Homeಮುಖಪುಟಮೊರ್ಬಿ ಸೇತುವೆ ತಂತಿಗಳು ತುಕ್ಕು ಹಿಡಿದಿದ್ದವು; ಎಸ್‌ಐಟಿ ವರದಿ ಹೇಳಿದ್ದೇನು?

ಮೊರ್ಬಿ ಸೇತುವೆ ತಂತಿಗಳು ತುಕ್ಕು ಹಿಡಿದಿದ್ದವು; ಎಸ್‌ಐಟಿ ವರದಿ ಹೇಳಿದ್ದೇನು?

- Advertisement -
- Advertisement -

ಗುಜರಾತ್‌ನ ಮೊರ್ಬಿ ಸೇತುವೆಯ ಅರ್ಧದಷ್ಟು ತಂತಿಗಳು ತುಕ್ಕು ಹಿಡಿದಿದ್ದವು. ಹಳೆಯ ಸಸ್ಪೆಂಡರ್‌ಗಳನ್ನು ದುರಸ್ತಿ ವೇಳೆ ಹೊಸದರೊಂದಿಗೆ ಬೆಸುಗೆ ಹಾಕಲಾಗಿತ್ತು ಎಂದು ವಿಶೇಷ ತನಿಖಾ ತಂಡ (ಎಸ್‌ಐಟಿ) ತಿಳಿಸಿದೆ.

ಮೊರ್ಬಿ ಸೇತುವೆ ದುರಂತದ ಕುರಿತು ತನಿಖೆ ನಡೆಸಲು ಗುಜರಾತ್‌ ಸರ್ಕಾರ ನೇಮಿಸಿದ್ದ ಎಸ್‌ಐಟಿ, “ದುರಸ್ತಿಯಲ್ಲಿ ಆಗಿರುವ ಲೋಪದೋಷ”ಗಳನ್ನು ಪಟ್ಟಿ ಮಾಡಿದೆ.

ಮಚ್ಚು ನದಿಯ ಮೇಲಿನ ತೂಗು ಸೇತುವೆಯನ್ನು ಕಳೆದ ಅಕ್ಟೋಬರ್‌ನಲ್ಲಿ ದುರಸ್ತಿ ಮಾಡಲಾಗಿತ್ತು. ಆ ನಂತರ ಸಾರ್ವಜನಿಕರ ಬಳಕೆಗೆ ಅನುವು ಮಾಡಿಕೊಳ್ಳಲಾಗಿತ್ತು. ಸೇತುವೆಯನ್ನು ತೆರೆದ ನಾಲ್ಕು ದಿನಗಳ ನಂತರ ದುರಂತ ಘಟಿಸಿ, 141 ಜನರು ಸಾವನ್ನಪ್ಪಿಸಿದ್ದರು.

“ಮೊರ್ಬಿ ಸೇತುವೆ ಘಟನೆಯ ಪ್ರಾಥಮಿಕ ವರದಿ”ಯನ್ನು ಡಿಸೆಂಬರ್ 2022ರಲ್ಲಿ ಎಸ್‌ಐಟಿ ಸಲ್ಲಿಸಿದೆ. ಈ ವರದಿಯನ್ನು ಇತ್ತೀಚೆಗೆ ರಾಜ್ಯದ ನಗರಾಭಿವೃದ್ಧಿ ಇಲಾಖೆಯು ಮೊರ್ಬಿ ಪುರಸಭೆಯೊಂದಿಗೆ ಹಂಚಿಕೊಂಡಿದೆ.

ಐಎಎಸ್ ಅಧಿಕಾರಿ ರಾಜ್‌ಕುಮಾರ್ ಬೇನಿವಾಲ್, ಐಪಿಎಸ್ ಅಧಿಕಾರಿ ಸುಭಾಷ್ ತ್ರಿವೇದಿ, ರಾಜ್ಯ ರಸ್ತೆ ಮತ್ತು ಕಟ್ಟಡ ಇಲಾಖೆಯ ಕಾರ್ಯದರ್ಶಿ, ಮುಖ್ಯ ಎಂಜಿನಿಯರ್, ಸ್ಟ್ರಕ್ಚರಲ್ ಎಂಜಿನಿಯರಿಂಗ್ ಪ್ರಾಧ್ಯಾಪಕರು ಈ ಎಸ್‌ಐಟಿಯ ಸದಸ್ಯರಾಗಿದ್ದಾರೆ.

