Homeಸಿನಿಮಾಕ್ರೀಡೆ2026ರ ಫಿಫಾ ವಿಶ್ವಕಪ್‌ಗೆ 48 ತಂಡಗಳು: ಭಾರತ ಫುಟ್ಬಾಲ್ ತಂಡ ಅರ್ಹತೆ ಪಡೆಯುವುದೆ?

2026ರ ಫಿಫಾ ವಿಶ್ವಕಪ್‌ಗೆ 48 ತಂಡಗಳು: ಭಾರತ ಫುಟ್ಬಾಲ್ ತಂಡ ಅರ್ಹತೆ ಪಡೆಯುವುದೆ?

1950ರಲ್ಲಿ ಬ್ರೆಜಿಲ್‌ನಲ್ಲಿ ನಡೆದ ವಿಶ್ವಕಪ್ ಪಂದ್ಯಾವಳಿಗೆ ಭಾರತ ತಂಡ ಅರ್ಹತೆ ಪಡೆದಿತ್ತು. ಆದರೆ ಕಾರಣಾಂತರಗಳಿಂದ ಟೂರ್ನಿಯಲ್ಲಿ ಭಾಗವಹಿಸಲಾಗಲಿಲ್ಲ.

- Advertisement -
- Advertisement -

ಕತಾರ್‌ನಲ್ಲಿ ನಡೆದ 2022ರ ಫಿಫಾ ವಿಶ್ವಕಪ್ ಮುಕ್ತಾಯಗೊಂಡಿದೆ. 34 ಲಕ್ಷ ಮಂದಿ ನೇರವಾಗಿ ಪಂದ್ಯಗಳನ್ನು ವೀಕ್ಷಿಸಿ ಕಣ್ತುಂಬಿಕೊಂಡರೆ ಕೋಟ್ಯಾಂತರ ಜನ ಟಿವಿ, ಮೊಬೈಲ್‌ಗಳಲ್ಲಿ ವೀಕ್ಷಿಸಿ ಸಂಭ್ರಮಿಸಿದರು. ಶ್ರೇಷ್ಠ ಆಟ ಪ್ರದರ್ಶಿಸಿದ ಅರ್ಜೆಂಟೀನಾ ತಂಡ ಚಾಂಪಿಯನ್ ಆದರೆ ದಿಟ್ಟ ಪ್ರತಿರೋಧ ತೋರಿದ ಫ್ರಾನ್ಸ್ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಈಗ ಎಲ್ಲರ ಕಣ್ಣು 2026ರ ಫಿಫಾ ವಿಶ್ವಕಪ್‌ನತ್ತ ಹೊರಳುತ್ತಿದೆ. ಆ ವಿಶ್ವಕಪ್‌ನಲ್ಲಿ 32 ತಂಡಗಳ ಬದಲಿಗೆ 48 ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ಭಾರತವು ಮುಂದಿನ ವಿಶ್ವಕಪ್‌ಗೆ ಅರ್ಹತೆ ಪಡೆಯುವುದೇ ಎಂಬ ಚರ್ಚೆಗಳು ಆರಂಭವಾಗಿವೆ.

ಭಾರತ ಫುಟ್ಬಾಲ್ ತಂಡವು ಒಲಿಂಪಿಕ್ಸ್‌ ಸೇರಿದಂತೆ ಇತರ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರೂ ಸಹ ಫಿಫಾ ವಿಶ್ವಕಪ್‌ನಲ್ಲಿ ಇದುವರೆಗೂ ಪಾಲ್ಗೊಂಡಿಲ್ಲ. 1950ರಲ್ಲಿ ಬ್ರೆಜಿಲ್‌ನಲ್ಲಿ ನಡೆದ ವಿಶ್ವಕಪ್ ಪಂದ್ಯಾವಳಿಗೆ ಭಾರತ ತಂಡ ಅರ್ಹತೆ ಪಡೆದಿತ್ತು. ಆದರೆ ಅಭ್ಯಾಸಕ್ಕೆ ಸಮಯವಿಲ್ಲದಿರುವುದು, ಶೂ ಹಾಕಿ ಆಡಿ ಅಭ್ಯಾಸವಿಲ್ಲದಿರುವುದು, ದುಬಾರಿ ಪ್ರಯಾಣ ವೆಚ್ಚ, ಒಲಿಂಪಿಕ್ಸ್‌ಗೆ ಹೆಚ್ಚಿನ ಮಹತ್ವ.. ಇತ್ಯಾದಿ ಕಾರಣಗಳಿಂದ ಆಗ ಭಾರತ ತಂಡ ಟೂರ್ನಿಯಿಂದ ಹಿಂದೆ ಸರಿಯಿತು. ಅಲ್ಲಿಂದ ಇಲ್ಲಿಯವರೆಗೂ ಅದು ಪ್ರಯತ್ನಿಸುತ್ತಿದ್ದರೂ ಸಹ ಕನಸು ಕೈಗೂಡಿಲ್ಲ. ಮುಂದಿನ ವಿಶ್ವಕಪ್‌ನಲ್ಲಿ ಸಾಧ್ಯತೆಯಂತೂ ಇದೆ. ಆದರೆ ಅದಕ್ಕೆ ಭಾರತದ ಸಂಘಟಿತ ಪ್ರದರ್ಶನ ಬೇಕಿದೆ.

