Homeಕರ್ನಾಟಕಕತ್ತಿಯ ಅಲಗಿನ ಮೇಲೆ; ಕರ್ನಾಟಕದಲ್ಲಿ ವಸ್ತು-ವಿಷಯಗಳು, ಆಕ್ಷೇಪಗಳು ಮತ್ತು ಉದ್ದೇಶಗಳು

ಕತ್ತಿಯ ಅಲಗಿನ ಮೇಲೆ; ಕರ್ನಾಟಕದಲ್ಲಿ ವಸ್ತು-ವಿಷಯಗಳು, ಆಕ್ಷೇಪಗಳು ಮತ್ತು ಉದ್ದೇಶಗಳು

- Advertisement -
- Advertisement -

ಕರ್ನಾಟಕದಲ್ಲಿ ಇರುವ (ಇಂಗ್ಲಿಷ್‌ನಲ್ಲಿ ಬರೆದಾಗ) ’K’ ಅಕ್ಷರವು ನನಗೆ ಬೇರೆ ಎರಡು ’K’ಗಳನ್ನು ನೆನಪಿಸುತ್ತದೆ. ಒಂದು ಫ್ರಾನ್ಝ್ ಕಾಫ್ಕಾನ ವಿಸ್ಮಯಕಾರಿ ಕಾದಂಬರಿ ’ಟ್ರಯಲ್’ನ ನಾಯಕ ಜೋಸೆಫ್ ’ಕೆ’ (Joseph ಏ) ಮತ್ತು ಇನ್ನೊಂದು ಮನಶ್ಶಾಸ್ತ್ರಜ್ಞೆ ಮೆಲನಿ ಕ್ಲೆಯ್ನ್ (Melanie Klein) ಅವರ ’ಕೆ’. ಒಂದು ಶಿಶುವು ತನ್ನ ನಾಲ್ಕನೇ ಮತ್ತು ಐದನೇ ತಿಂಗಳುಗಳ ನಡುವೆ ಕಲಿಯುತ್ತದೆ ಮತ್ತು ತಾಯಿಯ ಒಂದು ಮೊಲೆಯನ್ನು ಇಷ್ಟಪಡಲು ಅದು ಇನ್ನೊಂದನ್ನು ತಿರಸ್ಕರಿಸಲು ಆರಂಭಿಸುತ್ತದೆ ಎಂದು ಕ್ಲೆಯ್ನ್ ತೋರಿಸಿಕೊಟ್ಟಿದ್ದರು. ವ್ಯಾಪಕವಾಗಿ ಸ್ವೀಕೃತವಾದ ಈ ’ಓಬ್ಜೆಕ್ಟ್ಸ ರಿಲೇಶನ್ಸ್’ ಸಿದ್ಧಾಂತವನ್ನು ಅವರು 1921ರಲ್ಲಿ ಮಂಡಿಸಿದ್ದರು. ಸರಿಯಾಗಿ ಒಂದು ಶತಮಾನದ ನಂತರ, 2021ರ ಜುಲೈಯಲ್ಲಿ ಬಿ.ಎಸ್. ಯಡಿಯೂರಪ್ಪ ಆವರ ಜಾಗದಲ್ಲಿ ಮುಖ್ಯಮಂತ್ರಿಯಾಗಿ ಬಂದ ಬಸವರಾಜ ಬೊಮ್ಮಾಯಿ, ಈ ’ಕೆ’ ಸಿದ್ಧಾಂತಕ್ಕೆ ಸೂಕ್ತವಾಗಿ ಹೊಂದಿಕೊಳ್ಳುತ್ತಾರೆ.

