Homeರಾಷ್ಟ್ರೀಯ‘ಅಂದು ಪ್ರಿಯಾಂಕ ಗಾಂಧಿ ದೇವತೆಯಂತಿದ್ದರು; ಅತ್ತು ಬಿಟ್ಟರು!’: ರಾಜೀವ್‌‌ ಗಾಂಧಿ ಹತ್ಯೆ ಅಪರಾಧಿ ನಳಿನಿ

‘ಅಂದು ಪ್ರಿಯಾಂಕ ಗಾಂಧಿ ದೇವತೆಯಂತಿದ್ದರು; ಅತ್ತು ಬಿಟ್ಟರು!’: ರಾಜೀವ್‌‌ ಗಾಂಧಿ ಹತ್ಯೆ ಅಪರಾಧಿ ನಳಿನಿ

ವೆಲ್ಲೂರು ಜೈಲಿನಲ್ಲಿ ನನ್ನನ್ನು ಭೇಟಿಯಾಗಿದ್ದು, ಮೂರು ದಶಕಗಳ ಸೆರೆವಾಸದಲ್ಲೆ ನಾನು ಎದುರಿಸಿದ ಅತ್ಯಂತ ಪ್ರಕ್ಷುಬ್ಧ ದಿನವಾಗಿದೆ ಎಂದು ಅವರು ಹೇಳಿದ್ದಾರೆ

- Advertisement -
- Advertisement -

“ರಾಜೀವ್‌ ಗಾಂಧಿಯವರ ಪುತ್ರಿ ಪ್ರಿಯಾಂಕಾ ಗಾಂಧಿ ಅವರು ವೆಲ್ಲೂರು ಜೈಲಿನಲ್ಲಿ ನನ್ನನ್ನು ಭೇಟಿಯಾಗಿದ್ದು, ಮೂರು ದಶಕಗಳ ಸೆರೆವಾಸದಲ್ಲೆ ನಾನು ಎದುರಿಸಿದ ಅತ್ಯಂತ ಪ್ರಕ್ಷುಬ್ಧ ದಿನವಾಗಿದೆ” ಎಂದು ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಪ್ರಮುಖ ಅಪರಾಧಿ ನಳಿನಿ ಶ್ರೀಹರನ್ ಹೇಳಿದ್ದಾರೆ. 1991ರ ರಾಜೀವ್‌‌‌‌‌ ಗಾಂಧಿ ಹತ್ಯೆ ಪ್ರಕರಣದ ಆರು ಅಪರಾಧಿಗಳೊಂದಿಗೆ ನಳಿನಿ ಶ್ರೀಹರನ್ ಅವರು ತಮಿಳುನಾಡು ಜೈಲಿನಿಂದ ಶನಿವಾರ ಸಂಜೆ ಬಿಡುಗಡೆಯಾಗಿದ್ದಾರೆ.

ಜೈಲಿನಿಂದ ಬಿಡುಗಡೆಯಾದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ನಳಿನಿ, ತನ್ನ ಪತಿ, ಸಹ ಅಪರಾಧಿ ಮುರುಗನ್ ಜೊತೆಗೆ ಇಂಗ್ಲೆಂಡ್‌ನಲ್ಲಿ ವಾಸಿಸುತ್ತಿರುವ ಮಗಳನ್ನು ಭೇಟಿಯಾಗುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಅವರು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಮೇ 1991 ರಲ್ಲಿ ರಾಜೀವ್ ಗಾಂಧಿ ಹತ್ಯೆ ಸ್ಫೋಟದ ಸಂತ್ರಸ್ತರಾದ ಗಾಂಧಿ ಕುಟುಂಬ ಮತ್ತು ಇತರ ಸಂತ್ರಸ್ತ ಕುಟುಂಬಗಳನ್ನು ಭೇಟಿಯಾಗುತ್ತೀರ ಎಂಬ ಪ್ರಶ್ನೆಗೆ ಉತ್ತರಿಸಿದ ನಳಿನಿ, “ಈ ಬಗ್ಗೆ ನನಗೆ ಮಾತುಗಳೆ ಹೊರಡುತ್ತಿಲ್ಲ. ರಾಜೀವ್ ಗಾಂಧಿ ಕುಟುಂಬವನ್ನು ಭೇಟಿಯಾಗಲು ಹಿಂಜರಿಕೆಯಿದೆ” ಎಂದು ನಳಿನಿ ಹೇಳಿದ್ದಾರೆ.

ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಗೆ ವಿರಾಮ: ಗುಜರಾತ್ ಚುನಾವಣಾ ಪ್ರಚಾರಕ್ಕೆ ರಾಹುಲ್ ಗಾಂಧಿ

“ಗಾಂಧಿ ಕುಟುಂಬ ತಮ್ಮ ಆತ್ಮೀಯ ವ್ಯಕ್ತಯಾದ ತಂದೆಯನ್ನು ಕಳೆದುಕೊಂಡಿತು. ನಾನು ಆ ಪ್ರಕರಣದಲ್ಲಿ ಭಾಗಿಯಾಗಿರುವ ವ್ಯಕ್ತಿ. ಅವರು ಈಗಲೂ ಆ ಅಪಾರವಾದ ನೋವನ್ನು ಅನುಭವಿಸುತ್ತಿರಬೇಕು. ಬಹುಶಃ, ಅವರು ಬಯಸಿದರೆ, ನಾನು ಅವರನ್ನು ಭೇಟಿ ಮಾಡುತ್ತೇನೆ” ಎಂದು ನಳಿನಿ ಹೇಳಿದ್ದಾರೆ.

ನಳಿನಿ ಅವರನ್ನು 2008ರಲ್ಲಿ ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿಯಾಗಲು ವೆಲ್ಲೂರು ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿದ್ದರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಇದು ನಂಬಲಸಾಧ್ಯ ಘಟನೆ. ನನ್ನನ್ನು ನಾನು ನಂಬುವಂತೆ ಆಗಲು ನಾನು ಪ್ರಿಯಾಂಕ ಗಾಂಧಿ ಅವರನ್ನು ಸ್ಪರ್ಶಿಸಬೇಕಾಗಿತ್ತು…” ಎಂದು ಹೇಳಿದ್ದಾರೆ.

“ಅಂದು ಅವರು ದೇವತೆಯಂತಿದ್ದರು… ನನಗೆ ಭಯವಾಯಿತು … ಅವರು ತನ್ನ ತಂದೆಯ ಹತ್ಯೆಯ ಬಗ್ಗೆ ನನ್ನನ್ನು ಕೇಳಲು ಬಯಸಿದ್ದರು. ಅವರು ಅಂದು ಅತ್ತರು. ನನಗೆ ತಿಳಿದಿದ್ದನ್ನೆಲ್ಲಾ ಅವರಿಗೆ ಹೇಳಿದೆ. ಅವರು ಹಿಂದಿರುಗಿದ ನಂತರ, ನಾನು ಗಾಬರಿಗೊಂಡು, ಅವರು ಸುರಕ್ಷಿತವಾಗಿ ದೆಹಲಿ ಹಿಂದಿರುಗಲು ಪ್ರಾರ್ಥಿಸಿ, ಉಪವಾಸ ಕೈಗೊಂಡೆ” ಎಂದು ನಳಿನಿ ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ: ಮೋದಿ ಕಾರ್ಯಕ್ರಮಕ್ಕೆ ಕಾರ್ಮಿಕರನ್ನು ಕರೆತಂದು ಹಣ ಕೊಡದೆ ವಂಚನೆ; ಬಿಜೆಪಿ ಮುಖಂಡನ ವಿರುದ್ಧ ಪ್ರಕರಣ ದಾಖಲು

ಸ್ಫೋಟದ ಇತರ ಸಂತ್ರಸ್ತರ ಬಗ್ಗೆ ಹೇಳಿದ ನಳಿನಿ, “ಅವರ ದುಃಖ ಮತ್ತು ನಷ್ಟವನ್ನು ಹಂಚಿಕೊಳ್ಳುತ್ತೇನೆ. ಅವರಿಗೆ ನಾನು ಏನು ಹೇಳಲಿ? ಅವರ ಬಗ್ಗೆ ನಾನು ಹೇಳಿಕೆ ಹೇಗೆ ಸಾಧ್ಯ? ನಾನು ನಿರಪರಾಧಿ ಎಂದು ಹೇಳಲು ಸಹ ನನಗೆ ಅವಕಾಶವಿಲ್ಲ… ಹಾಗಾದರೆ ಸಂತ್ರಸ್ತರ ಕುಟುಂಬಗಳಿಗೆ ನಾನು ಏನು ಹೇಳಲಿ?…” ಎಂದು ಅವರು ಪ್ರಶ್ನಿಸಿದ್ದಾರೆ.

