Homeಮುಖಪುಟ‘ವಾಟ್ಸ್‌ಅಪ್‌‌ ಕಮ್ಯುನಿಟಿ’: ಈ ಹೊಸ ಫೀಚರ್‌‌ ಬಳಸುವುದು ಹೇಗೆ? ಏನಿದರ ವಿಶೇಷ?

‘ವಾಟ್ಸ್‌ಅಪ್‌‌ ಕಮ್ಯುನಿಟಿ’: ಈ ಹೊಸ ಫೀಚರ್‌‌ ಬಳಸುವುದು ಹೇಗೆ? ಏನಿದರ ವಿಶೇಷ?

- Advertisement -
- Advertisement -

ವಾಟ್ಸ್‌ ಅಪ್‌ ಬಳಕೆದಾರರು ಈಗಾಗಲೇ ತಮ್ಮ ಮೊಬೈಲ್‌ನಲ್ಲಿ ‘ವಾಟ್ಸ್‌ಅಪ್‌ ಕಮ್ಯುನಿಟಿ’ ಎಂಬ ಹೊಸ ಫೀಚರ್‌ ಗಮನಿಸಿರಬಹುದು ಅಥವಾ ‘ಅನೌನ್ಸ್‌ಮೆಂಟ್‌’ (ಘೋಷಣೆ) ಮಾಡುತ್ತಿರುವ ಚಿಹ್ನೆಯನ್ನು ಒಳಗೊಂಡ ಗ್ರೂಪೊಂದರಲ್ಲಿ ಯಾರೋ ಒಬ್ಬರು ಸಂದೇಶಗಳನ್ನು ಕಳುಹಿಸುತ್ತಿರುವುದನ್ನು ನೋಡುತ್ತಿರಬಹುದು. ಹೌದು ‘ವಾಟ್ಸ್‌ಅಪ್‌’, ‘ಫೇಸ್‌ಬುಕ್‌’ ಒಡೆತನವನ್ನು ಹೊಂದಿರುವ ‘ಮೆಟಾ’ ಸಂಸ್ಥೆ- ‘ವಾಟ್ಸ್‌ಅಪ್‌ ಕಮ್ಯುನಿಟಿ’ ಎಂಬ ಹೊಸ ಫೀಚರ್‌ಅನ್ನು ಬಳಕೆದಾರರಿಗೆ ಪರಿಚಯಿಸಿದೆ.

‘ವಾಟ್ಸ್‌ಅಪ್‌ ಕಮ್ಯುನಿಟಿ’ ಎಂಬುದು ವಾಟ್ಸ್‌ಅಪ್‌ ರೂಪಿಸಿರುವ ಹೊಸ ಪ್ರಯೋಗವಾಗಿದೆ. ಒಂದು ವಿಚಾರಕ್ಕೆ ಸಂಬಂಧಿಸಿದ ವಾಟ್ಸ್‌ಅಪ್‌ ಗುಂಪುಗಳನ್ನು ಒಗ್ಗೂಡಿಸಲು ಇದು ಸೂಕ್ತವಾಗಬಹುದು. ವಾಟ್ಸ್‌ಅಪ್‌ ಗ್ರೂಪ್‌ಗಳ ಸದಸ್ಯರೊಂದಿಗೆ ಅಡ್ಮಿನ್‌‌ ಸುಲಭವಾಗಿ ಸಂವಹಿಸಲು ಸಾಧ್ಯವಾಗುತ್ತದೆ. 20 ವಾಟ್ಸ್‌ಅಪ್‌ ಗ್ರೂಪ್‌ಗಳನ್ನು ಒಂದೇ ವೇದಿಕೆಯಡಿ ತರಬಹುದಾದ ಅವಕಾಶವೇ ‘ವಾಟ್ಸ್‌ಅಪ್‌ ಕಮ್ಯುನಿಟಿ’.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಗುಂಪುಗಳು ಮತ್ತು ಕಮ್ಯುನಿಟಿ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಅವುಗಳ ಗಾತ್ರ. ‘ಬೀಬಮ್‌’ ವೆಬ್‌ಸೈಟ್‌ ಪ್ರಕಾರ, “ಸದ್ಯಕ್ಕೆ ನೀವು ಒಂದು ವಾಟ್ಸ್‌ಅಪ್‌‌ ಗುಂಪಿಗೆ 512 ಮಂದಿಯನ್ನು ಆಹ್ವಾನಿಸಬಹುದು. ಆದಾಗ್ಯೂ ಈ ಮಿತಿಯನ್ನು ಮುಂಬರುವ ದಿನಗಳಲ್ಲಿ 1,024 ಮಂದಿಗೆ ಹೆಚ್ಚಿಸಲು ಸಾಧ್ಯತೆ ಇದೆ. ಮತ್ತೊಂದೆಡೆ, ಒಂದೇ ವಾಟ್ಸ್‌ಅಪ್‌ ಕಮ್ಯುನಿಟಿಯಲ್ಲಿ ಮುಂದಿನ ದಿನಗಳಲ್ಲಿ 21 ಗ್ರೂಪ್‌ಗಳನ್ನು ಸೇರಿಸಬಹುದು. ಲೆಕ್ಕ ಹಾಕಿದರೆ ಒಂದು ಕಮ್ಯುನಿಟಿಯಲ್ಲಿ 21,504 (21 x 1,024) ಬಳಕೆದಾರರು ಇರಲು ಸಾಧ್ಯವಾಗಬಹುದು.”