ಕಳೆದ ಎಂಟು ತಿಂಗಳುಗಳ ಅವಧಿಯಲ್ಲಿ ಅವರು ಒಂದು ಶಿಶುವಿನಂತಹ ಬಾಂಧವ್ಯದಿಂದ- ತಾನು ಇಷ್ಟಪಡುವ ವಸ್ತು/ವಿಷಯಗಳಿಗೆ ಮತ್ತು ತಾನು ಅಸಡ್ಡೆ ತೋರಲು, ಕಡೆಗಣಿಸಲು, ಮತ್ತು ಬದಿಗೆ ಸರಿಸಲು ಇಷ್ಟಪಡುವ ವಸ್ತು/ವಿಷಯಗಳಿಗಾಗಿ ತನ್ನ ಶಕ್ತಿಯನ್ನು ವಿಭಜಿಸಿಕೊಂಡಿದ್ದಾರೆ. ಅವರು ಕಡೆಗಣಿಸಲು ಬಯಸುವ ವಾಸ್ತವವೆಂದರೆ, ಅವರು ಅಧಿಕಾರಕ್ಕೆ ಬರುವುದಕ್ಕೆ ಒಂದು ತಿಂಗಳ ಮೊದಲು ನಿರ್ಮಾಣಕಾರರು ಮತ್ತು ಗುತ್ತಿಗೆದಾರರ ಸಂಘವು (ಎಬಿಸಿ) ಸರಕಾರದಲ್ಲಿ ಭ್ರಷ್ಟಾಚಾರವು ತೀವ್ರ ಏರಿಕೆ ಕಂಡಿರುವುದನ್ನು ಪ್ರತಿಭಟಿಸಿ ಪ್ರಧಾನಿ ಕಚೇರಿಗೆ ದೂರು ನೀಡಿತ್ತು. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕೇಳುತ್ತಿರುವ ಪ್ರಸ್ತುತ ದರವು 40 ಶೇಕಡಾ ಆಗಿದೆ ಎಂದು ಆದು ಲಿಖಿತವಾಗಿ ಹೇಳಿತ್ತು. ಇದೊಂದು ಬಹಿರಂಗಗೊಂಡ ಪ್ರಕರಣ ಮತ್ತು ಯಾರೂ ಸಾರ್ವಜನಿಕವಾಗಿ ಹೇಳಲಿಚ್ಛಿಸದ ಇಂತಾ ಇನ್ನಷ್ಟು ಪ್ರಕರಣಗಳಿದ್ದು, ಭ್ರಷ್ಟಾಚಾರವನ್ನು ಅತ್ಯಂತ ತುರ್ತಿನ ಸವಾಲನ್ನಾಗಿ ಮಾಡಿದೆ. ಬಿಜೆಪಿಯು ಸರಕಾರ ರಚಿಸಲು ಸಾಧ್ಯವಾಗುವಂತೆ ಇತರ ಪಕ್ಷಗಳಿಂದ ದೊಡ್ಡ ರೀತಿಯ ಪಕ್ಷಾಂತರಗಳನ್ನು ಪ್ರಚೋದಿಸಲಾದ ಒಂದು ಸಂದರ್ಭದಲ್ಲಿ ಜೆಡಿಎಸ್‌ನ ಕುಮಾರಸ್ವಾಮಿ ಮತ್ತು ಬಿಜೆಪಿಯ ಯಡಿಯೂರಪ್ಪ ಅವರ ಉತ್ತರಾಧಿಕಾರಿಯಾಗಿ ಬೊಮ್ಮಾಯಿ ಅಧಿಕಾರಕ್ಕೆ ಬಂದಿದ್ದರು. ಇತ್ತೀಚಿನ ಉಪಚುನಾವಣೆಗಳು ಮತ್ತು ನಗರಾಡಳಿತ ಸಂಸ್ಥೆಗಳ ಚುನಾವಣೆಗಳ ಫಲಿತಾಂಶವು ಬಿಜೆಪಿಯ ಮಟ್ಟಿಗೆ ಹೇಳಿಕೊಳ್ಳುವಂತದ್ದಾಗಿರಲಿಲ್ಲ. ನದಿ ನೀರಿನ ವಿವಾದಗಳು ಇನ್ನೂ ಇತ್ಯರ್ಥವಾಗಿಲ್ಲ. ಕಳೆದ ಚುನಾವಣೆಯಲ್ಲಿ ಅತ್ಯಂತ ನಿರ್ಣಾಯಕ ಎಂದು ಸಾಮಾಜಿಕ ವಿಜ್ಞಾನಿಗಳು ಪರಿಗಣಿಸಿದ್ದ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಈ ಎಲ್ಲಾ ಸಮಸ್ಯೆಗಳನ್ನು ಬೊಮ್ಮಾಯಿ ಕಣ್ಣೆತ್ತಿಯೂ ನೋಡಿಲ್ಲ.

