Homeಮುಖಪುಟಗುಂಪು ಥಳಿತ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಗೆ ಉತ್ತರ ಪ್ರದೇಶ ಕಾನೂನು ಆಯೋಗದ ಶಿಫಾರಸು

ಗುಂಪು ಥಳಿತ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಗೆ ಉತ್ತರ ಪ್ರದೇಶ ಕಾನೂನು ಆಯೋಗದ ಶಿಫಾರಸು

ಮುಖ್ಯಮಂತ್ರಿ ಆದಿತ್ಯನಾಥ್ ಅವರಿಗೆ ಸಲ್ಲಿಸಿದ ವರದಿಯೊಂದರಲ್ಲಿ ಉತ್ತರ ಪ್ರದೇಶದ ಕಾನೂನು ಆಯೋಗವು ಗುಂಪು ಥಳಿತದಿಂದ ಸಾವಿನ ಪ್ರಕರಣಗಳಿಗೆ ಕಡಿವಾಣ ಹಾಕಲು ವಿಶೇಷ ಕಾನೂನು ತರುವಂತೆ ಶಿಫಾರಸು ಮಾಡಿದೆ.

- Advertisement -
- Advertisement -

ಕೃಪೆ: ದಿ ವೈರ್
ಅನುವಾದ: ನಿಖಿಲ್ ಕೋಲ್ಪೆ

ಗೋರಕ್ಷಕರು ನಡೆಸಿರುವುದು ಸೇರಿದಂತೆ, ವಿವಿಧ ಗುಂಪು ಥಳಿತದಿಂದ ನಡೆದಿರುವ ಸಾವಿನ ಘಟನೆಗಳನ್ನು ಗಣನೆಗೆ ತೆಗೆದುಕೊಂಡಿರುವ ಉತ್ತರ ಪ್ರದೇಶದ ಕಾನೂನು ಆಯೋಗವು, ಈ ಅಪರಾಧಕ್ಕೆ ಜೀವಾವಧಿಯ ತನಕ ಶಿಕ್ಷೆ ವಿಧಿಸಲು ಶಿಫಾರಸು ಮಾಡುವ ಕರಡು ಮಸೂದೆಯೊಂದನ್ನು ಸರಕಾರಕ್ಕೆ ಸಲ್ಲಿಸಿದೆ.

ಗುಂಪು ಥಳಿತದಿಂದ ಕೊಲೆ ಕುರಿತ ವರದಿಯನ್ನು ಕರಡು ಮಸೂದೆಯೊಂದರ ಸಹಿತ ಕಾನೂನು ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಎ.ಎನ್. ಮಿತ್ತಲ್ ಅವರು ಬುಧವಾರ ಮುಖ್ಯಮಂತ್ರಿ ಆದಿತ್ಯನಾಥ್ ಅವರಿಗೆ ಸಲ್ಲಿಸಿದ್ದಾರೆ.

ಈ 128 ಪುಟಗಳ ವರದಿಯು ಗುಂಪು ಥಳಿತದಿಂದ ಸಾವು ಸಂಭವಿಸಿದ ವಿವಿಧ ಪ್ರಕರಣಗಳನ್ನು ಉಲ್ಲೇಖಿಸಿದ್ದು, 2018ರಲ್ಲಿ ಸುಪ್ರೀಂಕೋರ್ಟ್ ಕೋರ್ಟ್ ಮಾಡಿರುವ ಶಿಫಾರಸುಗಳಿಗೆ ಅನುಗುಣವಾಗಿ ತಕ್ಷಣವೇ ಕಾನೂನು ತರುವಂತೆ ಶಿಫಾರಸು ಮಾಡಿದೆ.

