Homeದಲಿತ್ ಫೈಲ್ಸ್‘ಬಿಬಿಸಿಯಲ್ಲಿ ಜಾತಿ ತಾರತಮ್ಯ ಅನುಭವಿಸಿದೆ’; ನ್ಯೂಯಾರ್ಕ್ ಟೈಮ್ಸ್‌ನೊಂದಿಗೆ ನೋವು ಹಂಚಿಕೊಂಡ ದಲಿತ ಪತ್ರಕರ್ತೆ ಮೀನಾ

‘ಬಿಬಿಸಿಯಲ್ಲಿ ಜಾತಿ ತಾರತಮ್ಯ ಅನುಭವಿಸಿದೆ’; ನ್ಯೂಯಾರ್ಕ್ ಟೈಮ್ಸ್‌ನೊಂದಿಗೆ ನೋವು ಹಂಚಿಕೊಂಡ ದಲಿತ ಪತ್ರಕರ್ತೆ ಮೀನಾ

- Advertisement -
- Advertisement -

ಅಮೆರಿಕದ ಪ್ರಮುಖ ದಿನಪತ್ರಿಕೆಯಾದ ‘ದಿ ನ್ಯೂಯಾರ್ಕ್ ಟೈಮ್ಸ್’ ಇಂದು ಲೇಖನವೊಂದನ್ನು ಪ್ರಕಟಿಸಿದ್ದು, ದಲಿತ ಸಮುದಾಯಕ್ಕೆ ಸೇರಿದ ಪತ್ರಕರ್ತೆ ಮೀನಾ ಕೊತ್ವಾಲ್ ಅವರು ತಮಗಾದ ಜಾತಿ ತಾರತಮ್ಯಗಳನ್ನು ಹಂಚಿಕೊಂಡಿದ್ದಾರೆ.

ಕಟ್ಟಕಡೆಯ ಹಾಗೂ ಅಳಿವಿನಂಚಿನಲ್ಲಿರುವ ಸಮುದಾಯಗಳ ಕುರಿತು ‘ಮೂಕನಾಯಕ’ ಸುದ್ದಿವಾಹಿನಿಯನ್ನು ಆರಂಭಿಸಿರುವ ಅವರು, ‘ಬಿಬಿಸಿ ಇಂಡಿಯಾ ಮಾಧ್ಯಮದಲ್ಲಿ ಅನುಭವಿಸಿರುವ ಜಾತಿ ತಾರತಮ್ಯ’ದ ಕುರಿತು ಹೇಳಿಕೊಂಡಿದ್ದಾರೆ.

ಬಿಬಿಸಿ ಇಂಡಿಯಾದಲ್ಲಿ ಕೆಲಸದಲ್ಲಿದ್ದ ಸಂದರ್ಭದಲ್ಲಿ ಹೇಗೆ ಸಾರ್ವಜನಿಕ ಅವಮಾನ ಮತ್ತು ತಾರತಮ್ಯ ಎದುರಿಸಬೇಕಾಯಿತು ಎಂಬುದನ್ನು ಬಿಚ್ಚಿಟ್ಟಿದ್ದಾರೆ. 2017ರ ಸಂದರ್ಭದಲ್ಲಿ ಮೀನಾ ಅವರು ಬಿಬಿಸಿಯ ಹಿಂದಿ ಅವತರಣಿಕೆಯಲ್ಲಿ ಕೆಲಸ ಮಾಡುತ್ತಿದ್ದರು.

“ಸಹಿಗಳಿಗೆಯು ಹೆಚ್ಚು ಕಾಲ ಉಳಿಯಲಿಲ್ಲ. ಬಿಬಿಸಿಯಲ್ಲಿದ್ದ ಪ್ರಬಲ-ಜಾತಿ ಸಹೋದ್ಯೋಗಿ ನನ್ನ ಜಾತಿಯನ್ನು ಬಹಿರಂಗಪಡಿಸಬೇಕೆಂದು ಒತ್ತಾಯಿಸುತ್ತಿದ್ದರು. ನಂತರ ಸಹೋದ್ಯೋಗಿಗಳ ಗುಂಪಿನಿಂದ ಹೊರಹಾಕಲಾಯಿತು” ಎಂದು ಮೀನಾ ತಿಳಿಸಿರುವುದಾಗಿ ‘ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ.

