Homeಕರ್ನಾಟಕಶವ ಮೆರವಣಿಗೆಯ ಕರಾಳ ಇತಿಹಾಸದಿಂದ ಪಾಠ ಕಲಿತ್ತಿಲ್ಲವೇ ಕರ್ನಾಟಕ ಜನತೆ?

ಶವ ಮೆರವಣಿಗೆಯ ಕರಾಳ ಇತಿಹಾಸದಿಂದ ಪಾಠ ಕಲಿತ್ತಿಲ್ಲವೇ ಕರ್ನಾಟಕ ಜನತೆ?

ಹರ್ಷ, ಸುಖಾನಂದ ಶೆಟ್ಟಿ, ಶರತ್ ಮಡಿವಾಳ ಮೊದಲಾದವರ ಶವ ಮೆರವಣಿಗೆ ವೇಳೆ ನಡೆದಿರುವ ಅಹಿತಕರ ಘಟನೆಗಳನ್ನು ನೆನೆಯುವುದು ಅಗತ್ಯವಿದೆ.

- Advertisement -
- Advertisement -

ಸಂಘ ಪರಿವಾರದ ಕಾರ್ಯಕರ್ತರು ಯಾರಾದರೂ ಕೊಲೆಯಾದ ತಕ್ಷಣ ಪರಿವಾರಕ್ಕೆ ಬರುವ ಮೊದಲ ಆಲೋಚನೆ- ‘ಶವ ಮೆರವಣಿಗೆ’. ಇದರ ಉದ್ದೇಶವೇನು? ಶವ ಮೆರವಣಿಗೆ ಮಾಡಿದರೆ ಶಾಂತಿಯುತ ಸಮಾಜದಲ್ಲಿ ಉಂಟಾಗುವ ಪರಿಸ್ಥಿತಿ ಎಂತಹದ್ದು? ಎಂಬುದನ್ನು ಇತಿಹಾಸ ನೋಡಿ ಆತ್ಮಾವಲೋಕನ ಮಾಡಿಕೊಳ್ಳಬೇಕಾಗುತ್ತದೆ.

ಬೆಳ್ಳಾರೆಯಲ್ಲಿ ಮಂಗಳವಾರ ರಾತ್ರಿ ಕೊಲೆಯಾದ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಅವರ ಮೃತದೇಹದ ಮೆರವಣಿಗೆ ನಡೆಸಲು ಸಂಘ ಪರಿವಾರದ ಸಂಘಟನೆಗಳು ಹಾಗೂ ಪ್ರವೀಣ್ ಅವರ ಬಂಧುಗಳು ನಿರ್ಧರಿಸಿದ್ದಾರೆ.

ಬುಧವಾರ ಬೆಳಗ್ಗೆ 9.30ಕ್ಕೆ ಪುತ್ತೂರು ನಗರದಿಂದ ಮೆರವಣಿಗೆಯಲ್ಲಿ ಹೊರಟು ದರ್ಬೆ, ಸವಣೂರು ಕಾಣಿಯೂರು, ನಿಂತಿಕಲ್ಲು ಮೂಲಕ ಬೆಳ್ಳಾರೆಗೆ‌ ಪ್ರವೀಣ್ ಅವರ ಮೃತದೇಹವನ್ನು ಕೊಂಡೊಯ್ಯಲಾಗುತ್ತದೆ. ಆ ಪ್ರಯುಕ್ತ ಇಂದು ದಕ್ಷಿಣ ಕನ್ನಡ‌ ಜಿಲ್ಲೆಯ ಪುತ್ತೂರು, ಸುಳ್ಯ ಕಡಬ ತಾಲ್ಲೂಕುಗಳಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ, ವಾಹನ ಸಂಚಾರ ನಿಲ್ಲಿಸಿ ಬಂದ್ ನಡೆಸಬೇಕೆಂದು ಹಿಂದೂ ಸಂಘಟನೆಗಳ ಪ್ರಮುಖರು ಕರೆ ನೀಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಶವ ಮೆರವಣಿಗೆಯಿಂದ ಉಂಟಾಗುವ ಉದ್ವಿಗ್ನತೆ, ಅದರಿಂದಾಗುವ ಅಪಾರ ಆಸ್ತಿಪಾಸ್ತಿ ನಷ್ಟ, ಜೀವಹಾನಿ ಎಲ್ಲವನ್ನೂ ಇತಿಹಾಸವನ್ನು ನೋಡಿ ತಿಳಿದುಕೊಳ್ಳಬೇಕಾಗುತ್ತದೆ. ಕೋಮುದ್ವೇಷ ಹಿನ್ನೆಲೆಯ ಯಾವುದೇ ಶವಮೆರವಣಿಗೆ ದೇಶಕ್ಕೆ ಒಳಿತನ್ನು ಮಾಡಿಲ್ಲ ಎಂಬುದು ಸ್ಪಷ್ಟ. ಅಲ್ಲದೆ ಪೊಲೀಸ್ ವ್ಯವಸ್ಥೆಯ ವೈಫಲ್ಯವೂ ಇಲ್ಲಿ ಎದ್ದು ಕಾಣುತ್ತದೆ.