ಆತಿಥ್ಯ ವಹಿಸಲಿರುವ ಮೂರು ದೇಶಗಳು

ಫಿಫಾ ವಿಶ್ವಕಪ್ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮೂರು ತಂಡಗಳು ಸೇರಿ 2026ರ ವಿಶ್ವಕಪ್ ಟೂರ್ನಿಯ ಆತಿಥ್ಯ ವಹಿಸುತ್ತಿವೆ. ಅಮೆರಿಕ, ಮೆಕ್ಸಿಕೊ ಮತ್ತು ಕೆನಡಾ ತಂಡಗಳು ಒಟ್ಟು ಸೇರಿ ಟೂರ್ನಿ ಸಂಘಟಿಸುತ್ತಿವೆ. ಮೊರಾಕ್ಕೊ ಸಹ ಆತಿಥ್ಯ ವಹಿಸಲು ಬಿಡ್ಡಿಂಗ್ ಮಾಡಿತ್ತು. ಆದರೆ ಈ ಮೂರು ತಂಡಗಳ ಒಕ್ಕೂಟ ಬಿಡ್ಡಿಂಗ್ ಗೆದ್ದುಕೊಂಡಿವೆ. 2026ರ ಜೂನ್-ಜುಲೈ ತಿಂಗಳಿನಲ್ಲಿ ಪಂದ್ಯಾವಳಿ ನಡೆಯಲಿದೆ.

48 ತಂಡಗಳ ನಡುವ ಕಾಲ್ಚೆಂಡಿನ ಕದನ

1930ರಲ್ಲಿ ಉದ್ಘಾಟನಾ ವಿಶ್ವಕಪ್ ಪಂದ್ಯಾವಳಿಯಲ್ಲಿ 13 ತಂಡಗಳು ಭಾಗವಹಿಸಿದ್ದವು. ಆನಂತರ 1934 ರಿಂದ 1978 ರವರೆಗೆ 16 ತಂಡಗಳು ಭಾಗವಹಿಸುತ್ತಿದ್ದವು. 1982 ರಲ್ಲಿ ತಂಡಗಳ ಸಂಖ್ಯೆಯನ್ನು 24 ಕ್ಕೆ ಹೆಚ್ಚಿಸಲಾಯಿತು. 1998 ರಲ್ಲಿ 32 ತಂಡಗಳಿಗೆ ಏರಿಸಲಾಗಿತ್ತು 2022ರವರೆಗೂ 32 ತಂಡಗಳು ಪ್ರಶಸ್ತಿಗಾಗಿ ಸೆಣಸುತ್ತಿದ್ದವು. 2026ರಿಂದ  48 ತಂಡಗಳಿಗೆ ವಿಸ್ತರಿಸಲು ಫಿಫಾ ಮುಂದಾಗಿದೆ. ಇದರಿಂದ ಆಫ್ರಿಕಾ ಮತ್ತು ಏಷ್ಯಾ ಖಂಡದ ಹೆಚ್ಚಿನ ರಾಷ್ಟ್ರಗಳು ಭಾಗವಹಿಸಲು ಅನುಕೂಲವಾಗುತ್ತದೆ. ಇನ್ನು ಮುಂದೆ ಆಫ್ರಿಕಾದ 5 ರಾಷ್ಟ್ರಗಳ ಬದಲಿಗೆ 9 ರಾಷ್ಟ್ರಗಳು ಮತ್ತು ಏಷ್ಯಾದ 4 ರಾಷ್ಟ್ರಗಳ ಬದಲಿಗೆ 8 ಅಥವಾ 9 ರಾಷ್ಟ್ರಗಳು ಅರ್ಹತೆ ಪಡೆಯಲಿವೆ.