ತಾವು ನೀಡಿದ ದೂರುಗಳನ್ನು ತನ್ನ ಮೇಲಧಿಕಾರಿಗಳು ಕಡೆಗಣಿಸಿದರು ಎಂದು ಮೀನಾ ಬಹಿರಂಗಪಡಿಸಿದ್ದಾರೆ. “ಎರಡು ವರ್ಷಗಳ ನಂತರ ಲಂಡನ್‌ನಲ್ಲಿನ ಬಿಬಿಸಿ ಅಧಿಕಾರಿಗಳಿಗೆ ಅಧಿಕೃತ ದೂರನ್ನು ಸಲ್ಲಿಸಲಾಯಿತು. ನಂತರದಲ್ಲಿ ನನ್ನೊಂದಿಗೆ ಒಪ್ಪಂದವನ್ನು ಮುಂದುವರಿಸಲಾಗಲಿಲ್ಲ. ದೂರನ್ನೂ ವಜಾಗೊಳಿಸಲಾಗಿತು” ಎಂದು ಮೀನಾ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಘಟನೆಯ ಕುರಿತು ಹೆಚ್ಚಿನ ಸ್ಪಷ್ಟೀಕರಣಕ್ಕಾಗಿ ನ್ಯೂಯಾರ್ಕ್ ಟೈಮ್ಸ್‌ ಮಾಧ್ಯಮವು ಬಿಬಿಸಿಯನ್ನು ಸಂಪರ್ಕಿಸಿದ್ದು, ಬಿಬಿಸಿ ಪ್ರಕರಣದ ವಿವರಗಳನ್ನು ನೀಡಲು ನಿರಾಕರಿಸಿದೆ ಎಂದು ವರದಿ ತಿಳಿಸಿದೆ.

“ಸಿಬ್ಬಂದಿಯ ವೈಯಕ್ತಿಕ ವಿಷಯಗಳನ್ನು ಚರ್ಚಿಸುವುದಿಲ್ಲ ಮತ್ತು ಭಾರತೀಯ ಕಾನೂನನ್ನು ಸಂಪೂರ್ಣವಾಗಿ ಅನುಸಲಾಗುತ್ತಿದೆ” ಎಂದೂ ಬಿಬಿಸಿ ಸ್ಪಷ್ಪಪಡಿಸಿದೆ. ಬಿಬಿಸಿಯ ಲಂಡನ್ ಮೂಲದ ವಕ್ತಾರರು ನ್ಯೂಯಾರ್ಕ್ ಟೈಮ್ಸ್‌ಗೆ ಹೇಳಿಕೆ ನೀಡಿದ್ದು, “ನಮ್ಮೊಂದಿಗೆ ಕೆಲಸ ಮಾಡುವ ಜನರು ವೈವಿಧ್ಯತೆಯಿಂದ ಕೂಡಿರಬೇಕೆಂಬ ದೃಷ್ಟಿಯಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸುತ್ತಿದ್ದೇವೆ” ಎಂದಿದ್ದಾರೆ.