ಒರೆವಾ ಗ್ರೂಪ್ ನಡೆಸಿದ ದುರಸ್ತಿ ಕಾರ್ಯದಲ್ಲಿ ಗಂಭೀರ ಲೋಪಗಳಾಗಿರುವುದನ್ನು ಎಸ್‌ಐಟಿ ಪತ್ತೆ ಮಾಡಿದೆ. ಅಕ್ಟೋಬರ್ 30ರ ಸಂಜೆ ಕೇಬಲ್ ಕಟ್‌ ಆಗುವ ಮೊದಲೇ ಒಂದು ಕೇಬಲ್‌ ತುಕ್ಕು ಹಿಡಿದಿತ್ತು. ಅದರ ಅರ್ಧದಷ್ಟು ತಂತಿಗಳು ಈಗಾಗಲೇ ಮುರಿದಿದ್ದವು ಎಂದಿದೆ ವರದಿ.

ಪ್ರತಿಯೊಂದು ಕೇಬಲ್ ಅನ್ನು ಏಳು ಎಳೆಗಳಿಂದ ರಚಿಸಲಾಗಿದೆ, ಪ್ರತಿಯೊಂದೂ ಏಳು ಉಕ್ಕಿನ ತಂತಿಗಳನ್ನು ಒಳಗೊಂಡಿದೆ. ಈ ಕೇಬಲ್ ಅನ್ನು ರೂಪಿಸಲು ನಲವತ್ತೊಂಬತ್ತು ತಂತಿಗಳನ್ನು ಏಳು ಎಳೆಗಳಲ್ಲಿ ಒಟ್ಟಿಗೆ ಜೋಡಿಸಲಾಗಿದೆ ಎಂದು ಎಸ್‌ಐಟಿ ವರದಿ ತಿಳಿಸಿದೆ.

“49 ತಂತಿಗಳಲ್ಲಿ (ಆ ಕೇಬಲ್‌ನ) 22 ತಂತಿಗಳು ತುಕ್ಕು ಹಿಡಿದಿರುವುದನ್ನು ಗಮನಿಸಲಾಗಿದೆ. ಘಟನೆಯ ಮೊದಲೇ ಆ ತಂತಿಗಳು ಈಗಾಗಲೇ ಮುರಿದುಹೋಗಿರಬಹುದು. ಉಳಿದ 27 ತಂತಿಗಳು ಇತ್ತೀಚೆಗೆ ಮುರಿದು ಬಿದ್ದಿವೆ” ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ನವೀಕರಣ ಕಾರ್ಯದ ಸಮಯದಲ್ಲಿ, “ಹಳೆಯ ಸಸ್ಪೆಂಡರ್‌ಗಳನ್ನು (ಜನರು ನಡೆದಾಡುವ ಹಾಸಿಗೂ ಮೇಲಿನ ಕೇಬಲ್‌ಗೂ ಸಂಪರ್ಕ ಕಲ್ಪಿಸುವ ಸ್ಟೀಲ್ ರಾಡ್‌ಗಳು) ಹೊಸ ಸಸ್ಪೆಂಡರ್‌ಗಳೊಂದಿಗೆ ಬೆಸುಗೆ ಹಾಕಲಾಗಿದೆ” ಎಂದು ವರದಿ ಹೇಳಿದೆ. ಹಾಗಾಗಿ ಸಸ್ಪೆಂಡರ್‌ಗಳು ಬೇರೆಯ ರೀತಿಯಲ್ಲಿ ವರ್ತಿಸಲಾರಂಭಿಸಿವೆ. ಈ ರೀತಿಯ ಸೇತುವೆಗಳಲ್ಲಿ ಭಾರವನ್ನು ತಡೆಯಬೇಕಾದರೆ ಸಿಂಗಲ್ ರಾಡ್ ಸಸ್ಪೆಂಡರ್‌ಗಳನ್ನು ಬಳಸಬೇಕೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿ ಅಧಿಕಾರದಲ್ಲಿರುವ ಮೊರ್ಬಿ ಸ್ಥಳೀಯ ಸಂಸ್ಥೆಯು, ಒರೆವಾ ಗ್ರೂಪ್‌ಗೆ ನೀಡಲಾದ ಒಪ್ಪಂದದ ಕುರಿತು ಎರಡು ಪ್ರತ್ಯೇಕ ನಿರ್ಣಯಗಳನ್ನು ಈ ತಿಂಗಳ ಆರಂಭದಲ್ಲಿ ಅಂಗೀಕರಿಸಿತು. ಒಂದು ನಿರ್ಣಯವನ್ನು ಪೌರಕಾರ್ಮಿಕರ ಪದಾಧಿಕಾರಿಗಳು ಮಂಡಿಸಿದರೆ, ಮತ್ತೊಂದನ್ನು ಕೌನ್ಸಿಲರ್‌ಗಳು ಮಂಡಿಸಿದರು. ಒರೆವಾ ಗ್ರೂಪ್‌ಗೆ ನವೀಕರಣ ಗುತ್ತಿಗೆಯನ್ನು ನೀಡಿರುವ ಒಪ್ಪಂದದ ಬಗ್ಗೆ ನಮಗೆ ತಿಳಿದಿಲ್ಲ ಎಂದು ಎರಡೂ ಗುಂಪುಗಳು ಹೇಳಿಕೊಂಡಿವೆ.