ಫಾರ್ಮ್ಯಾಟ್

ಯಾವ ಮಾದರಿಯಲ್ಲಿ ಟೂರ್ನಿ ಆಡಿಲಾಗುತ್ತದೆ ಎಂದು ಇನ್ನೂ ತೀರ್ಮಾನವಾಗಿಲ್ಲ. ಆದರೆ ಕೆಲವು ವಿಧಾನಗಳನ್ನು ಚರ್ಚಿಸಲಾಗುತ್ತಿದೆ. ಅವುಗಳೆಂದರೆ

  1. 48 ತಂಡಗಳನ್ನು ತಲಾ ಮೂರು ತಂಡಗಳನ್ನೊಳಗೊಂಡ 16 ಗುಂಪುಗಳಾಗಿ ವಿಭಾಗಿಸುವುದು. ಗುಂಪು ಹಂತದಲ್ಲಿ ಪ್ರತಿ ಗುಂಪಿನಲ್ಲಿ ಒಂದು ತಂಡಕ್ಕೆ ಎರಡು ಪಂದ್ಯಗಳು ಸಿಗಲಿವೆ. ಪ್ರತಿ ಗುಂಪಿನಲ್ಲಿ ಮೊದಲ ಎರಡು ಸ್ಥಾನ ಪಡೆದ 32 ತಂಡಗಳು ನಾಕೌಟ್ ಹಂತ ತಲುಪುತ್ತವೆ. ಅಲ್ಲಿಂದ ಸತತ 4 ಪಂದ್ಯ ಗೆದ್ದ ಎರಡು ತಂಡಗಳು ಫೈನಲ್ ತಲುಪುತ್ತವೆ. ಆ ಎರಡು ತಂಡಗಳಿಗೆ ಫೈನಲ್ ಸೇರಿ ಒಟ್ಟು 7 ಪಂದ್ಯಗಳು ಸಿಗುತ್ತವೆ. (2022ರ ಫಿಫಾ ಕ್ರೀಡಾಕೂಟದಲ್ಲಿಯೂ ಫೈನಲ್ ತಲುಪಿದ್ದ ಅರ್ಜೇಂಟೀನಾ, ಫ್ರಾನ್ಸ್ ಮತ್ತು ಮೂರನೇ ಸ್ಥಾನಕ್ಕೆ ಸ್ಪರ್ಧಿಸಿದ್ದ ಕ್ರೊವೇಶಿಯಾ ಮತ್ತು ಮೊರಾಕ್ಕೊ ತಂಡಗಳು ತಲಾ 7 ಪಂದ್ಯಗಳನ್ನು ಆಡಿದ್ದವು) ಈ ವಿಧಾನ ಅಳವಡಿಸಿದ್ದಲ್ಲಿ ಒಟ್ಟು 80 ಪಂದ್ಯಗಳು ನಡೆಯಲಿವೆ. (2022ರಲ್ಲಿ 64 ಪಂದ್ಯಗಳು ನಡೆದಿವೆ.)

2. 48 ತಂಡಗಳನ್ನು ತಲಾ ನಾಲ್ಕು ತಂಡಗಳನ್ನೊಳ 12 ಗುಂಪುಗಳಾಗಿ ವಿಭಾಗಿಸುವುದು. ಗುಂಪು ಹಂತದಲ್ಲಿ ಪ್ರತಿ ಗುಂಪಿನಲ್ಲಿ ಒಂದು ತಂಡಕ್ಕೆ ಮೂರು ಪಂದ್ಯಗಳು ಸಿಗಲಿವೆ. ಪ್ರತಿ ಗುಂಪಿನಲ್ಲಿ ಮೊದಲ ಎರಡು ಸ್ಥಾನ ಪಡೆದ 24 ತಂಡಗಳು ನಾಕೌಟ್ ಹಂತ ತಲುಪುತ್ತವೆ. ಅಲ್ಲದೆ ಮೂರನೇ ಸ್ಥಾನ ಪಡೆದ ಬೆಸ್ಟ್ 8 ತಂಡಗಳು ಸಹ ನಾಕೌಟ್ ಪ್ರವೇಶಿಸ ಪಡೆಯುತ್ತವೆ. ಅಲ್ಲಿಂದ ಸತತ 4 ಪಂದ್ಯ ಗೆದ್ದ ಎರಡು ತಂಡಗಳು ಫೈನಲ್ ತಲುಪುತ್ತವೆ. ಆ ಎರಡು ತಂಡಗಳಿಗೆ ಫೈನಲ್ ಸೇರಿ ಒಟ್ಟು 8 ಪಂದ್ಯಗಳು ಸಿಗುತ್ತವೆ. ಈ ವಿಧಾನ ಅಳವಡಿಸಿದ್ದಲ್ಲಿ ಒಟ್ಟು 104 ಪಂದ್ಯಗಳು ನಡೆಯಲಿವೆ.

