Homeಕವನಅನುವಾದಿತ ಕವನ; ನಿನ್ನ ಹಸಿವೆಯಿಂದ ಭಯಗೊಂಡಿದ್ದೇನೆ

ಅನುವಾದಿತ ಕವನ; ನಿನ್ನ ಹಸಿವೆಯಿಂದ ಭಯಗೊಂಡಿದ್ದೇನೆ

- Advertisement -
- Advertisement -

ನಾ ನಿನ್ನ ಊರಿನಿಂದ
ಮತ್ತು ನಿನ್ನ ಲೋಕದಿಂದ
ಪೂರಾ ಸೋತುಹೋಗಿದ್ದೇನೆ
ಅನಿಷ್ಟದ ನಗುವನ್ನು
ಕಿರೀಟದಂತೆ ಮುಡಿಸಿಕೊಂಡ
ನಿಮ್ಮ ಆತ್ಮದ ರೀತಿ ರಿವಾಜುಗಳು ಹೊಲಸು ನಾರುತ್ತಿವೆ
ಇನ್ನು ಸಹಿಸಲಾಗದು!

ನಿಮ್ಮ ತಕ್ಕಡಿಯಲ್ಲಿ ನಮ್ಮ ಬದುಕನ್ನಿಟ್ಟು
ಬರುಹೋಗುವ ಉಸಿರನ್ನು ನೋಡುವುದಕ್ಕೂ
ನಾಚಿಕೆಯಾಗುತ್ತದೆ.

ದೇವರು ನಿನ್ನದೇ ಕಲ್ಪನೆಯ ಕೆಟ್ಟ ಸೃಷ್ಟಿಯೆಂದು ಯಾರಿಗೆ ಗೊತ್ತಿಲ್ಲ
ಧರ್ಮವೆಂಬುದು ಸೃಷ್ಟಿಯ ಬಹುದೊಡ್ದ ಹಗರಣ
ಜಾತಿಯೆಂಬೊಂದು ಆಳ ಆಳದ ಬಾವಿ
ನೀರು ಎಲ್ಲಾ ವಿಕಾರವನ್ನು ಮುಚ್ಚಿಹಾಕಿದೆ..

ನಿಮ್ಮ ಕಲೆಯಿಂದ
ಮತ್ತು ನಿಮ್ಮ ವಿಜ್ಞಾನದಿಂದ ನಾನು
ವಿಪರೀತ ಬೇಸತ್ತು ಹೋಗಿದ್ದೇನೆ
ಇಲ್ಲಿ ರಕ್ತವನ್ನು ಉಗುಳು ಮತ್ತು
ಆಕ್ರಂದನವನು ದೇವಳದ ಭಜನೆ ನುಂಗಿಹಾಕಿದೆ
ಇಲ್ಲಿ ಸತ್ಯವನ್ನು ಸಂಸತ್ತಿನ ಟಾಯ್ಲೆಟ್ ಪೇಪರ್ ಮಾಡಿ
ನೇತುಹಾಕಲಾಗುತ್ತದೆ
ಮುಂಜಾನೆಯಿಂದ ಸಂಜೆವರೆಗೆ ಹೊಸಕಿಹೋದ ಜನರ ಕನಸುಗಳನ್ನು ಒರೆಸಲಾಗುತ್ತದೆ

ನಾನು ಶತಮಾನಗಳಿಂದ ಅನ್ನದ ಅಗುಳನ್ನೂ ಕಾಣದ
ಈ ದೇಶದ ಅನ್ನನಾಳದಿಂದ ಬಂದಿದ್ದೇನೆ
ನಿಮ್ಮ ಹಸಿವೆಯಿಂದ ನನಗೆ ಭಯವಾಗುತ್ತದೆ

ಕೆರೆ ಹಳ್ಳಗಳಿಗಾಗಿ
ನನ್ನನ್ನು ಬಿಟ್ಟುಬಿಡಿ
ಅಲ್ಲಿ ಕಪ್ಪೆ ಮೀನುಗಳು ನನಗಾಗಿ ಕಾಯುತ್ತಿರಬಹುದು
ಯಾರಾದರೂ ಜೀವದ ಗೆಳೆಯನೊಂದಿಗೆ
ಮಳೆಯನ್ನು ನನ್ನ ಅಂಗಿಯನ್ನಾಗಿಸಿ
ನನ್ನ ಕುರಿ ಆಡುಗಳು ನೆನೆಯುವ ಆ ದಿಕ್ಕಿನತ್ತ
ಈಜಲು ಹೋಗುವೆ
ಅಲ್ಲಿ ಯಾವುದಾದರೂ ಮಾವಿನ ಮರದ ಮೇಲೆ
ನನ್ನ ಎರಡೂ ಕೈಗಳು ಸಿಕ್ಕಿಕೊಂಡಿರಬೇಕು
ಮತ್ತು ಅಲ್ಲೇ ಎಲ್ಲೋ ಹತ್ತಿರದಲ್ಲಿ ಸಿಕ್ಕುಸಿಕ್ಕಾದ ನನ್ನ ಮೀನಿನ ಬಲೆ
ನನ್ನ ಬೆರಳುಗಳಿಗಾಗಿ ಕರೆಯುತ್ತಿರಬಹುದು

ಮುಕ್ತಿಬೋಧದ ಬಗ್ಗೆ ಯಾವ ಅಭಿಪ್ರಾಯವೂ ಇಲ್ಲ
ಮಾರ್ಕ್ಸ್ ನನಗೆ ಗುರುತಿಲ್ಲ
ಅಂಬೇಡ್ಕರ್ ಹೆಸರನ್ನೇ ಕೇಳಿರುವೆ ಮೊದಲಬಾರಿ
ಬಹುಶಃ ಅಜ್ಞೇಯನಾಗುವುದೆ ನಿಮ್ಮ ಸಂಸ್ಕೃತಿಯ ದೊಡ್ದ ಕೊಡುಗೆಯಿದ್ದೀತು
ಈಗ ನನ್ನನ್ನು ಹೋಗಲು ಬಿಡಿ