ಕಮ್ಯುನಿಟಿಯನ್ನು ರಚಿಸುವುದು ಹೇಗೆ?

ವಾಟ್ಸ್‌ಅಪ್‌ ಕಮ್ಯುನಿಟಿಯನ್ನು ರಚಿಸಲು, ಬಳಕೆದಾರರು ‘ಕಮ್ಯುನಿಟಿ’ ಟ್ಯಾಬ್ ಅನ್ನು ಕ್ಲಿಕ್ ಮಾಡಬೇಕು. (ಈ ಟ್ಯಾಬ್‌ ನಿಮ್ಮ ಮೊಬೈಲ್‌ನ ಎಡಭಾಗದ ಮೇಲ್ಭಾಗದಲ್ಲಿ ಇರುತ್ತದೆ.) ‘ನ್ಯೂ ಕಮ್ಯನಿಟಿ’ ಬಟನ್ ಅನ್ನು ಟ್ಯಾಪ್ ಮಾಡಬೇಕು. ನಿಮ್ಮ ಕಮ್ಯುನಿಟಿಯ ಪ್ರೊಫೈಲ್ ಚಿತ್ರ ಹಾಕಬಹುದು. ನಿಮ್ಮ ಕಮ್ಯುನಿಟಿಗೆ ಹೆಸರನ್ನು ನೀಡಬೇಕು. ಕಮ್ಯುನಿಟಿ ಡಿಸ್‌ಕ್ರಿಪ್ಶನ್‌ನಲ್ಲಿ ನೀವು ಮಾಡುತ್ತಿರುವ ಕಮ್ಯುನಿಟಿಯ ಗುರಿ, ಧ್ಯೇಯೋದ್ದೇಶವನ್ನು ಬರೆಯಬೇಕು. ನಂತರ ಬಾಣದ ಗುರುತನ್ನು ಕ್ಲಿಕ್‌ ಮಾಡಬೇಕು. ನಂತರ ಕಮ್ಯನಿಟಿ ವಿಂಡೋ ತೆರೆದುಕೊಳ್ಳುತ್ತದೆ. ಅಲ್ಲಿ ಹೊಸ ಗ್ರೂಪ್‌ಗಳನ್ನು ರಚಿಸಬಹುದು. ಅಥವಾ ಈಗಾಗಲೇ ನೀವು ಅಡ್ಮಿನ್ ಆಗಿರುವ ಗ್ರೂಪ್‌ಗಳನ್ನು ಅದರಲ್ಲಿ ಸೇರಿಸಬಹುದು. ಆನಂತರ ಕೆಳಗಿನ ರೈಟ್‌ ಬಟನ್‌ ಒತ್ತಿದರೆ ನಿಮ್ಮ ಕಮ್ಯುನಿಟಿ ಗ್ರೂಪ್ ರಚನೆಯಾಗುತ್ತದೆ. ಕಮ್ಯನಿಟಿ ಗ್ರೂಪ್ ರಚನೆಯಾದ ಬಳಿಕ ಅಲ್ಲಿ ನಿಮ್ಮ ಸಂದೇಶವನ್ನು ಹಾಕಬಹುದು ಅಂದರೆ ಕಮ್ಯುನಿಟಿ ಅಡ್ಮಿನ್‌ ತಮ್ಮ ಅನೌನ್ಸ್‌ಮೆಂಟ್‌ಗಳನ್ನು (ಘೋಷಣೆಗಳನ್ನು) ಕಳುಹಿಸಬಹುದು.

