Homeಕರೋನಾ ತಲ್ಲಣಕೊರೊನಾದಿಂದ ಭಾರತದಲ್ಲಿ ಮೃತಪಟ್ಟವರು 40 ಲಕ್ಷ; ಮೋದಿ ಸರ್ಕಾರದ ಲೆಕ್ಕ 5 ಲಕ್ಷ!

ಕೊರೊನಾದಿಂದ ಭಾರತದಲ್ಲಿ ಮೃತಪಟ್ಟವರು 40 ಲಕ್ಷ; ಮೋದಿ ಸರ್ಕಾರದ ಲೆಕ್ಕ 5 ಲಕ್ಷ!

ಕೊರೊನಾದಿಂದ ಸಂಭವಿಸಿದ ಸಾವಿನ ಸಂಖ್ಯೆಯನ್ನು ಬಹಿರಂಗಪಡಿಸುವ ವಿಶ್ವ ಆರೋಗ್ಯ ಸಂಸ್ಥೆ(WHO)ಯ ಪ್ರಯತ್ನಕ್ಕೆ ಭಾರತವು ತಡೆಯೊಡ್ಡುತ್ತಿದೆ ಎಂದು ‘ನ್ಯೂಯಾರ್ಕ್ ಟೈಮ್ಸ್‌‌’ ವರದಿ ಮಾಡಿದೆ.

- Advertisement -
- Advertisement -

ಭಾರತದಲ್ಲಿ ಕೊರೊನಾದಿಂದ ಸುಮಾರು 40 ಲಕ್ಷ ಜನರು ಮೃತಪಟ್ಟಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ(WHO) ಹೇಳಿದೆ ಎಂದು ನ್ಯೂಯಾರ್ಕ್‌ ಟೈಮ್ಸ್‌ ಶನಿವಾರ ವರದಿ ಮಾಡಿದ್ದು, ಅದರೆ ಈ ವರದಿ ವಿಳಂಬವಾಗಲು ಭಾರತ ಪ್ರಯತ್ನಿಸುತ್ತಿದೆ ಎಂದು ಹೇಳಿದೆ. ಸರ್ಕಾರದ ಅಧೀಕೃತ ಲೆಕ್ಕಾಚಾರದ ಪ್ರಕಾರ ಕೊರೊನಾದಿಂದ ದೇಶದಲ್ಲಿ ಮೃತಪಟ್ಟವರು ಐದು ಲಕ್ಷ ಎಂದು ಹೇಳುತ್ತದೆ.

ಕೊರೊನಾದಿಂದ ಜಾಗತಿಕವಾಗಿ ಸಂಭವಿಸಿದ ಸಾವಿನ ಸಂಖ್ಯೆಯನ್ನು ಬಹಿರಂಗಪಡಿಸುವ ವಿಶ್ವ ಆರೋಗ್ಯ ಸಂಸ್ಥೆ(WHO)ಯ ಪ್ರಯತ್ನಕ್ಕೆ ಭಾರತವು ತಡೆಯೊಡ್ಡುತ್ತಿದೆ ಎಂದು ‘ನ್ಯೂಯಾರ್ಕ್ ಟೈಮ್ಸ್‌‌’ ವರದಿ ಮಾಡಿದೆ.  ಈ ಹಿಂದೆ ನಂಬಿದ್ದಕ್ಕಿಂತ ಹೆಚ್ಚಿನ ಜನರು ಕೊರೊನಾದಿಂದ ಸಾವನ್ನಪ್ಪಿದ್ದಾರೆ ಎಂದು WHO ಕಂಡುಹಿಡಿದಿದೆ. ಆದರೆ ಭಾರತದ ಆಕ್ಷೇಪಣೆಯಿಂದಾಗಿ ಈ ವರದಿ ವಿಳಂಬವಾಗುತ್ತಿದ್ದು, ಎಷ್ಟು ನಾಗರೀಕರು ಸತ್ತರು ಎಂಬ ಲೆಕ್ಕಾಚಾರವನ್ನು ನೀಡಲು ಭಾರತ ವಿವಾದ ಮಾಡುತ್ತಿದ್ದು, ಅದನ್ನು ಸಾರ್ವಜನಿಕವಾಗದಂತೆ ಇರಿಸಲು ಪ್ರಯತ್ನಿಸಿದೆ ಎಂದು ಟೈಮ್ಸ್‌ ವರದಿ ಹೇಳಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