ಒಟ್ಟಿನಲ್ಲಿ 48 ತಂಡಗಳ ಸೇರ್ಪಡೆಯಿಂದ ಪ್ರಶಸ್ತಿ ಗೆಲ್ಲಬೇಕಾದರೆ ತಂಡವೊಂದು ನಾಕೌಟ್ ಹಂತದಲ್ಲಿ ಸತತ ಐದು ಪಂದ್ಯಗಳನ್ನು ಗೆಲ್ಲುವ ಅನಿವಾರ್ಯತೆಯಿದೆ. 2022ರ ಚಾಂಪಿಯನ್ ಅರ್ಜೆಂಟೀನಾ ನಾಕೌಟ್ ಹಂತದಿಂದ ಸತತ 4 ಪಂದ್ಯ ಗೆದ್ದು ಪ್ರಶಸ್ತಿ ಎತ್ತಿಹಿಡಿದಿದೆ.

ಭಾರತ ಅರ್ಹತೆ ಪಡೆಯುವುದೇ?

48 ತಂಡಗಳಲ್ಲಿ ಆತಿಥ್ಯ ವಹಿಸುತ್ತಿರುವ ಅಮೆರಿಕ, ಮೆಕ್ಸಿಕೊ ಮತ್ತು ಕೆನಡಾ ದೇಶಗಳು ಸಹಜವಾಗಿ ಅರ್ಹತೆ ಪಡೆಯುತ್ತವೆ. ಅಲ್ಲದೆ CONCACAF ಎಂದು ಕರೆಯಲ್ಪಡುವ ಆ ಭಾಗದ ಇನ್ನೂ ಮೂರು ದೇಶಗಳಿಗೆ ಸ್ಥಾನ ಲಭಿಸಲಿದೆ.

2022ರ ಕತಾರ್ ವಿಶ್ವಕಪ್ ಕ್ರೇಜ್ ಭಾರತದಲ್ಲಿ ದೊಡ್ಡ ಮೊಟ್ಟದಲ್ಲಿತ್ತು. ಕೇರಳ ಅತಿ ಹೆಚ್ಚಿನ ಭಾವುಕತೆ ಪ್ರದರ್ಶಿಸಿದರೆ ಉಳಿದ ರಾಜ್ಯಗಳ ಜನರು ಸಹ ತೀವ್ರ ಆಸಕ್ತಿಯಿಂದ ಫುಲ್ಟಾಲ್ ಪಂದ್ಯಗಳನ್ನು ನೋಡಿದರು. ಹಾಗಾಗಿ ಮುಂದಿನ ವಿಶ್ವಕಪ್ ವೇಳೆಗಾದರೂ ನಮ್ಮ ದೇಶ ಈ ಮಹತ್ವದ ಪಂದ್ಯಾವಳಿಯಲ್ಲಿ ಭಾಗವಹಿಸಲಿ ಎಂದು ಹಾರೈಸುತ್ತಿದ್ದಾರೆ.

ಏಷ್ಯಾ ಖಂಡದಿಂದ 8 ತಂಡಗಳು ಮತ್ತು 1 ತಂಡ ಇಂಟರ್ ಕಾನ್ಫಿಡರೇಷನ್ ಪ್ಲೇ ಆಫ್ ಮೂಲಕ ಒಟ್ಟು 9 ತಂಡಗಳು ಫಿಫಾ 2026ರಲ್ಲಿ ಭಾಗವಹಿಸುವ ಅವಕಾಶ ಹೊಂದಿವೆ. ಆ ತಂಡಗಳನ್ನು ಈ ಕೆಳಗಿನಂತೆ ಆಯ್ಕೆ ಮಾಡಲಾಗುತ್ತಿದೆ.