ಗಾಲಿಬನನ್ನು ನಾಲಿಗೆಯಲೂ ನೆನೆಯುವುದಿಲ್ಲ
ಜಯಸಿಯೇ ಯುದ್ಧದ ನಿರರ್ಥಕತೆಯನ್ನು ಸಾರಿದ ಮೊದಲ ಕವಿಯೆಂದು
ವಾದಿಸುವುದಿಲ್ಲ ನಾನು
ನನಗೆ ಹೋಗಲು ಬಿಡಿ

ನನ್ನನ್ನು ನೀವು ಪುಕ್ಕಲು ಎನ್ನಿ
ಪಲಾಯನವಾದಿ ಎನ್ನಿ
ಆದರೆ ಹೋಗಲು ಬಿಡಿ

ನಾನು ಹೋಗುವ ಅಜ್ಞಾತವಾಸದ ಅರ್ಥ
ಬಹುಶಃ ನಿಮಗೆ ಗೊತ್ತಿದ್ದೀತು ಅಥವಾ
ನಿಮಗೆಂದಿಗೂ ಗೊತ್ತಾಗದು
ತುದಿ ಮಣಿಸಿ ಬಾಗಿಸಿದ ಬಿದಿರ ಚಿಗುರು ಸಂಕಟದಲಿ
ನಡುಗಿದ್ದು
ಅದೇ ನನಗೆ ಹೇಳಿಕೊಟ್ಟಿದೆ
ಹೇಗೆ ವಿನಮ್ರತೆ ದೈನೇಸಿಯಾಗಿ ಬದಲಾಗುವ ಮೊದಲು
ಪ್ರತಿಭಟನೆಯಾಗಿ ಬದಲಾಗುವುದೇ
ಬದುಕಿನ ಸಾಕ್ಷಿಯಾಗಿದೆ..!

ಹಿಂದಿ ಮೂಲ: ಪರಾಗ್ ಪಾವನ್
ಕನ್ನಡಕ್ಕೆ: ರೇಣುಕಾ ನಿಡಗುಂದಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘NAZA’ಗೆ ವೆನಿಸ್ ವಿಶೇಷ ಜ್ಯೂರಿ ಪ್ರಶಸ್ತಿ; ಸ್ವದೇಶ ಇಸ್ರೇಲ್‌ನ ಎಐ ಹತ್ಯಾಕಾಂಡ ಬಯಲಿಗೆಳೆದ ನಿರ್ದೇಶಕರಿಗೆ ಪೌರತ್ವ ಕಸಿಯುವ ಬೆದರಿಕೆ

ವೆನಿಸ್ ಚಲನಚಿತ್ರೋತ್ಸವದಲ್ಲಿ ವಿಶೇಷ ಜ್ಯೂರಿ ಪ್ರಶಸ್ತಿ ಗೆದ್ದ ‘NAZA’ ಸಾಕ್ಷ್ಯಚಿತ್ರದ ನಿರ್ದೇಶಕರ ವಿರುದ್ಧ ಇಸ್ರೇಲಿ ಸಂಸ್ಕೃತಿ ಸಚಿವ ಮಿಕಿ ಜೋಹರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ‘ರಾಜ್ಯಕ್ಕೆ ದ್ರೋಹ’ ಎಸಗಿದ್ದಾರೆಂದು ಆರೋಪಿಸಿ ಅವರ ಇಸ್ರೇಲಿ...

ಕರ್ನಾಟಕದಲ್ಲಿ ಬರದ ಬರೆ; ನೀರು, ವಿದ್ಯುತ್‌ ಕೊರತೆ ಸಾಧ್ಯತೆ: ಸಿಎಂ ಡಿಕೆ ಶಿವಕುಮಾರ್‌ ಎಚ್ಚರಿಕೆ

ದುರ್ಬಲ ಮುಂಗಾರು ಹಾಗೂ ಮಳೆಯ ಕೊರತೆಯಿಂದ ಕರ್ನಾಟಕದಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯವು ಕುಡಿಯುವ ನೀರು ಮತ್ತು ವಿದ್ಯುತ್‌ ಕೊರತೆಯನ್ನು ಎದುರಿಸುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌...

2,000 ರೂ.ವರೆಗಿನ UPI ಪಾವತಿಗೆ ಶುಲ್ಕವಿಲ್ಲ ಎಂದ ಕೇಂದ್ರ ಸರ್ಕಾರ

ಡಿಜಿಟಲ್ ಪಾವತಿ ಬಳಸುವ ಕೋಟ್ಯಂತರ ಸಾಮಾನ್ಯ ಜನರಿಗೆ ಕೇಂದ್ರ ಹಣಕಾಸು ಸಚಿವಾಲಯ ಮಹತ್ವದ ಸ್ಪಷ್ಟನೆ ನೀಡಿದ್ದು, 2,000 ರೂಪಾಯಿವರೆಗಿನ ಯುಪಿಐ (UPI) ವಹಿವಾಟುಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವಂತಿಲ್ಲ ಎಂದು ಅಧಿಸೂಚನೆ ಹೊರಡಿಸಿದೆ....

ಯಾದಗಿರಿ| ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ

ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಸಮುದಾಯದ ಭಕ್ತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ಕೇಳಿಬಂದಿದೆ. ಚಾಮನಾಳ ಗ್ರಾಮದ ದಲಿತ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ...

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....