2021ರ ಅಂತ್ಯಕ್ಕೆ ಪ್ರತಿಯೊಂದು ದೇಶಗಳು ವೈಯಕ್ತಿವಾಗಿ ನೀಡಿರುವ ಮಾಹಿತಿಯಂತೆ ಕೊರೊನಾ ಸಾವಿನ ಸಂಖ್ಯೆ 60 ಲಕ್ಷ ಎಂದು ನಂಬಲಾಗಿತ್ತು. ಆದರೆ ಕೊರೊನಾದಿಂದಾದ ಸಾವು 1.5 ಕೋಟಿಗೂ ಹೆಚ್ಚು ಎಂದು WHO ಇದೀಗ ಕಂಡು ಹಿಡಿದಿದೆ. ಪ್ರಪಂಚದಾದ್ಯಂತ ಇರುವ ತಜ್ಞರ ಒಂದು ವರ್ಷಕ್ಕೂ ಹೆಚ್ಚು ಸಂಶೋಧನೆ ಹಾಗೂ ವಿಶ್ಲೇಷಣೆಯ ಫಲಿತಾಂಶ ಮತ್ತು ಇಲ್ಲಿಯವರೆಗಿನ ಸಾಂಕ್ರಾಮಿಕ ರೋಗದ ಭೀಕರತೆಯ ಬಗ್ಗೆ ಅತ್ಯಂತ ಸಮಗ್ರವಾದ ನೋಟದ ವರದಿಯು ಭಾರತದ ಆಕ್ಷೇಪಣೆಯಿಂದಾಗಿ ತಿಂಗಳುಗಟ್ಟಲೆ ವಿಳಂಬವಾಗಿದೆ ಎಂದು ನ್ಯೂಯಾರ್ಕ್‌ ಟೈಮ್ಸ್‌‌ ತನ್ನ ವರದಿಯಲ್ಲಿ ಹೇಳಿದೆ.

ಇದನ್ನೂ ಓದಿ: ಕೊರೊನಾದಿಂದ ದೇಶ ತತ್ತರಿಸಿದ್ದರೂ ಫೋರ್ಬ್ಸ್-2022ರ ಶ್ರೀಮಂತ ಪಟ್ಟಿಯಲ್ಲಿ ಅಂಬಾನಿ, ಅದಾನಿ!

ಹೆಚ್ಚುವರಿ 90 ಲಕ್ಷ ಸಾವುಗಳಲ್ಲಿ ಮೂರನೇ ಒಂದು ಭಾಗಕ್ಕಿಂತ ಹೆಚ್ಚು ಸಾವು ಭಾರತದಲ್ಲಿ ಸಂಭವಿಸಿದೆ ಎಂದು WHO ಅಂದಾಜಿಸಿದೆ. ಆದರೆ ಮೋದಿ ನೇತೃತ್ವದ ಸರ್ಕಾರವು ಕೊರೊನಾದಿಂದ ಸಾವಿಗೀಡಾದವರ ಸಂಖ್ಯೆ ಕೇವಲ 5,20,000(ಐದು ಲಕ್ಷದ ಇಪ್ಪತ್ತು ಸಾವಿರ) ಎಂದು ಹೇಳುತ್ತಿದೆ. ದೇಶದಲ್ಲಿ ಕೊರೊನಾದಿಂದ ಸಾವಿಗೀಡಾದವರ ನಿಜವಾರ ಸಂ‌ಖ್ಯೆ ಕನಿಷ್ಠ 40 ಲಕ್ಷ ಎಂದು WHO ಹೇಳುತ್ತದೆ.