ಮೊರ್ಬಿ ಸೇತುವೆಯನ್ನು ದುರಸ್ತಿ ಮಾಡುವ ಗುತ್ತಿಗೆಯನ್ನು ಒರೆವಾ ಗ್ರೂಪ್‌ಗೆ ಸ್ಥಳೀಯ ಪುರಸಭೆಯಿಂದ ಮಾರ್ಚ್ 2022 ರಲ್ಲಿ ನೀಡಲಾಗಿತ್ತು. ಒರೆವಾ ಸಂಸ್ಥೆಯೊಂದಿಗೆ ಎಂಒಯುಗೆ ಸಹಿ ಹಾಕಿದ ಮೊರ್ಬಿ ಪುರಸಭೆಯ ಮುಖ್ಯ ಅಧಿಕಾರಿ ಸಂದೀಪ್‌ಸಿನ್ಹ್ ಜಲಾ ಅವರನ್ನು ರಾಜ್ಯ ಸರ್ಕಾರ ಅಮಾನತುಗೊಳಿಸಿದೆ.

ಒರೆವಾ ಗ್ರೂಪ್ ತನ್ನ ಅನುಮತಿಯಿಲ್ಲದೆ ಸೇತುವೆಯನ್ನು ಮತ್ತೆ ತೆರೆದಿದೆ ಎಂದು ನಾಗರಿಕ ಸಂಸ್ಥೆ ಈಗ ಹೇಳಿಕೊಂಡಿದೆ.

ಇದನ್ನೂ ಓದಿರಿ: ಮೊರ್ಬಿಗೆ ಭೇಟಿಗೆ 30 ಕೋಟಿ ರೂ ಖರ್ಚು ಟ್ವೀಟ್: ಟಿಎಂಸಿ ವಕ್ತಾರ ಸಾಕೇತ್ ಗೋಖಲೆ ಬಂಧನ

‌ಇದರ ನಡುವೆ ಸೇತುವೆ ಕುಸಿತ ಮತ್ತು ಅದರಿಂದ ಉಂಟಾದ ಅಪಾರ ಸಾವು ನೋವಿನ ಕುರಿತಾದ ಸ್ವಯಂ ಮೋಟೋ ಅರ್ಜಿಯ ವಿಚಾರಣೆಯನ್ನು ನಡೆಸುತ್ತಿರುವ ಗುಜರಾತ್ ಹೈಕೋರ್ಟ್, “ಮೊದಲು ಟೆಂಡರ್ ಕರೆಯದೆ ಒರೆವಾ ಗುಂಪಿಗೆ ಹೇಗೆ ಗುತ್ತಿಗೆ ನೀಡಲಾಯಿತು?” ಎಂದು ಮೊರ್ಬಿ ಪುರಸಭೆಗೆ ಪ್ರಶ್ನಿಸಿದೆ.