ಇನ್ನೊಂದು ಕಡೆಯಲ್ಲಿ, ಈ ’ಮುಮ್ಮಡಿ’ ಮುಖ್ಯಮಂತ್ರಿಯವರು ಅಲ್ಪಸಂಖ್ಯಾತರನ್ನು ಬಗ್ಗುಬಡಿಯಲು ತನ್ನೆಲ್ಲಾ ಶಕ್ತಿಯನ್ನು ವಿನಿಯೋಗಿಸಿದ್ದಾರೆ. ಮತಾಂತರ ವಿರೋಧಿ ಕಾಯಿದೆ ಆಂಗೀಕಾರವಾಗುವಂತೆ ಮಾಡಿದ್ದು, ಹಿಜಾಬನ್ನು ಒಂದು ವಿವಾದವನ್ನಾಗಿ ಮಾಡಿದ್ದು, ದೇವಾಲಯಗಳ ಆವರಣದ ಸುತ್ತಮುತ್ತ ಮುಸ್ಲಿಮರು ಅಂಗಡಿಯಿಟ್ಟು ವ್ಯಾಪಾರ ಮಾಡದಂತೆ ನಿಷೇಧಿಸುವ ಅಸಂಬದ್ಧ ಕಾಯಿದೆಗೆ ಮರುಜೀವ ನೀಡಿದ್ದು, ಹಲಾಲ್ ಮಾಂಸವನ್ನು ಬಹಿಷ್ಕರಿಸುವ ಅಭಿಯಾನ ಆರಂಭಿಸಿದ್ದು, ಅಲ್ಪಸಂಖ್ಯಾತರ ಸಂಸ್ಥೆಗಳನ್ನು ನಿಗಾದಲ್ಲಿ ಇರಿಸಿದ್ದು, ಶಾಲೆಗಳಲ್ಲಿ ಭಗವದ್ಗೀತೆಯನ್ನು ಆರಂಭಿಸಲು ಸಿದ್ಧತೆ ನಡೆಸಿರುವುದು- ಇಂತಹ ವಿಷಯಗಳಿಗಾಗಿಯೇ ಅವರು ಸುದ್ದಿಯಲ್ಲಿದ್ದಾರೆ.

