Homeಅಂಕಣಗಳುದಶಕದ ನಂತರ ಗೆದ್ದ ಅಗ್ರಹಾರದ ಜಟ್ಟಿ!

ದಶಕದ ನಂತರ ಗೆದ್ದ ಅಗ್ರಹಾರದ ಜಟ್ಟಿ!

- Advertisement -
- Advertisement -

ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದ ಅಗ್ರಹಾರ ಕೃಷ್ಣಮೂರ್ತಿ ಅಮಾನತುರದ್ದಾಗಿದೆ. ಬರೋಬ್ಬರಿ ಒಂದು ದಶಕ ನಡೆದ ಕುಸ್ತಿಯಲ್ಲಿ ಈ ಜಟ್ಟಿ ಜಯಗಳಿಸಿದ್ದಾರಲ್ಲಾ.

ಅಗ್ರಹಾರದಿಂದ ಬಂದವನಿರಬೇಕು; ಗೋದಿ ಮುದ್ದೆಯಂತಿದ್ದ ಆಕಾರ ಬೇರೆ; ಕೃಷ್ಣಮೂರ್ತಿ ಹೆಸರು, ಈತ ಭೂಸುರೋತ್ತಮನಾದ ವಿಪ್ರನೇ ಇರಬೇಕು ಎಂದು ನಮ್ಮ ಜಾತಿ ಮನಸ್ಸುಗಳಿಗೆ ಸಾಕ್ಷಿಯೊದಗಿಸಿತ್ತು. ಆಗ ನಮಗೆ ಅಗ್ರಹಾರಗಳನ್ನ ಕಂಡರೆ ಆಗುತ್ತಿರಲಿಲ್ಲ. ನಮಗೇ ಏನು, ನಾಯಿ ಹಂದಿಗಳಿಗೂ ಹಿಡಿಸುತ್ತಿರಲಿಲ್ಲ. ಕಾರಣ ಅಲ್ಲಿನ ಅಂಗಳದಲ್ಲಿ ಯಾವ ಮೂಳೆಯೂ ಸಿಗುತ್ತಿರಲಿಲ್ಲ. ಇನ್ನ ಹಂದಿಗಳಿಗಂತೂ ತೊಳೆದು ಎಸೆದಂತಹ ಇಸ್ತ್ರಿ ಎಲೆಯಿಂದ ಏನೂ ಪ್ರಯೋಜನವಾಗದೆ ವಾಪಸ್ಸು ಬರುತ್ತಿದ್ದವು. ಇಂತಹ ನಮ್ಮ ಪೂರ್ವಾಗ್ರಹದ ಕಾಲದಲ್ಲಿ ಲಂಕೇಶರ ಎದುರು ಪ್ರಕಾಶ್ ಬೆಳವಾಡಿಯಿಂದ ಹಿಡಿದು ಮಹಾಬಲ, ಸತ್ಯ, ಸದಾಶಿವ ಇವರೆಲ್ಲ ಕುಳಿತು ಬ್ರಾಹ್ಮಣದ ಟೀಕೆಯನ್ನು ಅನುಮಾನ ಬರದಂತೆ ಸಹಿಸಿಕೊಳ್ಳುತ್ತಿದ್ದರು. ಅಂತವರ ಪೈಕಿ ಅಗ್ರಹಾರದ ಕೃಷ್ಣಮೂರ್ತಿಯೂ ಎಂದು ನಂಬಿದ್ದೆವು. ಲಂಕೇಶರ ವಿಶೇಷ ಪ್ರೀತಿಗೆ ಪಾತ್ರವಾಗಿ ನಮ್ಮಲ್ಲೊಂದಿಷ್ಟು ಅಸಹನೆ ಮೂಡುತ್ತಿರುವಾಗಲೆ ಕೃಷ್ಣಮೂರ್ತಿ ಅಗ್ರಹಾರದಿಂದ ಬಂದ ಅಸಾಮಿಯಲ್ಲ, ಅರಮನೆ ಎದುರು ಮಹಾರಾಜರ ಸಮ್ಮುಖದಲ್ಲಿ ಮುಷ್ಠಿಯಿಂದ ಎದುರಾಳಿಯ ವಿರುದ್ಧ ಹೋರಾಡುವವರೆಂದು ಗೊತ್ತಾಗಿ ಹೋಯ್ತಲ್ಲಾ, ಥೂತ್ತೇರಿ.