ಸೇತುವೆ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನ್ನ ಆರೋಪಪಟ್ಟಿಯನ್ನು ಜನವರಿ ಕೊನೆಯಲ್ಲಿ ಸಲ್ಲಿಸಿದರು. ಒರೆವಾ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಜಯಸುಖ್ ಪಟೇಲ್ ಮತ್ತು ಇತರ ಒಂಬತ್ತು ಜನರನ್ನು ಆರೋಪಿಗಳೆಂದು ಹೆಸರಿಸಲಾಗಿದೆ.

ದುರಸ್ತಿ ಕಾರ್ಯದಲ್ಲಿ ಆಗಿರುವ ಹಲವಾರು ಸಮಸ್ಯೆಗಳನ್ನು ಎಸ್‌ಐಟಿ ಕಂಡುಹಿಡಿದಿತ್ತು. ಸೇತುವೆಯ ಮೇಲಿನ ಚಲನವಲನವನ್ನು ನಿಯಂತ್ರಿಸದ ಕಾರಣ ಮತ್ತು ಸೇತುವೆಯ ನವೀಕರಣದಲ್ಲಿ ಹಲವಾರು ವಿನ್ಯಾಸ ದೋಷಗಳು ಕಂಡುಬಂದಿರುವುದರಿಂದ ಪುರಸಭೆಯನ್ನೂ ಎಸ್‌ಐಟಿ ಪ್ರಶ್ನಿಸಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸುಪ್ರೀಂ ಕೋರ್ಟ್ ನಿರ್ದೇಶನದ ಹೊರತಾಗಿಯೂ ಮುಂದುವರೆದ ಬುಲ್ಡೋಝರ್ ಅ’ನ್ಯಾಯ’ : ಯುಪಿ ಸರ್ಕಾರಕ್ಕೆ ಅಲಾಹಾಬಾದ್‌ ಹೈಕೋರ್ಟ್‌ ಛೀಮಾರಿ

ಉತ್ತರ ಪ್ರದೇಶದ ಸರ್ಕಾರದ "ಬುಲ್ಡೋಝರ್ ಅನ್ಯಾಯ" ವಿರುದ್ಧ ಸುಪ್ರೀಂ ಕೋರ್ಟ್ 2024ರ ನವೆಂಬರ್‌ನಲ್ಲಿ ಕಟ್ಟುನಿಟ್ಟಾದ ತೀರ್ಪು ನೀಡಿದ್ದರೂ, ದಂಡನಾತ್ಮಕ ಕ್ರಮವಾಗಿ ಕಟ್ಟಡಗಳನ್ನು ಉರುಳಿಸುವ ಪ್ರಕ್ರಿಯೆ ಇನ್ನೂ ಮುಂದುವರಿಯುತ್ತಿರುವುದರ ಬಗ್ಗೆ ಅಲಹಾಬಾದ್ ಹೈಕೋರ್ಟ್ ತೀವ್ರ...

‘ಕಾಶ್ಮೀರಿಗಳ ವಿರುದ್ಧ ಗುಂಪು ಹಿಂಸಾಚಾರಕ್ಕೆ ರಾಜ್ಯ ಸರ್ಕಾರ ಪ್ರೋತ್ಸಾಹಿಸುತ್ತಿದೆ’: ಮೆಹಬೂಬಾ ಮುಫ್ತಿ ಆರೋಪ

ಶ್ರೀನಗರ: ಕೇಂದ್ರಾಡಳಿತ ಪ್ರದೇಶದ ಹೊರಗೆ ಕಾಶ್ಮೀರಿಗಳ ವಿರುದ್ಧ ಗುಂಪು ಹಿಂಸಾಚಾರಕ್ಕೆ ರಾಜ್ಯ ಸರ್ಕಾರಗಳು ಪ್ರೋತ್ಸಾಹ ನೀಡುತ್ತಿರುವಂತೆ ಕಾಣುತ್ತಿದೆ, ಕಾನೂನಿನ ಆಡಳಿತವನ್ನು ದ್ವೇಷವು ಬದಲಾಯಿಸಲು ಅವಕಾಶ ನೀಡುತ್ತದೆ ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ...