ಗುಂಪು ಥಳಿತದಿಂದಾಗುವ ಕೊಲೆ ಪ್ರಕರಣಗಳನ್ನು ನಿಯಂತ್ರಿಸಲು ಈಗಿರುವ ಕಾನೂನುಗಳು ಸಾಕಾಗವು ಎಂದಿರುವ ಆಯೋಗವು, ಅವುಗಳನ್ನು ನಿಭಾಯಿಸಲು ಪ್ರತ್ಯೇಕ ಕಾನೂನಿರಬೇಕು ಎಂದು ಒತ್ತಿಹೇಳಿದೆ. ಇಂತಹಾ ಅಪರಾಧಗಳಿಗೆ ಏಳು ವರ್ಷಗಳ ಸೆರೆವಾಸದಿಂದ ಜೀವಾವಧಿಯ ತನಕ ಶಿಕ್ಷೆಯನ್ನು ಅದು ಶಿಫಾರಸು ಮಾಡಿದೆ.

‘ದಿ ವೈರ್’ ಸುದ್ದಿಸಂಸ್ಥೆಯ ಜೊತೆ ಮಾತನಾಡಿದ ನ್ಯಾ. ಮಿತ್ತಲ್ ಅವರು, ಇನ್ನು ರಾಜ್ಯದ ಗೃಹ ಸಚಿವಾಲಯವು ಈ ವರದಿಯನ್ನು ಅಧ್ಯಯನ ಮಾಡಿ, ಕಾನೂನಿನ ಆವಶ್ಯಕತೆಯ ಕುರಿತು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಿದರು.

“ಗುಂಪು ಹಿಂಸಾಚಾರದ ಅತ್ಯಂತ ಕಟು ವಿವರಣೆ ಎಂದರೆ,
1901 ಯುಎಸ್‌ಎಯ ಮಿಸ್ಸೂರಿಯಲ್ಲಿ ನಡೆದ ಜನಾಂಗೀಯ ಗುಂಪು ಕೊಲೆಯ ಬಗ್ಗೆ ಲೇಖಕ ಮಾರ್ಕ್ ಟ್ವೈನ್‌ನ ಪ್ರತಿಕ್ರಿಯೆಯಾಗಿದೆ. ಆತ ಅದರಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕವು ಯುನೈಟೆಡ್ ಸ್ಟೇಟ್ಸ್ ಆಫ್ ಲಿಂಚ್‌ಡಂ ಆಗಿ ಬದಲಾಗುವ ಅಪಾಯವನ್ನು ಕಂಡಿದ್ದಾನೆ. ಇದೀಗ ಒಂದು ಶತಮಾನದ ಬಳಿಕ ಜಾತ್ಯತೀತ ಗಣರಾಜ್ಯವಾದ ಭಾರತವು ಇದೇ ರೀತಿಯ ಭಯದ ನೆರಳಲ್ಲಿ ಇರುವಂತೆ ಕಾಣುತ್ತಿದೆ” ಎಂದು ಈ ವರದಿಯ ಪ್ರಸ್ತಾವನೆಯಲ್ಲಿ ನ್ಯಾ. ಮಿತ್ತಲ್ ಬರೆದಿದ್ದಾರೆ.

ಈ ವಿಶೇಷ ಕಾನೂನನ್ನು ‘ಉತ್ತರ ಪ್ರದೇಶ ಗುಂಪು ಹತ್ಯೆ ವಿರುದ್ಧ ಹೋರಾಟ ಕಾಯಿದೆ’ ಎಂದು ಕರೆಯಬಹುದು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಇಂತಹಾ ಪ್ರಕರಣದಲ್ಲಿ ಜಿಲ್ಲಾಧಿಕಾರಿ ಮತ್ತು ಪೋಲಿಸ್ ಅಧಿಕಾರಿಗಳ ಹೊಣೆಗಾರಿಕೆಗಳನ್ನು ಆಯೋಗವು ನಿಗದಿಪಡಿಸಿದ್ದು, ಕರ್ತವ್ಯಚ್ಯುತಿಗೆ ಶಿಕ್ಷೆಯನ್ನೂ ಸ್ಪಷ್ಟಪಡಿಸಿದೆ.