*****

ಉನ್ನತ ಸ್ಥಾನಕ್ಕೆ ಹೋದಮೇಲೂ ವಿಪ್ರೋತ್ತಮರು ತಾವು ತಯಾರಾದ ಅಗ್ರಹಾರಕ್ಕೆ ಬಂದು ಹೋಗುವಂತೆ ಕೃಷ್ಣಮೂರ್ತಿ ಲಂಕೇಶರ ವಟಾರಕ್ಕೆ ಬಂದು ಹೋಗುತ್ತಿದ್ದರು. ಆಗ ಚೆನೈನಲ್ಲಿದ್ದ ಪ್ರಾದೇಶಿಕ ಕೇಂದ್ರ ಸಾಹಿತ್ಯ ಅಕಾಡೆಮಿ ಕಚೇರಿಯನ್ನ ಬೆಂಗಳೂರಿಗೆ ತಂದರು. ಸಾಹಿತ್ಯ ಪರಿಷತ್ ಕಾರ್ಯಕ್ರಮಗಳಿಗೆ ಹಣ ಕೊಟ್ಟರು, ಪುಸ್ತಕ ಕೊಟ್ಟರು. ಜರಗನಹಳ್ಳಿ ಶಿವಶಂಕರ್, ಲಂಕೇಶ್ ಶಿಷ್ಯ ದಳವಾಯಿಗೆ ಅಕಾಡೆಮಿ ಪುಸ್ತಕ ಕೊಟ್ಟರು. ದಳವಾಯಿಯಂತೂ ಹೋದವನು ಮತ್ತೆ ಬರಲೇ ಇಲ್ಲ. ತಮ್ಮ ಭಾಷೆ ಮತ್ತು ಪ್ರಾದೇಶಿಕ ಕಾಳಜಿಯ ಬಗ್ಗೆ ಪಕ್ಷಪಾತದ ಆಪಾದನೆ ಬಂದು ಅಗ್ರಹಾರ ತನಿಖೆ ಎದುರಿಸುವ ಸಮಯದಲ್ಲಿ ಫಲಾನುಭವಿಗಳ್ಯಾರೂ ಸಹಾಯಕ್ಕೆ ಬರಲಿಲ್ಲ. ತನಿಖಾಧಿಕಾರಿಗಳಿಗೆ ಒಂದು ಮನವಿಯನ್ನೂ ಕೊಡಲಿಲ್ಲ. ಇಂತಹ ಸಮಯದಲ್ಲಿ ಕವಿ ಸಿ.ಪ.ಶೆಟ್ಟಿಯ ಹಠದಿಂದಾಗಿ ಅಗ್ರಹಾರ ಅಮಾನತುಗೊಂಡರಂತಲ್ಲಾ, ಥೂತ್ತೇರಿ.