ಯಾವುದೇ ನಂಬಿಕೆಯನ್ನು ಪ್ರತಿಪಾದನೆ ಮತ್ತು ಬೋಧನೆ ಮಾಡುವ ಮೂಲಭೂತ ಹಕ್ಕನ್ನು ಖಾತರಿಪಡಿಸುವ ಸಂವಿಧಾನಕ್ಕೆ ಮತಾಂತರ ವಿರೋಧಿ ಕಾಯಿದೆಯು ಅನುಗುಣವಾಗಿಲ್ಲ ಎಂದು ಕ್ರೈಸ್ತ ಸಮುದಾಯವು ಸರಕಾರಕ್ಕೆ ಹೇಳಲು ಪ್ರಯತ್ನಿಸಿತು. ಕರ್ನಾಟಕ ಸರಕಾರವು ಅವರೊಂದಿಗೆ ಯಾವುದೇ ರೀತಿಯ ಮಾತುಕತೆ ನಡೆಸಿತೇ? ಶಾಲಾ ಸಮವಸ್ತ್ರ ಕುರಿತ ನಿಯಮಗಳನ್ನು ವರ್ಷದ ಆರಂಭದಲ್ಲಿ ರೂಪಿಸಲಾಯಿತು. ಆದರೆ, ಹಿಜಾಬ್ ವಿವಾದವನ್ನು ನಂತರ ಎಬ್ಬಿಸಿ ಕದಡಲಾಯಿತು. ಅದು ಶಿಕ್ಷಣದ ಹಕ್ಕಿನ ಮೇಲೆ ಎಂತಹ ಪರಿಣಾಮ ಬೀರುತ್ತದೆ ಎಂದು ಸರಕಾರ ಪರಿಗಣಿಸಿದೆಯೆ? ಹಿಂದೂ ದೇವಾಲಯಗಳು ಮತ್ತು ಮುಸ್ಲಿಂ ವ್ಯಾಪಾರಿಗಳ
ನಡುವಿನ ಸಂಬಂಧವು ಶತಮಾನಗಳಷ್ಟು ಹಳೆಯದು. ವ್ಯಾಪಾರ ಮಾಡದಂತೆ ತಡೆಯೊಡ್ಡುವುದು ಸಾಮಾಜಿಕ
ಸಾಮರಸ್ಯವನ್ನು ಹೇಗೆ ಕದಡಬಹುದು ಎಂದು ಸರಕಾರ ಯೋಚಿಸಿತೆ? ಇಲ್ಲ. ಜಟ್ಕಾ ಮಾಂಸವು ’ರಾಷ್ಟ್ರವಾದಿ’ ಎಂದು ಬಿಂಬಿಸಿ, ಹಲಾಲ್ ಮಾಂಸವು ಅಷ್ಟೊಂದು ’ರಾಷ್ಟ್ರವಾದಿ’ಯಲ್ಲ ಎಂದು ಹೇಳುವುದು ಅಸಂಬದ್ಧ ಮತ್ತು ಇಬ್ಬಗೆ ನೀತಿ. ಇವುಗಳ ಬಗ್ಗೆ ಮುಸ್ಲಿಮರು ಮತ್ತು ಕ್ರೈಸ್ತರು ಎತ್ತಿರುವ ಪ್ರಶ್ನೆಗಳಿಗೆ ಸರಕಾರ ಯಾವುದೇ ಪ್ರತಿಕ್ರಿಯೆ ತೋರದೇ ಇರುವುದು ಕಾಫ್ಕಾನ ’ಟ್ರಯಲ್’ ಕೃತಿಯನ್ನು ನೆನಪಿಸುತ್ತದೆ. ಅಧಿಕಾರಿಗಳಿಂದ ಹಿಡಿದು ಪೊಲೀಸರ ತನಕ, ರಾಜಕಾರಣಿಗಳಿಂದ ಹಿಡಿದು ನ್ಯಾಯಾಲಯದ ತನಕ ನಿಮಗೆ ಬೇಕಾದಷ್ಟು ಸುತ್ತು ಹೊಡೆದು ಬನ್ನಿ; ನಿಮಗೆ ನ್ಯಾಯ ಮತ್ತು ಸಂವಾದದ ಮುಂದೂಡಿಕೆಯೇ ಎದುರಾಗುತ್ತದೆ. ಬೊಮ್ಮಾಯಿ ಸರಕಾರವು ಹಿಂದುತ್ವದ ನೀಲನಕ್ಷೆಯನ್ನು- ಕರ್ನಾಟಕವು ಪರಿಣತಿ ಪಡೆದಿರುವ ಸಂಗೀತದ ’ದ್ರುತ್ ಖಯಾಲ್’ನಷ್ಟೇ ತ್ವರಿತ ಗತಿಯಲ್ಲಿ ಜಾರಿಗೊಳಿಸುತ್ತಿದೆ.