whatsapp, whatsapp communities, whatsapp tips and tricks,

ಅನೌನ್ಸ್‌ಮೆಂಟ್‌: ಕಮ್ಯುನಿಟಿ ಅಡ್ಮಿನ್‌ ಇಲ್ಲಿನ ಎಲ್ಲಾ ಪ್ರತ್ಯೇಕ ಗುಂಪುಗಳಿಗೆ ಸಂದೇಶ ಕಳುಹಿಸಬಹುದು. ಎಲ್ಲಾ ಗುಂಪಿನಲ್ಲಿರುವ ಎಲ್ಲ ಸದಸ್ಯರಿಗೆ ಏಕಕಾಲದಲ್ಲಿ ಸಂದೇಶ ಕಳುಹಿಸಲು ಸಾಧ್ಯವಾಗುತ್ತದೆ. ಮೀಡಿಯಾ ಫೈಲ್‌ಗಳು, ಡಾಕ್ಯುಮೆಂಟ್‌ಗಳು ಮತ್ತು ಧ್ವನಿ ಸಂದೇಶಗಳನ್ನು ರವಾನಿಸಬಹುದು. ಕಮ್ಯುನಿಟಿ ಗ್ರೂಪ್‌ಗಳು ಒಂದು ರೀತಿಯಲ್ಲಿ ಬ್ರಾಂಡ್‌ಕಾಸ್ಟ್‌ ರೀತಿಯಲ್ಲಿ ಕೆಲಸ ನಿರ್ವಹಿಸುತ್ತವೆ. ಒಬ್ಬ ವ್ಯಕ್ತಿಯು ಒಮ್ಮೆಲೇ ಹತ್ತಾರು ಜನಕ್ಕೆ ಸಂದೇಶ ಕಳುಹಿಸುತ್ತಿದ್ದ ರೀತಿಯಲ್ಲಿಯೇ ಒಬ್ಬ ಅಡ್ಮಿನ್ ಈಗ ಇಪ್ಪತ್ತು ಗ್ರೂಪ್‌ಗಳಲ್ಲಿನ ವಾಟ್ಸ್‌ಅಪ್‌ ಬಳಕೆದಾರರಿಗೆ ಒಮ್ಮೆಲೆ ಪ್ರತ್ಯೇಕ ಸಂದೇಶಗಳನ್ನು ಕಳಹಿಸಬಹುದಾಗಿದೆ. ಆದರೆ ಸಂದೇಶವು ನೀವು ರಚಿಸಿರುವ ಕಮ್ಯುನಿಟಿಯ ಹೆಸರಿನಲ್ಲಿ ರವಾನೆಯಾಗುತ್ತದೆ. ಉದಾಹರಣೆಗೆ- ನೀವು ‘ಸೆಕ್ಯುಲರ್‌’ ಎಂಬ ಕಮ್ಯುನಿಟಿಯನ್ನು ರಚಿಸಿ, ಇದೇ ಆಲೋಚನೆಯ 20 ಗುಂಪುಗಳನ್ನು ಸೇರಿಸಿದ್ದೀರಿ ಎಂದುಕೊಳ್ಳಿ. ಅಡ್ಮಿನ್ ಆದ ನೀವು ‘ಸೆಕ್ಯುಲರ್‌’ ಕಮ್ಯುನಿಟಿಯಲ್ಲಿ ಒಂದು ‘ಅನೌನ್ಸ್‌ಮೆಂಟ್‌’ (ಸಂದೇಶ) ಹಾಕಿದರೆ, ‘ಸೆಕ್ಯುಲರ್‌’ ಕಮ್ಯುನಿಟಿಯಲ್ಲಿರುವ ಪ್ರತಿ ಬಳಕೆದಾರನಿಗೆ ಪ್ರತ್ಯೇಕವಾಗಿ ಸಂದೇಶ ರವಾನೆಯಾಗುತ್ತದೆ. ಆದರೆ ನಿಮ್ಮ ಸಂದೇಶ, ನಿಮ್ಮ ‘ಸೆಕ್ಯುಲರ್‌’ ಕಮ್ಯುನಿಟಿಯಲ್ಲಿನ ಇಪ್ಪತ್ತು ಗ್ರೂಪ್‌ಗಳಿಗೆ ಪ್ರತ್ಯೇಕವಾಗಿ ರವಾನೆಯಾಗುವುದಿಲ್ಲ. ‘ಸೆಕ್ಯುಲರ್‌‌’ ಹೆಸರಿನ ‘ಕಮ್ಯುನಿಟಿ’ ಗ್ರೂಪ್‌ ಮೆಸೇಜ್‌ ಇದಾಗಿರುತ್ತದೆ.

