Homeಅಂಕಣಗಳುಗುಪ್ತಚರ ಮತ್ತು ಭದ್ರತಾ ವೈಫಲ್ಯ-ಕೊಲೆ-ನಿರ್ಲಕ್ಷ್ಯದ ಸಾವು- ಯಾವುದನ್ನೂ ಪ್ರಶ್ನಿಸದೆ ಮೈಮರೆತ ಮುಖ್ಯವಾಹಿನಿ ಮಾಧ್ಯಮಗಳು

ಗುಪ್ತಚರ ಮತ್ತು ಭದ್ರತಾ ವೈಫಲ್ಯ-ಕೊಲೆ-ನಿರ್ಲಕ್ಷ್ಯದ ಸಾವು- ಯಾವುದನ್ನೂ ಪ್ರಶ್ನಿಸದೆ ಮೈಮರೆತ ಮುಖ್ಯವಾಹಿನಿ ಮಾಧ್ಯಮಗಳು

- Advertisement -
- Advertisement -

ಇತ್ತೀಚಿಗೆ ನಡೆದ ಮೂರು ಘಟನೆಗಳಿಗೆ ಮುಖ್ಯವಾಹಿನಿ ಮಾಧ್ಯಮಗಳು ಸ್ಪಂದಿಸಿದ ರೀತಿ ಇಂದು ದೇಶ ಎದುರಿಸುತ್ತಿರುವ ಬಿಕ್ಕಟ್ಟಿಗೆ ಸ್ಪಷ್ಟ ಕಾರಣಗಳನ್ನು ತಿಳಿಸುವಂತಿದೆ.

ಮೊದಲನೆಯದು ಈಗ ನಡೆದದ್ದಲ್ಲದೇ ಇದ್ದರೂ, 2019ರ ಲೋಕಸಭಾ ಚುನಾವಣೆಗೂ ಮುನ್ನ ನಡೆದ ಪುಲ್ವಾಮಾ ಘಟನೆಯ ಬಗ್ಗೆ ಅಂದು ಜಮ್ಮು ಕಾಶ್ಮೀರದ ರಾಜ್ಯಪಾಲರಾಗಿದ್ದ ಸತ್ಯಪಾಲ್ ಮಲಿಕ್ ಅವರು ’ದ ವೈರ್’ ಪತ್ರಿಕೆಗೆ ನೀಡಿದ ಸಂದರ್ಶನಕ್ಕೆ ಸಂಬಂಧಿಸಿದ್ದು. ಪತ್ರಕರ್ತ ಕರಣ್ ಥಾಪರ್ ಜೊತೆಗಿನ ಈ ಸಂದರ್ಶನವನ್ನು ಏಪ್ರಿಲ್ 14ರಂದು ಬಿತ್ತರಿಸಲಾಯಿತು. ಅಂದು ಪುಲಾಮಾ ಉಗ್ರರ ದಾಳಿಯಲ್ಲಿ 40 ಭಾರತೀಯ ಸಿಆರ್‌ಪಿಎಫ್ ಯೋಧರು ಮೃತರಾದದ್ದಕ್ಕೆ ಮೋದಿ ನೇತೃತ್ವದ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂಬುದರಿಂದ ಹಿಡಿದು, ಜಮ್ಮು ಕಾಶ್ಮೀರದಲ್ಲಿ ರಿಲಾಯನ್ಸ್ ವಿಮೆಯನ್ನು ಸರ್ಕಾರಿ ನೌಕರರಿಗೆ ಜಾರಿಮಾಡಲು ತಮ್ಮ ಮೇಲಿದ್ದ ಒತ್ತಡ, ತಾವು ಗೋವಾ ರಾಜ್ಯಪಾಲರಾಗಿದ್ದಾಗ ಭ್ರಷ್ಟಾಚಾರದ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಅಲರ್ಟ್ ಮಾಡಿದಾಗ ಅವರು ತೋರಿದ ಉಪೇಕ್ಷೆ – ಹೀಗೆ ಹತ್ತು ಹಲವು ಸಂಗತಿಗಳನ್ನು ಬಹಿರಂಗಪಡಿಸಿದ್ದರು. ಮಲಿಕ್ ಅವರ ಹೇಳಿಕೆಗಳ ಹಿಂದೆ ಬಿದ್ದು ಅದರ ಸತ್ಯಾಸತ್ಯತೆಯನ್ನು ಕಂಡುಹಿಡಿಯುವ, ಆ ಆರೋಪಗಳಗೆ ಉತ್ತರಿಸಬೇಕಿದ್ದ ಸರ್ಕಾರದ ವಕ್ತಾರರು ಮತ್ತು ಸಚಿವರನ್ನು ಪ್ರಶ್ನಿಸುವ ಕೆಲಸಕ್ಕೆ ಮಾಧ್ಯಮಗಳು ಮುಂದಾಗಬೇಕಿತ್ತು. ಸಾಮಾನ್ಯ ಪರಿಸ್ಥಿತಿಯಲ್ಲಾದರೆ ಬಹುತೇಕ ಎಲ್ಲ ಸಚಿವರ ಮುಖಕ್ಕೆ ಮೈಕ್ ಹಿಡಿದು ಮಾಧ್ಯಮಗಳು ಮಲಿಕ್ ಆರೋಪಗಳಿಗೆ ಉತ್ತರಿಸಿ ಎಂದು ದುಂಬಾಲು ಬಿದ್ದಿರುತ್ತಿದ್ದವು. ಆದರೆ ಈ ಸಂದರ್ಭದಲ್ಲಿ, ಮುಖ್ಯವಾಹಿನಿಯ ಕೆಲವೇ ಕೆಲವು ದಿನಪತ್ರಿಕೆಗಳನ್ನು ಹೊರತುಪಡಿಸಿದರೆ ಬಹುತೇಕ ಮುದ್ರಣ ಮತ್ತು ಟಿವಿ ಮಾಧ್ಯಮಗಳು ಮೌನಕ್ಕೆ ಜಾರಿದ್ದವು. ದೇಶದ ರಕ್ಷಣೆಗೆ ಹಾಗೂ ಸೈನಿಕರ ಜೀವಕ್ಕೆ ಸಂಬಂಧಿಸಿದಂತೆ ಸರ್ಕಾರದ ಲೋಪದೋಷದ ಆರೋಪದ ಬಗ್ಗೆ ಮಾಧ್ಯಮಗಳು ಉಸಿರು ಬಿಚ್ಚದಿರುವುದಕ್ಕೆ ಯಾರು ಕಾರಣ ಎಂದು ಊಹಿಸುವುದು ಕಷ್ಟವೇನಲ್ಲ! ಪ್ರಭುತ್ವದಿಂದ ಮಾಧ್ಯಮಗಳಿಗೆ ಉಸಿರುಗಟ್ಟುವ ವಾತಾವರಣ ಸೃಷ್ಟಿಯಾಗಿರುವುದಕ್ಕೆ ಮಾಧ್ಯಮದವರು ಕೂಡ ಜವಾಬ್ದಾರರಲ್ಲವೇ!