ಅಲ್ಪಸಂಖ್ಯಾತರ ಈ ಅವಮಾನದೊಂದಿಗೆ ಸರಿಹೊಂದುವಂತೆಯೇ ಶಾಲೆಗಳಲ್ಲಿ ಭಗವದ್ಗೀತೆಯನ್ನು ಪರಿಚಯಿಸುವ ಪ್ರಸ್ತಾಪ ಮಾಡಲಾಗಿದೆ. ಅದರ ಪರಿಣಾಮಗಳ ಕುರಿತು ಸರಕಾರದ ಅಂದಾಜಿಗೆ ವ್ಯತಿರಿಕ್ತವಾಗಿ- ಈ ಕ್ರಮವನ್ನು ಕರ್ನಾಟಕದಲ್ಲಿ ’ಬಹುಸಂಖ್ಯಾತರು’ ಮೆಚ್ಚುವ ಸಾಧ್ಯತೆ ಕಡಿಮೆ. 2011ರ ’ಪರಿಷ್ಕೃತ’ ಜನಗಣತಿಯ ದತ್ತಾಂಶವು, ಕರ್ನಾಟಕದಲ್ಲಿ 12 ಶೇಕಡಾ ಮುಸ್ಲಿಮರು, 1.87 ಶೇಕಡಾ ಕ್ರೈಸ್ತರು ಮತ್ತು 1.2 ಶೇಕಡಾ ಬೌದ್ಧ, ಜೈನ, ಸಿಖ್ ಜನಸಂಖ್ಯೆಗೆ ಪ್ರತಿಯಾಗಿ, 84 ಶೇಕಡಾ ಹಿಂದೂ ಜನಸಂಖ್ಯೆಯನ್ನು ತೋರಿಸುತ್ತಿರಬಹುದು; ಆದರೆ, ಕರ್ನಾಟಕದಲ್ಲಿ ’ಹಿಂದೂ’ ಎಂಬ ವರ್ಗೀಕರಣವು ’ಏಕಶಿಲೆ’ಯಂತೆ ಒಂದೇ ಆಗಿಲ್ಲ. ಅದನ್ನು ಅಸಾಂಪ್ರದಾಯಿಕವಾದ ಗುಂಪುಗಳು, ಬ್ರಾಹ್ಮಣ ವಿರೋಧಿ ಗುಂಪುಗಳಾದ ಪರಿಶಿಷ್ಟ ಜಾತಿಗಳು (19.5 ಶೇಕಡಾ), ಲಿಂಗಾಯತ (14 ಶೇಕಡಾ), ಒಕ್ಕಲಿಗ (11 ಶೇಕಡಾ) ಮತ್ತು ಕುರುಬ (7 ಶೇಕಡಾ) ಇತ್ಯಾದಿಗಳೂ ಒಳಗೊಂಡಿರುವಂತೆ ತೋರಿಸಲಾಗಿದೆ. ಅವರು ಭಾವನಾತ್ಮಕವಾಗಿ ಮತ್ತು ಆಧ್ಯಾತ್ಮಿಕವಾಗಿ ಹೇಗೆ ಗೀತೆಯೊಂದಿಗೆ ಸಂಬಂಧ ಕಲ್ಪಿಸಿಕೊಳ್ಳಲು ಸಾಧ್ಯ? ಗೀತೆಯ ಕೊನೆಯ ಭಾಗವಾದ 18ನೇ ಅಧ್ಯಾಯವು ವರ್ಣಾಶ್ರಮ ತಾರತಮ್ಯವನ್ನು ಸಮರ್ಥಿಸುತ್ತದೆ. 