“ಭಾರತದಲ್ಲಿ ದಲಿತರು ಮತ್ತು ಕಟ್ಟಕಡೆಯ ಎಲ್ಲ ಸಮುದಾಯಗಳ ಪ್ರಾತಿನಿಧ್ಯವು ಒಂದು ಸಮಸ್ಯೆಯಾಗಿಯೇ ಎಲ್ಲ ವೃತ್ತಿಗಳಲ್ಲೂ ಕಂಡುಬರುತ್ತಿದೆ. ಮಾಧ್ಯಮ ಕ್ಷೇತ್ರದಲ್ಲಂತೂ ಇದು ಅಕ್ಷರಶಃ ಸತ್ಯ. ಒಂದೇ ಹಿನ್ನೆಲೆಯವರನ್ನು ನೇಮಿಸಿಕೊಳ್ಳುವಲ್ಲಿ ಸವಲತ್ತುಳ್ಳ ಸಮುದಾಯಗಳ ಪ್ರಾಬಲ್ಯ ಹೆಚ್ಚಿದೆ. ದೇಶದ ಶೇ. 90ರಷ್ಟು ಮಾಧ್ಯಮಗಳಲ್ಲಿ ಪ್ರಬಲ ಜಾತಿಯವರೇ ತುಂಬಿಕೊಂಡಿದ್ದಾರೆ ಎಂದು ಸಮೀಕ್ಷೆಗಳು ಬಹಿರಂಗಪಡಿಸಿವೆ” ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

“ಭಾರತೀಯ ಮಾಧ್ಯಮಗಳಲ್ಲಿ ದಲಿತ ಪತ್ರಕರ್ತರು, ಬರಹಗಾರರ ಅನುಪಸ್ಥಿತಿ ಕಂಡು ಬಂದಿದೆ” ಎಂದು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹರೀಶ್ ವಾಂಖೆಡೆ (ಮಾಧ್ಯಮದಲ್ಲಿನ ಜಾತಿ ವ್ಯವಸ್ಥೆಯ ಕುರಿತ ಅಧ್ಯಯನಕಾರ) ತಿಳಿಸಿದ್ದಾರೆ.

ಇದನ್ನೂ ಓದಿರಿ: ಬಿಬಿಸಿ ಮೇಲೆ ಕೈ ಹಾಕಿದರೆ ಇಂದಿರಾ ಗಾಂಧಿಗೆ ಆದಂತೆ ಮೋದಿಜಿಗೂ ಆಗಲಿದೆ!

ಮೀನಾ ಅವರನ್ನು ಸೇರಿದಂತೆ ಕಟ್ಟಕಡೆಯ ಸಮುದಾಯಗಳಿಗೆ ಸೇರಿದ ಒಂದು ಡಜನ್‌ಗಿಂತಲೂ ಹೆಚ್ಚು ಪತ್ರಕರ್ತರನ್ನು ಸಂದರ್ಶಿಸಲಾಗಿದ್ದು, ಸಹೋದ್ಯೋಗಿಗಳಿಂದ ಅನುಭವಿಸಿರುವ ಕಿರುಕುಳವನ್ನು ಅವರೆಲ್ಲ ಬಿಚ್ಚಿಟ್ಟಿರುವುದಾಗಿ ನ್ಯೂಯಾರ್ಕ್ ಟೈಮ್ಸ್ ಹೇಳಿಕೊಂಡಿದೆ.

‘ಆಕ್ಸ್‌ಫ್ಯಾಮ್ ಇಂಡಿಯಾ-ನ್ಯೂಸ್‌ಲಾಂಡ್ರಿ’ ವರದಿ

“ನಮ್ಮ ಕಥೆಗಳನ್ನು ಯಾರು ಹೇಳುತ್ತಾರೆ ಎಂಬುದು ಮುಖ್ಯ: ಭಾರತೀಯ ಮಾಧ್ಯಮದಲ್ಲಿ ಅಂಚಿನಲ್ಲಿರುವ ಜಾತಿ ಗುಂಪುಗಳ ಪ್ರಾತಿನಿಧ್ಯ” ಎಂಬ ವಿಷಯದ ಕುರಿತು ಎರಡನೇ ಆವೃತ್ತಿಯ ವರದಿಯನ್ನು ‘ಆಕ್ಸ್‌ಫ್ಯಾಮ್ ಇಂಡಿಯಾ-ನ್ಯೂಸ್‌ಲಾಂಡ್ರಿ’ ಬಿಡುಗಡೆ ಮಾಡಿದ್ದು ಆತಂಕಕಾರಿ ಸಂಗತಿಗಳು ಹೊರಬಿದ್ದಿವೆ.