ತಿರುಚ್ಚಿಯ ವಿಶೇಷ ನಿರಾಶ್ರಿತರ ಜೈಲು ಶಿಬಿರದಿಂದ ತಮ್ಮ ಪತಿ ಹಾಗೂ ಸಹ ಅಪರಾಧಿ ಆಗಿರುವ ಮುರುಗನ್‌ ಅವರ ಔಪಚಾರಿಕ ಬಿಡುಗಡೆ ಮಾಡಿದ ನಂತರ, ಗ್ರೀನ್ ಕಾರ್ಡ್ ಹೊಂದಿರುವ ತಮ್ಮ ಮಗಳ ಭೇಟಿಗೆ ಪಾಸ್‌ಪೋರ್ಟ್ ಮತ್ತು ವೀಸಾ ಪಡೆಯುವುದು ತನ್ನ ಮೊದಲ ಆದ್ಯತೆಯಾಗಿದೆ ಎಂದು ನಳಿನಿ ಹೇಳಿದ್ದಾರೆ.

“ಮಗಳು ಯುಕೆಯಲ್ಲಿ ವಾಸಿಸುತ್ತಿದ್ದಾರೆ. ಅದು ನನ್ನ ಮೊದಲ ಆದ್ಯತೆ. ನನ್ನ ಇಡೀ ಕುಟುಂಬ ನಾಶವಾಗಿದೆ…ನಾನು ಅವುಗಳನ್ನು ತುಂಡುಗಳಾಗಿ ಸಂಗ್ರಹಿಸಬೇಕು. ತುರ್ತು ಪಾಸ್‌ಪೋರ್ಟ್ ಮತ್ತು ದಾಖಲೆಗಳಿಗಾಗಿ ನಾವು ಶ್ರೀಲಂಕಾದ ಹೈಕಮಿಷನ್ ಅನ್ನು ಸಂಪರ್ಕಿಸುತ್ತೇವೆ. ಇದರಿಂದ ನಮ್ಮ ಮಗಳು ನಮ್ಮನ್ನು ಯುಕೆಗೆ ಕರೆದೊಯ್ಯಲು ಸಾಧ್ಯವಾಗಲಿದೆ” ಎಂದು ನಳಿನಿ ಹೇಳಿದ್ದಾರೆ.

ಇದನ್ನೂ ಓದಿ: EWS: ಆರ್ಥಿಕ ದುರ್ಬಲ ವರ್ಗದ ಹೆಸರಿನಲ್ಲಿ ಮೀಸಲಾತಿಯನ್ನೇ ದುರ್ಬಲಗೊಳಿಸುವ ಹುನ್ನಾರ

ಸ್ಪೋಟ ಪ್ರಕರಣದ ಆರು ಮಂದಿಯಲ್ಲಿ ನಾಲ್ವರು ಶ್ರೀಲಂಕಾ ಪ್ರಜೆಗಳಾಗಿದ್ದು, ಅವರಲ್ಲಿ ಒಬ್ಬರಾಗಿರುವ ಮುರುಗನ್ ಅವರನ್ನು 31 ವರ್ಷಗಳ ಸೆರೆವಾಸದ ನಂತರ ಔಪಚಾರಿಕವಾಗಿ ಬಿಡುಗಡೆ ಮಾಡಿ, ನಂತರ ಶನಿವಾರ ಸಂಜೆ ವೆಲ್ಲೂರು ಕೇಂದ್ರ ಕಾರಾಗೃಹದಿಂದ ತಿರುಚ್ಚಿ ಶಿಬಿರಕ್ಕೆ ಕರೆದೊಯ್ಯಲಾಯಿತು.