ಸದ್ಯಕ್ಕೆ ಏಷ್ಯನ್ ಫುಟ್ಬಾಲ್ ಕಾನ್ಫಿಡರೇಷನ್ (AFC) ಅಡಿಯಲ್ಲಿ 47 ತಂಡಗಳು ನೊಂದಾಯಿಸಿಕೊಂಡಿವೆ. ಫಿಫಾ ರ್ಯಾಂಕಿಂಗ್ ಆಧಾರದಲ್ಲಿ ಏಷ್ಯಾದ ತಂಡಗಳಿಗೂ ರ್ಯಾಂಕಿಂಗ್ ನೀಡಿ 1ರಿಂದ25ರ ವರೆಗೆಗಿನ ಒಂದು ಪಟ್ಟಿ ಮತ್ತು 26 ರಿಂದ 47 ರ್ಯಾಂಕಿಂಗ್‌ವರೆಗಿನ ಮತ್ತೊಂದು ಪಟ್ಟಿ ಮಾಡಿ ಎರಡು ಗುಂಪುಗಳನ್ನಾಗಿ ವಿಭಾಗಿಸಲಾಗುತ್ತದೆ. ಭಾರತವು ಸದ್ಯ ಫಿಫಾ ರ್ಯಾಂಕಿಂಗ್‌ನಲ್ಲಿ 106ನೇ ಸ್ಥಾನದಲ್ಲಿದ್ದು, ಏಷ್ಯಾದಲ್ಲಿ 19ನೇ ಸ್ಥಾನ ಪಡೆದು ಮೊದಲ ಪಟ್ಟಿಯಲ್ಲಿದೆ.

ಮೊದಲನೇ ಹಂತದಲ್ಲಿ 26 ರಿಂದ 47 ರ್ಯಾಂಕಿಂಗ್‌ವರೆಗಿನ 22 ತಂಡಗಳು ತಮ್ಮ ದೇಶ ಮತ್ತು ಹೊರಗೆ ಲೀಗ್‌ಗಳಲ್ಲಿ ಆಡಿ ಗೆದ್ದ 11 ತಂಡಗಳನ್ನು ಎರಡನೇ ಹಂತಕ್ಕೆ ಕಳಿಸಲಾಗುತ್ತದೆ.

ಎರಡನೇ ಹಂತದಲ್ಲಿ ಈ 11 ತಂಡಗಳು ಮತ್ತು 1ರಿಂದ 25ರ ಏಷ್ಯಾದ ರ್ಯಾಂಕಿಂಗ್ ಪಡೆದ 25 ತಂಡಗಳನ್ನು ಸೇರಿಸಿ 36 ತಂಡಗಳನ್ನು ತಲಾ 4 ತಂಡಗಳ 9 ಗುಂಪು ಮಾಡಲಾಗುತ್ತದೆ. ಗುಂಪಿನ ಪ್ರತಿ ತಂಡವು ತಲಾ 3 ಪಂದ್ಯಗಳನ್ನು ಆಡುತ್ತದೆ. ಪ್ರತಿ ಗುಂಪಿನಲ್ಲಿ ಮೊದಲ ಎರಡು ಸ್ಥಾನ ಪಡೆದ 18 ತಂಡಗಳು ಮೂರನೇ ಹಂತ ತಲುಪುತ್ತವೆ ಮತ್ತು AFC ಏಷ್ಯನ್ ಕಪ್‌ಗೆ ಅರ್ಹತೆ ಪಡೆಯುತ್ತವೆ.

ಮೂರನೇ ಹಂತದಲ್ಲಿ 18 ತಂಡಗಳನ್ನು ತಲಾ 6 ತಂಡಗಳ ಮೂರು ಗುಂಪುಗಳಾಗಿ ವಿಭಾಗಿಸಲಾಗುತ್ತದೆ. ಪ್ರತಿ ತಂಡವು ತಮ್ಮ ಗುಂಪಿನ ಇತರ ತಂಡಗಳೊಂದಿಗೆ 5 ಪಂದ್ಯಗಳನ್ನು ಆಡುತ್ತದೆ. ಪ್ರತಿ ಗುಂಪಿನಲ್ಲಿ ಮೊದಲ ಮತ್ತು ದ್ವಿತೀಯ ಸ್ಥಾನ ಪಡೆದ 6 ತಂಡಗಳು ಫಿಫಾ 2026ರ ಕ್ರೀಡಾಕೂಟಕ್ಕೆ ಅರ್ಹತೆ ಪಡೆಯುತ್ತವೆ. 3 ಮತ್ತು 4 ನೇ ಸ್ಥಾನ ಪಡೆದ 6 ತಂಡಗಳು ನಾಲ್ಕನೇ ಹಂತ ತಲುಪುತ್ತವೆ.