ಹರ್ಷ ಕೊಲೆ ಪ್ರಕರಣ: ನಿಷೇಧಾಜ್ಞೆಯ ನಡುವೆ ದಾಂಧಲೆ

ಕಳೆದ ಫೆಬ್ರವರಿಯಲ್ಲಿ ಶಿವಮೊಗ್ಗದ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆಯಾದಾಗ ಶವ ಮೆರವಣಿಗೆ ಹಮ್ಮಿಕೊಳ್ಳಲಾಯಿತು. ಅಂದು ಮುಸ್ಲಿಂ ಸಮುದಾಯಗಳನ್ನು ಗುರಿಯಾಗಿಸಿಕೊಂಡು ಕಲ್ಲು ತೂರಾಟ ನಡೆಸಲಾಯಿತು. ಬೆಂಕಿ ಹಚ್ಚಲಾಯಿತು.

ಫೆ.21ರ ಸೋಮವಾರದಂದು ಸುಮಾರು ಒಂದು ಗಂಟೆ 20 ನಿಮಿಷಗಳ ಕಾಲ ಶಿವಮೊಗ್ಗದ ಆಜಾದ್ ನಗರ, ಓಟಿ ರಸ್ತೆ, ಗಾಂಧಿ ಬಜಾರ್, ಸೀಗೆಹಟ್ಟಿ, ಸಿದ್ದಯ್ಯ ನಗರ, ಉರ್ದು ಬಜಾರ್ ಮತ್ತು ಕ್ಲಾರ್ಕ್ ಪೇಟೆಯಂತಹ ಮುಸ್ಲಿಂ ಪ್ರಾಬಲ್ಯವಿರುವ ಪ್ರದೇಶಗಳ ನಿವಾಸಿಗಳು ಭಯಭೀತರಾಗಿದ್ದರು. ವಿದ್ವಂಸಕ ಗುಂಪುಗಳು ಬೆಂಕಿ ಹಚ್ಚಿದವು, ಹಿಂಸಾತ್ಮಕವಾಗಿ ವರ್ತಿಸಿದವು.

ಇದನ್ನೂ ಓದಿರಿ: ಕರಾವಳಿಯಲ್ಲಿನ ಕೋಮುದ್ವೇಷಗಳ ಆಯಾಮ ತೆರೆದಿಡುವ ಕೃತಿ ‘ನೇತ್ರಾವತಿಯಲ್ಲಿ ನೆತ್ತರು’

ಮೆಗ್ಗಾನ್‌ ಆಸ್ಪತ್ರೆಯ ಶವಾಗಾರದಿಂದ ಹರ್ಷನ ಮನೆಯವರೆಗೆ, ಅಲ್ಲಿಂದ ರೋಟರಿ ಸ್ಮಶಾನದವರೆಗೆ ಶವದ ಮೆರವಣಿಗೆಯನ್ನು ಸೆಕ್ಷನ್ 144 ಜಾರಿಯ ನಡುವೆಯೇ ನಡೆಸಲಾಯಿತು. ಸುಮಾರು 600 ಜನರು ಮೆರವಣಿಗೆಯಲ್ಲಿದ್ದರು.