“ನನ್ನ ಬಂಧನದ ಮೊದಲ ದಿನದಿಂದಲೂ, ನಾನು ನನ್ನ ಬಿಡುಗಡೆಗಾಗಿ ಪ್ರಯತ್ನಿಸುತ್ತಿದ್ದೆ. ನಾನು ಅನೇಕ ಹಿನ್ನಡೆಗಳನ್ನು ಎದುರಿಸಿದ್ದೇನೆ. ನನ್ನ ಜೀವನವನ್ನು ಕೊನೆಗೊಳಿಸಬೇಕೆಂದು ನಾನು ಯೋಚಿಸಿದೆ…ಆದರೆ ಪ್ರತಿ ಬಾರಿಯೂ, ನಾನು ನನ್ನ ಪ್ರಯತ್ನಗಳನ್ನು ಹೊಸ ಹೆಜ್ಜೆಯಂತೆ ತೆಗೆದುಕೊಳ್ಳಲು ಪ್ರಯತ್ನಿಸಿದೆ” ಎಂದು ಅವರು ಹೇಳಿದ್ದಾರೆ.

2000 ರಲ್ಲಿ ಆಗಿನ ಗವರ್ನರ್ ಫಾತಿಮಾ ಬೀವಿ ಅವರು ರಾಜೀವ್ ಗಾಂಧಿಯವರ ಪತ್ನಿ ಸೋನಿಯಾ ಗಾಂಧಿ ಮಾಡಿದ ಮನವಿಯ ಮೇರೆಗೆ ನಳಿನಿ ಅವರ ಮರಣದಂಡನೆಯನ್ನು ಕಡಿಮೆಗೊಳಿಸಿದಾಗ ತಾನು ತುಂಬಾ ಸಂತೋಷವಾಗಿರಲಿಲ್ಲ ಎಂದು ಹೇಳಿದ್ದಾರೆ.

“ಯಾಕೆಂದರೆ ಮೂವರು ಇನ್ನೂ ಮರಣದಂಡನೆ ಶಿಕ್ಷೆಯಲ್ಲಿದ್ದರು. ಜೈಲಿನಲ್ಲಿರುವ ನಾವು ಎಲ್ಲಾ ಏಳು ಮಂದಿ ಅಪರಾಧಿಗಳು ಮೂವರು ಅಪರಾಧಿಗಳ ನ್ಯಾಯಕ್ಕಾಗಿ ಹೋರಾಡುತ್ತಿದ್ದೇವು” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಶಾಸಕ ಪ್ರಿಯಾಂಕ್‌ ಖರ್ಗೆಗೆ ಜೀವ ಬೆದರಿಕೆಯೊಡ್ಡಿ ಪರಾರಿಯಾಗಿದ್ದ ಬಿಜೆಪಿ ಮುಖಂಡನ ಬಂಧನ

ಮೂವರು ಅಪರಾಧಿಗಳ ಮರಣದಂಡನೆ ಶಿಕ್ಷೆಯನ್ನು ಜೀವಾವಧಿಗೆ ಪರಿವರ್ತಿಸಿದ 2014 ರ ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲೇಖಿಸಿದ ನಳಿನಿ, “ಅದು ನಾವು ನ್ಯಾಯಕ್ಕಾಗಿ ನಡೆಸುತ್ತಿದ್ದ ಹೋರಾಟ ಮತ್ತು ಬಿಡುಗಡೆಯ ಮಹತ್ವದ ಅಧ್ಯಾಯ” ಎಂದು ಹೇಳಿದ್ದಾರೆ.

“ಕಾನೂನು ಪ್ರಕ್ರಿಯೆಯು ಪ್ರತಿ ಹಂತದಲ್ಲೂ ಕೊನೆಗೊಳ್ಳುವುದಿಲ್ಲ. ನಮ್ಮ ಬಂಧನದ ನಂತರ, ವಿಚಾರಣೆಯನ್ನು ಪೂರ್ಣಗೊಳಿಸಲು ಏಳು ವರ್ಷಗಳು ತೆಗೆದುಕೊಂಡಿತು. 2014 ರ ಸುಪ್ರಿಂಕೋರ್ಟ್‌ ಆದೇಶದ ನಂತರ, ನಮ್ಮ ಬಿಡುಗಡೆಗೆ ಇನ್ನೂ ಎಂಟು ವರ್ಷಗಳು ಬೇಕಾಯಿತು…” ಎಂದು ಅವರು ಹೇಳಿದ್ದಾರೆ.