WHO ಲೆಕ್ಕಕ್ಕೆ ಸಿಗದ ಸಾವುಗಳನ್ನು ಕಂಡುಹಿಡಿಯುವುದಕ್ಕಾಗಿ ಕೇಂದ್ರೀಕೃತ ರಾಷ್ಟ್ರೀಯ ಡೇಟಾದ ಜೊತೆಗೆ ಸ್ಥಳೀಯ ಮತ್ತು ಮನೆ-ಮನೆ ಸರ್ವೆಗಳ ಹಾಗೂ ಸಂಖ್ಯಾಶಾಸ್ತ್ರೀಯ ಮಾದರಿಗಳ ಮೂಲಕ ಹೊಸ ಮಾಹಿತಿಯನ್ನು ಪಡೆಯುತ್ತಿದೆ.

ಅಂಕಿಅಂಶಗಳನ್ನು ಬಿಡುಗಡೆ ಮಾಡುವಲ್ಲಿನ ವಿಳಂಬವು ಗಂಭೀರ ವಿಷಯವಾಗಿದ್ದು, ಯಾಕೆಂದರೆ ಸಾಂಕ್ರಾಮಿಕ ರೋಗವು ಹೇಗೆ ಹೊರಹೊಮ್ಮಿದೆ ಮತ್ತು ಯಾವ ಕ್ರಮಗಳು ಇದೇ ರೀತಿಯ ಬಿಕ್ಕಟ್ಟನ್ನು ತಗ್ಗಿಸಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು ಜಾಗತಿಕ ಅಂಕಿಅಂಶ ಅತ್ಯಗತ್ಯವಾಗಿದೆ. ಆದರೆ ಭಾರತವು ಇದಕ್ಕೆ ಸಹಕರಿಸುತ್ತಿಲ್ಲ ಎಂದು ನ್ಯೂಯಾರ್ಕ್‌ ಟೈಮ್ಸ್‌ ವರದಿ ಉಲ್ಲೇಖಿಸಿದೆ.

ಇದನ್ನೂ ಓದಿ:ಗುಜರಾತ್‌ನಲ್ಲಿ ಕೊರೊನಾದ ಹೊಸ ರೂಪಾಂತರ XE ವೈರಸ್‌ ಪತ್ತೆ: ಸರ್ಕಾರಿ ಮೂಲಗಳು

ಈ ವರದಿ ತಯಾರಾದರೆ ಕೊರೊನಾಗೆ ನೀಡಿರುವ ಲಸಿಕೆ ಯಾವ ರೀತಿಯಲ್ಲಿ ಪರಿಣಾಮ ಬೀರಿದೆ ಎಂದು ತಜ್ಞರಿಗೆ ಅರ್ಥ ಮಾಡಿಕೊಳ್ಳಲು ಸಹಾಯವಾಗುತ್ತದೆ ಎಂದು ಟೊರೊಂಟೊದಲ್ಲಿನ ಜಾಗತಿಕ ಆರೋಗ್ಯ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಪ್ರಭಾತ್ ಝಾ ಹೇಳಿದ್ದಾರೆ.

WHO ವರದಿಯ ಅಂಕಿಅಂಶಗಳನ್ನು ಬಿಡುಗಡೆ ಮಾಡದಿದ್ದರೆ, ಅದನ್ನು ತಾವೇ ಸ್ವತಃ ಬಿಡುಗಡೆ ಮಾಡುತ್ತೇವೆ ಎಂದು ವರದಿಯ ತಯಾರಿಸುತ್ತಿರುವ ಗುಂಪಿನ ಕೆಲವು ಸದಸ್ಯರು WHO ಗೆ ಇತ್ತೀಚೆಗೆ ಎಚ್ಚರಿಕೆ ನೀಡಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್‌ ಹೇಳಿದೆ.