ಮೆರವಣಿಗೆಗೆ ಅವಕಾಶ ನೀಡಿದರೆ ಹಿಂಸಾಚಾರ ಭುಗಿಲೇಳುತ್ತದೆ ಎಂಬುದನ್ನು ಪೊಲೀಸರು ಬಲ್ಲವರಾಗಿದ್ದರೂ ಶವದ ಮೆರವಣಿಗೆಗೆ ಅವಕಾಶ ನೀಡಲಾಯಿತು. ನೂರಾರು ಜನರು ಶವದ ವಾಹನವನ್ನು ಹಿಂಬಾಲಿಸಿದರು. ನಗರದ ಬೀದಿಗಳಲ್ಲಿ ‘ಜೈ ಶ್ರೀ ರಾಮ್’ ಘೋಷಣೆಗಳು ಪ್ರತಿಧ್ವನಿಸಿದವು. ಮೆರವಣಿಗೆಯ ನೇತೃತ್ವವನ್ನು ಬಿಜೆಪಿಯ ನಾಯರಾದ ಸಚಿವ ಕೆ.ಎಸ್.ಈಶ್ವರಪ್ಪ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಹಿರಿಯ ಪುತ್ರ, ಸಂಸದ ಬಿ.ವೈ. ರಾಘವೇಂದ್ರ ವಹಿಸಿದ್ದರು.

ಸೆಕ್ಷನ್ 144 ಸ್ಪಷ್ಟವಾಗಿ ಉಲ್ಲಂಘಿಸಲಾಗಿದೆಯಾದರೂ, ಪೊಲೀಸರು ಹಿರಿಯ ಬಿಜೆಪಿ ನಾಯಕರಿಗೆ ಭದ್ರತೆಯನ್ನು ಒದಗಿಸುತ್ತಿರುವುದು, ಜನನಿಬಿಡ ಬೀದಿಗಳಲ್ಲಿ ಮೆರವಣಿಗೆಗೆ ಅವಕಾಶ ನೀಡುತ್ತಿರುವುದು ಕಂಡುಬಂದಿತ್ತು. ಕೋಮು ಘರ್ಷಣೆಗಳಿಗೆ ಸಾಕ್ಷಿಯಾಗುವ ಪ್ರದೇಶಗಳಲ್ಲಿ ಪೊಲೀಸರು ಮೂಕ ಪ್ರೇಕ್ಷಕರಾಗಿದ್ದರು.

ಗಾಯಗೊಂಡ ನಿವಾಸಿಗಳಲ್ಲಿ ಒಬ್ಬರು 36 ವರ್ಷದ ಸಬ್ರೀನ್. ಅವರು ತಮ್ಮ ಮನೆಗೆ ಹಿಂತಿರುಗುತ್ತಿದ್ದರು. ಇಬ್ಬರು ಚಿಕ್ಕ ಮಕ್ಕಳು ಅವರಿಗಾಗಿ ಕಾಯುತ್ತಿದ್ದವು. ಹಾಲು ಮತ್ತು ಇತರ ಅಗತ್ಯ ವಸ್ತುಗಳನ್ನು ಖರೀದಿಸಲು ಹೊರಟಿದ್ದ ಸಬ್ರೀನ್ ಅವರು ಒಟಿ ರಸ್ತೆಯ ಕಿರಿದಾದ ಹಾದಿಯಲ್ಲಿ ಜನರ ಗುಂಪೊಂದು ಪ್ರವೇಶಿಸುವುದನ್ನು ನೋಡಿದರು. ಒಂದು ಕಲ್ಲು ಅವರ ತಲೆಗೆ ಬಡಿಯಿತು. ತನ್ನನ್ನು ರಕ್ಷಿಸಿಕೊಳ್ಳಲು ತಿರುಗಿದಾಗ ಇನ್ನೊಂದು ಕಲ್ಲು ಅವರ ಬೆನ್ನಿಗೆ ಬಡಿಯಿತು ಎಂಬುದನ್ನು ಅವರು ತಿಳಿಸಿದ್ದಾರೆ. “200 ಮೀಟರ್‌ಗಿಂತ ಕಡಿಮೆ ದೂರದಲ್ಲಿ ಮೂವರು ಪೊಲೀಸರು ಇದ್ದರು” ಎಂದು ಅವರು ಆರೋಪಿಸಿದ್ದಾರೆ.