ಭಾರತ-ಅಮೆರಿಕ ವ್ಯಾಪಾರ ಒಪ್ಪಂದ | ಒತ್ತಡಕ್ಕೆ ಮಣಿದು ಪ್ರಧಾನಿ ರಾಜಿ ಮಾಡಿಕೊಂಡಿದ್ದಾರೆ, ದೇಶವನ್ನು ಮಾರಿದ್ದಾರೆ : ರಾಹುಲ್ ಗಾಂಧಿ

ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಸಂಬಂಧ ಪ್ರಧಾನಿ ನರೇಂದ್ರ ಮೋದಿ ವಿರುದ್ದ ವಿಪಕ್ಷ ನಾಯಕ ರಾಹುಲ್ ಗಾಂಧಿ ಮಂಗಳವಾರ (ಫೆ.3) ತೀವ್ರ ವಾಗ್ದಾಳಿ ನಡೆಸಿದ್ದು, "ಪ್ರಧಾನಿ ರಾಜಿ ಮಾಡಿಕೊಂಡಿದ್ದಾರೆ, ದೇಶವನ್ನು ಮಾರಿದ್ದಾರೆ" ಎಂದು ಆರೋಪಿಸಿದರು. ಸಂಸತ್ತಿನ...

ಧರ್ಮಸ್ಥಳ ಪ್ರಕರಣದ ಚರ್ಚೆ ವೇಳೆ ಹಲ್ಲೆಗೆ ಯತ್ನ; ವಸಂತ್ ಗಿಳಿಯಾರ್, ಪುನೀತ್ ಕೆರೆಹಳ್ಳಿ, ಕಿರಿಕ್ ಕೀರ್ತಿ ವಿರುದ್ಧ ಎಫ್‌ಐಆರ್

2025ರ ಅಕ್ಟೋಬರ್‌ನಲ್ಲಿ ‘R.ಕನ್ನಡ’ ಸುದ್ದಿ ವಾಹಿನಿಯಲ್ಲಿ ಧರ್ಮಸ್ಥಳ ಪ್ರಕರಣ ಸಂಬಂಧ ನಡೆದಿದ್ದ ಚರ್ಚಾ ಕಾರ್ಯಕ್ರಮದ ವೇಳೆ ದಾಂಧಲೆ ನಡೆಸಿ, ಹಲ್ಲೆಗೆ ಯತ್ನಿಸಿದ್ದ ಹಿಂದುತ್ವ ಕೋಮುವಾದಿ ಕಾರ್ಯಕರ್ತ ವಸಂತ್ ಗಿಳಿಯಾರ್, ಪುನೀತ್ ಕೆರೆಹಳ್ಳಿ ಹಾಗೂ...

ಲೋಕಸಭೆಯಲ್ಲಿ ನರವಾಣೆ ಆತ್ಮಕಥೆ ಗದ್ದಲ : ವಿಪಕ್ಷಗಳ 8 ಮಂದಿ ಸಂಸದರು ಅಮಾನತು

ಮಾಜಿ ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರವಾಣೆ ಅವರ ಅಪ್ರಕಟಿತ ಆತ್ಮಕತೆಯ ವಿಚಾರ ಮಂಗಳವಾರ (ಫೆ.3) ಕೂಡ ಲೋಕಸಭೆಯಲ್ಲಿ ತೀವ್ರ ಗದ್ದಲಕ್ಕೆ ಕಾರಣವಾಯಿತು. ಪುಸ್ತಕದ ವಿಷಯಗಳನ್ನು ಪ್ರಸ್ತಾಪಿಸಲು ವಿರೋಧ ಪಕ್ಷದ ನಾಯಕ ರಾಹುಲ್...

ಮನ್ರೇಗಾ ಕಾರ್ಮಿಕರ ಮಹಾ ಪಂಚಾಯತ್ ರಾಷ್ಟ್ರಪತಿಗಳಿಗೆ ಬರೆದ ಮನ ಮುಟ್ಟುವ ಪತ್ರ

ಕೇಂದ್ರ ಸರ್ಕಾರ ವಿಬಿಜಿ- ರಾಮ್ ಜಿ 2025 ಕಾನೂನನ್ನು ವಾಪಸ್ ಪಡೆಯಬೇಕು ಹಾಗೂ ನರೇಗಾ ಯೋಜನೆಯನ್ನು ಮರು ಸ್ಥಾಪಿಸಬೇಕು ಎಂದು ಮನ್ರೇಗಾ ಕಾರ್ಮಿಕರ ಮಹಾ ಪಂಚಾಯತ್‌ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದೆ.  2026 ಫೆಬ್ರವರಿ...

