Homeಮುಖಪುಟಮಹಿಳೆಯರ ಕನಿಷ್ಠ ವಿವಾಹ ವಯಸ್ಸು ಹೆಚ್ಚಿಸಲು ಕೋರಿದ್ದ ಅರ್ಜಿ ವಜಾ; ಬಿಜೆಪಿ ನಾಯಕನಿಗೆ ಸುಪ್ರೀಂ ಛೀಮಾರಿ

ಮಹಿಳೆಯರ ಕನಿಷ್ಠ ವಿವಾಹ ವಯಸ್ಸು ಹೆಚ್ಚಿಸಲು ಕೋರಿದ್ದ ಅರ್ಜಿ ವಜಾ; ಬಿಜೆಪಿ ನಾಯಕನಿಗೆ ಸುಪ್ರೀಂ ಛೀಮಾರಿ

- Advertisement -
- Advertisement -

ಮಹಿಳೆಯರ ಕನಿಷ್ಠ ವಿವಾಹ ವಯಸ್ಸನ್ನು ಪುರುಷರಿಗೆ ಸಮಾನವಾಗಿ 18 ವರ್ಷದಿಂದ 21 ವರ್ಷಕ್ಕೆ ಹೆಚ್ಚಿಸುವಂತೆ ಕೋರಿ ಭಾರತೀಯ ಜನತಾ ಪಕ್ಷದ ನಾಯಕ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ ಎಂದು ಬಾರ್ ಮತ್ತು ಬೆಂಚ್ ವರದಿ ಮಾಡಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ಅರ್ಜಿದಾರ-ವಕೀಲ ಅಶ್ವಿನಿ ಉಪಾಧ್ಯಾಯ ಅವರನ್ನು ಉದ್ದೇಶಿಸಿ ಮಾತನಾಡಿದ್ದು, ”ನಾವು ಸಂವಿಧಾನದ ವಿಶೇಷ ಪಾಲಕರು ಎಂದು ಗ್ರಹಿಸಬಾರದು. ಸಂಸತ್ತು ಕೂಡ ಸಂವಿಧಾನದ ಪಾಲಕ. ಏಕರೂಪದ ಮದುವೆ ವಯಸ್ಸನ್ನು ಕಾನೂನು ತಿದ್ದುಪಡಿ ಮಾಡುವ ಮೂಲಕ ನಿಗದಿ ಮಾಡಬಹುದು. ಹಾಗೆ ಮಾಡುವ ಅಧಿಕಾರ ಸಂಸತ್ತಿಗೆ ಇರುತ್ತದೆ. ಸಂಸತ್ತು ಮಾತ್ರ ತಿದ್ದುಪಡಿ ಮತ್ತು ಶಾಸನವನ್ನು ಮಾಡಬಹುದಾದ ಕೆಲವು ವಿಷಯಗಳಿವೆ… ನಾವು ಇಲ್ಲಿ ಆ ಬಗ್ಗೆ ಕಾನೂನನ್ನು ಜಾರಿಗೊಳಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

”ವಿಶೇಷ ವಿವಾಹ ಕಾಯಿದೆ ಮತ್ತು ಬಾಲ್ಯವಿವಾಹ ನಿಷೇಧ ಕಾಯಿದೆಯಲ್ಲಿ ಕನಿಷ್ಠ ವಿವಾಹದ ವಯಸ್ಸು 18 ವರ್ಷಗಳು, ಆದರೆ ಷರಿಯಾ ಕಾನೂನು ಪ್ರೌಢಾವಸ್ಥೆಯ ವಯಸ್ಸನ್ನು ಮದುವೆಯ ವಯಸ್ಸಾಗಿ ಅನುಮತಿಸಿದ್ದಾರೆ. ಆದ್ದರಿಂದ ಮದುವೆಯ ಏಕರೂಪದ ವಯಸ್ಸು ಇರಬೇಕು” ಎಂದು ಉಪಾಧ್ಯಾಯ ಅವರು ಸೂಚಿಸಿದರು.

ಇದನ್ನೂ ಓದಿ: ಗೋಧ್ರಾ ರೈಲು ದಹಿಸಿದ ಅಪರಾಧಿಗಳ ಬಿಡುಗಡೆ ಅಸಾಧ್ಯ; ಸುಪ್ರೀಂನಲ್ಲಿ ಗುಜರಾತ್ ಸರ್ಕಾರ ಹೇಳಿಕೆ