ಎರಡನೆಯದ್ದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸರ್ಕಾರದ ಪೊಲೀಸ್ ವ್ಯವಸ್ಥೆಯ ಅಡಿಯಲ್ಲಿ ಏಪ್ರಿಲ್ 15ರಂದು ನಡೆದ ಘಟನೆ. ರೌಡಿಸಂನಿಂದ ರಾಜಕಾರಣಿಯಾಗಿದ್ದ ಆತಿಕ್ ಅಹಮದ್ ಮತ್ತು ಅವರ ಸಹೋದರ ಆಶ್ರಫ್‌ರನ್ನು ಪೊಲೀಸರು ಆಸ್ಪತ್ರೆಗೆ ಕರೆದೊಯ್ಯುವಾಗ ಮೂರು ಜನ ಬಂದೂಕುಧಾರಿಗಳು ಕ್ಯಾಮರಾ ಮುಂದೆಯೇ ಗುಂಡಿನ ಸುರಿಮಳೆಗೈದು ಕೊಂದರು. ಮೃತರಾದ ಆರೋಪಿಗಳನ್ನು ವಿಚಾರಣೆ ನಡೆಸಿ, ತಪ್ಪಿತಸ್ಥರೆಂದು ಸಾಬೀತಾದರೆ ಶಿಕ್ಷೆ ನೀಡಲು ನ್ಯಾಯಾಲಯ ಇದೆ, ಕಾನೂನಿದೆ. ಆದರೆ, ಪೊಲೀಸರ ಸಮಕ್ಷಮದಲ್ಲಿ ನಡೆದ ಈ ಬೆಚ್ಚಿಬೀಳಿಸುವ ಶೂಟೌಟ್ ಉತ್ತರಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಣೆಯಾಗಿರುವ ಕಥೆಯನ್ನು ಹೇಳುತ್ತಿತ್ತು. ಇದನ್ನು ಪ್ರಶ್ನಿಸಿ ಸರ್ಕಾರವನ್ನು ಕಟಕಟೆಗೆ ನಿಲ್ಲಿಸಬೇಕಿದ್ದ ಮಾಧ್ಯಮಗಳು ಎಂದಿನಂತೆ ಒಂದೋ ಮೌನವಾಗಿದ್ದವು, ಮತ್ತು ಕೆಲವು ಒಂದು ಹಂತ ಮುಂದಕ್ಕೆ ಹೋಗಿ ಈ ಕಾನೂನಿಬಾಹಿರ ಕೊಲೆಗಳನ್ನು ಸಂಭ್ರಮಿಸುತ್ತಿದ್ದವು. ಇದನ್ನು ಸಂಭ್ರಮಿಸಿದ ಮಾಧ್ಯಮಗಳು ಆ ಕೊಲೆಗಾರ ಶೂಟರ್‌ಗಳಿಗಿಂತಲೂ ಹೀನಾಯ ಮನಸ್ಥಿತಿಯವರು ಅನ್ನುವುದರಲ್ಲಿ ಎರಡು ಮಾತಿಲ್ಲ.