*****

ಕನ್ನಡದ ಕೆಲಸಕ್ಕಾಗಿ ಕನ್ನಡಿಗನಿಂದಲೇ ತೊಂದರೆಗೆ ಸಿಕ್ಕಿಕೊಂಡ ಅಗ್ರಹಾರ ಈ ಒಂದು ದಶಕದಲ್ಲಿ ಅರಾಮವಾಗಿಯೇ ಇದ್ದರು. ಪ್ರೆಸ್‌ಕ್ಲಬ್ಬಿನ ಗೆಳೆಯರ ಪಾರ್ಟಿಯ ಬಿಲ್ಲನ್ನು ತಾವೇ ಕೊಡುತ್ತಿದ್ದರು. ನಿವೃತ್ತಿಯ ಸವಲತ್ತುಗಳು ಸಿಗದಿದ್ದರೂ ಬೇಸರ ಮಾಡಿಕೊಳ್ಳದೆ ನಾನೊಬ್ಬ ಕಳಂಕ ಹೊತ್ತವನೆಂದು ಅರಾಮವಾಗಿಯೇ ಹೇಳುತ್ತಿದ್ದರು. ಈ ಜಟ್ಟಿಯ ವಿರುದ್ಧ ಹಠ ಸಾಧಿಸಿದ ಸಿ.ಪ.ಶೆಟ್ಟಿಯ ಒಂದು ಪ್ರಸಂಗ ಹೇಳುವುದಾದರೆ ನಮ್ಮ ಸಂಸ್ಕೃತಿ ಮತ್ತು ರಾಜಕಾರಣದ ನಡುವಿನ ಸೇತುವೆಯಂತಿದ್ದ ಎಂ.ಪಿ. ಪ್ರಕಾಶ್ ಅವರು ಸಿ.ಪ.ಶೆಟ್ಟರ ಕವಿತ್ವಕ್ಕೆ ಮಾರುಹೋಗಿ ಹೂವಿನಡಗಲಿಗೆ ಕರೆದು ಸನ್ಮಾನ ಮಾಡಿದರು. ಜರಿಪೇಟ ಜಗಮಗಿಸುವ ಶಾಲು ಪರಿಮಳ ಭರಿತ ಹಾರ ಹಾಕಿಸಿಕೊಂಡ ಸಿ.ಪ.ಶೆಟ್ಟಿ ’ಈ ಸನ್ಮಾನದ ಗೌರವ ಏನದಾವಲ್ಲ ಇವು ಭಾಳ ವೆಚ್ಚದವು, ಅದಕ ನಾನು ಈ ಸಭೆ ಮುಗಿಯೂ ಮಟ್ಟ ಇವನ್ನ ತೆಗೆಯೂದಿಲ್ಲ, ಹಾಗೇ ಕುಂದರತೀನಿ’ ಎಂದು ಹಾಗೇ ಕುಂತರು. ಆದರೆ ಅವರ ಅಕ್ಕಪಕ್ಕದಲ್ಲಿದ್ದ ಗೌರವಾನ್ವಿತರು ಹಾಗೆ ಮಾಡದೆ ಸನ್ಮಾನಕ್ಕೆ ಗೌರವ ತೋರಿದರು. ಸಭೆ ಗಂಟೆಗಟ್ಟಲೆ ಮುಂದುವರಿದಾಗ ಸಿ.ಪ.ಶೆಟ್ಟರು ಹಾಸ್ಯಸ್ಪದ ವ್ಯಕ್ತಿಯಂತೆ ಕಂಡರಂತಲ್ಲಾ, ಥೂತ್ತೇರಿ.

*****

ಈಗ ಕಾಲ ಬದಲಾಗಿದೆ. ಮುಂದೆ ಅಗ್ರಹಾರನಂತಹ ಕಾರ್ಯದರ್ಶಿ ಸಿ.ಪ.ಶೆಟ್ಟಿಯಂತಹ ಕವಿ ಎಲ್ಲವೂ ಅಪ್ರಸ್ತುತವಾಗಿರುವಂತಹ ಪ್ರಳಯ ಅರಂಭಗೊಂಡಿದೆಯಂತಲ್ಲಾ. ಈವರೆಗಿನ ಕನ್ನಡ ಸಾಹಿತ್ಯಕ್ಕೆ ಬದಲು ರಾಷ್ಟ್ರೋತ್ಥಾನ ಸಾಹಿತ್ಯ ಕನ್ನಡಿಗರ ಮೇಲೆ ಹೇರುವ ಸೂಚನೆಯಾಗಿ, ನಮ್ಮ ಮಕ್ಕಳು ಓದುವ ಪಠ್ಯ ಪುಸ್ತಕದೊಳಕ್ಕೆ ಹೆಡಗೇವಾರ್, ಗೋಳವಲ್‌ಕರ್, ದೀನದಯಾಳು, ಹೊ.ವೆ. ಶೇಷಾದ್ರಿ, ಸಾವರ್ಕರ್ ಸೇರಲಿದ್ದಾರಂತಲ್ಲಾ. ಇದು ಹಾಳುಬಿದ್ದು ಹೋಗಲಿ, ಲಂಕೇಶ್ ನಮ್ಮವರು ಎಂದು ಜಗಳ ಮಾಡುತ್ತಿದ್ದ ಅವರ ಒಂದು ಬಳಗ ಲಂಕೇಶರ ಪಾಠವನ್ನೆ ಕೈಬಿಟ್ಟ ಲಾಟಿ ವೀರರ ಬಗ್ಗೆ ಚಕಾರವೆತ್ತಿಲ್ಲವಂತಲ್ಲಾ. ಇದಕ್ಕೂ ಕಾರಣವಿದೆ. ಲಂಕೇಶ್ ಎಂದೂ ತನ್ನ ಜಾತಿ ಬಗ್ಗೆ ಹೇಳಿಕೊಳ್ಳಲಿಲ್ಲ, ಸ್ವಜಾತಿಯವರಿಗೆ ಸಹಾಯ ಮಾಡಲಿಲ್ಲ, ಹತ್ತಿರವೂ ಸೇರಿಸಲಿಲ್ಲ. ಅದ್ದರಿಂದ ಇವರ ಮೌನ ಸಹಜವಾದುದೆ. ಆದರೆ ಲಂಕೇಶ್ ಸೃಷ್ಟಿಸಿ ಹೋಗಿದ್ದ ಜನ ಈಗ ಮೌನಿಗಳಾಗಿರುವ ಬಗ್ಗೆ ಕೇಳಿದಾಗ “ನೋಡ್ರಿ ಹೆಡಗೆವಾರಲ್ಲ, ಪೆಟ್ಟಿಗೆವಾರನ್ನ ಪಠ್ಯಕ್ಕೆ ಸೇರಿಸಿದರೂ ಏನೂ ಆಗಲ್ಲ. 1969-70ನೇ ಇಸವಿಲಿ ಸರ್ ಎಂ. ವಿಶ್ವೇಶ್ವರಯ್ಯನವರ ಬಗ್ಗೆ ಎರಡೂ ವರ್ಷ ಪಠ್ಯ ಪುಸ್ತಕ ಮಾಡಿದ್ರು, ಏನಾಯ್ತು ಯಾವನಾದ್ರು ಒಬ್ಬ ಇಂಜಿನಿಯರ್ ಬಂದನೇ? ವಿಶ್ವೇಶ್ವರಯ್ಯನವರ ವಿಷಯ ಹೇಳುನೂ, ಅಂಗೆ ಈ ಹೆಡಗೆವಾರ್ ಲಾಟಿ ಲಡ್ಡಿದದು ಹೋಗುತ್ತೆ” ಎಂದರಲ್ಲಾ ಥೂತ್ತೇರಿ.