”ಅರ್ಜಿದಾರರು ವಿವಾಹದ ಕನಿಷ್ಠ ವಯಸ್ಸನ್ನು 21 ವರ್ಷಕ್ಕೆ ಹೆಚ್ಚಿಸಲು ಶಾಸಕಾಂಗ ತಿದ್ದುಪಡಿಯನ್ನು ಬಯಸುತ್ತಾರೆ… ಆದರೆ, ಸಂವಿಧಾನದ ಪರಿಚ್ಛೇದ 32 (ರಿಟ್ ಅಧಿಕಾರ ವ್ಯಾಪ್ತಿ) ಅನ್ನು ಚಲಾಯಿಸುವ ಮೂಲಕ ನ್ಯಾಯಾಲಯವು, ಶಾಸನ ಮಾಡಲು ಸಂಸತ್ತಿಗೆ ಆದೇಶವನ್ನು ನೀಡುವಂತಿಲ್ಲ ಎಂಬುದು ನ್ಯಾಯಸಮ್ಮತ ಕಾನೂನು” ಎಂದು ಕೋರ್ಟ್ ಆದೇಶದಲ್ಲಿ ತಿಳಿಸಿದೆ.

“ನೀವು ಹೆಣ್ಣಿನ ಮದುವೆಯ ವಯಸ್ಸು 18 ವರ್ಷ ಎನ್ನುವುದನ್ನು ತಗೆದು ಹಾಕಿ, ಆಗ ಸ್ವಯಂಚಾಲಿತವಾಗಿ 21 ವರ್ಷವಾಗುತ್ತದೆ” ಎಂದು ಉಪಾಧ್ಯಾಯ ಹೇಳಿದರು.

ಅದಕ್ಕೆ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರು, ”ಆರ್ಟಿಕಲ್ 32ನ್ನು ಅಪಹಾಸ್ಯ ಮಾಡಬೇಡಿ” ಎಂದು ಅವರಿಗೆ ಹೇಳಿದರು.

ಇದರಿಂದ ಅಸಮಾಧಾನಗೊಂಡ ಉಪಾಧ್ಯಾಯ ಅವರು, ಈ ಪ್ರಕರಣವನ್ನು ದೆಹಲಿ ಹೈಕೋರ್ಟ್‌ನಿಂದ ಸುಪ್ರೀಂ ಕೋರ್ಟ್‌ಗೆ ವರ್ಗಾಯಿಸಿದೆ ಮತ್ತು ಈಗ ಅದನ್ನು ನೀವು ವಜಾಗೊಳಿಸುತ್ತಿದ್ದೀರಿ ಎಂದರು.

ಅದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರು, ”ಸಂವಿಧಾನದ ಅಡಿಯಲ್ಲಿ ನಮ್ಮ ಕರ್ತವ್ಯವನ್ನು ಮಾಡಲು ನಾವು ಇಲ್ಲಿದ್ದೇವೆ. ನಾವು ನಿಮ್ಮನ್ನು ಮೆಚ್ಚಿಸಲು ಬಂದಿಲ್ಲ ಅಥವಾ ಯಾವುದೇ ರಾಜಕೀಯ ಪಕ್ಷವನ್ನು ಮೆಚ್ಚಿಸಲು ನಾವು ಇಲ್ಲಿ ಬಂದಿಲ್ಲ ದಯವಿಟ್ಟು ಅದನ್ನು ಅರ್ಥಮಾಡಿಕೊಳ್ಳಿ. ಆದ್ದರಿಂದ ನೀವು ನಮ್ಮ ಬಗ್ಗೆ ಏನು ಭಾವಿಸುತ್ತೀರಿ ಎಂಬುದರ ಕುರಿತು ಇಲ್ಲಿ ಹೇಳಬೇಡಿ. ಇದು ರಾಜಕೀಯ ವೇದಿಕೆಯಲ್ಲ” ಎಂದು ಬಿಜೆಪಿ ನಾಯಕನ ವಿರುದ್ಧ ವಾಗ್ದಾಳಿ ನಡೆಸಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ಯಾಲೆಸ್ತೀನ್‌ಗೆ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ನೀಡುವ ಪ್ರಯತ್ನ ಬೆಂಬಲಿಸಿದ ಭಾರತ

0
ವಿಶ್ವಸಂಸ್ಥೆಯ ಸಂಪೂರ್ಣ ಸದಸ್ಯತ್ವ ಪಡೆಯುವ ಪ್ಯಾಲೆಸ್ತೀನ್‌ನ ಮನವಿಯನ್ನು ಮರು ಪರಿಶೀಲಿಸಿ ಅನುಮೋದಿಸುವ ವಿಶ್ವಾಸವಿದೆ ಎಂದು ಭಾರತ ಬುಧವಾರ ಹೇಳಿದೆ. ಈ ಮೂಲಕ ಪ್ಯಾಲೆಸ್ತೀನ್‌ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ಪಡೆಯುವುದಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಇಸ್ರೇಲ್ ಮತ್ತು...