ಸಬ್ರೀನ್ ಗಾಯಗೊಂಡ ಪ್ರದೇಶದಲ್ಲಿ ಮದ್ರಸಾ ಸೇರಿದಂತೆ ಹಲವಾರು ಕಟ್ಟಡಗಳು ಹಾನಿಗೊಳಗಾದವು. ಗಾಜಿನ ಕಿಟಕಿಗಳು ಒಡೆದು ಹೋಗಿವೆ. ಗಲಭೆಕೋರರು ಮದರಸಾವನ್ನು ಗುರಿಯಾಗಿಸಿಕೊಂಡಿದ್ದರು. ಒಳಗಿದ್ದ ಸುಮಾರು 20 ಮಕ್ಕಳು ಕಲ್ಲುಗಳು ಮತ್ತು ಇಟ್ಟಿಗೆಗಳ ದಾಳಿಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಪಟ್ಟ ಪಾಡನ್ನು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ. ಗಾಜುಗಳನ್ನು ಒಡೆದುಹಾಕಿದ್ದು, ನಿಲ್ಲಿಸಿದ್ದ ವಾಹನಗಳು ಪಲ್ಟಿಯಾದದ್ದು, ಕೆಲವು ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಿದ ಸದ್ದು ಕೇಳಿ ಮನೆಯಿಂದ ಹೊರ ಬಂದೆವು ಎನ್ನುತ್ತಾರೆ ಮದರಸಾದ ಸಮೀಪ ನಿವಾಸಿಗಳು. ಅನೇಕ ಅಮಾಯಕ ಮುಸ್ಲಿಮರು ಈ ಘಟನೆಯಲ್ಲಿ ಪೆಟ್ಟು ತಿಂದರು. (ವಿವರಗಳನ್ನು ‘ಇಲ್ಲಿ’ ಓದಬಹುದು.)

ಸುಖಾನಂದ ಶೆಟ್ಟಿ ಪ್ರಕರಣ: ಒಂದು ಶವ ಮೆರವಣಿಗೆಯಲ್ಲಿ ಎರಡು ಕೊಲೆ

2006ನೇ ಇಸವಿ. ಡಿಸೆಂಬರ್‌ 1ರಂದು ಬಿಜೆಪಿ ಮುಖಂಡ ಸುಖಾನಂದ ಶೆಟ್ಟಿ ಅವರು ಮಂಗಳೂರಿನ ಕುಳಾಯಿಯ ಹೊನ್ನಕಟ್ಟೆ ಎಂಬಲ್ಲಿ ಕೊಲೆಯಾಗುತ್ತಾರೆ. ಅಂದು ಶವಮೆರವಣಿಗೆ ನಡೆದಾಗ ಇಬ್ಬರು ಬಿಜೆಪಿ ಕಾರ್ಯಕರ್ತರನ್ನು ಶೂಟೌಟ್ ಮಾಡಲಾಗಿತ್ತು.

ಕರಾವಳಿ ಕೋಮು ಚರಿತ್ರೆಯನ್ನು ಆಳವಾಗಿ ಅಧ್ಯಯನ ಮಾಡಿರುವ ಪತ್ರಕರ್ತ ನವೀನ್‌ ಸೂರಿಂಜೆ ಅವರು ಸುಖಾನಂದ ಶೆಟ್ಟಿ ಪ್ರಕರಣವನ್ನು ‘ನಾನುಗೌರಿ.ಕಾಂ’ ಜೊತೆ ಹಂಚಿಕೊಂಡಿದ್ದು ಹೀಗೆ:

“ಸುಖಾನಂದ ಶೆಟ್ಟಿಯವರು ನಳಿನ್‌ ಕುಮಾರ್‌ ಕಟೀಲ್ ಅವರ ಗುರುವಿನಂತಿದ್ದರು. ಬಂಟ ಸಮುದಾಯಕ್ಕೆ ಸೇರಿದ ಬಹುದೊಡ್ಡ ಯುವನಾಯಕ ಸುಖಾನಂದ ಶೆಟ್ಟಿ. ಅಂದು ಬಿಜೆಪಿ- ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರದಲ್ಲಿತ್ತು. ನಾಗರಾಜ ಶೆಟ್ಟಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಮುಲ್ಕಿ ವಿಧಾನಸಭಾ ಕ್ಷೇತ್ರದ ಮುಂದಿನ ಬಿಜೆಪಿ ಅಭ್ಯರ್ಥಿ ಎಂದೇ ಬಿಂಬಿತರಾಗಿದ್ದ ಸುಖಾನಂದ ಶೆಟ್ಟಿಯವರ ಶವವನ್ನು ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ಇರಿಸಲಾಗಿತ್ತು. ಅಲ್ಲಿಂದ ಶವ ಮೆರವಣಿಗೆ ಮಾಡಬೇಕೆಂದು ನಿರ್ಧಾರವಾಗಿತ್ತು. ಅಂದಿನ ಮಂಗಳೂರಿನ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದವರು ಈಗಿನ ಗುಪ್ತಚರ ಇಲಾಖೆಯ ಮುಖ್ಯಸ್ಥರಾದ ದಯಾನಂದ. ಎಜೆ ಆಸ್ಪತ್ರೆಗೆ ಬಂದ ದಯಾನಂದ ಅವರು ನಾಗರಾಜ್‌ ಶೆಟ್ಟಿಯವರಲ್ಲಿ- ಯಾವುದೇ ಕಾರಣಕ್ಕೂ ನೀವು ಶವಮೆರವಣಿಗೆ ಮಾಡಬಾರದು. ನಮಗೆ ಗುಪ್ತಚರ ಮಾಹಿತಿ ಇದೆ- ಎಂದು ತಿಳಿಸುತ್ತಾರೆ. ಉಸ್ತುವಾರಿ ಸಚಿವರು ಆ ಮಾತನ್ನು ಒಪ್ಪುವುದಿಲ್ಲ. ‘ಶವ ಮೆರವಣಿಗೆ ಮಾಡಲೇಬೇಕು, ಬೇಕಾದರೆ ಹೆಚ್ಚಿನ ಭದ್ರತೆ ತೆಗೆದುಕೊಳ್ಳಿ’ ಎನ್ನುತ್ತಾರೆ. ದಯಾನಂದ ಅವರು ಅಸಮ್ಮತಿ ಸೂಚಿಸುತ್ತಾರೆ. ಏಕೆಂದರೆ ಹತ್ತಾರು ಕಿ.ಮೀ. ಮೆರವಣಿಗೆ ಸಾಗಬೇಕಾಗಿದೆ. ಮಂಗಳೂರಿನಿಂದ ಮುಲ್ಕಿಗೆ ಶವ ಮೆರವಣಿಗೆ ಆಗಬೇಕೆಂದರೆ ಹೆದ್ದಾರಿ ಬ್ಲಾಕ್ ಆಗುತ್ತದೆ. ದಾರಿಯುದ್ಧಕ್ಕೂ ಮಸೀದಿಗಳು, ದೇವಸ್ಥಾನಗಳು, ಚರ್ಚ್‌‌ಗಳಿವೆ. ಯಾವುದೇ ಕಾರಣಕ್ಕೂ ಮೆರವಣಿಗೆ ಮಾಡಬಾರದು ಎನ್ನುತ್ತಾರೆ. ಆದರೆ ನಾಗರಾಜ್ ಶೆಟ್ಟಿ ಒಪ್ಪುವುದೇ ಇಲ್ಲ.”