ಇದನ್ನೂ ಓದಿ: ಪುಲ್ವಾಮ ದಾಳಿ ಕುರಿತು ಸತ್ಯಪಾಲ್ ಮಲಿಕ್‌ರವರ 5 ಗಂಭೀರ ಆರೋಪಗಳು: ಪ್ರಧಾನಿಯನ್ನು ಪ್ರಶ್ನಿಸದವರು ಪಾಕಿಸ್ತಾನಕ್ಕೆ ಹೋಗಿ

ಮೂರನೆಯದ್ದು ಏಪ್ರಿಲ್, 15 ಭಾನುವಾರದಂದು ನಡೆದ ಘಟನೆ. ಮಹಾರಾಷ್ಟ್ರದ ನವಿ ಮುಂಬೈನ ತೆರೆದ ಮೈದಾನವೊಂದರಲ್ಲಿ ’ಮಹಾರಾಷ್ಟ್ರ ಭೂಷಣ’ ಪ್ರಶಸ್ತಿ ಪ್ರದಾನ ಮಾಡಲು ಆಯೋಜಿಸಿದ್ದ ಬೃಹತ್ ವೇದಿಕೆಯ ಮೇಲೆ ನೆರಳಿನಲ್ಲಿ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ, ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂಧೆ ಸೇರಿದಂತೆ ಮತ್ತಿತರ ’ವಿಐಪಿ’ಗಳು ಸುಖವಾಗಿ ಆಸೀನರಾಗಿದ್ದರು. ಸುಡು ಬಿಸಿಲಿನಲ್ಲಿ ಯಾವುದೇ ಛಾವಣಿಯಿಲ್ಲದೆ, ನೆರಳಿಲ್ಲದೆ ಲಕ್ಷಾಂತರ ಜನ (ಆಯೋಜಕರು ಹೇಳಿಕೊಳ್ಳುವಂತೆ 20 ಲಕ್ಷ!) ಗಂಟೆಗಟ್ಟಲೆ ಈ ’ವಿಐಪಿ’ಗಳ ಭಾಷಣಗಳನ್ನು ಕೇಳುತ್ತಾ ಕೂತಿದ್ದರು. ನೆರೆದ ಜನರು ಬಿಸಿಲಿನಲ್ಲಿ ಕೂತು ಕೇಳಿಸಿಕೊಳ್ಳುತ್ತಿರುವ ಬಗ್ಗೆ ಅಮಿತ್ ಶಾ ಭಾಷಣ ಹೊಡೆಯುತ್ತಿದ್ದರೆ, ಅಲ್ಲಿ ನೆರೆದಿದ್ದ ನೂರಾರು ಜನರಿಗೆ ’ಹೀಟ್‌ಸ್ಟ್ರೋಕ್’ ಸಮಸ್ಯೆಯುಂಟಾಗಿ ಆಸ್ಪತ್ರೆಗೆ ದಾಖಲಾಗುವಂತಹ ಪರಿಸ್ಥಿತಿ ಉಂಟಾಯಿತು. ಈಗ ಕನಿಷ್ಟ 13 ಜನ ಮೃತಪಟ್ಟ ವರದಿಯಾಗಿದೆ. ಒಂದು ವಾರದ ಹಿಂದೆಯೇ ಸುಡುಬಿಸಿಲು ಮತ್ತು ಉಷ್ಣ ವಾಯುವಿನ ಸಲುವಾಗಿ ಮಹಾರಾಷ್ಟ್ರದ ಜನ ಹೀಟ್‌ಸ್ಟ್ರೋಕ್ ಸಮಸ್ಯೆಗೆ ಗುರಿಯಾಗಿ ಆಸ್ಪತ್ರೆಗೆ ದಾಖಲಾಗುತ್ತಿರುವ ಹಲವು ವರದಿಗಳು ಪತ್ರಿಕೆಗಳಲ್ಲಿ ಬಂದಿದ್ದವು. ಹೀಗಿದ್ದೂ, ಅಂದು ನೆರೆದ ಜನರಿಗೆ ಸಮರ್ಪಕವಾದ ಛಾವಣಿ ಮತ್ತು ನೆರಳು, ಅಗತ್ಯವಿದ್ದಷ್ಟು ಕುಡಿಯುವ ನೀರಿನ ವ್ಯವಸ್ಥೆ ಒದಗಿಸದೆ ಹತ್ತಾರು ಜನರ ಸಾವಿಗೆ ಕಾರಣವಾದ ಸರ್ಕಾರದ್ದು ’ಕ್ರಿಮಿನಲ್ ನೆಗ್ಲಿಜೆನ್ಸ್’ ಅಲ್ಲದೇ ಮತ್ತೇನು? ಹೀಗಿದ್ದೂ ಕೂಡ ಮುಖ್ಯವಾಹಿನಿ ಮಾಧ್ಯಮಗಳು ಈ ಸಾವುಗಳಿಗೆ ಯಾರು ಹೊಣೆ ಎಂದು ಮುಖ್ಯಮಂತ್ರಿಯವರನ್ನು ದಬಾಯಿಸಲಿಲ್ಲ! ಮುಖಕ್ಕೆ ಮೈಕ್ ಹಿಡಿದು, ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ ಎಂದು ಆಗ್ರಹಿಸಲಿಲ್ಲ. ಮಾತು ಸೋತ ಮಾಧ್ಯಮಗಳು ತಣ್ಣಗಾಗಿ ಹೋಗಿದ್ದವು!