ಸದಸ್ಯರನ್ನು ಆಹ್ವಾನಿಸಹುದು: ಅಡ್ಮಿನ್ ಆದವರು, ಇತರ ಜನರನ್ನು ಕಮ್ಯುನಿಟಿಗೆ ಸೇರಲು ಆಹ್ವಾನಿಸಹುದು. ಅದಕ್ಕಾಗಿ ನೀವು ಕಮ್ಯುನಿಟಿಯ ಲಿಂಕ್ ಅನ್ನು ಸಹ ಹಂಚಿಕೊಳ್ಳಬಹುದು. ಬಳಕೆದಾರರು ನಂತರ ಕಮ್ಯುನಿಟಿಯ ಭಾಗವಾಗಲು ಲಿಂಕ್ ಅನ್ನು ಅನುಸರಿಸಬಹುದು. ಆದರೆ ಕಮ್ಯುನಿಟಿಯಲ್ಲಿರುವ ಗ್ರೂಪ್‌ಗಳಲ್ಲಿ ಒಬ್ಬ ವ್ಯಕ್ತಿ ಸೇರಬೇಕೆಂದರೆ, ಆ ಗ್ರೂಪ್‌ನ ಅಡ್ಮಿನ್‌ಗೆ ರಿಕ್ವೆಸ್ಟ್‌ ಕಳುಹಿಸಬೇಕಾಗುತ್ತದೆ. ಗ್ರೂಪ್‌ಗಳ ಅಡ್ಮಿನ್‌ಗಳು ಅನುಮತಿಸಿದರೆ ಮಾತ್ರ ಗ್ರೂಪ್‌ನೊಳಗೆ ಪ್ರವೇಶಿಸಬಹುದು.

ಇದನ್ನೂ ಓದಿರಿ: ಮೋದಿ ಕಾರ್ಯಕ್ರಮಕ್ಕೆ ಕಾರ್ಮಿಕರನ್ನು ಕರೆತಂದು ಹಣ ಕೊಡದೆ ವಂಚನೆ; ಬಿಜೆಪಿ ಮುಖಂಡನ ವಿರುದ್ಧ ಪ್ರಕರಣ ದಾಖಲು

ಕಮ್ಯುನಿಟಿಗೆ ಸಂಬಂಧಪಡದವರು ಯಾರಾದರೂ ಇದ್ದರೆ ಅವರನ್ನು ಸುಲಭವಾಗಿ ರಿಮೂವ್‌ ಮಾಡಬಹುದು. ಕಮ್ಯುನಿಟಿಯಿಂದ ರಿಮೂವ್ ಮಾಡಿದರೂ ನಿರ್ದಿಷ್ಟ ಗ್ರೂಪ್‌ನಲ್ಲಿರುವ ಆ ವ್ಯಕ್ತಿ, ಆ ಗ್ರೂಪ್‌ನಲ್ಲಿ ಸದಸ್ಯನಾಗಿಯೇ ಇರುತ್ತಾನೆ. ಕಮ್ಯುನಿಟಿಯಿಂದ ನಿರ್ದಿಷ್ಟ ಬಳಕೆದಾರರನ್ನು ರಿಮೂವ್ ಮಾಡಲು ಕಮ್ಯುನಿಟಿಯ ಮುಖ್ಯ ಪುಟಕ್ಕೆ ಹೋಗಬೇಕು. ಸದಸ್ಯರ ಪಟ್ಟಿಯನ್ನು ವೀಕ್ಷಿಸಬೇಕು. ನೀವು ಎಲ್ಲಾ ಗುಂಪುಗಳ ಎಲ್ಲಾ ಸದಸ್ಯರ ಪಟ್ಟಿಯನ್ನು ಒಂದೇ ಕಡೆ ನೋಡುತ್ತೀರಿ. ಕಮ್ಯುನಿಟಿಯಿಂದ ನಿರ್ದಿಷ್ಟ ವ್ಯಕ್ತಿಯನ್ನು ತೆಗೆದುಹಾಕಬಹುದು. ಇಷ್ಟವಿಲ್ಲದವರು ಕಮ್ಯುನಿಟಿಯಿಂದ ಲೆಪ್ಟ್ ಕೂಡ ಆಗಲೂ ಅವಕಾಶವಿದೆ.

ವಾಟ್ಸ್‌ಅಪ್‌ನ ಈ ಪ್ರಯೋಗದಿಂದ ಸುಲಭವಾಗಿ ಸಾವಿರಾರು ಜನಕ್ಕೆ ಸಂದೇಶಗಳನ್ನು ಒಮ್ಮೆಲೆ ಕಳುಹಿಸಲು ಅವಕಾಶ ದೊರಕಿದೆ. ಇದನ್ನು ಸದುದ್ದೇಶಕ್ಕೆ ಬಳಸುವವರು ಇರುವಂತೆಯೇ ದುರುದ್ದೇಶಕ್ಕೆ ಬಳಸುವವರೂ ಇರುತ್ತಾರೆ. ಒಮ್ಮೆಲೇ ಫೇಕ್‌ನ್ಯೂಸ್‌ಗಳನ್ನು ಹರಡಲು ಅಥವಾ ಯಾವುದೋ ಒಂದು ಪಕ್ಷ, ಸಿದ್ಧಾಂತರ ಪರ- ವಿರುದ್ಧ ಪ್ರಚಾರ ಮಾಡಲು ಈ ‘ಕಮ್ಯನಿಟಿ’ ಫೀಚರ್‌ ಬಳಕೆಯಾಗುವ ಆತಂಕವಂತೂ ಇದ್ದೇ ಇದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...