“ಬಿಜೆಪಿ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿಯಾಗುತ್ತದೆ. ಒಬ್ಬ ಕಾರ್ಯಕರ್ತನಂತೂ ಎಸ್‌ಪಿಯ ಕಾಲರ್‌ ಹಿಡಿಯಲು ಹೋಗುತ್ತಾನೆ. ಆನಂತರ ಮೆರವಣಿಗೆ ಆರಂಭವಾಗುತ್ತದೆ. ಕೋಮು ಸೂಕ್ಷ್ಮ ಪ್ರದೇಶವಾದ ಸುರತ್ಕಲ್‌ ದಾಟಿ ಹೋಗುವುದು ದೊಡ್ಡ ಸವಾಲಾಗಿತ್ತು. ಅಲ್ಲಿ ಮತ್ತಷ್ಟು ಜನ ಸೇರಿಕೊಂಡರು. ಜನ ಹೆಚ್ಚಾದರು. ಅಂತೂ ಮೆರವಣಿಗೆ ಮುಲ್ಕಿ ತಲುಪಿತು. ಒಂದು ಕಡೆ ಮಸೀದಿ, ಒಂದು ಕಡೆ ಮಂದಿರ, ಒಂದು ಕಡೆ ಸರ್ಕಲ್‌ ಇದೆ. ಅದೆಲ್ಲವೂ ದಾಟಿ ಸುಖಾನಂದ ಶೆಟ್ಟಿ ಮನೆಗೆ ತೆರಳಬೇಕಿತ್ತು. ಆಗಲೇ ಕತ್ತಲು ಆವರಿಸುತ್ತಾ ಸಂಜೆ ಏಳು ಗಂಟೆಯಾಗಿತ್ತು. ಉದ್ವಿಗ್ನ ವಾತಾವರಣ. ಹಿಂದೂ ಮುಸ್ಲಿಂ ಎಲ್ಲ ಸೇರಿದ್ದರು. ಪ್ರೇಮ್‌ ಕೋಟ್ಯಾನ್‌, ಹರೀಶ್‌ ಪೂಜಾರಿ ಎಂಬ ಇಬ್ಬರು ಬಿಲ್ಲವ ಸಮುದಾಯದ ಬಿಜೆಪಿ ಕಾರ್ಯಕರ್ತರು ಆಕ್ರೋಶಭರಿತರಾಗಿದ್ದರು. ಪೊಲೀಸ್ ವರಿಷ್ಠಾಧಿಕಾರಿ ದಯಾನಂದ ಅವರ ಮೇಲೆ ಈ ಹುಡುಗರು ಕೈ ಹಾಕುತ್ತಾರೆ. ಪರಿಸ್ಥಿತಿ ಮಿತಿಮೀರುತ್ತಿತ್ತು. ದಯಾನಂದ ಅವರ ಗನ್‌ ಮ್ಯಾನ್‌ ಆಗಿದ್ದ ಅರುಣ್‌ ಆಳ್ವ ರಿವಾಲ್ವರ್‌ ತೆಗೆದು ತನ್ನ ಪಕ್ಕದಲ್ಲಿದ್ದ ಪ್ರೇಮ್‌ ಕೋಟ್ಯಾನ್‌ ಹಾಗೂ ಹರೀಶ್‌ ಪೂಜಾರಿಗೆ ಶೂಟ್ ಮಾಡುತ್ತಾರೆ. ಮುಂದೆ ಶವ ಹೋಗುತ್ತಿದ್ದರೆ, ಹಿಂದೆ ಎರಡು ಶವ ಬಿದ್ದಿದ್ದವು. ಮಂಗಳೂರು ಹೊತ್ತಿ ಉರಿಯಿತು. ಜಿಲ್ಲಾ ಉಸ್ತುವಾರಿ ಸಚಿವರ ಎದುರಲ್ಲೇ ಇಬ್ಬರು ಬಿಜೆಪಿ ಕಾರ್ಯಕರ್ತರು ಕೊಲೆಯಾಗಿದ್ದರು. ದಯಾನಂದ ಅವರು ಈಗ ಗುಪ್ತಚರ ಇಲಾಖೆಯ ಮುಖ್ಯಸ್ಥರಾಗಿದ್ದಾರೆ. ಪೂರ್ಣಪ್ರಮಾಣದ ಬಿಜೆಪಿ ಸರ್ಕಾರ ಬಂದಾಗ ಕೃಷ್ಣ ಪಾಲೇಮಾರ್‌ ಸಚಿವರಾದರು. ಅವರಿಗೆ ಅರುಣ್ ಆಳ್ವ ಗನ್‌ ಮ್ಯಾನ್ ಆಗುತ್ತಾರೆ. ಅರಣ್ ಆಳ್ವ ಈಗ ಎಸ್‌ಐ ಆಗಿದ್ದಾರೆ.”

ಶರತ್‌ ಮಡಿವಾಳ ಪ್ರಕರಣ

ಶರತ್‌ ಮಡಿವಾಳ ಪ್ರಕರಣದಲ್ಲೂ ಶವ ಮೆರವಣಿಗೆಯಾಗಿ ಗಲಭೆಯಾಗಿದ್ದನ್ನು ನವೀನ್‌ ಸೂರಿಂಜೆ ಉಲ್ಲೇಖಿಸುತ್ತಾರೆ. ಶವ ಮೆರವಣಿಗೆಯ ಅಹಿತಕರ ಘಟನೆಯಲ್ಲಿ ಕಲ್ಲಡ್ಕ ಪ್ರಭಾಕರ ಭಟ್‌ ಪಾಲು ಕೂಡ ಇರುತ್ತದೆ. ಕಲ್ಲಡ್ಕ ಪ್ರಭಾಕರ ಭಟ್ ಮೇಲೆ ಯಾವುದೇ ಪ್ರಕರಣ ದಾಖಲಾಗುವುದಿಲ್ಲ. ಆದರೆ ಬಿಲ್ಲವ ಸಮುದಾಯದ ಸತ್ಯಜಿತ್‌ ಸುರತ್ಕಲ್‌ ಹಾಗೂ ಕೊಟ್ಟಾರಿ ಎಂಬ ಹಿಂದುಳಿದ ಸಮುದಾಯಕ್ಕೆ ಸೇರಿದ ಶರಣ್‌ ಪಂಪ್‌ವೆಲ್‌ ವಿರುದ್ಧ ಪ್ರಕರಣ ದಾಖಲಾಗುತ್ತದೆ.