ಹೊಸ ಕಾನೂನು, ಗಾಯಗೊಂಡವರು ಮತ್ತು ಮೃತಪಟ್ಟವರ ಕುಟುಂಬಕ್ಕೆ ಹಾಗೂ ಆದ ಆಸ್ತಿ ಹಾನಿಗೆ ಪರಿಹಾರವನ್ನೂ ಕಲ್ಪಿಸಬೇಕು ಎಂದೂ ಆಯೋಗ ಹೇಳಿದೆ. ಹಿಂಸೆಗೆ ಗುರಿಯಾದವರು, ಮತ್ತವರ ಕುಟುಂಬದ ಪುನರ್ವಸತಿಗೂ ಕಾನೂನಿನಲ್ಲಿ ಅವಕಾಶ ಇರಬೇಕು ಎಂದೂ ಅದು ಹೇಳಿದೆ.

ರಾಜ್ಯದಲ್ಲಿ 2012ರಿಂದ 2019 ವರೆಗಿನ ಲಭ್ಯ ಅಂಕಿಅಂಶಗಳ ಪ್ರಕಾರ 50 ಗುಂಪು ಥಳಿತದ ಘಟನೆಗಳು ನಡೆದಿವೆ. ಸುಮಾರು 50 ಬಲಿಪಶುಗಳಲ್ಲಿ ಹನ್ನೊಂದು ಮಂದಿ ಸತ್ತಿದ್ದು, 25  ಪ್ರಕರಣಗಳು ಗಂಭೀರವಾದ ಹಲ್ಲೆಗೆ ಸಂಬಂಧಿಸಿದವಾಗಿದ್ದು, ಇವುಗಳಲ್ಲಿ ತಥಾಕಥಿತ ಗೋರಕ್ಷಕರು ನಡೆಸಿದ ಹಲ್ಲೆಗಳೂ ಸೇರಿವೆ.

ಈ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಆಯೋಗವು ಸ್ವಯಂಪ್ರೇರಿತ ತನಿಖೆಯನ್ನು ಕೈಗೆತ್ತಿಕೊಂಡಿತ್ತು ಎಂದು ಆಯೋಗದ ಕಾರ್ಯದರ್ಶಿ ಸ್ವಪ್ನಾ ತ್ರಿಪಾಠಿ ಹೇಳಿದ್ದಾರೆ.

ಗುಂಪು ಹಲ್ಲೆಯನ್ನು ಹತ್ತಿಕ್ಕುವ ಸಲುವಾಗಿ 2018ರ ಜುಲೈಯಲ್ಲಿ ಸುಪ್ರೀಂಕೋರ್ಟ್, ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಕೆಲವು ಪರಿಶಮನಕಾರಿ ಮತ್ತು ದಂಡನಾತ್ಮಕ ಕ್ರಮಗಳ ಸರಣಿಯನ್ನೇ ಜಾರಿ ಮಾಡಿತ್ತು ಮಾತ್ರವಲ್ಲದೆ, ನಾಲ್ಕು ವಾರಗಳಲ್ಲೇ ಅವುಗಳನ್ನು ಅನುಷ್ಠಾನಗೊಳಿಸುವಂತೆ ತಾಕೀತು ಮಾಡಿತ್ತೆಂಬುದನ್ನು ಇಲ್ಲಿ ನೆನಪಿಸುವುದು ಅಗತ್ಯ.

“ಪ್ರಜಾಪ್ರಭುತ್ವದಲ್ಲಿ ಗುಂಪುಪ್ರಭುತ್ವಕ್ಕೆ ಎಡೆ ನೀಡುವುದು ಸಾಧ್ಯವಿಲ್ಲ” ಎಂದು ಹೇಳಿದ್ದ ನ್ಯಾಯಾಲಯವು, ಕಾನೂನು ಮತ್ತು ಶಿಸ್ತನ್ನು ಕಾಯುವಂತೆ ಸರಕಾರಗಳಿಗೆ ಆದೇಶಿಸಿತ್ತು. ನಿರ್ದಿಷ್ಟವಾಗಿ ಗುಂಪು ಥಳಿತದಿಂದ ಹತ್ಯೆಯ ಪ್ರಕರಣಗಳನ್ನು ನಿಭಾಯಿಸುವ ಕಾನೂನುಗಳನ್ನು ತರುವಂತೆ ಸರಕಾರಗಳಿಗೆ ಶಿಫಾರಸು ಮಾಡಿತ್ತು.