ಮುಖ್ಯವಾಹಿನಿ ಮುದ್ರಣ, ಟಿವಿ ಮತ್ತು ಡಿಜಿಟಲ್ ಮಾಧ್ಯಮಗಳಲ್ಲಿ ಸುಮಾರು 90 ಪ್ರತಿಶತ ನಾಯಕತ್ವ ಸ್ಥಾನಗಳನ್ನು ಪರಿಶಿಷ್ಟ ಜಾತಿಯಿಲ್ಲದ ಸಾಮಾನ್ಯ ಜಾತಿ ಗುಂಪುಗಳು ಆಕ್ರಮಿಸಿಕೊಂಡಿವೆ ಎಂದು ವರದಿಯು ಬಹಿರಂಗಪಡಿಸಿದೆ.

ದಕ್ಷಿಣ ಏಷ್ಯಾದ ಅತಿದೊಡ್ಡ ಸುದ್ದಿ ಮಾಧ್ಯಮ ವೇದಿಕೆಯಾದ ‘ದಿ ಮೀಡಿಯಾ ರಂಬಲ್‌’ನಲ್ಲಿ ಬಿಡುಗಡೆಯಾದ ವರದಿಯ ಪ್ರಕಾರ, “ಹಿಂದಿ ಮತ್ತು ಇಂಗ್ಲಿಷ್ ಪತ್ರಿಕೆಗಳಲ್ಲಿ ಪ್ರಕಟವಾಗುವ 5 ಲೇಖನಗಳಲ್ಲಿ 3 ಲೇಖನಗಳನ್ನು ಸಾಮಾನ್ಯ ಜಾತಿ ಲೇಖಕರು ಬರೆದರೆ, ಕಟ್ಟಕಡೆಯ ಜಾತಿಗಳು (SC, ST ಅಥವಾ OBC) ಕೇವಲ 1 ಲೇಖನವನ್ನಷ್ಟೇ ಬರೆಯುತ್ತಿವೆ.”

ಪತ್ರಿಕೆಗಳು, ಟಿವಿ ಸುದ್ದಿ ವಾಹಿನಿಗಳು, ಸುದ್ದಿ ವೆಬ್‌ಸೈಟ್‌ಗಳು, ನಿಯತಕಾಲಿಕೆಗಳು ಸೇರಿದಂತೆ 121 ಸುದ್ದಿಮನೆಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಇವುಗಳ ನಾಯಕತ್ವ ಸ್ಥಾನಗಳಲ್ಲಿ (ಸಂಪಾದಕ-ಮುಖ್ಯ, ವ್ಯವಸ್ಥಾಪಕ ಸಂಪಾದಕ, ಕಾರ್ಯನಿರ್ವಾಹಕ ಸಂಪಾದಕ, ಬ್ಯೂರೋ ಮುಖ್ಯಸ್ಥ, ಇನ್‌ಪುಟ್/ಔಟ್‌ಪುಟ್ ಸಂಪಾದಕ) 106 ಸಂಸ್ಥೆಗಳು ಬಲಾಢ್ಯ ಜಾತಿಗಳಿಂದ ಆಕ್ರಮಿಸಿಕೊಂಡಿವೆ.