ಗುಜರಾತ್‌| ಕುದುರೆ ಸವಾರಿ ಮಾಡಿದ ದಲಿತ ವರನ ಮೇಲೆ ಕತ್ತಿಯಿಂದ ಹಲ್ಲೆ

ಗುಜರಾತ್‌ನ ಪಠಾನ್ ಜಿಲ್ಲೆಯ ಗ್ರಾಮವೊಂದರಲ್ಲಿ, ಕುದುರೆ ಸವಾರಿ ಮಾಡಿದ ದಲಿತ ವರನ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ದಲಿತ ಸಮುದಾಯದ ಯುವಕ ವಿಶಾಲ್ ಚಾವ್ಡಾಗೆ ಮದುವೆಯ ಸಂತೋಷದ ದಿನವು ಜೀವನದ ದುಃಸ್ವಪ್ನವಾಗಿ...

ಗೃಹಲಕ್ಷ್ಮಿ ಯೋಜನೆಯಿಂದ 52 ಸಾವಿರಕ್ಕೂ ಹೆಚ್ಚಿನ ಮಹಿಳೆಯರು ಹೊರಕ್ಕೆ: ಆದಾಯ ತೆರಿಗೆ ಇಲಾಖೆ ದಾಖಲೆಗಳು ಕಾರಣ ಎಂದ ಲಕ್ಷ್ಮಿ ಹೆಬ್ಬಾಳ್ಕರ್

ಬೆಂಗಳೂರು: ರಾಜ್ಯಾದ್ಯಂತ 1.26 ಕೋಟಿ ಫಲಾನುಭವಿಗಳಲ್ಲಿ 52,000 ಕ್ಕೂ ಹೆಚ್ಚು ಮಹಿಳೆಯರನ್ನು ಗೃಹಲಕ್ಷ್ಮಿ ಯೋಜನೆಯಿಂದ ತೆಗೆದುಹಾಕಲಾಗಿದೆ, ಏಕೆಂದರೆ ಅವರು ಜಿಎಸ್ಟಿ ಅಥವಾ ಆದಾಯ ತೆರಿಗೆ ಇಲಾಖೆಗಳ ದಾಖಲೆಗಳಲ್ಲಿ ತೆರಿಗೆದಾರರಾಗಿದ್ದಾರೆ ಎಂದು ಮಹಿಳಾ ಮತ್ತು...

ವಿಬಿ-ಜಿ ರಾಮ್ ಜಿ ಕಾಯ್ದೆ ವಿರುದ್ಧ ವಿಧಾನಸಭೆಯಲ್ಲಿ ನಿರ್ಣಯ ಮಂಡನೆ

ಮನರೇಗಾ ಬದಲಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಬಿ-ಜಿ ರಾಮ್ ಜಿ ಕಾಯ್ದೆ ವಿರುದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ (ಫೆ.3) ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿದರು. ರಾಜ್ಯದ ಗ್ರಾಮೀಣ ಜನರ ಬದುಕಿನ ಹಕ್ಕನ್ನು ಕಾಪಾಡುವ ದೃಷ್ಟಿಯಿಂದ,...

‘ಖಾಸಗಿ ಮಾಹಿತಿಯ ಕಳ್ಳತನ’ : ವಿವಾದಾತ್ಮಕ ಗೌಪ್ಯತೆ ನೀತಿ ಸಂಬಂಧ ವಾಟ್ಸಾಪ್, ಮೆಟಾ ವಿರುದ್ಧ ಸುಪ್ರೀಂ ಕೋರ್ಟ್ ಕಿಡಿ

ನಾಗರಿಕರ ಗೌಪ್ಯತೆಯ ಹಕ್ಕನ್ನು ಉಲ್ಲಂಘಿಸಲಾಗಿದೆ ಎಂದು ಮಂಗಳವಾರ ಸುಪ್ರೀಂ ಕೋರ್ಟ್ ವಾಟ್ಸಾಪ್ ಮತ್ತು ಅದರ ಪೋಷಕ ಕಂಪನಿ ಮೆಟಾವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಡೇಟಾ ಹಂಚಿಕೆಯ ಹೆಸರಿನಲ್ಲಿ ಬಳಕೆದಾರರ ಖಾಸಗಿ ಡೇಟಾವನ್ನು ಬಳಸಿಕೊಳ್ಳಲು...