ಉತ್ತರ ಪ್ರದೇಶ ಕಾನೂನು ಆಯೋಗದ ವರದಿಯ ಪ್ರಕಾರ ಈ ತನಕ ಮಣಿಪುರ ಮಾತ್ರ ಈ ಕಾನೂನನ್ನು ತಂದಿದೆ. ಮಾಧ್ಯಮ ವರದಿಗಳ ಪ್ರಕಾರ ಮಧ್ಯ ಪ್ರದೇಶ ಸದ್ಯದಲ್ಲೇ ಇಂತಹಾ ಕಾನೂನನ್ನು ಜಾರಿಗೆ ತರಲಿದೆ. ವರದಿಯು ದಕ್ಷಿಣ ಆಫ್ರಿಕಾ ಮತ್ತು ನೈಜೀರಿಯಾದಂತಹ ದೇಶಗಳಲ್ಲಿರುವ ಕಾನೂನುಗಳನ್ನೂ ಉಲ್ಲೇಖಿಸಿದೆ.

ಬೀಫ್ ತಿಂದಿರುವ ಸಂಶಯದ ಮೇಲೆ 2015ರಲ್ಲಿ ಥಳಿಸಿ ಕೊಲ್ಲಲಾದ ಮೊಹಮ್ಮದ್ ಅಖ್ಲಾಕ್ ಪ್ರಕರಣ ಸಹಿತ ಹಲವು ಪ್ರಕರಣಗಳನ್ನು ಆಯೋಗದ ವರದಿಯು ಉಲ್ಲೇಖಿಸಿದೆ. ಅಖ್ಲಾಕ್ ಪ್ರಕರಣವು ರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆದು, ದನದ ಹೆಸರಿನಲ್ಲಿ ನಡೆಯುತ್ತಿರುವ ಗೂಂಡಾಗಿರಿ ಹೆಚ್ಚುತ್ತಿರುವ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದ್ದ ಮೊದಲ ಪ್ರಕರಣಗಳಲ್ಲಿ ಒಂದಾಗಿತ್ತು.

ಈ ರೀತಿಯ ಗುಂಪು ಹಿಂಸಾಚಾರದಲ್ಲಿ ಸಾವಿಗೀಡಾದವರಲ್ಲಿ ಮುಸ್ಲಿಮರೇ ಹೆಚ್ಚೆಂಬುದನ್ನು ಮಾಧ್ಯಮ ಚರ್ಚೆಗಳಿಂದ ಗಮನಿಸಿರುವುದಾಗಿ ವರದಿ ಹೇಳಿದೆಯಾದರೂ, ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಯಾವುದೇ ಅಂಕಿಅಂಶಗಳು ಆಯೋಗದ ಬಳಿ ಇಲ್ಲ ಎಂದಿದೆ.

‘ದಿ ವೈರ್’ ಜೊತೆ ಮಾತನಾಡಿದ ನ್ಯಾಯಮೂರ್ತಿ ಮಿತ್ತಲ್, ಇಂತಹ ಕೃತ್ಯಗಳ ಬಹುಪಾಲನ್ನು ಮಾಡುವವರು ಗೋರಕ್ಷಕರು ಎಂದು ಹೇಳಿದರು. ಇದು ಉತ್ತರ ಪ್ರದೇಶದ ಮಟ್ಟಿಗೆ ಮಾತ್ರ ನಿಜವಾಗಿರುವುದಲ್ಲ; ಇಡೀ ದೇಶದ ಮಟ್ಟಿಗೂ ನಿಜ ಎಂದು ಅವರು ಹೇಳಿದರು. “ಆದರೆ, ಮಕ್ಕಳ ಅಪಹರಣದ ಶಂಕೆ, ಕಳವು ಮತ್ತು ಅಂತರ್ಧಮೀಯ ಮದುವೆಗಳಿಗೆ ಸಂಬಂಧಿಸಿದಂತೆಯೂ ಗುಂಪು ಥಳಿತ ನಡೆದಿರುವುದು ವರದಿಯಾಗಿದೆ” ಎಂದವರು ಹೇಳಿದರು.