ಐದು ಸಂಸ್ಥೆಗಳಲ್ಲಿ ಇತರೆ ಹಿಂದುಳಿದ ವರ್ಗಗಳು, ಆರರಲ್ಲಿ ಅಲ್ಪಸಂಖ್ಯಾತ ಸಮುದಾಯಗಳು ಇವೆ. ನಾಲ್ಕು ಸಂಸ್ಥೆಗಳ ಸ್ಥಿತಿ ಗುರುತಿಸಲಾಗಿಲ್ಲ. ಡಿಬೇಟ್‌ ನಡೆಸುವವರ ಪೈಕಿ ಪ್ರತಿ ನಾಲ್ಕು ಆಂಕರ್‌ಗಳಲ್ಲಿ ಮೂವರು ಮೇಲ್ಜಾತಿಯವರು. ಹಿಂದಿ ಚಾನೆಲ್‌ಗಳ ಒಟ್ಟು 40 ಮತ್ತು ಇಂಗ್ಲಿಷ್ ಚಾನೆಲ್‌ಗಳ 47 ಆಂಕರ್‌ಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಅವರಲ್ಲಿ ಒಬ್ಬರೂ ದಲಿತ, ಆದಿವಾಸಿ ಅಥವಾ ಒಬಿಸಿ ಇಲ್ಲ.

“ಸುದ್ದಿ ವಾಹಿನಿಗಳು ತಮ್ಮ ಪ್ರೈಮ್‌ಟೈಮ್ ಚರ್ಚಾ ಕಾರ್ಯಕ್ರಮಗಳಲ್ಲಿ ಶೇಕಡಾ 70ರಷ್ಟು ಮೇಲ್ಜಾತಿಗಳ ಪ್ಯಾನೆಲಿಸ್ಟ್‌ಗಳನ್ನು ಹೊಂದಿರುತ್ತವೆ. ಇಂಗ್ಲಿಷ್ ಪತ್ರಿಕೆಗಳಲ್ಲಿ ಪ್ರಕಟವಾಗುವ ಒಟ್ಟು ಲೇಖನಗಳಲ್ಲಿ ದಲಿತರು ಮತ್ತು ಆದಿವಾಸಿಗಳು ಶೇಕಡಾ 5ಕ್ಕಿಂತ ಹೆಚ್ಚು ಬರೆಯುವುದಿಲ್ಲ. ಹಿಂದಿ ಪತ್ರಿಕೆಗಳು ಸ್ವಲ್ಪ ಉತ್ತಮವಾಗಿವೆ. ಸುಮಾರು 10 ಪ್ರತಿಶತದಷ್ಟು ದಲಿತ ಲೇಖಕರು ಬರೆಯುತ್ತಾರೆ” ಎಂಬುದನ್ನು ವರದಿ ಉಲ್ಲೇಖಿಸಿದೆ.

ಸುದ್ದಿ ವೆಬ್‌ಸೈಟ್‌ಗಳಲ್ಲಿ 72 ಪ್ರತಿಶತ ಲೇಖನಗಳನ್ನು ಮೇಲ್ಜಾತಿ ಜನರು ಬರೆದಿದ್ದಾರೆ. ಅಧ್ಯಯನಕ್ಕೆ ಒಳಪಡಿಸಲಾದ 12 ನಿಯತಕಾಲಿಕೆಗಳ ಕವರ್ ಪೇಜ್‌ನಲ್ಲಿ ಬಂದ 972 ಲೇಖನಗಳಲ್ಲಿ 10 ಮಾತ್ರ ಜಾತಿಗೆ ಸಂಬಂಧಿಸಿದ ವಿಷಯಗಳಾಗಿದ್ದವು.