ದೇಶಕ್ಕೆ ಕರಾಳ ದಿನಗಳು ಬಂದೆರಗುವುದಕ್ಕೆ ಸರ್ವಾಧಿಕಾರಿ ಧೋರಣೆಯ ಪ್ರಭುತ್ವದಷ್ಟೇ ಇಂತಹ ಮಾರಿಕೊಂಡ ಮಾಧ್ಯಮಗಳದ್ದೂ ಪಾತ್ರವಿದೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಟೋಲ್ ಪ್ಲಾಜಾಗಳಲ್ಲಿನ ಅಶುಚಿತ್ವ ಶೌಚಾಲಯಗಳ ಬಗ್ಗೆ ವರದಿ ಮಾಡಿದರೆ ಬಹುಮಾನ: ಕೇಂದ್ರ ಸರ್ಕಾರ

ರಾಷ್ಟ್ರೀಯ ಹೆದ್ದಾರಿಗಳಲ್ಲಿನ ನೈರ್ಮಲ್ಯದ ಬಗ್ಗೆ ದೀರ್ಘಕಾಲದ ಕಳವಳಗಳನ್ನು ಪರಿಹರಿಸುವ ಪ್ರಯತ್ನದಲ್ಲಿ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ಟೋಲ್ ಪ್ಲಾಜಾಗಳಲ್ಲಿ ಅಶುಚಿಯಾದ ಶೌಚಾಲಯ ಸೌಲಭ್ಯಗಳ ಬಗ್ಗೆ ವರದಿ ಮಾಡಲು ಪ್ರಯಾಣಿಕರನ್ನು ಪ್ರೋತ್ಸಾಹಿಸುವ...