21ನೇ ಶತಮಾನದ ಪರಿಶಿಷ್ಟ ಮಕ್ಕಳು ಈ ಸಮರ್ಥನೆಯನ್ನು ಒಪ್ಪಿಕೊಳ್ಳುವರು ಎಂದು ನಾವು ನಿರೀಕ್ಷಿಸುತ್ತಿದ್ದೇವೆಯೆ? ಲಿಂಗಾಯತ ಸಮುದಾಯದ ಮಕ್ಕಳು ಹನ್ನೆರಡನೇ ಶತಮಾನದ ಲಿಂಗಾಯತ ಶರಣ ಅಲ್ಲಮ ಪ್ರಭುವಿನ ವಚನಗಳನ್ನು ಓದಲು ಇಷ್ಟಪಡಬಹುದು; ಕುರುಬ ಸಮುದಾಯದ ಮಕ್ಕಳು ಹದಿನಾರನೇ ಶತಮಾನದ ಕನಕದಾಸರ ಕೃತಿಗಳನ್ನು ಬಯಸಬಹುದು. ಅದಲ್ಲದೇ, ಕರ್ನಾಟಕದಲ್ಲಿ ಗೀತಾಭಾಷ್ಯದ ಕಳೆದ ಸಾವಿರ ವರ್ಷಗಳ ಶ್ರೀಮಂತ ತಾತ್ವಿಕ ಪರಂಪರೆಯು, ಗೀತೆಯನ್ನು ಒಂದೇ ಅವತಾರದ ಏಕದೃಷ್ಟಿಗಿಂತ ಉಪಾಸನೆಗಿಂತಲೂ, ಧಾರ್ಮಿಕ ಒಕ್ಕೂಟದ ಬಹುದೇವಾರಾಧನೆಯ ಸಾಧ್ಯತೆಯನ್ನು (ಅನೇಕಾಂತ) ಚಿತ್ರಿಸುತ್ತದೆ. ಈ ಸಂಪ್ರದಾಯವು ಕನ್ನಡದ ಎಲ್ಲಾ ಸಾಹಿತ್ಯ, ಸಂಸ್ಕೃತಿ ಮತ್ತು ತತ್ವಜ್ಞಾನದಲ್ಲಿ ಆಳವಾಗಿ ಇಂಗಿದ್ದು, ಇತ್ತೀಚಿನ ಕಾಲದಲ್ಲಿ ಇದನ್ನು ರಾಷ್ಟ್ರಕವಿ ಕೆ.ವಿ. ಪುಟ್ಟಪ್ಪ (1904-1994) ಅವರು ಚೆನ್ನಾಗಿ ಪ್ರತಿಪಾದಿಸಿದ್ದಾರೆ. ಅದಲ್ಲದೇ, ಗೀತೆಯನ್ನು ದೇವನಾಗರಿ ಲಿಪಿಯಲ್ಲಿ ಪರಿಚಯಿಸಿದರೆ, ಅದು ವಿದ್ಯಾರ್ಥಿಗಳಿಗೆ ಕಿರಿಕಿರಿಯಾಗಿ ಕಾಣುವುದು ಖಂಡಿತ.