ಆಕ್ಸ್‌ಫ್ಯಾಮ್ ಇಂಡಿಯಾದ ಸಿಇಒ ಅಮಿತಾಭ್ ಬೆಹರ್, “ಮೂರು ವರ್ಷಗಳಲ್ಲಿ ನಮ್ಮ ಎರಡನೇ ವರದಿಯನ್ನು ಬಿಡುಗಡೆ ಮಾಡಿದ್ದೇವೆ. ಭಾರತದಲ್ಲಿನ ಸುದ್ದಿಮನೆಗಳು ಕಟ್ಟಕಡೆಯ ಸಮುದಾಯಗಳನ್ನು ಒಳಗೊಳ್ಳುತ್ತಿಲ್ಲ ಎಂಬುದನ್ನು ವರದಿ ತೋರಿಸುತ್ತಲೇ ಇದೆ. ಈ ಎಲ್ಲಾ ವೇದಿಕೆಗಳಲ್ಲಿ ದಲಿತರು, ಆದಿವಾಸಿಗಳು ಮತ್ತು ಬಹುಜನರಿಗೆ ಅನುಕೂಲಕರ ವಾತಾವರಣವನ್ನು ನಿರ್ಮಿಸುವಲ್ಲಿ ಮಾಧ್ಯಮ ಸಂಸ್ಥೆಗಳ ನಾಯಕರು ವಿಫಲರಾಗುತ್ತಿದ್ದಾರೆ” ಎಂದು ವಿಷಾದಿಸಿದ್ದಾರೆ.

ದೇಶದ ಮಾಧ್ಯಮಗಳು ಕೇವಲ ತನ್ನ ಸುದ್ದಿ ಪ್ರಸಾರವಷ್ಟೇ ಅಲ್ಲದೇ ನೇಮಕಾತಿ ಪದ್ಧತಿಯಲ್ಲೂ ಸಮಾನತೆಯ ಸಾಂವಿಧಾನಿಕ ತತ್ವವನ್ನು ಎತ್ತಿಹಿಡಿಯಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೂತುಕುಡಿ ಸಾತನ್‌ಕುಳಂ ತಂದೆ-ಮಗನ ಕಸ್ಟಡಿ ಸಾವು ಪ್ರಕರಣ : ಅಪರಾಧಿಗಳಾದ ಎಲ್ಲಾ 9 ಪೊಲೀಸರಿಗೆ ಮರಣದಂಡನೆ ವಿಧಿಸಿದ ನ್ಯಾಯಾಲಯ

ತಮಿಳುನಾಡಿನ ತೂತುಕುಡಿ ಜಿಲ್ಲೆಯ ಸಾತನ್‌ಕುಳಂ ಪೊಲೀಸ್ ಠಾಣೆಯಲ್ಲಿ ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಸಂಭವಿಸಿದ, ವ್ಯಾಪಾರಿ ಪಿ. ಜಯರಾಜ್ (58) ಮತ್ತು ಅವರ ಮಗ ಜೆ. ಬೆನಿಕ್ಸ್ (31) ಅವರ ಕಸ್ಟಡಿ ಸಾವು ಪ್ರಕರಣದ...

ದಾವಣಗೆರೆ ದಕ್ಷಿಣ ಉಪ-ಸಮರ: ಶಾಮನೂರು ಸಾಮ್ರಾಜ್ಯದಲ್ಲಿ ಅಹಿಂದ ಬಂಡಾಯ!

ತುಂಗಭದ್ರಾ ನದಿ ಪರ‍್ವಕ್ಕೆ ಎತ್ತರದ ಪ್ರದೇಶದಲ್ಲಿರುವ ದಾವಣಗೆರೆ ಮಧ್ಯ ಕರ್ನಾಟಕದ ಪ್ರಮುಖ ವಾಣಿಜ್ಯ ನಗರಿ. ಬೆಣ್ಣೆ ದೋಸೆಯ ಘಮಲಿನ ದಾವಣಗೆರೆಯ ರಾಜಕಾರಣ ಮಾತ್ರ ಮಿರ್ಚಿ-ಮಂಡಕ್ಕಿಯ ಖಡಕ್ ಖಾರಾ ಕುರುಕುಲಿನಂತೆ! ದಾವಣಗೆರೆ ಮತ್ತದರ ಸುತಮುತ್ತಲಿನ...