ಮಣಿಪುರ: ಬಾಂಬ್ ದಾಳಿಗೆ ಇಬ್ಬರು ಮಕ್ಕಳು ಬಲಿ; ಕುಕಿ ದಂಗೆಕೋರರಿಂದ ದಾಳಿ ಆರೋಪ; ಇದು ಅನಾಗರಿಕ ಕೃತ್ಯ ಎಂದ ಸಿಎಂ 

ಗುವಾಹಟಿ: ಮಣಿಪುರದ ಮೈತೇಯಿ ಪ್ರಾಬಲ್ಯದ ಬಿಷ್ಣುಪುರ ಜಿಲ್ಲೆಯಲ್ಲಿ ಮಂಗಳವಾರ ಮನೆಯೊಂದರ ಮೇಲೆ ಬಾಂಬ್ ದಾಳಿ ನಡೆದಿದ್ದು, ಘಟನೆಯಲ್ಲಿ ಐದು ತಿಂಗಳ ಗಂಡು ಮಗು ಸೇರಿದಂತೆ ಇಬ್ಬರು ಅಪ್ರಾಪ್ತ ವಯಸ್ಕರು ಸಾವನ್ನಪ್ಪಿರುವ ಘಟನೆ ನಡೆದಿದೆ.  ಮೊಯಿರಾಂಗ್...

ಮುಖ್ಯ ಚುನಾವಣಾ ಆಯುಕ್ತರ ಪದಚ್ಯುತಿಗೆ ವಿಪಕ್ಷಗಳಿಂದ ನೋಟಿಸ್‌ : ಕಾರಣ ನೀಡದೆ ತಿರಸ್ಕರಿಸಿದ ಸಂಸತ್ತಿನ ಉಭಯ ಸದನಗಳ ಮುಖ್ಯಸ್ಥರು-ವರದಿ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಗೊಳಿಸಲು ವಿಪಕ್ಷ ಸಂಸದರು ಸಲ್ಲಿಸಿದ್ದ ನಿಲುವಳಿ ನೋಟಿಸ್ ಅನ್ನು ರಾಜ್ಯಸಭಾ ಅಧ್ಯಕ್ಷ ಸಿ.ಪಿ. ರಾಧಾಕೃಷ್ಣನ್ ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ತಿರಸ್ಕರಿಸಿದ್ದಾರೆ. ಉಭಯ...

ಎನ್‌ಸಿಪಿ ನಾಯಕನ ಕೊಲೆ ಪ್ರಕರಣ : ಛತ್ತೀಸ್‌ಗಢ ಮಾಜಿ ಸಿಎಂ ಅಜಿತ್ ಜೋಗಿ ಮಗ ಅಮಿತ್ ಜೋಗಿಗೆ ಜೀವಾವಧಿ ಶಿಕ್ಷೆ

2003ರ ಕೊಲೆ ಪ್ರಕರಣದಲ್ಲಿ ಛತ್ತೀಸ್‌ಗಢ ಹೈಕೋರ್ಟ್ ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ ಅವರ ಪುತ್ರ ಅಮಿತ್ ಜೋಗಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ ಎಂದು ದಿ ಹಿಂದೂ ಸೋಮವಾರ (ಏ.6) ವರದಿ ಮಾಡಿದೆ. ರಾಷ್ಟ್ರೀಯವಾದಿ ಕಾಂಗ್ರೆಸ್...

ಪ. ಬಂಗಾಳ | ಮತದಾರರ ಪಟ್ಟಿಯಿಂದ ಕೈಬಿಟ್ಟಿದ್ದಕ್ಕೆ ಸೂಕ್ತ ಕಾರಣ ನೀಡದ ಚುನಾವಣಾ ಆಯೋಗ : ಕಾಂಗ್ರೆಸ್ ಅಭ್ಯರ್ಥಿ ಹೆಸರು ಮರು ಸೇರ್ಪಡೆ

ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲ್ಪಟ್ಟವರ ಅರ್ಜಿಗಳ ವಿಚಾರಣೆಗಾಗಿ ಕೋಲ್ಕತ್ತಾದಲ್ಲಿ ಸ್ಥಾಪಿಸಲಾದ ಮೇಲ್ಮನವಿ ನ್ಯಾಯಮಂಡಳಿಯು, ಮುಂಬರುವ ವಿಧಾನಸಭಾ ಚುನಾವಣೆಯ ಫರಕ್ಕಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೊತಾಬ್ ಶೇಖ್ ಅವರ ಹೆಸರನ್ನು ಭಾನುವಾರ...

