irli …
    Ivarella seri Bharata na kondukolluttiddaare… Nimmantahavarannu permanent gulaamarannagiskolodakke… Be careful

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...