‘Dr. Nimo Yadav’, ‘Nehr Who’ ಎಕ್ಸ್‌ ಖಾತೆಗಳನ್ನು ತಕ್ಷಣ ಮರುಸ್ಥಾಪಿಸಲು ದೆಹಲಿ ಹೈಕೋರ್ಟ್ ಆದೇಶ

'Dr. Nimo Yadav' ಮತ್ತು 'Nehr Who' ಎಂಬ ಎರಡು ಪರೋಡಿ ಎಕ್ಸ್‌ ಖಾತೆಗಳನ್ನು ತಕ್ಷಣ ಮರು ಸ್ಥಾಪಿಸುವಂತೆ ದೆಹಲಿ ಹೈಕೋರ್ಟ್ ಸೋಮವಾರ (ಏ.6) ಎಕ್ಸ್ ಸಂಸ್ಥೆಗೆ (X Corp) ಆದೇಶಿಸಿದೆ. 'Dr....

ಬಂಗಾಳ| ಮತದಾರರ ಪಟ್ಟಿಯಿಂದ ಹೆಸರು ತೆಗೆದ ಬಳಿಕ ಸಾವಿಗೆ ಶರಣಾದ ಮುಸ್ಲಿಂ ವ್ಯಕ್ತಿ

ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ನಂತರ ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯಿಂದ ತನ್ನ ಹೆಸರನ್ನು ತೆಗೆದುಹಾಕಿದ್ದರಿಂದ ಮನನೊಂದ ಮುಸ್ಲಿಂ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಮೃತನನ್ನು ಬಿರ್ಭುಮ್...

‘ಯೋಜನೆಯು ಕೇರಳಕ್ಕೆ ಜೀವನಾಡಿಯಾಗಲಿದೆ’: ವಯನಾಡ್ ಸುರಂಗ ಮಾರ್ಗ ವಿರುದ್ದದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಕೇರಳದ ಕೋಝಿಕ್ಕೋಡ್-ವಯನಾಡ್ ಸುರಂಗ ಮಾರ್ಗ ನಿರ್ಮಾಣಕ್ಕೆ ನೀಡಲಾದ ಪರಿಸರ ಅನುಮತಿ (ಇಸಿ) ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ (ಏ.6) ವಜಾಗೊಳಿಸಿದೆ. ಸುರಂಗ ನಿರ್ಮಾಣದ ಸಮಯದಲ್ಲಿ ಪರಿಸರ ಅನುಮತಿಯ ಷರತ್ತುಗಳ ಉಲ್ಲಂಘನೆಯಾದರೆ, ಅರ್ಜಿದಾರರು...

651 ಕೋಟಿ ರೂ. ಮೌಲ್ಯದ ನಗದು, ಮದ್ಯ, ಮಾದಕ ವಸ್ತು ವಶಪಡಿಸಿಕೊಂಡ ಚುನಾವಣಾ ಆಯೋಗ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಅಧಿಕಾರಿಗಳು 651.51 ಕೋಟಿ ರೂ.ಗೂ ಹೆಚ್ಚು ಮೌಲ್ಯದ ನಗದು, ಮದ್ಯ, ಮಾದಕ ವಸ್ತುಗಳು ಮತ್ತು ಇತರ ಉಚಿತ ವಸ್ತುಗಳನ್ನು...

ಪೇರಳೆ ಹಣ್ಣು ಕದ್ದಿದ್ದಾಳೆಂದು ಆರೋಪಿಸಿ ಬಾಲಕಿಯನ್ನು ಸರಪಳಿಯಿಂದ ಕಟ್ಟಿ ಥಳಿಸಿದ ಮಾಜಿ ಸೇನಾಧಿಕಾರಿ

ಪೇರಳೆ ಹಣ್ಣು ಕದ್ದಿದ್ದಾಳೆಂದು ಆರೋಪಿಸಿ ನಾಲ್ಕು ವರ್ಷದ ಬಾಲಕಿಯನ್ನು ನಿವೃತ್ತ ಸೇನಾಧಿಕಾರಿಯೊಬ್ಬರು ಸರಪಳಿಯಿಂದ ಕಟ್ಟಿಹಾಕಿ ಕ್ರೂರವಾಗಿ ಥಳಿಸಿರುವ ಆಘಾತಕಾರಿ ಘಟನೆ ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ಬೆಹಡಾಲ ಗ್ರಾಮದಲ್ಲಿ ನಡೆದಿದೆ. ಬಾಲಕಿಯು ನಿವೃತ್ತ ಸೇನಾಧಿಕಾರಿಯ ತೋಟದ...