ಡಿಸೆಂಬರ್ 3, 2018ರಂದು ಬುಲಂದ್‌ ಶಹರ್‌ನಲ್ಲಿ ಗದ್ದೆಯಲ್ಲಿ ಹಸುವಿನ ಶವ ಪತ್ತೆಯಾದ ಬಳಿಕ ಹಿಂದೂತ್ವವಾದಿಗಳು ಮತ್ತು ಪೊಲೀಸರ ನಡುವೆ ನಡೆದ ಘರ್ಷಣೆಯ ವೇಳೆ ಕೊಲೆಯಾದ ಇನ್ಸ್ಪೆಕ್ಟರ್ ಸುಬೋಧ್ ಸಿಂಗ್ ಪ್ರಕರಣವನ್ನೂ ವರದಿಯು ಉಲ್ಲೇಖಿಸಿದೆ. ಈ ಕುರಿತು ಆಯೋಗದ ಅಧ್ಯಕ್ಷರು, “ಈಗ ಗುಂಪುಗಳು ಪೊಲೀಸರ ಮೇಲೂ ದಾಳಿಗೆ ಮುಂದಾಗಿವೆ” ಎಂದು ಹೇಳಿದರು.

“ಗುಂಪು ಹಿಂಸಾಚಾರಗಳು ಫಾರೂಖಾಬಾದ್, ಉನ್ನಾವ್, ಕಾನ್ಪುರ, ಹಾಪುರ್ ಮತ್ತು ಮುಝಾಫರ್ ನಗರ್ ಜಿಲ್ಲೆಗಳಲ್ಲಿ ನಡೆದಿದ್ದು, ಜನರು ಪೊಲೀಸರನ್ನೂ ತಮ್ಮ ಶತ್ರುಗಳೆಂದು ತಿಳಿದುಕೊಳ್ಳಲು ಆರಂಭಿಸಿರುವುದರಿಂದ ಅವರೂ ಬಲಿಪಶುಗಳಾಗುತ್ತಿದ್ದಾರೆ” ಎಂದು ನ್ಯಾ. ಮಿತ್ತಲ್ ಈ ವರದಿಯಲ್ಲಿ ಹೇಳಿದ್ದಾರೆ. “ಗಾಝಿಪುರದಲ್ಲಿ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಮತ್ತು ಜೈಲ್ ವಾರ್ಡನ್ ಕೊಲೆಗಳು ಇದಕ್ಕೆ ಉದಾಹರಣೆ” ಎಂದು ಅವರು ಹೇಳಿದ್ದಾರೆ.

ಕರಡು ಮಸೂದೆಯನ್ನು ಸಿದ್ಧಪಡಿಸುವ ಮೊದಲು ಆಯೋಗವು ವಿವಿಧ ದೇಶಗಳು, ರಾಜ್ಯಗಳಲ್ಲಿರುವ ಕಾನೂನುಗಳು ಮತ್ತು ಸುಪ್ರೀಂಕೋರ್ಟ್ ನಿರ್ಧಾರಗಳನ್ನು ಅಧ್ಯಯನ ಮಾಡಿದೆ.

