HomeUncategorizedಶಿವಮೊಗ್ಗದಲ್ಲಿ ಕಲ್ಲು ತೂರಾಟ ಪ್ರಕರಣ: 43 ಜನರ ಬಂಧನ; ಸಿಎಂ ಸಿದ್ದರಾಮಯ್ಯ

ಶಿವಮೊಗ್ಗದಲ್ಲಿ ಕಲ್ಲು ತೂರಾಟ ಪ್ರಕರಣ: 43 ಜನರ ಬಂಧನ; ಸಿಎಂ ಸಿದ್ದರಾಮಯ್ಯ

- Advertisement -
- Advertisement -

ಶಿವಮೊಗ್ಗದಲ್ಲಿ ಮೀಲಾದ್‌ ಮೆರವಣಿಗೆ ವೇಳೆ ಕಲ್ಲು ತೂರಾಟ ಮತ್ತು ಬಳಿಕದ ಬೆಳವಣಿಗೆಗೆ ಸಂಬಂಧಿಸಿ 43 ಜನರನ್ನು ಬಂಧಿಸಲಾಗಿದೆ ಎಂದು ಸಿಎಂ ಸಿದ್ದಾರಾಮಯ್ಯ ಅವರು ಹೇಳಿದ್ದಾರೆ.

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ ಸಿಎಂ ಸಿದ್ದರಾಮಯ್ಯ, ಯಾವುದೇ ಧಾರ್ಮಿಕ ಕಾರ್ಯಕ್ರಮಕ್ಕೆ ಧಕ್ಕೆ ತರುವುದು, ಕಲ್ಲು ತೂರುವುದು ಕಾನೂನು ಬಾಹಿರ. ಇಂಥ ಚಟುವಟಿಕೆಗಳನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ, ಇಂತಹ ಕೃತ್ಯಗಳನ್ನು ಖಂಡಿತಾ ಹತ್ತಿಕ್ಕುತ್ತೇವೆ. ಶಿವಮೊಗ್ಗ ನಗರದಲ್ಲಿ 144 ಸೆಕ್ಸನ್‌ ನಿರ್ಬಂಧವನ್ನು ವಿಧಿಸಲಾಗಿದೆ. ಪರಿಸ್ಥಿತಿ ಸಂಪೂರ್ಣವಾಗಿ ನಿಯಂತ್ರಣದಲ್ಲಿದೆ ಎಂದು ಹೇಳಿದ್ದಾರೆ.

ಶಿವಮೊಗ್ಗದ ರಾಗಿಗುಡ್ಡದಲ್ಲಿ ನಿನ್ನೆ ಮೀಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದ್ದು, ಈ ಹಿನ್ನೆಲೆಯಲ್ಲಿ  ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ.

ಮುಂಜಾಗೃತ ಕ್ರಮವಾಗಿ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ನಿಷೇಧಾಜ್ಞೆ ಜಾರಿಗೊಳಿಸುವಂತೆ ಪೊಲೀಸ್ ಇಲಾಖೆ ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಶಿವಮೊಗ್ಗ ನಗರದಾದ್ಯಂತ ಸಿಆರ್ಪಿಸಿ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆದೇಶಿಸಿದ್ದಾರೆ.

ನಿಷೇಧಾಜ್ಞೆ ಸಂದರ್ಭ ಐದು ಜನರಿಗಿಂತಲು ಹೆಚ್ಚು ಜನರು ಗುಂಪುಗೂಡುವುದು ಮತ್ತು ಓಡಾಡುವುದನ್ನು ನಿಷೇಧಿಸಲಾಗಿದೆ. ಈ ಅವಧಿಯಲ್ಲಿ ಮೆರವಣಿಗೆ, ಪ್ರತಿಭಟನೆ, ಸಭೆ, ಸಮಾರಂಭಗಳಿಗೆ ಅವಕಾಶ ನಿರಾಕರಿಸಲಾಗಿದೆ.