ಇದನ್ನೂ ಓದಿರಿ: ಕೋಮುದ್ವೇಷ: ಕಾಳಿ ಸ್ವಾಮೀಜಿ ಮಾಡಿದ ಅವಾಂತರಗಳಿವು!

ಗೋದ್ರಾದಲ್ಲೂ ಇದೇ ಕಥೆ

‘ದಿ ಹಿಂದೂ’ ಪತ್ರಿಕೆಯ ವರದಿಗಾರರಾದ ಆದಿತ್ಯ ಭಾರದ್ವಾಜ್‌ ತಮ್ಮ ಅನುಭವದ ಹಿನ್ನೆಲೆಯಲ್ಲಿ ಬರೆಯುತ್ತಾ, “ಕೋಮು ಸೂಕ್ಷ್ಮ ಪ್ರದೇಶದಲ್ಲಿ ಗಲಭೆಗೆ ಪ್ರಚೋದನೆ ನೀಡಬಲ್ಲ ಒಂದು ಸಾವು ಸಂಭವಿಸಿದರೆ, ಕಾನೂನು ಸುವ್ಯವಸ್ಥೆ ಕಾಪಾಡಲು ತೆಗೆದುಕೊಳ್ಳುವ ಮೊದಲ ಕ್ರಮ ಮೃತದೇಹದ ಮೆರವಣಿಗೆಯನ್ನು ತಡೆಯುವುದು. ಆದಷ್ಟು ಬೇಗ ಜನ ಜಂಗುಳಿ ಇಲ್ಲದೆ ಅಂತ್ಯಸಂಸ್ಕಾರ ನಡೆಸಿಬಿಡುವುದು. 2002ರಲ್ಲಿ ಗೋಧ್ರಾದಲ್ಲಿ ಸತ್ತ ಕರಸೇವಕರ ಶವಗಳ ಮೆರವಣಿಗೆಯೇ ಕೋಮುಗಲಭೆಯನ್ನು ರಾಜ್ಯಕ್ಕೆಲ್ಲಾ ಹಬ್ಬಿಸಿತು. ಕಳೆದ ವರ್ಷ ಡಿಜೆ ಹಳ್ಳಿಯ ಗಲಭೆಯಲ್ಲಿ ಮೂರು ಜನ ಪೋಲೀಸ್ ಫೈರಿಂಗ್ ಅಲ್ಲಿ ಸತ್ತರು. ಮರುದಿನ ಈ ಮೂರು ಕುಟುಂಬಗಳನ್ನು ಸದ್ದುಗದ್ದಲವಿಲ್ಲದೆ ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋದ ಪೋಲೀಸರು ಅಂತ್ಯಕ್ರಿಯೆ ನಡೆಸಿಕೊಟ್ಟರು. ಅವತ್ತು ಅಲ್ಲಿ ಆ ಮೂವರ ಮೃತದೇಹಗಳು ಡಿಜೆ ಹಳ್ಳಿಯಲ್ಲಿ ಇದ್ದಿದ್ದರೆ, ಸಾವಿರಾರು ಜನ ಸೇರಿದ್ದರೆ! ನೆನೆಸಿಕೊಳ್ಳಲೂ ಭಯ ಆಗುತ್ತದೆ” ಎನ್ನುತ್ತಾರೆ.