ಸೂಚಿತ ಶಿಕ್ಷೆಗಳು ಸಂಚು, ಇಂತಹ ಪ್ರಕರಣಗಳಲ್ಲಿ ನೆರವು ಮತ್ತು ಪ್ರಚೋದನೆ ಮಾತ್ರವಲ್ಲದೇ, ಕಾನೂನು ಪ್ರಕ್ರಿಯೆಗೆ ಅಡ್ಡಿಪಡಿಸುವ ಅಪರಾಧಗಳಿಗೂ ಇವೆ.

ಗುಂಪು ಹಲ್ಲೆಗಳನ್ನು ತಡೆಯುವ ಕ್ರಮಗಳು, ತಮ್ಮ ಕರ್ತವ್ಯ ನಿರ್ವಹಿಸಲು ಮತ್ತು ಗುಂಪು ಥಳಿತದ ಘಟನೆಗಳನ್ನು ತಡೆಯಲು ವಿಫಲರಾಗುವ ಸರಕಾರಿ ಅಧಿಕಾರಿಗಳ ವಿರುದ್ಧ ಕೈಗೊಳ್ಳಬೇಕಾದ ದಂಡನಾ ಕ್ರಮಗಳನ್ನು ಕೂಡಾ ಕರಡು ಮಸೂದೆಯಲ್ಲಿ ಸೂಚಿಸಲಾಗಿದೆ.

ವಿಚಾರಣಾ ಪ್ರಕ್ರಿಯೆಯನ್ನು ತ್ವರಿತಗಳಿಸಲು ಇಂತಹ ಪ್ರಕರಣಗಳನ್ನು ಗೊತ್ತುಪಡಿಸಿದ ನ್ಯಾಯಧೀಶರಿಗೆ ವಹಿಸಬೇಕು ಮತ್ತು ಅವರು ಆದ್ಯತೆಯ ಮೇಲೆ ವಿಚಾರಣೆ ನಡೆಸಬೇಕು ಎಂಬ ಸಲಹೆಯನ್ನೂ ವರದಿಯಲ್ಲಿ ನೀಡಲಾಗಿದೆ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...

ಕ್ಷೇತ್ರ ಮರುವಿಂಗಡನೆ : ಗೃಹ ಸಚಿವ ಅಮಿತ್ ಶಾ ಹೇಳಿದ್ದೆಲ್ಲವು ನಿಜವೇ?..ಇಲ್ಲಿದೆ ವಾಸ್ತವಾಂಶ

ದೇಶದ ಗೃಹ ಸಚಿವರು ಸಂಸತ್ತಿನಲ್ಲಿ ಪ್ರಮುಖ ಕಾನೂನಿನ ಬಗ್ಗೆ ವಿವರಿಸುವಾಗ ವಿಷಯ ಸ್ಪಷ್ಟವಾಗಿರಬೇಕು. ಆದರೆ, ಕ್ಷೇತ್ರ ಮರುವಿಂಗಡನೆ ಕುರಿತು ಗೃಹ ಸಚಿವ ಅಮಿತ್ ಶಾ ಮಾತನಾಡಿರುವುದು ಹಾಗಿರಲಿಲ್ಲ. ದಕ್ಷಿಣ ಭಾರತದ ರಾಜ್ಯಗಳು ತಮ್ಮ...

ಮಹಿಳಾ ಮೀಸಲು ಮಸೂದೆ 2023ರಲ್ಲೇ ಗೆದ್ದಿದೆ, ಈಗ ಸೋತಿರುವುದು ಮೋದಿ ಸರ್ಕಾರ

ಮೋದಿ ಸರ್ಕಾರ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾಗಿದೆ ಎಂಬುವುದು ದೇಶದಲ್ಲಿ ಪ್ರಸ್ತುತ ದೊಡ್ಡ ಚರ್ಚೆಯ ವಿಷಯವಾಗಿದೆ. ಕಾಂಗ್ರೆಸ್‌ ನೇತೃತ್ವದಲ್ಲಿ ವಿಪಕ್ಷಗಳು ಮಸೂದೆಯನ್ನು ಸೋಲಿಸುವ ಮೂಲಕ ದೇಶದ ಮಹಿಳೆಯರ ಸಬಲೀಕರಣಕ್ಕೆ...