ಘಟನೆಯಲ್ಲಿ ಕೆಲವರಿಗೆ ಗಾಯಗಳಾಗಿದ್ದು, 7 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಲ್ಲು ತೂರಾಟದ ಬಳಿಕ ಪೊಲೀಸರು ಲಾಠೀ ಚಾರ್ಜ್ ಮಾಡಿ ಅಲ್ಲಲ್ಲಿ ನಿಂತಿದ್ದ ಜನರನ್ನು ಚದುರಿಸಿದ್ದಾರೆ. ಕೆಲ ಮನೆಗಳಿಗೆ ಮತ್ತು ವಾಹನಗಳಿಗೆ ಕಲ್ಲು ತೂರಾಟ ನಡೆಸಲಾಗಿದೆ.

ಇದನ್ನು ಓದಿ: ಶಿವಮೊಗ್ಗ: ಮೀಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ, ನಿಷೇಧಾಜ್ಞೆ ಜಾರಿ

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಾರ್ವಜನಿಕರ ಆಕ್ರೋಶಕ್ಕೆ ಮಣಿದು RTI ವಿನಾಯಿತಿ ಆದೇಶ ರದ್ದು ಮಾಡಿದ ತಮಿಳುನಾಡು ಸರ್ಕಾರ

ತಮಿಳುನಾಡಿನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ 'ತಮಿಳಗ ವೆಟ್ರಿ ಕಳಗಂ' (ಟಿವಿಕೆ) ಸರ್ಕಾರವು ಸಾರ್ವಜನಿಕರ ಹಾಗೂ ವಿರೋಧ ಪಕ್ಷಗಳ ತೀವ್ರ ಆಕ್ರೋಶದ ಬೆನ್ನಲ್ಲೇ ತನ್ನ ವಿವಾದಾತ್ಮಕ ನಿರ್ಧಾರವೊಂದನ್ನು ಹಿಂಪಡೆದುಕೊಂಡಿದೆ. ಸಾರ್ವಜನಿಕ (ಕಾನೂನು...

‘ಕೊಂದವರು ಯಾರು?’: ಧರ್ಮಸ್ಥಳ ಪ್ರಕರಣಗಳ ನಿಷ್ಪಕ್ಷಪಾತ ತನಿಖೆಗೆ ಆಗ್ರಹ, ಅ.2 ರಂದು ವಿಚಾರ ಸಂಕಿರಣ

ಧರ್ಮಸ್ಥಳ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ ಹಲವಾರು ದಶಕಗಳಿಂದ ನಡೆದಿದೆ ಎನ್ನಲಾದ ಮಹಿಳೆಯರ ಮೇಲಿನ ವ್ಯವಸ್ಥಿತ ಲೈಂಗಿಕ ದೌರ್ಜನ್ಯ, ನಿಗೂಢ ಕೊಲೆಗಳು ಹಾಗೂ ಸಂತ್ರಸ್ತ ಕುಟುಂಬಗಳ ಸುದೀರ್ಘ ನ್ಯಾಯದ ಹೋರಾಟಕ್ಕೆ ಬೆಂಬಲವಾಗಿ...

2016ರಲ್ಲೇ ತಮ್ಮನ್ನು ಬಿಜೆಪಿ‌ ಸೇರುವಂತೆ ಗ್ಯಾನೇಶ್ ಕುಮಾರ್ ಆಹ್ವಾನಿಸಿದ್ದರು: ನಿವೃತ್ತ IAS ಜಿಜಿ ಥಾಮ್ಸನ್

ದೇಶದ ಮುಖ್ಯ ಚುನಾವಣಾ ಆಯುಕ್ತ (CEC) ಗ್ಯಾನೇಶ್ ಕುಮಾರ್ ಅವರು 2016ರಲ್ಲಿ ಸರ್ಕಾರಿ ಸೇವೆಯಲ್ಲಿದ್ದಾಗಲೇ ಬಿಜೆಪಿ ಪರವಾಗಿ ಏಜೆಂಟ್ ರೀತಿ ಕೆಲಸ ಮಾಡುತ್ತಿದ್ದರು ಎಂಬ ಕಟು ಸತ್ಯವೊಂದು ಈಗ ಬಹಿರಂಗವಾಗಿದೆ. ಅವರು ನನಗೆ...

ಚಿಕ್ಕಮಗಳೂರು : ಚುನಾವಣಾ ಆಯೋಗದ ವಿರುದ್ಧ ಜನಾಂದೋಲನಕ್ಕೆ ಪ್ರಕಾಶ್ ರಾಜ್ ಕರೆ

ನ್ಯಾಯಾಂಗದ ಮೂಲಕ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರನ್ನು ಕೆಳಗಿಳಿಸುವುದು ಸಾಧ್ಯವಾಗದಿರಬಹುದು, ಆದರೆ ಜನರ ಹಕ್ಕುಗಳಿಗಾಗಿ ಬೀದಿ ಚಳವಳಿ ನಡೆಯಬೇಕು ಎಂದು ಪ್ರಕಾಶ್ ರಾಜ್ ಕರೆ ನೀಡಿದರು. ಎಸ್‌ಐಆರ್ ಪರಿಶೋಧನೆ ಮತ್ತು...

ಬೆಳಗಾವಿ| ಕೂಲಿ ನೇಕಾರರಿಗೆ ಕಾರ್ಮಿಕ ಇಲಾಖೆ ನೀಡುವ ‘ಸ್ಮಾರ್ಟ್ ಕಾರ್ಡ್’ನಲ್ಲಿ ಲೋಪ, ಅನ್ಯಾಯ ಸರಿಪಡಿಸಲು ಆಗ್ರಹ

ಹಗಲಿರುಳೆನ್ನದೆ ಮಗ್ಗಗಳ ಮುಂದೆ ಕುಳಿತು ಬಟ್ಟೆ ನೇಯುವ ಬೆಳಗಾವಿ ಭಾಗದ ಲಕ್ಷಾಂತರ ಕೂಲಿ ನೇಕಾರರ ಬದುಕು ಇಂದು ಭರವಸೆಯಿಲ್ಲದ ತೂಗುಯ್ಯಾಲೆಯಲ್ಲಿದೆ. ಒಂದೆಡೆ ಕಳೆದ ಒಂದು ದಶಕದಿಂದ (10 ವರ್ಷ) ಮಾಲೀಕರಿಂದ ಶ್ರಮಕ್ಕೆ ತಕ್ಕಂತೆ...

ಅಧಿಕಾರಿಯ ಡೆತ್‌ ನೋಟ್‌ನಲ್ಲಿ ಗ್ಯಾನೇಶ್ ಕುಮಾರ್ ಹೆಸರು!: ಮತ್ತೆ ಮುನ್ನೆಲೆಗೆ ಬಂದ ಹಳೆ ಕೇಸ್

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ವಿರುದ್ಧ ದೇಶದಾದ್ಯಂತ ಆಕ್ರೋಶದ ಅಲೆ ಎದ್ದಿರುವ ಈ ಸಂದರ್ಭದಲ್ಲಿ, ಸುಮಾರು ಎರಡು ದಶಕಗಳ ಹಿಂದೆ, ಮಲೇಷ್ಯಾದ ಯೋಜನಾ ಅಧಿಕಾರಿಯೊಬ್ಬರ ಆತ್ಮಹತ್ಯೆ ಪತ್ರದಲ್ಲಿ ಗ್ಯಾನೇಶ್ ಕುಮಾರ್...

ಹಾಸನ| SIR ಅಕ್ರಮದ ವಿರುದ್ಧ ಸುಪ್ರೀಂ ಕೋರ್ಟ್ ತನಿಖೆಗೆ ನಟ ಪ್ರಕಾಶ್ ರಾಜ್ ಪಟ್ಟು

ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯ ನೆಪದಲ್ಲಿ ಲಕ್ಷಾಂತರ ನಾಗರಿಕರ ಮೂಲಭೂತ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ಇದು ಕೇವಲ ಮತದಾರರ ವೈಯಕ್ತಿಕ ಸಮಸ್ಯೆಯಲ್ಲ, ಬದಲಿಗೆ ದೇಶದ ಸಂವಿಧಾನ...

SIR ರದ್ದುಗೊಳಿಸಿ, ಗ್ಯಾನೇಶ್ ಕುಮಾರ್‌ನನ್ನು ವಜಾಗೊಳಿಸುವಂತೆ ಆಗ್ರಹಿಸಿ ಎಡಪಕ್ಷಗಳಿಂದ ಪ್ರತಿಭಟನೆ

ದೇಶಾದ್ಯಂತ ನಡೆಯುತ್ತಿರುವ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯು ಸಂಪೂರ್ಣ ಅಪ್ರಜಾಸತ್ತಾತ್ಮಕವಾಗಿದ್ದು, ಲಕ್ಷಾಂತರ ಅರ್ಹ ಮತದಾರರನ್ನು ಪಟ್ಟಿಯಿಂದ ಹೊರಗಿಡುವ ಮೂಲಕ ಅವರ ಸಂವಿಧಾನಾತ್ಮಕ ಹಕ್ಕುಗಳನ್ನು ಕಸಿಯಲಾಗುತ್ತಿದೆ ಎಂದು ಎಡಪಕ್ಷಗಳು ಆರೋಪಿಸಿವೆ. ಈ ಪ್ರಕ್ರಿಯೆಯನ್ನು...

ಗುವಾಹಟಿಯಲ್ಲಿ ಸಿಜೆಪಿ ಸಭೆಗೆ ಪೊಲೀಸರಿಂದ ಅಡ್ಡಿ; ಅಶುತೋಷ್ ರಾಂಕಾ ಮತ್ತು ತಂಡ ವಶಕ್ಕೆ

ಅಸ್ಸಾಂ ಪೊಲೀಸರು ಭಾನುವಾರ (ಸೆ.27) ಬೆಳಿಗ್ಗೆ ಗುವಾಹಟಿಯಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ'ಯ (ಸಿಜೆಪಿ) ಸಹ-ಸಂಯೋಜಕ ಅಶುತೋಷ್ ರಾಂಕಾ ಮತ್ತು ಸಂಘಟನೆಯ ಹಲವು ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಅಸ್ಸಾಂ ಸಚಿವಾಲಯದ ಸಮೀಪದಲ್ಲಿ...

ಬಿಜೆಪಿಯಿಂದ ಸ್ಪರ್ಧಿಸುವಂತೆ ಗ್ಯಾನೇಶ್ ಕುಮಾರ್ ಈ ಹಿಂದೆ ನನಗೆ ಆಫರ್ ನೀಡಿದ್ದರು! — ಕೇರಳದ ಮಾಜಿ ಚೀಫ್ ಸೆಕ್ರೆಟರಿ ಜಿಜಿ ತೋಮ್ಸನ್ ಸ್ಪೋಟಕ ಹೇಳಿಕೆ!

ಚುನಾವಣಾ ಆಯೋಗದಲ್ಲಿ 'ವಿಶೇಷ ತೀವ್ರ ಪರಿಷ್ಕರಣೆ' (SIR) ಹೆಸರಿನಲ್ಲಿ ನಡೆಯುತ್ತಿರುವ ಬೃಹತ್ ಮತ ಕಡಿತ ಹಾಗೂ ಏಕಪಕ್ಷೀಯ ನಿರ್ಧಾರಗಳ ಆರೋಪದ ಹಿನ್ನೆಲೆಯಲ್ಲಿ ದೇಶಾದ್ಯಂತ ಜನಾಕ್ರೋಶ ಭುಗಿಲೆದ್ದಿರುವ ಬೆನ್ನಲ್ಲೇ, ಹಾಲಿ ಮುಖ್ಯ ಚುನಾವಣಾ ಆಯುಕ್ತ...