ನಾಲ್ಕನೇ ಹಂತದಲ್ಲಿ 6 ತಂಡಗಳನ್ನು ತಲಾ 3 ತಂಡಗಳ ಎರಡು ಗುಂಪು ಮಾಡಿ ಆಡಿಸಲಾಗುತ್ತದೆ. ಪ್ರತಿ ತಂಡಕ್ಕೂ 2 ಪಂದ್ಯ ಸಿಗುತ್ತವೆ. ಮೊದಲ ಸ್ಥಾನ ಪಡೆದ ಎರಡು ತಂಡಗಳು ಫಿಫಾ 2026ರ ಕ್ರೀಡಾಕೂಟಕ್ಕೆ ಅರ್ಹತೆ ಪಡೆಯುತ್ತವೆ. ಎರಡನೇ ಸ್ಥಾನ ಪಡೆದ 2 ತಂಡಗಳು ಐದನೇ ಹಂತ ಪ್ರವೇಶಿಸುತ್ತವೆ.

ಐದನೇ ಹಂತದಲ್ಲಿ ಎರಡು ತಂಡಗಳು ಇಂಟರ್-ಕಾನ್ಫೆಡರೇಶನ್ ಪ್ಲೇ-ಆಫ್‌ಗಳಲ್ಲಿ ಏಷ್ಯನ್ ಪ್ರಾತಿನಿಧ್ಯವನ್ನು ನಿರ್ಧರಿಸಲು ಪ್ಲೇ-ಆಫ್ ಟೈನಲ್ಲಿ ಸ್ಪರ್ಧಿಸುತ್ತವೆ. ಗೆದ್ದ ಒಂದು ತಂಡ ಫಿಫಾ 2026ರ ಕ್ರೀಡಾಕೂಟಕ್ಕೆ ಅರ್ಹತೆ ಪಡೆಯುತ್ತದೆ.

ಭಾರತ ತಂಡವು ಏಷ್ಯನ್ ರ್ಯಾಂಕಿಂಗ್‌ನಲ್ಲಿ 19ನೇ ಸ್ಥಾನದಲ್ಲಿದ್ದು ನೇರ ಎರಡನೇ ಹಂತಕ್ಕೆ ಪ್ರವೇಶ ಪಡೆದಿದೆ. ಆದರೆ ಅದು ಉತ್ತಮ ಪ್ರದರ್ಶನ ತೋರಿ ಗೆಲುವು ಪಡೆದರೆ 2026ರ ಫಿಫಾ ಟೂರ್ನಿಯಲ್ಲಿ ಕಾಣಬಹುದಾಗಿದೆ.

ಇದನ್ನೂ ಓದಿ: 2024ರ ಟಿ20 ವಿಶ್ವಕಪ್‌ಗೆ 20 ತಂಡಗಳು!: ಹೊಸ ಫಾರ್ಮ್ಯಾಟ್ ಘೋಷಿಸಿದ ಐಸಿಸಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನ್ಯಾಯಾಂಗದ ವಿರುದ್ಧ ಟೀಕೆ ಆರೋಪ: ಸಿಜೆಪಿ ವಕ್ತಾರ ಸೌರವ್ ದಾಸ್ ವಿರುದ್ಧ ತನಿಖೆಗೆ ಮದ್ರಾಸ್ ಹೈಕೋರ್ಟ್‌ನಲ್ಲಿ ಪಿಐಎಲ್

ಚೆನ್ನೈ: ಭಾರತದ ನ್ಯಾಯಾಂಗ, ಮುಖ್ಯ ನ್ಯಾಯಮೂರ್ತಿ ಮತ್ತು ಸುಪ್ರೀಂ ಕೋರ್ಟ್‌ನ ಇತರ ನ್ಯಾಯಮೂರ್ತಿಗಳ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ವಕ್ತಾರ ಸೌರವ್ ದಾಸ್...

ಕರ್ನಾಟಕ ಎಸ್‌ಐಆರ್: 192 ಕ್ಷೇತ್ರಗಳಲ್ಲಿ ಗೆಲುವಿನ ಅಂತರಕ್ಕಿಂತ ಹೆಚ್ಚು ಮತಗಳು ಡಿಲೀಟ್; 2028ಕ್ಕೆ ಯಾರಿಗೆ ಅಧಿಕಾರ?