ಸ್ಥಳೀಯ ಪೊಲೀಸರ ಮೇಲೆ ಕಾನೂನು ಸುವ್ಯವಸ್ಥೆ ಅವಲಂಬಿತ: ಎಸ್.ಟಿ.ರಮೇಶ್‌

‘ನಾನುಗೌರಿ.ಕಾಂ’ಗೆ ಪ್ರತಿಕ್ರಿಯೆ ನೀಡಿದ ನಿವೃತ್ತ ಡಿಜಿಪಿ ಎಸ್.ಟಿ.ರಮೇಶ್‌, “ಸ್ಥಳೀಯ ಪೊಲೀಸ್‌ ಪೊಲೀಸರಿಗೆ ಎಲ್ಲ ಮಾಹಿತಿ ಇರುತ್ತದೆ. ಅವರು ಸರಿಯಾದ ತೀರ್ಮಾನ ತೆಗೆದುಕೊಂಡರೆ ಕಾನೂನು ಸುವ್ಯವಸ್ಥೆ ಕಾಪಾಡಲು ಸಾಧ್ಯವಾಗುತ್ತದೆ” ಎಂದು ಅಭಿಪ್ರಾಯಪಟ್ಟರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಅಲ್ಲ, ಒಬ್ಬ ದೇಶಭಕ್ತ ಯುವಕನನ್ನು ಕೊಲೆ ಮಾಡುವುದು ತಪ್ಪಲ್ಲ, ಅವನ ಶವದ ಮೆರವಣಿಗೆ ಮಾಡುವುದು ತಪ್ಪಲ್ಲವೇ?

LEAVE A REPLY

Please enter your comment!
Please enter your name here

- Advertisment -

ಜೋಸೆಫ್ ವಿಜಯ್‌ ಅವರ ಐತಿಹಾಸಿಕ ಗೆಲುವು: ರಾಜ್ಯಪಾಲರ ಸೋಲು ಮತ್ತು ದ್ರಾವಿಡ ನೆಲದ ರಾಜಕೀಯ: ಒಂದು ವಿಶ್ಲೇಷಣೆ

ತಮಿಳಗ ವೆಟ್ರಿ ಕಝಗಂ (TVK) ಪಕ್ಷವು ತಮಿಳುನಾಡು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿ ಸರ್ಕಾರ ರಚಿಸುವ ಜವಾಬ್ದಾರಿ ತೆಗೆದುಕೊಂಡಿದೆ. ಮೇ 13, 2026ರ ಬುಧವಾರ ನಡೆದ ನಾಟಕೀಯ ವಿಶ್ವಾಸ ಮತಯಾಚನೆಯಲ್ಲಿ 144 ಮತಗಳ ಬೆಂಬಲ...

FACT CHECK: ಟಿವಿಕೆ ಪಕ್ಷ ಅಧಿಕಾರಕ್ಕೆ ಬರುತ್ತಿದಂತೆ ಹಿಂದಿ ಹೇರಿಕೆ ವಿರುದ್ದ ಪ್ರತಿಭಟನೆ ಎಂದು ಹಳೆಯ ವಿಡಿಯೋ ಹಂಚಿಕೆ

ಹಿಂದಿ ಹೇರಿಕೆ ವಿರುದ್ದದ ಹೋರಾಟವು ತಮಿಳುನಾಡಿಗೆ ಹೊಸದೇನು ಅಲ್ಲ. ಆದರೆ ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಅಧಿಕಾರ ವಹಿಸಿಕೊಂಡ ನಂತರ ...

ನೀಟ್: ಪ್ರಶ್ನೆಪತ್ರಿಕೆ ಸೋರಿಕೆಯ ಆತಂಕ ಮತ್ತು ಪ್ರಾದೇಶಿಕ ಹಿತಾಸಕ್ತಿಗಳ ಬಲಿ

ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಮೇಲೆ ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ...

ಕೇಂದ್ರ ಸಚಿವ ಬಂಡಿ ಸಂಜಯ್ ಮಗನ ವಿರುದ್ಧ ಪೋಕ್ಸೋ ಕೇಸ್ : ಕ್ರಮ ಕೈಗೊಳ್ಳದೆ ಕಥೆ ಹೇಳುತ್ತಿರುವ ಪೊಲೀಸರು, ಅಂತರ ಕಾಯ್ದುಕೊಂಡ ಬಿಜೆಪಿ

ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ, ತೆಲಂಗಾಣದ ಪ್ರಮುಖ ಬಿಜೆಪಿ ನಾಯಕ ಬಂಡಿ ಸಂಜಯ್ ಕುಮಾರ್ ಅವರ ಮಗ ಬಂಡಿ ಸಾಯಿ ಭಗೀರತ್ ವಿರುದ್ಧ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೋಕ್ಸೋ...

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...