ರಾಮ ಮತ್ತು ಕೃಷ್ಣರಿಗಿಂತ ಶಿವ, ಮಹಾವೀರ, ಮಾತೃ ದೇವತೆಗಳು ಮತ್ತು ಜಾನಪದ ದೇವರುಗಳು ಹೆಚ್ಚು ಜನಪ್ರಿಯವಾಗಿರುವ ಜನಸಂಖ್ಯಾತ್ಮಕ, ಸಾಂಸ್ಕೃತಿಕ, ಐತಿಹಾಸಿಕ ಸವಾಲುಗಳ ನಡುವೆ ಮುಖ್ಯಮಂತ್ರಿ ಬೊಮ್ಮಾಯಿ ಶಾಲೆಗಳಲ್ಲಿ ಗೀತೆಯನ್ನು ಪರಿಚಯಿಸುವ ಹಾದಿಯನ್ನು ಏಕೆ ಹಿಡಿದಿದ್ದಾರೆ?

ಇದು ಬಿಜೆಪಿಯ ಸ್ವಯಂವಿನಾಶದ ದಾರಿಯಾಗಿ ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಆದರೆ, ಚುನಾವಣಾ ಲೆಕ್ಕಾಚಾರವು- ಮುಂದಿನ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಆಹಿಂದ ಕೂಟವು ಮೂಡಿಬರುವುದನ್ನು ಎದುರಿಸಲು ಅದು ಸಿದ್ಧವಿಲ್ಲ ಎಂಬುದನ್ನು ತೋರಿಸುತ್ತದೆ. ಅಹಿಂದವು ಮೊತ್ತಮೊದಲಾಗಿ ದೇವರಾಜ ಅರಸು ಅವರು ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳವರು ಮತ್ತು ದಲಿತರ ಒಕ್ಕೂಟವನ್ನು ಸೂಚಿಸಲು ಹುಟ್ಟುಹಾಕಿದ ಕನ್ನಡ ಪದ. ಕುರುಬ ಸಮುದಾಯದ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಕ್ರಿಯವಾಗಿ ಈ ಚಿಂತನೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ. ಇದೇ ಹೊತ್ತಿಗೆ, ಲಿಂಗಾಯತರ ನಡುವೆ ಬಿಜೆಪಿ
ಕುರಿತ ಅಸಮಾಧಾನ ಹೆಚ್ಚುತ್ತಿದೆ. ಲಿಂಗಾಯತರ ಸಣ್ಣ ಬೆಂಬಲದೊಂದಿಗಾದರೂ ಈ ಮೈತ್ರಿಯು ಮೂಡಿಬಂದರೆ, ಬಿಜೆಪಿಯ ಸ್ಥಿತಿಯು 2018ರಂತಾಗುವುದು ಅಥವಾ ಅದಕ್ಕಿಂತ ಕೆಟ್ಟದಾಗುವುದು. ಇದರಿಂದ ದಕ್ಷಿಣದಲ್ಲಿ ಬಿಜೆಪಿಯ ಏಕೈಕ ರಾಜ್ಯದ ಹಿಡಿತವು ಸಡಿಲವಾಗುವುದು. ಬಿಜೆಪಿಯ ದುಷ್ಟ ಯೋಚನೆಯಂತೆ, ಅಲ್ಪಸಂಖ್ಯಾತರನ್ನು ರಾಕ್ಷಸರಂತೆ ಚಿತ್ರಿಸುವುದು- ತನ್ನ ಸ್ವಂತ ಜನರನ್ನು ಹಿಡಿದಿಟ್ಟುಕೊಳ್ಳಲು ಮತ್ತು ತನ್ನ ಕ್ಯಾಂಪಿನಲ್ಲಿ ಹಿಂದೂಗಳೆಂದು ಚಿತ್ರಿಸಲಾಗುವ ಲಿಂಗಾಯತರು ಹೊರಹೋಗದಂತೆ ತಡೆಯಲು ಬಿಜೆಪಿಯ ಮಾಡುತ್ತಿರುವ ಹತಾಶ ಯತ್ನವಾಗಿದೆ ಈ ಪ್ರಯತ್ನ.

ಹೀಗಿದ್ದರೂ, ಈ ರೀತಿಯ ವಿವಿಧ ರಾಜಕೀಯ ತಂತ್ರಗಳು ಸಂವಿಧಾನಕ್ಕೆ ಗಮನಾರ್ಹವಾದ ಹಾನಿ ಉಂಟುಮಾಡಬಹುದು. ಉಪನಿಷತ್ ಹೇಳುವಂತೆ “ಕ್ಷುರಸ್ಯ ಧಾರಾ ನಿಶಿತಾ ಧೂರ್ತ್ಯಯ” ಅಂದರೆ, ಕರ್ನಾಟಕ ಮುಖ್ಯಮಂತ್ರಿಯವರ ಮುಂದಿನ ಹಾದಿ ಕತ್ತಿಯ ಅಲಗಿನ ಮೇಲಿನ ನಡಿಗೆಯಾಗಿದೆ.

ಅನುವಾದ: ನಿಖಿಲ್ ಕೋಲ್ಪೆ

ಪ್ರೊ. ಜಿ ಎನ್ ದೇವಿ

ಪ್ರೊ ಜಿ ಎನ್ ದೇವಿ
ಭಾರತದ ಖ್ಯಾತ ಚಿಂತಕರಲ್ಲಿ ಒಬ್ಬರಾದ ದೇವಿ ಅವರು, ಪೀಪಲ್ ಲಿಂಗ್ವಿಸ್ಟಿಕ್ಸ್ ಸರ್ವೆ ಮೂಲಕ ಚಿರಪರಿಚಿತರು. ‘ಆಫ್ಟರ್ ಅಮ್ನೇಶಿಯಾ’ ಪುಸ್ತಕಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಚಳವಳಿಗಳ ಸಂಗಾತಿಯಾಗಿರುವ ದೇವಿ ಸದ್ಯಕ್ಕೆ ದಿ ಸೌತ್ ಫೋರಮ್‌ನ ಸಂಚಾಲಕರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

 


ಇದನ್ನೂ ಓದಿ: ಹೆಚ್ಚಿದ ಕೋಮು ಉದ್ವಿಗ್ನತೆ ಹಿನ್ನಲೆ: ಕಂಪೆನಿಗಳನ್ನು ಕರ್ನಾಟಕದಿಂದ ತಮಿಳುನಾಡಿಗೆ ಸೆಳೆಯಲು ಪ್ರಯತ್ನಿಸುತ್ತಿರುವ ಡಿಎಂಕೆ ಸರ್ಕಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...