ತೂತುಕುಡಿ ಸಾತನ್‌ಕುಳಂ ತಂದೆ-ಮಗನ ಕಸ್ಟಡಿ ಸಾವು ಪ್ರಕರಣ : ಅಪರಾಧಿಗಳಾದ ಎಲ್ಲಾ 9 ಪೊಲೀಸರಿಗೆ ಮರಣದಂಡನೆ ವಿಧಿಸಿದ ನ್ಯಾಯಾಲಯ

ತಮಿಳುನಾಡಿನ ತೂತುಕುಡಿ ಜಿಲ್ಲೆಯ ಸಾತನ್‌ಕುಳಂ ಪೊಲೀಸ್ ಠಾಣೆಯಲ್ಲಿ ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಸಂಭವಿಸಿದ, ವ್ಯಾಪಾರಿ ಪಿ. ಜಯರಾಜ್ (58) ಮತ್ತು ಅವರ ಮಗ ಜೆ. ಬೆನಿಕ್ಸ್ (31) ಅವರ ಕಸ್ಟಡಿ ಸಾವು ಪ್ರಕರಣದ...

ದಾವಣಗೆರೆ ದಕ್ಷಿಣ ಉಪ-ಸಮರ: ಶಾಮನೂರು ಸಾಮ್ರಾಜ್ಯದಲ್ಲಿ ಅಹಿಂದ ಬಂಡಾಯ!

ತುಂಗಭದ್ರಾ ನದಿ ಪರ‍್ವಕ್ಕೆ ಎತ್ತರದ ಪ್ರದೇಶದಲ್ಲಿರುವ ದಾವಣಗೆರೆ ಮಧ್ಯ ಕರ್ನಾಟಕದ ಪ್ರಮುಖ ವಾಣಿಜ್ಯ ನಗರಿ. ಬೆಣ್ಣೆ ದೋಸೆಯ ಘಮಲಿನ ದಾವಣಗೆರೆಯ ರಾಜಕಾರಣ ಮಾತ್ರ ಮಿರ್ಚಿ-ಮಂಡಕ್ಕಿಯ ಖಡಕ್ ಖಾರಾ ಕುರುಕುಲಿನಂತೆ! ದಾವಣಗೆರೆ ಮತ್ತದರ ಸುತಮುತ್ತಲಿನ...

‘Dr. Nimo Yadav’, ‘Nehr Who’ ಎಕ್ಸ್‌ ಖಾತೆಗಳನ್ನು ತಕ್ಷಣ ಮರುಸ್ಥಾಪಿಸಲು ದೆಹಲಿ ಹೈಕೋರ್ಟ್ ಆದೇಶ

'Dr. Nimo Yadav' ಮತ್ತು 'Nehr Who' ಎಂಬ ಎರಡು ಪರೋಡಿ ಎಕ್ಸ್‌ ಖಾತೆಗಳನ್ನು ತಕ್ಷಣ ಮರು ಸ್ಥಾಪಿಸುವಂತೆ ದೆಹಲಿ ಹೈಕೋರ್ಟ್ ಸೋಮವಾರ (ಏ.6) ಎಕ್ಸ್ ಸಂಸ್ಥೆಗೆ (X Corp) ಆದೇಶಿಸಿದೆ. 'Dr....

ಬಂಗಾಳ| ಮತದಾರರ ಪಟ್ಟಿಯಿಂದ ಹೆಸರು ತೆಗೆದ ಬಳಿಕ ಸಾವಿಗೆ ಶರಣಾದ ಮುಸ್ಲಿಂ ವ್ಯಕ್ತಿ

ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ನಂತರ ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯಿಂದ ತನ್ನ ಹೆಸರನ್ನು ತೆಗೆದುಹಾಕಿದ್ದರಿಂದ ಮನನೊಂದ ಮುಸ್ಲಿಂ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಮೃತನನ್ನು ಬಿರ್ಭುಮ್...

‘ಯೋಜನೆಯು ಕೇರಳಕ್ಕೆ ಜೀವನಾಡಿಯಾಗಲಿದೆ’: ವಯನಾಡ್ ಸುರಂಗ ಮಾರ್ಗ ವಿರುದ್ದದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಕೇರಳದ ಕೋಝಿಕ್ಕೋಡ್-ವಯನಾಡ್ ಸುರಂಗ ಮಾರ್ಗ ನಿರ್ಮಾಣಕ್ಕೆ ನೀಡಲಾದ ಪರಿಸರ ಅನುಮತಿ (ಇಸಿ) ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ (ಏ.6) ವಜಾಗೊಳಿಸಿದೆ. ಸುರಂಗ ನಿರ್ಮಾಣದ ಸಮಯದಲ್ಲಿ ಪರಿಸರ ಅನುಮತಿಯ ಷರತ್ತುಗಳ ಉಲ್ಲಂಘನೆಯಾದರೆ, ಅರ್ಜಿದಾರರು...