ಕ್ಯಾಂಪಸ್ ಜಾತಿ ತಾರತಮ್ಯ ವಿರುದ್ಧದ ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ರಾಜ್ಯ ಸಚಿವ ಸಂಪುಟ ಗುರುವಾರ (ಏ.16) ರಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ'ಗೆ ಅನುಮೋದನೆ ನೀಡಿತು. ಜೊತೆಗೆ, ಪ್ರಮುಖ ಮೂಲಸೌಕರ್ಯ ಮತ್ತು...

ಮಧ್ಯಪ್ರದೇಶ| ವಂದೇ ಮಾತರಂ ಹಾಡಲು ನಿರಾಕರಣೆ; ಇಬ್ಬರು ಕಾಂಗ್ರೆಸ್ ಕೌನ್ಸಿಲರ್‌ಗಳ ವಿರುದ್ಧ ಎಫ್‌ಐಆರ್

ಏಪ್ರಿಲ್ 8 ರಂದು ಇಂದೋರ್ ಮುನ್ಸಿಪಲ್ ಕಾರ್ಪೊರೇಷನ್‌ನ ಬಜೆಟ್ ಅಧಿವೇಶನದಲ್ಲಿ ಧಾರ್ಮಿಕ ಮತ್ತು ಸಾಂವಿಧಾನಿಕ ಕಾರಣಗಳನ್ನು ಉಲ್ಲೇಖಿಸಿ ವಂದೇ ಮಾತರಂ ಹಾಡಲು ನಿರಾಕರಿಸಿದ್ದಕ್ಕಾಗಿ ಮಧ್ಯಪ್ರದೇಶ ಪೊಲೀಸರು ಇಬ್ಬರು ಕಾಂಗ್ರೆಸ್ ಕೌನ್ಸಿಲರ್‌ಗಳ ವಿರುದ್ಧ ಎಫ್‌ಐಆರ್...

ನ್ಯಾಯಾಂಗ ಸೇವೆಗಳು, ಸರ್ಕಾರಿ ಸಮಿತಿಗಳಲ್ಲಿ ಶೇ. 50 ಮಹಿಳಾ ಪ್ರಾತಿನಿಧ್ಯ ಕೋರಿ ಪಿಐಎಲ್ : ವಜಾಗೊಳಿಸಿದ ಸುಪ್ರೀಂ ಕೋರ್ಟ್

ಸರ್ಕಾರಿ ಸಮಿತಿಗಳು ಮತ್ತು ನ್ಯಾಯಾಂಗ ಸೇವೆಯ ಖಾಲಿ ಇರುವ ಸ್ಥಾನಗಳಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಪ್ರಾತಿನಿಧ್ಯ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ವಿಚಾರಣೆಗೆ ಸ್ವೀಕರಿಸಲು ಸುಪ್ರೀಂ ಕೋರ್ಟ್ ಗುರುವಾರ...

ರಷ್ಯಾ ತೈಲ ಖರೀದಿಸಲು ಭಾರತಕ್ಕೆ ನೀಡಿದ್ದ ಕಾಲಾವಕಾಶ ವಿಸ್ತರಿಸುವುದಿಲ್ಲ: ಅಮೆರಿಕ

ಇರಾನ್ ಮತ್ತು ರಷ್ಯಾದಿಂದ ತೈಲವನ್ನು ಖರೀದಿಸಲು ಭಾರತ ಸೇರಿದಂತೆ ವಿವಿಧ ದೇಶಗಳಿಗೆ ಈವರೆಗೆ ನೀಡಲಾಗಿದ್ದ ನಿರ್ಬಂಧ ಸಡಿಲಿಕೆಯನ್ನು ಇನ್ನು ಮುಂದೆ ಮುಂದುವರಿಸುವುದಿಲ್ಲ ಎಂದು ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಬುಧವಾರ (ಏ.15)...