“ನಮಗೆ ಮರಣದಂಡನೆ ವಿಧಿಸುವ ಮುಂಚೆಯೇ, ನಾವೆಲ್ಲರೂ ಮರಣದಂಡನೆ ಕೈದಿಗಳಂತೆ ಪರಿಗಣಿಸಲ್ಪಟ್ಟಿದ್ದೇವೆ. ಏಕಾಂತ ಸೆರೆಮನೆಗಳಲ್ಲಿ ಇರಿಸಲ್ಪಟ್ಟಿದ್ದೇವೆ. ನಾನು ಗರ್ಭಿಣಿಯಾಗಿದ್ದಾಗ ನಡೆಯಲು ಅನುಮತಿ ಪಡೆಯಲು ವೈದ್ಯರು ಮಧ್ಯಪ್ರವೇಶಿಸಿದರು” ಎಂದು ಅವರು ನೆನಪಿಸಿಕೊಂಡಿದ್ದಾರೆ.

ತಮ್ಮನ್ನು ಬಿಡುಗಡೆ ಮಾಡಲು 2014 ರಲ್ಲಿ ವಿಧಾನಸಭೆ ನಿರ್ಣಯ ಮತ್ತು 2018 ರಲ್ಲಿ ಕ್ಯಾಬಿನೆಟ್ ಶಿಫಾರಸ್ಸು ಮಾಡಿದ ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಜೆ. ಜಯಲಲಿತಾ ಮತ್ತು ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರನ್ನು ನಳಿನಿ ಧನ್ಯವಾದ ಅರ್ಪಿಸಿದ್ದಾರೆ.

ಇದನ್ನೂ ಓದಿ: ಬೊಮ್ಮಾಯಿಯವರ ಕ್ರಿಯೆ-ಪ್ರತಿಕ್ರಿಯೆ ಹೇಳಿಕೆ ಕೊಲೆ ಬೆದರಿಕೆಯಾಗಿ ಪ್ರಕಟವಾಗುತ್ತಿದೆ: ಸಿದ್ದರಾಮಯ್ಯ

ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಅಧಿಕಾರ ವಹಿಸಿಕೊಂಡ ಮೊದಲ ದಿನದಿಂದಲೇ ತಮ್ಮ ಬಿಡುಗಡೆಗೆ ಶ್ರಮಿಸಿದ್ದಕ್ಕಾಗಿ ಅವರು ಧನ್ಯವಾದ ಅರ್ಪಿಸಿದ್ದಾರೆ. “ನಾನು ಡಿಎಂಕೆ ಸರ್ಕಾರದಿಂದ ಪೆರೋಲ್ ಪಡೆದಿದ್ದರಿಂದಲೆ ನನ್ನ ಬಿಡುಗಡೆಗಾಗಿ ಸುಪ್ರೀಂಕೋರ್ಟ್‌ನಲ್ಲಿ ಹೋರಾಡಲು ಸಾಧ್ಯವಾಯಿತು” ಎಂದು ಅವರು ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ತನ್ನ ಗಂಡನನ್ನು ಕೊಂದವರನ್ನೇ ಕ್ರಮಿಸಿದ ಸೋನಿಯಾ ಗಾಂಧಿಯವರ ವ್ಯಕ್ತಿತ್ವ ಬಹಳ ಉನ್ನತವಾದುದು.

LEAVE A REPLY

Please enter your comment!
Please enter your name here

- Advertisment -

Must Read

ಹೇಮಂತ್ ಕರ್ಕರೆ ಆರೆಸ್ಸೆಸ್‌ ನಂಟಿನ ಪೊಲೀಸ್ ಅಧಿಕಾರಿಯ ಗುಂಡಿಗೆ ಬಲಿಯಾಗಿದ್ದು: ವಿಜಯ್ ವಡೆಟ್ಟಿವಾರ್

0
2008ರ ಮುಂಬೈ ಭಯೋತ್ಪಾದಕ ದಾಳಿಯ ಸಮಯದಲ್ಲಿ ರಾಜ್ಯ ಭಯೋತ್ಪಾದನಾ ನಿಗ್ರಹ ದಳದ(ಎಟಿಎಸ್) ಮಾಜಿ ಮುಖ್ಯಸ್ಥ ಹೇಮಂತ್ ಕರ್ಕರೆ ಅವರನ್ನು ಹತ್ಯೆಗೈದಿದ್ದು ಭಯೋತ್ಪಾದಕ ಅಜ್ಮಲ್ ಅಮೀರ್ ಕಸಬ್ ಅಲ್ಲ, ಆರೆಸ್ಸೆಸ್‌ ಜೊತೆ ನಂಟು ಹೊಂದಿದ್ದ...