ಆಂಧ್ರ ವಿಧಾನಸಭಾ ಸ್ಪೀಕರ್ ಅಯ್ಯಣ್ಣ ಪಾತ್ರುಡು ಅವರಿಂದ ದಲಿತ ವ್ಯಕ್ತಿಗೆ ಕಪಾಳಮೋಕ್ಷ: ವೈಎಸ್‌ಆರ್‌ಸಿಪಿ ವಾಗ್ದಾಳಿ

ಏಪ್ರಿಲ್ 3 ರ ಗುರುವಾರ ನರಸಿಪಟ್ಟಣದಲ್ಲಿ ದಲಿತ ವ್ಯಕ್ತಿಯೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದಕ್ಕಾಗಿ ಆಂಧ್ರಪ್ರದೇಶ ವಿಧಾನಸಭಾ ಸ್ಪೀಕರ್ ಮತ್ತು ತೆಲುಗು ದೇಶಂ ಪಕ್ಷದ (ಟಿಡಿಪಿ) ನಾಯಕ ಅಯ್ಯಣ್ಣ ಪಾತ್ರುಡು ಅವರ ವಿರುದ್ಧ ವೈಎಸ್‌ಆರ್ ಕಾಂಗ್ರೆಸ್...

ಪ. ಬಂಗಾಳ | ಬಿಜೆಪಿ ಪ್ರಚಾರ ಸಾಮಗ್ರಿ ಸಜ್ಜುಗೊಳಿಸಿದ ವಿಡಿಯೋ ವೈರಲ್ : ಚುನಾವಣಾ ಕರ್ತವ್ಯದಲ್ಲಿದ್ದ ಅಧಿಕಾರಿ ಅಮಾನತು

ಬಿಜೆಪಿ ಪ್ರಚಾರ ಸಾಮಗ್ರಿಗಳನ್ನು ತಯಾರಿಸಲು ಸಹಾಯ ಮಾಡಿದ ಆರೋಪದ ಮೇಲೆ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಪಾಣಿಹಟಿ ವಿಧಾನಸಭಾ ಕ್ಷೇತ್ರದ ಅಧಿಕಾರಿಯೊಬ್ಬರನ್ನು ಚುನಾವಣಾ ಆಯೋಗ ಅಮಾನತುಗೊಳಿಸಿದೆ ಎಂದು ದಿ ಇಂಡಿಯನ್...

ಮುಸ್ಲಿಮರ ವಿರುದ್ಧ ದ್ವೇಷ ಕಾರುವ ಅಸ್ಸಾಂ ಸಿಎಂ ಪತ್ನಿ ಬಳಿ 2 ಮುಸ್ಲಿಂ ದೇಶಗಳ ಪಾಸ್‌ಪೋರ್ಟ್ ಇದೆ : ಕಾಂಗ್ರೆಸ್ ಆರೋಪ

ಮತದಾನಕ್ಕೆ ಇನ್ನೇನು ಮೂರು ದಿನಗಳು ಬಾಕಿ ಇರುವಾಗ, ಅಸ್ಸಾಂನಲ್ಲಿ ಕಾಂಗ್ರೆಸ್‌-ಬಿಜೆಪಿ ನಡುವೆ ವೈಯಕ್ತಿಕ ವಿಚಾರಗಳ ಕುರಿತ ವಾಗ್ಯುದ್ಧ ತಾರಕಕ್ಕೇರಿದೆ. ಸಿಎಂ ಹಿಮಂತ ಬಿಸ್ವಾ ಶರ್ಮಾ ಮತ್ತು ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ...