Homeಮುಖಪುಟಕೇರಳ ಸಿಎಂ ಪುತ್ರಿ ವಿರುದ್ಧ 1.7ಕೋಟಿ ದೇಣಿಗೆ ಸ್ವೀಕರಿಸಿದ ಆರೋಪ

ಕೇರಳ ಸಿಎಂ ಪುತ್ರಿ ವಿರುದ್ಧ 1.7ಕೋಟಿ ದೇಣಿಗೆ ಸ್ವೀಕರಿಸಿದ ಆರೋಪ

- Advertisement -
- Advertisement -

ಕೇರಳ  ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪುತ್ರಿ ವೀಣಾ 1.7 ಕೋಟಿ ರೂಪಾಯಿ  ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಎಂದು ಪ್ರತಿಪಕ್ಷಗಳು ಆರೋಪಿಸಿದ್ದು, ಈ ಕುರಿತು  ನ್ಯಾಯಾಂಗ ತನಿಖೆಗೆ ಕೇರಳ ಕಾಂಗ್ರೆಸ್ ಪಕ್ಷ ಒತ್ತಾಯಿಸಿದೆ.

ವಿಜಯನ್ ಅವರ ಪುತ್ರಿ ಟಿ.ವೀಣಾ ಅವರಿಗೆ  ಮತ್ತು ಬೆಂಗಳೂರಿನ ಎಕ್ಸಲಾಜಿಕ್ ಸಲ್ಯೂಷನ್ಸ್ ಐ.ಟಿ ಕಂಪನಿಗೆ  1.72 ಕೋಟಿ ಹಣ ಅಕ್ರಮವಾಗಿ ಸಂದಾಯವಾಗಿದೆ ಎಂದು ಆದಾಯ ತೆರಿಗೆ ಮಧ್ಯಂತರ ಇತ್ಯರ್ಥ ಮಂಡಳಿಯ ವರದಿಯಲ್ಲಿ ಹೇಳಿದೆ.

ವಿರೋಧ ಪಕ್ಷವು ಮುಖ್ಯಮಂತ್ರಿ ವಿಜಯನ್ ಅವರ ಮಗಳ ವಿರುದ್ಧ ಭುಗಿಲೆದ್ದ ಆರೋಪಗಳ ಕುರಿತು ನ್ಯಾಯಾಂಗ ತನಿಖೆಗೆ ಆಗ್ರಹಿಸಿದೆ.ಆಡಳಿತಾರೂಢ  ಸಿಪಿಐಎಂನ್ನು ಗುರಿಯಾಗಿಟ್ಟುಕೊಂಡು ಮುಖ್ಯಮಂತ್ರಿಗಳ ಕುಟುಂಬಕ್ಕೆ ಕೋಟಿಗಟ್ಟಲೆ ಹೋಗುತ್ತಿರುವ ಬಗ್ಗೆ ಏಕೆ ತನಿಖೆ ನಡೆಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

ಈ ಅಕ್ರಮದ ಬಗ್ಗೆ ಬಂದ ವರದಿ ಕುರಿತು ಪ್ರಶ್ನಿಸಿದ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಸುಧಾಕರನ್ ‘ಜವಾಬ್ದಾರಿಯುತ ಸಂಸ್ಥೆ’ ನಡೆಸಿರುವ ತನಿಖೆಯನ್ನು ಅನುಮಾನಿಸಲು ಏನಾದರೂ ಕಾರಣವಿದೆಯೇ ಎಂದು ಪ್ರಶ್ನಿಸಿದ್ದಾರೆ.

ಆದಾಯ ತೆರಿಗೆ ಮಧ್ಯಂತರ ಇತ್ಯರ್ಥ ಮಂಡಳಿಯ  ಪಟ್ಟಿಯನ್ನು ಪ್ರಾದೇಶಿಕ ಪತ್ರಿಕೆಯೊಂದು ಪ್ರಕಟಿಸಿದ ನಂತರ ಈ ವಿವಾದ ಭುಗಿಲೆದ್ದಿದೆ. ರಾಜ್ಯ ಲೋಕೋಪಯೋಗಿ ಇಲಾಖೆ ಸಚಿವ ಪಿಎ ಮೊಹಮ್ಮದ್ ರಿಯಾಸ್ ಅವರ ಪತ್ನಿಯೂ ಆಗಿರುವ ಸಿಎಂ ಪುತ್ರಿ ಟಿ ವೀಣಾ ಅವರು ಕೊಚ್ಚಿನ್ ಮಿನರಲ್ಸ್ ಮತ್ತು ರೂಟೈಲ್ ಲಿಮಿಟೆಡ್ (ಸಿಎಂಆರ್‌ಎಲ್) ಎಂಬ ಖಾಸಗಿ ಕಂಪನಿಯಿಂದ ಮೂರು ವರ್ಷಗಳ ಅವಧಿಯಲ್ಲಿ ಮಾಸಿಕ ಕಂತುಗಳಲ್ಲಿ 1.72 ಕೋಟಿ ರೂ.ಗಳನ್ನು ಪಡೆದಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ಆಡಳಿತಾರೂಢ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ – ಮಾರ್ಕ್ಸ್‌ವಾದಿ (ಸಿಪಿಐಎಂ) ಈ ಆರೋಪವನ್ನು ತಳ್ಳಿಹಾಕಿದ್ದು, ನ.5 ರಂದು ನಡೆಯಲಿರುವ ಪುತ್ತುಪ್ಪಲ್ಲಿ ಉಪಚುನಾವಣೆಗೆ ಮುನ್ನ ಪಕ್ಷದ ವರ್ಚಸ್ಸಿಗೆ ಕಳಂಕ ತರುವ ಪ್ರಯತ್ನ ಇದು ಎಂದು ಆರೋಪಿಸಿದ್ದಾರೆ.

ಇದನ್ನು ಓದಿ: ಸೌಜನ್ಯ ಪ್ರಕರಣ:ಸಂತೋಷ್ ರಾವ್ ತಂದೆಯ ಪಾದ ಪೂಜೆ ಮಾಡಿ ಕ್ಷಮೆಯಾಚನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಈಶಾ ಯೋಗ ಕೇಂದ್ರದ ಸ್ವಯಂಸೇವಕ ನಾಪತ್ತೆ ಪ್ರಕರಣ: ಸಿಬಿ-ಸಿಐಡಿ ತನಿಖೆಗೆ ಮದ್ರಾಸ್ ಹೈಕೋರ್ಟ್ ಆದೇಶ!

ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಜಗ್ಗಿ ವಾಸುದೇವ್ ಅವರ ಈಶಾ ಯೋಗ ಕೇಂದ್ರದ ಸ್ವಯಂಸೇವಕರೊಬ್ಬರು ನಾಪತ್ತೆಯಾಗಿರುವ ಪ್ರಕರಣದ ತನಿಖೆಯಲ್ಲಿ ಸ್ಥಳೀಯ ಪೊಲೀಸರು ತೋರಿರುವ ದೀರ್ಘಕಾಲದ ನಿರ್ಲಕ್ಷ್ಯವನ್ನು ಗಂಭೀರವಾಗಿ ಪರಿಗಣಿಸಿರುವ ಮದ್ರಾಸ್ ಹೈಕೋರ್ಟ್, ತನಿಖೆಯನ್ನು ಸಿಬಿ-ಸಿಐಡಿಗೆ (CB-CID)...

ಅಸ್ಸಾಂ : 1983ರ ಗಲಭೆ ವೇಳೆ ನಿರಾಶ್ರಿತರಾಗಿದ್ದ 132 ಬಂಗಾಳಿ ಮುಸ್ಲಿಂ ಕುಟುಂಬಗಳ ಮನೆಗಳನ್ನು ಧ್ವಂಸಗೊಳಿಸಿದ ಬಿಜೆಪಿ ಸರ್ಕಾರ

ಅಸ್ಸಾಂನ ಲಖಿಂಪುರದಲ್ಲಿ ಅಧಿಕಾರಿಗಳು ಶುಕ್ರವಾರ (ನ.13) 132 ಬಂಗಾಳಿ ಮುಸ್ಲಿಂ ಕುಟುಂಬಗಳ ಮನೆಗಳನ್ನು ಕೆಡವಿದ್ದಾರೆ. 1983ರಲ್ಲಿ ರಾಜ್ಯದಾದ್ಯಂತ ನಡೆದ ಗಲಭೆಗಳ ಸಂದರ್ಭದಲ್ಲಿ ನಿರಾಶ್ರಿತರಾದಾಗಿನಿಂದ ಈ ಕುಟುಂಬಗಳು ಬೊಗಿನದಿಯ ಸರ್ಕಾರಿ ಭೂಮಿಯೊಂದರಲ್ಲಿ ವಾಸಿಸುತ್ತಿದ್ದವು. ತಮ್ಮ ಹಿಂದೂ...

ತೆಲಂಗಾಣ ಗಿಗ್ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಯೋಜನೆಗೆ ಚಾಲನೆ

'ತೆಲಂಗಾಣ ಗಿಗ್ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಯೋಜನೆ'ಗೆ ಶನಿವಾರ (ನ.14) ಹೈದರಾಬಾದ್‌ನಲ್ಲಿ ಅಧಿಕೃತವಾಗಿ ಚಾಲನೆ ನೀಡಲಾಯಿತು. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ತೆಲಂಗಾಣ ಮುಖ್ಯಮಂತ್ರಿ ಎ....

ಸಾಮಾನ್ಯ ಕ್ಷೇತ್ರವೇ ಸಾಮರ್ಥ್ಯದ ಪರೀಕ್ಷೆಯೇ? ಮೀಸಲು ಕ್ಷೇತ್ರದ ಗೆಲುವನ್ನು ಪ್ರಶ್ನಿಸುವವರ ಸಂವಿಧಾನಾತ್ಮಕ ಅರಿವು ಎಷ್ಟಿದೆ?

ಮೀಸಲಾತಿಯನ್ನು ಸಂವಿಧಾನ ನೀಡಿದ ಹಕ್ಕು ಎಂದು ಒಪ್ಪಿಕೊಳ್ಳಲು ಹಿಂದೇಟು ಹಾಕುವವರು ಪರಿಶಿಷ್ಟ ಜಾತಿಯ ನಾಯಕರಿಗೆ ಮಾತ್ರ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸುವಂತೆ ಸವಾಲು ಹಾಕುತ್ತಿರುವುದು ಯಾವ ರೀತಿಯ ಪ್ರಜಾಪ್ರಭುತ್ವದ ಮನೋಭಾವ? ಭಾರತದ ರಾಜಕೀಯದಲ್ಲಿ ಪರಿಶಿಷ್ಟ...

ಭಾರತ್ ಸಮ್ಮಿಟ್‌ನ 115 ಭಾಷಣಕಾರರಿಗೆ ಭಾರತ ಪ್ರವೇಶ ನಿರಾಕರಣೆ : ವೀಸಾ ವಿಚಾರ ‘ಸಾರ್ವಭೌಮ ಅಧಿಕಾರ’ ಎಂದ ವಿದೇಶಾಂಗ ಸಚಿವಾಲಯ

ಆರಂಭದಲ್ಲಿ ಅನುಮತಿ ನೀಡಿದ ನೀಡಿದ್ದರೂ, ಕಾಂಗ್ರೆಸ್ ಪಕ್ಷದ 'ಭಾರತ್ ಸಮ್ಮಿಟ್'ನಲ್ಲಿ ಭಾಗವಹಿಸಬೇಕಿದ್ದ ಮೂರನೇ ಒಂದಕ್ಕಿಂತ ಹೆಚ್ಚು ವಿದೇಶಿ ಭಾಷಣಕಾರರ ಭಾರತ ಪ್ರವೇಶಿಸಕ್ಕೆ ತಡೆಯೊಡ್ಡಲಾಗಿದೆ. ಈ ಕುರಿತು ತನ್ನ ಮೊದಲ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ...

ಗ್ರಾಮ ದೇವತೆ, ದೇವಸ್ಥಾನದ ಜಾಗ, ಸಾರ್ವಜನಿಕ ರಸ್ತೆ ಕಬಳಿಕೆ ಆರೋಪ; ಬಿಹಾರದ ಬಿಜೆಪಿ ಶಾಸಕಿ ಮೈಥಿಲಿ ಠಾಕೂರ್ ಕುಟುಂಬದ ಒತ್ತುವರಿ ಜಾಗ ತೆರವುಗೊಳಿಸಿದ ಅಧಿಕಾರಿಗಳು!

ಜಾನಪದ ಗಾಯಕಿ ಹಾಗೂ ಬಿಹಾರದ ಬಿಜೆಪಿ ಶಾಸಕಿ ಮೈಥಿಲಿ ಠಾಕೂರ್ ಅವರ ಕುಟುಂಬವು ದರ್ಭಂಗಾ ಜಿಲ್ಲೆಯಲ್ಲಿ ಸರ್ಕಾರಿ ರಸ್ತೆಯನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಿದ್ದ ಕಾಂಪೌಂಡ್ ಗೋಡೆಯನ್ನು ಸ್ಥಳೀಯ ಆಡಳಿತವು ಗುರುವಾರ ತೆರವುಗೊಳಿಸಿದೆ. 'ದಿ...

ಜಿಬಿಎ ಚುನಾವಣೆ ಗಡುವು ವಿಸ್ತರಣೆಗೆ ಸುಪ್ರೀಂ ಕೋರ್ಟ್ ಅನುಮತಿ ಕೋರಿದ ಕರ್ನಾಟಕ ಚುನಾವಣಾ ಆಯೋಗ

ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳ ಚುನಾವಣೆಯನ್ನು ಪೂರ್ಣಗೊಳಿಸಲು ವಿಧಿಸಿರುವ ಗಡುವನ್ನು ಒಂದು ತಿಂಗಳ ಕಾಲ ವಿಸ್ತರಿಸುವಂತೆ ಕರ್ನಾಟಕ ರಾಜ್ಯ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ....

ಮುಸ್ಲಿಮರ ಮನೆ ಕೆಡವಿದ ಬುಲ್ಡೋಜರ್‌ಗಳೇ ಉತ್ತರ ಪ್ರದೇಶದ ಬ್ರ್ಯಾಂಡ್ ಎಂದ ಯೋಗಿ ಆದಿತ್ಯನಾಥ್; ಹೆಚ್ಚಿನ ಉತ್ಪಾದನೆ, ರಫ್ತಿಗೆ ಕರೆ 

ಲಖನೌ: ಮುಸ್ಲಿಮರು, ದಲಿತರು ಸೇರಿದಂತೆ ಅಂಚಿನಲ್ಲಿರುವ ಸಮುದಾಯಗಳು ಮತ್ತು ಸರ್ಕಾರದ ನೀತಿಗಳನ್ನು ವಿರೋಧಿಸುವವರನ್ನು ಗುರಿಯಾಗಿಸಿಕೊಂಡು ನಡೆದಿರುವ ಮನೆ, ಕಟ್ಟಡಗಳ ಧ್ವಂಸ ಕಾರ್ಯಾಚರಣೆಗಳ ಮೂಲಕ ವಿವಾದದ ಕೇಂದ್ರವಾಗಿರುವ ಬುಲ್ಡೋಜರ್‌ಗಳನ್ನೇ ಉತ್ತರ ಪ್ರದೇಶದ ಬ್ರ್ಯಾಂಡ್ ಎಂದು...

ಕ್ಷೇತ್ರ ಮರುವಿಂಗಡಣೆ ಮಸೂದೆ ಅಂಗೀಕಾರಕ್ಕೆ ವಿಶೇಷ ಅಧಿವೇಶನ: ‘ಪ್ರತಿಪಕ್ಷಗಳಿಗೆ ಯಾವುದೇ ಮಾಹಿತಿ ನೀಡಿಲ್ಲ’ ಎಂದ ಪ್ರಿಯಾಂಕಾ

ಕ್ಷೇತ್ರ ಮರುವಿಂಗಡಣೆ ಮಸೂದೆಯನ್ನು ಅಂಗೀಕರಿಸುವ ಉದ್ದೇಶದಿಂದ ಸಂಸತ್ತಿನ ವಿಶೇಷ ಅಧಿವೇಶನ ಕರೆಯಲು ಕೇಂದ್ರ ಸರ್ಕಾರ ಮುಂದಾಗಿದೆ ಎಂಬ ವರದಿಗಳ ಬಗ್ಗೆ ಪ್ರತಿಪಕ್ಷಗಳಿಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ...

ನನ್ನ ಫೋನ್ ಟ್ಯಾಪ್ ಮಾಡುತ್ತಿರುವ ಪ್ರಧಾನಿ, ಅವರ ವಿರುದ್ಧದ ಸಾಕ್ಷ್ಯಗಳೇನು ಎಂಬುದು ಅವರಿಗೆ ಗೊತ್ತಿದೆ: ರಾಹುಲ್ ಗಾಂಧಿ

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಹಿರಂಗ ಚರ್ಚೆಗೆ ಆಹ್ವಾನ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮೋದಿ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದ ಸಾಕ್ಷ್ಯಗಳು ತಮ್ಮ ಫೋನ್‌ನಲ್ಲಿವೆ. ಅದನ್ನು ಪ್ರಧಾನಿ ಟ್ಯಾಪ್ ಮಾಡುತ್ತಿದ್ದಾರೆ ಎಂದು...