WHO ವಕ್ತಾರ ಅಮ್ನಾ ಸ್ಮೈಲ್‌ಬೆಗೊವಿಕ್, “ವರದಿಯನ್ನು ನಾವು ಏಪ್ರಿಲ್‌ನಲ್ಲಿ ಪ್ರಕಟಿಸುವ ಗುರಿ ಹೊಂದಿದ್ದೇವೆ” ಎಂದು ತಿಳಿಸಿದ್ದಾರೆ. ಕೊರೊನಾದಿಂದಾಗ ಸಾವುಗಳನ್ನು ಕಡಿಮೆ ತೋರಿಸಿರುವ ದೇಶಗಳಲ್ಲಿ ಬ್ರೆಜಿಲ್ ಮತ್ತು ಇಂಡೋನೇಷ್ಯಾದಂತಹ ಕೂಡಾ ಸೇರಿದೆ.

ಆದರೆ ಭಾರತ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, WHO ಯ ವಿಧಾನವು ದೋಷಪೂರಿತವಾಗಿದೆ ಎಂದು ಹೇಳಿದೆ.

ಇದನ್ನೂ ಓದಿ: ಕೊರೊನಾ ಬಿಕ್ಕಟ್ಟಿನಿಂದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಉದ್ಯೋಗ ಕಳೆದುಕೊಂಡ 2.15 ಕೋಟಿ ಮಂದಿ!

ಕಳೆದ ಎರಡು ವರ್ಷಗಳಿಂದ ಭಾರತವು ತನ್ನ ಒಟ್ಟು ಮರಣದ ಅಂಕಿಅಂಶವನ್ನು WHO ಗೆ ಸಲ್ಲಿಸಿಲ್ಲ ಎಂದು ಟೈಮ್ಸ್‌ ವರದಿ ಹೇಳಿದ್ದು, ಆದರೆ ಸಂಸ್ಥೆಯ ಸಂಶೋಧಕರು ಆಂಧ್ರಪ್ರದೇಶ, ಛತ್ತೀಸ್‌ಗಢ ಮತ್ತು ಕರ್ನಾಟಕ ಸೇರಿದಂತೆ ಕನಿಷ್ಠ 12 ರಾಜ್ಯಗಳಿಂದ ಸಂಗ್ರಹಿಸಿದ ಸಂಖ್ಯೆಗಳನ್ನು ತಮ್ಮ ವರದಿಗಳಲ್ಲಿ ಬಳಸಿದ್ದಾರೆ. ಕೊರೊನಾ ಪರಿಣಾಮವಾಗಿ ದೇಶದಲ್ಲಿ ಕನಿಷ್ಠ ನಾಲ್ಕರಿಂದ ಐದು ಪಟ್ಟು ಹೆಚ್ಚು ಸಾವುಗಳು ಉಂಟಾಗಿದೆ ಈ ಅಂಕಿಅಂಶ ತೋರಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.

ವಿಶ್ವಸಂಸ್ಥೆಯ ವರದಿಯ ಬಿಡುಗಡೆಯನ್ನು ತಡೆಯುವ ಭಾರತ ತಡೆಯುತ್ತಿರುವುದು, ಮೋದಿ ನೇತೃತ್ವದ ಸರ್ಕಾರಕ್ಕೆ ಸಾಂಕ್ರಾಮಿಕ ದತ್ತಾಂಶವು ಸೂಕ್ಷ್ಮ ವಿಷಯವಾಗಿದೆ ಎಂಬುವುದು ಸ್ಪಷ್ಟಪಡಿಸುತ್ತದೆ ಎಂದು ನ್ಯೂಯಾರ್ಕ್‌ ಟೈಮ್ಸ್‌ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...