ಜನಪರ ಸಂಘಟನೆಗಳು ಮತ್ತು ಜಾತ್ಯತೀತ ಪಕ್ಷಗಳ ವಿರೋಧ, ಆತಂಕ ಹಾಗೂ ಆರೋಪಗಳ ಹೊರತಾಗಿಯೂ ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ಮುಗಿದಿದೆ. 2026ರ ಅಕ್ಟೋಬರ್ 27ರಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಅವರು ಅಂತಿಮ ಮತದಾರರ...

ಸೌಜನ್ಯ ಪ್ರಕರಣ: ಎಸ್‌ಐಟಿ ಮುಖ್ಯಸ್ಥ ಸ್ಥಾನದಿಂದ ಶಶಿಕುಮಾರ್‌ಗೆ ಕೊಕ್; ಚೇತನ್ ಸಿಂಗ್ ರಾಥೋಡ್‌ಗೆ ತನಿಖೆಯ ಹೊಣೆ

ಮಂಗಳೂರು: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ರಚಿಸಲಾಗಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ನೇತೃತ್ವದಲ್ಲಿ ರಾಜ್ಯ ಸರ್ಕಾರ ಮಹತ್ವದ ಬದಲಾವಣೆ ಮಾಡಿದೆ. ಎಸ್‌ಐಟಿ ಮುಖ್ಯಸ್ಥರಾಗಿದ್ದ ಐಜಿಪಿ ಎನ್. ಶಶಿಕುಮಾರ್...

ಇಸ್ರೇಲ್ ಚುನಾವಣೆ: ನೆತನ್ಯಾಹು, ಐಸೆನ್‌ಕೋಟ್ ಬಣಗಳಿಗೆ ಬಹುಮತದ ಕೊರತೆ; ಸರ್ಕಾರ ರಚನೆಯಲ್ಲಿ ಅರಬ್ ಪಕ್ಷಗಳೇ ನಿರ್ಣಾಯಕ!

ಇಸ್ರೇಲ್‌ನ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಆಡಳಿತಾರೂಢ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಮಾಜಿ ಸೇನಾ ಮುಖ್ಯಸ್ಥ ಗಡಿ ಐಸೆನ್‌ಕೋಟ್ ನೇತೃತ್ವದ ವಿರೋಧ ಪಕ್ಷದ ಬಣಗಳೆರಡಕ್ಕೂ ಭಾರಿ ಸವಾಲು ತಂದೊಡ್ಡಿದೆ. 120 ಸದಸ್ಯ ಬಲದ...

ನ.1ರ ಇಂಡಿಯಾ ಒಕ್ಕೂಟದ ರ‍್ಯಾಲಿಗೆ ಬೆಂಬಲ ಘೋಷಿಸಿದ ‘ಪೀಪಲ್ ಅಗೆನ್ಸ್ಟ್ ಎಸ್‌ಐಆರ್’

ವಿರೋಧ ಪಕ್ಷಗಳ ಇಂಡಿಯಾ ಒಕ್ಕೂಟ ನವೆಂಬರ್ 1ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಸಲಿರುವ ಬೃಹತ್ ರ‍್ಯಾಲಿಗೆ ಪೀಪಲ್ ಅಗೆನೆಸ್ಟ್ ಎಸ್‌ಐಆರ್‌ ಬೆಂಬಲ ಘೋಷಿಸಿದೆ. ಪ್ರಜಾಪ್ರಭುತ್ವವನ್ನು ಉಳಿಸಲು, ಎಸ್‌ಐಆರ್ ರದ್ದುಗೊಳಿಸಲು, ಮುಖ್ಯ ಚುನಾವಣಾ ಆಯುಕ್ತ...

‘ನುಸುಳುಕೋರರನ್ನು’ ಹೊರಹಾಕಲು SIR ಎಂದಿತ್ತು ಬಿಜೆಪಿ ಮತ್ತು ಚು. ಆಯೋಗ : ಆರು ರಾಜ್ಯಗಳಲ್ಲಿ ಪತ್ತೆಯಾಗಿದ್ದು ಕೇವಲ 1,600 ವಿದೇಶಿಯರು ಮಾತ್ರ

'ನುಸುಳುಕೋರರನ್ನು' ಪತ್ತೆ ಹಚ್ಚುವುದು ಅಥವಾ 'ವಿದೇಶಿ ಅಕ್ರಮ ವಲಸಿಗರನ್ನು' ಪತ್ತೆ ಹಚ್ಚುವುದು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್) ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ ಎಂದು ಭಾರತೀಯ ಚುನಾವಣಾ ಆಯೋಗ (ಇಸಿಐ) ಹೇಳಿತ್ತು....