ಇದನ್ನೂ ಓದಿ:  ಎರಡೂವರೆ ಸಾವಿರ ಕೋಟಿ ಹುಣಸಿ ಪಿಕ್ಕ ಅನಕೊಂಡಿರೇನ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರ್ನಾಟಕದಲ್ಲಿ ಬರದ ಬರೆ; ನೀರು, ವಿದ್ಯುತ್‌ ಕೊರತೆ ಸಾಧ್ಯತೆ: ಸಿಎಂ ಡಿಕೆ ಶಿವಕುಮಾರ್‌ ಎಚ್ಚರಿಕೆ

ದುರ್ಬಲ ಮುಂಗಾರು ಹಾಗೂ ಮಳೆಯ ಕೊರತೆಯಿಂದ ಕರ್ನಾಟಕದಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯವು ಕುಡಿಯುವ ನೀರು ಮತ್ತು ವಿದ್ಯುತ್‌ ಕೊರತೆಯನ್ನು ಎದುರಿಸುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌...

2,000 ರೂ.ವರೆಗಿನ UPI ಪಾವತಿಗೆ ಶುಲ್ಕವಿಲ್ಲ ಎಂದ ಕೇಂದ್ರ ಸರ್ಕಾರ

ಡಿಜಿಟಲ್ ಪಾವತಿ ಬಳಸುವ ಕೋಟ್ಯಂತರ ಸಾಮಾನ್ಯ ಜನರಿಗೆ ಕೇಂದ್ರ ಹಣಕಾಸು ಸಚಿವಾಲಯ ಮಹತ್ವದ ಸ್ಪಷ್ಟನೆ ನೀಡಿದ್ದು, 2,000 ರೂಪಾಯಿವರೆಗಿನ ಯುಪಿಐ (UPI) ವಹಿವಾಟುಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವಂತಿಲ್ಲ ಎಂದು ಅಧಿಸೂಚನೆ ಹೊರಡಿಸಿದೆ....

ಯಾದಗಿರಿ| ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ

ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಸಮುದಾಯದ ಭಕ್ತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ಕೇಳಿಬಂದಿದೆ. ಚಾಮನಾಳ ಗ್ರಾಮದ ದಲಿತ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ...

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...