ಸಂತ್ರಸ್ತೆ ಮತ್ತು ಆರೋಪಿ ನಡುವಿನ ‘ಒಪ್ಪಂದ’ವನ್ನಷ್ಟೇ ಆಧರಿಸಿ ಅತ್ಯಾಚಾರ ಪ್ರಕರಣ ರದ್ದುಗೊಳಿಸಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಪಕ್ಷಕಾರರ (ಸಂತ್ರಸ್ತೆ ಮತ್ತು ಆರೋಪಿ) ನಡುವಿನ ರಾಜಿ ಸಂಧಾನದ ಆಧಾರದ ಮೇಲೆ ಅತ್ಯಾಚಾರ ಪ್ರಕರಣವನ್ನು ರದ್ದುಗೊಳಿಸಿದ್ದ ಮಧ್ಯಪ್ರದೇಶ ಹೈಕೋರ್ಟ್‌ನ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಕೇವಲ ಒಪ್ಪಂದದ ಆಧಾರದ ಮೇಲೆ ಗಂಭೀರ ಅಪರಾಧಗಳನ್ನು...

DELHI SIR : 2026ರ ಮತದಾರರ ಪಟ್ಟಿಯಲ್ಲಿದ್ದರೂ ಕೂಡ ಡಿಲಿಟೆಡ್ ವೋಟರ್ಸ್ ಫಾರಂ-6 ಸಲ್ಲಿಸುವಂತೆ ಸೂಚಿಸಿದ್ದು ಏಕೆ? ಚು. ಆಯೋಗಕ್ಕೆ ಸುಪ್ರೀಂ ಕೋರ್ಟ್ ಪ್ರಶ್ನೆ

ದೆಹಲಿಯ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್‌) ಸಂಬಂಧಿಸಿದಂತೆ, 2026ರ ಮತದಾರರ ಪಟ್ಟಿಯಲ್ಲಿದ್ದರೂ ಸಹ ಗಣತಿ ನಮೂನೆಗಳನ್ನು (enumeration forms) ಭರ್ತಿ ಮಾಡದ ಕಾರಣಕ್ಕಾಗಿ ಕರಡು ಪಟ್ಟಿಯಿಂದ ಹೆಸರನ್ನು ಕಳೆದುಕೊಂಡಿರುವ ವ್ಯಕ್ತಿಗಳು,...

ಮರ್ಯಾದೆಗೇಡು ಹತ್ಯೆ ಶಂಕೆ: ದಲಿತ ಯುವಕನನ್ನು ಇಟ್ಟಿಗೆಯಿಂದ ಹೊಡೆದು ಕೊಂದ ಪತ್ನಿಯ ಸಹೋದರ ಬಂಧನ

ಉತ್ತರ ಪ್ರದೇಶದ ಮುಜಫ್ಫರ್‌ನಗರ ಜಿಲ್ಲೆಯಲ್ಲಿ 23 ವರ್ಷದ ದಲಿತ ಯುವಕನನ್ನು ಇಟ್ಟಿಗೆಗಳಿಂದ ಹೊಡೆದು ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಇದು ಮರ್ಯಾದೆಗೇಡು ಹತ್ಯೆ ಶಂಕೆಗೆ ಕಾರಣವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನ ಪತ್ನಿಯ ಹಿರಿಯ...

Karnataka SIR | ಅಂತಿಮ ಮತದಾರರ ಪಟ್ಟಿಯನ್ನು ತಿರಸ್ಕರಿಸಿದ ಹೋರಾಟಗಾರರು : ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್‌ಗೆ ಬಹಿರಂಗ ಸವಾಲು

ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬಳಿಕ ಮಂಗಳವಾರ (ಅ.27) ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿರುವ ಅಂತಿಮ ಮತದಾರರ ಪಟ್ಟಿಯನ್ನು ಹೋರಾಟಗಾರರು ತಿರಸ್ಕರಿಸಿದ್ದು, ಹೋರಾಟ ಮುಂದುವರಿಸುವ ಘೋಷಣೆ ಮಾಡಿದ್ದಾರೆ. ಬುಧವಾರ (ಅ.28) ಬೆಂಗಳೂರಿನ ಶಾಸಕರ ಭವನದಲ್ಲಿ...